ಬಿ.ಎಸ್.ಈ ತಾಣ - ಕನ್ನಡಕ್ಕಿಲ್ಲ ಸ್ಥಾನ !

ದೇಶದ ಅಗ್ರ ಶೇರು ಮಾರುಕಟ್ಟೆಯಾದ ಬಿ.ಎಸ್.ಈ ಭಾರತದ ಹಲವು ಭಾಷೆಗಳಲ್ಲಿ ಶೇರು ವಹಿವಾಟು ನಡೆಸಲು ಅನುಕೂಲವಾಗುವಂತೆ ಅಂತರ್ಜಾಲದ ತಾಣಗಳನ್ನು ವಿನ್ಯಾಸಗೊಳಿಸುವುದಾಗಿ ಹೇಳಿರುವ ಸುದ್ಧಿ ಬಂದಿದೆ ಗುರು.

ಶೇರು ಮಾರುಕಟ್ಟೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ, ಅದರಿಂದ ಸಿಗುವ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವಲ್ಲಿ ಈ ನಡೆ ಖಂಡಿತ ಸಹಾಯ ಮಾಡಲಿದೆ. ಆದರೆ, " ಸಕಲ ಗುಣ ಸಂಪನ್ನ, ಏಕ ಗುಣ ಹೀನ" ಅನ್ನೋ ಸಂಸ್ಕೃತದ ಗಾದೆಯಂತೆ, ಈ ನಡೆಯಂತೆ ಶುರುವಾಗಲಿರುವ ತಾಣಗಳ ಪಟ್ಟಿಯಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟಿಲ್ಲ ಗುರು !

ಕನ್ನಡದಲ್ಲಿ ತಾಣ ಹೆಚ್ಚಿಸುತ್ತೆ ವಹಿವಾಟು !
ಶೇರು ಮಾರುಕಟ್ಟೆಯನ್ನು ಮತ್ತು ಅದರಲ್ಲಿ ಹೂಡಿಕೆಯಿಂದ ಆಗೋ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮರಾಠಿ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ಈ ತಾಣಗಳನ್ನು ರೂಪಿಸುವುದಾಗಿ BSE ತಿಳಿಸಿದೆ. ಕನ್ನಡವನ್ನು ಕಡೆಗಣಿಸಿರುವ ಇವರನ್ನು ಜಾಗೃತ ಕನ್ನಡದ ಗ್ರಾಹಕರು ಮಾತ್ರ ಎಚ್ಚರಿಸಬಲ್ಲರು ಗುರು. ಕನ್ನಡದಲ್ಲೂ ಈ ತಾಣ ರೂಪಿಸುವುದು ಕರ್ನಾಟಕದಲ್ಲಿ BSE ಶೇರು ವಹಿವಾಟನ್ನು ಇನ್ನಷ್ಟು ಜನಪ್ರಿಯಗೊಳಿಸುವುದಲ್ಲದೇ, ವಹಿವಾಟು ನಡೆಸುವ ಜನರಿಗೂ ಹಾಗೂ BSE ಗೂ ಹೆಚ್ಚಿನ ವಹಿವಾಟಿನ ಲಾಭ ತಂದು ಕೊಡಲಿದೆ ಎಂದು ಇವರಿಗೆ ತಿಳಿ ಹೇಳೊಣ, ಆ ಮೂಲಕ ಬದಲಾವಣೆಯೊಂದಕ್ಕೆ ಕಾರಣವಾಗೋಣ. ಏನಂತೀಯ ಗುರು ?

4 ಅನಿಸಿಕೆಗಳು:

Priyank ಅಂತಾರೆ...

ಇದ್ಯಾಕೆ ಗುರು ಈ ರೀತಿ ಎಲ್ಲರೂ ನಮ್ ಭಾಷೆನ ಕಡೆಗಣಸ್ತಾರೆ?

ಕ್ಲಾನ್ಗೊರೌಸ್ ಅಂತಾರೆ...

ಪಿಂಕ ಅವರೇ,
ಯಾಕಂದ್ರೆ ಕನ್ನಡಿಗರೇ ಕನ್ನಡ ನ ಕಡೆಗಣಸ್ತಾ ಇದ್ದಾರೆ....

ಕಿಶೋರ್ ಅಂತಾರೆ...

ಕನ್ನಡವನ್ನು ಅನ್ನ ಕೊಡುವ ಭಾಷೆ ಮಾಡಬೇಕು. ಕನ್ನಡವನ್ನು ತ೦ತ್ರಜ್ಞಾನದಲ್ಲಿ ತರಬೇಕು, ಜಗತ್ತಿನ ಎಲ್ಲ ಜ್ಞಾನ ವಿಜ್ಞಾನಗಳು ಕನ್ನಡದಲ್ಲಿ ಸಿಗುವಹಾಗಾಗಬೇಕು, ಕನ್ನಡಿಗ ಗ್ರಾಹಕನಿಗೆ ಯಾವುದೇ ರೀತಿಯ ವ್ಯಾಪಾರ ವಹಿವಾಟನ್ನು ಕನ್ನಡದಲ್ಲೇ ನಡೆಸಲು ಅನುಕೂಲವಾಗಬೇಕು ಎ೦ದು ಹಲವಾರು ಕನಸುಗಳು ಇರುವುದೇನೋ ನಿಜ...

ಆದರೆ ಒಬ್ಬ ಗ್ರಾಹಕನಾಗಿ ಈ ರೀತಿ ಕನ್ನಡದಲ್ಲಿ ಸೇವೆ ಕೊಡಿ ಎ೦ದು ಆಗ್ರಹಿಸದಿದ್ದರೆ ಶೇರು ಪೇಟೆಯ ಅ೦ತರ್ಜಾಲ ತಾಣವಿರಬಹುದು ಅಥವಾ ಆನ್ ಲೈನ್ ಖರೀದಿಯ ತಾಣಗಳಿರಬಹುದು..ಇದಾವುದರಲ್ಲೂ ಕನ್ನಡವನ್ನು ತರಲು ಸಾಧ್ಯವಾಗುವುದಿಲ್ಲ.

baktavar ಅಂತಾರೆ...

namma kannada bhasheyannu ee reeti kadeganisuva suddigalu jaasti aagta ive guru.. idanna hege tade hidiyodu?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails