ಪಾ: ಸಾಮಾಜಿಕ ಸಂದೇಶ ಮತ್ತು ಡಬ್ಬಿಂಗ್


ಬೆಂಗಳೂರಲ್ಲಿ, ನಿನ್ನೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರು, ಮತ್ತವರ ಸಂಪುಟದ ಹಲವು ಸಹೋದ್ಯೋಗಿಗಳು, ಹಿಂದಿ ಚಿತ್ರ ನಟ ಶ್ರೀ ಅಮಿತಾಭ್ ಬಚ್ಚನ್ ಅವರೊಡನೆ ಪಾ ಅನ್ನೋ ಸಿನಿಮಾ ನೋಡಲು ಹೋಗಿದ್ರಂತೆ. ಈ ‘ಪಾ ಅನ್ನೋ ಚಿತ್ರ "ಪ್ರೊಜೇರಿಯಾ" ಅನ್ನೋ ವಿಚಿತ್ರ ಕಾಯಿಲೆ ಬಗ್ಗೆ ಮಾಹಿತಿ ನೀಡುವ ಚಿತ್ರವಾಗಿದ್ದು, ಈ ಖಾಯಿಲೆ ಬಗ್ಗೆ ತಿಳಿದುಕೊಳ್ಳೋ ಸಲುವಾಗಿಯಾದರೂ ನಾಡಿನ ಸಾಮಾನ್ಯ ಜನರು ಈ ಚಿತ್ರವನ್ನು ನೋಡಲೇಬೇಕು’ ಅಂತ ಯಡಿಯೂರಪ್ಪನವರು ಹೇಳಿರೋ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ ಗುರು.

ಜನಜಾಗೃತಿಗೆ ದಾರಿ ಯಾವುದಯ್ಯ?

ಈ ಚಲನಚಿತ್ರ, ಒಂದು ವಿಚಿತ್ರ ಖಾಯಿಲೆ ಬಗ್ಗೆ ತಿಳಿ ಹೇಳುವ ಸಾಮಾಜಿಕ ಸಂದೇಶ ಇರೋ ಸಿನೆಮಾ ಆಗಿದ್ದಲ್ಲಿ, ಆ ಸಂದೇಶ ಖಂಡಿತವಾಗ್ಯೂ ಕನ್ನಡ ನಾಡಿನ ಸಾಮಾನ್ಯ ಜನರಿಗೆ ತಲುಪಲೇಬೇಕು. ಆದ್ರೆ ಈಗಿರೋ ರೂಪದಲ್ಲೇ ಈ ಚಲನಚಿತ್ರಾನಾ ಕರ್ನಾಟಕದ ಒಂದೊಂದು ಮನೆಗೂ ಹೋಗಿ ತೋರ್ಸುದ್ರೂ ಕೂಡಾ ಅಂದುಕೊಂಡ ಅರಿವು ಮೂಡಿಸೋ ಕೆಲಸ ಆಗಲ್ಲ. ಯಾಕೆ ಅಂತೀರಾ? ಚಿತ್ರ, ಜನ ಸಾಮಾನ್ಯರಿಗೆ ಅರ್ಥ ಆಗೋ ಭಾಷೇಲಿದ್ರೆ ತಾನೇ ಅದು ಆಗೋದು? ಎಲ್ಲೋ ಅಲ್ಪ ಸ್ವಲ್ಪ ಜನರಿಗೆ ಬರೋ ಭಾಷೆಲಿದ್ರೆ, ಅದು ಜನಸಾಮಾನ್ಯರನ್ನೆಲ್ಲ ತಲುಪೋಕೆ ಸಾಧ್ಯಾನಾ? ಈ ಹಿಂದೀ ಸಿನೆಮಾ, ಇಲ್ಲವೇ ಸಾಮಾಜಿಕ ಸಂದೇಶ ಹೊತ್ತು ಬರೋ ಬೇರಾವುದೇ ಪರಭಾಷಾ ಸಿನಿಮಾ, ಅದು ಕನ್ನಡಕ್ಕೆ ಡಬ್ ಆಗಿ ಆಮೇಲೆ ಕನ್ನಡಿಗರ ಎದುರಿಗೆ ಬಂದ್ರೆ ತಾನೇ ಆ ಸಂದೇಶ ಅವರಿಗೆ ನಿಜಕ್ಕೂ ತಲುಪೋದು? ಎಲ್ಲ ಜನರು ಪಾ ಸಿನೆಮಾ ನೋಡಲಿ ಅನ್ನೋ ಮುಂಚೆ, ಅದನ್ನ ಕನ್ನಡಕ್ಕೆ ಡಬ್ ಮಾಡೋಣ ಅಂತ ಅಂದಿದ್ದಿದ್ರೆ ಮುಖ್ಯಮಂತ್ರಿಗಳ ಜನರಲ್ಲಿ ಜಾಗೃತಿ ತರೋ ಆಶಯ ಈಡೇರುತ್ತಾ ಇತ್ತೋ ಏನೋ ಗುರು.

ಕೊನೆಹನಿ
ಬೆಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಪಾ ಚಿತ್ರದ ಈ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದು ಸಮಾಜ ಕಲ್ಯಾಣ ಇಲಾಖೇನೋ, ಆರೋಗ್ಯ ಇಲಾಖೇನೋ ಅಂದ್ಕೊಂಡ್ರೇನೋ? ಊಹೂಂ... ಈ ವ್ಯವಸ್ಥೆ ಮಾಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತೆ!

ಇದನ್ನೂ ಓದಿ:
ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ !
ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!

9 ಅನಿಸಿಕೆಗಳು:

ರವಿಕುಮಾರ್ ಅಂತಾರೆ...

ಅಮಿತಾಭ್ ಒಡೆತನದ ಎಬಿಸಿ ಕಂಪನಿಯ ಕೋರಿಕೆಯ ಮೇರೆಗೆ, ಈ ಸಿನೆಮಾಕ್ಕೆ ಮನರಂಜನೆ ತೆರಿಗೆಯಲ್ಲಿ 50% ತೆರಿಗೆ ವಿನಾಯಿತಿ ಕೊಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಅಲ್ಲಾ ಶಿವಾ, ತೆರಿಗೆಲಿ ವಿನಾಯಿತಿ ಕೇಳಿದ್ದನ್ನು ನೋಡಿದ್ರೆ, ಇವರು ಇಲ್ಲಿಗೆ ಬಂದ ನಿಜವಾದ ಉದ್ದೇಶದ ಬಗ್ಗೆನೇ ಸಂದೇಹ ಬರಲ್ವಾ ? ತನ್ನ ಚಿತ್ರದ ಸಾಮಾಜಿಕ ಸಂದೇಶ ಹೆಚ್ಚು ಜನಕ್ಕೆ ತಲುಪಲಿ ಅನ್ನೋ ಸಾಮಾಜಿಕ ಕಳಕಳಿಯಿಂದಲೇ ಬಂದಿದ್ರೆ ತೆರಿಗೆ ವಿನಾಯ್ತಿ ಯಾಕ್ ಗುರು ಕೇಳ್ತಿದ್ರು ? ತಮ್ಮ ಕಂಪನಿಯ ವ್ಯಾಪಾರ ವ್ಯವಹಾರ ಹೆಚ್ಚಿಸಿಕೊಳ್ಳೊಕೆ, ಕರ್ನಾಟಕದಲ್ಲಿ ತಮ್ಮ ಹಿಂದಿ ಚಿತ್ರಗಳಿಗೆ ಇನ್ನಷ್ಟು ಮಾರುಕಟ್ಟೆ ಕಟ್ಟಿಕೊಳ್ಳೊಕೆ ಅಂತ ಇವರು ಬಂದಿದ್ರೆ, ಅದನ್ನ ಅರ್ಥ ಮಾಡಕೊಳ್ಳದೇ ತಮ್ಮ ಸಚಿವ ಸಂಪುಟಾನಾ ಕರ್ಕೊಂಡು ಹೋಗಿ ಇವರ ಜೊತೆ ಕೂತು ಸಿನೆಮಾ ನೋಡೊದು, ಆಮೇಲೆ ಇವರಿಗೆ ತೆರಿಗೆ ವಿನಾಯ್ತಿ ಕೊಡ್ತಿನಿ ಅನ್ನೋದು,, ಇದೆಲ್ಲ ನೋಡಿದ್ರೆ ಮನರಂಜನೆ ರೂಪದ ಹಿಂದಿ ಹೇರಿಕೆಗೆ ಕನ್ನಡ ನಾಡಿನ ಮುಖ್ಯಮಂತ್ರಿಗಳೇ ಇಂಬು ಕೊಡ್ತಾ ಇದ್ದಾರಲ್ಲ ಅನ್ನಿಸ್ತಾ ಇದೆ.

Priyank ಅಂತಾರೆ...

ಸರಿಯಾದ ಮಾತು ಗುರು.
"ಪಾ" ಚಿತ್ರವನ್ನು ಕನ್ನಡದಲ್ಲಿ ಮಾಡಿ ಎಂದು ಅಮಿತಾಬ್ ಬಚ್ಚನ್ ಅವರಿಗೆ ಕರೆ ನೀಡುವುದರ ಬದಲು, ಕನ್ನಡಿಗರೇ "ಪಾ" ಚಿತ್ರವನ್ನು ನೋಡಿ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಸೋಜಿಗ.
ನಾಡಿನ ದೊರೆಯೇ ಹಿಂದಿ ಹೇರಿಕೆಯನ್ನು ಒಪ್ಪಿಕೊಂಡಹಾಗಾಯ್ತಲ್ಲ ಗುರು !!

ಪುಂಡ ಅಂತಾರೆ...

ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕೊಬೇಕೆ? ಡಬ್ಬಿಂಗ್ ತಡಿತಿರುವವರು ಯಾರು ಅಂತ ಒಮ್ಮೆ ನೋಡಿದರೆ ಅರ್ಥ ಆಗತ್ತೆ ಅದರ ಹಿಂದೆ ಇರುವ ಕುತಂತ್ರ. ಡಬ್ಬಿಂಗ್ ಬಹಳ ಮುಖ್ಯ ಗುರು. ನ್ಯಾಷನಲ್ ಜಿಯಾಗ್ರಫಿಕ್ , ಡಿಸ್ಕವರಿ ಮುಂತಾದ ಚಾನೆಲ್ ಗಳಲ್ಲಿ ಬರುವ ಕಾರ್ಯಕ್ರಮಗಳು ಕನ್ನಡ ದಲ್ಲಿ ಬಂದರೆ ಶಾಲೆ ಮಕ್ಕಳಿಗೆ ಎಷ್ಟು ಅನಂಕೂಲ ಆಗಬಹುದು ಅಲ್ವೇ? ಅದೇ ರೀತಿ ಅವರ ನೆಚ್ಚಿನ ಕಾರ್ಟೂನ್ ಕೂಡ ಕನ್ನಡ ದಲ್ಲಿ ಬಂದರೆ ಅವರ ಚಿಕ್ಕ ವಯಸ್ಸಿನ ಹೀರೋಗಳು ಕನ್ನಡದಲ್ಲಿ ಮಾತನಾಡುವರು ಎಂದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಅಲ್ಲವೇ? ರಿಮೇಕ್ ಮಾಡಿ ಹಣ ಮಾಡಲು ಡಬ್ಬಿಂಗ್ ತಡೆಯೋದು ಯಾವ ನ್ಯಾಯ?

Unknown ಅಂತಾರೆ...

ಇದು ಮೂರ್ಖತನದ ಪರಮಾವಧಿ. ಇದು ಯಾವ ಸೀಮೆ ಸಾಮಾಜಿಕ ಸಂದೇಶ ಕೊಡುತ್ತೆ? ಇದು ಪೂರ್ತಿ ಮನೋರಂಜನಾತ್ಮಕ ಚಿತ್ರ. ಬರುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟು ಯಡ್ಯೂರಪ್ಪನವರು ಏನೇನೋ ಮಾಡ್ತಿದ್ದಾರೆ ಅಂತ ಅನುಮಾನ ಬರ್ತಿದೆ. ದೊಡ್ಡ ಸ್ಥಾನದಲ್ಲಿರುವವರು ಸಮಾಜಕ್ಕೆ ಎಂಥ ಸಂದೇಶ ಕೊಡ್ತಿದ್ದಾರೆ ನೋಡಿ. ಮೊನ್ನೆ '೩ ಈಡಿಯಟ್ಸ್' ಆಯ್ತು, ಈಗ 'ಪಾ'. ಮುಖ್ಯಮಂತ್ರಿಗಳು ಖಾಸಗಿಯಾಗಿ ಯಾವ ಸಿನಿಮಾ ಬೇಕಾದರೂ ನೋಡಲಿ, ಯಾವುದನ್ನಾದರೂ ಮೆಚ್ಚಿಕೊಳ್ಳಲಿ. ಅದು ಅವರ ವೈಯಕ್ತಿಕ ವಿಷ್ಯ. ಈ ರೀತಿ ಸಾರ್ವಜನಿಕವಾಗಿ ಇತರೆ ಭಾಷಾ ಸಿನಿಮಾಗಳಿಗೆ ಮಣೆ ಹಾಕಿದ್ರೆ, ಕನ್ನಡ ಸಿನಿಮಾ ಮತ್ತಷ್ಟು ಎಕ್ಬುಟ್ಟೋಗುತ್ತೆ ಗುರೂ. ಛೇ, ಎಂಥ ನೀಚ ಜನ, ಎಂಥ ನೀಚ ರಾಜಕೀಯ. ಬಲು ಬೇಜಾರಾಗ್ತಿದೆ.

Aravind M.S ಅಂತಾರೆ...

ಪ್ರೊಜೆರಿಯಾ ಕಾಯಿಲೆಯ ಬಗೆಗಿನ ಕಾಳಜಿ ಅರ್ಥ ಆಗುತ್ತೆ ಗುರು, ಆದ್ರೆ ಅದನ್ನ ತಿಳಿಬೇಕಾದರೆ ೩ ಗಂಟೆ ಕೂತು ಚಿತ್ರ ನೋಡಬೇಕೆನ್ನುವುದು ವಿಚಿತ್ರ ಹಂಬಲ. ಹೀಗಿದ್ದರೆ ಎಲ್ಲಾ ಚಿತ್ರಗಳಿಗೂ ವಿನಾಯಿತಿ ಕೊಡಬೇಕು. ಮಲಯಾಳ ಚಿತ್ರಗಳು ಲೈಂಗಿಕ ಸಂಬಂಧ, ಇತ್ಯಾದಿಗಳ ಸಾಧಕ / ಭಾಧಕಗಳ ಬಗ್ಗೆ ಹಲವಾರು ಮಾಹಿತಿ ಕೊಡುತ್ತೆ. ಅವಕ್ಕೇಕೆ ವಿನಾಯಿತಿ ಕೊಡಬಾರದು ?

ಅದೂ ಈ ಚಿತ್ರದಲ್ಲಿ ತೋರಿಸಿದ ರೋಗಿಯಷ್ಟು ವಿಪರೀತ ಪರಿಣಾಮವೂ ಇರಲ್ಲ ಅಂದಿದ್ದಾರೆ ಜನ

umesh desai ಅಂತಾರೆ...

ಮುಖ್ಯಮಂತ್ರಿಗಳು ಖಯಾಲಿನಲ್ಲಿ ಇದ್ದಾರೆ ಅವರ ಹೇಳಿಕೆಗೆ ತಲೆಕೆಡಿಸ್ಕೋಳ್ಳೋದು ಬೇಡ ನನಗೆ ಒಂದು ಮಾತು ಅರ್ಥಾ ಆಗೋಲ್ಲ
ಹಿಂದಿ ಹೇರ‍ಿಕೆ ಅಂತ ನೀವೆಲ್ಲ ಹೇಳ್ತೀರಿ ಆದ್ರೆ ಈ ಬೆಂಗಳೂರಿನ ಮೂರು ವರ್ಷದ ಅನುಭವ ಕಲ್ಸಿದ್ದು ಇಲ್ಲಿ ಮಂದಿ ತಮಿಳ್ಉ,ತೆಲುಗು ಮಾತಾಡುತ್ತ ಆ ಜನ್ರ ಜತೆಮಿಳಿತವಾಗುತ್ತಾರೆ ಆದ್ರೆ ಹಿಂದಿ ವಿಷ್ಯ ಬಂದಾಗ ವಿರೋಧಿಸ್ತಾರೆ ಇದ್ಯಾಕೆ ಯಾರಾದ್ರೂ ಹೇಳಬಹುದಾ...

ಕ್ಲಾನ್ಗೊರೌಸ್ ಅಂತಾರೆ...

ಅಲ್ಲ ಗುರು,
ಕನ್ನಡ, ಕನ್ನಡಿಗರನ್ನ ಪ್ರತಿನಿಧಿಸೋ ನಾಡಿನ ಮುಖ್ಯಮಂತ್ರಿ ಪದೇ ಪದೇ ಹಿಂದಿ ಸಿನಿಮಾ ನೋಡೋದೇನು , ಅದಕ್ಕೆ ಪ್ರಚಾರ ಪಡ್ಯೋದೇನು.... ಅಲ್ಲ ಈ ಮನೆಗೆ ಮಾರಿ ಮಂತ್ರಿ ೧೮ ತಿಂಗಳಲ್ಲಿ ಒಂದಾದರು ಕನ್ನಡ ಸಿನೆಮಾನ ಇದೆ ರೀತಿ ನೋಡಿ ಪ್ರೋತ್ಸಾಹಿಸಿದ್ದಾರ ?.... ಮೊನ್ನೆ ಮೊನ್ನೆ ನಮ್ಮನಗಲಿದ ಕನ್ನಡದ ಮೇರು ನಟ ವಿಷ್ಣು ಅವರ ಸ್ಕೂಲ್ ಮಾಸ್ಟರ್ ಸಿನಿಮಾ ಕೂಡ ಶಿಕ್ಷಣದ ಬಗ್ಗೆ ಇದ್ದರೂ ಇವರ ಜನ್ಮಕ್ಕೆ ಆ ಸಿನೆಮಾನು ನೋಡಿದ್ರೆ ಒಬ್ಬ ನಾಡಿನ ಮೇರು ನಟನಿಗೆ ಗೌರವ ತೋರ್ಸ್ಬಹುದು ಅನ್ಸ್ಲಿಲ್ವಾ ?... ಅದು ಬೇಡ ರಾಷ್ಟ್ರೀಯ/ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳಿಗೆ ಇವತ್ತು ಚಿತ್ರಮಂದಿರ ಸಿಗ್ತಾ ಇಲ್ಲ ... ಅಂತಹ ಸಿನಿಮಾಗಳನ್ನ ನೋಡಿ,,, ಅವುಗಳು ಜನರಿಗೆ ತಲುಪ್ಸೋ ಕೆಲಸ ಮಾಡೋ ಬದ್ಲು ಪೊಳ್ಳು ರಾಷ್ಟ್ರೀಯತೆ ಮೆರ್ಸೋ ಹುನ್ನಾರ ಮಾಡ್ತಾರೆಲ್ಲ ... ಇವರು ನಿಜವಾಗಲು ನಮ್ಮ ನಾಡು ನುಡಿ ಉದ್ದಾರ ಮಾಡ್ತಾರ ?

VEER ಅಂತಾರೆ...

The masses are better off being educated about HIV, Diabetes, Heart Disease,Malaria & other relevant illnesses--Not a rare irrelevent one like"Progeria", allava guruuuu

sureshgani1984@gmail.com ಅಂತಾರೆ...

Someone told in reply to a blog regarding Progeria that, Progeria is not that much effective as director had been shown in Paa. They can look for the Week Magzine of the month Sept/Oct/Nov 2009.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails