ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೊನ್ನೆ ಪಾರಿಭಾಷಿಕ ಪದಗಳ ಬಗ್ಗೆ ಭೈರಪ್ಪನವರು ಹೊಂದಿರುವ ನಿಲುವಿನ ಬಗ್ಗೆ ಮಾತಾಡಿದ್ದೆವು. ಇದೀಗ ಭೈರಪ್ಪನವರು ಪಾರಿಭಾಷಿಕ ಪದಗಳ ಬಗ್ಗೆ ತಮ್ಮ ಅನಿಸಿಕೆ ಹೇಳಲು ಪ್ರೇರೇಪಿಸಿದ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಉತ್ತರದಲ್ಲಿನ ಮತ್ತೊಂದು ಮಹತ್ವದ ನಿಲುವಿನ ಬಗ್ಗೆ ಮಾತಾಡೋಣ.


ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆ!


ಹೌದು! ಈ ಪ್ರಶ್ನೆಗೆ ಭೈರಪ್ಪನವರು ನೀಡಿದ ಉತ್ತರದ ಬಗ್ಗೆ ಮಾತಾಡುವುದಕ್ಕೂ ಮುನ್ನ ಪ್ರಶ್ನೆಯ ಒಳಮರ್ಮದತ್ತ ನೋಡೋಣ. ಶ್ರೀ ಶತಾವಧಾನಿ ಗಣೇಶ್ ಅವರು ಹೀಗೆ ಪ್ರಶ್ನೆ ಕೇಳಿದ್ದಾರೆ:

೧೪. ಈ ಹೊತ್ತು ಪ್ರಾದೇಶಿಕ ಭಾಷೆಗಳ, ಪ್ರಾಂತಗಳ ಮತ್ತು ಸಂಸ್ಕೃತಿಗಳ ಬಗೆಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಷಣವೆನಿಸಿದೆ. ಆದರೆ ಭಾರತದ ಬಗ್ಗೆ ಮಾತನ್ನಾಡುವುದು ಸಂಕುಚಿತತೆ ಎನ್ನಿಸಿದೆ. ಏಕೆ?
ಮೊದಲಿಗೆ, `ಭಾರತದಲ್ಲಿ ನಾನಾ ಭಾಷೆಗಳೂ, ಪ್ರಾಂತಗಳೂ ಇರುವುದು ಎಷ್ಟು ಸ್ಪಷ್ಟವಾಗಿದೆಯೋ ಅಂತೆಯೇ ನಾನಾ ಸಂಸ್ಕೃತಿಗಳಿರುವುದೂ ಸ್ಪಷ್ಟವಾಗಿದೆ' ಎಂಬುದನ್ನು ಗಣೇಶರು ಒಪ್ಪಿರುವುದು ಸಂತಸದ ವಿಷಯ. ಆದರೆ ತಮ್ಮ ಪ್ರಶ್ನೆಯಲ್ಲೇ ಪ್ರಾದೇಶಿಕತೆಯನ್ನು ಭಾರತೀಯತೆಗೆ ಎದುರಾಳಿಯಾಗಿ ನಿಲ್ಲಿಸಿರುವುದು, ಅವರಿಗೆ ಪ್ರಾಂತೀಯ ವಾದದ ಬಗ್ಗೆ ತಪ್ಪುಗ್ರಹಿಕೆ/ ಪೂರ್ವಾಗ್ರಹಗಳು ಇವೆಯೇನೋ ಎನ್ನಿಸುವಂತಿದೆ. ಯಾಕೆಂದರೆ, ‘ಪ್ರಾದೇಶಿಕತೆ ಬಗ್ಗೆ ಮಾತಾಡುವುದು ವಿಶಾಲ ಮನೋಭಾವನೆಯೆಂದಾಗಲೀ, ಭಾರತದ ಬಗ್ಗೆ ಮಾತಾಡುವುದು ಸಂಕುಚಿತತೆ ಎನ್ನುವುದಾಗಲೀ’ ಶ್ರೀಯುತರಿಗೆ ಮನವರಿಕೆಯಾದದ್ದು ಹೇಗೆಂದು ಅವರೇನೂ ತಿಳಿಸಿಲ್ಲ. ಆದರೂ ಅದೇ ದಿಟವೆನ್ನುವಂತೆ ಪ್ರಶ್ನೆ ಕೇಳಿ ಆ ಮೂಲಕ "ಪ್ರಾದೇಶಿಕವಾದವುಗಳ ಬಗ್ಗೆ ಮಾತನ್ನಾಡುವುದು  ಭಾರತದ ಬಗ್ಗೆ ಮಾತನ್ನಾಡುವುದಕ್ಕೆ ವಿರೋಧವಾದದ್ದು" ಎನ್ನುವ ಮನೋಭೂಮಿಕೆಯನ್ನು ಓದುಗರಲ್ಲಿ ಹುಟ್ಟುಹಾಕಿ, ಅದಕ್ಕೆ ಕಾರಣವೇನು? ಎಂದು ಜಾಣ್ಮೆಯಿಂದ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಆ ಮೂಲಕ ಉತ್ತರದ ದಿಕ್ಕನ್ನೂ ನಿರ್ದೇಶಿಸಿದ್ದಾರೆ. ಇದು ಪ್ರಶ್ನೆಯಲ್ಲೇ ಉತ್ತರ ತುಂಬಿ ಕೇಳುವ ಕಲೆಯಾಗಿದೆಯಲ್ಲವೇ?


ಭೈರಪ್ಪನವರ ನಿಲುವು ಹುಟ್ಟು ಹಾಕಿದ ಪ್ರಶ್ನೆಗಳು!


ಭೈರಪ್ಪನವರು ಈ ಪ್ರಶ್ನೆಗೆ ಉತ್ತರಿಸುವಾಗ ಸ್ವಲ್ಪ ತಡವರಿಸಿ ಉತ್ತರವನ್ನು ಸುತ್ತಿ ಬಳಿಸಿ ನೀಡಲು ಯತ್ನಿಸಿರುವುದು ಕಾಣುತ್ತದೆ ಮತ್ತು ಈ ಉತ್ತರ ನೀಡುವ ಭರದಲ್ಲಿ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ತಿಳಿಯುತ್ತದೆ. ಹೇಗೆಂದು ನೋಡೋಣ...
ಈ ಭಾವನೆಯು ಪ್ರಧಾನವಾಗಿ ಡಿಎಂಕೆಯದು. ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಗುಜರಾತುಗಳಲ್ಲಿಲ್ಲ.
> ಭಾರತದ ಮೊದಲ ಭಾಷಾವಾರು ರಾಜ್ಯ ಆಂಧ್ರ. ಇಲ್ಲಿ ತೆಲುಗು ನುಡಿ, ನಾಡಿನ ಬಗ್ಗೆ ದನಿಯೆತ್ತಿ ೫೮ ದಿವಸ ಉಪವಾಸ ಮಾಡಿ ಪ್ರಾಣ ತೆತ್ತವರು ಶ್ರೀ ಪೊಟ್ಟಿ ಶ್ರೀರಾಮುಲು. ಮೂಲತಃ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಕಾರಣವಾದದ್ದೇ ಆಂಧ್ರದ ಈ ಚಳವಳಿ.
> ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರನ್ನು ಕೇಂದ್ರವಾಗಿಸಿಕೊಂಡು ಹುಟ್ಟಿದ್ದು... ಶಿವಸೇನಾ. ಮರಾಠಿ ಕೇಂದ್ರಿತ ರಾಜಕೀಯ ಯುಗ ಆರಂಭವಾದದ್ದು ೧೯೬೬ರಲ್ಲೇ. ಮುಂದೆ ಅದು ಎಂ.ಇ.ಎಸ್, ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ಉದಯದವರೆಗೂ ಸಾಗಿ ಬಂದಿದೆ. 
> ಪಂಜಾಬ್ ಪ್ರಾಂತ್ಯದಲ್ಲಿ ಖಲೀಸ್ಥಾನದ ಬೇಡಿಕೆ, ಆ ಒಂದು ರಕ್ತಸಿಕ್ತ ಹೋರಾಟದ ಚಳವಳಿ, ಆನಂದ್‌ಪುರ್ ಸಾಹೇಬ್ ನಿರ್ಣಯವಾದ ಪ್ರತ್ಯೇಕ ಖಾಲಿಸ್ತಾನದ ಘೋಷಣೆಯೂ ಪಂಜಾಬಿ ಪ್ರಾಂತೀಯತೆಯ ಅಭಿವ್ಯಕ್ತಿಗಳೇ ಅಲ್ಲವೇ?
> ತನ್ನದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವ ಯಾವ ಪ್ರಾಂತ್ಯವೂ ತನ್ನ ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನೂ, ತನ್ನ ಬೇರನ್ನು ಅದರಲ್ಲೇ ಗುರುತಿಸಿಕೊಳ್ಳುವುದನ್ನೂ ಬಿಡುವುದಿಲ್ಲಾ ಎನ್ನಲು ಕಟ್ಟಾ ರಾಷ್ಟ್ರೀಯವಾದದ ಬಿಜೆಪಿಯ ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ "ಗುಜರಾತಿ ಅಸ್ಮಿತಾ" ಘೋಷಣೆಯೇ ಸಾಕ್ಷಿಯಾಗಿದೆ. ಮತ್ತಿದು ಸರಿಯಾಗೂ ಇದೆ.
ಬೆಂಗಾಲಿಗಳ ಭಾಷೆ ಸಂಸ್ಕೃತಿಗಳ ಅಭಿಮಾನವಂತೂ ವಿಶ್ವವಿಖ್ಯಾತ. ರವೀಂದ್ರನಾಥರ ಸೋನಾರ್ ಬಾಂಗ್ಲಾ ಆಗಲೀ, ಬಂಕಿಮರ ವಂದೆಮಾತರಂ ಆಗಲೀ ಬಂಗಾಳಿ ಸಂಸ್ಕೃತಿಯ ಅಭಿವ್ಯಕ್ತಿಯೇ ಅಲ್ಲವೇನು?


ಇವೆಲ್ಲಾ ಒಂದು ಕಡೆಯಿದ್ದು ಮತ್ತೊಂದೆಡೆ ಪ್ರಾದೇಶಿಕ ಚಿಂತನೆಗಿಂತಾ ಮಿಗಿಲಾಗಿ ರಾಷ್ಟ್ರೀಯತೆಯ ಚಿಂತನೆಯೊಂದಿಗೇ ಕೈಗೂಡಿಸಿದ ಕನ್ನಡನಾಡಿನಲ್ಲಿ ಪ್ರಾದೇಶಿಕ ಚಿಂತನೆ ಮೂಡುವುದರ ಬಗ್ಗೆ ಗಣೇಶ್ ಮತ್ತು ಭೈರಪ್ಪನವರು ಎತ್ತಿದ ಆಕ್ಷೇಪದ ಮಾತುಗಳೇಕೋ ಉಚಿತವಾದುದಲ್ಲ ಅನ್ನಿಸುತ್ತದೆ. ಗಮನಿಸಿ ನೋಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನವರೆಲ್ಲಾ ಈ ಮೇಲಿನ ಪ್ರದೇಶಗಳ ಜನರೇ ಆಗಿದ್ದಾರೆ. ಹಾಗಾದರೆ ಪ್ರಾದೇಶಿಕ ಚಿಂತನೆ ರಾಷ್ಟ್ರೀಯತೆಗೆ ಮಾರಕವಾಗುವುದಾದರೂ ಹೇಗೆ? ಕನ್ನಡಿಗರಿಗೆ ಕರ್ನಾಟಕತ್ವ ಎನ್ನುವುದೇ ಭಾರತೀಯತೆ ಅಲ್ಲವೇ? ಆಲೂರು ವೆಂಕಟರಾಯರ ಮಾತು "ಕರ್ನಾಟಕಾಂತರ್ಗತ ಭಾರತಮಾತೆ" ಎನ್ನುವುದನ್ನು ಅರಿತರೆ ಪ್ರಾದೇಶಿಕತೆ ಮತ್ತು ಭಾರತೀಯತೆಗಳೆರಡೂ ಒಂದೇ ಎನ್ನುವುದು ಅರಿವಾಗುತ್ತದೆ.


ಮುಂದುವರೆಯುತ್ತಾ ಭೈರಪ್ಪನವರು ಈ ಭಾವನೆಗೆ ಕಾರಣವನ್ನು ಸಂಸ್ಕೃತ ದ್ವೇಷ/ ವೇದದೆಡೆಗಿನ ದ್ವೇಷ/ ಪರಭಾಷಿಕರ ಪ್ರಾಬಲ್ಯಗಳಿಗೆ ಆರೋಪಿಸುತ್ತಾರೆ. ಆಂಗ್ಲರು ಭಾರತವನ್ನು ಒಡೆಯಲು ಬಳಸಿದ್ದ ತಂತ್ರಗಳ ಫಲ ಎಂದಿದ್ದಾರೆ. ವೈಜ್ಞಾನಿಕವಾಗಿ ಭಾಷಾ ವಿಜ್ಞಾನಿಗಳು ಗುರುತಿಸಿರುವ ದಿಟವಾದ ‘ಕನ್ನಡದ ಬೇರುಗಳು ಸಂಸ್ಕೃತದಲ್ಲಿಲ್ಲ’ ಎಂಬುದನ್ನು ಶ್ರೀಯುತರೂ ಒಪ್ಪುತ್ತಾರೆಂದುಕೊಳ್ಳೋಣ. ಹೀಗಿರುವಾಗ ನಮ್ಮತನದ ಬೇರನ್ನು ನಾವು ಅರಸುವುದೇ ಪಾಪವೆನ್ನುವಂತಹ ನಿಲುವು ಸರಿಯೇ? ನಮ್ಮ ಸಂಸ್ಕೃತಿಯ ಅನನ್ಯತೆಯ ಬಗ್ಗೆ ಮಾತಾಡಿದರೆ ಅದೆಂತು ಸಂಸ್ಕೃತ ದ್ವೇಷವಾಗುವುದೋ ತಿಳಿಯದು. ಕರ್ನಾಟಕದಲ್ಲಿ ಪರಭಾಷಿಕರ ಪ್ರಾಬಲ್ಯದ ಬಗ್ಗೆ ಹೇಳಿರುವ ಮಾತೊಂದೇ ಇದ್ದುದ್ದರಲ್ಲಿ   ಅರೆ ಸರಿಹೊಂದುವ ಮಾತು. ಆದರೂ ಭಾರತದ ಒಗ್ಗಟ್ಟನ್ನು ಆಂಗ್ಲರನ್ನು ತೋರಿಸಿ, ಚೀನೀಯರನ್ನು ತೋರಿಸಿ, ಪಾಕೀಸ್ತಾನಿಗಳನ್ನು ತೋರಿಸಿ, ಭಯೋತ್ಪಾದನೆಯನ್ನು ತೋರಿಸಿ... ಸಮಾನ ಶತೃತ್ವದ ಆಧಾರದ ಮೇಲೆ ಕಟ್ಟುವ ಹಾಗೂ ಉಳಿಸುವ ಪ್ರಯತ್ನಗಳನ್ನೇ ನಮ್ಮ ಸುತ್ತಮುತ್ತೆಲ್ಲಾ ಕಾಣುತ್ತಿರುವಾಗ, ಭೈರಪ್ಪನವರ ಈ ಅನಿಸಿಕೆ ಇನ್ನು ಹೇಗೆ ತಾನೇ ಇರಲು ಸಾಧ್ಯ ಅನ್ನಿಸದಿರದು. ಪ್ರಾದೇಶಿಕ ಚಿಂತನೆಗೆ ಕಾರಣ, ನಮ್ಮತನದ ಮೇಲೆ ನಡೆಯುವ ಭಾಷಾ, ಸಾಂಸ್ಕೃತಿಕ ಆಕ್ರಮಣಗಳಷ್ಟೇ ಅಲ್ಲಾ... ನಮ್ಮ ನಾಡು ಏಳಿಗೆ ಹೊಂದಬೇಕೆಂಬ ತುಡಿತವೇ ಮುಖ್ಯಕಾರಣವೆನ್ನುವುದನ್ನು ಭೈರಪ್ಪನವರೂ, ರಾ ಗಣೇಶರೂ ಗುರುತಿಸಿದ್ದರೆ ಚೆನ್ನಿತ್ತು.. ಒಟ್ಟಾರೆ ಶತಾವಧಾನಿಗಳ ಪ್ರಶ್ನೆಗೆ ಭೈರಪ್ಪನವರು ನೀಡಿರುವ ಉತ್ತರವು ನೇರವಾಗಿಲ್ಲದೆ ಕೊಂಕಣವನ್ನೆಲ್ಲಾ ಸುತ್ತಿಸಿ ಮೈಲಾರದ ಪಕ್ಕದೂರಿಗೆ ಕರೆತಂದು ನಿಲ್ಲಿಸಿದಂತಿದೆ.


ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!

14 ಅನಿಸಿಕೆಗಳು:

Veerendra C ಅಂತಾರೆ...

ಸರಿಯಾಗಿ ಹೇಳಿದ್ದಿರ ,
ಉನ್ನತ ವ್ಯಕ್ತಿಗಳು (ಸಾಹಿತಿಗಳು ) ಹೇಳಿದ್ದು ನಿಜವೆಂದು ನಂಬುತೇವೆ.. ಅದನ್ನು ಜಿಜ್ಞಾಸೆಗೆ, ವಿಮರ್ಶೆಗೆ ಒಳಪಡಿಸಿ ನಿಜವೆಂದು ತಿಳಿದ ಮೇಲೆ ಒಪ್ಪಿಕೊಳ್ಳಬೇಕು !

Unknown ಅಂತಾರೆ...

ಒಳ್ಳೆ ಬರಹ....

ಬಾರತ ಎಂದರೆ ಹಲತನ, ಬಾರತ ಅಂದರೆ ಹಲನುಡಿಗಳು, ಬಾರತ ಅಂದರೆ ಹಲನಡಾವಳಿಗಳು

ಬಾರತ ಅಂದರೆ ’ಒಂದು’ ಅಲ್ಲ.. ಬಾರತ ಅಂದರ ಹಿಂದಿ ಒಂದೇ ಅಲ್ಲ...ಬಾರತ ಅಂದರೆ ಹಿಂದೂ ಒಂದೇ ಅಲ್ಲ.

ಹಲತನವೇ ಬಾರತದ ಹೆಚ್ಚುಗಾರಿಕೆ. ಹಲತನಕ್ಕೇ ಬೇಕೇ ಬೇಕು ಇವರು ಹೇಳುವ ’ಪ್ರಾದೇಶಿಕತೆ’.

ಬಾರತ ಎಂದಿಗೂ ಕಂಡವೇ ಹೊರತು ದೇಶವಲ್ಲ ( ಇವರೇ ಹೇಳುವ ಬರತ ಕಂಡೇ ಬರತ ವರ್ಶೇ)
India is continent( groups of nations) not a nation itself.

ಗುರುದತ್ತ ಕೂಡ್ಲಿ ಅಂತಾರೆ...

ನಮಸ್ಕಾರ ಏನ್ ಗುರು ಗೆಳೆಯ .. ಈ ಲೇಖನದ ಅಭಿಪ್ರಾಯವನ್ನು ನಾನು ಖಂಡಿತ ಒಪ್ಪುವುದಿಲ್ಲ. ನಮ್ಮ ಧರ್ಮ, ಕನ್ನಡ ಭಾಷೆ, ನೆಲ, ಸಂಸ್ಕೃತಿ ಗಳಿಗೆ ನಿಜವಾದ, ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತಿರುವ ಕೀರ್ತಿ, ಜ್ಞಾನದ ಪ್ರತೀಕ, ಭಾಷಾ ಸಾಹಿತ್ಯದ ಕೊಡುಗೆ - ಡಾ|| ಎಸ್ ಎಲ್ ಭೈರಪ್ಪ, ಡಾ|| ಶತಾವಧಾನಿ ಆರ್ ಗಣೇಶ್ ಅವರುಗಳಿಗೆ ಖಂಡಿತವಾಗಿಯೂ ಸಲ್ಲುತದೆ.

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಶತಾವದಾನಿ ಗಣೇಶನಿಗೆ ಒಂದ್ ಪ್ರಶ್ನೆ: ನೀನ್ ಬೈರಪ್ಪುನ್ ಜೊತೆ ಮಾತುಕತೆ ನಡೆಸ್ದಾಗ, ಕಾಗೇರಿ ಕನ್ನಡ ಶಾಲೆಗಳನ್ನ ಮುಚ್ಚುತ್ತಿರೋ ಬಗ್ಗೆ ನಿನ್ನಲ್ಲಿ ಪ್ರಶ್ನೇನೆ ಮೂಡ್ಲಿಲ್ವಲ್ಲ ಯಾಕಪ್ಪ?

ಬನವಾಸಿ ಬಳಗ ಅಂತಾರೆ...

ಗುರುದತ್ತ ಕೂಡ್ಲಿ ಗಣೇಶ್,

ಶತಾವಧಾನಿ ಡಾ. ಗಣೇಶ್ ಮತ್ತು ಡಾ. ಎಸ್ ಎಲ್ ಭೈರಪ್ಪನವರ ಸಾಹಿತ್ಯ ಸೇವೆಯ ಬಗ್ಗೆಯಾಗಲೀ, ಅವರು ನಾಡಿಗೆ ನೀಡುತ್ತಿರುವ ಕೊಡುಗೆಗಳ ಬಗ್ಗೆಯಾಗಲೀ ಈ ಲೇಖನದಲ್ಲಿ ಚರ್ಚಿಸಿಲ್ಲ. ಅವರ ಕೊಡುಗೆಗಳ ಬಗ್ಗೆಯೂ, ಅವರ ಮೇರು ವ್ಯಕ್ತಿತ್ವಗಳ ಬಗ್ಗೆಯೂ ಅಪಾರ ಗೌರವವನ್ನಿಟ್ಟುಕೊಂಡೇ ಈ ಬರಹವನ್ನು ಬರೆಯಲಾಗಿದೆ. ಆದರೆ ಪ್ರಾದೇಶಿಕತೆ ಮತ್ತು ಪಾರಿಭಾಷಿಕ ಪದಗಳ ಬಗ್ಗೆ ಅವರಾಡಿರುವ ಮಾತುಗಳ ಪೊಳ್ಳನ್ನಷ್ಟೇ ಇಲ್ಲಿ ಎತ್ತಿ ತೋರಿಸಲಾಗಿದೆ.

ನಮಸ್ಕಾರ

karunadu ಅಂತಾರೆ...

ನಮ್ಮ ಬಲಪಂಥೀಯ ವಿಚಾರವಾದಿಗಳು ಹಿಂದುತ್ವದ ಹೆಸರಿನಲ್ಲಿ ಸಂಸ್ಕೃತವನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಹಿಂದಿಯನ್ನು ಕನ್ನಡಿಗರಿಗೆ ಉಣಬಡಿಸುತ್ತಿದ್ದಾರೆ. ಇದನ್ನು ನಮ್ಮ ಯುವ ಕನ್ನಡಿಗರು ಮೇಲಿನವನ(ದೇವರ) ಹಾರೈಕೆ ಎಂದುಕೊಂಡು ಕಣ್ಣಿಗೆ ಒತ್ತಿಕೊಂಡು ಒಂದೊಂದೇ ಕುರಿಗಳಾಗಿ ಹಳ್ಳಕ್ಕೆ ಬೀಳುತ್ತಿದ್ದಾರೆ. ಇದು ಭೈರಪ್ಪನವರ ಬಗ್ಗೆಯಾಗಲಿ ಗಣೇಶ್ ಅವರ ಬಗ್ಗೆಯಾಗಲಿ ಅಲ್ಲ. ಆದರೆ ತೊಂದರೆ ಏನಂದರೆ ಜನರಿಗೆ ನಮ್ಮ ನೆಲದಲ್ಲೇ ಕನ್ನಡಕ್ಕಿಂತ ಮಿಗಿಲಾದ ನುಡಿಯಿದೆ(ಅದು ಸಂಸ್ಕೃತ), ಕನ್ನಡ ನಡೆನುಡಿ(ಸಂಸ್ಕೃತಿ) ಹಿಂದೂ ನಡೆ-ನುಡಿ ಒಂದೇನ ಬೇರೇನಾ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಇದು ಇವತ್ತಿನ ತೊಂದರೆಯಲ್ಲ !ಸಾವಿರಾರು ವರ್ಷಗಳಿಂದ ಹೀಗೆ ಸಂಸ್ಕೃತ-ಕನ್ನಡದ ನಡುವೆ ಕಿತ್ತಾಟ ಆಗಿದೆ. ನಮ್ಮ so-called ಬಲ ಪಂಥೀಯರು ಯಾವಾಗಲು ಆರ್ಯರ ದಾಳಿ ಸಿದ್ಧಾಂತ(Aryan Invasion Theory)ವನ್ನು ಬ್ರಿಟಿಷರ ಉಪಾಯವೆಂದು ನಿರಾಕರಿಸುತ್ತಲೇ ಬಂದಿದ್ದಾರೆ.ಆ theoryಯನ್ನು ಹೆಚ್ಚಿನ ಮಟ್ಟಿಗೆ disprove ಕೂಡ ಮಾಡಲಾಗಿದೆ. ಆದರೆ ಆರ್ಯನ್-ದ್ರಾವಿಡಿಯನ್ ಎಂಬ ನುಡಿ-ಕೊಂಬೆಗಳನ್ನು disprove ಮಾಡಕ್ಕೆ ಆಗಿಲ್ಲ. ಯಾಕಂದರೆ ಅದು ನಿಜ.

ಒಂದು ಪ್ರಶ್ನೆ - ಇವತ್ತು ಕೂಡ( ಅಂದರೆ ಇಪ್ಪತೊಂದನೆ ಶತಮಾನದಲ್ಲೂ) ಈ ಮಟ್ಟಿಗೆ ಸಂಸ್ಕೃತದ ಹೇರಿಕೆ ನಡೆಯತ್ತಿದೆ ಅಂದರೆ ಮುಂಚೆ( ಒಂದನೇ, ಎರಡನೇ ಶತಮಾನದಲ್ಲಿ ) ಹೀಗೆ ಈ aaryans ಅನ್ನುತ್ತಾರಲ್ಲ ಅವರು ತಮ್ಮ ಸಂಸ್ಕೃತಿ-ಭಾಷೆಗಳನ್ನ ನಮ್ಮ ಮೇಲೆ ಎಷ್ಟು ಹೇರಿರಬಹುದು ಎಂದು ಲೆಕ್ಕ ಹಾಕಿಕೊಳ್ಳಿ. ಇದರ ಜೊತೆ ಸಂಸ್ಕೃತ ಎಲ್ಲ ನುಡಿಗಳ ತಾಯಿ ಮತ್ತೆ ಸಂಸ್ಕೃತ ಕನ್ನಡಕ್ಕಿಂತ ಹಳೆಯದು ಎಂಬ ಹಸಿ ಸುಳ್ಳನ್ನ ಕನ್ನಡಿಗರ ಕಿವಿಗೆ ದೊಡ್ಡ ಹೂವಿನ ಹಾರವಾಗಿ ಪೋಣಿಸಿದ್ದಾರೆ. ಅದು ಬರೋಬ್ಬರಿ ೨೦೦೦ ವರ್ಷಕ್ಕೂ ಹೆಚ್ಚಾಗಿ. ಇವತ್ತಿನ ನಮ್ಮ ಕೀಳರಿಮೆಗೆ ಇದೇ ಮೊದಲ ಪೆಟ್ಟು.
ಈ ಕೊಂಡಿಯಲ್ಲಿರುವ ಬರಹವನ್ನೊಮ್ಮೆ ಓದಿ ...
http://www.thehindu.com/opinion/op-ed/article1081343.ಏಕೆ
ಆ ಬರಹದಲ್ಲಿ ನೇರವಾಗಿ ಹತ್ತನೇ paragraph ಗೆ ಹೋಗಿ ...
the linguistic strata would thus appear to be arranged in the order-Austric, Dravidian, Indo-European.
ಗೊತ್ತಾಯ್ತಲ್ಲ !! ದ್ರಾವಿಡಿಯನ್ (ನಮ್ಮ ಕನ್ನಡ ) ಇಂಡೋ-ಉರೋಪೆಯನ್ (ಸಂಸ್ಕೃತ)ಕ್ಕಿಂತ ಹಳೆಯದು ಅಂತ ತಿಳೀತಲ್ಲ ?
ಇದನ್ನ ಮೊದಲು ವಿರೋಧಿಸಿದವರು ತಮಿಳರು. ತಮಿಳಿಗೂ ಸಂಸ್ಕೃತಕ್ಕೂ ಯಾವ ಪರಿಯಾದ ನಂಟಿಲ್ಲ ಎಂದು ಸಾರಿ ಹೇಳಿ ತಮಿಳಿಗೆ ತೊಂದರೆಯಾಗತ್ತೇ ಅನ್ನೋದಾದ್ರೆ ಹಿಂದೂ-ಧರ್ಮಕ್ಕೆ ಟಾಟ-ಬಾಯ್- ಬಾಯ್ ಅನ್ನುವ ಮಟ್ಟಕ್ಕೆ ಹೋಗಿದ್ದು ಗೊತ್ತಿರೋ ವಿಷಯನೇ ( ಪೆರಿಯಾರ್-ಅನ್ನಾದುರೈ- ಎಂಜೀಆರ್ -ಕರುಣಾನಿಧಿ).
ಯಾಕೆ ಈ ವಿಚಾರ ಅಂದ್ರೆ - ಆ ಮಾತುಕತೆಯಲ್ಲಿ ಭೈರಪ್ಪನವರು DMK ವಿಷಯ ಎತ್ತಿರೋದು ಅದೇ ಕಾರಣಕ್ಕಾಗಿ ! ಎಲ್ಲಿ ನಾವು ಕನ್ನಡಿಗರು ಸಂಸ್ಕೃತ ಬಿಟ್ಟರೆ ನಮ್ಮ ಹಿಂದೂ ಸಂಸ್ಕೃತಿ (??) ಗೆ ಎಲ್ಲಿ ಕುತ್ತು ಬರುತ್ತೋ ಅನ್ನೋ ಅಂಜಿಕೆ !
ಇಂತಿ ನಿಮ್ಮ
ರಘು ನಂದನ್

hamsanandi ಅಂತಾರೆ...

ನೀವು ಕೊಟ್ಟ ತಲೆಬರಹ ಸರಿಕಾಣಲಿಲ್ಲ. "ಶತಾವಧಾನದ" ಪ್ರಶ್ನೆಗಳು ಹೇಗಾಗುತ್ತೆ?

Anonymous ಅಂತಾರೆ...

hamsanandi sir,
ayyO! adu sumne haagE ree! shataavadhaana annOdu oMdu kale. haage ee prashneyoo kalegaarikeyiMda koodide eMdu artha maaDkoLLi..

ಗುರುದತ್ತ ಕೂಡ್ಲಿ ಅಂತಾರೆ...

ನಿಮ್ಮ ಬ್ಲಾಗಿನ ಕೊನೆಯ ಸಾಲುಗಳು ನನಗೆ ಬಹಳ ಬೇಸರ ತಂದಿದೆ. :(
ಈ ಇಬ್ಬರು ಮಹನೀಯರು ಸದಾ ಸತ್ಯ ಅನ್ವೇಷಣೆಯಲ್ಲಿ ಸಕ್ರಿಯವಾಗಿ, ಬಹು ಧೈರ್ಯದಿಂದ ತೊಡಗಿದ್ದಾರೆ ಎಂಬುದು ನನ್ನ ಧೀರ್ಘ ಅಧ್ಯಯನದಿಂದ, ಬುದ್ಧಿ-ಭಾವನೆಗಳಿಗೆ ಅರಿವಾಗಿದೆ ಎಂದು ಹೇಳಲು ಇಷ್ಟ ಪಡುತ್ತೇನೆ.

"ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಹಿರಿದಾದ ಸಾಧನೆಗೈದಿರುವ ಈ ಇಬ್ಬರು ಗೌರವಾನ್ವಿತ ಮಹನೀಯರ ಪ್ರಶ್ನೆ ಮತ್ತು ಉತ್ತರಗಳೆರಡನ್ನೂ ನೋಡಿದಾಗ ಒಟ್ಟಾರೆಯಾಗಿ ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿಗಳ ಬಗ್ಗೆ ಇವರುಗಳು ಹೊಂದಿರುವ ನಿಲುವುಗಳು ಸರಿಯಿಲ್ಲದಿರುವುದು ಕಾಣುತ್ತದೆ. ಸತ್ಯದ ಹುಡುಕಾಟವೇ ಪರಮಗುರಿಯಾಗಿದೆ ಎನ್ನುವ ಈರ್ವರೂ ಈ ದಿಕ್ಕಿನಲ್ಲಿ ಮುಂದಾದರೂ ಯೋಚಿಸಿಯಾರು ಅಂದ್ಕೊಳ್ಳೋಣ... ಅಲ್ವಾ ಗುರೂ!"

Maaysa ಅಂತಾರೆ...

ಗಂಭೀರವಾಗಿ! ಅನೇಕ ಎಣಿಸಬಹುದಾದ ಬುದ್ಧಿಜೀವಿಗಳು ಎಂದು ಆರ್ ಗಣೇಶ್ ಮತ್ತು Bhairappa ಪರಿಗಣಿಸುವುದಿಲ್ಲ.

Enguru ಅವುಗಳ ಬಗ್ಗೆ ಚಿಂತೆ ಇಲ್ಲ. ಅವರಿಗೆ ಪ್ರಾಮುಖ್ಯತೆ ಅಥವಾ ಕನ್ನಡ ಜನರು ಬಹುತೇಕ idealogical ಬೆಂಬಲ ಇಲ್ಲ.

ನಿಸ್ಸಂಶಯವಾಗಿ! Bhairappa (ಮತ್ತು ಅವರ ಜೊತೆಗಾರ) ಮೂರು ಜ್ಞಾನ peetha awardees ಬಗ್ಗೆ ಅಸೂಯೆ ಇದೆ.

ಮತ್ತು ಆರ್ ಗಣೇಶ್ ಹೆಚ್ಚು 5 ಭಾಷೆಗಳು ಸ್ವಘೋಷಿತ ವಿದ್ವಾಂಸ. ಆದರೆ, ಕೇವಲ ಇಂಜಿನಿಯರಿಂಗ್ ಕಾಲೇಜು ಡ್ರಾಪೌಟ್ ಆಗಿದೆ.

Google translation of

Seriously! Many don't consider R.Ganesh and Bhairappa as countable intellectuals.

Enguru need not worry about them. They don't have the importance nor the idealogical support from majority of Kannada people.

Obviously! Bhairappa (and his pal) is jealous of three Jnana peetha awardees.

And R.Ganesh is a self-proclaimed scholar of more than 5 languages. However, he is just a engineering college dropout.

Anonymous ಅಂತಾರೆ...

Dear Mr. Maaysa,

Dr. R. Ganesh was born on the 4th of December, 1962, in Kolar town of Karnataka. His parents were R.Shankar Narayan Aiyar and K.V.Alamelamma; his ancestors hailed from Devarayasamudram. His primary and middle school education was at Bangalore city and high school education in Gowribidanur. A graduate of Mechanical Engineering from the Vishweshwaraiah college of Engineering, Bangalore, Dr.Ganesh holds an M.Sc degree in Material Science and Metallurgy from the well-known Indian Institute of Science in Bangalore. He also holds a Masters’ in Sanskrit from the Mysore University.

You need not agree with his stance, But do not try to make false allegations!

Anonymous ಅಂತಾರೆ...

Dear Maaysa,

Read this: http://ellakavi.wordpress.com/2007/11/22/shatavadhani-dr-r-ganesh/

Anonymous ಅಂತಾರೆ...

ee samskrutha vaadigalannu nodire.Kannadigarada navau hindu dhramada badalu dravida dhrama antha badalagabeku antha anisuthide. AA kalavu sadyadalle jarugalide.

EE HINDISH gali gintha ENGLISHARE esto melu.

karunadu ಅಂತಾರೆ...

ನಾನು ಮೇಲೆ ಕೊಟ್ಟಿರುವ ಲಿಂಕ್ ಇದು....
http://www.thehindu.com/opinion/op-ed/article1081343.ece
ಮುಂಚೆ ಕೊಟ್ಟ ಲಿಂಕ್ ಸರಿಯಾಗಿ ತೆರೆಯುತ್ತಿರಲಿಲ್ಲ ....
India, largely a country of immigrants ಅನ್ನೋ ಹೆಸರಲ್ಲಿದೆ...
ನನ್ನೀ !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails