tag:blogger.com,1999:blog-7410064535655791758.post4580104545692469022..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಸಂಸ್ಕೃತ ವಿ.ವಿ : ಈಗ ಸರ್ಕಾರ ಏನ್ಮಾಡಬೇಕು?Unknownnoreply@blogger.comBlogger12125tag:blogger.com,1999:blog-7410064535655791758.post-81582946032986887852009-09-21T23:18:10.837+05:302009-09-21T23:18:10.837+05:30ಶಿವಮೊಗ್ಗೆಯ ಮೂಲದ ಬಗ್ಗೆ ಒಂದು ಜೈನ ಕಲ್ಬರಹದಂತೆ, ಅದರ ಹೆಸ...ಶಿವಮೊಗ್ಗೆಯ ಮೂಲದ ಬಗ್ಗೆ ಒಂದು ಜೈನ ಕಲ್ಬರಹದಂತೆ, ಅದರ ಹೆಸರು ಸೀಮೊಗ್ಗೆ, ಸಿಹಿಮೊಗ್ಗೆ, ಸಿಹಿಯಾದ ನೀರನ್ನು ಮೊಗ್ಗು/ಬೊಗಸೆ ಮಾಡಿ ಕುಡಿಯುವ ಊರು ಎಂದಂತೆ.

ಇನ್ನು ತೀರ್ಥಹಳ್ಳಿ, ತೀರಿತ/ದ ಹಳ್ಳಿ ಇಂದ ಎಂದು ಕೊವೆಂ(?) ಅವರ ಹೊತ್ತಗೆ ಹೇಳುವುದು.

ಇನ್ನು ಕರ್ನಾಟ ಎಂಬ ಪದವೇ ಕರ್ ಮತ್ತು ನಾಟ್/ನಾಡ್ ಎಂಬ ಕನ್ನಡ ಪದಗಳಿಂದ ಬಂದಿವೆ. ಕರ್ನಾಟದ Sanskritized ರೂಪ ಕರ್ಣಾಟ ಎಂದು ಹಲ ಪಂಡಿತರ ಹೇಳಿಕೆ.

ಅದಿರಲಿ, ಚೆನ್ನುಡಿ/ಶಾಸ್ತ್ರೀಯ ನುಡಿಯಾಗಿ ಕನ್ನಡವನ್ನು ಹೆಸರಿಸಿದ ಮೇಲೆ ನಮಗೆ ಮೊದಲು ಬೇಕಾಗಿರುವುದು ಹಳಗನ್ನಡ ಹಾಗು ನಡುಗನ್ನಡಗಳು ಕುರಿತು ಆರಯ್ಯು ನಡೆಸುವ ಯುನಿವೆರ್ಸಿಟಿ. ನಮ್ಮ ಕನ್ನಡ ನುಡಿಯ ಬಗ್ಗೆ sufficient research ನಡೆಸಲು instituteಗಳಿಲ್ಲ. ಹಾಗಿರುವಾಗ ಸಂಸ್ಕೃತ ಯುನಿವರಿಸಿಟಿ ಕನ್ನಡಕ್ಕೆ ಮೋಸ ತಾನೇ?Anonymousnoreply@blogger.comtag:blogger.com,1999:blog-7410064535655791758.post-71096103765239042842009-09-21T21:52:21.811+05:302009-09-21T21:52:21.811+05:30ಕರ್ನಾಟಕದಲ್ಲಿ ಮುಂಚೆ ಸಂಸ್ಕೃತ ಮಾತನಾಡ್ತಾ ಇದ್ರೂ ಅನ್ನೋದು...ಕರ್ನಾಟಕದಲ್ಲಿ ಮುಂಚೆ ಸಂಸ್ಕೃತ ಮಾತನಾಡ್ತಾ ಇದ್ರೂ ಅನ್ನೋದು ಅಪರಂಜಿ ಸುಳ್ಳು. ಇದಕ್ಕೆ ಕರ್ನಾಟಕದ ಊರು-ಕೇರಿಗಳ ಹೆಸರುಗಳೇ ಸಾಕ್ಷಿ. ಇವತ್ತಿನ ಕರ್ನಾಟಕದ ಯಾವುದೇ ಊರಿನ ಹೆಸರು ತೆಗೆದುಕೊಳ್ಳಿ, ಸಂಸ್ಕೃತದಿಂದ ಹುಟ್ಟಿರುವ ಊರ ಹೆಸರುಗಳು ಸಾವಿರಕ್ಕೆ ಒಂದಿದ್ರೆ ಹೆಚ್ಚು.
ಉದಾಹರಣೆಗೆ:
ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ,, ಹೀಗೆ ಯಾವುದೇ ದೊಡ್ಡ ಊರಾಗಲಿ, ಇಲ್ಲ, ಮಳವಳ್ಳಿ, ಬಂಕಾಪುರ, ಬೈಲಹೊಂಗಲ್, ಹಾಲಾಡಿ, ಸಿದ್ಧಾಪುರ, ಬಳ್ಳಾರಿ,, ಯಾವುದೇ ಊರು ತೆಗೆದುಕೊಳ್ಳಿ,, ಒಂದರ ಮೂಲವೂ ಸಂಸ್ಕೃತವಲ್ಲ.

ಸಂಸ್ಕೃತ ಕರ್ನಾಟಕದ ಆಡು ನುಡಿಯಾಗಿದ್ರೆ, ಅದು ಹೇಗೆ ಊರು ಹೆಸರುಗಳೆಲ್ಲ ಅಪ್ಪಟ್ಟ ಕನ್ನಡದಲ್ಲಿವೆ ??ರವಿ ತುರುವೆಕೆರೆnoreply@blogger.comtag:blogger.com,1999:blog-7410064535655791758.post-33492744071273421142009-09-20T23:36:10.536+05:302009-09-20T23:36:10.536+05:30I observe all the discussions in Enguru and Karnat...I observe all the discussions in Enguru and Karnatique are getting digressed towards this Tulu and Konkani issue. I don't see any importance for bring these things in every topic.Anonymousnoreply@blogger.comtag:blogger.com,1999:blog-7410064535655791758.post-67739869207826424302009-09-20T07:53:01.379+05:302009-09-20T07:53:01.379+05:30Dear Svenskannadiga
I do not think we are discu...Dear Svenskannadiga

I do not think we are discussing here superiority of one language over the other.
I do not think I have said every problem has solution in Samskruta. It is like saying every problem in the world has solution in English.
Regarding Inventions by English educated people are there not contributions by Japanese Russians, Chinese, Hebrew speakers? Language is just a means of communication.
Regarding Jnana peethas, it is some what proportional to number of speakers in that language. This is just like asking a question why no Jnana Peethas for Tulu, kodava, Konkani?

Since I am student of Maths I have not said any thing without proof as far as Maths and Sanskrit texts are concerned (Proofs are given in the introduction part of Ganita DVD-www.FREEGanita. com) ) : To that extent they are not lies.

I still maintain that ancient books in whichever language they are have some ‘jnan’ for mankind and we need to do some research on that for our own benefit.Rajashekharahttps://www.blogger.com/profile/03467581482774669292noreply@blogger.comtag:blogger.com,1999:blog-7410064535655791758.post-3060915565119851332009-09-19T21:19:33.422+05:302009-09-19T21:19:33.422+05:30ಹಳ್ಳಿ ಹಯ್ದರೆ,
ಈ ಜಗದಲ್ಲಿರುವ ವಿವೆಕವೆಲ್ಲ, ಜಾಣತನವೆಲ್ಲ...ಹಳ್ಳಿ ಹಯ್ದರೆ,

ಈ ಜಗದಲ್ಲಿರುವ ವಿವೆಕವೆಲ್ಲ, ಜಾಣತನವೆಲ್ಲ ಬರೀ ಸಂಸ್ಕೃತದಲ್ಲಿದೆ ಎಂಬುವವರಿಗೆ ಅದು ಯಾಕೋ ಚಿಕ್ಕ ಪುಟ್ಟ ಸತ್ಯಗಳಾಗಲಿ, ಸಂಗತಿಗಳಾಗಲಿ ತಿಳಿದೇ ಇಲ್ಲ, ತಿಳಿಸಿದರೂ ಅರ್ಥವಾಗುವುದೂ ಇಲ್ಲ. ಒಂದು ತರಹದ ಜಾಣ ಪೆದ್ದು, ಮೊಂಡುತನ.

ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಿ, ತುಳು, ತೋದ, ಕೊರವ, ಬಡಗ, ಓರಿಯ, ಅಸ್ಸಾಮಿ, ಮಣಿಪುರಿ, ಬೋಡೊ, ಹೀಗೆ ಇಂಡಿಯಾ ದೇಶದಲ್ಲಿ ದಕ್ಷಿಣ ಹಾಗು ಪೂರ್ವದ ರಾಜ್ಯಗಳ ಭಾಷೆಗಳು ಸಂಸ್ಕ್ರುತದಿಂದಾಗಲಿ ಇಲ್ಲವೇ ಪ್ರಾಕ್ರುತದಿಂದಾಗಲಿ ಬಂದಿಲ್ಲ.

ಇಂಡಿಯಾದಲ್ಲಿ ಐದು ಲ್ಯಾಂಗ್ವೇಜ್ ಫ್ಯಾಮಿಲಿಗಳಿವೆ. ಅದರಲ್ಲಿ ಬರಿ ಒಂದು ಸಂಸ್ಕೃತಕ್ಕೆ ಸಂಬಂಧ ಹೊಂದಿರುವಂತದ್ದು.

ಇದನ್ನೇ ಮತ್ತೆ ಮತ್ತೆ ಎಷ್ಟು ಸರತಿ ಹೇಳಿದರು, 'ಹಾಡಿದ್ದೇ ಹಾಡೋ ಕಿಸು ಬಾಯ್ ದಾಸ' ಅನ್ನೋ ಗಾದೆಯಂತೆ ಸುಳ್ಳು ಸುಳ್ಳು ಸಂಗತಿಗಳನ್ನೂ ಸಂಸ್ಕೃತವನ್ನು ಹೊಗಳೋ ನೆವದಲ್ಲಿ ಹೇಳುತ್ತಾರೆ. ಹೊಸ ಹೊಸ ವಿಜ್ಞಾನ ಸಂಗತಿಗಳನ್ನೆಲ್ಲ ಮೊದಲೇ ಈ ಸಂಸ್ಕೃತ ಬುಕ್ಕಲ್ಲಿ ಇತ್ತು ಆ ಸಂಸ್ಕೃತ ಬುಕ್ಕಲ್ಲಿ ಇತ್ತು ಎಂದು, ಹೊಸದಾಗಿ Interpretationಗಳನ್ನೂ ಹುಟ್ಟಿಸಿ ಡಂಗೂರ ಹೊಡೆಯುತ್ತಾರೆ. Ex. Relativity Theory, Atomic Structure, TCP/IP, GSM, CDMA ಇವೆಲ್ಲ XYZನಲ್ಲಿ ಇದೆ.

ನಮ್ಮ ದೇಶದಲ್ಲಿ ಏನು ಸಂಸ್ಕೃತ ಪಂಡಿತರಿಗೆ ಕಡಮೆಯೇ? ಸಂಸ್ಕೃತದಲ್ಲಿ ಅಷ್ಟೊಂದು ವಿಜ್ಞಾನವಿದ್ದರೆ, ಅವರೆಲ್ಲ ಇಷ್ಟು ದಿವಸ ಜನರ ತೆರಿಗೆಯ ಹಣವನ್ನು ಸರಕಾರದಿಂದ ತಿಂದುಕೊಂಡು ನಮ್ಮ ದೇಶದ ಪ್ರಗತಿಗೆ ಏನೂ ಹೇಳಿಕೊಳ್ಳುವಂತಹ ಕೊಡುಗೆ ಕೊಡದೆ, ಗೆಣಸು ಹೆರೆಯುತ್ತಿದ್ದಾರೆ ಏ?

ನಾವು ತೆರುವ ತೆರಿಗೆಯ ಹಣವನ್ನು ಪೋಲೇ ಪೋಲು ಬಳಸುವುದನ್ನು ತದಯುವುದು ನಮ್ಮ ಹಕ್ಕು ಮತ್ತು ಕರ್ತವ್ಯ.

ನನ್ನಿAnonymousnoreply@blogger.comtag:blogger.com,1999:blog-7410064535655791758.post-88788431980164165232009-09-19T14:50:59.708+05:302009-09-19T14:50:59.708+05:30ಮಾಯ್ಸ ಅವರೆ, ಸರಿಯಾಗಿ ಹೇಳಿದ್ದೀರಿ.
ಇವೆಲ್ಲ ನಮ್ಮ ನಾಡಿನ...ಮಾಯ್ಸ ಅವರೆ, ಸರಿಯಾಗಿ ಹೇಳಿದ್ದೀರಿ.

ಇವೆಲ್ಲ ನಮ್ಮ ನಾಡಿನಲ್ಲೆ ಹೆಚ್ಚು, ಅದಕ್ಕೆ ಕಾರಣ, ನಮ್ಮ ನಾಡು ಒಂದು ಧರ್ಮಛತ್ರವಾಗಿರುವುದರಿಂದ. ಇಲ್ಲಿ ಯಾರು ಬೇಕಾದರು ಬಂದು ಅವರ ಬೇಳೆ ಬೇಯಿಸಿಕೊಳ್ಳಬಹುದು. ಇದು ಕನ್ನಡಿಗರಿಗೆ ಆ ದೇವರು ಕೊಟ್ಟಿರುವ ಶಾಪವೆಂದೇ ಕಾಣುತ್ತದೆ.

ಸಂಸ್ಕೃತ ಪಿತ್ತವನ್ನು ಹೋಗಲಾಡಿಸಬೇಕು.ಹಳ್ಳಿ ಹೈದnoreply@blogger.comtag:blogger.com,1999:blog-7410064535655791758.post-33187162385877644822009-09-19T01:26:01.117+05:302009-09-19T01:26:01.117+05:30ಸಂಸ್ಕೃತದಲ್ಲಿ ಏನೆಲ್ಲಾ ಒಳ್ಳೆಯದು ಇದೆ ಆದರೂ .. ಅದರಲ್ಲಿ ...ಸಂಸ್ಕೃತದಲ್ಲಿ ಏನೆಲ್ಲಾ ಒಳ್ಳೆಯದು ಇದೆ ಆದರೂ .. ಅದರಲ್ಲಿ ಸಾಕಷ್ಟು ವಿಷವೂ ಇದೆ. ವಿಷವನ್ನು ಬೇರ್ಪಡಿಸಿ ಹಾಲನ್ನಷ್ಟೇ ತೆಗೆದುಕೊಳ್ಳಲು ಸಾಕಷ್ಟು ಸಹೃದಯತೆ, ಪ್ರೌಡತೆ ಬೇಕು. ಅದು ಶೇಕಡಾ ಎಷ್ಟು ಜನರಲ್ಲಿ ಇದೆ ಅನ್ನುವುದು ಮತ್ತು ಅಂತವರ ಮಾತುಗಳಿಗೆ ಅದೆಷ್ಟು ಬೆಲೆ ಸಿಗುತ್ತೆ ಅನ್ನುವುದು ಒಂದು ಪ್ರಶ್ನೆ.ಸವಿತೃhttp://www.savithru.wordpress.comnoreply@blogger.comtag:blogger.com,1999:blog-7410064535655791758.post-41091432465785408752009-09-18T22:45:55.009+05:302009-09-18T22:45:55.009+05:30To Mr Somayaji,
After all the 'Jnan' from...To Mr Somayaji,

After all the 'Jnan' from your words, I wanna know why did all the Sanskrit pundits in India with there divine knowledge could not find solution to the chaotic problems in India.

Why only people with English education in India are inventing and processing the scientific world? ( Starting Bose to Chandrashekar to Vishveshwaraiah )

Every year the central govt + all the Mutts + other bodies spends crores and crores of money on Sanskrit. Where is your 'Jnan' fruit?/

The amount of money spent for Kannada is around 10% for that of Sanskrit in India. But Kannada produced more Jnana Peethees than Sanskrit! Howcome?

Just by hyping a donkey doesn't become a horse.!

Enough of lies and sanskritizationSvenskannadiganoreply@blogger.comtag:blogger.com,1999:blog-7410064535655791758.post-22497073588911291662009-09-18T12:42:11.816+05:302009-09-18T12:42:11.816+05:30"ವಿಶ್ವವಿದ್ಯಾಲಯಗಳು ಬರೀ ಪದವಿ ನೀಡಿ , ಅದರಿಂದ ಬರೀ ..."ವಿಶ್ವವಿದ್ಯಾಲಯಗಳು ಬರೀ ಪದವಿ ನೀಡಿ , ಅದರಿಂದ ಬರೀ ಕೆಲಸಕೊಡಿಸುವ ಯಂತ್ರಗಳಾಗದೆ
ಸಂಶೋಧನೆ ಮಾಡುವಂತಿರಬೇಕು."

ಸೋಮಯಾಜಿ ಅವರ ಈ ಮಾತು ಸರಿ ಎಂದು ನನ್ನ ಅನಿಸಿಕೆ..Shashanknoreply@blogger.comtag:blogger.com,1999:blog-7410064535655791758.post-47545968538101369572009-09-18T12:16:33.604+05:302009-09-18T12:16:33.604+05:30ಸಂಸ್ಕ್ರತ ವಿ ವಿ ಗಳ ಅಗತ್ಯ ನಮಗೆಷ್ಟಿದೆ ಎಂದು ತಿಳಿಯುವುದು...ಸಂಸ್ಕ್ರತ ವಿ ವಿ ಗಳ ಅಗತ್ಯ ನಮಗೆಷ್ಟಿದೆ ಎಂದು ತಿಳಿಯುವುದು ಸೂಕ್ತ ಅನಿಸುತ್ತದೆ. ಸದಾ ವ್ರತ್ತಿಪರ ಶಿಕ್ಷನಗಳಿಗೆ ಮುಗಿ ಬೀಳುತ್ತಿರುವ ವಿಧ್ಯಾರ್ಥಿಗಳು ಹಾಗೂ ಪಾಲಕರು ಸಂಸ್ಕ್ರತ ವಿ ವಿ ಗೆ ಎಷ್ಟು ಸಮ್ಮತಿಸುತ್ತಾರೆ ಅಲ್ಲವೇ?
ಭಾಷೆಯ ಬಗ್ಗೆ ನಮಗೆ ತಿಳುವಳಿಕೆ ಬರದೆ ಬೇರೊಬ್ಬರಿಂದ ತಿಳಿಯಲು ಸಾದ್ಯವಿಲ್ಲ. ಮೊದಲು ನಾವು ನಮ್ಮತನವನ್ನು ಅರಿತುಕೊಂಡರೆ ಇಂಥಹ ಎಷ್ಟೋ ವಿ ವಿ ಗಳು ತನ್ನಿಂದ ತಾನೆ ತಲೆ ಎತ್ತುತ್ತವೆ. ದೇಶದಲ್ಲಿದ್ದೂ ಪರಕೀಯರಾಗಿದ್ದೇವೆ ನಾವು.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7410064535655791758.post-39637613745958981782009-09-18T11:25:02.385+05:302009-09-18T11:25:02.385+05:30ಇಲ್ಲಿನ ಚರ್ಚೆಯಲ್ಲಿ ಸಂಸ್ಕೃತವನ್ನು ಸತ್ತ ಭಾಷೆ, ದೇವ ಭಾಷ...ಇಲ್ಲಿನ ಚರ್ಚೆಯಲ್ಲಿ ಸಂಸ್ಕೃತವನ್ನು ಸತ್ತ ಭಾಷೆ, ದೇವ ಭಾಷೆ, ಭಾರತದ ಎಲ್ಲಾ ಭಾಷೆಗಳಿಗೆ ಮಾತೃ ಭಾಷೆ ಎಂದು ಬಣ್ಣಿಸಲಾಗಿದೆ, ದೇವ ಬಾಷೆ ಎನ್ನುವುದು ಅವರವರ ನಂಬಿಕೆಗೆ ಬಿಟ್ಟಿರುವ ವಿಷಯವಾಗಿದ್ದು ಸಂಸ್ಕೃತವು ಗ್ರೀಕ್ ಲ್ಯಾಟಿನ್ ನಂತೆ ಸತ್ತು ಹೋಗಿಲ್ಲ. ಬಳಸದೇ ಇರುವವರು ಇಲ್ಲದಿದ್ದರೂ ಅದನ್ನು ಓದುವವರು. ತಿಳಿದವರು ಇನ್ನೂ ಇದ್ದಾರೆ,
ಹಾಗೆ ಅದು ಸತ್ತ ಭಾಷೆಯಾಗಿಲ್ಲದೇ ಎಲ್ಲಾ ಭಾರತೀಯ ಭಾಷೆಗಳಿಗೆ ಮಾತೃ ಭಾಷೆಯಾಗಿದ್ದು , ಕುವೆಂಪು, ಗಾಂಧಿ, ಅಂಬೇಡ್ಕರ್ ಅಂತಹ ಮಹನೀಯರು ಪ್ರಾಮುಖ್ಹ್ಯ ಕೊಟ್ಟರು ಎಂದ ಮಾತ್ರಕ್ಕೆ ವಿ.ವಿ ಬೇಕೇ ಎನ್ನುವುದು ಪ್ರಸ್ತುತವಾಗುತ್ತದೆ.
ಸಂಸ್ಕೃತ ಕಲಿಕೆಯಿಂದ ಕನ್ನಡಕ್ಕೆ ಅಪಾಯ ಎನ್ನುವ ವಾದ ಹುರುಳಿಲ್ಲದ್ದು. ನಿಜವಾಗಲೂ ಕನ್ನಡಕ್ಕೆ ಅಪಾಯ ಅಪಾಯ ಇರುವುದು English ನಿಂದ ಮತ್ತು English ನ್ನು LKG ಯಿಂದ ಕಲಿಯುತ್ತಿರುವ ಈಗಿನ ಪೀಳಿಗೆಯಿಂದ ( ಆದರೆ English ಅನಿವಾರ್ಯವಾಗಿ ಬಿಟ್ಟಿದೆ)

ನನ್ನ ದೃಷ್ಟಿಯಲ್ಲಿ ಸಂಸ್ಕೃತದಲ್ಲಿರುವ ಗ್ರಂಥಗಳಿಂದ ತಿಳಿಯಬೇಕಾದ್ದು/ ಉಪಯೋಗವಾಗುವಂತಹದು ಇನ್ನೂ ಇದೆ ಅನ್ನಿಸುತ್ತೆ.

ಇತ್ತೀಚೆಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ೮.೯.೧೦ ನೇ ತರಗತಿಗಳ ಗಣಿತ ಪಾಠಗಳನ್ನು ಸಿದ್ಧಪಡಿಸುವ(www.FREEGanita. com) ಸಮಯದಲ್ಲಿ 'ಶೂನ್ಯ ಮತ್ತು ದಶಮಾಂಶ ಪದ್ಧತಿಯನ್ನು ಕಂಡು ಹಿಡಿದವರು ಭಾರತೀಯರಾಗಿದ್ದರೂ ನನಗೆ ಅದಕ್ಕೆ ಅಧಾರ ಸಿಕ್ಕಿದ್ದು 'ಯಜುರ್ವೇದ,ಬ್ರಹ್ಮಾಂಡ ಪುರಾಣ ಮತ್ತು ರಾಮಾಯಣ' ಗ್ರಂಥಗಳಲ್ಲಿ.
ಪೈಥೊಗೊರಸನ ಪ್ರಮೇಯ ಇರುವುದು ಯಾಜ್ನವಲ್ಕ್ಯರ ಶತಪಥ ಬ್ರಾಹ್ಮಣ ದಲ್ಲಿ, ವರ್ಗ ಸಮೀಕರಣದ ಸೂತ್ರ ಇರುವುದು ಶ್ರೀಧರನ ಗ್ರಂಥದಲ್ಲಿ, ಪೈ ಇರುವುದು ಆರ್ಯಭಟೀಯಂ ನಲ್ಲಿ !!
ಗಣಿತದ ವಿವಿಧ ಪಾಠಗಳಿಗೆ ಬಹಳ ಆಸಕ್ತಿದಾಯಕ ಸಮಸ್ಯೆಗಳು/ಉದಾಹರಣೆಗಳು ಸಿಕ್ಕಿದ್ದು ಬಿಜಾಪುರದಲ್ಲೆ ಹುಟ್ಟಿ ಕನ್ನಡಿಗನೇ ಆಗಿರುವ ಕ್ರಿ . ಶ.೧೨ ನೇಶತಮಾನದ ಭಾಸ್ಕರಾಚಾರ್ಯನ ಸಂಸ್ಕೃತದಲ್ಲಿನ ಲೀಲಾವತಿ ಗ್ರಂಥದಲ್ಲಿ
ಇದೂ ಅಲ್ಲದೇ ಕ್ರಿ. ಶ. ೧೭ ನೇ ಶತಮಾನದ ಅಪ್ಪಟ ಕನ್ನಡ ಕವಿ ಬಸವ ಭೂಪಾಲ ನು ಬರೆದ ೧೦೦% ಸಂಸ್ಕೃತದಲ್ಲಿ ರಚಿಸಿದ್ದ ಸಂಪದ್ಭರಿತ ವಿಶ್ವಕೋಶ ಗ್ರಂಥ ಶಿವತತ್ವ ರತ್ನಾಕರ
( ಕನ್ನಡ ಮಾತೃಭಾಷೆಯ ಈ ಶರಣ ಕವಿ ಸಂಸ್ಕೃತದಲ್ಲಿ ಏಕೆ ವಿಶ್ವಕೋಶವನ್ನು ರಚಿಸಿರಬಹುದು?) ದಲ್ಲಿ ಗಣಿತ, ಸಂಗೀತ, ಅರೋಗ್ಯ/ಸಸ್ಯ ಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಬಹಳ ಇದೆ

ಕೆಲವರು ಇದೆಲ್ಲಾ ಕಂಡು ಹಿಡಿದಾಯಿತು ಇನ್ನೂ ಏನು ಪ್ರಯೋಜನ, ಕಂಡು ಹಿಡಿಯಲು ಏನಿದೆ ಎಂದು ಕೇಳಬಹುದು.
ಇದೇ ರೀತಿ ಎಲ್ಲರೂ ಆಲೋಚಿಸಿದ್ದರೆ ೧೯೫೦ ರ ಹೊತ್ತಿನಲ್ಲಿ ವೈದಿಕ ಗಣಿತ( ಗಮನಿಸಿ : ವೇದಕ್ಕೂ ಇದಕ್ಕೂ ಎನೇನೂ ಸಂಬಂಧವಿಲ್ಲ ) ಬೆಳಕಿಗೆ ಬರುತ್ತಿರಲಿಲ್ಲ
ಇದರಲ್ಲಿನ ಗಣಿತದಂತೆ ಗಣಿತ ಕಲಿಸುವಂತಿದ್ದರೆ ನಮ್ಮಲ್ಲಿ ಹೆಚ್ಚಿನವರು ಭಾಸ್ಕರನೋ, ಆರ್ಯಭಟನೋ ಇಲ್ಲ ಬಸವ ಭೂಪಾಲರು ಆಗ ಬಹುದೋ ಏನೋ?
ನಮ್ಮ ಪಾಶ್ಚಾತ್ಯ ಶಿಕ್ಷಣ ಕ್ರಮದಿಂದ ಕಲಿಯಬೇಕಾದ್ದನ್ನು ಸರಿಯಾಗಿ ಕಲಿಯದೇ ಇರುವುದು ನಮ್ಮ ದೌರ್ಭಾಘ್ಯ.
ಮೇಲಿನ ವಿಷಯಗಳ ವಿವರಗಳ ಚರ್ಚೆ ಇಲ್ಲಿ ಅಪ್ರಸ್ತುತ ಆಗಿರುವುದರಿಂದ ಆಸಕ್ತಿ ಇದ್ದವರು ಗಣಿತ ಡಿವಿಡಿ ಯಲ್ಲಿರುವ 'ಪ್ರಸ್ತಾವನೆಯ' ನ್ನು ಆಲಿಸಬಹುದು

ಗಣಿತವಲ್ಲದೆ ಇನ್ನೂ ಅನೇಕ ವಿಷಯಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ( ಅದು ಸಂಸ್ಕೃತ/ಹಳ ಕನ್ನಡ/ಕನ್ನಡ ಇರಬಹುದು) ಇವೆ ಅದನ್ನು ಸರಿಯಾಗಿ ಸಂಶೋಧಿಸಬೇಕು, ಅದಕ್ಕೆ ಭಾಷೆಯ ಮೇಲೆ ಪ್ರಭುತ್ವ ಇರಬೇಕು ಅಷ್ಟೇ.
ವಿಶ್ವವಿದ್ಯಾಲಯಗಳು ಬರೀ ಪದವಿ ನೀಡಿ , ಅದರಿಂದ ಬರೀ ಕೆಲಸಕೊಡಿಸುವ ಯಂತ್ರಗಳಾಗದೆ
ಸಂಶೋಧನೆ ಮಾಡುವಂತಿರಬೇಕು.

ಸಂಸ್ಕೃತ/ಕನ್ನಡ ವಿ ವಿ ಗಳು ಬೇಕೇ ಬೇಡವೇ ಎನ್ನುವ ಬದಲು ಈ ವಿ ವಿ ಗಳು ಯಾವ ರೀತಿಯ ಜನೋಪಯೋಗಿ ಸಂಶೋಧನಾ ಕಾರ್ಯ ನಡೆಸಬಹುದು ಎಂದು ಚರ್ಚಿಸುವುದು ಉತ್ತಮ ಅಲ್ಲವೇ?

ಸೋಮಯಾಜಿRajashekharahttps://www.blogger.com/profile/03467581482774669292noreply@blogger.comtag:blogger.com,1999:blog-7410064535655791758.post-58494965491402904592009-09-18T01:05:37.311+05:302009-09-18T01:05:37.311+05:30ಹಿಂದಿಯ ಹೇರಿಕೆಗೂ ಸಂಸ್ಕೃತದ ಹೇರಿಕೆಗೂ ಏನಾದರು ಬೇರೆತನವಿ...ಹಿಂದಿಯ ಹೇರಿಕೆಗೂ ಸಂಸ್ಕೃತದ ಹೇರಿಕೆಗೂ ಏನಾದರು ಬೇರೆತನವಿದೆಯೇ? ಒಂದು ಸುಳ್ಳೇ ಸುಳ್ಳು ರಾಷ್ಟ್ರ ಭಾಷೆ ಮತ್ತೊಂದು ಸುಳ್ಳು ಸುಳ್ಳೇ ಕನ್ನಡ ತಾಯಿ! ದೇವ ಭಾಷೆ! ಸಂಸ್ಕೃತಿಯ ಸೆಲೆ!

ಆರ್ಯ - ದ್ರಾವಿಡ ಸಿದ್ದಾಂತ ಸುಳ್ಳೋ ದಿಟವೋ, ಆದರೆ ಅದರಿಂದ ತಮಿಳರಲ್ಲಿ ತಮ್ಮತನದ ಎಚ್ಚರಿಕೆಯಂತೂ ಬಂತೂ, ಸಂಸ್ಕೃತ ಮತ್ತು ಹಿಂದಿ ಮೇಲಣ ಹಗೆ ಅವರ ಪ್ರಬಲ ಅಸ್ತ್ರ. ತಮಿಳುನಾಡಲ್ಲಿ ಭೈರಪ್ಪನವರೊಮ್ಮೆ ತಮ್ಮ ವಾದ ಮಂಡಿಸುವ ಪ್ರಯತ್ನ ಮಾಡಿದ್ದರೆ ಅದಕ್ಕೆ ತಮಿಳು ಪಂಡಿತರ ಉತ್ತರ ಮಜವಾಗಿ, ಚುರುಕ್ಕಾಗಿ ಇರುತ್ತಿತ್ತು.

ಈ ಹಿಂದಿ, ಸಂಸ್ಕೃತದ ಅಬ್ಬರ ಅದ್ಯಾಕೋ ದಕ್ಷಿಣ ರಾಜ್ಯಗಳಲ್ಲಿ ಬರೀ ಕರ್ನಾಟಕದಲ್ಲಿ ಮಾತ್ರ! :DAnonymousnoreply@blogger.com