ನಿಮ್ಮ ಮನೇಲೇ ಇರ್ತೀನಿ, ನಿಮ್ಮನ್ನೇ "ಕೀಳು ಜನಾಂಗ" ಅಂತ ಬೈತೀನಿ!


೨೯ ಜೂನಿನ "ಬ್ಯಾಂಗಲೋರ್ ಬಯಾಸ್" ಎಂಬ ಬೆಂಗಳೂರಿನ ಒಂದು ಇಂಗ್ಲೀಷ್ ಪುಡಿ-ಪತ್ರಿಕೆಯಲ್ಲಿ "ಬ್ಯಾಂಗಲೋರ್ ಟಾರ್ಪೆಡೋ" ಎಂಬ ಪುಣ್ಯಾತ್ಮನ ಉವಾಚಗಳಿಗೆ ಸ್ವಲ್ಪ ಗಮನ ಹರಿಸೋಣ. ಈ ಪತ್ರಿಕೆಯೇನು ಮನೆಮಾತಾಗಿದೆ, ಇವರು ಬರೆದಿದ್ದಕ್ಕೆಲ್ಲ ನಾವು ಉತ್ತರ ಕೊಡಬೇಕು ಅಂತೇನಲ್ಲ (ಯಾವ್ ಬಯಾಸೋ ಯಾರೂ ಕೇಳೇ ಇಲ್ಲ, ಬಿಡಿ!), ಆದರೆ ನಮ್ಮ ಮನೆಯಲ್ಲೇ ಇದ್ದುಗೊಂಡು ನಮ್ಮನ್ನೇ ಕೀಳು ಜನಾಂಗ ಅನ್ನುತ್ತಿರುವವನ ಮೀಟ್ರು ಎಷ್ಟು ಅಂತ ನೋಡಿ:

A few weeks after the release of Rajnikant's latest movie Sivaji - The Boss, one still encounters traffic jams outside theatres screening the movie, presumably running to a full house or close to it. Compare this to the sad state of Kannada cinema and its offerings and you wonder why actors and other stalwarts of this so called industry still indulge in pointless brinkmanship and bravado.


ಕನ್ನಡ ಚಿತ್ರರಂಗ ದುಃಖಕರ ಸ್ಥಿತಿಯಲ್ಲಿ ಇದೆ ಅನ್ನೋದು ಶುದ್ಧ ಸುಳ್ಳು, ಅಂಕಿ-ಅಂಶಗಳ ಆಧಾರವಿಲ್ಲದ, ಬಯಾಸ್ ತುಂಬಿದ ಬೊಗಳೆ. ಇತ್ತೀಚಿನ "ಜೋಗಿ" (ಅಂದಹಾಗೆ ಈ ಚಿತ್ರವನ್ನು ನಾಮುಂದು-ತಾಮುಂದು ಅಂತ ತಮಿಳರು ಬಂದು ತಮಿಳಲ್ಲಿ ರೀಮೇಕ್ ಮಾಡಿದ್ದನ್ನ ಮಿಸ್ಟರ್ ಟಾರ್ಪೆಡೋಗೆ ಯಾರಾದ್ರೂ ಹೇಳಬೇಕು!), "ಅಮೃತಧಾರೆ", "ಸಯನೈಡ್", "ಮುಂಗಾರುಮಳೆ", "ದುನಿಯಾ" - ಇವುಗಳೆಲ್ಲ ಕನ್ನಡ ಚಿತ್ರರಂಗದ ಜನಪ್ರಿಯತೆ ಮತ್ತು ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಿರುವಾಗ ಇವನಿಗೆ ಕಣ್ಣು ಕುರುಡಾಗಿತ್ತಾ? ಅಥವಾ ಕಿವುಡೇನಾದರೂ ಬಡಿದಿತ್ತಾ? "So called industry" ಅಂತಾನಲ್ಲ, ಕನ್ನಡ ಚಿತ್ರರಂಗ ಒಂದು ಉದ್ದಿಮೆಯೇ ಅಲ್ಲ ಅಂತ ಕನ್ನಡಿಗರಿಗೇನು ಅನ್ನಿಸುವುದಿಲ್ಲ! ಕನ್ನಡದ ನಟ-ನಟಿಯರೆಲ್ಲ ಸಮಯ ದಂಡ ಮಾಡ್ತಿದಾರೆ ಅಂತ ನಮಗೇನು ಖಂಡಿತ ಅನ್ನಿಸುವುದಿಲ್ಲ! ದಿನೇ ದಿನೇ ಜನಪ್ರಿಯವಾಗುತ್ತಿರುವ ಕನ್ನಡ ಚಿತ್ರಗಳು, ಕತೆಗಳು, ನಟ-ನಟಿಯರನ್ನು ನೋಡಿದರೆ ಸಕ್ಕತ್ ಸಂತೋಷವೇ ಆಗುತ್ತದೆ. ಹೀಗಿರುವಾಗ ನಮ್ಮ ಭೂಪ ಅನ್ನೋದು ನೋಡಿ:

Most Kannada movies...are boring and pointless

ಈ ಮಹಾನುಭಾವನಿಗೆ ಕನ್ನಡ ಚಿತ್ರಗಳು ಬೋರಂತೆ, ಅರ್ಥವಿಲ್ಲದ್ದಂತೆ. ಕನ್ನಡ ಚಿತ್ರರಂಗದ ಬಗ್ಗೆ ಈರೀತಿ ಬೈದು ಬರೆಯುವ ಇವನು ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಾನಂತೆ? ಅಥವಾ ಇವನಿಗೆ ತಮಿಳರು ಪೆದ್ದಪೆದ್ದಾಗಿ ಕುಣೀತಿಲ್ಲದ ಚಿತ್ರಗಳೆಲ್ಲ boring and pointless ಅನ್ನೋದಾದರೆ ತನ್ನ ಅನಿಸಿಕೆಯನ್ನ ತನ್ನಪಾಡಿಗೆ ತಾನಿಟ್ಟುಕೊಂಡಿದ್ದರೆ ಸಾಕಾಗಿತ್ತಲ್ಲ? ಹೀಗೆ ಅವಹೇಳನ ಮಾಡಿ ಕನ್ನಡಿಗರನ್ನ ಕೆಣಕುವ ಕೆಲಸಕ್ಕೆ ಯಾಕೆ ಕೈಹಾಕಬೇಕಿತ್ತು?
Why the need to compare when apparently there is no comparison?
ಇವನು ಹೇಳುತ್ತಿರುವುದೇನೆಂದರೆ - ತಮಿಳು ಚಿತ್ರಗಳಿಗೂ ಕನ್ನಡ ಚಿತ್ರಗಳಿಗೂ ಹೋಲಿಕೆಯೇ ಇಲ್ಲ, ಹೋಲಿಸುತ್ತಿದ್ದೀರಿ ಯಾಕೆ ಅಂತ. ಈ ತರ್ಕಕಲಾಚತುರನೇ ಹೋಲಿಕೆ ಮಾಡುತ್ತಿರುವುದು - ಕನ್ನಡ ಕೀಳು, ತಮಿಳು ಮೇಲು ಅಂತ, ನಾವಲ್ಲವಲ್ಲ? ಶಿವಾಜಿ ವಿರುದ್ಧ ಪ್ರತಿಭಟಿಸಿದವರು ಯಾರೂ ಕನ್ನಡ ಚಿತ್ರ ಮೇಲು, ತಮಿಳು ಕೀಳು ಎನ್ನಲಿಲ್ಲವಲ್ಲ? ಹೋಲಿಕೆ ತಾನೇ ಮಾಡಿ ತನ್ನ ತರ್ಕದಲ್ಲೇ ದೋಷ ಇಟ್ಟುಕೊಂಡು ಇವನು ನಮ್ಮನ್ನು ಕೀಳು ಎನ್ನುವುದು ಬೇರೆ! ಇಷ್ಟಕ್ಕೇ ಇವನ ಕನ್ನಡದ ಅವಹೇಳನ ನಿಲ್ಲಲ್ಲ. ಬರೀತಾನೆ:
It is quite clear that the dwindling number of Kannada movie fans have little in their own beloved Sandalwood to entertain them. There is a limit to the number of unimaginative movies with the same old scripts with the same ugly stars who cannot act scared on a sinking ship one can go watch.
ಕನ್ನಡ ಚಲನಚಿತ್ರ ಹಿಂದೆಂದೂ ಇಲ್ಲದಷ್ಟು ಜನಪ್ರಿಯತೆ ಪಡೆಯುತ್ತಿದೆ ಅನ್ನೋದು ಇವನಿಗೆ ಕಾಣಿಸುತ್ತಿಲ್ಲ, ಅದನ್ನ ನೋಡಕ್ಕೆ ಇವನಿಗೆ ಯೋಗ್ಯತೆಯಿಲ್ಲ ಅಂತ ಈಗಾಗಲೇ ಗೊತ್ತಾಗಿದೆ. ಯಾವ ಅಂಕಿ-ಅಂಶಗಳ ಆಧಾರದಮೇಲೆ ಕನ್ನಡ ಚಿತ್ರಗಳನ್ನು ನೋಡೋರು ಕಡಿಮೆಯಾಗುತ್ತಿದ್ದಾರೆ ಅಂತ ಹೇಳ್ತಿದಾನೆ ಸ್ವಲ್ಪ ಕೇಳಿ! ಅಂಕಿ ಅಂಶ ಇಲ್ಲದೆ ತಮಿಳರ ಬಯಾಸನ್ನು ಬೆಂಗಳೂರಿನಲ್ಲಿ ತುಂಬಲಿಕ್ಕೆ ಹೊರಟಿದ್ದಾನೆಯೇ ಹೊರತು ಇವನ ವಾದದಲ್ಲಿ ಯಾವ ನಿಜಾಂಶವೂ ಇಲ್ಲ, ಯಾವ ತರ್ಕವೂ ಇಲ್ಲ. ಮತ್ತೆ ಕನ್ನಡ ಚಿತ್ರಗಳು unimaginative ಅಂತೆ! ಎಷ್ಟು ಚಿತ್ರಗಳನ್ನು ವಿಮರ್ಶೆ ಮಾಡಿ ಈ ತೀರ್ಮಾನಕ್ಕೆ ಬಂದನಂತೆ? ಮತ್ತೆ ugly stars ಅಂತೆ! ಈ ಒಂದೇ ಮಾತು ಕನ್ನಡಿಗರ ವಿರುದ್ಧ ಜನಾಂಗೀಯ ದ್ವೇಷವನ್ನು ತೋರಿಸುತ್ತದೆ. ಹಿಂದೆ ಬ್ರಿಟಿಷರು ದಕ್ಷಿಣ ಆಫ್ರಿಕಾಗೆ ಹೋಗಿ ಅಲ್ಲಿಯ ಜನರು ugly ಎಂದಂತಿದೆ ಇವನ ಅಪವಾದ.
Nobody wants to watch your movies? Oh too bad! Try the auto-driver community...try offering them one-and-half.
ಇವನು ಹೇಳುತ್ತಿರುವುದು - ಕನ್ನಡ ಚಿತ್ರಗಳು ಕೀಳು, ಅದನ್ನ ನೋಡುವುದು ಕೇವಲ ಆಟೋಚಾಲಕರ "ಸಮಾಜ" ಮಾತ್ರ (ಆದ್ದರಿಂದ ಅವರೂ ಕೀಳು) ಅಂತ. ಮೊದಲನೆಯದಾಗಿ ಕನ್ನಡ ಚಿತ್ರಗಳು ಕೀಳು ಅನ್ನೋದನ್ನ ಯಾವ ಆಧಾರವೂ ಇಲ್ಲದೆ ತೀರ್ಮಾನಿಸಿದ್ದಾನೆ ಈ ಅಯೋಗ್ಯ. ಎರಡನೆಯದಾಗಿ ಆಟೋಚಾಲಕರು ಕೀಳು ಅಂತ ಹೇಳೋ ಅಧಿಕಾರ ಇವನಿಗೆ ಯಾರು ಕೊಟ್ಟೋರು? ಇಲ್ಲವೇ ಕನ್ನಡ ಚಿತ್ರಗಳನ್ನ ಅವರು ಮಾತ್ರ ನೋಡೋದು ಅಂತ ಯಾವ ಅಂಕಿ-ಅಂಶದ ಆಧಾರದ ಮೇಲೆ ಹೇಳಿದ್ದಾನೆ?
ನಮ್ಮ ಮನೇಲೇ ಇದ್ದು ನಮ್ಮನ್ನೇ ಕೀಳು ಜನಾಂಗ ಅಂತ ಕರೆಯುವ, ಉಂಡಮನೆಗೆ ಎರಡು ಬಗೆಯುವ ಕೃತಘ್ನರು ಇವರು. ಥೂ!

21 ಅನಿಸಿಕೆಗಳು:

Anonymous ಅಂತಾರೆ...

ನಿಜಕ್ಕೂ ಖೇದನೀಯ ವಿಷಯ ಇದು. ಇದನ್ನು ಪ್ರತಿಯೊಬ್ಬ ಕನ್ನಡಿಗನು ಖಂಡಿಸಬೇಕು.. ಅದರ ಸಂಪಾದಕರಿಗೆ ಈ ಕೂಡಲೇ ಪತ್ರಗಳನ್ನು ರವಾನಿಸಿ, ಅವರಿಂದ ಕ್ಷಮೆ ಕೇಳಬೇಕು.
ಆ ಲೇಖನದಲ್ಲಿ ಕೊಟ್ಟಿರುವ ಬ್ಲಾಗ್ ವಿಳಾಸ ಜಾರಿಯಲ್ಲಿ ಇಲ್ಲ.

ಸಂಪಾದಕರ ಈ-ಮೈಲ್ ವಿಳಾಸ.

editor@bias.in

- ಯೋಗೆಶ

Anonymous ಅಂತಾರೆ...

ಕನ್ನಡ ಜನಾಂಗದ ಬಗ್ಗೆ ಅಸಡ್ಡೆಯ ಮಾತಾಡುವ ಇಂತ ಜನರನ್ನ ಹೊಡೆದು ಬಡಿದರೂ ತಪ್ಪಿಲ್ಲ. ಇಂತಹ ಅಯೋಗ್ಯರಿಗೆ ಕನ್ನಡ ಹೋರಾಟಗಾರರು ಬುದ್ದಿ ಕಲಿಸಲಿ ಅಂತ ದೇವ್ರನ್ನ ಪ್ರಾರ್ಥಿಸುತ್ತೇನೆ. "ಚಂಡಾಲ ದೇವ್ರಿಗೆ ಚಪ್ಲಿ ಪೂಜೆ"

guru. p

Anonymous ಅಂತಾರೆ...

ಇಂತಾ ಹೊಲ್ಸು ಇಂಗ್ಲಿಷ್ ಪೇಪರ್ಗಳಿಂದ ಬಯ್ಸಿಕೊಳ್ಳೋದು ನಮ್ಮ ಹಣೆಬರಹ. ಏನು ಬರ್ದಿದಾನ್ರಿ ಈ ಟಾರ್ಪೆಡೊ... ಸೂಳೆ ಮಗ ... ಅಟೋ ಡ್ರೈವರ್ ಗಳೆಲ್ಲಾ ಸೇರ್ಕೊಂಡ್ ಇಂತವ್ನಿಗೆ ಬೀಜ ಒಡೀಬೇಕು... ಈ ಪೇಪರ್ ಅಡ್ರೆಸ್ ಸ್ವಲ್ಪ ಕೊಡ್ತೀರಾ?

Anonymous ಅಂತಾರೆ...

ನಮ್ಮ ಆಟೋ ಗೆಳೆಯರನ್ನು ಕೆಳಮಟ್ಟದವರೆಂದು ಜರೆದಿರುವ ಈ "ಬೆಂಗಳೂರು ವಿಧ್ವಂಸಕ" ನನ್ನು ಹೇಗೆ ಸರಿದಾರಿಗೆ ತರುವುದು ತಿಳಿಸಿ.

ನನ್ನ ಬಳಿ ಇರುವ ಒಂದು ಸಲಹೆ. ವಿಷಯವನ್ನು ಕ.ರ.ವೇ. ಗೆ ತಿಳಿಸಿ. ಅವರ ಇಮೇಲ್ ಐಡಿ. www.karnatakarakshnavedike.org.

ದಂಡಂದಶಗುಣಂ

Anonymous ಅಂತಾರೆ...

ಇವರು ಕನ್ನಡ ಜನಾಂಗವನ್ನೇ ನೇರವಾಗಿ ನಿಂದಿಸಿದ್ದಾರೆ. ಈ ಲೇಖನ ಬರೆದಿರೋರು ಜನಾಂಗ ದ್ವೇಷಿಗಳು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಈ ಅಯೋಗ್ಯರು ಒಂದು ವೇಳೆ ಕಾನೂನಿನಿಂದ ತಪ್ಪಿಸಿಕೊಂಡರೆ ಆಗ ತಲೆಬೋಳ್ಸಿ, ಕತ್ತೇ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಕು

Anonymous ಅಂತಾರೆ...

www.bangaloretorpedo.blogspot.com nodi.
usa huduga amthe... neevu eshtu badakoMdaru nimma kaige sigalla avanu... :(

Anonymous ಅಂತಾರೆ...

ivrellA bADkOtAre. baDkoLLi.
editor ge sariyAgi maryAde mADi.

hAge chitraraMgada ella gaNyarige, taMtrajnarige idara oMdu prati kaLsi. avra rakta kudIli...innoMdaShT oLLe chitragaLanna mADli. oLa rajakIyagaLannella martu...nijvAglU...oggaTTinalli shakti ide aMta pradarshana mADli.

technically, story-wise, cast-wise brilliant annO chitragaLu sAkShT barli...oLLoLLe theatregaLalli release Agli. nam chitraraMgada maMdi oLLe theatres studios kaTli.

ivellA Agde...jana baDkoLOd nillalla...

Anonymous ಅಂತಾರೆ...

friends please don't bark at the wrong tree. This is the correct blog site.

http://thebangaloretorpedo.blogspot.com/

ವಸಂತ ಅಂತಾರೆ...

aa editor ge protest maadi yelaru mail haaki. Naanu haakidini. idanna outright aagi condemn maadlebeku.

Amarnath Shivashankar ಅಂತಾರೆ...

idu khaMdaneeya.
iMtaha kannaDa virodhi partikegaLige kaDivaaNa hakalE beku.

Anonymous ಅಂತಾರೆ...

ಕನ್ನಡ ಸಿನಿಮಾ ಬಗ್ಗೆ ಬರೆದಿರುವ ಈ ಲೇಖನ ಪತ್ರಿಕೋದ್ಯಮಕ್ಕೇ ಕಳಂಕ ತರುವಂತಹದ್ದು. ಇಂತಹ ಕೀಳು ಅಭಿರುಚಿಯ ಲೇಖನವನ್ನು ಬರೆದ ಲೇಖಕರು, ಪತ್ರಿಕೆಯ ಪ್ರಕಾಶಕರು ಒಂದು ಸಲ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು.

Anonymous ಅಂತಾರೆ...

ಈ ಲೇಖನದಲ್ಲಿ ತಮಿಳ ರಜನೀಕಾಂತ್ ನ ದೊಡ್ಡ ಚಿತ್ರದ ಕಾಲ ಕೆಳಗೆ ಕನ್ನಡ ನಟ ಸುದೀಪ್ ನನ್ನು ಸಣ್ನದಾಗಿ ನಿಲ್ಲಿಸಿ ‘ಯಾರ್ ಬಾಸ್’ ಎಂದು ಉದ್ದಟತನದಿಂದ ಕೇಳುತ್ತಿದ್ದಾರೆ? ಈ ಲೇಖನ ಬಂದಿರುವುದು ಬೆಂಗಳೂರಿನ ಒಂದು ಪತ್ರಿಕೆಯಲ್ಲಿ. ಅದನ್ನು ಬರೆದಿರೋದು ಒಬ್ಬ ‘ಕೊಂಗ’ ಅಂತ ಗೆಸ್ ಮಾಡಬಹುದು. ಕನ್ನಡ ಚಿತ್ರರಂಗದವರೆಲ್ಲಾ ಈ ಪತ್ರಿಕಾ ಕಚೇರಿ ಮುಂದೆ ಧರಣಿ ಕೂತು ವಿಚಾರಿಸಿಕೊಳ್ಳಬೇಕು.ಯಾರಾದ್ರು ದಯವಿಟ್ಟು ಈ ವಿಷ್ಯ ಕನ್ನಡ ಸಿನಿಮಾದವರಿಗೆ ತಿಳಿಸಿ.

-ಮಂಜುನಾಥ್

Anonymous ಅಂತಾರೆ...

(kannadadalli type maaDadakke kshamisi).

How many people actually read this Bangalore Bias?

If I'm not guessing wrong, the writer is some "convent-educated" guy who thinks he can write about anything in bengLoor just because he knows where all the pubs around MG Road are...

My point is, is this worth taking seriously? In the sense, writing emails to the editor and a web-campaign are okay but does this warrant involving the KRV? (which will only give them some more undeserved publicity).

I think, all these torpedo guys will shut up and sing kannada filmdom's praises if we have a few more Mungaru MaLe-s.

Anonymous ಅಂತಾರೆ...

ಶ್ರೀಕಾಂತ್ ಅವರೆ,

ನೀವು ಹೇಳುತ್ತಿರೋದು “ಈ ವಿಷಯದ ಬಗ್ಗೆ ಗಲಾಟೆ ಮಾಡಿದರೆ ಆ ಪತ್ರಿಕೆಗೆ ಸುಮ್ನೆ ಪ್ರಚಾರ ಕೊಟ್ಟಂಗೆ ಆಗುತ್ತೆ” ಅಂತ. ಅದು ಒಂದು ರೀತಿ ನಿಜ. ಆದರೆ... ಒಬ್ಬ ಟೆರರಿಸ್ಟ್ ಗೆ ಶಿಕ್ಷೆ ಕೊಟ್ಟರೆ ಸುಮ್ನೆ ಪಬ್ಲಿಸಿಟಿ ಕೊಟ್ಟಂಗೆ ಆಗುತ್ತೆ ಅಂತ ಶಿಕ್ಷೆ ಕೊಡದೇನೇ ಇದ್ರೆ ಹೇಗೆ ಹೇಳಿ? ಆ ದೃಷ್ಟಿಯಿಂದ್ಲೂ ಈ ಅಯೋಗ್ಯರನ್ನು ಒಂದು ಸಲ ವಿಚಾರಿಸಿಕೊಳ್ಳೋದು ಒಳ್ಳೇದು ಅಂತ ನನ್ನ ಅಭಿಪ್ರಾಯ. (ವಿಚಾರಿಸಿಕೊಳ್ಳೋದು ಅಂದ್ರೆ ಹೊಡ್ದು ಬಡ್ದು ಮಾಡ್ಬೇಕು ಅಂತಲ್ಲ. ಒಮ್ಮೆ ಪೇಪರ್ ಆಫೀಸ್ ಗೆ ಹೋಗಿ ಏನ್ರಿ ಹಿಂಗೆಲ್ಲ ಬರೆದಿದೀರಾ ತಲೆ ಇದೆಯೇನ್ರಿ ನಿಮ್ಗೆ ಅಂತ ಗದರು ಹಾಕೋದ್ರಲ್ಲಿ ತಪ್ಪಿಲ್ಲ. ಅದು ಅವಶ್ಯಕ ಕೂಡ. ಸುಮ್ನಿದ್ದೂ ಸುಮ್ನಿದ್ದೂ ನಾವು ಕನ್ನಡಿಗರು ಈ ಪಾಡಿಗೆ ಬಂದಿದೀವಿ. ಜನ ಹೆದ್ರಿಕೆಗೆ ಬಗ್ಗೋ ಹಾಗೆ ಒಳ್ಳೇ ಮಾತಿಗೆ ಬಗ್ಗಲ್ಲ. ಇದು ನನ್ನ ಅನುಭವ.

ಪವ್ವಿ ಅಂತಾರೆ...

ಇದೇ ರೀತಿಯ ಉದ್ಧಟತನಗಳನ್ನು ಸದೆಬಡಿಯದಿದ್ದರೆ, ನಾಳೇ ಇದು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಮುಂದೆ ಈ ಪುಣ್ಯಾತ್ಮ , ಕನ್ನಡದ ಗಂಡಸರು ನೋಡಲು ಸರಿ ಇಲ್ಲಾ, ಕೀಳು. ಪಕ್ಕದ ರಾಜ್ಯದ ಗಂಡಸರೇ ನಿಜವಾದವರು ಎಂದು ಹೇಳಿದರೆ ಸುಮ್ಮನೆ ಇರಬೇಕೆ ???

Anonymous ಅಂತಾರೆ...

ಇವರದು ಅತಿಯಾಯ್ತು, ಈ ಜನಾಂಗ ಎದ್ದ್ರ ಕಾಲ್ ಹಿಡಿತಾರೆ , ಬಗ್ಗಿದ್ರೆ ಜುಟ್ಟು ಹಿಡಿತಾರೆ. ಇನ್ನಾದ್ರು ನಮ್ಮಕನ್ನಡದವರು ಎಚ್ಚೆತ್ತುಕೊಳ್ಳಬೇಕು. ಇಂತವರಿಗೆ ನಮ್ಮನೆಲದಲ್ಲಿ ಬದುಕಲು ಬಿಟ್ಟಿರೊದೇ ದೊಡ್ಡ ತಪ್ಪು. ಇಂತವರಿಗೊಂದು ಧಿಕ್ಕಾರವಿರಲಿ.
ಜಯಪ್ರಕಾಶ.

Prashanth CM ಅಂತಾರೆ...

Super blog guru...

A timely blog,please can you guys translate the same tim english too so that the people who cannot read kannada and who have 'biased' mind can read it too.

I wish all the success for this blog and please do make english version of similar articles to clear some of the dirty minds. In fact we can choose best (worst) such articles and give out our own best/worst article of the month award (sarcastically, they deserve it.)
-Prashanth (prax)

Aks ಅಂತಾರೆ...

ha ha ha. Ugly stars ante. Kongru herogaLu haagidre enu Greek Ron gods anta ankondidaane mostly. Ayyo howdalva, rajni, vijaykanth, ivrella most handsome guys in india.

ಉಉನಾಶೆ ಅಂತಾರೆ...

ತಮಾಷೆ ಅಂದ್ರೆ..
ಅವನ ಬ್ಲಾಗ್‍ನಲ್ಲಿ ಇದರ ಬಗ್ಗೆ ಬರೆದ ಲೇಖನಕ್ಕೆ ಒಂದು ಕಮೆಂಟ್‍ನಲ್ಲಿ "... Rational comments , people, rational comments. .." ಅಂತಾನೆ.
ಆದರೆ, ಅವನ ಬ್ಲಾಗ್‍ನ ಯಾವ ಲೇಖನದಲ್ಲೂ ಈ Rational comments ಇಲ್ಲ.
ಸುದೀಪ್/ರಜನಿ ಬಗ್ಗೆ ಬರೆದ ಲೇಖನವು ಅವನ ಬ್ಲಾಗ್‍ನ ಇತರ ಲೇಖನಗಳ ಮಟ್ಟದಲ್ಲೇ ಇವೆ.
"... Disclaimer .." ಓದೋದನ್ನು ಮರೆಯಬಾರದು, ನೀವು!!

ಆದ್ದರೆ ಮುದ್ರಣಲೋಕದಲ್ಲಿ ಅದನ್ನು ತರುವಾಗ ಸಂಪಾದಕರು ಸ್ವಲ್ಪ ಯೋಚಿಸಬೇಕಾಗಿತ್ತು.
ಮುಂದಾದರೂ ಯೋಚಿಸುವಂತಾಗಬೇಕು.
ರಾಜ್‍ಕುಮಾರ್ ಕುಟುಂಬಕ್ಕೆ, ಕನ್ನಡ ಚಿತ್ರರಂಗಕ್ಕೆ ಬಯ್ದು "ಪ್ರಚಾರ" ಪಡೆಯುವುದು ಇದರ ಉದ್ದೇಶವಿದ್ದರೂ ಇರಬಹುದು ಅನ್ನಿಸುತ್ತೆ.

ಅಂದ ಹಾಗೆ, ಗಮನಿಸಿ ನೋಡಿ....
ಪ್ರಕಾಶ್ ಬೆಳವಡಿ ಹೆಸರಲ್ಲಿ ಒಂದು ಕಮೆಂಟ್ ಇದೆ...ಮತ್ತು ಅದಕ್ಕೆ ಟಾರ್ಪೆಡೊನಿಂದ ಸಮಾಧಾನದ ಉತ್ತರವೂ ಇದೆ.
ಬ್ಯಾಂಗಲೋರ್ ಬಯಾಸ್‍ಗೆ ಟಾರ್ಪೆಡೊನಿಂದ ಇನ್ನೂ ಕೆಲವು ಲೇಖನಗಳು ಈ ಹಿಂದೆ ಬಂದಿವೆ.
ಮಾರ್ಚ್-ಎಪ್ರಿಲ್‍ನಲ್ಲಿ ಕಲ್ಕತ್ತ ಬಗ್ಗೆ ಒಂದು ಲೇಖನವಿದೆ.
ಇನ್ನೂ ಹಲವು ಇವೆ. ಆದ್ದರಿಂದ ಇವರು ಯಾರು ಅಂತ ಗೊತ್ತಿರುವವರನ್ನು ಬೆಂಗಳೂರಿನಲ್ಲಿ ಹುಡುಕುವುದು ಕಷ್ಟವಲ್ಲ.
http://photos1.blogger.com/blogger2/3166/1398/1600/sep8000.jpg ನಲ್ಲಿ ಒಂದು ಪರಿಚಯ ಲೇಖನವಿದೆ.
ಇದರ ಪ್ರಕಾರ ಇದು ಇಬ್ಬರು ಸೇರಿ ಬರೆಯುತ್ತಿರುವ ಬ್ಲಾಗ್. ಒಬ್ಬ ಬೆಂಗಳೂರಿನಲ್ಲಿ ಇದ್ದಾನೆ.

ಹುಡುಕಿ ತದುಕಿರಿ ಅಂತ ನಾನು ಹೇಳ್ತಾ ಇಲ್ಲ.
ಕಾನೂನು ಸಮ್ಮತ ಪ್ರತಿಭಟನೆಗೆ ದಾರಿಗಳಿವೆ.
ಆದರೆ ಅವನಾರು ಅಂತ ಗೊತ್ತಿದ್ದರೆ, ಈ ಪ್ರತಿಭಟನೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

ಒಂದು ಒಳ್ಳೆಯ ವಕೀಲರನ್ನು ಹಿಡಿದು ಇವರ ಮೇಲೆ (ಪತ್ರಿಕೆ ಮತ್ತು ಟಾರ್ಪೆಡೊಸ್ ಮೇಲೆ) ಯಾವುದಾದರೂ ಮೊಕದ್ದಮೆ ಹಾಕಲು ಸಾಧ್ಯವಿಲ್ಲವೇ?
ಸುದೀಪ್ ಅಭಿಮಾನಿಗಳು, ರಾಜ್‍ಕುಮಾರ್ ಅಭಿಮಾನಿಗಳು, ಆಟೋ ಸಂಘದವರು, ಯಾರೇಕೆ, ಸಮಾಜದಲ್ಲಿ ಕನ್ನಡ-ತಮಿಳು ಘರ್ಷಣೆಗೆ ಅನುವು ಮಾಡುವಂತಹ ಲೇಖನ ಪ್ರಕಟಿಸಿದ್ದಾರೆ ಅಂತ ಯಾರಾದರೂ ಕೇಸು ಹಾಕಿದರೆ ಒಳ್ಳೆಯದು ಅಂತ ನನ್ನ ಅಭಿಪ್ರಾಯ.

ಇತೀ,
ಉಉನಾಶೆ

Anonymous ಅಂತಾರೆ...

This is really bad. We should protest in front of his office to get the justice.

gangadhara ಅಂತಾರೆ...

I think it is not a worth scolding those people and give them publicity. Things should be violent but done in silent.. What say? Find and kick their ass. Let's not give publicity.

Also we kannadigas should support our movies, our culture. How many of you who has read this article and written comments have seen good kannada movies in recent days. We just speak but never act. First we should unite amongst ourselves. This should not be limited to movies. The case is same with jobs too. Recently read an article in VijayKarnataka that IIMB is hiring only tamilians for open positions there and kannadigas are narrated the same old story and sent to home. Come on.. Wake up!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails