ನಿಜವಾದ ಆತಂಕದ ವಿಷಯ ಏನು?
ಮೊದಲನೇದಾಗಿ ಕನ್ನಡ ಜನಾಂಗ ಕನ್ನಡದಿಂದ ದೂರ ಸರೀತಿದೆ ಅನ್ನೋದಲ್ಲ ಆತಂಕದ ಸಂಗತಿ! ನಿಜವಾದ ಆತಂಕದ ಸಂಗತಿ ಏನಪ್ಪಾ ಅಂದ್ರೆ - ನಾವು ಕನ್ನಡಿಗರು ಬೆಳವಣಿಗೆ ಹೊಂದದೆ ಹಿಂದೆ ಬೀಳ್ತಿದೀವಿ ಅನ್ನೋದು. ಇದಕ್ಕೆ ಕಾರಣ ನಾವು ಕನ್ನಡದಿಂದ ದೂರ ಹೋಗ್ತಿರೋದು, ಅಷ್ಟೆ. ಆ ಸಭೇಲಿದ್ದವರಿಗೆ ನಿಜವಾದ ಆತಂಕದ ಅರಿವೂ ಇದ್ದಂತಿಲ್ಲ, ನಿಜವಾದ ಆತಂಕಕ್ಕೆ ಕಾರಣ ಏನು ಅನ್ನೋದರ ಅರಿವೂ ಇದ್ದಂತಿಲ್ಲ. ಇವರು ನಮ್ಮ "ಚಿಂತಕರು" ಇವತ್ತು!
ತಪ್ಪು ಆತಂಕಕ್ಕೆ ತಪ್ಪು ಪರಿಹಾರ!
ಹೋಗಲಿ, ಅವರಿಗೆ ನಿಜವಾಗಿ ಇರಬೇಕಾಗಿದ್ದ ಆತಂಕ ಬಿಟ್ಟಾಕಿ. ಆ ಸಭೇಲಿ ಅವರು ವ್ಯಕ್ತ ಪಡಿಸಿರೋ "ತನ್ನ ಭಾಷೆಯಿಂದ ಕನ್ನಡ ಜನಾಂಗ ದೂರ ಸರೀತಿದೆ" ಅನ್ನೋ ಆತಂಕಕ್ಕೂ ಔರು ಸೂಚಿಸಿರೋ ಪರಿಹಾರ ಅರೆಬೆಂದಿದ್ದು ಅಂತ ಹೇಳಲೇಬೇಕಿದೆ ಗುರು!
ವಚನ ಸಾಹಿತ್ಯ, ದಾಸ ಸಾಹಿತ್ಯ, ಭಾವಗೀತೆ, ಜಾನಪದಗಳ ಬಗ್ಗೆ ದೇಶ ವಿದೇಶದಲ್ಲಿ ಪ್ರಚಾರ ಮಾಡ್ಬೇಕು ಅಂತ ಆ ಸಭೆಯಲ್ಲಿ ಮಾತಾಡಿರೋರು ಅಂದಿರೋದೇನೋ ಸರೀನೇ ಇದೆ, ಆದ್ರೆ ಇಷ್ಟರಿಂದ ಭಾಷೆಗೆ ಬಂದಿರೋ "ಕುತ್ತು" ಹೋಗುತ್ತಾ ಅನ್ನೋದೇ ಪ್ರಶ್ನೆ. ಖಂಡಿತ ಹೋಗಲ್ಲ! ಬರೀ ಅಧ್ಯಾತ್ಮ ಮತ್ತು ಮನರಂಜನೆಯಂತಹ "ಜುಟ್ಟಿಗೆ ಮಲ್ಗೆ ಹೂವಿನ ವರ್ಗ"ಕ್ಕೆ ಸೇರೋ ಸಾಹಿತ್ಯಾನ ಹರಡಬೇಕು ಅಂತ ಪರಿಹಾರ ಸೂಚಿಸೋದು ಮೂರ್ಖತನ ಗುರು!
ಇದರಿಂದ ಜಾಗತೀಕರಣ ಎದುರಿಸಿದಹಾಗೆ ಎಲ್ಲಿ ಆಗತ್ತೆ? ಇದರಿಂದ ಫಿನ್‍ಲ್ಯಾಂಡಿನ ನೋಕಿಯಾ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಜಪಾನಿನ ಸೋನಿ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಆಗತ್ತೆ ಮಣ್ಣು! ಒಟ್ಟಿನಲ್ಲಿ ಇವರಿಗೆ ಕನ್ನಡ ಉಳಿಸಿಕೊಳ್ಳೋದಕ್ಕೆ ಬೇಕಾದ ಮುಲಭೂತ ಅರಿವೇ ಇಲ್ಲ ಗುರು!
ನಿಜವಾದ ಆತಂಕಕ್ಕೆ ನಿಜವಾದ ಪರಿಹಾರ
ಬರೀ ನಮ್ಮಲ್ಲಿರೋ ಸಾಹಿತ್ಯದ ಹಿರಿಮೆ ಹಾಡಿ ಹೊಗಳಿ ಅಧ್ಯಾತ್ಮ-ಧರ್ಮಗಳಿಗೆ ಮಾತ್ರ ಕನ್ನಡವನ್ನ ಮೀಸಲಾಗಿಟ್ರೆ ಇವತ್ತು ಏನೂ ಸಾಧ್ಸಕ್ ಆಗಲ್ಲ ಗುರು! ಕನ್ನಡ ಭಾಷೆ ಅಂದ್ರೆ ಬರೀ ಇಂಥ ಸಾಹಿತ್ಯ ಅಂತ ಮಾಡ್ಕೊಂಡಿದ್ರಿಂದ್ಲೇ ಇವತ್ತು ಕನ್ನಡದ ಮುಂದೆ "ಕುತ್ತು"ಗಳು ಬಂದಿರೋದು ಗುರು! ಅಂಥ ಹಿರಿಮೆ, ಇತಿಹಾಸದ ಸ್ಪೂರ್ತಿ ತೊಗೊಂಡು ಈಗ ಹ್ಯಾಗೆ ಬದುಕು ಹಸನು ಮಾಡ್ಕೋಬೇಕು ಅಂತ ನೋಡ್ಬೇಕು.
ಒಟ್ನಲ್ಲಿ ಜಾಗತೀಕರಣದ ಸವಾಲ್ ಎದುರ್ಸಕ್ಕೆ ನಮಗೆ ಬೇಕಿರೋದು
- ಈ ಸವಾಲ್ನ ಎದುರಿಸಬೇಕು, ಹೇಡಿಗಳ ಹಾಗೆ ಓಡಿಹೋಗಬಾರದು ಅನ್ನೋ ಧೈರ್ಯ
- ನಿಜವಾಗಲೂ ಎದುರಿಸಿ ಜಾಗತಿಕ ಮಾರುಕಟ್ಟೇಲಿ ಮಿಂಚಬೇಕು ಅಂದ್ರೆ ಅದು ಕನ್ನಡದ ನಿಜವಾದ ಶಿಕ್ಷಣ ವ್ಯವಸ್ಥೆಯಿಂದ್ಲೇ ಸಾಧ್ಯ ಅನ್ನೋ ಅರಿವು.
4 ಅನಿಸಿಕೆಗಳು:
britisharu baruvudakke modalella nammalli namma bhaasheyalle shikshana ittu alve? eegeke naavu english appikollabeku?
Karnatakada mattu bhaaratada bhavya saaMskrutika parampareya shikshaNagalu namage irali.
bhaaratakke britisharu mattu turukaru baruva modalu illi hege shaanti nelesitto aa sthitiyannu naavu indu tandukollabekaagide.
idakke namma bhaasheya shikshaNavannu protsaahisabeku. vignaana, tantragnaanagaLoo saha namma bhaasheyalliye irabeku guru.
Sariyaagi heLiddeera guru.
Economic liberalization beDa anno namma 'eDabiDangi' (Leftists)galige idu sariyaada uttara. mukta maarukatteyannu naavu yedurisabeke horatu baagilu haakikondu malagabaaradu. bhesh guru !!
ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.
ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.
ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.
ಅವರ ಕೆಲವು ನುಡಿ ಗಳು ಹೀಗಿದ್ದವು -
"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."
ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/
http://www.karnatakarakshanavedike.org/app/webroot/files/samaavesha_varadi.pdf
೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ
ಇವತ್ತ ಕರ್ನಾಟಕ ದಾಗ್ ಕನ್ನಡಾಕ್ಕ್ ಊಳಿಗಾಲ ಇಲ್ಲ ಯಾಕ್ ಅಂದ್ರ ನಮಗ ನಮ್ಮ ಬಗ್ಗೆ ಹೆಮ್ಮೆ ಇಲ್ಲ ಅಂತ ಅನಿಸತೈತಿ . ನಮ್ಮಲ್ಲಿಯ ಶಿಕ್ಷಣ ವ್ಯವಸ್ಥೆ ಬದಲಾಗ್ ಬೇಕು ಆದ್ರ ನಾವು ಮೊದಲ್ ಬದಾಲಗ ಬೇಕು, ನಮ್ಮ ವಿಚಾರ್ ಮಾಡು ಶೈಲಿ ಬದಲ ಆಗ ಬೇಕು, ಇಂಗ್ಲೀಶ್ ಅನ್ನೋದು ಒಂದ ವಿಷಯ ಆಗಿ ಮಾತ್ರ ನಮ್ಮ ಸಾಲ್ಯಾಗ್ ಇರ್ಬೇಕು ಅಷ್ಟ.
ವಿಜಯ ಕೋಟ್‌ಗಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!