ಇದೇ ತಿಂಗಳ ಕೊನೇಲಿ ಕರ್ನಾಟಕದ ಸ್ಥಳೀಯ ಚುನಾವಣೆಗಳಲ್ಲಿ ತಮಿಳುನಾಡಿನ ಎಐಎಡಿಎಂಕೆ ನಿಲ್ಲಕ್ಕೆ ಸಂಚು ಹಾಕಿದೆ ಅಂತ ಸೆ.1ರಂದು
ಕನ್ನಡಪ್ರಭ ವರದಿ ಮಾಡಿದೆ (ಎಡಗಡೆನೂ ಇದೆ, ನೋಡಿ). ರಾಷ್ಟ್ರೀಯ ಪಕ್ಷಗಳು ನಮ್ನ ಹಾಳು ಮಾಡ್ತಿರೋದು ಸಾಲದು ಅಂತ ಈಗ ತಮಿಳು ಪಕ್ಷಗಳಿಂದ ಬೇರೆ ತೊಂದರೆ ಶುರುವಾಗೋಹಾಗಿದೆ!
ಕೆ.ಜಿ.ಎಫ್. ಶಿವಮೊಗ್ಗ, ಭದ್ರಾವತಿ, ಮೈಸೂರುಗಳಲ್ಲಿ ಎಐಎಡಿಎಂಕೆ ಸ್ಪರ್ಧಿಸುವ ಬಗ್ಗೆ ಖಚಿತ ಪಡಿಸಿದ್ದಾರೆ. ಇವರ ಕುತಂತ್ರ ಕೂಡ ಸ್ಪಷ್ಟ ಅಲ್ಲವ? ಸುತ್ತಲಿನ ಸಣ್ಣ ಪಾಳಯಗಳನ್ನು ತೆಕ್ಕೆಗೆ ತೆಗೆದುಕೊಂಡು ನಂತರ ಬೆಂಗ್ಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು. ಈಗಾಗಲೇ ಒಂದೆರಡು ಬಾರಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರವನ್ನೂ ಒಳಗೊಂಡಂತೆ ಎಐಎಡಿಎಂಕೆ ಯ ಪ್ರತಿನಿಧಿಗಳು ಶಾಸಕರಾಗಿ ನಮ್ಮನ್ನಾಳಿರುವುದು ಸಹ ಸತ್ಯ.
ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಇಲ್ಲಿ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ಒಬ್ಬರಿಗೊಬ್ಬರು ಆಗದೆ, ಕನ್ನಡವನ್ನು ಉಳಿಸುವ ಸಲುವಾಗಿ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಒಳಗಾಗದೆ ಕರ್ನಾಟಕದ ಉತ್ತರದಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿದ್ದಾರೆ. ಈಗ ದಕ್ಷಿಣದ ಕಡೆಯಿಂದ ತಮಿಳುನಾಡಿನ ದ್ರಾವಿಡ ಪಕ್ಷಗಳು ಲಗ್ಗೆ ಇಡುತ್ತಿವೆ, ಮುಂದೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳ ಗದ್ದಲ, ಕೇರಳದ ಕಡೆಯಿಂದ ಕಮ್ಯೂನಿಷ್ಟರು, ಪಶ್ಚಿಮದಲ್ಲಿ ಗೋಮಾಂತರು! ಮೂರೂ ಬಿಟ್ಟಿರುವ ಈ ರಾಷ್ತ್ರೀಯ ಪಕ್ಷಗಳು ಕನ್ನಡವನ್ನು ಊರು ಬಿಡಿಸಿ, ಗುಡಿಸಿ ಮಂಗಳೂರಿನ ಸಮೀಪವಿರುವ ಅರಬ್ಬೀ ಸಮುದ್ರಕ್ಕೆ ದಬ್ಬಿ ಬಿಡುವ ಸಾಧ್ಯತೆಯನ್ನು ಸಾಬೀತು ಮಾಡುತ್ತಿದ್ದಾರೆ ಅಲ್ವಾ ಗುರು!
ಹೀಗೇ ನಮ್ಮನ್ನ ಬೇರೇವ್ರೂ ಆಳಕ್ಕೆ ಶುರು ಮಾಡಿದ್ರೆ ನಮ್ಮತನವನ್ನೆಲ್ಲಾ ಕಳ್ಕೊಂಡು ಮತ್ತೊಮ್ಮೆ ಗುಲಾಮ್ಗಿರಿಗೆ ಒಳಗಾಗಿ ನಾವು ಚೂರುಚೂರಾಗಿಹೋಗಿ, ಅಲ್ಪಸಂಖ್ಯಾತರಾಗಿ, ಸ್ವಾಭಿಮಾನಾನೂ ಕಳ್ಕೊಂಡು, ಕನ್ನಡ ಕುಲ ಸರ್ವನಾಶ ಆಗೋಗ್ತದೆ ಅಲ್ವ ಗುರು!
ಇದ್ಕೇ ನಾವು ಬಾರಿ ಬಾರಿ ನಮ್ಮನ್ನ ಕಾಪಾಡಿಕೊಳ್ಳೋಕೆ ನಮ್ಮದೇ ಆದ ಪ್ರಾದೇಶಿಕ ಪಕ್ಷ ನಮಗೆ ಬೇಕು ಅಂತ ಹೇಳ್ತಿರೋದು. ಅಂತಹ ಪ್ರಾದೇಶಿಕ ಪಕ್ಷಗಳನ್ನ ಹುಟ್ಟಿಸಬೇಕು, ನಾವು ಅವುಗಳಿಗೆ ಬೆಂಬಲ ಕೊಟ್ಟು ಗೆಲ್ಲಿಸಬೇಕು, ಆಡಳಿತಕ್ಕೆ ತರಬೇಕು ಗುರು! ಕನ್ನಡಾಂಬೆ ಇವತ್ತು ಯಾವ ಕೆಟ್ಟಕೆಲಸಕ್ಕೂ ಕೈಹಾಕಕ್ಕೆ ಹಿಂಜರೀದಿರೋ ಕಾಮುಕರ ಮುಂದೆ ನಿಂತಿದಾಳೆ ಗುರು...ಇವಳ ಹೊಟ್ಟೆಯಲ್ಲೇ ಹುಟ್ಟಿ, ಇವಳನ್ನು ಜೀವಕೊಟ್ಟಾದರೂ ಕಾಪಾಡುವ ಕನ್ನಡದ ಸೇನೆಯೊಂದು ಇವತ್ತು ಆಡಳಿತಕ್ಕೆ ಬರಲೇಬೇಕು ಗುರು! ಆಗಲೇ ಬೀದಿಯಲ್ಲಿ ಹೋಗೋರೆಲ್ಲಾ ನಮ್ಮ ತಾಯಿಯನ್ನ ಕಾಮದ ಕಣ್ಣಿಂದ ನೋಡೋದು ನಿಲ್ಲಿಸೋದು ಗುರು...
11 ಅನಿಸಿಕೆಗಳು:
ಹೌದು, ಸರಿಯಾಗಿ ಹೇಳುದ್ರಿ. ಈಗೀಗ ಜಾತ್ಯಾತೀತ ಜನತಾದಳ ಕೂಡಾ ತಾನು ಪ್ರಾದೇಶಿಕ ಪಕ್ಷ ಅನ್ನೋ ಥರಾ ಧ್ವನಿ ಎತ್ತುತ್ತಿದೆ. ರಾಷ್ಟ್ರೀಯ ಪಕ್ಷಗಳಿಂದ ನಾಡು ಹಾಳಾಗಿದೆ ಅಂತ ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಆದರೆ ಅದರ ಹಿಂದಿನ ಪ್ರಾಮಾಣಿಕತೆ ರಾಜಕೀಯ ಮಾಂತ್ರಿಕ/ ಮಾಯಾವಿ/ ಮಾಟಗಾರ ದೇವೇಗೌಡರಿಗೇ ಗೊತ್ತು. ಕಣ್ ಬಿಟ್ ನೋಡುದ್ರೆ ಇವತ್ತು ನೀವ್ ಹೇಳೋ ಕನ್ನಡದ ಕಟ್ಟಾಳು ಪಡೆ ಇರೋದು ಒಂದೇ .. ಅದು ಕರ್ನಾಟಕ ರಕ್ಷಣಾ ವೇದಿಕೆ. ಅವರೋ ರಾಜಕೀಯ ಉದ್ದೇಶವಿಲ್ಲ ಅಂತಲೇ ಹೇಳ್ಕೊಂದ್ ಬರ್ತಿದಾರೆ. ಇನ್ನಾದ್ರೂ ಅವರು ತಮ್ಮ ನಿಲುವನ್ನು ಬದಲಾಯಿಸಿ ರಾಜಕೀಯಕ್ಕೆ ಧುಮುಕಬೇಕಿದೆ. ಅಂಥಾ ಶ್ರೀ ಕೃಷ್ಣಾನೆ ಮಹಾಭಾರತ ಯುದ್ಧದಲ್ಲಿ ಶಸ್ತ್ರ ಹಿಡೀಲಿಲ್ವಾ?
ಗುರು
ಇದ್ರಲ್ಲಿ ಗಮನಿಸಬಹುದಾದ ಅಂಶ ಅಂದ್ರೆ ಈ ತಮಿಳ್ರು ನಮ್ಮ ರಾಜಕೀಯಕ್ಕೆ ಸೇರಲು ಬೇರ್ಯಾವ ಪಕ್ಷವನ್ನೂ ಆಶ್ರಯಿಸ್ತಿಲ್ಲ ನೋಡಿ.. ಇಲ್ಲೂ ಔವ್ರಿಗೆ ಅವರ ಪ್ರಾಸೇಶಿಕ ಪಕ್ಷವೇ ಆಗ್ಬೇಕು! ಯಾಕೆ ಈ ಮಾತು ಅಂದ್ರೆ, ಇದು ಜಯಲಲಿತಳ ಸ್ವಂತ ಆಸೆ ಇಂದ ಶುರು ಆಗಿರೋ ಕೆಲ್ಸ ಅಲ್ಲ ಅಂತ ಅನ್ಸತ್ತೆ.. ಇಲ್ಲಿ ಬಂದು ನೆಲೆಸಿರುವ ತಮಿಳ್ರೆಲ್ಲ ತಮ್ಮನ್ನು ಪ್ರತಿನಿಧಿಸುವ ತಮಿಳ ಶಾಸಕರಿಲ್ಲ ಅಂತ ಕಂಡು ಬೆಂಗ್ಳೂರು-ಚೆನ್ನೈ ಬಂಡಿ ಹಿಡಿದು ಹೋಗಿ ಜಯಲಲಿತಳ ಮುಂದೆ ಈ ಅಳಲು ಹೇಳಿಕೊಂಡಿರ್ತಾರೆ.. ಆಗ ಅವಳು ಈ ಚಿಂತನೆ ಮಾಡಿರ್ತಾಳೆ..
ಈಗಾಗ್ಲೇ ತೆಲುಗರನ್ನು ಪ್ರತಿನಿಧಿಸುವ ಹಲವಾರು ಶಾಸಕರನ್ನು ನಾವೇ ಚುನಾಯ್ಸಿದ್ದೀವಿ, ಅವರೆಲ್ಲ ಸೇರಿ ನಮಗೆ ಮಣ್ಣು ತಿನ್ನ್ಸ್ತಾ ಇದಾರೆ.. ಇನ್ನು ತಮಿಳರ ಸರದಿ ಆಗಹೊರಟಿದೆ. ಇದು ಇಲ್ಲಿಗೇ ನಿಲ್ಲಬೇಕು, ಇಲ್ಲ್ದೇ ಇದ್ದ್ರೆ ಮುಂದಿನ ಬಾರಿಗೆ ಕಾವೇರಿ ನದಿ ನಮ್ಮದಲ್ಲ್ವೇ ಅಲ್ಲ ಅಂತ ಕೋರ್ಟಿನಲ್ಲಿ ವಾದಿಸಲೂ ಹಿಂಜರಿಯಲ್ಲ ನಮ್ಮದೇ ಪ್ರತಿನಿಧಿಗಳು!!
ಇಲ್ಲಿ ಕ.ರ.ವೇ ಜೊತೆ ನಿಂತು ನಾವೆಲ್ಲ ಕಬ್ಬಿಣದ-ಕೈ ಇಂದ ಇವರನ್ನೆಲ್ಲಾ ಓಡಿಸುವುದು ಉಚಿತ ಅನ್ಸತ್ತೆ. ನಮ್ಮನ್ನು ಪ್ರತಿನಿಧಿಸಲು ನಾವೆ ಇದೀವಿ ಎಕ್ಸ್‍ಕ್ಯೂಸ್ಮಿ.. ಮುಚ್ಚ್ಕೊಂಡ್ ನಿಮ್ಮ್ ಕೆಲ್ಸ ನೋಡ್ಕೊಳ್ಳಿ ಅಂತ ಹೇಳಿ ಓಡಿಸ್ಬೇಕು ಹಲ್ಕ ನನ್ನ್ ಕೊಂಗ್ ಮಕ್ಕ್ಳಿಗೆ..
JD(s) praadeshika paksha anta yaava nanmaga heliddu? ivattu JD(S) rajyadhyaksha yaaru gotta? T.A.Sharavana and he is a pure andhrite. knows telugu only. He is the owner of Sai Gold Palace, DVG road. aa angadige hodre baree telugu haaDugalu, telugu staff iddare. ide JD(s) navaru kaLeda baari chamaraajpet chunaavaNeyalli ee JD(S) mattu congressigaru Urdu haagoo Tamil nalli prachaara maaDidru haagoo Tamil kara patra hanchiddu. intaha pakshagaLannu hondiruva kannaDaambe dhanyaLu !!
ivattu namage ondu appaTa kannaDa praadeshika pakshada avashyakate ide.
ಶಂಕರ್ ಅವ್ರೆ.. ನಿಮ್ಮ ಮಾತು ಕೇಳಿ ಹೆದರಿಕೆ಼ ಆಗ್ತಿದೆ ರೀ.. ಅವೆಲ್ಲ ನಿಜವೇ?! ಆದರೆ ನಿಜ ಅಂತ ಅನ್ಸ್ತಿದೆ.. JD(S) ಸೆಕ್ಯುಲರ್ ಎಂಬ ಧೋರಣೆ ನೋಡಿದ್ರೆನೇ ಸಾಕು ಎಷ್ಟು ಕನ್ನಡ-ಪರ ಅಂತ ಗೊತ್ತಾಗತ್ತೆ.. ಪ್ರಾದೇಶಿಕ ಪಕ್ಷ ಅಂತ JD(S) ಅಂತಹ ಪಕ್ಷಗಳನ್ನ ಗಣಿಸಬಾರ್ದು ಅಂತ ಎಲ್ಲರಲ್ಲೂ ವಿನಂತಿ.. ಕನ್ನಡತನವೇ ಇಲ್ಲಿಯ ಪ್ರಾದೇಶಿಕತೆ. ಮುಗೀತು.
praadeshika paksha beku sari adre hege anta ?
karave ne mundhe ondu praadeshika paksha agbeku ashte...
nanage enoo holita illa
ನಿಮಗೆ ಗುಲ್ಬರ್ಗದ ಅಫಜಲಪುರದಿಂದ ಒಂದು ಸುದ್ದಿ. ಈಗ್ಗೆ ಒಂದು ವಾರದ ಹಿಂದೆ ಅಲ್ಲಿ ಒಂದು ಸಮಾರಂಭ ನಡೀತು. ಅದರಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳ ಧುರೀಣರು ಇದ್ದರು. ಅವರಲ್ಲಿ ಒಬ್ಬರಾದ ಅಫಜಲಪುರದ ಸ್ಥಳೀಯ ಶಾಸಕ ಖಮರಲ್ ಇಸ್ಲಾಂ ತನ್ನ ಭಾಷಣದ ಸರದಿ ಬಂದಾಗ ತನಗೆ ಕನ್ನಡ ಬರಲ್ಲಾ ಅಂತ ಹೇಳಿ ಹಿಂದೀಲಿ ಭಾಷಣ ಶುರು ಮಾಡಲು ಮುಂದಾದ.
ಒಬ್ಬ ವ್ಯಕ್ತಿಯನ್ನು ಬಿಟ್ಟು ಇದೀ ಸಭಾಂಗಣದ ಮೇಲೆ ಆಸೀನರಾಗಿದ್ದವರು ಅವನಿಗೆ ಹಿಂದಿಯಲ್ಲಿ ಮಾತನಾಡಲು ಅವಕಾಶವಿತ್ತರು. ನೆನೆಪಿಡಿ ಈ "ಖಮರಲ್ ಇಸ್ಲಾಂ" ಕರ್ನಾಟಕದಲ್ಲಿ ಆರಿಸಿ ಬಂದಿರುವ ರಾಷ್ಟ್ರೀಯ ಪಕ್ಷದ ಶಾಸಕ. ನನಗೆ ಕನ್ನಡ ಬರಲ್ಲ ಎಂದು ಎದೆ ತಟ್ಟಿ ಹೇಳಿಕೊಂಡಿದ್ದ.
ಸಭಾಂಗಣದಲ್ಲಿದ್ದ ಒಬ್ಬನೇ ಗಂಡಸು! ಕೂಡ್ಲೇ ಎದ್ದು ನಿಂತು ಮೈಕ್ ಬಳಿ ಬಂದು ಪ್ರತಿಭಟಿಸಿ, ಭಾಷಣ ಮಾಡಂಗಿದ್ರೆ ಕನ್ನಡದಲ್ಲಿ ಮಾಡು ಇಲ್ಲದಿದ್ದರೆ ಕುಕ್ಕರು ಬಡಿ ಎಂದು ಗುಡುಗಿತು. ಹಿಂದಿಲಿ ಭಾಷಣ ಮುಂದುವರೆಸಿದರೆ ಈ ಹಿಂದೆ ಕೆ.ಜಿ.ಎಫ್ ಶಾಸಕ ಭಕ್ತವತ್ಸಲನಿಗೆ ನಾವು ಏನು ಮಾಡಿದ್ವೋ ಅದನ್ನ ನಿಮಗಿಲ್ಲಿ ಮಾಡಬೇಕಾಗತ್ತೆ ಎಂದು ಎಚ್ಚರಿಸಿತು.
ನನ್ನದು ತಪ್ಪಾಯ್ತು ಎನ್ನುತ್ತ ಖಮರಲ್ ನಂತರ ಕನ್ನಡದಲ್ಲೇ ಭಾಷಣ ಮಾಡಿದ.
ಸಭೆಯಲ್ಲಿದ್ದ ಆ ಗಂಡಸಿನ ಹೆಸರು ಟಿ.ಏ. ನಾರಾಯಣ ಗೌಡ. ಹೀಗೆಂದು ಎಲ್ಲೆಡೆ ಈ ರೀತಿ ಎಚ್ಚರಿಸಲು ಗೌಡರು ಹೋಗಬೇಕೆ? ಎಲ್ಲೆಲ್ಲಿ ಅನ್ಯಾಯ ಕಾಣುತ್ತೀವೋ ಅಲ್ಲಲ್ಲಿ ನಾವೇ ಪ್ರತಿಭಟಿಸಬೇಕು.
ಇದು ವ್ಯವಸ್ಥಿತವಾಗಿ ಬದಲಾಗಬೇಕಾದರೆ ಗೌಡರಂತ ಗಂದಸರು ಮತ್ತು ಕರವೇ ಅಂತ ಸಂಘಟನೆ ನಮಗೆ ತೀರ ಅವಶ್ಯವಾಗಿದೆ.
ಕನ್ನಡಿಗರೆ ಏಳಿ ಎದ್ದೇಳಿ ಕನ್ನಡ ಪಕ್ಷವೊಂದನ್ನು ಇಲ್ಲಿ ಆಡಳಿತಕ್ಕೆ ತನ್ನಿ.
ಬಳಗದ ಅಭಿಮಾನಿ
ಇದೇ ಬದ್ದಿ ನಾವು ಕನ್ನಡದೊರು ಮಾಡಬೊದಲ್ಲ.
ಆಂದ್ರ, ತಮಿಳುನಾಡು, ಗೋವೆ ಮಾರಾಸ್ಟ್ರ ಇಲ್ಲೆಲ್ಲಾ ಬಲು ಕನ್ನಡದೊರು ಇದ್ದಾರಲ್ಲ ನಮ್ಮ ಕನ್ನಡ ಪಾರ್ಟಿಗಳು ಅಲ್ಲಿ ಎಲೆಕ್ಷನ್ಗೆ ನಿಲ್ಬೋದು.
ಕಾಸರಗೋಡಿನ ಮೂರು ಎಂಎಲ್.ಎ ಸೀಟು ಕನ್ನಡದೊರ ಪಾಲಂತೆ. ಅಲ್ಲಿಂದ ಆಯ್ಕೆಯಾದವರು ಕೇರಳ ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಆಣೆ ಮಾಡ್ತಾರಂತೆ.
ಆದ್ರೆ ನಮ್ಮ ನೆಲದಲ್ಲಿ ಈ AIADMK ಪಾರ್ಟಿ ಗೆಲ್ಲದು ಕಷ್ಟ ಇದೆ. ಏಕೆ ಅಂದರೆ ನಮ್ಮ ರಾಜ್ಯದಲ್ಲಿ ಇರುವ ತಮಿಳರು ಬಲು ಕಡಮೆ ಬರೀ ೩%ಗಿಂತ ಕಡಮೆ.
ಆದ್ರೆ ೭% ತೆಲುಗು ಮತ್ತು ೧೩% ಉರ್ದು ಮಾತಾಡೊ ಮುಸ್ಲಿಂ ಮಂದಿಯ ಪಾರ್ಟಿ ಬಂದು ಎಲೆಕ್ಷನ್ಗೆ ನಿಂತ್ರೆ ಕಷ್ಟ/
ಸೋತ್ರೂ ಪರ್ವಾಗಿಲ್ಲ. ಕನ್ನಡ ಪಕ್ಷಗಳು ಕರ್ನಾಟಕದಲ್ಲಿ, ಗೋವಾ, ತಮಿಳುನಾಡು, ಆಂದ್ರ, ಕೇರಳ, ಮಹಾರಾಷ್ಟದಲ್ಲಿ ಚುನಾವಣೆಗೆ ನಿಲ್ಲಬೇಕು. ಆಗ ನಮ್ಮ ಕನ್ನಡಿಗರಲ್ಲಿ (ಒಳನಾಡು, ಹೊರನಾಡು) ಕನ್ನಡ ಪಕ್ಷಗಳ ಅರಿವು, ಅಭಿಮಾನ ಮೂಡಲು ಸಾಧ್ಯ. ಎಲ್ಲಾ ಪಕ್ಷಗಳು ಮೂರ್ನಾಲ್ಕು ಸತಿ ಸೋತ ಮೇಲೇ ಗೆಲ್ಲೋದು. ನಾರಾಯಣ ಗೌಡರಿಗೆ ಎಲ್ಲಾ ಕನ್ನಡಿಗರು ಕೃತಜ್ಞರಾಗಬೇಕು. ಗಂಡಸುತನವನ್ನೇ ಮರೆತು ಬಿಟ್ಟಿದ್ದ ಕನ್ನಡಿಗರಲ್ಲಿ ಆ ಕೆಚ್ಚನ್ನು ಮೂಡಿಸುತ್ತಿರುವ ಕರವೇ ಗೆ ಕರ ಮುಗಿಯುವ ಬನ್ನಿ. ಕೈ ಜೋಡಿಸುವ ಬನ್ನಿ.
-ರಾಮೇಗೌಡ
JDS vishya tegibyaaDrappa..heLkoLakke karnatakada pradeshika paksha adu..adre ee nan makLu maDodella holsu kelsa..
prati salanu okaLipura, sriramapuradalli tamiLu posters hakstare namma maanya devegowdara pakshadinda...
thoo ivara janmakke...
Narayana Gowdare, innu neevu sumaniddu prayojanavilla..
beedili hogo dasayyarugaLella karnatakadalli election ge nilta idare..antadralli kannada/kannadiga/karnataka da eLigege satatavaagi duDiyuttiruva neevyeke raajakkeyakke iLidilla.
rajakeeya holsu anta kindri bhaarsi nam jana dodda vishwamanavara tara mataDtaare ashte..
kannaDa para rajakeeyada avashtakathe indina karnatakakke bahaLa ide...
Dear all,
We kannadiga's seems to be soft, but if you see from pas 2/3 decades, only karnataka progressed well compared to all neghbouring states, we love kannada we also like to progress well in whatever we are doing. we need help of central govts always for major decisions (BJP/Congres), so local party will represent kannada and culture in terms of getting benefit of todays economic stuff.. we need central govt. support, see whats is happening in andra / tamilnadau where local peoples govt. they are not getting much benefit from central govt. I agree to save our culture and sustain our growht we need stronger MP's we dont need waste mount-shut people like Qamrul Islam/Ananthkumar/Ambrish.. we need some stronger people over there.
satish
ಕನ್ನಡ ಪ್ರೇಮ ನಾವೆಷ್ಟು ಪ್ರಾಮಾಣಿಕರು ...ನನ್ನದೂಂದು ಅನಿಸಿಕೆ.
ನಾನು ಕುವೈಟ್ ನಲ್ಲಿರುವ ಕನ್ನಡಿಗ, ವೈಜ್ಗ್ನಾನಿಕ ಕ್ಷೇತ್ರದಲ್ಲಿರುವುದರಿಂದ..ಸಮಯ ಮಾಡಿಕೊಂಡು ಕನ್ನಡ ಬಳಗವೊಂದರ ಸಮಾರಂಭವೊಂದಕ್ಕೆ ಹೋಗಿದ್ದೆ. ಸದಸ್ಯತ್ವಕ್ಕೆ ಅರ್ಜಿ ಕೇಳಿದಾಗ ಕಾಟಾಚಾರವೆಂಬಂತೆ..ನಡೆದುಕೊಂಡುದಲ್ಲದೇ..ಪರಿಚಯಿಸುವ ಪೂರ್ವ ಸದಸ್ಯರ ಸಹಿ ಬೇಕೆಂದರು..ನೀವೇ ಸಹಿ ಮಾಡಿಯೆಂದರೆ.."ನೀವು..ಯಾರು..ಎಂದು..ನನಗೆ ಗೊತ್ತಿಲ್ಲವಲ್ಲವೋ" ಎನ್ನುವುದೇ..ಅಲ್ಲಿನ ವ್ಯವಸ್ಠಾಪಕರಲ್ಲೊಬ್ಬರು!! ಇನ್ನೊಂದಿಬ್ಬರೂ ಹೀಗೇ ಹೇಳುವುದೇ..?? ಅರ್ಜಿಯನ್ನು ಅವರಬಳಿಯೇ ಬಿಟ್ಟು ನನಗೆ ಸದಸ್ಯರು ಯಾರೂಪರಿಚಯವಿಲ್ಲವಾದ್ದರಿಂದ ಯಾರಾದರೂ ಸಹಿ ಹಾಕಿದರೆ ನನ್ನ ವಿಳಾಸಕ್ಕೆ ತಿಳಿಸಿ, ನಾನು ಸದಸ್ಯತ್ವ ಶುಲ್ಕ ತು೦ಬುತ್ತೇನೆ ಎಂದು ವಾಪಸ್ಸಾದೆ. ಈ ಘಟನೆ ಕಳೆದು ಸುಮಾರು ೩-೪ ತಿಂಗಳೇ ಕಳೆದಿವೆ..ನಾನು..ನಿರೀಕ್ಷೆಯಲ್ಲೇ ಇದ್ದೇನೆ.
ನನಗೆ ತೆಲುಗೂ ಬರುತ್ತದೆಯೆಂದು ತಿಳಿದುಕೊಂಡ ನನ್ನ ತೆಲುಗು ಮಿತ್ರನ ಗೆಳೆಯರೊಬ್ಬರು ನಮ್ಮ ಮನೆಗೆ ಅರ್ಜಿಯನ್ನು ತಂದು ನನ್ನ ಸಹಿ, ವಿಳಾಸ ಮಾತ್ರ ತೆಗೆದುಕೊಂಡು ಮಿಕ್ಕೆಲ್ಲ ತಾವೇ ನಿರ್ವಹಿಸಿ..ನನಗೆ ಒಂದೇ ವಾರದಲ್ಲಿ ಸದಸ್ಯತ್ವದ ಸಂಖ್ಯೆಯನ್ನು ತಲುಪಿಸಿ ಶುಲ್ಕ ಪಡೆದುಕೊಂಡರು....!!!
ಆಜಾದ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!