ಹಿಂದಿ ಹೇರಿಕೆಗೆ ಸೊಪ್ಪು ಹಾಕದೆ ಇರೋದು ಹೇಗೆ?

ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕಗಳ ಭರಾಟೆಗಳ ದಿಬ್ಬಣದಲ್ಲಿ ಕಳೆದುಹೋಗ್ತಿರೋ ಕನ್ನಡಿಗರೇ, ಈ ಹಿಂದಿ ಹೇರಿಕೆಯ ಭೂತವನ್ನು ಬಿಡ್ಸೋದ್ ಹ್ಯಾಗೆ ಅಂತ ಇವತ್ ಮಾತಾಡೋಣ. ನಾವು ಕನ್ನಡದೋರು, ನಮ್ ನುಡಿ ಕನ್ನಡ, ನಮ್ಮ ನಾಡಲ್ಲಿ ಇದೇ ಸಾರ್ವಭೌಮ ಭಾಷೆ ಅಗ್ಬೇಕು ಅಂತ ಅನ್ನೋದೆ ಸರಿ, ಇದೇ ನಮ್ ಗುರಿ ಅಂತ ನೀವೂ ಅಂದ್ಕೊಂಡ್ರೆ ...... ನೋಡಿ ಸ್ವಾಮಿ ನಾವ್ ಇರಬೇಕಾದ್ದೇ ಹೀಗೆ.


ನಮ್ಮ ಕೆಲಸದ ಜಾಗದಲ್ಲಿ ....

ನಿಮ್ ಕಛೇರಿಗಳಲ್ಲಿ ಅಧಿಕೃತ ಸಂಪರ್ಕ ಭಾಷೆ - ಕನ್ನಡ ಅಥವಾ ಇಂಗ್ಲಿಷ್ ಆಗಿರ್ಲಿ. ಕನ್ನಡಿಗ ಸಹೋದ್ಯೋಗಿಗಳ ಜೊತೆ ಕನ್ನಡದಲ್ಲೇ ಮಾತಾಡೋಣ. ಬೇರೆ ಭಾಷೆ ಸಹೋದ್ಯೋಗಿಗಳ ಜೊತೆ ಇಂಗ್ಲಿಷ್ ಮಾತಾಡುದ್ರೂ ಕನ್ನಡ ಕಲ್ಸೋ ಕೆಲ್ಸ ಮಾತ್ರ ಮರ್ಯೋದ್ ಬೇಡ. ಹಿಂದಿ ಮಾತ್ ಆಡೋದು ಮಾತ್ರ ದೇಶಪ್ರೇಮದ ಪ್ರದರ್ಶನ ಅಲ್ಲ, ದೇಶದ ಒಗ್ಗಟ್ಟಿಗೆ ಅದು ಒಳ್ಳೇದೂ ಅಲ್ಲ ಅಂತ ತಿಳ್ಕೊಂಡು ನಮ್ ಭಾಷೆ ಹೇಳ್ಕೊಡೋಣ.

ಗ್ರಾಹಕ ಸೇವೆ ತೊಗೋಬೇಕಾದಾಗ ....

ನಿಮ್ಮ ಬ್ಯಾಂಕು, ಫೋನೂ ಸೇರಿದಂತೆ ಯಾವುದೇ ಗ್ರಾಹಕ ಸೇವೆ ಪಡೀಬೇಕಾದ್ರೆ ಕನ್ನಡದಲ್ಲೇ ಅದು ಇರ್ಬೇಕು ಅಂತ ಒತ್ತಾಯ ಮಾಡಿ. ATMಗಳಲ್ಲಿ ಕನ್ನಡ ಆಯ್ಕೆ ಇದ್ರೆ ಅದನ್ನೇ ಖಂಡಿತಾ ಉಪಯೋಗಿಸಿ. ಇಲ್ಲಾಂದ್ರೆ ಬಳ್ಸೋರಿಲ್ಲ ಅಂತ ಕಿತ್ ಹಾಕ್ ಬಿಟ್ಟಾರು. ಹಿಂದಿ ಫಲಕಗಳನ್ನು, ಹಿಂಗ್ಲಿಷ್ ಫಲಕಗಳನ್ನು ಹಾಕೋದನ್ನು ವಿರೋಧಿಸಿ. ಪರಭಾಷಿಕರ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಕಂಗ್ಲಿಷ್ ಫಲಕ ಹಾಕಿ ಅಂತ ಒತ್ತಾಯಿಸಿ. ನಾವೂ ನೀವೂ ಗ್ರಾಹಕ ಸೇವೆಯನ್ನು ಕನ್ನಡದಲ್ಲಿಯೇ ಪಡ್ಕೋಬೇಕು ಅಂತ ಒಂದು ತೀರ್ಮಾನ ಮಾಡುದ್ರೆ ಎಷ್ಟೋ ಸಾವಿರ ಜನ ಕನ್ನಡಿಗರಿಗೆ ಉದ್ಯೋಗ ಸಿಗುತ್ತೆ. ಎಷ್ಟೊ BPOಗಳು ಪಕ್ಕದ್ ರಾಜ್ಯಗಳಿಗೆ ಪಲಾಯನ ಮಾಡೋದ್ ತಪ್ಪುತ್ತೆ.

ಅಂಗಡಿ, ಮುಂಗಟ್ಟುಗಳಲ್ಲಿ ....

ಎಲ್ಲಾ ಕಡೆ ಕನ್ನಡ ಮಾತಾಡಿ. ಮಾಲ್ ಗಳಿಗೋ, ಮಾರ್ಕೆಟ್ ಗಳಿಗೋ ಹೋದರೆ, ಸ್ವಲ್ಪ ಜೋರುಜೋರಾಗೆ ಕನ್ನಡದಲ್ಲಿ ಮಾತಾಡ್ಕೊಳ್ಳಿ ಮತ್ತು ಕನ್ನಡದ ವಾತಾವರಣ ಹುಟ್ಟ್ ಹಾಕೋದ್ನ ಮರೀಬೇಡಿ. ಅಂಗಡಿಯವರ ಜೊತೆ, ಅಲ್ಲಿನ ಭದ್ರತಾ ಸಿಬ್ಬಂದಿ ಜೊತೆ ಕನ್ನಡದಲ್ಲೇ ಮಾತಾಡಿ. ಕನ್ನಡ ಮಾತಾಡೋ ಸಿಬ್ಬಂದಿಗಾಗಿ ಒತ್ತಾಯಿಸಿ. ಎರಡು ರೂಪಾಯಿ ಕಮ್ಮಿಗೆ ಸಾಮಾನು ಸಿಗುತ್ತೆ ಅಂತ ಅಂಗಡಿಯವನ ಹತ್ರ ಹಿಂದೀಲ್ ಮಾತಾಡೋದ್ನ ಯಾವತ್ಗೂ ಮಾಡ್ಬೇಡಿ. ಬೇಡದೆ ಇರೋ ಹಿಂದಿ ಪದಗಳನ್ನು ಬಳಕೆ ಮಾಡ್ಲೇ ಬೇಡಿ. ಅಂದ್ರೆ ಬೇಳೆಗೆ ದಾಲ್ ಅನ್ನೋದೋ ಮತ್ತೊಂದೋ ಮಾಡಬೇಡಿ. ವಸ್ತುಗಳಿಗೆ ಬಳಕೇಲ್ ಇರೋ ಕನ್ನಡದ ಹೆಸರುಗಳನ್ನೇ ಬಳಸಿ.

ಬ್ಯಾಂಕು, ರೇಲ್ವೆ ಕಛೇರಿಗಳಲ್ಲಿ ....

ಎಲ್ಲ ಅರ್ಜಿಗಳನ್ನು ಕನ್ನಡದಲ್ಲಿ ತುಂಬಿ. ಬ್ಯಾಂಕು ಚಲನ್ನು ಚೆಕ್ಕುಗಳನ್ನು ಕನ್ನಡದಲ್ಲೇ ತುಂಬಿ. ಯಾವ ಬ್ಯಾಂಕಿನವರು ಕನ್ನಡದಲ್ಲಿ ಸೇವೆ ಕೊಡ್ತೀನಿ ಅಂತಾರೋ ಅವರ ಹತ್ರಾನೆ ಖಾತೆ ಇಟ್ಕೋತೀನಿ ಅಂತ ತೀರ್ಮಾನ ಮಾಡಿ. ಹಿಂದೀಲಿ ಅರ್ಜಿ ಪರ್ಜಿ ಇದ್ರೆ ವಿರೋಧ ಮಾಡಿ. ಕನ್ನಡದಲ್ಲಿ ಇಲ್ಲದಿದ್ದರೆ ಖಂಡಿಸಿ, ಕನ್ನಡಕ್ಕಾಗೆ ಒತ್ತಾಯಿಸಿ.

ಭದ್ರತಾ ಸಿಬ್ಬಂದಿಗಳು ....

ನೀವು ಎಲ್ಲೇ ಹೋಗಿ, ಭದ್ರತಾ ಸಿಬ್ಬಂದಿಗಳ ಜೊತೆ ಸದಾ ಕನ್ನಡದಲ್ಲೇ ಮಾತಾಡಿ. ಅವರೇನಾದ್ರೂ ಹಿಂದೀಲೆ ಮಾತಾಡಕ್ ಪ್ರಯತ್ನ ಪಟ್ರೆ, ನಿಮಗೆ ಹಿಂದಿ ಬರಲ್ಲ ಅಂತ ಹೆಮ್ಮೆಯಿಂದ ಇಲ್ದೆ ಹೇಳಿ. ಅಕಸ್ಮಾತ್ ಹಿಂದಿ ಬರ್ತಿದ್ರೂ ನಿಮಗೆ ಬರೋದೆ ಇಲ್ಲ ಅನ್ನೋ ಹಾಗೆ ನಡ್ಕೊಳ್ಳಿ.

ನಮ್ಮವರ ಜೊತೆ ....

ಸದಾ ಕನ್ನಡದಲ್ಲೇ ಮಾತಾಡಿ. ಕನ್ನಡ ನಾಡಿನ ಆಗುಹೋಗುಗಳು, ಇಲ್ಲಿನ ರಾಜಕೀಯ, ಇಲ್ಲಿನ ಆರ್ಥಿಕ ಸ್ಥಿತಿಗತಿ, ಇಲ್ಲಿನ ಸಿನಿಮಾಗಳು, ಕನ್ನಡದ ಹಾಡುಗಳು . . . . ಇವುಗಳ ಬಗ್ಗೇನೆ ಹೆಚ್ಚಾಗಿ ಮಾತಾಡಿ. ನೀವು ಕೊಂಡುಕೊಳ್ಳುವ ಮೊದಲ ದಿನಪತ್ರಿಕೆ ಕನ್ನಡದ್ದಾಗಿರಲಿ. ನಿಮ್ಮ ಮನೆಯಲ್ಲಿ ಕನ್ನಡದ ವಾತಾವರಣವಿರಲಿ. ಮನೆಯ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಅನ್ನುವ ಸತ್ಯವನ್ನು ತಿಳಿಸಿಕೊಡಿ.

ಇವೆಲ್ಲಾ ಮಾಡುದ್ರೆ ಏನಾಗುತ್ತೆ?

ವಲಸಿಗ ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಸೇರ್ಕೊಳ್ಳಕ್ ಪೂರಕವಾದ ಸನ್ನಿವೇಶ ಸೃಷ್ಟಿಯಾಗುತ್ತೆ. ಇದು ಕನ್ನಡನಾಡು, ಇದು ಕನ್ನಡಿಗರ ನಾಡು ಅನ್ನೋ ಸಂದೇಶ ಪರಭಾಷಿಕನಿಗೆ ತಲುಪುತ್ತೆ. ಕನ್ನಡಿಗರ ಕೀಳರಿಮೆ ಬಹಳಷ್ಟು ಕಡಿಮೆಯಾಗುತ್ತೆ. ಅದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ಹಿಂದಿ ನುಂಗಿ ನೀರುಕುಡ್ಯೋ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತೆ.

ಇದೇ ನಿಜವಾದ ದೇಶಪ್ರೇಮ ....

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ ಸಾರ್ವಭೌಮ ಭಾಷೆಯಾಗಬೇಕು. ನಮ್ಮ ಆಡಳಿತಗಳಲ್ಲಿ, ಕೇಂದ್ರ ಸರ್ಕಾರದ ಕಛೇರಿಗಳಲ್ಲಿ... ಎಲ್ಲ ಭಾಷೆಗಳಿಗೂ ಸಮಾನವಾದ ಮಾನ್ಯತೆ ಮತ್ತು ಆದ್ಯತೆಗಳು ಇರಬೇಕು. ಒಂದು ನಾಡಿಗೆ ಪರಭಾಷಿಕನೊಬ್ಬ ವಲಸೆ ಹೋಗುವುದಿದ್ದರೆ ಆ ಪ್ರದೇಶದ ಭಾಷೆಯ ತರಬೇತಿಯನ್ನು ಪಡೆದುಕೊಂಡು ಹೋಗುವ ವ್ಯವಸ್ಥೆ ಇರಬೇಕು. ಪ್ರತಿಯೊಂದು ಭಾಷೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು.

ಹಿಂದಿಯನ್ನು ದೇಶಪ್ರೇಮದ ಜೊತೆ ತಳುಕು ಹಾಕುವುದೋ, ದೇಶಕ್ಕೊಂದು ಭಾಷೆಯಿರಬೇಕೆಂದು ಸಮೂಹ ಸನ್ನಿ ಹುಟ್ಟುಹಾಕುವುದೋ, ಆ ಕಾರಣಕ್ಕಾಗಿ ಹಿಂದಿಗೆ , ಹಿಂದಿ ಪ್ರಚಾರಕ್ಕೆ ವಿಶೇಷ ಆದ್ಯತೆ ನೀಡುವುದೋ ನಿಲ್ಲಬೇಕು. ಇದೊಂದೇ ನಮ್ಮ ಪ್ರೀತಿಯ ಭಾರತವನ್ನು ಒಡೆಯದಂತೆ ತಡೆಯಲು ಇರುವ ಸಾಧನ. ಇದೇ ನಿಜವಾದ ದೇಶಪ್ರೇಮ. ಊಟಕ್ಕೆ ಎಲೆ ಹಾಕಿದಾಗ, ಪಾಯಸಕ್ಕೊಂದು ಜಾಗ, ಪಲ್ಯಕ್ಕೊಂದು ಜಾಗ, ಅನ್ನಕ್ಕೊಂದು ಜಾಗ ಅಂತ ಇರುತ್ತೆ. ಏಕತೆ ಹೆಸರಲ್ಲಿ ಎಲ್ಲಾನು ಕಲಸಿಕೊಂಡು ಒಟ್ಗೆ ಊಟ ಮಾಡಬೇಕು ಅಂದ್ರೆ ಅದು ಇಡೀ ಊಟದ ರುಚೀನೆ ಕೆಡ್ಸುತ್ತೆ ಗುರೂ... ಒಂದೊಂದಕ್ಕೂ ಇರೋ ಅನನ್ಯತೆಯನ್ನು ಗುರುತಿಸಿ ಗೌರವಿಸಿದರೆ ಊಟಕ್ಕೊಂದು ರೀತಿ, ಅದು ಪರಮಾತ್ಮಂಗೂ ಪ್ರೀತಿ.

25 ಅನಿಸಿಕೆಗಳು:

Anonymous ಅಂತಾರೆ...

ನನಗೆ ಬಾಳೆ ಎಲೇಲಿ ಹಿಂದಿ ಅನ್ನದ ತರ ಕಾಣಿಸ್ತಿದೆ. ಆದ್ರೆ ಬರಿ ಅನ್ನ ತಿಂದ್ರೆ ಏನೂ ರುಚಿ ಇಲ್ಲ. ಅದಕ್ಕೆ ಕರ್ನಾಟಕ ಎನ್ನೋ ಉಪ್ಪು, ತಮಿಳುನಾಡು ಅನ್ನೋ ಹುಳಿ, ಆಂದ್ರ ಅನ್ನೋ ಖಾರ, ಗುಜರಾತ್ ಎನ್ನೋ ಮಜ್ಜಿಗೆ, ಕೇರಳದ ನೇಂದ್ರ ಬಾಳೆ ಇದ್ರೆನೆ ಭಾರತ ಅನ್ನೋ ಊಟ ಸಂಫೂರ್ಣ ಆಗೋದು ಅನ್ನೋ ನಿಜಾನ ಸರಿಯಾಗಿ ಹೇಳಿದ್ದೀರ ಗುರುಗಳೆ.

ಒಂದು ವಿಷಯವನ್ನು ಮನದಟ್ಟು ಮಾಡಲು ಉದಾಹರಣೆ ಮೂಲಕ ಹೇಳುವ ಪರಿಪಾಠವಿದೆ. ಬಹುಷ: ಹಿಂದಿ ಹೇರಿಕೆ ಯಾವ ರೀತಿ ನಡೀತಿದೆ ಎಂದು ಸರಿಯಾಗಿ ಮನದಟ್ಟು ಮಾಡಲು ಬಹಳ ಸುಂದರ, ಸುಲಲಿತ, ಸುಲಿದ ಬಾಳೇಹಣ್ಣಿನಂತ ಉದಾಹರಣೆ ನೀಡಿದ್ದೀರ ಬಹಳ ಆನಂದದದದದದದದದದದದ ಮಯವಾಗುತ್ತಿದೆ. ಯಾವುದೇ ವಿಷಯಕ್ಕೆ ಸಂಬಂದ ಪಟ್ಟಂತೆ ಇಷ್ತು ಸರಿಯಾದ-ಸೂಕ್ತವಾದ ಇನ್ನೊಂದು ಉದಾಹರಣೆ ನಾನು ಕಂಡಿಲ್ಲ.

ಆನಂದದದದದದದದದದ ನೀಡುವ!!! ಈ ಬರಹಗಳು ಈ ರೀತಿಯೇ ಮೂಡಿಬರುತ್ತಿರಲಿ.

ಇವತ್ತಿಂದ ಹಿಂದಿಯೋರು ಸರಿಯಾಗ ಅನ್ನ ತಿನ್ನೋದು ಕಲೀಲಿ..................

Anonymous ಅಂತಾರೆ...

ಭಾರತದೇಶಕ್ಕೆ ಎದುರಾಗಿದ್ದ ಹಿಂದೀ ಅಪಾಯವನ್ನು ಅರ್ಧ ಶತಮಾನಕ್ಕೆ ಮೊದಲೇ ಗುರುತಿಸಿದ ಪ್ರವಾದಿ ಅನಕೃ. ಹಿಂದೀ ಸಾಮ್ರಾಜ್ಯವನ್ನು ಕಟ್ಟುವ ಆತುರದಲ್ಲಿ ಅನೇಕ ನಾಯಕರು ಭಾಷಾ ಪ್ರಾಂತಗಳನ್ನೇ ಅಳಿಸಿ ಬಿಡಬೇಕೆಂದು ತೊದಲುತ್ತಿದ್ದ ಸಮಯದಲ್ಲಿ, ಸಮೃದ್ಧ ಪ್ರಾಂತಗಳಿದಲೇ ಹೇಗೆ ರಾಷ್ಟ್ರೀಯತೆ ಬಲಿಯಬಲ್ಲದೆಂಬುದನ್ನು ಅನಕೃ ಅರ್ಧ ಶತಮಾನದ ಹಿಂದೆಯೇ ವಿವರಿಸಿದರು: "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತೃವೆಂಬುದನ್ನು ಮರೆಯಬಾರದು. ಆ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲುಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ."

ಉಉನಾಶೆ ಅಂತಾರೆ...

ಅಡ್‍ಬಿದ್ದೆ ಗುರೂ.
"ಸುಲಿದ ಬಾಳೆಹಣ್ಣಿನಂದದಿ" ಅಂತ ಕವಿಗಳು ಹೇಳಿದ್ದು ಇಂತಹ ಬರಹದ ಬಗ್ಗೇ ಇರಬೇಕು.

Anonymous ಅಂತಾರೆ...

bhaaratada sanaatana Samskruti bhaashegaLa rakshaNe aaagabeku. Englsih piDugininda kannaDa, saMskruta bhaashegaLannu uLisikollabekaagide.

Anonymous ಅಂತಾರೆ...

Ganesha chaturthigaLalli hindi kaaryakrama beDa. kannaDa kalaavidharu haagoo kaaryakramagaLige maatra namma bembalavirali.

Samasta kannaDigarellarigoo Gowri hagoo Ganesha habbada shubhaashayagaLu.

pranayi ಅಂತಾರೆ...

ನಮಸ್ಕಾರ. ನಾನು ಪ್ರವೀಣ್ ಅಂತ. ನೋಡಿ ನೀವು ಹಿಂದಿ ಕಲಿಯೋದು ಹೇರಿಕೆ ಅನ್ನೋದು ತಪ್ಪು ಅನ್ಸುತ್ತೆ, ಯಾಕಂಡ್ರೆ ನಾವು ಕನ್ನಡಿಗರು ಅನ್ನೋದು ಎಷ್ಟು ಸತ್ಯಾನೋ ಭಾರತೀಯರು ಅನ್ನೋದು ಅಷ್ಟೇ ನಿಜ ಅಲ್ವಾ. ನೀವು ಸಾಗರದಚೆಯ ಭಾಷೆ ಕಲಿಯೋಕೆ ಇಷ್ಟು ಚರ್ಚೆ ಮಾಡಿದಿರ ಇಲ್ಲ ಯಾಕೆ ಅಂದ್ರೆ ನೀವು ಬದುಕೋದೇ ಆ ಇಂಗ್ಲೀಶ್ ಬೇಕು ಹಿಂದಿ ಬೆಡ ಅಲ್ವಾ. ಹೊರ ದೇಶದಿಂದ ಯಾರಾದ್ರೂ ಬಂದ್ರೆ ಅವರಿಗೆ ಇದು ಭಾರತ ಅಂತ ಗೊತ್ತಾಗ್ದೆ ಇರೋ ಅಂತ ಕಾಲ ಬರುತ್ತೆ ಅದು ಬೇಕಾ,

Anonymous ಅಂತಾರೆ...

ಅಲ್ರೀಎ ಪ್ರವೀಣ್, ಹೊರದೇಶದಿಂದ ಬಂದೋರಿಗೆ ಹಿಂದಿಮಾತಾಡಿದ್ರೆ ಮಾತ್ರ ನಾವು ಭಾರತೀಯರು ಅಂತ ಗೊತ್ತಾಗತ್ತಾ? ಯಾಕೆ ಕನ್ನಡ, ತಮಿಳು, ತೆಲುಗು ಮಾತಾಡಿದ್ರೆ ಭಾರತೀಯರು ಅಂತ ಗೊತ್ತಾಗಲ್ವ?

ಸ್ವಾತಂತ್ರ್ಯಕ್ಕೆ ಮುಂಚೆ ದಕ್ಷಿಣ ಭಾರತದಲ್ಲಿ ಯಾರೂ ಹಿಂದಿ ಮಾತಾಡ್ತಿರಲಿಲ್ಲ. ಅಂದ್ರೆ ಆವಾಗ ನಾವು ಭಾರತೀಯರು ಆಗಿರ್ಲಿಲ್ವಾ?

ಹಿಂದೀಗೂ ಭಾರತೀಯತೆಗೂ ತಳಕು ಹಾಕಬೇಡಿ.

-ಸೂರಿ

Anonymous ಅಂತಾರೆ...

nijavaada maathu anonymous avre..
praveenavre.. hindi kaliyodhu thappu antha yaaru helodilla, aadre adara balake yelli sookthavu adu mukhya..
ondu udhaharane : Naavu utthara bharathakke hodhaga, kannada mathaduvudakke aguttha ? illa, hindi yalle sambhashane maadabekagutthe..
aadre karnatakadalle idhkondu, hindi mathadodu yaava nyaaya ? ade tarah hindi janaru karunadallu hindi bhayasuvudu thappu..
naavu nammavarondige yaakagi hindi mathadbeku ? yaake ? illiya janarige kannada barolve ?
adhakintha mukhyavaagi naanu illi helodanna bayasutthene..
Ee hindi mathadthaaralla.. adu shreshta hindi antha ankondieera ? ee bangalooru, mysooru matthu bere kade hindi mathadtharalla, avra hindi swalpa kivikottu keli, adu shreshta hindi alve alla.. Urdu berike agiro anta Hindi.. Idu namge beka ?
Eegonthu huduga-hudgiyarige urdu kalaberikeya hindi mathadodu andre yen kushi anteera, ontara trend agbittide.. hmmm irli..
Hindi Gyaana Irli, adu ollede.. aadre barutthe antha sikkapatte karunadalli kannada bittu mathadodu sari illa antha nanna anisike..
Yen guru ? sari alva ?

Anonymous ಅಂತಾರೆ...

ಒಳ್ಳೇ ಬರಹ ಕಣ್ರೀ! ನಮ್ಮೂರಲ್ಲೇ ನಲ್ಲ ಮಾತಾಡಕ್ಕೆ ಹೆದರ್ಕೋಬೇಕು ಎಂದರೆ ಹೇಗೆ?

-ನೀಲಾಂಜನ

vasantha ಅಂತಾರೆ...

Naanu oxfordnallirodu.illi kannadigaru tumba kadime. aadru eshtu jana iddivo,ellru kanndigaraage ulididdeve. Bengaloorige bandaagella ella kade naanu kanndadalli maatadtini, jana nannanna englishnalli maatadistare. uk matte bere europina deshagalalli avara bhashe matadode, avara samskriti ulisikollode avarige hemme. france, germany deshadalli mbbs avara bhashele ododu. Aadre namma karnatakadlli maatra, ella kadeyu kannada maatadoke baralla anta torisikollode hemme. bere bhashe naavu yake kaliyabeku - bere jagakke hodre survive aagoke. namma neladalli naavu bere bhashe yaake maatakdbeku?? ivattu bengloorige ashtu horagina jana barodakke karana avaryaru kannada kalibekage illa, adakke. idanna naavu badalayisabeku.

Shreyas Raghavendra ಅಂತಾರೆ...

ಬೆ೦ಗಳೂರಲ್ಲಿ ಬರಿ ಕೋರಮ೦ಗಳ, ಶಿವಾಜಿನಗರ್, ಇ೦ದ್ರನಗರ್ ಮಾತ್ರ ಅಲ್ಲ ಅಚ್ಚರಿಯ ಸ೦ಗತಿ ಎನಪ್ಪ ಅ೦ದ್ರೆ ಬೆ೦ಗಳೂರಿನ ಹ್ರುತ್ಬಾಗ ಮೆಜೆಸ್ತಿಕ್ ನಲ್ಲೆ ಎಲ್ಲಾ ವ್ಯಾಪರಿಗಳೂ ಹಿ೦ದಿನಲ್ಲೆ ವ್ಯಾಪಾರ ಮಾದ್ತಾರೆ. ನಿಮ್ಮ ಲಕ್ಷಣ ಬೆಳ್ಳಗಿದ್ದರೆ, ಸ್ವಲ್ಪ ದುಬಾರಿ ವೆಚ್ಚದ ಬಟ್ಟೆ ಹಾಕೊ೦ಡ್ರೆ ಸುಮ್ಮನೆ ಅವ್ರ ಹತ್ರ ನಡೆಕೊ೦ಡ್ತಾ ಬನ್ನಿ ಸಾಕು ಎಲ್ಲಾ ಬಡ್ಡಿ ಮಕ್ಳೂ ಹಿ೦ದಿನಲ್ಲೊ ಉರ್ದೂನಲ್ಲೊ ಕರೀತವೆ.ಅ೦ದ್ರೆ ಕನ್ನಡಿಗರು ಬಡವರ೦ತನ? ಅಥ್ವಾ ಕನ್ನಡಿಗರಿಗೆ ಇನ್ನು ಮರಿಯಾದೆ ಇಲ್ಲಾ ಅ೦ಥ ನ? ಈ ಸೂಳೆ ಮಕ್ಳಿಗೆ ಮೊದ್ಲು ಪಾಠ ಕಲಿಸಲೆ ಬೇಕು. ಇದು ಸಣ್ಣ ವಿಷಯ ಇರ್ಬಹುದು ಆದ್ರೆ ರಾಜಧಾನಿಯ ಮಧ್ಯ ಭಾಗದಲ್ಲೆ ಈ ರೀತಿ ನಡೀತಾಯಿರೊದು ಸರಿಯಲ್ಲ....

Anonymous ಅಂತಾರೆ...

allri saar, praveeen avre,, yaavdo bevarsi hindi baashe kalithare maathra bharathiya aniskoladkintha "kannadiga" aniskollodu saavira pattu utthahma,
yaake ee maathu heluththidene andre,,,
I have been living in north india from last 5 years most of these 'hindians' will not recognise states below vindyas(peninsular south india)as prime india they consider us as clolonial 2nd grade states,though our karnataka is one of best,cleanliest,advanced,profit yielding(to Union govt,),but believe it or not in countries like UK, we kannadigas have good identity&our culture and traditions are respected,above all if you learn english you can communicate with non kannadiga indians and with whole world alike for your profession and kannada will be our mothertongue,but 'FOR WHAT THE HELL DO WE NEED TO LEARN HINDI ENGLISH IS ENOUGH,do we need to learn hindi to speak with uneducated,rasclas like biharis? it will be a stupid idea if union govt, continues to encourage hindi imposition.

Ganesha Shastri ಅಂತಾರೆ...

blog site channagide..
mathomme.. anakru kala hutti barabeku..
kannada sangatanegalu.. onedu utthama pradeshika paksha dondige.. hutta beku.. adu.. rastra rajakaranavannu alladisabeku.. aga para rajyadavarige.. budhi barothe..

bengalurinalli pararajyadavaru estiddare andre.. bhiksukaru kooda.. utharadavaragi bittiddare.

Anonymous ಅಂತಾರೆ...

ದೇಶ ಸುತ್ತು ಕೋಶ ಓದು ಅನ್ನುವುದನ್ನ ಎಲ್ಲರೂ ಮರೆತು ಹೋಗಿದ್ದಾರೆ. ಬೆಂಗಳೂರಿಗೆ ವಲಸೆ ಬಂದ ಏಷ್ಟೋ ಜನಗಳು ಮಹಾರಾಜರಂತೆ ತಮ್ಮ ತಮ್ಮ ಮಾತೃ ಭಾಷೆಯಲ್ಲೇ ಮಾತ್ನಾಡ್ತಾರೆ. ಅದೂ ಅಲ್ಲದೆ ಅವರು ಏಷ್ಟು ವರುಷಗಳಿಂದ ಇದ್ರೂ ಕನ್ನಡ ಸ್ವಲ್ಪಕೂಡ ಕಲ್ತಿರೊಲ್ಲ. ಹೀಗಿರ್ಬೇಕಾದ್ರೆ ನಾವು ಹಿಂದಿ ಯಾಕೆ ಕಲಿಬೇಕು ಸಾರ್?

Karthik ಅಂತಾರೆ...

ಇಲ್ಲಿ ನನ್ನ ತಮಿಳು ಸ್ನೇಹಿತರೊಬ್ಬರು ಕನ್ನಡ ಕಲಿಯಬೇಕು ಅಂತ ಕೇಳ್ತಾ ಇದ್ದಾರೆ. ಕನ್ನಡ ಮಾತಾಡಲು / ಓದಲು ಕಲಿಸುವಂತ classes ಯಾರಾದ್ರೂ ಮಾಡುವವರು ಗೊತ್ತಿದ್ರೆ ತಿಳಿಸಿ. ಅವರು ಇರೋದು ಇಂದಿರಾನಗರದಲ್ಲಿ ಅದಕ್ಕೆ ಹತ್ತಿರದಲ್ಲಿ ಯಾರಾದ್ರೂ ಇದ್ದರೆ ತಿಳಿಸಿ.
ನನ್ನ ಈಮೈಲ್ : karthik.knk@gamil.com

Anonymous ಅಂತಾರೆ...

i think professionals like doctors, techies, accountants must make it fashionable to talk in kannada in public places. So that young people emulate them.. if you are more successful the better. Next time you hang out in so-called posh places try talking only in kannada. Young people learn by copying others. Then slowly all this craze about hindi, english will vanish.
Thanks

Anonymous ಅಂತಾರೆ...

ಇದನ್ನ ಎಲ್ಲೋ ಓದಿದ ನೆನಪು: ಕೇರಳ ಮುಖ್ಯಮಂತ್ರಿಯಾಗಿದ್ದ ಇ.ಕೆ. ನಾಯನಾರ್-ರಿಗೆ ಆಗ ಉ.ಪ್ರದೇಶದ ಮುಖ್ಯಮಂತ್ರಿಯಾಗಿದ್ದ, ಹಾಗೂ ಕಡು ಹಿಂದಿ ಭಾಷಾ ದುರಭಿಮಾನಿಯಾದ ಮುಲಾಯಂ ಸಿಂಗ್ ಯಾದವ್-"ಜೀ" ರವರು ಸಂಪೂರ್ಣ ಹಿಂದಿಯಲ್ಲಿ ಆಡಳಿತಾತ್ಮಕ ಪತ್ರವೊಂದನ್ನು ಬರೆದರಂತೆ. ಮಲೆಯಾಳಿಗೆ ಇಂಥಾ ವಿಷಯವನ್ನ ಹೇಗೆ ಡೀಲ್ ಮಾಡ್ಬೇಕು ಅಂತಾ ಹೇಳಿಕೊಡ್ಬೇಕಾ.. ಅವ್ರು ತಮ್ಮ ಸೆಕ್ರೆಟರಿನ ಕರೆದು ಸಂಪೂರ್ಣ ಶುಧ್ಧ ತ್ರಿಶೂರ್ ಮಲೆಯಾಳಂನಲ್ಲಿ ಇದಕ್ಕೆ ಪ್ರತಿಕ್ರಿಯೆ ಬರೆದು ಕಳಿಸಿ ಅಂತಾ ಹೇಳಿ ಹಾಗೇ ಮಾಡಿಸಿದರಂತೆ. ಅದಕ್ಕೆ ಉತ್ತರ ಕೊಟ್ಟ ಮುಲಾಯಂ ಸಿಂಗ್, ಭಾರತೀಯರೆಲ್ಲರೂ ಹಿಂದಿ ಕಲೀಬೇಕು ಅನ್ನೋ ರೀತಿಯ ಪತ್ರ ಬರೆದರಂತೆ. ತೆಗೋ ಬಿತ್ತು ಈಗ ಹೊಡೆತ.. ಉ.ಪ್ರದೇಶದ ಸಾಕ್ಷರತಾ ಪ್ರಮಾಣವನ್ನು ದೃಷ್ಟಿಯಲ್ಲಿಟ್ಟುಕೊಂಡ ನಾಯನಾರ್, ಮುಲಾಯಂರಿಗೆ ಹೇಳಿದ್ರಂತೆ "ಮೊದ್ಲು ನಿಮ್ಮ ಜನಗಳಿಗೆ ಹಿಂದಿ ಕಲಿಸಿ, ಆಮೇಲೆ ಬೇರೆಯವ್ರಿಗೆ ಬುದ್ಧಿ ಹೇಳಿ".

ಹೀಗೆ ಮುಳ್ಳನ್ನ ಮುಳ್ಳಿಂದ್ಲೇ ತೆಗೀಬೇಕು ಅನ್ನೋದು ನಮ್ಮ ತಂತ್ರವಾಗಬೇಕು. ಆದರೆ ನಮ್ಮ ಕನ್ನಡಿಗರು ಇದ್ರ ಬಗ್ಗೆಯೆಲ್ಲಾ ತಲೆ ಕೆಡಿಸಿಕೊಳ್ಳದೇ ಇರೋವಷ್ಟು ವಿಶಾಲ ಹೃದಯದವರು ಅನ್ನೋದು ಎಲ್ಲಾರಿಗೂ ಗೊತ್ತಾಗಿ ಹೋಗಿದೆ. ಅದಕ್ಕೇ ಬೆಂಗ್ಳೂರಲ್ಲಿ ಕೊಂಗರು, ಗುಲ್ಟಿಗಳು, ಮಲ್ಲುಗಳು, ಬೋಂಗ್ಸ್, ಮಾರ್ವಾಡಿಗಳು, ಭೈಯ್ಯಾಗಳು, ಎಲ್ರೂ ನಿರಾತಂಕವಾಗಿ ಇದು ತಮ್ಮದೇ ಸಾಮ್ರಾಜ್ಯ ಅನ್ನೋಹಾಗೆ ವಿಹರಿಸಿಕೊಂಡಿದಾರೆ. ಸಾಲದೆಂಬಂತೆ ಪ್ರಮುಖ ನೀರಾವರಿ ಪ್ರದೇಶಗಳನ್ನೆಲ್ಲಾ ಒಂದೋ ಕೊಂಗರು (ಹಿರಿಯೂರು, ಭದ್ರಾವತಿ, ದಾವಣಗೆರೆ), ಇಲ್ಲಾ ಗುಲ್ಟಿಗಳು/ತೆಲುಗುವಾಳ್ಳು (ರಾಯಚೂರು, ಸಿಂಧನೂರು, ಬಳ್ಳಾರಿ)ನೋಡ್ಕೋತಾ ಇದಾರೆ. ನಮ್ಮವ್ರು ಅವ್ರ ಜಮೀನನ್ನ ಮಾರಿಬಿಟ್ಟು ಅದೇ ಭೂಮಿಯಲ್ಲಿ ಕೂಲಿ ಕೆಲ್ಸ ಮಾಡ್ಕೊತಾ ಇದಾರೆ. ಏನೂ ಮಾಡಕ್ಕಾಗಲ್ಲ, ಏನ್ಗುರೂ?

Karthik DM ಅಂತಾರೆ...

eegaagale Forum, Garuda mall nalli, swalpa kannada boardgalu ive,, aadare hechhu kannadigariro malleshwaram nalli hosadagi terediruva MANTRI SQUARE na onde ondu angadiya mundeyu kannadada boardgalu illa.. idannenu madakagalva??

satish ಅಂತಾರೆ...

kannada maatadoke chikka makkalannu huridumbisabeku mattu naavella kannadigaru elli hodaru kannadadalli mathadoke prayathna padabeku.

rajashekar kc ಅಂತಾರೆ...

thumba sogasagi mathu artha poornavaagidhe

Mahadev ಅಂತಾರೆ...

Kannada bhasheya kole jaast agtha irodu nagar pradeshgalalli. Naanu Bagalkot ninda Bangalore ge bandu 8 varsha aithu. Namma kade bhashe keli naaveno aliens eno anno thara nodthidru, ega swalpa badalavane aagide---aadru kannada maaadatodu kadime aagide.

Aaavag, kelavu kade namma uttar kannada bhashe maatadidre care maadtha iralilla, naane eshto sala manashirade idru Hindino Englishnallo matadiddini.

Especially, girls!! They are born and brought up in Bangalore, their Mother tongue is Kannada. Unfortunately, they have been using English or Hindi so extensively that----those two have become their Body languages.

K Ravindra Bhat ಅಂತಾರೆ...

ಆಭೇಷ್! ಚೈತನ್ಯ. ಬಹಳ ಗಹನವಾದ ಚಿಂತನೆಯನ್ನು ಹುಟ್ಟು ಹಾಕಿದ್ದೀಯ. ಇದರಲ್ಲಿ ಯಶಸ್ಸು ಸಿಗಲಿ ಎಂದು ಮನಃಪೂರ್ವಕ ಹಾರೈಸುತ್ತೇನೆ. ಇದು ಬರೀ ಕನ್ನಡದವರಿಗೆ ಮಾತ್ರವಲ್ಲ, ಎಲ್ಲ ಹಿಂದಿಯೇತರ ಭಾರತೀಯರಿಗೂ ಸಲ್ಲುವ ಮಹತ್ಸೇವೆಯಾಗುತ್ತದೆ. ಎಲ್ಲ ಭಾರತೀಯರು ಒಂದೇ ಭಾಷೆ ಬಳಸಿದರೆ ಮಾತ್ರ ದೇಶದ ಅಭಿವೄದ್ಢಿಯೆಂಬುದು ಹಿಂದಿಯವರು ಹೇರಿದ ಮಿಥ್ಯಾವಾದ. ನಿನ್ನ ಪ್ರಯತ್ನ ಯಶಸ್ಸು ಕಾಣಲಿ.

vishwa ಅಂತಾರೆ...

It is been falsely propogated that Hindi is the ONLY national language. According to our constitution 18 languages (that are on a currency note) are ALL national language. (just like JnK being part of India (which is constitionally not right), another false propogation)


So dont assume hindi is national language. Communicate in Kannada in Karnataka

Sandalwood Cinemas ಅಂತಾರೆ...

Nanna Hemme Kannada, Nanna Garva Kannada, Nanna Aahaam Kannada,

Nanna Sarvasvahuuu Kannada............Mikkidella Barii Shunyaaaa Shunya

AvinashTR Soraba ಅಂತಾರೆ...

ಕರ್ನಾಟಕ ಜನಸಂಕೆ ಮತ್ತು ವಿಸ್ತೀರ್ಣ ದಲ್ಲಿ ಇಟಲಿಗೆ ಸಮಾನವಾಗಿದೆ. ನನ್ನ ವಯಕ್ತಿಕ ದೃಷ್ಟಿಯಲ್ಲಿ ಭಾರತ ಎಂಬುದು ಯೂರೋಪಿಗೆ ಸಮಾನ. ಭಾರತ ಒಂದು ದೇಶವಲ್ಲ. ಅದು ಒಂದು ಖಂಡ. ಭರತ ಖಂಡ. ಯೂರೋಪಿನ ಚರಿತ್ರೆಯನ್ನು ನೋಡಿದರೆ. ಕರ್ನಾಟಕ ಕೆಲವು ಧಶಕಗಳಲ್ಲಿ ಒಂದು ದೇಶ ವಾಗಿ ಹೊರಹೊಮ್ಮುವ ಸಾದ್ಯತೆ ಇದೆ. ಅಲ್ಲಿಯವರೆಗೆ ನಮ್ಮ ಭಾಷೆಯನ್ನು ಅದರ ಗನತೆ ಯನ್ನು ಉಳಿಸಿಕೊಳ್ಳುವುದು ನಾವು ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆ. ಕನ್ನಡ ಭಾಷೆಗೆ ಫ್ರೆಂಚ್ ಇಟಾಲಿಯನ್ ಭಾಷೆಗಳಷ್ಟೆ ಗಣಥೆ ತಂದು ಕೋಡೋಣ. ರಾಜ್ಯ ಭಾಷೆಯಾಗಿ ಅಲ್ಲ. ರಾಷ್ಟ್ರ ಭಾಷೆ ಆಗಿ. ಕರ್ನಾಟಕದ ರಾಷ್ಟ್ರ ಭಾಷೆ ಕನ್ನಡ. ಆರಂಕುಶಮಿಟ್ಟೋಡಮ್ ನೆನೆವುದೆನ್ನ ಮನಂ ಕರ್ನಾಟಕ ದೇಶಮಂ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails