ಗೆಲಿಲಿಯೋ ತಲೆ ಚೆಚ್ಚಿಕೊಳ್ಳೋದು ಯಾವಾಗ?

ಮೊನ್ನೆ 16ನೇ ತಾರೀಕು ಪ್ರಜಾವಾಣಿಯ ಸಾಪ್ತಾಹಿಕ ಪುರವಣೀಲಿ ಗೆಲಿಲಿಯೋ ಬಗ್ಗೆ ಒಂದು ಸಕ್ಕತ್ತಾಗಿರೋ ಬರಹ ಬಂದಿದೆ. ಗೆಲಿಲಿಯೋ ನಿಜಕ್ಕೂ ಆಧುನಿಕ ವಿಜ್ಞಾನದ ಪಿತಾಮಹನೇ ಗುರು! ಅದೇ ಬರಹ ಹೇಳೋಹಂಗೆ:
ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿದೆ, ಭೂಮಿಯು ಗೋಳಾಕಾರವಾಗಿದೆ ಎಂದು ಕೊಪರ್ನಿಕಸ್ ಮಂಡಿಸಿದ್ದ ವಿಚಾರಕ್ಕೆ ಆ ಕಾಲದ ಪ್ರಬಲ ಧಾರ್ಮಿಕ ವಲಯದಿಂದ ತೀವ್ರ ಪ್ರತಿರೋಧ ಕಂಡುಬಂದಿತ್ತು. ಗೆಲಿಲಿಯೋ ಕೂಡಾ ಮತ್ತೆ ಕೊಪರ್ನಿಕಸ್ ವಿಚಾರಧಾರೆಯನ್ನೇ ಎತ್ತಿ ಹಿಡಿದಾಗ ಇಗರ್ಜಿಗಳ ವಲಯದಿಂದ ಟೀಕಾ ಪ್ರವಾಹ ಹರಿದು ಬರತೊಡಗಿತ್ತು. "ಭೂಮಿಯ ಸುತ್ತ ಸೂರ್ಯ ಸುತ್ತುತ್ತಿದೆ, ಚಪ್ಪಟೆಯಾಗಿರುವ ಭೂಮಿ ನಿಂತಲ್ಲೇ ನಿಂತಿದೆ" ಎಂಬ ಆಗಿನ ಧಾರ್ಮಿಕ ನಂಬಿಕೆಯನ್ನು ಗೆಲಿಲಿಯೋ ಪರಿಣಾಮಕಾರಿಯಾಗಿ ಪ್ರಶ್ನಿಸಿದ್ದರು.

ಗೆಲಿಲಿಯೋ ಬಗ್ಗೆ ಬರೆಯುವಾಗ ಔರು ವಿಜ್ಞಾನಕ್ಕೆ ನೀಡಿದ ಕೊಡುಗೆಯೇನೋ ಆ ಬರಹದಲ್ಲಿ ಚೆನ್ನಾಗಿ ಮೂಡಿಬಂದಿದೆ. ಆದರೆ ಔರು ವಿಜ್ಞಾನಿಗಳಿಗೆ ಕೊಟ್ಟ ಅತಿಮುಖ್ಯವಾದ ಸಂದೇಶ ಬಂದೇ ಇಲ್ಲ ಅನ್ನೋದು ಕನ್ನಡಿಗರ ಕಾಮಾಲೆ ಕಣ್ಣಿಗೆ ಒಂದು ಉದಾಹರಣೆ ಅನ್ನಿಸ್ತಿದೆ ಗುರು! ಏನು ಗೆಲಿಲಿಯೋ ಕೊಟ್ಟ ಸಂದೇಶ?

"ನಾನು ಲ್ಯಾಟಿನ್ ನಲ್ಲಿ ಬರೆಯೋದಿಲ್ಲ, ಇಟಾಲಿಯನ್ ನಲ್ಲೇ ಬರೆಯುತ್ತೇನೆ!"

ಹೌದು, ಆಗಿನ ಕಾಲದ ಯೂರೋಪಲ್ಲೆಲ್ಲಾ ವಿಜ್ಞಾನಿ ಎನಿಸಿಕೊಳ್ಳಬೇಕಾದರೆ ಲ್ಯಾಟಿನ್ ಭಾಷೆಯಲ್ಲೇ ಬರೆಯಬೇಕು, ಓದಬೇಕು ಅನ್ನೋ ವಾಡಿಕೆ ಇತ್ತು ಗುರು! ಲ್ಯಾಟಿನ್ನಲ್ಲಿ ಬರೆಯೋದಿಲ್ಲ, ಓದೋದಿಲ್ಲ ಅಂದ್ರೆ ಪೆದ್ದನನ್ನ ಮಕ್ಕಳು ಅಂತ್ಲೇ ಜನ್ರು ಅಂತಿದ್ದಿದ್ದು! ಆದ್ರೆ ಅವತ್ತಿನ ಯೂರೋಪಲ್ಲಿ ನಿಜವಾಗಲೂ ವಿಜ್ಞಾನ ಅರ್ಥವಾಗಬೇಕಾದ್ರೆ ಅದು ನಮ್ಮ ಭಾಷೇಲೇ ಇರಬೇಕು ಅನ್ನೋದ್ನ ಧೈರ್ಯವಾಗಿ ಹೇಳೋ ಮೀಟ್ರಿದ್ದ ಮೊದಲನೇ ವ್ಯಕ್ತೀನೇ ಗೆಲಿಲಿಯೋ. Galileo, His Life and Work ಅನ್ನೋ ಪುಸ್ತಕದಲ್ಲಿ ಜೋಸೆಫ್ ಫಾಹೀ ಬರೀತಾರೆ -
"I write in Italian," he says, "because I wish every one to be able to read what I say. I see young men brought together indiscriminately to study to become physicians, philosophers, etc., who although furnished, as Ruzzante might say, with a decent set of brains, yet being unable to understand things written in gibberish, assume that in these crabbed folios there must be some grand hocus pocus of logic and philosophy much too high up for them to jump at. I want such people to know that as Nature has given eyes to them just as well as to philosophers for the purpose of seeing her works, so has she given them brains for understanding them."

ಇವತ್ತಿನ ಕರ್ನಾಟಕದಲ್ಲಿ ಇಂಗ್ಲೀಷು ಅವತ್ತಿನ ಲ್ಯಾಟಿನ್ನಿನ ಸ್ಥಾನದಲ್ಲಿದೆ, ಅಷ್ಟೆ. ಯೋಗ್ಯತೆಯಿದ್ರೂ ಕನ್ನಡಿಗರು ವಿಜ್ಞಾನ ಅಂದ್ರೆ ಅದೇನೋ ಮಾಟ-ಮಂತ್ರ ಅಂತ್ಲೇ ಅನ್ಕೊಂಡಿರೋದು ಗುರು! ವಿಜ್ಞಾನವನ್ನೂ ಬಾಯಿಪಾಠ ಮಾಡಿ (ಉರು ಹೊಡೆದು) ತಮ್ಮ ತಲೆಮೇಲೆ ತಾವೇ ಚಪ್ಪಡಿ ಕಲ್ಲು ಎಳ್ಕೊಳೋ ಪದ್ದತಿ ಇನ್ನೂ ಕನ್ನಡದ ಮಕ್ಕಳ್ನ ಕಾಡ್ತಾ ಇದೆ. ಇದಕ್ಕೆ ಮೂಲ ಕಾರಣ ನಮ್ಮದಲ್ಲದ ಭಾಷೇಲಿ ನಮ್ಮ ಸುತ್ತಮುತ್ತಲ ಪ್ರಕೃತೀನ ಅರ್ಥ ಮಾಡ್ಕೊಳಕ್ಕೆ ಹೊರಟಿರೋ ಪೆದ್ದತನ. ಇದನ್ನ ಗೆಲಿಲಿಯೋ ಏನಾದ್ರೂ ನೋಡಿದ್ರೆ ಅಂಡ್ ಬಡ್ಕೊಂಡು ನಗ್ತಿದ್ರು ಗುರು!

ತಿದ್ಕೊಳಕ್ಕೆ ಇನ್ನೂ ಕಾಲ ಮಿಂಚಿಲ್ಲ

ಕನ್ನಡದಲ್ಲೇ ಸರಿಯಾಗಿ ವಿಜ್ಞಾನದ ಕಲಿಕೆ ಸಾಧ್ಯ ಅಂತ ಅರ್ಥ ಮಾಡ್ಕೊಳಕ್ಕೆ ಇನ್ನೂ ಕಾಲ ಮಿಂಚಿಲ್ಲ! ಇನ್ನೂ ಜ್ಞಾನ-ವಿಜ್ಞಾನಗಳ್ನ ಮರ್ಯಾದೆಯಾಗಿ ನಮ್ಮ ಭಾಷೇಲೇ ತರೋ ಪ್ರಯತ್ನ ಸರಿಯಾಗಿ ಮಾಡಬಹುದು, ತರಬಹುದು. ಇಲ್ದಿದ್ರೆ ನಾವು ಕನ್ನಡಿಗ್ರು ತಲೆಕೆಳಗೆ ನಿಂತ್ರೂ ವಿಜ್ಞಾನ "ಮಾಟ-ಮಂತ್ರ" ಅನ್ಕೊಳೋದು ನಿಲ್ಲಲ್ಲ. ಕನ್ನಡಾನೇ ವಿಜ್ಞಾನದ ಕಲಿಕೆಗೆ ಕನ್ನಡಿಗರಿಗೆ ಸರಿಯಾದ ಸಾಧನ ಅಂತ ಅರ್ಥ ಮಾಡ್ಕೊಳ್ದೇ ಇದ್ರೆ ನಾವು ಅಲ್ಲಿ-ಇಲ್ಲಿ ಅಮೇರಿಕದೋರಿಗೋ ಯೂರೋಪಿನೋರಿಗೋ ತ್ಯಾಪೆ ಕೆಲಸ ಮಾಡಿಕೊಟ್ಟು ಚೂರು-ಪಾರು ದುಡ್ಡಿಂದ ತೃಪ್ತಿ ಪಡೋದೇ ಶಾಶ್ವತವಾಗೋಗತ್ತೆ ಗುರು! ಹಿಂಗೇ ಮುಂದುವರೆದರೆ ಬರೀ ಗೆಲಿಲಿಯೋ ಹಂಗೆ ಹಿಂಗೇಂತ್ಲೇ ಬರ್ಕೊಂಡಿರಬೇಕಾಗತ್ತೆ ಹೊರತು ನಮ್ಮ ಮಣ್ಣಲ್ಲಿ ಸತ್ತರೂ ಅಂಥ ಯೋಗ್ಯತೆಯಿರೋ ವಿಜ್ಞಾನಿಗಳು ಹುಟ್ಟಲ್ಲ!

7 ಅನಿಸಿಕೆಗಳು:

Anonymous ಅಂತಾರೆ...

Subject: Namma hosa airport ge Visweswaraya navara hesaru beku

Guru,

ninne ninna vishweswarayya navara posting noDidaaga gnapaka aaytu, ninna mundina posting gaLalli yaake munde aagodara baggenu bari bardu anta. udaharaNege aa devanahaLLi airport ge yavando sambandha ildale irovna hesru (rajiv gandhi, or some gandi) iDo badlu, namma kannaDigane aada, kannaDigara hemme, karnatakakke soulaBhya gaLannu odagisikoTTantaha, nammellara mechchina Sir. MV avara hesaru iDbeku anta ondu sketchu aaku guru ..

Yavando hesru itre namagellarigu tumba bejaar aagatte ..

Nidhi

Anonymous ಅಂತಾರೆ...

ಏನ್ ಗುರು ಅವರೆ,

ಗೆಲೆಲಿಯೋ “ನಾನು ಇಟಾಲಿಯನ್ ನಲ್ಲೇ ಬರೀತೀನಿ. ಲ್ಯಾಟಿನ್ ನಲ್ಲಿ ಬರೆಯಲ್ಲ” ಅಂತಂದಾಗ ಅಂದಿನ ಜನ ಮೂಗು ಮುರಿದಿದ್ದಿರಬಹುದು! ಆದರೆ ಗೆಲೆಲಿಯೋನಂತ ಸ್ವಾಭಿಮಾನಿಗಳಿದ್ದದ್ದರಿಂದಲೇ ಇಟಲಿ ದೇಶ ಮುಂದುವರೆಯಲು ಸಹಾಯವಾಗಿರಬೇಕು. ಆದ್ದರಿಂದ, ನಿಮ್ಮ ಬಗ್ಗೆ ಜನ ಟೀಕೆ ಮಾಡಿದ್ರು ಪರ್ವಾಗಿಲ್ಲ. ನಿಮ್ಮ ಕೆಲಸ ಮುಂದುವರೆಸಿ. ಇನ್ನು ೨೦೦, ೩೦೦ ವರ್ಷಗಳ ನಂತರ ಕನ್ನಡದೇಶ ಉದ್ದಾರವಾದರೆ ಖಂಡಿತಾ ನಿಮ್ಮ ಶ್ರಮ ಸಾರ್ಥಕವಾಗಿರುತ್ತೆ.

:ಗುರುಬಸಪ್ಪ ಮುದ್ಗಲ್

Anonymous ಅಂತಾರೆ...

sharaNu gurugaLe,,
super aagi bardidira,, idu yellarannu muTTabeku,, innashTu prachara maaDi,

dinakke yenilla andru 5000 jana odo haag aagbeku,, aagale nimma praythnakke ondu force sigodu.

naavu nimmaondigiddeve.

Anonymous ಅಂತಾರೆ...

ಗೆಲಿಲಿಯೋನಂತಹ ಸ್ವಾಭಿಮಾನಿಗಳೆಷ್ಟಿದ್ದಾರೆ ನಮ್ಮಲ್ಲಿ? ಹಿರಿಯ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರು ಕನ್ನಡದಲ್ಲೇ ಮಕ್ಕಳಿಗೆ ಪಾಠ ಮಾಡಿ ಅಂತಾರೆ. ತಾವು ಹೇಳಿದಂತೆ ನಡೆದುಕೊಳ್ಳಲು ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡದಲ್ಲಿ ವಿಜ್ಞಾನವನ್ನ ಮಕ್ಕಳಿಗೆ ಹೇಳಿ ಕೊಡುತ್ತಾರೆ. ಅಂಥವರ ಸಂಖ್ಯೆ ಹೆಚ್ಚಬೇಕು.

ಧಾರ್ಮಿಕ ಗ್ರಂಥಗಳು ಮತ್ತು ಆಚರಣೆಗಳು ಸಂಸ್ಕೃತಲ್ಲೇ ಇರಲಿ ಅನ್ನುವ ಸಮಯದಲ್ಲಿ ೮೦೦ ವರ್ಷಗಳ ಹಿಂದೆ ನಮ್ಮ ಶರಣರು ಜನರಿಗೆ ತಿಳಿಯುವಂತೆ ಕನ್ನಡದಲ್ಲೇ ವಚನಗಳನ್ನ ಬರೆದು ವೈಚಾರಿಕ ಮತ್ತು ಸಾಂಸ್ಕೃತಿಕ ಗುಲಾಮಗಿರಿತನವನ್ನ ಕಿತ್ತು ಹಾಕಿದ ಹಾಗೆ ನಾವು ಇಂಗ್ಲೀಷ್ ಗುಲಾಮಗಿರಿತನದಿಂದ ಹೊರಬರಬೇಕಾಗಿದೆ.

Anonymous ಅಂತಾರೆ...

"ಧಾರ್ಮಿಕ ಗ್ರಂಥಗಳು ಮತ್ತು ಆಚರಣೆಗಳು ಸಂಸ್ಕೃತಲ್ಲೇ ಇರಲಿ ಅನ್ನುವ ಸಮಯದಲ್ಲಿ ೮೦೦ ವರ್ಷಗಳ ಹಿಂದೆ ನಮ್ಮ ಶರಣರು ಜನರಿಗೆ ತಿಳಿಯುವಂತೆ ಕನ್ನಡದಲ್ಲೇ ವಚನಗಳನ್ನ ಬರೆದು ವೈಚಾರಿಕ ಮತ್ತು ಸಾಂಸ್ಕೃತಿಕ ಗುಲಾಮಗಿರಿತನವನ್ನ ಕಿತ್ತು ಹಾಕಿದ ಹಾಗೆ ನಾವು ಇಂಗ್ಲೀಷ್ ಗುಲಾಮಗಿರಿತನದಿಂದ ಹೊರಬರಬೇಕಾಗಿದೆ"

ee kannaDa, telugu, Hindi, Sanskrit modalaadavugaLella 'a family of languages'. aaddarinda ee gumpina bhaashegaLannu naavu namma bhaasheya udhaarakke upayogisidare tappenilla..indigoo..endendigoo..

Anonymous ಅಂತಾರೆ...

ತಲೆಹರಟೆ,

ಕನ್ನಡ ಮತ್ತು ತೆಲುಗು = ಭಾಷಾ ಕುಟುಂಬ "ದ".
ಹಿಂದಿ ಮತ್ತು ಸಂಸ್ಕೃತ = ಭಾಷಾ ಕುಟುಂಬ "ಆ"

ದ != ಆ.

ಅರ್ಥವಾಯಿತೆ?

ಎಲ್ಲವೂ ಒಂದೇ ಭಾಷಾಕುಟುಂಬ ಎಂದು ಕರೆಯುವ ಮುನ್ನ ಸ್ವಲ್ಪ ಸಂಶೋಧನೆ ಮಾಡಿ ಸ್ವಾಮಿ. ಕನ್ನಡಕ್ಕೂ ತೆಲುಗಿಗೂ ನಂಟಿದೆ, ಆದರೆ ಕನ್ನಡಕ್ಕೂ ಸಂಸ್ಕೃತಕ್ಕೂ ಯಾವ ಭಾಷಾವೈಜ್ಞಾನಿಕ ನಂಟೂ ಇಲ್ಲ.

ತಲೆಹರಟೆ!

Anonymous ಅಂತಾರೆ...

ತಲೆಹರಟೆಯವರೆ...

ನೀವು ಅರಿಯದೇ ಏನೇನೋ ಹೇಳಬೇಡಿರಿ. ಮೊದಲು ನಿಮಗೆ ನುಡಿಕುಟುಂಬ ಅದ್ರೇನು? ಅದನ್ನು ಹೇಗೆ ಮಾಡ್ತಾರೆ ಅಂತ ತುಸು ತಿಳಿದುಕೊಳ್ಳಿರಿ.

ನಿಮ್ಮ ಹೇಳಿಕೆಯಿಂದ ನಿಮಗೆ ಕನ್ನಡ-ಸಂಸ್ಕೃತ(ಆಳವಾಗಿ) ಎರಡು ಸರಿಯಾಗಿ ಗೊತ್ತಿಲ್ಲ ಅಂತ ನನಗೆ ಅನ್ನಿಸಿದೆ. ಸುಮ್ಮನೆ ಯಾರದೋ ಮಾತಿಗೆ ನೀವು ಇಲ್ಲಿ ಬಾಯಿಯಾಗಿದ್ದೀರಿ.

ನಮ್ಮ ಇಂಡಿಯದೇಶದಲ್ಲಿ ಒಟ್ಟು ಐದು ನುಡಿಕುಟುಂಬಗಳಿವೆ. ಅದರಲ್ಲಿ ಮುಖ್ಯವಾದವು ಎರಡು.
೧)ಇಂಡೋ-ಆರ್ಯನ್/ಇಂಡೋ-ಇರಾನಿಯನ್/ಇಂಡೋ-ಯುರೋಪಿಯನ್.. ( ಸಂಸ್ಕೃತ, ಪಾರಸಿ, ಉರ್ದು, ಹಿಂದಿ, ಸಿಂಧಿ, ಆಫಗಾನಿ, ಮರಾಠಿ, ಗುಜರಾತಿ, ಖರ್ದ್.. )
೨) ದ್ರಾವಿಡಿಯನ್ ನುಡಿಗಳು.. ಕನ್ನಡ, ತಮಿಳು,ತೆಲುಗು, ಮಳಯಾಳಿ, ತುಳು, ಕೊಡವ, ಬಡಗ, ಇರುಳ, ತೊದ, ಹೊಲಿಯ, ಗೊಂಡ, ಕುವಿ, ಮುಂಡ.. )

ಇಲ್ಲಿ ನೋಡಿ
ದ್ರಾವಿಡ ನುಡಿಗಳು ಬ್ರಿಟಾನಿಕ

ಇವುಗಳ ಬಗ್ಗೆ ಹಲವು ಆಳವಾಗಿ ಹುಡುಕಿ ಇದನ್ನು ಮಾಡಿರುವುದು.

ಶಂಕರಭಟ್ಟರ
೧)ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ
೨)ಕನ್ನಡ ಬರಹವನ್ನು ಸರಿಪಡಿಸೋಣ
ಮುಂತಾದ ಒಳ್ಳೇ ಹೊತ್ತಗೆಗಳನ್ನು ಓದಿರಿ...

ಈ ಹೊತ್ತಗೆಗಳಲ್ಲಿ ಪಂಡಿತರಾದ ಶಂಕರಭಟ್ಟರು ಕನ್ನಡಕ್ಕೆ ಯಾಕೆ ಸಂಸ್ಕೃತವನ್ನು ಬರೆಸಬಾರದು ಎಂದು ಎಳೆಎಳೆಯಾಗಿ ಬಿಡಿಸಿ ಬಿಡಿಸಿ ಹೇಳಿದ್ದಾರೆ.

ನೀವು ಕಾರಣಕೊಡದೇ ಹೊಸ-ತಿಯರಿ, ಇಲ್ಲವೇ ಹಳೆ-ಕುರುಡು-ನಂಬಿಕೆಯನ್ನು ಹೇಳಬೇಡಿ.

ನಿಮ್ಮ ಮಾತಿಗೆ ಏನು ಪುರಾವೆ? ನೀವು ಹೇಗೆ ಕನ್ನಡ ಮತ್ತು ಸಂಸ್ಕೃತ ಒಂದೇ ನುಡಿಕುಟುಂಬದವು ಎಂದು ತೋರಿಸುವಿರಿ?

ದ್ರಾವಿಡ ನುಡಿಕುಟುಂಬದ ಬಗ್ಗೆ ಆ ಬ್ರಿಟಾನಿಯದ ಲಿಂಕು ನೋಡಿರಿ..
ಸಲದೇ ಇದ್ದರೆ...

A comparitive grammar of Dravidian languages by Robert Cadwell.

Grammar of Kannada Langauge by F.Kittel

ಇವನ್ನು ಓದಿರಿ, ಅದರಲ್ಲಿ ತಿಳಿಯಾಗಿ/ಸ್ಪಷ್ಟವಾಗಿ ಕನ್ನಡವು ದ್ರಾವಿಡ ನುಡಿಕುಟುಂಬಕ್ಕೆ ಸೇರಿದ್ದು ಹೇಗೆ ಸಂಸ್ಕೃತದ ಕುಟುಂಬದಲ್ಲಿಲ್ಲ ಎಂದು ಹೇಳಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails