ಐಟಿ: ಆಗದಿರಲಿ ಮನೆಗೆ ಮಾರಿ ಪರರಿಗೆ ಉಪಕಾರಿ

ಇದೇ ತಿಂಗಳ 24ನೇ ತಾರೀಕಿನ "ದಿ ಹಿಂದೂ" ನಲ್ಲಿ ಐಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ಸರಿಪಡಿಸಕ್ಕೆ ಬೆಂಗಳೂರಲ್ಲಿ ನಡೆದ ಒಂದು ಸಮ್ಮೇಳನದ ಬಗ್ಗೆ ಸುದ್ದಿ ಬಂದಿದೆ. ಬೆಂಗಳೂರು ಭಾರತದ ಐಟಿ ರಾಜಧಾನಿಯಾದ್ರೂ ಕೂಡ ಕನ್ನಡೇತರರದೇ ಈ ಕ್ಷೇತ್ರದಲ್ಲಿ ಸಿಂಹಪಾಲಿದೆ ಅಂತ ಆ ಸಮ್ಮೇಳನ ಏರ್ಪಡಿಸಿದೋರು ದುಕ್ಕ ತೋಡ್ಕೊಂಡಿದಾರೆ:
Jobs in the IT industry appear to be dwindling for Kannadigas despite Bangalore being the IT capital of India, according to a group of concerned IT professionals and Kannadigas. At a brainstorming session, organised by the jobsite 'IT Udyoga.com' here on Sunday, the group wanted the corporate world that generates IT and ITES-related jobs to keep Kannadigas in mind during the recruitment drive. Promoter of the jobsite, A.R. Venugopal, said that despite their talent Kannadigas were not being employed in the IT and ITES sector.

ಕರ್ನಾಟಕದಲ್ಲಿ ಕನ್ನಡಿಗರಿಗಾಗೋ ಅನ್ಯಾಯದ ಪಟ್ಟಿ ಮಾಡ್ತಾ ಹೋದ್ರೆ ಒಂದು ಹನುಮಂತನ ಬಾಲ ಬರತ್ತಲ್ಲ, ಅದರಲ್ಲಿ ಇದೂ ಒಂದು ಕೂದಲು ಗುರು! ಬೆಂಗಳೂರು ಭಾರತದ ಐಟಿ ಕೇಂದ್ರ ಅನ್ನೋದರಲ್ಲಿ ಯಾವ ಸಂಶಯ ಇಲ್ಲ. ಆದ್ರೆ ಕನ್ನಡಿಗರು ಯಾಕೆ ಕಡಿಮೆ ಸಂಖ್ಯೆಯಲ್ಲಿದ್ದಾರೆ? ನಮ್ಮಲ್ಲೇನು ಬುದ್ದಿ ಇಲ್ವಾ? ವಿದ್ಯೆ ಇಲ್ವಾ? ನಮ್ಮ ಜಾಗದಲ್ಲಿ ನಮಗೇ ಕೆಲ್ಸ ಸಿಗ್ದೆ ಇದ್ರೆ ನಾವು ಎಲ್ಲಿ ಹೋಗ್ಬೇಕು? ನಮ್ಮ ರಾಜ್ಯದಲ್ಲಿ ಅದೆಷ್ಟು ಒಳ್ಳೊಳ್ಳೆ ಇಂಜಿನಿಯರಿಂಗ್ ಕಾಲೇಜುಗಳಿವೆಯಲ್ಲ, ವಿಶ್ವವಿದ್ಯಾಲಯಗಳಿವೆಯಲ್ಲ? ಆದರೂ ಹೀಗೆ ಯಾಕೆ?

ಐಟಿ ಕ್ಷೇತ್ರದಲ್ಲಿ ಕನ್ನಡೇತರರ ಹಾವಳಿ

ಹೊರ ರಾಜ್ಯದಿಂದ ಬಂದವ್ರು ಅವರವರ ರಾಜ್ಯದ ಜನ್ರನ್ನ ಒಳಗೊಳಗೆ ಕರ್ಸ್ಕೋತಾ ಇದ್ರೆ ನಮ್ಗೆಲ್ಲಿ ಸಿಗುತ್ತೆ ಕೆಲ್ಸ? ಹೀಗ್ ಬಂದವ್ರೆಲ್ಲ ತಮ್ಮ ತಮ್ಮ ಗುಂಪು ಕಟ್ಕೋತಾರೆ, ಅವರವರಿಗೆ ಬೇಕಾದ ಹಾಗೆ ಇರ್ತಾರೆ. ಅವರ ಭಾಷೆ, ಸಂಸ್ಕ್ಟುತೀನ ನಮ್ಮ ಮೇಲೆ ಹೇರ್ತಾರೆ. ಐಟಿ ಕೆಲಸಕ್ಕೆ ಮಾತ್ರ ಅಲ್ಲ, ಬೇರೆ ಕೆಲ್ಸಕ್ಕೂ (ಅಡುಗೆ, ರಕ್ಷಣಾ ಸಿಬ್ಬಂದಿಯಿಂದ ಹಿಡಿದು ನಾಮಕರಣ-ತಿಥಿ ಮಾಡಿಸೋ ಪುರೋಹಿತನ ತನಕ) ತಮ್ಮ ತಮ್ಮ ಜನರನ್ನ ಕರ್ಕೋಂಡು ಬರ್ತಾರೆ. ಎಲ್ಲ ಕೆಲ್ಸದಲ್ಲೂ ನಮಗೇ ತಾನೆ ಮೋಸ ಆಗೋದು?

ಅವರ ಮನರಂಜನೆ ಅಂತ ಅವರ ಭಾಷೆ ಚಿತ್ರಗಳು ಬೇರೆ ಬೇಕು ಅವ್ರಿಗೆ. ಕನ್ನಡನಾಡಲ್ಲಿ ಯಾವುದೇ ಕಂಪನಿ ಶುರು ಆದ್ರೂ ಕನ್ನಡಿಗರಿಗೆ ಬಹುಪಾಲು ಕೆಲ್ಸ ಸಿಗಬೇಕು ಅನ್ನೋದೇ ಧರ್ಮ. ಬೇರೆಬೇರೆಯೋರ್ನ ತಂದು ತುಂಬ್ತೀನಿ ಅನ್ನೋದೇ ಅಧರ್ಮ ಗುರು!

ನಮ್ಮ ರಾಜ್ಯದಲ್ಲಿ ಹೊಟ್ಟೆ ಪಾಡಿಗೆ ಅಂತ ಬರೋರು ಮುಂದೆ ಅವರೇ ಮ್ಯಾನೇಜರುಗಳಾಗಿ ಅವರವರ ಜಾಗಕ್ಕೆ ಹೋಗಿ ಅವರವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನ ಕ್ಯಾಂಪಸ್ನಲ್ಲಿ ಕರ್ಕೊಂಡು ಬರೋಕಾ ನಮ್ಮ ಜಾಗ ಬೇಕು? ತಮಿಳ ತಮಿಳ್ರನ್ನ, ಮಲಯಾಳಿ ಮಲಯಾಳಿಗಳ್ನ, ಹಿಂದಿಯೋನು ಹಿಂದಿಯೋರ್ನ, ಬಂಗಾಳಿ ಬಂಗಾಳಿಗಳ್ನ ತಂದು ಬೆಂಗಳೂರಿಗೆ ತುಂಬಕ್ಕಾ ಬೆಂಗಳೂರಿರೋದು?

ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಲ್ಲೀಗ್ ಹೋಗಬೇಕು ಗುರು? ಬೇರೆ ರಾಜ್ಯದಲ್ಲೆಲ್ಲ ಅವರವರ ಜನಕ್ಕೇ ಆದ್ಯತೆ ಕೊಟ್ಟು ಅಲ್ಲೂ ಇರೋ ಕನ್ನಡಿಗರು ಮೂಲೆಗುಂಪಾಗೋದ್ನ ನೋಡ್ತಾನೇ ಇದೀವಿ (ತಮಿಳ್ನಾಡು ನೆನೆಸಿಕೊಳ್ಳಿ). ಅಲ್ಲಿ ಅವರಿಗಾಗಿ ಮಿಕ್ಕಿದ್ರೆ ಬೇರೆಯವ್ರಿಗೆ ಅಂತಿರೋವಾಗ ನಮ್ಮಲ್ಲ್ಯಾಕೆ ಬೇರೆ ನಿಯಮ?

ಹೀಗಿರುವಾಗ ನಮ್ಮ ಸರ್ಕಾರ ಏನ್ ಮಾಡ್ಬೇಕು?

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯಸರ್ಕಾರದ ಉದ್ಯೋಗಳಿಗಷ್ಟೇ ಅಲ್ಲ, ಖಾಸಗಿ ಕೆಲ್ಸಗಳಲ್ಲೂ ಕನ್ನಡಿಗರಿಗೇ ಆದ್ಯತೆ ಸಿಗ್ಬೇಕು ಅಂತ ಸರ್ಕಾರ ಆದೇಶ ಹೊರಡಿಸೋದಕ್ಕೆ ಹಿಂಜರೀತಿರೋದು ನಮ್ಮ ಉಳಿವಿಗೇ ಕುತ್ತು ತಂದಿದೆ! ಐಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೋಸವಾಗದೆ ಇರೋಹಾಗೆ ಮಾಡೋದು ಸರ್ಕಾರದ ಕರ್ತವ್ಯ ಗುರು! ಇಲ್ಲವೇ (ಕನ್ನಡೇತರರದೇ ದರ್ಬಾರಿರೋ ಐಟಿ ಕಂಪನಿಗಳು ಅಡ್ಡಗೋಡೆಮೇಲೆ ದೀಪ ಇಟ್ಟಂಗೆ ಹೇಳೋಹಾಗೆ) ಕನ್ನಡಿಗರು ಈ ಕೆಲಸಗಳಿಗೆ ನಿಜವಾಗಲೂ ಅರ್ಹರಲ್ಲ ಅನ್ನೋದೇ ಆದರೆ -
  • ಕನ್ನಡಿಗರಿಗೆ ಈ ಕೆಲಸಗಳಿಗೆ ಹೊಂದುವ ಸಾಮರ್ಥ್ಯಗಳು ಇಲ್ಲವೇ ಇಲ್ಲ ಅನ್ನುವ ಬಗ್ಗೆ ಸ್ಪಷ್ಟವಾಗಿ ಅಂಕಿ-ಅಂಶಗಳಿರೋ ಮಾಹಿತಿ ಬಹಿರಂಗ ಮಾಡಲಿ!
  • ಆ ಸಾಮರ್ಥ್ಯಗಳ್ನ ಕನ್ನಡಿಗರು ಬೆಳಸಿಕೊಳ್ಳೋದಕ್ಕೆ ಸರ್ಕಾರ ಏನೇನು ವ್ಯವಸ್ಥೆ ಮಾಡಿದೆ ಅಂತಾನೂ ಬಹಿರಂಗ ಮಾಡಲಿ!
ಇದ್ಯಾವುದನ್ನೂ ಮಾಡದೆ ಐಟಿ ಕ್ಷೇತ್ರಾನ ತನ್ನಪಾಡಿಗೆ ಕಾಡು ಬೆಳೆದಂಗೆ ಬೆಳ್ಕೊಳ್ಳಿ ಅಂತ ಸರ್ಕಾರ ಏನಾದ್ರೂ ಬಿಟ್ರೆ ಆ ಕಾಡಲ್ಲಿ ಕೊಬ್ಬಿ ಕೊಬ್ಬಿ ಬೆಳೆಯೋ ಕನ್ನಡೇತರ ಕಿರುಬಗಳು ನಿಧಾನವಾಗಿ ಕರ್ನಾಟಕವನ್ನ ತಿಂದುಹಾಕತ್ವೆ, ಅಷ್ಟೆ!

ಐಟಿ ಕನ್ನಡಿಗರು ಏನು ಮಾಡಬೇಕು?

ನಮ್ಮ ಗಾಳಿ, ನಮ್ಮ ನೆಲ, ನಮ್ಮ ನೀರು, ನಮ್ಮ ಸಂಸ್ಕೃತಿ ಎಲ್ಲ ಬೇರೆಯವ್ರಿಗೆ ಮಾರ್ಕೊಂಡು ಕೆಲಸಾನೂ ಇಲ್ಲದೆ ಹೊಟ್ಟೆಮೇಲೆ ತಣ್ಣೀರುಬಟ್ಟೆ ಹಾಕ್ಕೊಂಡು ಸುಮ್ನೆ ಕೈಕಟ್ಟಿ ಕೂತ್ಕೊಳಕ್ಕಾಗಲ್ಲ ಗುರು! ಈ ನಿಟ್ನಲ್ಲಿ ಐಟಿ ಕನ್ನಡಿಗರು -
  • ಮೊದಲಾಗಿ ಒಂದಾಗಬೇಕು. ಒಗ್ಗಟ್ಟಲ್ಲೇ ಶಕ್ತಿಯಿರೋದು
  • ಕನ್ನಡಿಗರ ರೆಸ್ಯೂಮ್ಗಳಿಗೆ ಆದ್ಯತೆ ಕೊಡ್ಬೇಕು
  • ಕನ್ನಡಿಗರನ್ನು ಪ್ರತಿಸ್ಪರ್ಧಿ ಅಂತ ನೋಡದೆ ಸಹಕಾರ ಮಾಡಕ್ಕೆ ಮುಂದಾಗಬೇಕು
  • ಒಂದು ಕೆಲಸಕ್ಕೆ ಬೇಕಾದ ಎಲ್ಲ ಅರ್ಹತೆಗಳುಳ್ಳ 2 ಅಭ್ಯರ್ಥಿಗಳಲ್ಲಿ ಒಬ್ಬ ಕನ್ನಡಿಗನಾಗಿದ್ದು ಮತ್ತೊಬ್ಬ ಬೇರೆಭಾಷೆಯವನಾಗಿದ್ದರೆ ಕನ್ನಡಿಗನಿಗೇ ಆದ್ಯತೆ ಕೊಡಕ್ಕೆ ಹಿಂಜರೀಬಾರ್ದು. ಇದು ತಮ್ಮ ಹಕ್ಕು ಅಂತ ಅರ್ಥ ಮಾಡ್ಕೋಬೇಕು.
  • ಕಾಲೇಜಿಂದ ಈಗಷ್ಟೆ ಪಾಸಾಗಿ ಬರೋ ಕನ್ನಡದ ವಿದ್ಯಾರ್ಥಿಗಳಿಗೆ ಈಗಾಗಲೇ ಕೆಲಸದಲ್ಲಿರೋರು ಮಾರ್ಗದರ್ಶನ ಮಾಡ್ಬೇಕು. ಇಂಟರ್ವ್ಯೂ ಹೇಗೆ ಕೊಡ್ಬೇಕು ಅನ್ನೋದನ್ನ ಹೇಳ್ಕೊಡ್ಬೇಕು.
  • ಕನ್ನಡೇತರ ಸಹೋದ್ಯೋಗಿಗಳಿಗೆ ನಮ್ಮಲ್ಲಿ ಒಂದಾಗಿ ಬಾಳ್ಬೇಕು, ನಮ್ಮ ರಾಜ್ಯದ ಎಲ್ಲ ಸೌಕರ್ಯ ಉಪಯೋಗಿಸ್ತಿರೋರು ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ನಿಜವಾದ ಕಾಳಜಿ ಮೂಡಿಸಿಕೊಳ್ಳುವಂತೆ ಮಾಡ್ಬೇಕು, ಇಲ್ದೇ ಹೋದ್ರೆ ಉಂಡಮನೆಗೆ ಎರಡು ಬಗೆದಂಗಾಗತ್ತೆ ಅಂತ ಅರ್ಥ ಮಾಡಿಸಬೇಕು

14 ಅನಿಸಿಕೆಗಳು:

Anonymous ಅಂತಾರೆ...

Huh Huh hoooooo. I'm happy happy happy.

Idu ondu adbutha kannadigara blog,Munche kooda kelavu blogs iddavu but avella nintuhogive, youtube video page nalli e blogna link siktu.

Neevu e blog annu continue madidhre timbha khushi agutte.

Anonymous ಅಂತಾರೆ...

Nimma seperate postgalige seperate title (sheershike?) illa ,neevu kelage iruva code annu use maduvudarinda ee samasye sariyaga bahudu.All the best.

<title> ಏನ್ ಗುರು | ಬನವಾಸಿ ಬಳಗ </title>

da badalu kelagina code annu paste madi.

-------------------------

<Blogger>
<MainPage>
<title>ಏನ್ ಗುರು | ಬನವಾಸಿ ಬಳಗ |EN GURU | BANAVASI BALAGA </title>
</MainPage>

<ArchivePage>
<title>
Posted @ <$BlogPageTitle$>
</title>
</ArchivePage>

<ItemPage>
<BlogItemTitle>
<title>
<$BlogItemTitle$> @ ಏನ್ ಗುರು | ಬನವಾಸಿ ಬಳಗ </title>
</BlogItemTitle>
</ItemPage>
</Blogger>
------------------

Vishe.soo:
settings >> archiving nalli
Enable post pages ge yes kottideerallave..?

Anonymous ಅಂತಾರೆ...

ನೆರೆ ಹೊರೆ ರಾಜ್ಯಗಳಲ್ಲಿ ಅವರವರ ಜನಕ್ಕೇ ಆಧ್ಯತೆ ಕೊಡುವುದು ನನ್ನ ಸ್ವಂತ ಅನುಭವಕ್ಕೆ ಬಂದಿದೆ. ನನ್ನ ಮೊದಲ ಕೆಲಸ ಚೆನ್ನೈನಲ್ಲಿ. ಅಲ್ಲಿ ಇದ್ದುದು ೯೦% ಅಲ್ಲಿಯವರೆ, ಇನ್ನು ೧೦% ಅಥವ ಅದಕ್ಕಿಂತ ಕಮ್ಮಿ ಹೊರಗಿನವರು ಇದ್ದಿರಬಹುದು. ಅಲ್ಲಿನ ಜನ ನಮ್ಮನ್ನು ಅಲ್ಲಿಂದ ಓಡಿಸಬೇಕೆಂದೇ ಪಣ ತೊಟ್ಟವರಂತೆ ಆಡುತ್ತಿದ್ದರು. ಎಲ್ಲಾ ಮೀಟಿಂಗುಗಳಲ್ಲಿ ನಾವು ಇದ್ದರು ತಮಿಳಿನಲ್ಲೇ ಮಾತನಾಡುತ್ತಿದ್ದರು. ತಂತ್ರಗ್ನ್ಯಾನಕ್ಕೆ ಸಂಭಂದಿಸಿದ, ಕೆಲಸಕ್ಕೆ ಸಂಭಂದಿಸಿದ ವಿಷಯಗಳನ್ನು ಸಹ ತಮಿಳಿನಲ್ಲೆ ಸಮಾಲೋಚನೆ ಮಾಡುತ್ತಿದ್ದರು.

ಮತ್ತೊಬ್ಬ ತಮಿಳು ಸಹೋದ್ಯೋಗಿ ನನ್ನ ಹತ್ತಿರ ಹೇಳಿದ್ದು ಹೀಗೆ. ’ಇಲ್ಲಿ ಇಷ್ಟೊಂದು ಇಂಜಿನೀಯರಿಂಗ್ ಕಾಲೇಜುಗಳಿದ್ದರೂ ಹೊರಗಿನಿಂದ ನಿಮ್ಮನ್ನು ಯಾಕೆ ಕರೆ ತರುತ್ತಾರೋ ಏನೊ’.

ಅದೇ ಬೆಂಗಳೂರಿನ ಕಂಪನಿಯಲ್ಲಿ ಇದಕ್ಕಿಂತ ಭಿನ್ನ. ಅಲ್ಲಿ ಮೇನೇಜರುಗಳು, ಡೈರೆಕ್ಟರ್ ಗಳು ಎಲ್ಲ ತಮಿಳು, ಮಲಯಾಳಿ . ತಮಿಳಿನವನು ಅಣ್ಣಾ ವಿಶ್ವವಿದ್ಯಾನಿಲಯದಿಂದ ಇಂದ freshers ಕರೆತರುತ್ತಾನೆ, ಮಲಯಾಳಿ ಕಾಲಿಕಟ್ ಇಂದ ತರ್ತಾನೆ :-(
ನಮ್ಮವರು ಮೇನೇಜರುಗಳು ಇಲ್ಲವೆಂದೇನಲ್ಲ ಇದ್ದರು ಅವರವರ ಕಾಲೇಜುಗಳಿಗೆ campus recruitment ಕಳಿಸುವುದಿಲ್ಲ. ಇನ್ನಾದರು ನಮ್ಮ ಮೇನೇಜರುಗಳು ಜವಾಬ್ದಾರಿ ಕಲಿತುಕೊಳ್ಳುತ್ತಾರ ನೋಡಬೇಕು.

ಬನವಾಸಿ ಬಳಗ ಅಂತಾರೆ...

ಲೋಕೇಶ್ ಅವರೆ, ನಿಮ್ಮ ಕಾಳಜಿಗಾಗಿ ಧನ್ಯವಾದಗಳು.

ನಮ್ಮ header ಅನ್ನು ನಿಮ್ಮ ಅಂತರ್ಜಾಲ ತಾಣದಿಂದ ನಿಮಗೆ ಕಳುಹಿಸಿದ್ದೇನೆ (ಇಲ್ಲಿ ಹಾಕುವುದಕ್ಕೆ ಬ್ಲಾಗರ್ ಬಿಡುತ್ತಲೇ ಇಲ್ಲ, Your HTML cannot be accepted: PHP, ASP, and other server-side scripting is not allowed. ಎನ್ನ್ನುತ್ತಿದೆ).

ನಮ್ಮದು "new blogger" ಅನ್ನಿಸುತ್ತದೆ. ನಮ್ಮ header ಅನ್ನು ಹೇಗೆ ಬದಲಾಯಿಸಬೇಕು? ನೀವು ಕೊಟ್ಟ ಕೋಡು ಕೆಲಸ ಮಾಡಲಿಲ್ಲ.

ಹೌದು, Enable post pages ಗೆ yes ಅಂದಿದೆ.

ನಾವು ನೋಡುತ್ತಿರುವುದೇನೆಂದರೆ - ಶೀರ್ಷಿಕೆ ಕನ್ನಡದಲ್ಲಿದ್ದರೆ ಮಾತ್ರ /blog-post_27.html ಮುಂತಾದ ವಿಳಾಸಗಳು ಬರುವುದು. ಇಂಗ್ಲೀಷಿನ ಶೀರ್ಷಿಕೆಯಿದ್ದರೆ ಸರಿಯಾದ ವಿಳಾಸಗಳು ಬರುತ್ತವೆ.

Amarnath Shivashankar ಅಂತಾರೆ...

namm kannaDigarge obbara kaalu obru eLyakke time sigta illa, neev bere kelsa koDsli, resume forward maDLi antteralla swamy.
naan noDiro bahupaalu kannaDIgaru sumne resume kaLsi antare.noDIda mele nimma profile namma team/company ge match agta illa.nan friends ge idanna forward maDteeni, loTTe,losku aMta bogLe biDtaare.
chikka udaaharaNe: Nange kelsada avashyakathe tuMbane ittu..aga nan sutta-mutta iddavru elru sumne resume kaLsu, adu idu andru.oba nan maga kooDa kelsa koDsakke praamaNikavaagi sahaya maDLilla..
kannaDigariMda mattobba kannaDiganige sahaayavaagiruvudu bahaLa kaDime..adre naavu namma haLe company nalli sumaaru 20 jana kannaDIgarannu tuMbidevu(total strength of 50)
sahaaya maaDadiruvudakke halavaaru kaaraNagaLirahabudu:
--sahaaya maDo sthithiyalli avru ilde irodu
--sahaya maaDI namgen sigatte annovru
--ivnu beLedbiTre nan gati enu annovru
heege halavaaru reetiya jana.
ee tara nooraaru baravaNigegaLu namma janara buddi aMtu badlaagalla.
kannaDaaMbeye kapaDabeku intavranna..

Unknown ಅಂತಾರೆ...

Chennai nalli yaake guru??nanage b'lore anlle ada ondu incidence helthini keli.

Naanu Build and release engineer,So deployement goskara bere comapny sutthadbeku.
Heegagi naanu omme Covansys anno company ge hode.Ellru tamil naali maathadtha iddare.Sudden shock aythu nanage.Enappa idu naanu tamilu naadalli iddino??karnataka dalli iddino annodu thiliyode kasta aythu.
deployement ge naanu mathhe nanna collegue hogiddu.Naavu kannada dalli maathadodu nodu ellru eno ondu thara nodtha idru(istella agiddu bangalore nalle).Konege obba kannadiga bandu,sir neevu kannadodadoraa nimmanu nodi khushi aythu(naanirodu Bangalore nalli).Nodi entha paristhithi...

Anonymous ಅಂತಾರೆ...

ella company galallu ide goLu. security, catering, admin ella areagaLalli non kannadigas tumbiddare. yaake? ille b.com b.a odi kelsa ilde iro jana ilava? english sariyagi maatadoke barde iro kongs, gults, mallus hege karkombandu kelsa kodatare? yake andre kannadada jana idannella nodolla. avanige avanaytu, avana kelsa aytu ashte. ade jaati mele raajakiya madtare, bhashe mele madolla. ivarella omme madras sutkondu bandre gottagutte , eshtu daddaragiddivi anta. innadaru lets put an end to this migration menace

Ragavendra ಅಂತಾರೆ...

Why Kannadigas don't get job in s/w espesially as freshers?

1) Companies ask for 70%+ percentage which our VTU is stingy @ giving.


What can be done?
1) Govt. shud introduce passport for different states like in US. Visas shud be given based on criteria.
2) Depending on the number of graduate passouts that much of vacancies shud be given by all the companies if not that company must not be permitted in the state.

Shreyas Raghavendra ಅಂತಾರೆ...

ಕರ್ನಾಟಕಕ್ಕೆ ಇದೊ೦ದು ದೊಡ್ದ ಶಾಪ. ಎಲ್ಲಿ ನೋಡಿದ್ರು ತಮಿಳರು,ಗುಳ್ಟರು, ಮಳಯಾಳಿ, ಬೆ೦ಗಾಲಿ, ಹಿ೦ದಿ... ಈ ಕಳ್ಳ ಸೂಳೆ ಮಕ್ಳು!!!! ನಾನು ಬೆ೦ಗಾಲಲ್ಲಿ ವ್ಯಾಸಾ೦ಗ ಮಾಡ್ತಾಯಿದ್ದಿನಿ ಗುರು. ಇಲ್ಲಿ ನಮ್ಮದೆ ಕನ್ನಡ ಬಳಗ ಮಾಡ್ಕೊ೦ಡು ಒಗ್ಗಟ್ಟಾಗಿದ್ದಿವಿ. ಆದ್ರೆ ನಮ್ಮ ಊರಲ್ಲಿ ನಮಗೆ ಆಧ್ಯತೆ ಸಿಗದೆ ಪರದೇಶಿಗಳಿಗೆ ಸಿಗೊದು ನನ್ನ ರಕ್ತ ಕುದಿಸ್ತದೆ. ಐ.ಟಿ. ತ೦ತ್ರಜ್ನಾನಿಕ ಕ್ಷೇತ್ರದಲ್ಲೊ೦ದು ಒ೦ದು ದೊಡ್ಡ ಸಾಧನೆ ಭಾರತದಲ್ಲದಕ್ಕೆ ಒ೦ದು ಪ್ರಾಮುಖ್ಯತೆ ಸಿಕ್ಕಿದ್ದು, ಭಾರತೀಯ ಜ್ನಾನ ಸ೦ಪನ್ಮೂಲವನ್ನು ಬಳಸಿಕೊಳ್ಳಲು ಒ೦ದು ಮಹದಾವಕಾಶ. ಅದು ಬೆ೦ಗಳೂರಿಗೆ ಈ ಅವಕಾಶ ಸಿಕ್ಕಿದ್ದು ಬಹು ಸ೦ತಸದ ಸುದ್ದಿ.ಆದ್ರೆ ತನಗೆ ನೆಲ ಜಲ ಕೊಟ್ಟು ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟ ಕರುನಾಡಿಗೆ ಈ ರ೦ಗದವರು ಮಾಡಿದ್ದಾದರು ಏನು? ಇವರ ಬಳವಣಿಗೆಗೆ ,ಪರದೆಶರ ಸ೦ಚಾರಕ್ಕೆ ಹೊಸ ಹೊಸ ಯೋಜನೆಗಳು, ಫ್ಲೈ ಓವರ್ಗಳು, ಗ್ರೇಡ್ ಸಪರೇಟರ್ಗಳು, ಬೃಹತ್ ಕಟ್ಟಡ ನಿರ್ಮಾಣಕ್ಕೆ ನಮ್ಮ ನೆಲ. ಇದೇನು ಅನ್ಯಾಯ ಗುರು? ನಮ್ಮ ರಾಜಧಾನಿ ಬೆ೦ಗಳೂರಿಗೆ A1 status ಕೊಡುವುಕ್ಕೆ ತಡ. ರೈಲು ಯೊಜನೆಗಳಲ್ಲಿ ತಡ. ಕೇ೦ದ್ರ ಬೆ೦ಗಳೂರಿಗೆ ಬ೦ದರೆ ರಾಜಕಾರಣಿಗಳು ಹಿ೦ದಿಯಲ್ಲಿ ಬಾಷಣ.icse ಹಾಗು cbse ಮಾಧ್ಯಮ ಶಾಲೆಗಳಲ್ಲಿ ಕನ್ನಡ ಓದಿಸಲು ಅವಕಾಶವಿದ್ದರು ಕನ್ನಡ ಶಿಕ್ಷಣಕ್ಕೆ ನಕಾರ. ಬೆ೦ಗಳೂರಲ್ಲಿ ಒಳ್ಳೆ ತಾ೦ತ್ರಿಕ ವಿದ್ಯಲಯಗಳು ಇಲ್ಲವೆ ಎ೦ಬ ಪ್ರಶ್ನೆಗೆ "ಇಲ್ಲ" ಎ೦ದೆ ಉತ್ತರ ಹೆಳ್ಬೇಕು.ಐ.ಐ.ಟಿ.[ ಭಾರತೀಯ ತಾ೦ತ್ರಿಕ ವಿಶ್ವಿದ್ಯಾಲಯ ] ದ ಕನಸು ಕನಸಾಗೆ ಉಳಿದು ಹೋಯಿತು. ಇತ್ತೀಚೆಗೆ ಹೊಸ ಐ.ಐ.ಟಿ ಗಳ ನಿರ್ಮಾಣ ಯೋಜನೆಯಲ್ಲಿ ಕರ್ನಾಟಕ ಸರ್ಕಾರದ ನಿರ್ಲಕ್ಷದಿ೦ದ ದಕ್ಷಿಣ ಭಾರತಕ್ಕೆ ಅ೦ತ ಯೋಚಿಸಿದ ಐ.ಐ.ಟಿ ಹೈದರಾಬಾದಿನ ಪಾಲಾಯ್ತು.ಎಶ್ಟೋ ಕನ್ನಡಿಗರ ತಮ್ಮ ನೆಲದಲ್ಲೇ ಐ.ಐ.ಟಿ ಯ೦ಥ ದೊಡ್ಡ ಸ೦ಸ್ತಾನದಲ್ಲಿ ಓದುವ ಕನಸು ನುಚ್ಚು ನೂರಾಯ್ತು. ಸಾಮಾನ್ಯ ಕಾಲೇಜುಗಳಲ್ಲಿ ಶುಲ್ಕ ಗಗನಕ್ಕೇರಿವೆ. ಬೇರೆ ರಾಜ್ಯದಿ೦ದ ಬ೦ದ ಆಸಾಮಿಗಳು ಇಲ್ಲಿ ನೆಲೆ ಮಾಡಿ ದುಡ್ಡು ಗಳಿಸಿ ತಮ್ಮ ಮಕ್ಕಳಿಗೆ ಹೆಚ್ಚು ದುಡ್ಡು ಖರ್ಚು ಮಾಡಿ engg.ಮತ್ತು medical ಸೀಟುಗಳನ್ನು ತೊಗೊತಾರೆ. ನಮ್ಮ ಬಡ ಕನಡಿಗರು ಸಿ.ಈ.ಟಿಯನ್ನೇ ನ೦ಬಿಕೊ೦ಡು ಇರೊ ದು:ಸ್ಥಿಥಿ. ಹೀಗೆ ಭಾರತದಲ್ಲಿ ಎಲ್ಲಾ ಕಡೆ ಸಾಮಾನ್ಯ ಸಮಸ್ಯೆಗಳಿದ್ದರೆ ಕರ್ನಾಟಕದಲ್ಲಿ ಕನ್ನಡಿಗರ ವಾಸಕ್ಕೆ ಕನ್ನಡ ಏಳ್ಗೆಗೆ ಸಮಸ್ಯೆ! ಇದಕ್ಕೆ ಒ೦ದೆ ಮಾರ್ಗ ಗೊಕಾಕ್ ನ೦ಥ ಅತಿ ದೊಡ್ಡ ಪ್ರಮಾಣದಲ್ಲಿ ಚಳವಳಿ ಗುರು.!

Anonymous ಅಂತಾರೆ...

Dayavittu ee kondiyanna nodi. 27ne tarikhina Star of Mysore nalli ondu suddi. (RARE KIND OF DASARA TOURISTS) Tamilnadina bhikshukaru mysorege dasaradalli bhikshe beduvadakke bandiddare. Yaake avarige alli bhikshe huttuvudillave?

http://www.starofmysore.com/main.asp?type=news

Anonymous ಅಂತಾರೆ...

para rajyada bikshukara ondu jaalave ide. Bengalurinalli onondu SIGNAL ge kacchikondu bhikshe madta irodhu iga sarve samanya. Ramzan time antha, thumba areas nalli beggars hecchidarre,ivarannu gadi paaru madbeku. matte bandre JAIL nalli hakthivvi antha hedarisabeku.

Unknown ಅಂತಾರೆ...

eega IT industryli kannadigara meley nadithairo dourjanya nenasikondrey thumbaa bejaar agutthey,aadrey idaralli kannadigara paalu idey annuvudu katu sathya .
Kannadigaru naavu thumba liberal minded antha thorskollodralli yettida kai, kannadigara resume fwd madidrey berey avru yen andkotharo yeno annuva Goju.
naanu bengloornalli khelsa maadthiddaga ondu incident , alli idda HR mostly north indians and some whites, naanu ivra hatra hogi naanu odidha eng. college gey campus interviewgey hogi antha lobby madidey , aaga avra uttara .. the locals are not aggressive and enthusiastic crowd , they are not good in english antha .idaanna keli nungey thumba kopa bandu higherups gey escalate madidey ,even though they finally agreed to go to my college for campus int., adu kaatachara mattu allu baaree north indiansney yelkondbandru , aadrey these guys go to some unkown colleges in unknown places in UP, haryana !! idu numma kathey ,north indians good in english !!.. my foot .., avru nettagey ondu full sentence english nalli mathadakkey barella . namma agressive buddi throsidrey ivrella wapas avra drought/floods prone oorigey hogbekaguttey !!
idekella parihara, naavu kannadigaru higher posts nalli jaasthi aagbeku haagu lobby maadbeku .. idu sadhyavey ??

nunna kanglishannu kshamisi

Inthi
Sudhi

Nirch... ಅಂತಾರೆ...

Geleya Sudhi
Nimma bharahavannu hoodide...
Nimma Baraha namma IT janara kannannu teresabeku..
Naavu nammatanavannu bittukodabaaradu..
Nimage danyavadagalu...

Anonymous ಅಂತಾರೆ...

ನಿಮ್ಮ ಲೇಖನಗಳು ಉತ್ತಮವಾಗಿರುತ್ತದೆ. ಇದನ್ನೇ ಮು೦ದುವರಿಸಿ. ಜೈ ಕರ್ನಾಟಕ ಮಾತೆ!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails