ಆಸ್ಕರ್ ಪ್ರಶಸ್ತಿಯ ಸ್ಪರ್ಧೇಲಿ ಭಾಗವಹಿಸೋದಕ್ಕೆ ಭಾರತದಿಂದ ಮತ್ತೊಮ್ಮೆ ಒಂದು ಹಿಂದಿ ಚಿತ್ರ "ಆಯ್ಕೆ" ಆಗಿದೆ ಅಂತ 26ನೇ ತಾರೀಕಿನ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾಡಿದೆ. ಅಲ್ಲ - ಭಾರತದಿಂದ ಒಂದು ಚಿತ್ರ ಹೋಗಬೇಕಾದ್ರೆ ಅದು ಹಿಂದೀಲೇ ಇರಬೇಕು ಅಂತ ಏನಾದ್ರೂ ನಿಯಮ ಇದ್ಯಾ? ಭಾರತದ ಬೇರೆ ಎಲ್ಲಾ ಭಾಷೆಗಳ ಚಿತ್ರಗಳಿಗೆ ಏನೂ ಬೆಲೆ ಇಲ್ಲವಾ? ಕನ್ನಡದ ಯಾವ ಚಿತ್ರವನ್ನ ಈ "ಆಯ್ಕೆ" ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿದ್ರು ಅಂತ ಈ "ಆಯ್ಕೆ" ಮಾಡಿದ ತಂಡಕ್ಕೆ ಕೇಳೋರು ಯಾರೂ ಇಲ್ಲವಾ?
ಒಂದು ವರ್ಷಕ್ಕೆ ಭಾರತದಲ್ಲಿ ಹೆಚ್ಚು-ಕಡಿಮೆ 800 ಚಿತ್ರಗಳು ತೆರೆ ಕಾಣತ್ವೆ, ಅದ್ರಲ್ಲಿ ಹಿಂದಿ ಚಿತ್ರಗಳು ಬರೀ 200 ಮಾತ್ರ. ಮಿಕ್ಕ 600 ರಲ್ಲಿ ಕನ್ನಡವೂ ಸೇರಿದಂತೆ 5 ಭಾಷೆಗಳ ಚಿತ್ರಗಳಿರತ್ವೆ. ಇದು ಭಾರತದ ಭಾಷಾ ವಿವಿಧತೆಗೆ ಒಂದು ಉದಾಹರಣೇನೇ ಸರಿ. ಹೀಗಿರುವಾಗ ಬರೀ ಹಿಂದಿ ಭಾಷೆಯ ಚಿತ್ರಗಳನ್ನೇ ಆಯ್ಕೆ ಮಾಡಿ ಕಳಿಸೋದು ಯಾವ ನ್ಯಾಯ ಗುರು? ಈ ದೇಶ ಭಾಷಾವಾರು ರಾಜ್ಯಗಳ ಒಕ್ಕೂಟ ಆಗಿರುವಾಗ ಎಲ್ಲ ಭಾಷೆಗಳಿಗೂ ಸಮಾನ ಹಕ್ಕಿರಬೇಕೋ ಬೇಡವೋ? ಆಸ್ಕರ್ ಅಂತಾ ಜಾಗಕ್ಕೆ ಭಾರತದಿಂದ ಒಂದು ಚಿತ್ರ ಅಂತ ಕಳಿಸಬೇಕಾದ್ರೆ ಎಲ್ಲಾ ಮುಖ್ಯ ಚಿತ್ರ-ನಿರ್ಮಾಣ ಮಾಡೋ ಭಾಷೆಗಳ ಚಿತ್ರಗಳ್ನ ಗಣನೆಗೆ ತೊಗೊಂಡು ಅವುಗಳಲ್ಲಿ ಎಲ್ಲಾದಕ್ಕಿಂತ ಸಕ್ಕತ್ತಾಗಿರೋದನ್ನ ಆಯ್ಕೆ ಮಾಡಿ ಕಳಿಸಬೇಕು ಅನ್ನೋದು ನ್ಯಾಯ. ಆದ್ರೆ ನಿಜವಾಗಲೂ ಭಾರತದಲ್ಲಿ ನಡಿಯೋದು ಏನು ಅಂತ ಈ ಘಟನೆ ಹೇಳತ್ತೆ, ಅಷ್ಟೆ.
ಇವತ್ತು ಹಿಂದಿ ಹೇರಿಕೆಯಿಂದ ಭಾರತವನ್ನ ಪ್ರತಿನಿಧಿಸಕ್ಕೆ ಹಿಂದೀನೇ ಆಗಬೇಕು ಅಂತ ಎಲ್ಲರನ್ನೂ ಮೋಡಿ ಮಾಡಿ ನಂಬಿಸಿಬಿಟ್ಟಿರುವಾಗ, ನಮ್ಮ ಬ್ಯಾಂಕುಗಳಲ್ಲೇ ಕನ್ನಡ ಕಸಕ್ಕಿಂತ ಕಡೆಯಾಗಿರುವಾಗ, ದೈನಂದಿನ ವ್ಯವಹಾರಕ್ಕೂ ಹಿಂದಿ ಗೆದ್ದಿಲು ಲಗ್ಗೆ ಇಟ್ಟಿರುವಾಗ ಇನ್ನು ಆಸ್ಕರ್-ಗೆ ಕನ್ನಡದ ಚಿತ್ರ ಹೋಗಕ್ಕೆ ಎಲ್ಲಿ ಸಾಧ್ಯ ಗುರು? ಕನ್ನಡದ ಚಿತ್ರರಂಗ ಎಷ್ಟು ಚೆನ್ನಾಗಿದ್ದರೇನು, ಇಲ್ದಿದ್ರೇನು? ಭಾರತದಲ್ಲಿ ಹಿಂದಿ ಬರೆದೇ ಹೋದರೆ ಕಲಿಯೋ ವರೆಗೆ ಕನ್ನಡಿಗ ಎರಡನೇ ದರ್ಜೆಯೋನೇ ಗುರು! ನಮ್ಮ ಅಣ್ಣೋರು-ಗಿಣ್ಣೋರು ಎಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಇಲ್ಲಿ! ಇದು ಕಟು ಸತ್ಯ! ಈ ಕಟುಸತ್ಯವನ್ನ ವಿರೋಧಿಸದೆ ಬೇರೆ ದಾರಿಯೇ ಇಲ್ಲ. ಈ ಕಟುಸತ್ಯವನ್ನ ನಿರ್ನಾಮ ಮಾಡದೆ ಕರ್ನಾಟಕದ ಏಳ್ಗೆಯಿಲ್ಲ, ಕನ್ನಡಿಗ ಸ್ವಾಭಿಮಾನದ ಬದುಕು ಬದುಕಕ್ಕಾಗಲ್ಲ ಗುರು! ಹಿಂದಿ ಹೇರಿಕೆಗೆ ಒಂದು ಪೈಸಾನೂ ಸೊಪ್ಪು ಹಾಕಬಾರದು ಗುರು!

7 ಅನಿಸಿಕೆಗಳು:
Howdu, neevu heliddu sariyagide.Nimmadu layouts na blog hagiruvudarinda naanu ninne kalisida code use madalikkaguvudilla.
http://widget-based.blogspot.com/2006/11/changing-blogger-title-tag.html nalli tumba olleya code ittu adannu layouts nalli use madabahudu.Naanu test madiddene it works.
<title> ......</title> ge badalu kelagina code annu paste maadi.
Mattu template >> edit html >>nalli Expand Widget Templates ge tick maduvudannu mareyabedi.
<!-- Start Widget-based: Changing the Blogger Title Tag -- > <b:if cond='data:blog.pageType == "item"'>
<b:section id='titleTag'>
<b:widget id='Blog2' locked='false' title='Blog Posts' type='Blog'>
<b:includable id='comments' var='post'/>
<b:includable id='postQuickEdit' var='post'/>
<b:includable id='main' var='top'>
<title>
<b:loop values='data:posts' var='post'>
<b:include data='post' name='post'/>
</b:loop> @ <data:blog.title/>
</title>
</b:includable>
<b:includable id='backlinkDeleteIcon' var='backlink'/>
<b:includable id='feedLinksBody' var='links'/>
<b:includable id='backlinks' var='post'/>
<b:includable id='status-message'/>
<b:includable id='feedLinks'/>
<b:includable id='nextprev'/>
<b:includable id='commentDeleteIcon' var='comment'/>
<b:includable id='post' var='post'>
<data:post.title/>
</b:includable>
</b:widget>
</b:section>
<b:else/>
<title>
<data:blog.pageTitle/>
</title>
</b:if>
<!-- End Widget-based: Changing the Blogger Title Tag -->
Modalu englishalli post title publish maadi aamele kannadada title haakidare,nimma title kooda badalaagutadde.
kshamisi nimma post na url change madodakke naanu,ee salahe heliddu,miss agi title antha bandu bittide.
Houdri GurugaLe, nam kannaDana moole kasa maadkonDidaare ee mandi. bhaarataambege naavu malataayi makkaLe emba anumaana kanri..
tamil nadu navaru ee vishayadallu lobby madbeku. Tamil chitragaLannoo oscar ge nominate maaDi anta. haage Telugu haago malayaaLam kooDa.
nam kannaDa kke haage maaDalaaguvudilla. yaakandre illi praadeshika pakshagaLilla nodi..
swamigaLe,
oscar ge ee sala hindi...adre kaLeda baariyella yavdo maLayaLam, adakke hindina baari bengali, heege ella bhaaShegaLu hogatte
kannaDa ondu biTTu...
kittogiro Hindi cinemagaLna kaLsi nam deshada maryaade kaLitaare, baDDetavu
Kannada film industry is worth 300 crores, telugu > 1500 cores.. then tamil.. then Hindi. So money is ruling the decision on sending movies to Oscar.
If at all they select, they select movies which is more of documentary and which no one would have heard. If you want to send Kannada film to Oscar, then watch Kannda movie. Neevu Kannada film nodlilla andre, Multiplex ninda kelage ildu, Kannada cinema tent nalli nodbekagatte..
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!