ಕೇಂದ್ರದ ಕೈಲಿರೋ ಬ್ರಹ್ಮಾಸ್ತ್ರ: "ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ"

ಕಳೆದ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಎರಡು ಘಟನೆಗಳು ಇಡೀ ಭಾರತದ ಗಮನ ಸೆಳೆದಿದೆ. ಮೊದಲನೇದು ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆಯೋರು ನಡೆಸಿದ ದಾಳಿ. ಎರಡನೇದು ಕೇರಳದ ಶಾಸಕರ ಮಗಳು ಮತ್ತವಳ ಗೆಳೆಯನ ಮೇಲೆ ಮಂಗಳೂರಿನಲ್ಲಾದ ಹಲ್ಲೆ ಪ್ರಕರಣ. ಈ ಎರಡು ಪ್ರಕರಣದ ಬಗೆಗಿನ ಚರ್ಚೆಗಿಂತಲೂ, ಈ ಪ್ರಕರಣಗಳ ಬಗ್ಗೆ ಹೊರಹೊಮ್ಮಿರೋ ರಾಜಕೀಯ ಪ್ರತಿಕ್ರಿಯೆಗಳು ನಮ್ಮ ಸರಿಯಿಲ್ಲದ ವ್ಯವಸ್ಥೆ ಬಗ್ಗೆ ಬೆರಳುಮಾಡ್ತಿವೆ ಗುರು!

ಕಾನೂನು ವ್ಯವಸ್ಥೆ ಕುಸಿದಿದೆ ಎಂಬ ಅಸ್ತ್ರ!

ಕೇಂದ್ರದ ಸಚಿವ ಸ್ಥಾನದಲ್ಲಿರೋ ರೇಣುಕಾ ಚೌಧರಿ ಎಂಬಾಕೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎನ್ನುತ್ತಿದ್ದಾರೆ. ಒಂದು ಊರಿನಲ್ಲಿ ನಡೆದ ಒಂದು ಘಟನೆಯಿಂದ ಇಡೀ ವ್ಯವಸ್ಥೆಯೇ ಕುಸಿದು ಬಿದ್ದಿದೆಯೆನ್ನುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣವಿರಲಿ, ಇಂತಹಾ ಹೇಳಿಕೆ ಕೊಟ್ಟು ಕೇಂದ್ರಸರ್ಕಾರ, ರಾಜ್ಯಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಅನ್ನುವುದೇ ಆತಂಕದ ಸಂಗತಿ. ಒಟ್ನಲ್ಲಿ ನಮ್ಮ ನಾಡಿನ ಕಾನೂನು ಸುವ್ಯವಸ್ಥೆಯ ಹೊಣೆ ಯಾರದು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನದ 243ನೇ ಕಲಮ್ಮಿನ ಅನ್ವಯ ಕಾನೂನು ಸುವ್ಯವಸ್ಥೆ ಅನ್ನೋದು ರಾಜ್ಯದ ಹೊಣೆಗಾರಿಕೆ ಪಟ್ಟಿಯಲ್ಲಿದೆ. ಹಾಗಾದ್ರೆ ಇದರ ಬಗ್ಗೆ ಕೇಂದ್ರ ಸಚಿವೆ ಯಾಕೆ ಮಾತಾಡ್ತಿದಾರೆ? ಯಾಕಪ್ಪಾ ಅಂದ್ರೆ ಭಾರತ ಸಂವಿಧಾನ ಕಾನೂನು ಸುವ್ಯವಸ್ಥೆ ಕೆಟ್ಟಿರೋ ರಾಜ್ಯ ಸರ್ಕಾರಾನಾ ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಸ್ಥಾಪಿಸಕ್ಕೆ ಕೇಂದ್ರಸರ್ಕಾರಕ್ಕೆ ಅವಕಾಶ ಮಾಡಿಕೊಡುವ 356 ಅನ್ನೋ ಇನ್ನೊಂದು ಕಲಮ್ಮನ್ನೂ ಹೊಂದಿದೆ. ಇದರಂತೆ ರಾಜ್ಯಗಳಲ್ಲಿ ದಂಗೆಯಂತಹ ಸನ್ನಿವೇಶ ಹುಟ್ಕೊಂಡರೆ ಕೇಂದ್ರ ನೇರವಾಗಿ ತನ್ನ ಆಳ್ವಿಕೆಯನ್ನು ಹೇರಬಹುದು. ಆದರೆ ನಿಜವಾಗ್ಲೂ ಯಾವ್ಯಾವಾಗ ಇದು ಬಳಕೆಯಾಗಿದೆ ಅನ್ನೋದು ನೋಡುದ್ರೆ ಇದು ತನ್ನ ಉದ್ದೇಶಿತ ಕಾರ್ಯಕ್ಕೆ ಬಳಕೆ ಆಗೋಕಿಂತಾ ರಾಜಕೀಯದಾಟದ ಪಗಡೆಯಾಗಿ ಬಳಕೆಯಾಗಿರೋದೇ ಹೆಚ್ಚಾಗಿದೆಯೇನೋ ಅನ್ನಿಸುವಂತಿದೆ. 1950ರಲ್ಲಿ ಭಾರತೀಯ ಸಂವಿಧಾನ ರೂಪುಗೊಂಡಾಗಿನಿಂದ ಈ ರೀತಿ ನೂರಕ್ಕೂ ಹೆಚ್ಚುಬಾರಿ ರಾಜ್ಯಸರ್ಕಾರಗಳನ್ನು ವಜಾ ಮಾಡಲಾಗಿದೆ. ಈ ವಜಾಗಳಲ್ಲಿ ಕಡಿಮೆ ಅಂದ್ರೆ ಇಪ್ಪತ್ತು ಸಲ ಈ ಕಲಮ್ಮಿನ ದುರ್ಬಳಕೆ ಆಗಿದೆ ಅನ್ನುತ್ತಿದೆ ದಿ ಹಿಂದೂ ಪತ್ರಿಕೆಯ ಒಂದು ಸಮೀಕ್ಷಾ ವರದಿ.

ಬಾಯಿ ಸತ್ತಿರೋ ಸರ್ಕಾರ!

ಕರ್ನಾಟಕ ರಾಜ್ಯಸರ್ಕಾರ ಅನ್ನೋದು ಕನ್ನಡನಾಡಿನ ಜನರ ಸರ್ಕಾರ. ಇದು ಇಂಥಾ ಸಮಯದಲ್ಲಿ ಕರ್ನಾಟಕದ ನಿಲುವನ್ನು ಗಟ್ಟಿಯಾಗಿ ಪ್ರತಿಪಾದುಸ್ಬೇಕಿತ್ತು. ಕೇಂದ್ರಸರ್ಕಾರದ ಒಬ್ಬ ಮಂತ್ರಿ ಕೊಡ್ತಿರೋ ಹೇಳಿಕೆಗೆ ಬದಲಾಗಿ " ’ಲಾ ಅಂಡ್ ಆರ್ಡರ್’ ರಾಜ್ಯಗಳ ವ್ಯಾಪ್ತಿಗೆ ಬರೋ ವಿಷ್ಯಾ. ಇದರಲ್ಲಿ ತಾವು ತಲೆ ತೂರ್ಸೋ ಅಗತ್ಯವಿಲ್ಲ, ಇಷ್ಟಕ್ಕೂ ನಿಭಾಯಿಸಲು ಆಗದಂಥಾ ಪರಿಸ್ಥಿತಿ ಇಲ್ಲೇನು ಇಲ್ಲಾ... ಅಂಥಾ ಸನ್ನಿವೇಶ ಬಂದ್ರೆ ನಾವೇ ಕೇಂದ್ರದ ಸಹಾಯ ಕೇಳ್ತೀವಿ" ಅನ್ನೋದಷ್ಟೇ ಅಲ್ಲದೆ ರಾಜ್ಯಗಳ ಜೊತೆ ಕೇಂದ್ರದ ಸಂಬಂಧಗಳು ಹೇಗಿರಬೇಕು ಅನ್ನೋದ್ರ ಬಗ್ಗೆ ಚರ್ಚೆಗೆ ಮೊದಲಾಗಬೇಕಾಗಿದೆ...ಗುರು! ಹಿಂದೆ ಸರ್ಕಾರಿಯಾ ಕಮಿಷನ್ ಅವ್ರು ನೀಡಿರೋ ವರದಿಯನ್ನು ಜಾರಿಗೆ ತನ್ನಿ ಅಂತ ಕೋರ್ಟುಗಳು ಛೀಮಾರಿ ಹಾಕಿದ ನಂತರವೂ, ಇವತ್ತಿನ ತನಕ ಏನೂ ಆಗಿಲ್ಲದೆ ಇರೋ ಬಗ್ಗೆ ದನಿ ಎತ್ತಬಹುದಿತ್ತು. ಆ ಮೂಲಕ ರಾಜ್ಯಸರ್ಕಾರಗಳನ್ನು ಕೇಂದ್ರ ಗೊಂಬೆಯಂತಾಡಿಸಿ, ವಜಾ ಎನ್ನೋ ಗುಮ್ಮ ತೋರಿಸೋದ್ನ ನಿಲ್ಸಕ್ ಒಂದು ಪ್ರಯತ್ನ ಮಾಡಬೇಕಾಗಿತ್ತು ಅಲ್ವಾ ಗುರು?

6 ಅನಿಸಿಕೆಗಳು:

Anonymous ಅಂತಾರೆ...

ಕೇರಳದ ಶಾಸಕರ ಮಗಳಿಗೆ ಯಾರೋ ದುರುಳರು ಕಪಾಳಕ್ಕೆ ಹೊಡೆದ ಕಾರಣಕ್ಕೆ ಅಲ್ಲಿನ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯಸರ್ಕಾರಾನ ಹಿಗ್ಗಮುಗ್ಗಾ ಝಾಡುಸ್ತಿದ್ದ ದೃಶ್ಯ ಟಿ.ವಿಯಲ್ಲಿ ಪ್ರಸಾರ ಆಗ್ತಿತ್ತು ಗುರು. ಆ ವ್ಯಕ್ತೀನೂ ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ ಅಂತಾ ಬಡಬಡುಸ್ತಿದ್ರು. ನಿಜವಾಗ್ಲೂ ಯಾವ ರಾಜ್ಯದಲ್ಲಿ ವ್ಯವಸ್ಥೆ ಕುಸಿದಿದೆ ಅನ್ನೋದು ಇವತ್ತಿನ ದಿನಪತ್ರಿಕೆಗಳಲ್ಲಿ ರಾರಾಜಿಸುತ್ತಾ ಇದೆ. ಬೆಂಗಳೂರು ಸ್ಪೋಟದ ಸಂಚು ನಡೆದದ್ದು ಕೇರಳದಲ್ಲಿ, ಬೆಂಗಳೂರಿನಲ್ಲಿ ಸ್ಪೋಟ ನಡೆಸಿದ್ದು ಕೇರಳದ ಜನರು ಅನ್ನೋ ಸುದ್ದಿ ನೋಡಾದ್ರೂ ನಮ್ಮ ರಾಜ್ಯ ಸರ್ಕಾರದವ್ರು ನಮಗೆ ಬುದ್ಧಿ ಹೇಳಕ್ ಬಂದಿರೋ ಕೇರಳದ ಮುಖ್ಯಮಂತ್ರಿಗಳ ಮುಖದಲ್ಲಿ ನೀರಿಳಿಸಕ್ ಆಗಲ್ವಾ ಗುರು! ಭಯೋತ್ಪಾದಕರ ಆಶ್ರಯಧಾಮ, ಭಯೋತ್ಪಾದನಾ ಸಂಘಟನೆಗಳ ತವರು ಕೇರಳವಾಗಿದೆ ಅನ್ನೋ ವರದಿಗಳನ್ನು ಅವರ ಮುಖಕ್ ಹಿಡ್ದು ’ನಿಮ್ಮ ಮನೇನ ಮೊದಲು ಸರಿ ಮಾಡ್ಕೋ ಹೋಗ್ರೀ ಅನ್ನಕ್ಕಾಗಲ್ವಾ? ಕನ್ನಡದವರನ್ನು ಆಕ್ರಮಣಕಾರರು, ಕನ್ನಡನಾಡನ್ನು ಕಾನೂನು ಸುವ್ಯವಸ್ಥೆ ಇಲ್ಲದ ಅರಾಜಕ ನಾಡು ಅಂತಾ ಪ್ರಚಾರ ಮಾಡೋರು ಕೇರಳವಾದರೇನು? ಕೇಂದ್ರ ಸರ್ಕಾರವಾದರೇನು? ಅಂತಾ ಝಾಡಿಸೋ ಅಷ್ಟು ಸ್ವಾಭಿಮಾನ ನಮ್ಮ ಸರ್ಕಾರಕ್ಕೆ ಬೇಗ ಬರ್ಲಿ.

ಕನ್ನಡಿಗ

Unknown ಅಂತಾರೆ...

yaaru yeene helidru..., namma mane kusu namge mukya alva guru.., sarkaravannu aike maado jana naavu.., mele kootiro sarkaara namde aagirovaaga, sarkaarana taratege tagondre nammane berlu madida haage alva???

mangaloorina pub daali sari alla., oppikolbahudu.., aadre adanne raajyada tondare antha bimbisodu yestu sari? belagge yeddu dina patrike nodidare pubgaladde chitra, nammalli kaaduttiruva yesto tondaregalige kone illa.., adara bagge maatanaadada patrikeyavaru pubannu hidkondu kootidaralla..., heege aadre nammannu bottu maadi torisodu kaasta alla guru...., nammanu naave adikondante alva guru????

Anonymous ಅಂತಾರೆ...

ಕರವೇ ಬಗ್ಗೆ ಈ ಟಿವಿ ನಿರೂಪಕಿ ಬರೆದಿದ್ದು ನೋಡಿ..ಈಕೆಗೆ ಏನೆನ್ನಬೇಕು
http://ibnlive.in.com/blogs/sagarikaghose/223/53147/panties-and-perverts.html

-ವೇಣು

Anonymous ಅಂತಾರೆ...

ವೇಣು ಅವರೇ ,
CNN IBN Live ಇರಲಿ ... ನಮ್ಮ 'ಕಾಸ್ಮೋ ' ಕನ್ನಡಿಗರದೇ ಆದ ಈ ಬ್ಲಾಗ್ ನಲ್ಲಿ ನೋಡಿ , ಕನ್ನಡಿಗರನ್ನ,, ಡಾ ರಾಜ್ ನ , ಕ ರ ವೇ ನ ಹೇಗೆ ತಮ್ಮ ಕಾಮಾಲೆ ನೋಟದ ಬಣ್ಣ ಹಚ್ಚಿದ್ದಾರೆ ನೋಡಿ :

http://en.wordpress.com/tag/karnataka-rakshana-vedike/

ಒಂದು ಬರಹದಲ್ಲಿ ಕ ರ ವೇ ಏನೇನ್ ಒಳ್ಳೆ ಕೆಲಸ ಮಾಡ್ತಾ ಇದೆ ಅಂತ ಉದಾಹರಣೆ ಕೊಟ್ರೆ ನನ್ನ ಪ್ರತಿಕ್ರಿಯೆ ನೆ ತುಂಡರಿಸೋದ ... ಎಂಥ ವಿಪರ್ಯಾಸ ಅಲ್ವಾ... ? ನಮ್ಮವರೇ ನಮ್ಮ ಬಗ್ಗೆ ಬಯಾಸ್ ಆಗೋದು ಎಷ್ಟು ಹೀನಾಯ ಪ್ರವೃತ್ತಿ ?... ನಿಜವಾಗಲೂ ಇಂತಹ ಮೀರ್ ಸಾದಿಕರಿಂದನೆ ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಈ ಸ್ಥಿತಿ.... ತು ಇವರ ಜನ್ಮಕ್ಕೆ ಬೆಂಕಿ ಹಾಕ ....

ಕ್ಲಾನ್ಗೊರೌಸ್

Anonymous ಅಂತಾರೆ...

one more glaring example of what enguru is referring to -undue interference of central govt in "law and order" - a state subject.

http://www.rediff.com/news/2009/feb/12ensure-safe-v-day-chidambaram-to-karnataka-govt.htm

Anonymous ಅಂತಾರೆ...

After the muthalik incident, KARNATAKA na TALIBAN TALIBAN anta prati dina kendra sarkara oumana madta bandide. Idannu hige bitre Kannadigarige ketta hesaru barodu khandita.

Muthalik & co. na matta hako badlu iDee karnataka ne Taliban antidaralla.. Kannadigaru enu shandaru ankodidara? English media ge, Kendra sarkarakke echcharike kodabakagide.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails