ನಾಡಿನ ಒಗ್ಗಟ್ಟು ಮುರಿಯುವ ತುಷ್ಟೀಕರಣ ನಿಲ್ಲಲಿ!

ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ತೆರವಾಗಿದ್ದ ಐದು ಸ್ಥಾನಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಕೊಳ್ಳೇಗಾಲದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಕೊಳ್ಳೇಗಾಲದಲ್ಲಿ ವಿವಿಧ ತಮಿಳು ಸಂಘದ ಪ್ರತಿನಿಧಿಗಳು ಅಲ್ಲಿನ ತಮಿಳು ಭಾಷಿಕರನ್ನು ಬಿಜೆಪಿಗೆ ಬೆಂಬಲಿಸಿ ಮತನೀಡುವಂತೆ ಮನವೊಲಿಸುತ್ತಿದ್ದ ಬಗ್ಗೆ ಒಂದು ವರದಿ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ್ದರಿಂದ ಸಂತುಷ್ಟಗೊಂಡ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ ತಮಿಳು ಸಂಘಗಳ ಪ್ರಮುಖರು ಇಲ್ಲಿಗೆ ಬಂದು ಬಿಜೆಪಿಯ ಪರವಾಗಿ ಮತ ಬೇಡಿದ್ದಲ್ಲದೆ, ಸಂಬಂಧಿಗಳಿಂದ ಬಿಜೆಪಿಗೆ ಮತಹಾಕುವಂತೆ ಶಿಫಾರಸ್ಸು ಮಾಡಿದರು ಅನ್ನುತ್ತಿದೆ ಈ ವರದಿ.

ವಲಸಿಗರನ್ನು ಪ್ರತ್ಯೇಕಿಸುವ ಮತ ರಾಜಕಾರಣ!

ಒಂದು ನಾಡಿನಲ್ಲಿ ನೆರೆ ರಾಜ್ಯಗಳಿಂದ, ಹೊರನಾಡುಗಳಿಂದ ಜನತೆ ವಲಸೆ ಬಂದು ಬದುಕುವುದು ಸಹಜವಾಗಿದ್ದು, ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಕಾಲಾನಂತರ ಬೆರೆತು ಆಯಾ ನಾಡಿಗರೇ ಆಗುವುದು ಸಹಜ. ಆದರೆ ಇಂತಹ ವಲಸಿಗರನ್ನು ಮತಗಳಿಕೆಯ ಉದ್ದೇಶದಿಂದ, ಮುಖ್ಯವಾಹಿನಿಯಿಂದ ಹೊರಗಿಟ್ಟು ಪ್ರತ್ಯೇಕತೆಯ ಬೀಜ ಬಿತ್ತಿ ತುಷ್ಟೀಕರಿಸುವ ಕೆಲಸಕ್ಕೆ ನಾಡಿನ ರಾಜಕೀಯ ಪಕ್ಷಗಳು ಕೈ ಹಾಕುತ್ತಿರುವುದು ಸರಿಯಲ್ಲ. ಜನರನ್ನು ಒಡೆದು ಆಳುವ ಇಂತಹ ಕ್ರಮಗಳು ನಮ್ಮ ನಾಡಿನ ಏಳಿಗೆಗೆ, ನಾಡಿಗರ ಒಗ್ಗಟ್ಟಿಗೆ ಮಾರಕವಾಗಿದೆ ಗುರು!

4 ಅನಿಸಿಕೆಗಳು:

ಚೇತನ್ ಅಂತಾರೆ...

ನಿಜ ಗುರು. ನೀವು ಹೇಳಿರುವುದು ಸರಿಯಾಗಿದೆ.
ಹಿಂದೆ ಬ್ರಿಟಷರು ಮಾಡುತ್ತಿದ್ದ ಕೆಲಸವನ್ನು ಈ ಬಿ ಜೆ ಪಿ ಸರಕಾರ ಮಾಡುತ್ತಿದೆ. ಹಾಗು ತಾನು ಮಾಡುತ್ತಿರುವ ಕೆಲಸವನ್ನು ಯಾವುದೆ ನಾಚಿಕೆ ಇಲ್ಲದೆ ಸಮರ್ಥಿಸಿಕೊಳ್ಳುತ್ತಿದೆ. ೩೦-೪೦ ವರ್ಷದಿಂದ ಕರ್ನಾಟಕದಲ್ಲೆ ಇದ್ದು ಕನ್ನಡಿಗರಾಗಿ ಹೋಗಿರುವ ತಮಿಳು ಭಾಶಿಕರನ್ನು, ಮುಖ್ಯ ವಾಹಿನಿಯಿಂದ ವಿಮುಖಿಸುತ್ತಿರುವುದು ಈ ಸರಕಾರದ ಸಾಧನೆ.
ಈ ಕೀಳು ರಾಜಕೀಯನ್ನು ಹೊರಗೆಳೆದ ಕರವೇಯ ಕಾರ್ಯಕರ್ತರಿಗೆ ಪೋಲಿಸಿರಿಂದ ಹೊಡೆಸಿದ್ದು ಇದೇ ಸರಕಾರ.
ನಿಜಕ್ಕೆ ಬಿ ಜೆ ಪಿ ಸರಕಾರ ಬರೋದಕ್ಕೆ ಓಟು ಹಾಕಿದ್ದ ನನ್ನ ಅನೇಕ ಸ್ನೇಹಿತರು ಇವಾಗ ಪರಿತಪಿಸುತ್ತಿದ್ದಾರೆ.
ಕರವೇಯಂತಹ ಒಂದು ಪ್ರಾದೇಶಿಕ ಪಕ್ಷ ನಮ್ಮ ರಾಜ್ಯದ ಅತಿ ಅವಶ್ಯಕಗಳಲ್ಲೊಂದು. ಕರವೇ ಆದಷ್ಟು ಬೇಗ ರಾಜಕೀಯ ಪಕ್ಷವಾಗಲಿ. ನನ್ನಂತಹ ಕೋಟ್ಯಾಂತರ ಕನ್ನಡಿಗರ ಹಾರೈಕೆ ಸಹ ಇದೇ ಆಗಿದೆ.

ಇಂತಿ
ಚೇತನ್

ಮಹೇಶ್ ಅಂತಾರೆ...

ತಮಿಳು ಸ೦ಘಗಳು ತೋಳಿಗೆ ಬಲ ತು೦ಬಿ ಹಲಸೂರನ್ನು ವಳ್ಳುವರ್ ನಗರ ಮಾಡಿ ತಮಿಳು ಮತಗಳನ್ನು ಎಣಿಸಿ ಕನ್ನಡಿಗರಿಗೆ ತಮ್ಮ ನಾಡಿನಲ್ಲೇ ಇನ್ಸೆಕ್ಯೂರಿಟಿ ತ೦ದೊಡ್ದಿದ್ದಾರೆ ಬಿ.ಜೆ.ಪಿ.

ಹಲಸೂರಲ್ಲಿ ಯಾರಾನಾ ಕನ್ನಡಿಗರು ಸೈಟ್ ತೊಗೊಳ್ಳಲಿ ದಮ್ ಇದ್ರೆ. ಇನ್ಮು೦ದೆ ಆಗಲ್ಲ!!!! ಥ್ಯಾ೦ಕ್ಸ್ ಟು ಯಡ್ಡಿ ಅ೦ಡ್ ಕೊ. ಇ೦ದಿರಾನಗರ ಬಿ.ಡಿ.ಎ ಕಾ೦ಪ್ಲೆಕ್ಸ್ ನಲ್ಲಿ ತಮಿಳು ಮಾತಾಡೋದು ಕಾಮನ್ ಆಗಿಹೋಗಿದೆ. ನನ್ನನ್ನು ತಮಿಳಿನಲ್ಲಿ ಮಾತನಾಡಿಸಿದವ ಕನ್ನಡಿಗನೇ ಎ೦ದು ಆಮೇಲೆ ತಿಳಿಯಿತು. ಛೇ.!!!!!

ಬೆ೦ಗಳೂರು ಎಲ್ಲರಿಗೂ ಸೇರಿದ್ದು ಅನ್ನೋ ರಾಗ ಇನ್ಮು೦ದೆ ಹಾಡ್ತಾರೆ ಅನ್ಸತ್ತೆ. ಮು೦ಬೈ ಜೊತೆ ಬೆ೦ಗಳೂರನ್ನೂ ಯೂನಿಯನ್ ಟೆರಿಟರಿ ಮಾಡಿದ್ರೂ ಮಾಡಬಹುದು ಅನ್ನೊ ಭಯ ಕಾಡ್ತಿದೆ.

Priyank ಅಂತಾರೆ...

ಗೋವಿಂದರಾಜನಗರದಲ್ಲಿ ಕನ್ನಡಿಗ ಮತಗಾರ ಸರಿಯಾಗಿ ಗೂಸಾ ಕೊಟ್ಟಿದಾನೆ ಬಿಜೆಪಿಗೆ.
ಇದರಿಂದನಾದ್ರೂ ಸ್ವಲ್ಪ ಕಲೀಬೇಕು ಬಿಜೆಪಿ.

Harsha ಅಂತಾರೆ...

voting is our basic right but just by voting nothing is going to change we need to bring our voice in public or infront of officials only then we may expect some change, so friends let there be unity among our selves for all these concerns to fight/revolt together.. :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails