"e - ಆಡಳಿತ" ಅಂದ್ರೆ ಇಂಗ್ಲೀಶ್ ಆಡಳಿತಾನಾ?

- ವಿಕ್ರಮ್ ಹೆಗ್ಡೆ, ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವೀಧರರು




E-governance ಅಥವಾ E- ಆಡಳಿತದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿದೆ ಅಲ್ವ? ಏನು ಈ ಇ- ಗವರ್ನೆನ್ಸ್ ಅಂದರೆ? ಸಾಮಾನ್ಯವಾಗಿ ಎಲ್ಲರೂ ಇದನ್ನ electronic governance ಅಂತ ವಿಸ್ತರಿಸಿ, ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ದೊರಕಿಸುವುದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಅಳವಡಿಸಿರುವ ಪರಿ ನೋಡಿದ್ರೆ ಬೇರೇನೇ ಅಭಿಪ್ರಾಯ ಬರಬಹುದು. ಇ-ಗವರ್ನೆನ್ಸ್ ನ ವಿಸ್ತಾರ ರೂಪ English governance ಇದ್ದಿರಬಹುದೇನೋ ಎಂದೆನಿಸುತ್ತೆ. ಕುಶಾಲಿಗಲ್ಲ! ಅಂಕಿ ಅಂಶಗಳ ಸಹಿತ ವಿವರಿಸುತ್ತೇನೆ ನೋಡಿ.

ಕರ್ನಾಟಕದ ತಾಣಗಳ ಹಣೆಬರಹ!

ಇಲ್ಲಿ ನೋಡಿ. ಇದರಲ್ಲಿ ಕರ್ನಾಟಕದ ಎಲ್ಲ ಇ-ಗವರ್ನೆನ್ಸ್ ಯೋಜನೆಗಳ ಪಟ್ಟಿ ಇದೆ. ಈ ವೆಬ್ಸೈಟ್ ಯಾವ ಭಾಷೆಯಲ್ಲಿದೆ ನೋಡಿ. ಎಲ್ಲಾದರೂ 'ಕನ್ನಡ ಆವೃತ್ತಿ' ಅಂತ ಕೊಂಡಿಯಾದ್ರೂ ಕಂಡು ಬರುತ್ತಿದೆಯಾ? ಹೋಗಲಿ, ಇವರ E - ಆಡಳಿತ ಹುಡುಕಿಕೊಂಡು ಯಾರಾದರೂ ಆ ತಾಣಗಳಿಗೆ ಹೋದ್ರೆ ಅವರಿಗೆ ಸಿಗೋದು ಏನು ಗೊತ್ತಾ? ಅಲ್ಲಿರುವ ೧೫ ಕೊಂಡಿಗಳಲ್ಲಿ ೪ ಮಾತ್ರ ಕನ್ನಡ ಆವೃತ್ತಿಗೆ ಅವಕಾಶ ಮಾಡಿಕೊಡುತ್ತವೆ. ನೆನಪಿರಲಿ ಇವು ಯಾವು ನೇರವಾಗಿ ಕನ್ನಡದಲ್ಲಿ ಮೂಡಿ ಬರಲ್ಲ. ಬಂದಮೇಲೆ ಕನ್ನಡ ಆವೃತ್ತಿ ಎಲ್ಲಿ ಸಿಗಬಹುದು ಅಂತ ನಾವೇ ಹುಡುಕಿಕೊಳ್ಳಬೇಕು.

ಅಲ್ಲೇ police constable ಸೇರ್ಪಡೆಗೆ ಪ್ರಕಟಣೆ ಇದೆ ನೋಡಿ. ಇದು ಕೂಡಾ ಕನ್ನಡದಲ್ಲಿಲ್ಲ. ಆ ವೆಬ್ಸೈಟ್ ಬರೀ ಇಂಗ್ಲಿಶಿನಲ್ಲಿದೆಯ? ಇಲ್ಲ, ಇನ್ನೊಂದು ಭಾಷೆ ಕೂಡ ಇದೆ. ಹಿಂದಿ. ಏನಿದರ ಅರ್ಥ?

ಇನ್ನೊಂದು ನೋಡಿ. ಇದು ಎಲ್ಲ ಜಿಲ್ಲಾಡಳಿತಗಳ ಅಂತರ್ಜಾಲ ತಾಣಗಳ ಪಟ್ಟಿ. ಕೆಲವು ಜಿಲ್ಲಾ ಪಂಚಾಯ್ತಿಗಳ ವೆಬ್ಸೈಟ್ ಕೂಡಿ ಒಟ್ಟು ೩೪ ಇವೆ. ಇದರಲ್ಲಿ ಎಷ್ಟು ಕನ್ನಡದಲ್ಲಿದೆ?

ಸೊನ್ನೆ.

ಇಲಾಖೆಗಳ ಅಂತರ್ಜಾಲ ತಾಣಗಳು? ಇದರಲ್ಲಿ ನಾನು ನೋಡಿದ ಪೈಕಿ ನಾಲ್ಕೈದು ಬಿಟ್ಟರೆ ಮತ್ತೆಲ್ಲ English governance ರೂಪದಲ್ಲೇ ಇವೆ.

ತಂತ್ರಜ್ಞಾನ ಜನರ ಬದುಕನ್ನು ಸರಳಗೊಳಿಸಬೇಕು!

ನಿಜವಾಗಿಯೂ ತಂತ್ರಜ್ಞಾನ ಎಲ್ಲೆಲ್ಲಿ ಸಾಧ್ಯನೋ ಅಲ್ಲೆಲ್ಲ ಉಪಯೋಗಿಸಿಕೊಳ್ಳಬೇಕು. ಇನ್ನು ಹೇಳ್ಬೇಕು ಅಂದ್ರೆ ಜನರು ಸರ್ಕಾರಿ ಕಚೇರಿ ತಿರುಗಾಡೋ ಪ್ರಸಂಗವೇ ಬರಬಾರದು. ಆದರೆ ಈ ಸೌಕರ್ಯನ ಬರೀ ಇಂಗ್ಲಿಷ್ ಭಾಷೇಲಿ ಕೊಟ್ರೆ ಏನು ಪ್ರಯೋಜನ ಹೇಳಿ?

ಇದನ್ನ ಈ ಮುಂಚೆ ಒಮ್ಮೆ ನಾನು ನಮ್ಮ ನ್ಯಾಯಾಲಯಗಳ ವಿಷಯದಲ್ಲಿ ಒಬ್ಬ ನ್ಯಾಯಮೂರ್ತಿಗಳ ಹತ್ತಿರ ಕೇಳಿದಾಗ "ಕನ್ನಡ ಆವೃತ್ತಿನೂ ಇರುತ್ತೆ, ನಿಮಗೆ ಸರಿಯಾಗಿ ಹುಡುಕಲಿಕ್ಕೆ ಬಂದಿರುವುದಿಲ್ಲ" ಅಂದರು. ಕಾನೂನು ಕಲಿಕೆಯ ಮೊದಲನೆಯ ಸಾಲಿನಲ್ಲಿದ್ದ ನಾನು ಹೀಗೇ ಇರಬಹುದೇನೋ ಎಂದುಕೊಂಡೆ. ಇರಲಿ, ನಾನು ಈ ವಿಷಯದಲ್ಲಿ ದಡ್ಡನೇ ಆಗಿರಬಹುದು. ಆದರು ದಡ್ಡನಿಗೂ ತಿಳಿವಂತೆ ಸೌಲಭ್ಯಗಳನ್ನು ದೊರಕಿಸುವುದು ಸರಕಾರದ ಕರ್ತವ್ಯವಲ್ಲವೇ?

ಇನ್ನು UID ಬರುತ್ತಿದೆ. ಯೋಜನೆಯ ಪ್ರಕಾರ ನಡೆದರೆ ಮುಂದೆ ಹೆಚ್ಚು ಹೆಚ್ಚು ಸರಕಾರೀ ಸೌಲಭ್ಯಗಳು ಇ-ಗವರ್ನೆನ್ಸ್ ಮೂಲಕವೇ ಲಭ್ಯವಾಗುತ್ತವೆ. ಆಗಲೂ ಇದೇ ಧೋರಣೆ ಮುಂದುವರೆದರೆ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆದೀತು.

6 ಅನಿಸಿಕೆಗಳು:

ಪ್ರಶಾಂತ ಸೊರಟೂರ ಅಂತಾರೆ...

e-Governance ನಲ್ಲಿರುವ ಹುಳುಕನ್ನು ಸರಿಯಾಗಿ ತೋರಿಸಿದ್ದೀರಿ.
ಬೆಂಗಳೂರಿನಲ್ಲೋ, ದಿಲ್ಲಿಯಲ್ಲೋ ಕುಳಿತು ಹಳ್ಳಿಯ,ಪಟ್ಟಣಗಳ ವಾಸ್ತವ ಅರಿಯದೇ ,ಇ-ಆಡಳಿತ ಜಾರಿಗೆ ತಂದಂತಿದೆ.
ಕನ್ನಡ ಅರಿಯದ(ಕಾಳಜಿಯಿಲ್ಲದ) ಅಧಿಕಾರಿಗಳ ಕೈಗೆ ಸರಕಾರದ ಎಲ್ಲ ಯೋಜನೆಗಳ ಹೊಣೆಗಾರಿಕೆ ಕೊಡುವುದನ್ನು ತಪ್ಪಿಸಬೇಕು.
ಇ-ಆಡಳಿತದ ಕೊರತೆಗೆ ಇನ್ನೊಂದು ಉದಾಹರಣೆ:
ಕರ್ನಾಟಕ ಲೋಕ ಸೇವಾ ಆಯೋಗವು ಇತ್ತೀಚಿನ ದಿನಗಳಲ್ಲಿ ಮಿಂಬಲೆ ಮೂಲಕವೇ ಅರ್ಜಿಯನ್ನು ಹಾಕಲು ಅನುವು ಮಾಡಿಕೊಡುತ್ತಿದೆ. ಅರ್ಜಿ ಸಲ್ಲಿಸಲೂ ಅದರ ಮಿಂಬಲೆ ಪುಟದಲ್ಲಿ ಕೇವಲ ಇಂಗ್ಲೀಷಗೆ ಅವಕಾಶವಿದೆ.
ಇಂಗ್ಲೀಷನ ಅವಶ್ಯಕತೆ ಇಲ್ಲದ ಹುದ್ದೆಗಳಿಗೂ ಇಂಗ್ಲೀಷನಲ್ಲೇ ಅರ್ಜಿ ಹಾಕಬೇಕಾಗಿರುವುದು, ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ತೊಂದರೆ ಹೇಳತಿರದು

vikramhegde ಅಂತಾರೆ...

ಇಂದಿನ ಕನ್ನಡ ಪ್ರಭದಲ್ಲಿ ವರದಿ ನೋಡಿದಮೇಲೆ panchamitra.kar.nic.in (ಗ್ರಾಮ ಪಂಚಾಯತಿ ತಾಣಗಳು) ಬಗ್ಗೆ ತಿಳಿದು ಬಂತು. ಇದರಲ್ಲೂ ತಿದ್ದುಪಡೆಗಳಿಗೆ ಅವಕಾಶ ಇದೆ, ಆದರೆ ಬೇರೆದಕ್ಕೆ ಹೋಲಿಸಿ ನೋಡಿದ್ರೆ ಇದು ಸಫಲ ಹಾಗು ಪರಿಣಾಮಕಾರಿಯಾದ e-governance ಯೋಜನೆ ಅಂತ ಹೇಳಬಹುದು. ಇದೇ ಮಾದರಿಯಲ್ಲಿ ಬೇರೆನೂ ಮಾಡಬೇಕು.

admin ಅಂತಾರೆ...

ಟೆಕ್ನಾಲಜಿ ಹೆಸರಿನಲ್ಲಿ ಕನ್ನಡವನ್ನು ಬಿಡುವದು ಸರಿ ಅಲ್ಲ. ಮೊದಲು ಬಸ್ ಬೋರ್ಡ್ಗಳು ಕನ್ನಡದಲ್ಲಿ ಮಾತ್ರ ಇರುತ್ತಿದ್ದರಿಂದ ಕನ್ನಡ ಬಾರದಿದ್ದರೆ ಬಸ್ ಸಂಕೆ ನೆನಪಿಡಬೇಕಾದ ಪ್ರಯಾಸಕ್ಕಾಗಿಯಾದರು ಕನ್ನಡ ಕಲಿಯುತ್ತಿದ್ದರು, ಅದು ಹೋಯಿತು. ಸತತವಾಗಿ ಇರುವ ಇಂಗ್ಲಿಷ್ ಬೋರ್ಡ್ನಲ್ಲಿ ಮದ್ಧೆ ಮದ್ಧೆ ಕನ್ನಡ ಕಂಡರೆ ಹೆಚ್ಚು.
ನಂತರ ಟಿಕೆಟ್ಗಳು, ಕನ್ನಡ ಸಂಕೆಗಳಿಗೆ ಕವಡೆ ಕಾಸಿನ ಬೆಲೆ ಮೊದಲೇ ಇಲ್ಲ.. ಮೊದಲು ಅಲ್ಪ ಸ್ವಲ್ಪ ಕನ್ನಡ ಟಿಕೆಟ್ಗಳ ಮೇಲೆ ಉಳಿದುಕೊಂಡಿತ್ತು, ಈಗ ವೋಲ್ವೋ ಬಸ್ಗಳ ಟಿಕೆಟ್ ಮೇಲೆ ಅದೂ ಮಾಯ!
ಕರ್ನಾಟಕ ಸರ್ಕಾರದ ವೆಬ್ ಸೈಟ್ಗಲೇ ಸಂಪೂರ್ಣ ಇಂಗ್ಲಿಷ್ನಲ್ಲಿ...
ಹೊಸ ತಂತ್ರಜ್ಞಾನದ ಅಳವಡಿಕೆ ಸರಿ, ಆದರೆ ಅದರ ಹೆಸರಿನಲ್ಲಿ ನಮ್ಮ ಬೇರಾಗಿರುವ ಕನ್ನಡವನ್ನು ಕಡೆಗನಿಸುವದು ತಪ್ಪು... ದೊಡ್ಡ ತಪ್ಪು...

ಜಯಣ್ಣ ಅಂತಾರೆ...

ಎಲ್ಲಾದಕ್ಕೂ ನಮ್ ಯಡಿಯೂರಪ್ನೋರ ಫೋಟೋ ಯಾಕಪ್ಪಾ ಹಾಕ್ತೀರಾ? ಅವರಿಗೆ ಕೆಂಪ್ಯೂಟರು, ಟೆಕ್ನಾಲಜಿ ಇವೆಲ್ಲಾ ಗೊತ್ತಾಗಕ್ಕಿಲ್ಲ.

Anonymous ಅಂತಾರೆ...

gottagalla andre ee raajyada javaabdaari yaake horabeku? aa jagana alankarisbitre aagoyta, enbekaadru maaDkonDu horaDbahuda?!

Unknown ಅಂತಾರೆ...

ಇನ್ನೊಂದು ವಿಷಯ, ಈ ಎಲ್ಲ ತಾಣಗಳ ಕರ್ತೃ NIC. ವಿಶೇಷ ಅಂದ್ರೆ ಇದರಲ್ಲಿ ಇರೋರು ಪೂರ್ತಿ ತಮಿಳರು!!!ನನ್ನ ಸ್ನೇಹಿತ ನೊಬ್ಬ ಇಲ್ಲಿ ಕಾರ್ಯನಿರ್ವಹಿಸುತಿದ್ದು, ಈ ವಿಷಯ ತಿಳಿದುಬಂತು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails