ನಮ್ಮ ಮೆಟ್ರೋ: ಮಾಹಿತಿ ಕೋರಿ ಆರ್.ಟಿ.ಐ. ಅರ್ಜಿ.


"ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಎಲ್ಲೆಡೆ ಬಳಸಿರುವುದರ ಬಗ್ಗೆ ನಮ್ಮ ಜನರಲ್ಲಿ ದಿನೇ ದಿನೇ ಎಚ್ಚರ ಮೂಡುತ್ತಿದ್ದು, ಇದೀಗ ಓದುಗರೊಬ್ಬರು ನಮ್ಮ ಮೆಟ್ರೋ ಅನುಸರಿಸುತ್ತಿರುವ ಭಾಷಾನೀತಿಯ ಬಗ್ಗೆ ಮಾಹಿತಿ ಕೋರಿ, ಆರ್.ಟಿ.ಐ ಒಂದನ್ನು ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಇವರು ಕೋರಿರುವ ಮಾಹಿತಿಯ ವಿವರ ಇಂತಿದೆ.

ಅಗತ್ಯವಾಗಿರುವ ಮಾಹಿತಿ
“ನಮ್ಮ ಮೆಟ್ರೋ “ನಲ್ಲಿ ಬಳಕೆಯಾಗಿರುವ ಭಾಷಾನೀತಿಯ ಬಗೆಗಿನ ಕೆಳಗಿನ ಅಂಶಗಳ ಬಗ್ಗೆ ವಿವರಣೆಗಳು ಬೇಕಾಗಿದೆ:
೧. ಬೆಂಗಳೂರಿನ ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಯಾವ ಯಾವ ಭಾಷೆಯಲ್ಲಿ ನೀಡಬೇಕೆನ್ನುವ ಬಗ್ಗೆ ಯಾವುದಾದರೂ ನಿಯಮ "BMRCL"ನಲ್ಲಿದೆಯೇ? ಇದ್ದಲ್ಲಿ ಅದರ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ. 
. ಪ್ರಶ್ನೆ ೧ ಕ್ಕೆ ಸಂಬಂದಪಟ್ಟಂತೆ ಗ್ರಾಹಕಸೇವಾ ನಿಯಮವನ್ನು ಜಾರಿಗೊಳಿಸಲು, ತೀರ್ಮಾನವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ? 
. ಭಾರತದ ಕೇಂದ್ರಸರ್ಕಾರವು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
. ಕರ್ನಾಟಕ ರಾಜ್ಯಸರ್ಕಾರ “ನಮ್ಮ ಮೆಟ್ರೋದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕ ಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಅಧಿಕೃತ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.
. ಪ್ರಶ್ನೆ ಮತ್ತು ೪ ಕ್ಕೆ ನಿಮ್ಮ ಉತ್ತರ ಇಲ್ಲ ಎಂದಿದ್ದಲ್ಲಿ, ಇನ್ಯಾವ ಆದೇಶ/ಸೂಚನೆಯ ಮೇರೆಗೆ ಹಿಂದಿ ಬಾಷೆಯಲ್ಲಿ, ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಹಾಕಲಾಗಿದೆ? ಇದಕ್ಕೆ ಸಂಬಂಧಿಸಿದ ಆದೇಶ/ ಸೂಚನೆಯ ದಾಖಲೆಯ  ಧೃಢೀಕೃತ ಪ್ರತಿಯನ್ನು ನೀಡಿರಿ.
. ನಮ್ಮ ಮೆಟ್ರೋ ಸಿಬ್ಬಂದಿಗಳು ಮತ್ತು ಮೇಟ್ರೋ ನೇಮಕ ಮಾಡಿರುವ ಖಾಸಗೀ ಗುತ್ತಿಗೆ ಸಿಬ್ಬಂದಿಗಳು, ಸಾರ್ವಜನಿಕರ ಜೊತೆ ವ್ಯವಹರಿಸಬೇಕಾದಾಗ - ಸ್ಥಳೀಯ ಭಾಷೆ ಕನ್ನಡದ ಅರಿವು ಹೊಂದಿರಬೇಕೆನ್ನುವ ನಿಬಂಧನೆಯನ್ನು/ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆಯೇ? ಮಾಡಿಕೊಂಡಿದ್ದರೆ ಒಂದು ಅಧಿಕೃತ ಒಪ್ಪಂದದ ಪ್ರತಿಯ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
. ಪ್ರಶ್ನೆ ೬ ಕ್ಕೆ ಸಂಬಂದಿಸಿದಂತೆ, ನಿಬಂಧನೆ/ಒಪ್ಪಂದ ಮಾಡಿದ್ದರೆ, ಕನ್ನಡದಲ್ಲಿ ಸೇವೆಯನ್ನು ನಿರಾಕರಣೆ ಮಾಡುವ ಸಿಬ್ಬಂದಿ/ ಗುತ್ತಿಗೆದಾರರ ಮೇಲೆ ದೂರನ್ನು ಯಾರಿಗೆ ಸಲ್ಲಿಸಬೇಕು?
. ಕನ್ನಡದಲ್ಲಿ ಗ್ರಾಹಕ ಸೇವೆ ನೀಡದ ಬಗ್ಗೆ ದೂರು ಬಂದಲ್ಲಿ ಅಂಥವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವುದಾದರೋ ನಿಯಮವಿದೆಯೇ? ಇದ್ದಲ್ಲಿ ಸದರಿ ನಿಯಮದ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ.
ತಿಂಗಳೊಂದರಲ್ಲಿ ಸಂಬಂಧಪಟ್ಟಿರುವ "ನಮ್ಮ ಮೆಟ್ರೋ" ಅಧಿಕಾರಿಗಳು ಇದಕ್ಕೆ ಯಾವ ಉತ್ತರ ನೀಡುತ್ತಾರೋ? ಎನ್ನುವ ಕುತೂಹಲ ನಿಮ್ಮಂತೆ ನಮಗೂ ಇದೆ. ಕಾದು ನೋಡೋಣ...ಗುರೂ!!!

13 ಅನಿಸಿಕೆಗಳು:

usha ಅಂತಾರೆ...

thumba santhosha

ಗಿರೀಶ್ ಕಾರ್ಗದ್ದೆ ಅಂತಾರೆ...

ತುಂಬಾ ಒಳ್ಳೆಯ ಕೆಲಸ ಮಾಡಿದೀರ ಅರುಣ್. ಮಾಹಿತಿ ಹಕ್ಕು ಖಾಯ್ದೆ ಅಡಿಯಲ್ಲಿ ಅರ್ಜಿ ಹಾಕಿದ್ರೆ ಹೇಗೆ ಅಂತ ಯೋಚನೆಯನ್ನು ನಾನು ಪ್ರಿಯಾಂಕ್ ಹತ್ರ ಹೇಳ್ತಾ ಇದ್ದೆ. ನೀವು ಮೊದಲೇ ಈ ಕೆಲಸ ಮಾಡಿದೀರ. ನೋಡೋಣ ಏನ್ ಮಾಹಿತಿ ಕೊಡ್ತಾರೆ ಅಂತ. ನಿಮ್ಮ ಈ ಕೆಲಸದಲ್ಲಿ ನಮ್ಮೆಲ್ಲರ ಸಹಕಾರ, ಬೆಂಬಲ ಇದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿ.
-ಗಿರೀಶ್ ಕಾರ್ಗದ್ದೆ.

Gowda ಅಂತಾರೆ...

ನನ್ನ ಸ್ನೇಹಿತರೊಬ್ಬರು ಇದೇ ವಿಚಾರವಾಗಿ ಉಚ್ಚ ನ್ಯಾಯಾಲಯದಲ್ಲಿ ಒಂದು PIL ಹಾಕೋದಕ್ಕೆ ತಯಾರಿ ಮಾಡ್ತಿದಾರೆ. ಈ ಪ್ರಶ್ನೆಗೆ ಉತ್ತರ ಬಂದಾಗ ದಯವಿಟ್ಟು ನನಗೂ ಒಂದು ಪ್ರತಿಯನ್ನು ಕಳುಹಿಸಿ.

ಪ್ರಶಾಂತ ಸೊರಟೂರ ಅಂತಾರೆ...

ಅರುಣ್, ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ.

Shashi ಅಂತಾರೆ...

ಅವರು ಕೊಟ್ಟಿರೋ ರಸೀದಿ ಕೂಡ ಕನ್ನಡ ದಲ್ಲಿ ಇಲ್ಲ. ಲೀಗಲ್ ಆಗಿ ಬನ್ನಿ ಅಂತ ಹೇಳಿ ಜಾರಿಕೊಳ್ಳುತ್ತ ಇರುವ ಅಧಿಕಾರಿಗಳಿಗೆ ಇದು ಒಳ್ಳೆಯ ಪಾಠ. ಅರುಣ್ ಅವರಿಗೆ ಧನ್ಯವಾದಗಳು. ಉತ್ತರಕ್ಕಾಗಿ ಕಾದಿರುತ್ತೇವೆ.

Ganesh ಅಂತಾರೆ...

tumba olleya kelasa madiddira......

Santhosh Mugoor (ಸಂk) ಅಂತಾರೆ...

ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರ ಅರುಣ್. ಕಾನೂನಿ ಚೌಕಟ್ಟಿನಲ್ಲೆ ಏನು ಉತ್ತರ ಬರುವುದು ಕಾದು ನೋಡೋಣ. ಇದರಿಂದ ಒಳಿತಾಗುವುದೆನ್ನುವ ನಂಬಿಕೆ ನನಗಿದೆ.

Srujan ಅಂತಾರೆ...

edu ondu olleya hejje, arun.. naavu nimmondiggideve! :)

Krishnamurthy Veera Vemagal Kolar ಅಂತಾರೆ...

ನಾನು ಈ ವಿಷಯದ ಬಗ್ಗೆ ಕೆಳಕಂಡಂತೆ ಬಿ ಎಂ ಆರು ಸಿ ಎಲ್ ರವರಿಗೆ ಬರೆದಿರುತ್ತೇನೆ. ಆದಷ್ಟು ಬೇಗ ನಮ್ಮ ಕನ್ನಡಿಗರಿಗೆ ಆಗಿರುವ ಮೋಸ ಸರಿಪಡಿಸಲಿ ಇಲ್ಲವಾದಲ್ಲಿ ಜಾತ ನಡೆಸಲಾಗುತ್ತೆ.
ಮಾನ್ಯ ಕರ್ನಾಟಕದ ನಮ್ಮ ಮೆಟ್ರೋ ಸಂಸ್ತೆಗೆ,

ನಾವು ನೋಡಿದಂತೆ ನಮ್ಮ ಮೆಟ್ರೋದ ನಲ್ಲಿ ಕನ್ನಡ ಭಾಷೆಯ website nalli ಯಾವುದೇ ondu kannada ಪದಗಳು ಕಾಣಸಿಗಲ್ಲ ಹಾಗು ದೆಹಲಿ ಮತ್ತು ತಮಿಳುನಾಡಿನ Websitenalli there are provisions for their localities ನೋಡಿದ್ದೇನೆ ಅದರಲ್ಲಿ ಅವರ ನಾಡಿನ ತಾಯೇ ಭಾಷೆ mattu localities bagge gowrava ide. ಆದರೆ ನಮ್ಮ ಮೆತ್ರೋದಲ್ಲಿ ಯಾಕೆ ಇಲ್ಲ? ನಮ್ಮ ಮೆಟ್ರೋ ಇರುವುದು ಕರ್ನಾಟಕದಲ್ಲಿ ಅನ್ನೋದು ತಾವು ಮರೆತಿರುವಂತಿದೆ. ಕನ್ನಡಿಗರು ತಾಳ್ಮೆ ಕಳೆದುಕೊಲ್ಲುವುಮುನ್ನ ಕನ್ನಡ ಭಾಷೆ ವ್ಯವಸ್ತೆ namma metro wesitenalli ಮಾಡಿ

ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು(http://www.delhimetrorail.com/Default.aspx) ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು "ದೆಹಲಿ ಮೆಟ್ರೋ" ಅಂತಾ.

ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ.ಚೆನ್ನೈ ಮೆಟ್ರೋದ ಹೆಸರು "ಚೆನ್ನೈ ಮೆಟ್ರೋ ರೈಲ್" ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ(http://www.chennaimetrorail.gov.in/index.php)... ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ.

We are fighting for our local languages and our rights not for anything. Any personnel can rise their hands to their language, state, culture etc.... As a kannadiga i have complete rights to ask and get the things in a right path at our own state.

ಅಮರೇಶ ಅಂತಾರೆ...

ನಾವೆಲ್ಲ ನಿಮ್ಮ ಜೊತೆ ಇದೀವಿ ಅರುಣ್.

ಕನ್ನಡವೇ ಸತ್ಯ ,ಕನ್ನಡವೇ ನಿತ್ಯ

ಶ್ರೀ ಹರ್ಷವರ್ಧನ ಅಂತಾರೆ...

ನಿಜಕ್ಕೂ ಒಳ್ಳೇ ಕೆಲಸ.. ನೋಡೋಣ ಮೆಟ್ರೋದವರು ಯಾವ ರೀತಿ ಉತ್ತರ ನೀಡುತ್ತಾರೆಂದು...

Anonymous ಅಂತಾರೆ...

ಒಳ್ಳೇ ಕೆಲಸ.ನಾವೆಲ್ಲ ನಿಮ್ಮ ಜೊತೆ ಇದೀವಿ ಅರುಣ್.
ಸಚ್ಚಿದಾನಂದ

Anonymous ಅಂತಾರೆ...

Mumdenagutte amt kutuhaladimda kayta iddeeni

Enagutte nave GELLOADU

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails