ಜನಸಂಖ್ಯಾ ನಿಯಂತ್ರಣ ಮತ್ತು ವಲಸೆ...

ನಮ್ಮೆಲ್ಲಾ ಸಮಸ್ಯೆಗೆ ಮೂಲ ಜನಸಂಖ್ಯಾ ಸ್ಫೋಟ ಎನ್ನುವ ವದಂತಿಯನ್ನು ಸದಾಕಾಲ ಹರಡಲಾಗುತ್ತಿದೆ. ಅದರಲ್ಲೂ ಸರ್ಕಾರ ಎಲ್ಲಾ ಸಮೂಹ ಮಾಧ್ಯಮಗಳ ಮೂಲಕ ಜನರಿಗೆ ಕುಟುಂಬ ನಿಯಂತ್ರಣ ಮಾಡಿ ಎಂದು ಕರೆ ಕೊಡುತ್ತಲೇ ಇರುತ್ತದೆ. ನಿಜಕ್ಕೂ ಕರ್ನಾಟಕಕ್ಕೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆಯೇ? ಕನ್ನಡಿಗರನ್ನು ಕುಟುಂಬ ಯೋಜನೆಗೆ ಒಲಿಸುತ್ತಾ ಭಾರತ ಸರ್ಕಾರ ಮಾಡುತ್ತಿರುವುದಾದರೂ ಏನನ್ನು? ವಾಸ್ತವ ಸಂಗತಿ ಏನು? 

ಜನಸಂಖ್ಯೆ ಮತ್ತು ಜನದಟ್ಟಣೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚು ಅನ್ನೋ ಪ್ರಚಾರದಲ್ಲಿ ಆಯಾ ದೇಶದ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಳ್ಳಬೇಕಾದ್ದು ಸರಿಯಾದ ವಿಧಾನ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಚೀನಾ, ಅದರ ನಂತರ ಭಾರತ. ಜನಸಂಖ್ಯೆಯೇ ನಮ್ಮೆಲ್ಲಾ ಅವ್ಯವಸ್ಥೆ, ಸಮಸ್ಯೆಗಳಿಗೆ ಮೂಲ ಅನ್ನೋದು ಸಾಮಾನ್ಯವಾಗಿ ಹುಟ್ಟು ಹಾಕಲಾಗಿರುವ ನಂಬಿಕೆ. ಒಂದು ನಾಡಿನ ಜನಸಂಖ್ಯೆಗಿಂತಲೂ ಮಹತ್ವದ್ದು ಅಲ್ಲಿನ ಜನದಟ್ಟಣೆ. ಈ ಜನದಟ್ಟಣೆಯನ್ನು ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆಯ ಮೂಲಕ ಸೂಚಿಸುವುದು ಒಂದು ವಿಧಾನ. ಆ ಲೆಕ್ಕದಲ್ಲಿ ಚೀನಾಗಿಂತಲೂ ಭಾರತ ಮುಂದಿದೆ. ಚೀನಾ ಜನದಟ್ಟಣೆ ೧೪೦ ಇದ್ದಲ್ಲಿ ಭಾರತದ್ದು ೩೬೮. ವಾಸ್ತವವಾಗಿ ಅದಕ್ಕಿಂತಲೂ ಅರ್ಥಪೂರ್ಣವಾದ ಸೂಚಿ ಎಂದರೆ ಆಯಾಪ್ರದೇಶದಲ್ಲಿರುವ ಸಂಪನ್ಮೂಲದ ಪ್ರಮಾಣದೊಂದಿಗಿನ ಅನುಪಾತದ ಆಧಾರದ ಮೇಲಿನ ಜನದಟ್ಟಣೆ. ಸದ್ಯ ಭಾರತದ ಸಂಪನ್ಮೂಲಾಧಾರಿತ ಜನದಟ್ಟಣೆಯ ಅಂಕಿಅಂಶಗಳನ್ನು ಬದಿಗಿಟ್ಟು ವಿಸ್ತೀರ್ಣದ ಆಧಾರದ ಮೇಲಿನ ಜನದಟ್ಟಣೆಯ ಅಂಕಿಅಂಶಗಳನ್ನು ವಿಶ್ಲೇಷಿಸಿ ನೋಡೋಣ. ಅಂದರೆ ನಾಡಿನ ಜನಸಂಖ್ಯೆಯ ಹೆಚ್ಚಳ ಅಥವಾ ಕುಸಿತ ಎನ್ನುವುದು ಆ ಪ್ರದೇಶದ ವಿಸ್ತೀರ್ಣ ಆಧಾರಿತ ಜನದಟ್ಟಣೆಯಾಗಿದೆ. ಜನಸಂಖ್ಯಾ ದಟ್ಟಣೆಯನ್ನು ನಿಭಾಯಿಸಲು ಇರುವ ಸಾಧನ ಹುಟ್ಟಿನ ಪ್ರಮಾಣದ ಮೇಲಿನ ಹಿಡಿತ. ಈ ಪ್ರಮಾಣ ಆಯಾ ಪ್ರದೇಶದಲ್ಲಿನ ತಾಯಂದಿರು ಸರಾಸರಿ ಎಷ್ಟು ಮಕ್ಕಳನ್ನು ಹೆರುತ್ತಾರೆ ಎಂಬುದನ್ನು ಅವಲಂಬಿಸಿದೆ. ಈ ಹುಟ್ಟಿನ ಪ್ರಮಾಣವನ್ನು ಫಲವತ್ತತೆ ಎನ್ನಬಹುದಾಗಿದೆ. ಜನಸಂಖ್ಯಾ ನಿಯಂತ್ರಣವೆಂದರೆ ಈ ಫಲವತ್ತತೆಯನ್ನು/ ಹೆರುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದೇ ಆಗಿದೆ.

ಜನಸಂಖ್ಯಾ ನಿಯಂತ್ರಣ

ಜನರು ಹುಟ್ಟುತ್ತಿರುವಂತೆಯೇ ಸಾಯುತ್ತಲೂ ಇರುವುದರಿಂದ ಈ ಎರಡು ಪ್ರಮಾಣಗಳ ನಡುವಿನ ಹೊಂದಾಣಿಕೆ ಆಯಾಪ್ರದೇಶದ ಜನಸಂಖ್ಯೆ ಏರುತ್ತಿದೆಯೇ, ಇಳಿಯುತ್ತಿದೆಯೇ ಅನ್ನುವುದನ್ನು ನಿಶ್ಚಯಿಸುತ್ತದೆ. ಜನಸಂಖ್ಯಾ ನಿಯಂತ್ರಣವೆಂದರೆ ಜನಸಂಖ್ಯೆಯ ಏರಿಕೆ ಪ್ರಮಾಣದ ಮೇಲೆ ಕಡಿವಾಣ ಹಾಕಿಕೊಳ್ಳುವುದೇ ಆಗಿದೆ. ಇದಕ್ಕಿರುವ ಅಳತೆಗೋಲು TFR, ಅಂದರೆ ಒಟ್ಟು ಫಲವತ್ತತೆಯ ಪರಿಮಾಣ. ಈ ಸೂಚ್ಯಂಕವು ೨.೦ ಇದ್ದಲ್ಲಿ ಜನಸಂಖ್ಯೆ ಹೆಚ್ಚೂ ಆಗದು ಕಮ್ಮಿಯೂ ಆಗದು. ಸರಾಸರಿಯಾಗಿ ಒಬ್ಬ ತಂದೆತಾಯಿಗೆ ಇಬ್ಬರು ಮಕ್ಕಳಿರುವುದು ಎಂದರೆ ಸೂಚ್ಯಂಕ ೨.೦ ಇದೆ ಎಂದರ್ಥ. ಎರಡಕ್ಕಿಂತ ಹೆಚ್ಚಿನ ಸೂಚ್ಯಂಕದ ಅರ್ಥ ಜನಸಂಖ್ಯೆ ಏರುಮುಖದಲ್ಲಿದೆ, ಇದು ಜನಸಂಖ್ಯಾ ಸ್ಫೋಟದ ಕಡೆಗಿನ ಹೆಜ್ಜೆ. ಇದೇ ಸೂಚ್ಯಂಕ ೨.೦ಕ್ಕಿಂತ ಕೆಳಗೆ ಇಳಿದರೆ ಜನಸಂಖ್ಯೆಯ ಇಳಿಮುಖವಾಗುತ್ತಿರುವ ಲಕ್ಷಣ. ಜನಸಂಖ್ಯಾ ನಿಯಂತ್ರಣ ಎನ್ನುವುದರ ಅರ್ಥ ಏರಮುಖವಾಗಿರುವ ಜನಸಂಖ್ಯಾ ಸೂಚ್ಯಂಕವನ್ನು ನೇರವಾಗಿಸುವುದು. ಅಂದರೆ ಸೂಚ್ಯಂಕವನ್ನು ೨.೦ಕ್ಕಿಳಿಸುವುದು. ಆದರೆ ಮದುವೆ ಮಾಡಿಕೊಳ್ಳದವರು, ಚಿಕ್ಕಮಕ್ಕಳ ಸಾವಿನ ಪ್ರಮಾಣ... ಮುಂತಾದುವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈಗಿರುವ ಜನಸಂಖ್ಯಾ ಪ್ರಮಾಣವನ್ನೇ ಕಾಯ್ದುಕೊಳ್ಳಬೇಕೆಂದರೆ ಸೂಚ್ಯಂಕವನ್ನು ೨.೧ರಲ್ಲಿಟ್ಟುಕೊಳ್ಳುವುದು ಒಳಿತು. ಯಾವ ದೇಶವೂ, ಯಾವ ಜನಾಂಗವೂ ಜನಾಂಗವೂ ಸದರಿ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕಿಂತ ಕೆಳಕ್ಕಿಳಿಸಲು ಒಪ್ಪದು. ಯಾಕೆಂದರೆ ಅದು ಕಾಲಾಂತರದಲ್ಲಿ ಆ ಜನಾಂಗವನ್ನೇ ಭೂಪಟದಿಂದ ಅಳಿಸಿಬಿಡುತ್ತದೆ.  ೨.೦ ಸೂಚ್ಯಂಕ ಅನುಸರಿಸಿದರೆ ಎಷ್ಟೇ ಶತಮಾನಗಳುರುಳಿದರೂ ಜನಸಂಖ್ಯೆ ಅದೇ ಪ್ರಮಾಣದಲ್ಲಿರುತ್ತದೆ. ೨ಕ್ಕಿಂತ ಕೆಳಗಿಳಿದರೆ ಹೇಗೆ ಕುಸಿತ ಕಂಡು ಕೊನೆಗೊಮ್ಮೆ ಆ ಜನಾಂಗ ನಿರ್ನಾಮವಾಗಿಬಿಡುತ್ತದೆ.

ಭಾರತ ದೇಶದ ಸ್ವರೂಪ ಮತ್ತು ಜನದಟ್ಟಣೆ

ಭಾರತವೂ ಕೂಡಾ ಏರುಮುಖವಾಗಿರುವ ಜನಸಂಖ್ಯೆ ಹೊಂದಿದ್ದು (ಈಗಿನ ಫಲವತ್ತತೆ ಸೂಚ್ಯಂಕ ೨.೯) ತನ್ನ ಜನಸಂಖ್ಯೆಯನ್ನು ಸ್ಫೋಟವಾಗಲು ಬಿಡದಂತೆಯೂ, ಈಗ ಇರುವಷ್ಟೇ ಕಾಪಾಡಿಕೊಳ್ಳಲೂ ಯೋಜಿಸಿದೆ. ಆ ಕಾರಣಕ್ಕಾಗಿಯೇ ೨೦೨೦ರ ಹೊತ್ತಿಗೆ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕೆ ಇಳಿಸಲು ಯೋಜಿಸಿದೆ. ಆದರೆ ಯೋಜನೆ ಜಾರಿ ಮಾಡುವ ಭರದಲ್ಲಿ ಕೆಲಜನಾಂಗಗಳ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಹೌದೂ.. ಭಾರತದ ಪ್ರಸ್ತುತ ಜನಸಂಖ್ಯಾ ನಿಯಂತ್ರಣ ಯೋಜನೆಯ ರೂಪುರೇಶೆಯನ್ನು ಅರಿತುಕೊಂಡರೆ ಈ ದಿಟವು ಗೋಚರವಾಗುತ್ತದೆ. ಇದು ಹುನ್ನಾರವೇ? ಅವಿವೇಕವೇ? ಉದ್ದೇಶಪೂರ್ವಕವೇ? ದಡ್ಡತನವೇ? ಎಂಬುದನ್ನು ವಿಶ್ಲೇಷಿಸುವುದು ನಿಮಗೆ ಬಿಟ್ಟದ್ದು. ಜನಸಂಖ್ಯಾ ದಟ್ಟಣೆಯ ವಸ್ತುಸ್ಥಿತಿ ನಿಯಂತ್ರಣೆಯ ಬಗ್ಗೆ ಮಾತಾಡುವ ಮೊದಲು ಕರ್ನಾಟಕದ ಜನಸಂಖ್ಯಾ ದಟ್ಟಣೆಯ ಬಗ್ಗೆ ಒಂದಷ್ಟು ಅಂಕಿ ಅಂಶಗಳತ್ತ ಕಣ್ಣು ಹಾಯಿಸೋಣ.

ಈ ಪಟ್ಟಿಯನ್ನೊಮ್ಮೆ ನೋಡಿ.


ಇದು ರಾಜ್ಯವಾರು ಜನದಟ್ಟಣೆಯ ಪಟ್ಟಿ. ಕರ್ನಾಟಕದ ದಟ್ಟಣೆ ಸೂಚ್ಯಂಕ ೩೧೯. ಅಂದರೆ ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆ ೩೧೯. ಭಾರತದ ಸರಾಸರಿ ಜನದಟ್ಟಣೆ ೩೬೮. ನಮಗಿಂತಾ ಜನದಟ್ಟಣೆಯಲ್ಲಿ ೧೮ ರಾಜ್ಯಗಳು ಮುಂದಿವೆ. ನಮ್ಮದು ೧೯ನೇ ಸ್ಥಾನ. ಅಂದರೆ ಕರ್ನಾಟಕದ ಇಂದಿನ ಜನದಟ್ಟಣೆಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡುವಿನಂತಹ ರಾಜ್ಯಗಳಲ್ಲಿ ಜನದಟ್ಟಣೆ ಕರ್ನಾಟಕದ ಎರಡು ಪಟ್ಟು ಮೂರು ಪಟ್ಟುಹೆಚ್ಚಿವೆ. ಇದರ ಪರಿಣಾಮ ನೇರವಾಗಿ ಕರ್ನಾಟಕಕ್ಕೆ ಪರಭಾಷಿಕರ ವಲಸೆಯೇ ಆಗಿದೆ. ಆ ಮೂಲಕ ನಮ್ಮ ನಾಡಿನ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಜಗತ್ತಿನ ಕೆಲವು ದೇಶಗಳ ಜೊತೆ ತುಲನೆ ಮಾಡೋಣ.

ಈ ಒಂದು ನಕ್ಷೆ ನೋಡಿರಿ.


ಕರ್ನಾಟಕದ ಜನದಟ್ಟಣೆ ಜಪಾನು, ಇಸ್ರೇಲುಗಳಂತಹವುಗಳಿಗಿಂತಲೂ ಕಡಿಮೆಯಿದೆ. ಸ್ವಲ್ಪ ಗಮನಿಸಿ ನೋಡಿದರೆ ಜಪಾನಿನಂತಹ ದೇಶ ತನ್ನ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಎಷ್ಟು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿದೆಯೆಂದು ತಿಳಿಯುತ್ತದೆ. ಆ ಯಾವ ದೇಶಗಳಿಗೂ ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆ ಕರ್ನಾಟಕಕ್ಕಿದೆ ಎಂದು ಯಾರಾದರೂ ಹೇಳಿದರೆ ನಂಬಬೇಕೆ? ಆ ಯಾರಾದರೂ ಎನ್ನುವುದೂ ನಮ್ಮದೇ ಕೇಂದ್ರ ಮತ್ತು ರಾಜ್ಯಸರ್ಕಾರಗಳಾಗಿದ್ದಾಗಲೂ ಕೂಡಾ ನಂಬಬೇಕಾಗಿಲ್ಲ.

ನಮ್ಮನ್ನು ಇಲ್ಲವಾಗಿಸುವ ಹುನ್ನಾರ?


ಹೋಗಲೀ, ಕೇಂದ್ರಸರ್ಕಾರ ಕನ್ನಡಿಗರ ಈಗಿನ ಜನಸಂಖ್ಯೆಯನ್ನು ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶವನ್ನಾದರೂ ಹೊಂದಿದೆಯೇ? ಇಲ್ಲ...ಇದು ಕನ್ನಡಿಗರ ಜನಸಂಖ್ಯೆಯನ್ನು ಇಳಿಮುಖವಾಗಿಸಬೇಕೆಂಬ ಗುರಿ ನಮಗಿತ್ತಿದೆ. ಹೌದೂ! ಇಂತಹ ಕ್ರಮಕ್ಕೆ ಭಾರತ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಮುಂದಾಗಿದೆ ಎಂದರೆ ನಂಬಲೇಬೇಕಾಗಿದೆ. ಯಾಕೆಂದರೆ ಕರ್ನಾಟಕದ ಮುಂದೆ ಕೇಂದ್ರಸರ್ಕಾರವು ಇಟ್ಟಿರುವ ಸೂಚ್ಯಂಕದ ಗುರಿ ೧.೯. ಕರ್ನಾಟಕ ಸರ್ಕಾರವೂ ತನಗೆ ತಾನೇ ವಿಧಿಸಿಕೊಂಡಿರುವ ಗುರಿ ೧.೬ ಆಗಿದ್ದು ವಿಚಿತ್ರವಾಗಿದೆ. ಈ ೧.೬ರ ಗುರಿಯನ್ನೇನಾದರೂ ಕನ್ನಡಿಗರು ಸಾಧಿಸಿಬಿಟ್ಟರೆ ಕನ್ನಡಿಗರು ನೂರಿನ್ನೂರು ವರ್ಷಗಳಲ್ಲಿ ಭೂಪಟದಿಂದ ಮರೆಯಾಗಬೇಕಾಗುತ್ತದೆ. ಈಗಾಗಲೇ ೨.೩ರಷ್ಟು ಸೂಚ್ಯಂಕ ಸಾಧಿಸಿರುವ, ೩೧೯ರ ಜನದಟ್ಟಣೆಯನ್ನು ಹೊಂದಿರುವ ಕರ್ನಾಟಕಕ್ಕೆ ೨.೧ಕ್ಕಿಂತ ಕೆಳಗಿನ ಗುರಿಯನ್ನು ಕೊಟ್ಟಿರುವುದರ ಉದ್ದೇಶವೇನಿರಬಹುದು? ಜನರಿಂದ ತುಂಬಿ ತುಳುಕುತ್ತಿರುವ ಉತ್ತರದ ಹಿಂದೀಭಾಷಿಕ ಪ್ರದೇಶಗಳಾದ ಬಿಹಾರ, ಉತ್ತರಪ್ರದೇಶ ಮೊದಲಾದ ಈಗಾಗಲೇ ಹೆಚ್ಚಿನ ಬಹಳ ಜನದಟ್ಟಣೆಯಿರುವ, ಹೆಚ್ಚಿನ ಫಲವತ್ತತೆ ಸೂಚ್ಯಂಕವಿರುವ ರಾಜ್ಯಗಳಿಗೆ ನೀಡಿರುವ ಗುರಿ ೩.೦ ಆಗಿದೆ. ಅಂದರೆ ‘ಕಾಲಾಂತರದಲ್ಲಿ ದಕ್ಷಿಣ ಭಾರತೀಯರೆಲ್ಲಾ ಜನಸಂಖ್ಯೆಯ ಕುಸಿತದ ಕಾರಣದಿಂದಾಗಿ ವಿನಾಶ ಹೊಂದಿರಿ, ಉತ್ತರದ ಹಿಂದೀ ಭಾಷಿಕರು ಮಕ್ಕಳು ಮರಿ ಹುಟ್ಟಿಸಿಕೊಂಡು ಮುಂದುವರಿಯಲಿ. ನಿಮ್ಮ ನಾಡಿನ ಸಂಪನ್ಮೂಲಗಳನ್ನೆಲ್ಲಾ ಅವರು ಬದುಕಲು ಬಿಟ್ಟುಕೊಡಿ’ ಅಂದಂತಾಯಿತಲ್ಲಾ?

ಸರಿಯಾದ ‘ಜನಸಂಖ್ಯಾ ಸ್ಫೋಟ ನಿಯಂತ್ರಣ’ಕ್ರಮ ಹೀಗಿರಲಿ!

ಭಾರತವು ನಾನಾಭಾಷಿಕ ಜನಾಂಗಗಳ ತವರಾಗಿದೆಯಷ್ಟೇ ಅಲ್ಲದೆ ನಾನಾ ತೆರನಾದ ಭೌಗೋಳಿಕ ವೈವಿಧ್ಯತೆಯನ್ನೂ ಹೊಂದಿದೆ. ಇಲ್ಲಿ ಸಹಜವಾಗಿಯೇ ಒಂದು ಪ್ರದೇಶಕ್ಕೂ ಮತ್ತೊಂದಕ್ಕೂ ಒಂದು ಜನಾಂಗಕ್ಕೂ ಮತ್ತೊಂದಕ್ಕೂ ಜನಸಂಖ್ಯಾ ದಟ್ಟಣೆಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣವೆನ್ನುವ ಅಸ್ತ್ರವನ್ನು ವಿವೇಚನೆಯೊಂದಿಗೆ ಸರಿಯಾಗಿ ಪ್ರಯೋಗಿಸಬೇಕಾಗಿದೆ. ಸರಿಯಾದ ವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ೨.೧ರ ಸೂಚ್ಯಂಕವನ್ನು ಸಾಧಿಸುವ ಗುರಿಯನ್ನು ನಿಗದಿ ಪಡಿಸಬೇಕಾಗಿದೆ. ಯಾವ ರಾಜ್ಯ ೨.೧ರ ಗುರಿ ಮುಟ್ಟುತ್ತದೋ ಆ ರಾಜ್ಯಕ್ಕೆ ಹೆಚ್ಚು ಯೋಜನೆಗಳ, ಸಂಪನ್ಮೂಲ ಹರಿಸುವಿಕೆಯ, ತೆರಿಗೆ ವಿನಾಯತಿಯ ಪ್ರೋತ್ಸಾಹಕ ಉಡುಗೊರೆ ಕೊಡುವ ಮೂಲಕ ಗುರಿ ಸಾಧನೆಯತ್ತ ದಾಪುಗಾಲಿಡಬಹುದಾಗಿದೆ. ಒಮ್ಮೆ ಒಂದು ರಾಜ್ಯ ಗುರಿ ಸಾಧಿಸಿದೆಯೆಂದ ಮೇಲೆ ಆ ರಾಜ್ಯದಲ್ಲಿನ್ನು ಜನಸಂಖ್ಯಾ ನಿಯಂತ್ರಣ ಪ್ರಚಾರಾಂದಲನಗಳಿಗೆ ಕೊನೆ ಹಾಡಬಹುದಾಗಿದೆ. ಆದರೆ ಇಂದು ಭಾರತ ಸರ್ಕಾರ ಅನುಸರಿಸುತ್ತಿರುವ ನೀತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಸುರಿಯುವಂತಿದ್ದು ಕೆಲ ಜನಾಂಗಗಳನ್ನು ವಿನಾಶದೆಡೆಗೆ ತಳ್ಳುತ್ತಿದೆ. ಕಾಲಾಂತರದಲ್ಲಿ ಇವು ಹೇಳಹೆಸರಿಲ್ಲದಂತೆ ನಿರ್ನಾಮವಾಗಿಬಿಡುತ್ತವೆ. ಕಾಕತಾಳಿಯವೋ ಏನೋ, ಈ ಜನಾಂಗಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ್ದಾಗಿವೆ, ಹಿಂದಿಯೇತರ ಭಾಷಾ ಜನಾಂಗಗಳಾಗಿದೆ. ಭಾರತ ಬಹಳ ದೊಡ್ಡದು, ಹಾಗಾಗಿ ಕೇಂದ್ರಸರ್ಕಾರಕ್ಕೆ ನಾವು ಕಾಣಿಸದೇ ಇರಬಹುದು. ಆದರೆ ನಮ್ಮ ಹಿತ ಕಾಯಲೆಂದೇ ಅಸ್ತಿತ್ವದಲ್ಲಿರುವ ರಾಜ್ಯಸರ್ಕಾರಕ್ಕೆ, ರಾಜ್ಯದ ಆಡಳಿತ ಯಂತ್ರಕ್ಕೇನೂ ದೊಡ್ಡರೋಗ ಬಂದಿಲ್ಲವಲ್ಲಾ? ಇವರು ಒಟ್ಟು ಫಲವತ್ತೆತೆ ಸೂಚ್ಯಂಕವನ್ನು ಯಾವ ಕಾರಣಕ್ಕೂ ೨.೧ಕ್ಕಿಂತ ಕೆಳಗಿಳಿಸಲು ಯೋಜಿಸುವುದಾಗಲೀ, ಒಪ್ಪುವುದಾಗಲೀ ಮಾಡಬಾರದಲ್ಲಾ? ಅಂತರ ರಾಜ್ಯ ಅನಿಯಂತ್ರಿತ ವಲಸೆ ತಡೆಗಾಗಿ ಕಾಯ್ದೆ ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲ. ನಮ್ಮಂತೇ ಸವೆಯುತ್ತಿರುವ ರಾಜ್ಯಗಳನ್ನು ಒಗ್ಗೂಡಿಸಿ ಸರಿಯಾದ ನೀತಿಯನ್ನು ರೂಪಿಸುವಂತೆ ಹಟ ಹಿಡಿಯಬಹುದಲ್ಲಾ? ಕಡೇಪಕ್ಷ ಗುಜರಾತಿನಂತೆ ಕರ್ನಾಟಕಕ್ಕೆ ೨.೨ನ್ನಾದರೂ ಸೂಚ್ಯಂಕ ಗುರಿಯಾಗಿಸಲು ಲಾಬಿ ಮಾಡಬಹುದಲ್ಲಾ?

16 ಅನಿಸಿಕೆಗಳು:

ಗುಡುಗು ಮಿಂಚು ಅಂತಾರೆ...

ನಿಜಕ್ಕೂ ಅದ್ಬುತವಾದ ಲೇಖನ. ಸ್ವಾತಂತ್ರ ಬಂದಾಗಿನಿಂದಲೂ ಹಿಂದೀವಾಲಗಳ ದೌರ್ಜನ್ಯ ದಕ್ಷಿಣ ಭಾರತೀಯರ ಮೇಲೆ ಸತತವಾಗಿ ನಡೆಯುತ್ತಲೇ ಇದೆ. ಇಷ್ಟಾದರೂ ಕನ್ನಡಿಗರು "ಭಾರತೀಯ" ಎಂಬ ಸಂಕೋಚಕ್ಕೆ ಒಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದೇವೆ.

A klingon ಅಂತಾರೆ...

Bad analysis.!

The population control leads less poverty. As Kannada people become less and less poorer, they can spend money on education, health and etc. Hence leading a better life.

It is the trade off between the quality of life to quantity of life.

The immigrants are a good human resource using who with tact may give Karnataka a lot tax money and cheap labor.

ಆನಂದ್ ಅಂತಾರೆ...

ಮಾನ್ಯ klingon,
ಡಯಟ್ ಮಾಡುದ್ರೆ ಆರೋಗ್ಯಕ್ಕೆ ಒಳ್ಳೇದು. ಹಾಗಂತ ಸಾಯೋತನಕ ಉಪವಾಸ ಮಾಡಬೇಕಾ? ಜನಸಂಖ್ಯಾ ನಿಯಂತ್ರಣ ಬಡತನ ಕಮ್ಮಿ ಮಾಡುತ್ತೆ. ಚಿಕ್ಕದಾಗಿ ಹೇಳ್ತೀನಿ ಕೇಳಿ. ಇದೇ ಮಾತನ್ನು ಅನುಸರಿಸಿ ಕೊಡವರು ಒಂದೊಂದೇ ಮಗುವನ್ನು ಹಡೀತಾ ಹೋದರೆ ನೂರು ವರ್ಷಗಳಲ್ಲಿ ಏನಾಗುತ್ತೆ ಗೊತ್ತಾ? ಈಗ ಮೂರು ಲಕ್ಷದಷ್ಟು ಇರೋ ಕೊಡವರು ಕೆಲವೇ ಸಾವಿರಗಳಿಗೆ ಇಳಿದು ಹೋಗ್ತಾರೆ! ಪ್ರಪಂಚದಲ್ಲಿ ಯಾವತ್ತಿಗೂ ವಲಸಿಗ ಚೀಪ್ ಲೇಬರ್ರೇ! ಅಮೇರಿಕಾದಲ್ಲಿ ಭಾರತೀಯ ವಲಸಿಗ, ಬೆಂಗಳೂರಲ್ಲಿ ಬಿಹಾರಿ, ಅಸ್ಸಾಮಿ ವಲಸಿಗ, ಗೋವಾದಲ್ಲಿ ಕರ್ನಾಟಕದ ವಲಸಿಗ ಚೀಪ್ ಲೇಬರ್ರೇ! ಇದರ ಪರಿಣಾಮ ಏನು ಎನ್ನುವುದನ್ನು ತುಲನೆ ಮಾಡಿಕೊಳ್ಳುವುದು ವಿವೇಕ ಅನ್ನಿಸುತ್ತದೆ.

ವಂದನೆಗಳು

ಆನಂದ್

Ramanna ಅಂತಾರೆ...

Well thought Article.

I wonder if really anyone cares of these targets when it comes to implementation. A reality check to be made if any couple decides on number of children based on the target given by Govt !

Aravind M.S ಅಂತಾರೆ...

ಚೀಪ್ ಲೇಬರ್ ಅನ್ನೋದ್ರಲ್ಲಿ ಸಂಶಯವಿಲ್ಲ. ಅವರೇ ಜಾಸ್ತಿ ಆದ್ರೆ ಕೊನೆಗೆ ಅದೊಂದು ಹೊಸ ಕೋಮಾಗಿ ಪರಿವರ್ತಿಸಿ ನಮ್ಮನ್ನ ಡಾಮಿನೇಟ್ ಮಾಡಬಹುದೆನ್ನೋದೂ ಸುಳ್ಳಲ್ಲ

A klingon ಅಂತಾರೆ...

ಆನಂದ್,

Your argument is emotional rather than logical. Check out the policies about the family-welfare of many European countries specially the Nordic ones.

If we need our people have more children, we must provide the following so that having children doesn't lead to poverty. Our people must not think that children are burden.

1. Free and quality education for all the children at the least till a bachelor degree (including Engineering etc).
2. Free health care for all children till the age of 21 (thinking the start working at the age of 21)
3. 12 months of parental leave for working parents.
4. Other benefits such as counselling about how to bring up a child, how to manage family economy.
5. A safe environment for children. Ex. No street dogs, no child kidnappers, etc etc

When we can bring these economic and social reforms, automatically people are encouraged to have more children.!

A klingon ಅಂತಾರೆ...

"ಚೀಪ್ ಲೇಬರ್ ಅನ್ನೋದ್ರಲ್ಲಿ ಸಂಶಯವಿಲ್ಲ. ಅವರೇ ಜಾಸ್ತಿ ಆದ್ರೆ ಕೊನೆಗೆ ಅದೊಂದು ಹೊಸ ಕೋಮಾಗಿ ಪರಿವರ್ತಿಸಿ ನಮ್ಮನ್ನ ಡಾಮಿನೇಟ್ ಮಾಡಬಹುದೆನ್ನೋದೂ ಸುಳ್ಳಲ್ಲ"

How can they dominate?

Until and unless we have Kannada as the administrative language of the state, we are always in the advantage.


And when we provide excellent education and health to our own people, we get more power and intelligent. When intellectual capacity increases, they we will more and more entrepreneurs, industrialist, scientist etc etc who form the top class of our society.

The question where and how do we want our people in the social hierarchy? Do we want to improve our intellectual world or just create millions of poor people who can be easily looted and misguided?

Tamil Nadu and Kerala are good examples. They have good intellectual leadership and relatively good welfare society in India.

ಆನಂದ್ ಅಂತಾರೆ...

A klingon,

ಇಲ್ಲಿ ನಾನು ಯಾರದೋ ಮಕ್ಕಳು ಮಾಡಿಕೊಳ್ಳುವ ಆಶಯ/ ಸ್ವಾತಂತ್ರ್ಯದ ಬಗ್ಗೆ ಮಾತಾಡಿಲ್ಲ. ಬೇಕಾದವರು ಬೇಕಾದಷ್ಟು ಮಾಡಿಕೊಳ್ಳುತ್ತಾರೆ. ಅದು ಅವರವರ ಆರ್ಥಿಕ, ಸಾಮಾಜಿಕ, ಧಾರ್ಮಿಕ... ಮೊದಲಾದ ಕಾರಣಗಳಿರಬಹುದು. ನಾನು ಹೇಳುತ್ತಿರುವುದು ಭಾರತ ಸರ್ಕಾರ ರೂಪಿಸಿರುವ ಯೋಜನೆ ಹೇಗೆ ದುರುದ್ದೇಶದಿಂದ ಕೂಡಿದೆ ಎನ್ನುವುದನ್ನು. ಅಂಕಿ ಅಂಶಗಳನ್ನು ಸರ್ಕಾರದ ಅಂತರ್ಜಾಲ ತಾಣಗಳಿಂದಲೇ ಹೆಕ್ಕಲಾಗಿದೆ. ಅಂಗೈ ನೆಲ್ಲಿಯಂಥಾ ಮಾಹಿತಿಯನ್ನು ಒದಗಿಸಿದ್ದಾಗಲೂ ಅದು ಲಾಜಿಕಲ್ ಅಲ್ಲದೆ ಭಾವುಕತೆಯಿಮ್ದ ಕೂಡಿದೆ ಎನ್ನಿಸಿದೆ ಎನ್ನುತ್ತಿದ್ದೀರಾ! ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ...

Aravind M.S ಅಂತಾರೆ...

@ Klingon

How can they dominate?

Until and unless we have Kannada as the administrative language of the state, we are always in the advantage.'

ಡಾಮಿನೇಶನ್ ಆರ್ಥಿಕವಾಗಿ ಆಗಲಾರದು. ಆದರೆ ಬೇರೆ ರೀತಿಯಲ್ಲಿ ಆಗೋ ಸಂಭವಗಳಿವೆ - ಭಾಷಾ ಪಂಗಡಗಳು ನಮ್ಮನ್ನು ಆಳಬಲ್ಲದು. ನಮ್ಮ ಭಾಷೆಯವರು ಅಂದ ಕೂಡಲೇ ಯಾರೆಂಥವರೇ ಆದರೂ ಹೊಸ ಸಂಘ ಹುಟ್ಟು ಹಾಕಿ ಬಿಡೋದು ಒಂದು ಸಹಜ ಗುಣ. ಇಲ್ಲೇ ಇದ್ದು ತಮ್ಮದೇ ರಾಜ್ಯ ಕೇಳ್ತಾ ಇರೋ ನಮ್ಮದೇ ಜನಗಳೇ ಇದಕ್ಕೆ ಉದಾಹರಣೆ ?

ನೀವು ಹೇಳಿದಂತೆ ಆಡಳಿತ ಭಾಷೆ ಕನ್ನಡವಾಗಿ ಇರೋ ವರೆಗೆ ಇದು ಸಾಧ್ಯವಾಗಲಾರದು.

A klingon ಅಂತಾರೆ...

" ನಾನು ಹೇಳುತ್ತಿರುವುದು ಭಾರತ ಸರ್ಕಾರ ರೂಪಿಸಿರುವ ಯೋಜನೆ ಹೇಗೆ ದುರುದ್ದೇಶದಿಂದ ಕೂಡಿದೆ ಎನ್ನುವುದನ್ನು. ಅಂಕಿ ಅಂಶಗಳನ್ನು ಸರ್ಕಾರದ ಅಂತರ್ಜಾಲ ತಾಣಗಳಿಂದಲೇ ಹೆಕ್ಕಲಾಗಿದೆ. ಅಂಗೈ ನೆಲ್ಲಿಯಂಥಾ ಮಾಹಿತಿಯನ್ನು ಒದಗಿಸಿದ್ದಾಗಲೂ ಅದು ಲಾಜಿಕಲ್ ಅಲ್ಲದೆ ಭಾವುಕತೆಯಿಮ್ದ ಕೂಡಿದೆ ಎನ್ನಿಸಿದೆ ಎನ್ನುತ್ತಿದ್ದೀರಾ! ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ..."

A conspiracy theory, ye! There is not enough proof to support your claim ( at the least for me)

Population control is good for us, Kannada people. We must enrich ourselves with higher education and wealth.

We should become the employers! and we can get enough employee because we are a part of India.!

A klingon ಅಂತಾರೆ...

" ಇಲ್ಲೇ ಇದ್ದು ತಮ್ಮದೇ ರಾಜ್ಯ ಕೇಳ್ತಾ ಇರೋ ನಮ್ಮದೇ ಜನಗಳೇ ಇದಕ್ಕೆ ಉದಾಹರಣೆ ? "

I don't wanna guess the community that is pointed here.

The solution is simple, fill those rebellious place with cheap immigrants and make it very diverse...

Or is it what India doing to us Kannadigas?Anand might say so.!

Anonymous ಅಂತಾರೆ...

A klingon,

ರೀ ಸ್ವಾಮಿ, ನೀವು ಒಪ್ಪದಿದ್ರೆ ಬಿಡ್ರೀ... ನಿಮಗೆ ಏನು ಸರೀ ಅನ್ಸುತ್ತೋ ಅದನ್ನೇ ಮಾಡ್ಕೊಳ್ಳಿ... ಸುಮ್ನೆ ನಮ್ಮಂತ ಕೋಣಗಳ ಮುಂದೆ ಕಿನ್ನರಿ ನುಡುಸ್ಬೇಡಿ..

a klingon ಅಂತಾರೆ...

"ರೀ ಸ್ವಾಮಿ, ನೀವು ಒಪ್ಪದಿದ್ರೆ ಬಿಡ್ರೀ... ನಿಮಗೆ ಏನು ಸರೀ ಅನ್ಸುತ್ತೋ ಅದನ್ನೇ ಮಾಡ್ಕೊಳ್ಳಿ... ಸುಮ್ನೆ ನಮ್ಮಂತ ಕೋಣಗಳ ಮುಂದೆ ಕಿನ್ನರಿ ನುಡುಸ್ಬೇಡಿ.

This is the major problem with us Kannada people. Getting emotional!

Think calmly!. Always in the history a minority community ruled a majority. A minority dominated a majority.

We Kannada must rearrange our social structure. We must pull all the Kannadigas to the top class and push the immigrants to the lower classes. :D.

As Madhwacharya said, world is hierarchical. No body can get away with the hierarchy. Only one can move up and down.

Anonymous ಅಂತಾರೆ...

Dear a klingon,

Are you advocating that kannadigas should become minority, so that they can rule!
Please think for yourself - is it practical to put all people in a race superior? Even in kannada society, there are people of all cadres! Please do not bring madhwacharya here! Madhva siddhaaNta is one which preaches disparity! That is the one which is like taliban among brahmin community. Madhva siddhaanta calls everyone else as mayavadi and says they deserve to be punished.. It is a siddhaanta which is against equality & humanity!

Advaiti

A klingon ಅಂತಾರೆ...

@Advaiti

1. "Are you advocating that kannadigas should become minority, so that they can rule!"
A. We are already a minority in India. We only form Ca. 3% of India and > 64% of Karnataka. Is stating a fact an advocacy?

2. " is it practical to put all people in a race superior? Even in kannada society, there are people of all cadres! "
A. Yes. It is quite practical. The Germans have done it. The Swedes have done it. The Japanese have done it.

If we all Kannada people have the feeling of Kannada ethnic nationhood, then we are quite capable of achieving the supremacy!

3. "Please do not bring madhwacharya here! Madhva siddhaaNta is one which preaches disparity! That is the one which is like taliban among brahmin community. Madhva siddhaanta calls everyone else as mayavadi and says they deserve to be punished.. It is a siddhaanta which is against equality & humanity!"

A. Well.. you can put it anyway you want. Equality is an illusion. We cannot create an equal society ever. And all these soft qualitites such as, mercy and humanity etc etc must be shunned when the danger is annihilation of our community. It is natural to suppress others if we want to establish our supremacy and superiority. No disparity among Kannadigas. However, we cannot treat non-Kannada people as equal to us because they are not treating us as their equals!

Indian business domain is conquered by Gujaratis, Civil administration by Tamils and Malayalis, large Industries by Maharashtra, etc etc.. Name one big industry or enterprise owned by a 'native' Kannadiga ( Kannadiga with Kannada as the mother tongue).

If we don't do this now in our own homeland, then someone else will do it. And we will continue to suffer and become underdogs.

We must have a fighting spirit of a Klingon, cold logic like a Vulcan and cunningness like Ferengi but behave and simile like a Human. That's how this hypocritical world is.

If you have not watched Star trek, then watch it with great patience.

Let US live long and prosper, others can go to hell'.

ಪ್ರಶಾಂತ ಸೊರಟೂರ ಅಂತಾರೆ...

- ಕೇಂದ್ರ ಸರಕಾರದ ಜನಸಂಖ್ಯೆ ನಿಯಂತ್ರಣ ಯೋಜನೆಯಲ್ಲಿ ಇರುವ ಹುಳುಕನ್ನು ಇಲ್ಲಿ ಸರಿಯಾಗಿ ತಿಳಿಸಲಾಗಿದೆ
ಭಾರತದಂತ ಹಲತನ ಇರುವ ನಾಡನ್ನು ’ಒಂದೇ’ ಅನ್ನುವಂತ ಪೊಳ್ಳು ತಳಹದಿ ಮೇಲೆ ಇಟ್ಟು ಒಂದು ನುಡಿ ಗುಂಪು ಇಲ್ಲವಾಗುವಂತ ನಡೆ ಇದರಲ್ಲಿ ಹುದುಗಿರುವುದು ಕಾಣುತ್ತದೆ.
- ಕನ್ನಡಿಗರು ಬರೀ ಮೇಲಿನ ಹುದ್ದೆಗಳಲ್ಲಿ ಇದ್ದರೆ ಒಂದು ನಾಡನ್ನು ಕಟ್ಟಲಾಗದು. ಮೇಲಿನವರು ಎಲ್ಲವನ್ನೂ ಹಿಡಿದಿಟ್ಟು, ಕೆಳಗಿನವರನ್ನು ಮುನ್ನಡೆಸಬಹುದು ಅನ್ನುವುದು ಹುಸಿ ನಂಬಿಕೆ.
ಸಾಮಾನ್ಯ ಕೆಲಸದಿಂದ ಹಿಡಿದು ಒಂದು ದೊಡ್ಡ ಕಂಪನಿ ಕಟ್ಟುವ/ಬೆಳೆಸುವ ಮಂದಿ ಕನ್ನಡಿಗರಾಗಬೇಕು.
- ಕರ್ನಾಟಕಕ್ಕೆ ವಲಸಿಗರ ಮಿತಿ ಮೀರುವಂತ ಏರ್ಪಾಟುಗಳನ್ನು ತೆಗೆದುಹಾಕಬೇಕು.
(ಸಾರಿಗೆಯಲ್ಲಿ ಕನ್ನಡೇತರ ನುಡಿಗಳನ್ನು ಬಳಸುವುದು, ಮತಕ್ಕಾಗಿ ಅವರನ್ನು ಓಲೈಸುವುದು, ನಮ್ಮದು ಕಾಸ್ಮೋಪಾಲಿಟನ್ ಸಂಸ್ಕೃತಿ ಅಂತಾ ಬೊಬ್ಬೆ ಹೊಡೆದು ಎಲ್ಲವನ್ನೂ ವಲಸಿಗರಿಗಾಗಿ ತೆರೆದಿಡುವುದನ್ನು ಬಿಡಬೇಕು)
- ಕನ್ನಡಿಗರ ಕಲಿಕೆ/ಬಾಳು ಮೇಲ್ಮಟ್ಟಕ್ಕೆ ತರಬೇಕು ಅನ್ನುವುದು ಒಪ್ಪತಕ್ಕ ಮಾತು ಆದರೆ ಅದಕ್ಕೆ ಕನ್ನಡಿಗರೇ ಕಡಿಮೆಯಾಗುವ ಜನಸಂಖ್ಯೆ ನಿಯಂತ್ರಣದ ನಡೆ ಸರಿಯಲ್ಲ. ಕರ್ನಾಟಕದ ದಟ್ಟಣೆಗೆ ಹೊಂದಿಕೊಳ್ಳವಂತೆ ಏಳಿಗೆ ಹೊಂದಿದ
ನಾಡುಗಳನ್ನು ನೋಡಿಕೊಂಡು ಯೋಜನೆ ಹಮ್ಮಿಕೊಳ್ಳಬೇಕು. (ಜನಸಂಖ್ಯೆ ಇಂದಿನ ದಿನಗಳಲ್ಲಿ ಒಂದು ಸಾಟಿಯಿಲ್ಲದ ಶಕ್ತಿ ಅನ್ನುವುದು ಚೀನಾದಂತಹ ದೇಶಗಳನ್ನು ನೋಡಿ ತಿಳಿದುಕೊಳ್ಳಬಹುದು)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails