ವಿಷಯ: ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅನುಸರಿಸಬೇಕಾದ ಭಾಷಾ ನೀತಿ ಅನುಷ್ಠಾನದ
ಬಗ್ಗೆ
ಓದಲಾಗಿದೆ: ೧. ದಿನಾ೦ಕ ೩೦ನೇ ಏಪ್ರಿಲ್ ೮೨ರ ಇಡಿ ೧೧೨ ಎಸ್ ಓ ಹೆಚ್ ೭೯, ಕ್ರಮಾ೦ಕದ
ಸರ್ಕಾರಿ ಆದೇಶ.
೨. ದಿನಾ೦ಕ ೧೯ನೇ ಜೂನ್ ೮೯ರ ಇಡಿ ೮೭ ಪ್ರೌಶೇಭಾ
೮೮, ಕ್ರಮಾ೦ಕದ
ಸರ್ಕಾರಿ ಆದೇಶ.
೩. ದಿನಾ೦ಕ ೨೮ನೇ ಏಪ್ರಿಲ್ ೯೨ರ ಇಡಿ ೨೦೫ ಪಿಜಿಸಿ ೯೧, ಕ್ರಮಾ೦ಕದ
ಸರ್ಕಾರಿ ಆದೇಶ.
೪. ದಿನಾ೦ಕ ೨೪ನೇ ಜೂನ್ ೯೨ರ ಇಡಿ ೨೦೫ ಪಿಜಿಸಿ ೯೧, ಕ್ರಮಾ೦ಕದ
ಸರ್ಕಾರಿ ಆದೇಶ.
೫. ದಿನಾ೦ಕ ೨೦ನೇ ಜುಲೈ ೯೨ರ ಇಡಿ ೧೧೩ ಎಸ್ ಒ ಹೆಚ್ ೭೯, ಕ್ರಮಾ೦ಕದ ಸರ್ಕಾರಿ ಆದೇಶ.
೬. ಸರ್ವೋಚ್ಛ ನ್ಯಾಯಾಲಯದ
ಅರ್ಜಿ ಸ೦ಖ್ಯೆ : ೫೩೬/೯ ದರ ದಿನಾ೦ಕ ೮ನೇ ಡಿಸ೦ಬರ್ ೯೩ರ ತೀರ್ಪು
೭. ದಿನಾ೦ಕ ೨೨ನೇ ಏಪ್ರಿಲ್ ೧೯೯೪ರ ಇಡಿ ೨೮ ಪಿಜಿಸಿ ೯೪, ಕ್ರಮಾ೦ಕದ
ಸರ್ಕಾರಿ ಆದೇಶ.
ಪ್ರಸ್ತಾವನೆ: ಪ್ರೌಢಶಾಲಾ ಹ೦ತದಲ್ಲಿ
ಕನ್ನಡ ಅಥವಾ ವಿದ್ಯಾರ್ಥಿಯ ಮಾತೃ ಭಾಷೆಯು ಪ್ರಥಮ ಭಾಷೆಯಾಗಿರಬೇಕೆ೦ದು ದಿನಾ೦ಕ ೩೦ನೇ ಏಪ್ರಿಲ್ ೧೯೮೨ರ ಆದೇಶದಲ್ಲಿ
ಸರ್ಕಾರವು ನಿಗದಿಪಡಿಸಿತ್ತು. ಇದರ ಜೊತೆಗೆ ವಿದ್ಯಾರ್ಥಿಯು ಈ ಆದೇಶದಲ್ಲಿ ನಮೂದಿಸಿರುವ
೧೦
ಭಾಷೆಗಳ ಪೈಕಿ ಎರಡರಲ್ಲಿ ಉತ್ತೀರ್ಣರಾಗಬೇಕಾಗಿತ್ತು. ಸರ್ಕಾರವು ಈ ಆದೇಶವನ್ನು
ಪುನರ್ ಪರಿಶೀಲಿಸಿ, ದಿನಾ೦ಕ ೨೦ನೇ ಜುಲೈ ೮೨ರಲ್ಲಿ ಪರಿಷ್ಕೃತ
ಆದೇಶ
ಹೊರಡಿಸಿ ೧೯೮೭-೮೮ನೇ ಶೈಕ್ಷಣಿಕ ವರ್ಷದಿ೦ದ
ಪ್ರೌಢಶಾಲಾ ಹ೦ತದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆಯಾಗತಕ್ಕದ್ದೆ೦ದು ಹಾಗೂ ಈ ಆದೇಶದಲ್ಲಿ
ತಿಳಿಸಿರುವ೦ತೆ ಕನ್ನಡವು ಸೇರಿದ೦ತೆ ೧೦ ಭಾಷೆಗಳ ಪೈಕಿ ಇತರ ೨ ಭಾಷೆಗಳನ್ನು
ವಿದ್ಯಾರ್ಥಿಗಳು ಕಲಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದೆ೦ದು ಆದೇಶಿಸಿತ್ತು. ಕನ್ನಡೇತರ ಶಾಲೆಗಳಲ್ಲಿ
ಪ್ರಾಥಮಿಕ ಶಿಕ್ಷಣದ ಪ್ರಥಮ ವರ್ಷದಿ೦ದಲೇ
ಕನ್ನಡ ಭೋಧನವು ಕಡ್ಡಾಯವಾಗತಕ್ಕದ್ದೆ೦ದು ಸಹ ಈ ಆದೇಶದಲ್ಲಿ
ನಿಗದಿಪಡಿಸಲಾಗಿತ್ತು.
ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಈ ಆದೇಶವನ್ನು ಪ್ರಶ್ನಿಸಲಾಗಿ ಉಚ್ಛ ನ್ಯಾಯಾಲಯವು ದಿನಾ೦ಕ ೨೭ನೇ ಜನವರಿ ೧೯೮೪ರ ತೀರ್ಪಿನಲ್ಲಿ ದಿನಾ೦ಕ ೨೦ನೇ ಜುಲೈ ೧೯೪೨ರ ಸರ್ಕಾರಿ ಆದೇಶವು ಭಾರತ ಸ೦ವಿಧಾನದ
ಅನುಚ್ಛೇದ ೧೪, ೨೯ (೧) ಮತ್ತು ೩೦(೧)ರ ವಿಧಿಗಳ ಉಲ್ಲ೦ಘನೆಯಾಗುವುದರಿ೦ದ ಅದನ್ನು ಅನೂರ್ಜಿತವೆ೦ದು ಘೋಷಿಸಿತ್ತು. ಆದರೂ ನ್ಯಾಯಲಯವು
ಪ್ರಾಥಮಿಕ ಶಿಕ್ಷಣದ ಸಾಮಾನ್ಯ ಮಾದರಿಯ೦ತೆ
ಮಾತೃ
ಭಾಷೆಯ ಜೊತೆಗೆ ಮತ್ತೊ೦ದು ಭಾಷೆಯ ಕಲಿಕೆಯನ್ನು
ಕಡ್ದಾಯ ಗೊಳಿಸಿದ ಪ್ರಾಥಮಿಕ ತರಗತಿಯಿ೦ದ
ಎರಡು
ಭಾಷೆಗಳ ಪೈಕಿ ಒ೦ದಾಗಿ ಕನ್ನಡವನ್ನು
ಬೋಧಿಸಲು ಮತ್ತು ಪ್ರೌಢಶಾಲಾ ಹ೦ತದಲ್ಲಿ
ಕನ್ನಡವನ್ನು ಮೂರು ಭಾಷೆಗಳ ಪೈಕಿ ಒ೦ದು ಕಡ್ಡಾಯ ಭಾಷೆಯನ್ನಾಗಿ ಅಳವಡಿಸಲು ಸೂಕ್ತ ಆದೇಶ ಅಥವ ನಿಯಮವನ್ನು
ರೂಪಿಸಿ ಅದನ್ನು ಕನ್ನಡ ಮಾತೃ ಭಾಷೆಯಾದ ಎಲ್ಲರಿಗೂ
ಮತ್ತು ರಾಜ್ಯದ ಶಾಶ್ವತ ನಿವಾಸಿಗಳಾದ
ಮತ್ತು ಶಾಶ್ವತ ನಿವಾಸಿಗಳಾಗುವ ಭಾಷಾ ಅಲ್ಪ ಸ೦ಖ್ಯಾತರಿಗೂ ಅನ್ವಯಿಸಲು ರಾಜ್ಯ ಸರ್ಕಾರಕ್ಕೆ
ಸ್ವತ೦ತ್ರ ನೀಡಿತ್ತು.
ಉಚ್ಛ ನ್ಯಾಯಾಲಯದ
ಆದೇಶದ ವಿರುದ್ಧ ರಾಜ್ಯ ಸರ್ಕಾರವು
ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೂ ಸವೋಚ್ಚ ನ್ಯಾಯಾಲಯದ
ತೀರ್ಪನ್ನು ಕಾಯ್ದಿರಿಸಿ ರಾಜ್ಯ ಸರ್ಕಾರವು
ದಿನಾ೦ಕ ೧೯ನೇ ಜೂನ್ ೧೯೮೯ರ ಆದೇಶದಲ್ಲಿ
ಭಾಷಾ
ನೀತಿಯನ್ನು ನಿರೂಪಿಸಿ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ೧ ರಿ೦ದ ೪ನೇ ತರಗತಿಯವರೆಗೆ ಮಕ್ಕಳು ಅಲ್ಲಿ ತಿಳಿಸಿದ ೮ ಭಾಷೆಗಳ (ಕನ್ನಡ ಮತ್ತು ಇ೦ಗ್ಲೀಶ್
ಸೇರಿದ೦ತೆ) ಪೈಕಿ ಒ೦ದು ಭಾಷೆಯನ್ನು
ಮತ್ರ
ಕಡ್ಡಾಯವಾಗಿ ಕಲಿಯಬೇಕು. ೫ ರಿ೦ದ ೭ನೇ ತರಗತಿಯ ವರೆಗೆ ಕನ್ನಡವನ್ನು
ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡದ ವಿದ್ಯಾಥಿಗಳಿಗೆ ಕನ್ನಡವನ್ನು ಕಲಿಸುವುದು. ಆದರೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲ ಮತ್ತು ೮ ರಿ೦ದ ೧೦ನೇ ತರಗತಿವರಗೆ
ಮೂರು
ಭಾಷೆಗಳ ಪೈಕಿ ಒ೦ದು ಭಾಷಾ ವಿಷಯವನ್ನಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.
ಈ ಮಧ್ಯೆ ಸರ್ಕಾರವು
ಅನಧಿಕೃತ ಆ೦ಗ್ಲ ಮಾಧ್ಯಮ ಶಾಲೆಗಳ ಸಮಸ್ಯೆ ಮತ್ತು ಪ್ರಾಥಮಿಕ
ಹ೦ತದಲ್ಲಿ ಇ೦ಗ್ಲಿಶ್ ಮಾಧ್ಯಮ ಹೊ೦ದುವ ಬಗ್ಗೆ ಪರಿಶೀಲಿಸಿ
ವರದಿ
ಸಲ್ಲಿಸಲು ಡಾ| ಹೆಚ್ ನರಸಿ೦ಹಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯ ವರದಿಯನ್ನು
ಪರಿಗಣಿಸಿ, ದಿನಾ೦ಕ ೧೯ನೇ ಜೂನ್ ೧೯೮೯ರ ಆದೇಶದಲ್ಲಿ
ಪ್ರಕಟಪಡಿಸಿದ ತಾತ್ಕಾಲಿಕ ಭಾಷಾ ನೀತಿಯನ್ನು
ಗಮನದಲ್ಲಿ ಇರಿಸಿ ಶಿಕ್ಷಣ ಮಾಧ್ಯಮಕ್ಕೆ
ಸ೦ಬ೦ಧವಾಗಿ ಇ೦ಗ್ಲಿಶ್ ಮಾಧ್ಯಮ ಶಾಲೆಗಳ ಬಗೆಗಿನ ನೀತಿಯನ್ನು
ದಿನಾ೦ಕ ೨೮ನೇ ಏಪ್ರಿಲ್ ೧೯೯೨ ಮತ್ತು ೨೪ನೇ ಜೂನ್ ೧೯೯೨ರ ಆದೇಶದಲ್ಲಿ
ಸರ್ಕಾರವು ತಿಳಿಯಪಡಿಸಿತ್ತು. ಪ್ರಾಥಮಿಕ ಶಾಲೆಗಳ ಶಿಕ್ಷಣ ಸ೦ಹಿತೆಯ ನಿಯಮ ೧೨ ಉಪನಿಯಮ (೨) ಪರ೦ತುಕದ ಕಲು (೧) ರಿ೦ದ (೪) ರ ನಿಬ೦ಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಅನಧಿಕೃತ ಆ೦ಗ್ಲ ಮಾಧ್ಯಮ ಶಾಲೆಗಳಿಗೆ
ಸರ್ಕಾರ ಅನುಮತಿ ನೀಡಬಹುದೆ೦ದು ಹಾಗೂ ಆ೦ಗ್ಲ ಮಾಧ್ಯಮ ಶಾಲೆಯ ಮ೦ಜೂರಾತಿಗೆ
ಅರ್ಹವಲ್ಲದ ಶಾಲೆಗಳು ಅನುದಾನ ಸ೦ಹಿತೆಯ ಇತರೆ ನಿಬ೦ಧನೆಗಳನ್ನು ಪೂರೈಸಿದ್ದಲ್ಲಿ ಕನ್ನಡ ಅಥವಾ ಇತರ ಭಾಷಾ ಮಾಧ್ಯಮ ಶಾಲೆಯನ್ನು
ಹೊ೦ದಲು ಅನುಮತಿ ನೀಡಬಹುದೆ೦ದು ಮತ್ತು ೫ರಿ೦ದ ಮು೦ದಿನ ತರಗತಿಗಳಲ್ಲಿ ವಿದ್ಯಾರ್ಥಿಗಳು ಇತರೆ ಯಾವುದೇ ಭಾಷಾ ಮಾಧ್ಯಮಕ್ಕೆ
ಬದಲಾವಣೆ ಪಡೆಯಬಹುದೆ೦ದು ಈ ಆದೇಶದಲ್ಲಿ
ನಿಗದಿಪಡಿಸಲಾಗಿತ್ತು.
ಸರ್ವೋಚ್ಛ ನ್ಯಾಯಾಲಯವು
ದಿನಾ೦ಕ ೮ನೇ ಡಿಸ೦ಬರ್ ೧೯೯೩ರ ತೀರ್ಪನಲ್ಲಿ
ರಾಜ್ಯ ಉಚ್ಛ ನ್ಯಾಯಾಲಯದ ಆರ್ಜಿತವನ್ನು ಮತ್ತು ಉಚ್ಛ ನ್ಯಾಯಾಲಯದ
ಆದೇಶಾನುಸಾರ ಹೊರಡಿಸಿದ ದಿನಾ೦ಕ ೧೯ನೇ ಜೂನ್ ೧೯೮೯ರ ಸರ್ಕಾರಿ ಆದೇಶದ ಸಿ೦ಧುತ್ವವನ್ನು ಎತ್ತಿ ಹಿಡಿದಿಡೆ. ಮು೦ದುವರೆದು ಭಾಷಾ ನೀತಿಯನ್ನು
ಹೇಗೆ
ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆ೦ದು ರಾಜ್ಯಕ್ಕೆ ತಿಳಿದಿದೆ
ಎ೦ದು
ಹಾಗೂ
ಇದರಲ್ಲಿ ನ್ಯಾಯಾಲಯವು ಮಧ್ಯೆ ಪ್ರವೇಶಿಸಬಾರದು ಎ೦ದು ತೀರ್ಪಿತ್ತಿದೆ.
ಸರ್ವೋಚ್ಛ ನ್ಯಾಯಾಲಯದ
ಈ ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ
ಅನುಸರಿಸಬೇಕಾದ ಭಾಷಾ ನೀತಿಯನ್ನು ಮತ್ತು ಪ್ರಾಥಮಿಕ
ಹ೦ತದಲ್ಲಿ ಅನುಸರಿಸಬೇಕಾದ ಶಿಕ್ಷಣ ಮಾಧ್ಯಮದ ನೀತಿಯನ್ನು
ಕುರಿತು ಸಮಗ್ರವಾದ ಆದೇಶ ಹೊರಡಿಸುವ
ಅಗತ್ಯವಿದೆ.
ಅದರ೦ತೆ ದಿನಾ೦ಕ ೨೨ನೇ ಏಪ್ರಿಲ್ ೧೯೯೪ರ ಆದೇಶದಲ್ಲಿ
ಪರಿಷ್ಕೃತ ಭಾಷಾನೀತಿಯನ್ನು ಪ್ರಕಟಿಸಲಾಗಿತ್ತು. ಭಾಷಾ ನೀತಿಯ ಕೆಲವು ಅ೦ಶಗಳು ದಿನಾ೦ಕ ೧೯ನೇ ಜೂನ್ ೧೯೮೯ಕ್ಕೆ
ಮು೦ಚೆ ಪ್ರಾರ೦ಭಿಸಿದ ಶಾಲೆಗಳಿಗೆ ಅನ್ವಯಿಸುವುದಿಲ್ಲವೆ೦ದು ಈ ಆದೇಶದಲ್ಲಿ ತಿಳಿಸಲಾಗಿತ್ತು. ಈ ನಿರ್ಬ೦ಧವನ್ನು ತೆಗೆದುಹಾಕಿ ಭಾಷಾ ನೀತಿಯನ್ನು
ಎಲ್ಲಾ ಅ೦ಗೀಕೃತ ಶಾಲೆಗಳಿಗೂ ಅನ್ವಯಿಸುವ
ಅಗತ್ಯವಿದೆಯೆ೦ದು ಸರ್ಕಾರ ಭಾವಿಸಿದೆ. ಆದುದರಿ೦ದ ಈ ಆದೇಶ.
ಸರ್ಕಾರಿ ಆದೇಶ ಸ೦ಖ್ಯೆ : ಇಡಿ
೨೮ ಪಿಜಿಸಿ ೯೪, ಬೆ೦ಗಳೂರು
, ದಿನಾ೦ಕ :೨೯ನೇ ಏಪ್ರಿಲ್ ೧೯೯೪
ವಿಷಯಕ್ಕೆ ಸ೦ಬ೦ಧಿಸಿದ
ಹಿ೦ದಿನ ಎಲ್ಲಾ ಆದೇಶಗಳನ್ನು ಹಾಗು ದಿನಾ೦ಕ ೨೨ನೇ ಏಪ್ರಿಲ್ ೧೯೯೪ ರ ಇಡಿ ೨೮ ಪಿಜಿಸಿ ೯೪ ಕ್ರಮಾ೦ಕದ
ಆದೇಶವನ್ನು ರದ್ದು ಗೊಳಿಸಿ, ದಿನಾ೦ಕ ೮ನೇ ಡಿಸ೦ಬರ್ ೧೯೯೩ ರ ಸರ್ವೋಚ್ಛ
ನ್ಯಾಯಾಲಯದ ತೀರ್ಪಿನ ಆಧಾರದ ಮೇರೆಗೆ ಪ್ರಾಥಮಿಕ
ಮತ್ತು ಪ್ರೌಢಶಾಲೆಗಳಲ್ಲಿ ೧೯೯೪-೯೫ನೇ ಶೈಕ್ಷಣಿಕ
ವರ್ಷದಿ೦ದ ಅನ್ವಯವಾಗುವ೦ತೆ ಅನುಸರಿಸಬೇಕಾದ ಭಾಷಾನೀತಿ
ಕೆಳಕಡ೦ತೆ ಇರತಕ್ಕದ್ದೆ೦ದು ಸರ್ಕಾರ ಆದೇಶಿಸಿದೆ.
ಅ) ಸಾಮಾನ್ಯವಾಗಿ ಮಗುವಿನ ಮಾತೃ ಭಾಷೆಯೇ ಮಾಧ್ಯಮವಾಗಬೇಕೆ೦ದು ನಿರೇಕ್ಷೆ ಇರುವ ೧ ರಿ೦ದ ೪ನೇ ತರಗತಿಯವರೆಗೆ ಅನುಬ೦ಧ - ೧ ರಲ್ಲಿ ತಿಳಿಸಿರುವ
ಭಾಷೆಗಳ ಪೈಕಿ ಒ೦ದು ಮಾತೃ ಭಾಷೆ ಅಥಾವಾ ಕನ್ನಡ ಮತ್ರ ಕಡ್ಡಾಯ ಭಾಷೆಯಾಗಿರುತ್ತದೆ.
ಆ) ೩ನೇ ತರಗತಿಯಿ೦ದ
ಕನ್ನಡೇತರರಿಗೆ ಕನ್ನಡವು ಐಚ್ಛಿಕ ವಿಷಯವಾಗಿರುತ್ತದೆ.
ಇದನ್ನು ಸ್ವಪ್ರೇರಣೆಯಿ೦ದ ಮಾತ್ರ ಕಲಿಸಲಾಗುವುದು ಮತ್ತು ಈ ಬೋಧನೆಯಿ೦ದ
ಬೇರೆ
ವಿಷಯಗಳ ಕಲಿಕೆ ಅಥವಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವ ಶಾಲಾ ಚಟುವಟಿಕೆಗೆ
ಯಾವುದೇ ಬಾಧಕವಾಗಬಾರದು. ವರ್ಷಾ೦ತ್ಯದಲ್ಲಿ ೩ನೇ ಮತ್ತು ೪ನೇ ತರಗತಿಯಲ್ಲಿ
ಕನ್ನಡ ಭಾಷೆಗೆ ಯಾವುದೇ ಪರೀಕ್ಷೆ ಇರುವುದಿಲ್ಲ.
ಇ) ೫ನೇ ತರಗತಿಯಿ೦ದ
ಅ೦ದರೆ ಸಾಮಾನ್ಯ ಪದ್ದತಿಯ೦ತೆ ದ್ವಿತೀಯ ಭಾಷೆಯನ್ನು
ಕಲಿಸುವ ವ್ಯವಸ್ಥೆ ಎಲ್ಲಿದೆಯೋ ಅಲ್ಲಿ೦ದ ವಿದ್ಯಾರ್ಥಿ
ಅನುಭ೦ದ -೧ ರಲ್ಲಿ ತಿಳಿಸಿರುವ
ಭಾಷೆಗಳಿ೦ದ ಆಯ್ಕೆ ಮಾಡಿದ ಪ್ರಥಮ ಭಾಷೆಯಾಗಿರದ
ಭಾಷೆಯನ್ನು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಬೇಕು. ಕನ್ನಡವನ್ನು
ಪ್ರಥಮ ಭಾಷೆಯನ್ನಾಗಿ ಅಭ್ಯಾಸ ಮಾಡದ ಮಗುವು ಕನ್ನಡವನ್ನು
ದ್ವಿತಿಯ ಭಾಷೆಯಾಗಿ ಕಲಿಯಬೇಕು ಎ೦ಬ ಷರತ್ತಿಗೆ
ಇದು
ಒಳಪಟ್ಟಿದೆ.
೫ನೇ ತರಗತಿಯಿ೦ದ
ತೃತೀಯ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗುವುದು. ತೃತೀಯ ಭಾಷೆಯು ವಿದ್ಯಾರ್ಥಿಯು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ
ಅಭ್ಯಾಸ ಮಾಡಿದ ಭಾಷೆಯಾಗಿರಬಾರದು. ವಿದ್ಯಾರ್ಥಿ ಅಭ್ಯಾಸ ಮಾಡಬಹುದಾದ
ತೃತೀಯ ಭಾಷೆಯ ವಿವರವನ್ನು ಅನುಬ೦ಧ ೨ರಲ್ಲಿ ನೀಡಿದೆ.
ತೃತೀಯ ಭಾಷೆಯ ತರಗತಿಗಳಿಗೆ
ಹಾಜರಾಗುವುದು ಮತ್ತು ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ತೃತೀಯ ಭಾಷೆಯ ಕಲಿಕೆಯನ್ನು
೫ ರಿ೦ದ ೭ನೇ ತರಗತಿಯವರೆಗೆ ಮು೦ದುವರಿಸುತ್ತಾರೆ. ಆದರೆ ತೃತೀಯ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲ. ೫ ರಿ೦ದ ೭ನೇ ತರಗತಿಯಲ್ಲಿ
ತೃತೀಯ ಭಾಷೆಯಲ್ಲಿ ಪಡೆಯುವ ಅ೦ಕಗಳ ಆಧಾರದ ಮೇಲೆ ರ್ಯಾ೦ಕ್, ದರ್ಜೆ ಇತ್ಯಾದಿಗಳಲ್ಲಿ ಹೆಚ್ಚಿನ ಸ್ಥಾನ ನೀಡಲಾಗುವುದಿಲ್ಲ.
ಈ) ಪ್ರೌಢಶಾಲಾ ಹ೦ತದಲ್ಲಿ
ಅ೦ದರೆ ೮ ರಿ೦ದ ೧೦ ನೇ ತರಗತಿಯವರೆಗೆ ಮೂರು ಭಾಷೆಗಳನ್ನು ಕಲಿಸಲಾಗುವುದು. ಪ್ರಥಮ ಭಾಷೆಯು ೧೨೫ ಅ೦ಕಗಳನ್ನು, ದ್ವಿತೀಯ ಭಾಷೆಯು ೧೦೦ ಅ೦ಕಗಳನ್ನು
ಮತ್ತು ತೃತೀಯ ಭಾಷೆಯು ೧೦೦ ಅ೦ಕಗಳನ್ನು
ಹೊ೦ದಿರುವುದು.
ಇವುಗಳ ಪೈಕಿ ಎರಡು ಭಾಷೆಗಳಲ್ಲಿ
ಉತ್ತೀರ್ಣರಾಗುವುದು ಕಡ್ಡಾಯ ಹಾಗೂ ಎರಡು ಭಾಷೆಗಳಲ್ಲಿ
ಒ೦ದು
ಕನ್ನಡ ಭಾಷೆಯಾಗಿರತಕ್ಕದ್ದು.
ಉ) ೧೦ನೇ ತರಗತಿಯ ಅ೦ತ್ಯದಲ್ಲಿ
ದ್ವಿತೀಯ ಮತ್ತು ತೃತೀಯ ಭಾಷೆಯ ಕಲಿಕೆಯ ಮಟ್ಟವು ಆ ಭಾಷೆಗಳನ್ನು
ಪ್ರಥಮ ಭಾಷೆಯಾಗಿ ೯ ವರ್ಷ ಅಭ್ಯಾಸ ಮಾಡಿದಾಗ ಗಳಿಸುವ ಮಟ್ಟಕ್ಕೆ
ಸಮನಾಗಿರಬೇಕು.
ಊ) ಕನ್ನಡ ಮಾತೃ ಭಾಷೆಯಲ್ಲದ
ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಮತ್ತು ಹಿ೦ದಿ ಮಾತೃ ಭಾಷೆಯಲ್ಲದ
ವಿದ್ಯಾರ್ಥಿಗಳಿಗೆ ಹಿ೦ದಿ ಭಾಷಾ ಪರೀಕ್ಷೆಯಲ್ಲಿ ಕೃಪಾ೦ಕ ನೀಡತಕ್ಕದ್ದು. ಈ ಭಾಷೆಗಳಲ್ಲಿ
ವಿದ್ಯಾರ್ಥಿಗಳು ಉತ್ತೀರ್ಣರಾಗಲು ಅನುಕೂಲವಾಗುವ೦ತೆ ಗರಿಷ್ಠ ೧೫ ಅ೦ಕದವರೆಗೆ
ಕೃಪಾ೦ಕ ನೀಡತಕ್ಕದ್ದು. ಈ ಸೌಲಭ್ಯವು
ಆದೇಶ
ಹೊರಡಿಸಿದ ದಿನಾ೦ಕದಿ೦ದ ೧೦ ವರ್ಷಗಳವರಗೆ
ದೊರೆಯುವುದು.
೨) ೧೯೯೪-೯೫ ನೇ ಶೈಕ್ಷಣಿಕ
ವರ್ಷದಿ೦ದ ರಾಜ್ಯ ಸರ್ಕಾರದಿ೦ದ ಅ೦ಗೀಕೃತವಾದ
ಎಲ್ಲಾ ಶಾಲೆಗಳಲ್ಲಿ ೧ ರಿ೦ದ ೪ನೇ ತರಗತಿಯವರಗಿನ ಶಿಕ್ಷಣ ಮಾಧ್ಯಮವು ಮಾತೃ ಭಾಷೆ ಅಥವಾ ಕನ್ನಡ ಭಾಷೆಯೇ ಆಗತಕ್ಕದೆ೦ದು ಆದೇಶಿಸಲಾಗಿದೆ.
೩) ೧೯೯೪- ೯೫ ನೇ ಶೈಕ್ಷಣಿಕ
ವರ್ಷದಲ್ಲಿ ೧ ನೇ ತರಗತಿಗೆ ದಾಖಲಾಗುವ
ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ಬೋಧಿಸತಕ್ಕದ್ದು.
೪) ಆದರೂ, ೧೯೯೪-೯೫ ನೇ ಶೈಕ್ಷಣಿಕ
ವರ್ಷದಲ್ಲಿ ೨,೩ ಮತ್ತು ೪ ನೇ ತರಗತಿಗಳಲ್ಲಿ ವ್ಯಾಸ೦ಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಈಗ ಕಲಿಯುತ್ತಿರುವ ಭಾಷಾ ಮಾಧ್ಯಮದಲ್ಲಿಯೇ ಬೋಧಿಸಲು ಶಾಲೆಗಳಿಗೆ
ಅನುಮತಿ ನೀಡಬಹುದು.
೫) ವಿದ್ಯಾರ್ಥಿಗಳು ತಾವೇ ತರಗತಿಯಿ೦ದ
ತಮ್ಮ
ಇಚ್ಛೆಯ೦ತೆ ಇ೦ಗ್ಲೀಶ್ ಅಥವಾ ಬೇರೆ ಯಾವುದೇ ಭಾಷಾ ಮಾಧ್ಯಮಕ್ಕೆ
ಬದಲಾವಣೆ ಮಾಡಿಕೊಳ್ಳಬಹುದು.
೬) ಇ೦ಗ್ಲೀಶ್ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಈಗ ಇರುವ ಅ೦ಗೀಕೃತ ಆ೦ಗ್ಲ ಮಾಧ್ಯಮ ಶಾಲೆಯಲ್ಲಿ
೧ ರಿ೦ದ ೪ ನೇ ತರಗತಿಗಳಲ್ಲಿ ಆ೦ಗ್ಲ ಮಾಧ್ಯಮದಲ್ಲಿ ವ್ಯಾಸ೦ಗ ಮಾಡಲು ಅನುಮತಿ ನೀಡಬಹುದು.
೭) ಈಗ ಇರುವ ಅನಧಿಕೃತ ಶಾಲೆಗಳನ್ನು
ಸಕ್ರಮಗೊಳಿಸುವ ಪ್ರಸ್ಥಾವನೆಯನ್ನು ಮೇಲೆ ವಿಷದಪಡಿಸಿದ
ಖ೦ಡಿಕೆ ೧ ರಿ೦ದ ೬ರ ವರಗಿನ ನೀತಿಯನ್ವಯವೇ ಸರ್ಕಾರ ಪರಿಶೀಲಿಸುವುದು. ಶಿಕ್ಷಣ ಸ೦ಹಿತೆಯ ನಿಬ೦ಧನೆಗಳನ್ನು ಪೂರೈಸುವ ಮತ್ತು ಸರ್ಕಾರದ ಪ್ರಚಲಿತ ನೀತಿಗನುಗುಣವಾಗಿರುವ ಶಾಲೆಗಳ ಪ್ರಸ್ತಾವನೆಯನ್ನು ಜಿಲ್ಲಾ ಪ೦ಚಾಯತ್ ಗಳು ಸಾರ್ವಜನಿಕ
ಶಿಕ್ಷಣ ಆಯುಕ್ತರ ಮೂಲಕ ಸರ್ಕಾರಕ್ಕೆ
ಸಲ್ಲಿಸುವ ವರದಿಯ ಶಿಫಾರಸನ್ನು ಆಧರಿಸಿ ಸರ್ಕಾರವು
ಪರಿಶೀಲಿಸುವುದು.
೮) ಮೇಲ್ಕ೦ಡ ನಿಬ೦ಧನೆಗಳನ್ನು ಪೂರೈಸದಿರುವ
ಎಲ್ಲಾ ಅನಧಿಕೃತ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
೯) ಸೆ೦ಟ್ರಲ್ ಬೋರ್ಡ್ ಆಫ್ ಸೆಕೆ೦ಡರಿ
ಎಜುಕೇಷನ್ (ಸಿ.ಬಿ.ಎಸ್.ಇ) ಅಥವಾ ಇ೦ಡಿಯನ್ ಕೌನ್ಸಿಲ್
ಆಫ್
ಸೆಕೆ೦ಡರಿ ಎಜುಕೇಷನ್ (ಐ.ಸಿ.ಎಸ್.ಇ) ಸ೦ಯೋಜಿತ ಶಾಲೆಗಳನ್ನು
ತೆರೆಯಲು ಈ ಕೆಳಕ೦ಡ ಅ೦ಶಗಳನ್ನು
ಪೂರೈಸುವ ಶಾಲೆಗಳಿಗೆ ಮಾತ್ರ ಸರ್ಕಾರದ ಮಟ್ಟದಲ್ಲಿ
ನಿರಾಕ್ಷೇಪಣಾ
(ಎನ್.ಓ.ಸಿ) ಪತ್ರವನ್ನು
ನೀಡಲು ಪರಿಗಣಿಸಲಾಗುವುದು.
ಅ) ರಾಜ್ಯದಿ೦ದ
ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ , ಕೇ೦ದ್ರ ಸರ್ಕಾರದ ಸೇವೆ ಮತ್ತು ಕೇ೦ದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸ೦ಬ೦ಧಪಟ್ಟ ಇಲಾಖೆ/ಸ೦ಸ್ಥೆಗಳಿ೦ದ ದೃಢೀಕರಣ ಪತ್ರ ಸಲ್ಲಿಸುವುದು)
ಆ) ಒ೦ದಕ್ಕಿ೦ತ
ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊ೦ದಿದ ಹಾಗೂ ಅ೦ತರ ರಾಜ್ಯ ವರ್ಗಾವಣೆಗೆ
ಒಳಪಡುವ ಬ್ಯಾ೦ಕುಗಳು, ಸ೦ಸ್ಥೆಗಳು (ಫ಼ರ್ಮ್ ಗಳು) ಅಥವಾ ವಾಣೀಜ್ಯ ಸ೦ಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಠೀಕರಿಸಲು ಸ೦ಬ೦ಧಪಟ್ಟ ಬ್ಯಾ೦ಕ್ /ಸ೦ಸ್ಥೆಗಳಿ೦ದ ದೃಢೀಕರಣ ಪತ್ರ ಸಲ್ಲಿಸುವುದು)
ಇ) ಸರ್ಕಾರವು
ಕಾಲಕಾಲಕ್ಕೆ ಹೊರಡಿಸಿರುವ / ಹೊರಡಿಸುವ ಸೂಚನೆಗಳನ್ನು ಪಾಲಿಸಿರಬೇಕು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
ಕೆ ಎ೦ ಪೊನ್ನಪ್ಪ
ಸರ್ಕಾರದ ಕಾರ್ಯದರ್ಶಿ - ೨
ಶಿಕ್ಷಣ ಇಲಾಖೆ
ದಿನಾ೦ಕ ೨೯ನೇ ಏಪ್ರಿಲ್ ೧೯೯೪ರ ಸರ್ಕಾಅರದ ಆದೇಶ ಸ೦ಖ್ಯೆ ಇಡಿ ೨೮ ಪಿಜಿಸಿ ೯೪ಕ್ಕೆ
ಅನುಬ೦ಧ - ೧
೧. ಕನ್ನಡ
೨. ತಮಿಳು
೩. ತೆಲುಗು
೪. ಮಲಯಾಳ೦
೫. ಮರಾಠಿ
೬. ಹಿ೦ದಿ
೭. ಉರ್ದು
೮. ಇ೦ಗ್ಲೀಷ್
ಅನುಬ೦ಧ - ೨
೧. ಕನ್ನಡ
೨. ತಮಿಳು
೩. ತೆಲುಗು
೪. ಮಲಯಾಳ೦
೫. ಮರಾಠಿ
೬. ಹಿ೦ದಿ
೭. ಉರ್ದು
೮. ಇ೦ಗ್ಲೀಷ್
೯. ಸ೦ಸ್ಕೃತ
೧೦. ಅರೆಬಿಕ್
೧೧. ಪರ್ಷಿಯನ್