ಭಾರತೀಯ ಜನತಾಪಕ್ಷದ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದರಲ್ಲಿ ಬಹಳ ವಿಶೇಶವಾದ ಸಂಗತಿಯೆಂದರೆ ಡಬ್ಬಿಂಗ್ ಬಗ್ಗೆ ಬಿಜೆಪಿ ಮಾಡಿರುವ ಪ್ರಸ್ತಾಪ. ರಾಜಕೀಯ ಪ್ರಣಾಳಿಕೆಯ ಅಂಗವಾಗುವಷ್ಟರ ಮಟ್ಟಿಗೆ "ಡಬ್ಬಿಂಗ್" ಎನ್ನುವುದು ಕನ್ನಡ ಸಮಾಜದಲ್ಲಿ ಚರ್ಚೆಯ ಮುಖ್ಯ ಅಂಶವಾಗಿರುವುದು ಗಮನಾರ್ಹವಾದ ವಿಷಯವಾಗಿದೆ!
ಪ್ರಣಾಳಿಕೆಯಲ್ಲಿ ಡಬ್ಬಿಂಗ್
ಬಿಜೆಪಿಯ ಪ್ರಣಾಳಿಕೆಯಲ್ಲಿ ಡಬ್ಬಿಂಗ್ ಕುರಿತಾಗಿ ಹೀಗೆ ಬರೆಯಲಾಗಿದೆ: ಸಾರಾಸಗಟು ಡಬ್ಬಿಂಗ್ ಮಾಡುವುದಕ್ಕೆ ನಿಯಂತ್ರಣ; ಸಮುದಾಯಕ್ಕೆ ಶಿಕ್ಷಣ, ಜಾಗೃತಿ ನೀಡುವ ಸಾಕ್ಷ್ಯಚಿತ್ರಗಳಿಗೆ ಮೊದಲು ಕನ್ನಡದ ಸಬ್ಟೈಟಲ್; ಅತ್ಯಂತ ಅಗತ್ಯವಿದ್ದರೆ ಮಾತ್ರ ಸೂಕ್ತ ಪರವಾನಗಿ ವಿಧಾನದಲ್ಲಿ ಪರವಾನಗಿ.
ಈ ಭರವಸೆಯನ್ನು ಕಂಡಾಗ ಮನಸ್ಸೊಳಗೆ ಹೊಸ ಭರವಸೆ ಮೂಡ್ತಾಯಿದೆ ಗುರೂ! ಒಟ್ನಲ್ಲಿ ಕನ್ನಡಿಗರಿಗೆ ಶಾಪವಾಗಿದ್ದ "ಸಾರಾಸಗಟು ಡಬ್ಬಿಂಗ್ ನಿಶೇಧ"ವನ್ನು ಇಲ್ಲವಾಗಿಸಲಾಗುತ್ತದೆ ಎನ್ನುವ ಹಿಗ್ಗು ಒಂದೆಡೆಯಾದರೆ ಈ ಭರವಸೆಯ ಹಿಂದಿರುವ ಮನಸ್ಥಿತಿ ನಾಡಿನ ಆರುಕೋಟಿ ಜನರ ಪರವಾಗಿರದೆ ಕೆಲವು ಉದ್ಯಮದ ಮಂದಿಯ ಪರವಾಗಿದೆಯೇನೋ ಎನ್ನುವಂತಿರುವುದು ಒಂಚೂರು ಕಸಿವಿಸಿಗೆ ಕಾರಣವಾಗಿದೆ.
ಮೊದಲು ಸಬ್ಟೈಟಲ್ಲು,ವಿಧಿಯಿಲ್ಲದಿದ್ದರೆ ಡಬ್ಬಿಂಗಿಗೆ ಪರವಾನಗಿ ಕೊಡಲಾಗುತ್ತದೆ ಎನ್ನುವುದರಲ್ಲೇ ನಲವತ್ತೈದಕ್ಕೂ ಹೆಚ್ಚು ವರ್ಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳು ಬರದಂತೆ ತಡೆಯುತ್ತಿರುವ "ಹತೋಟಿಕೂಟ"ಕ್ಕೆ ಅಧಿಕೃತತೆಯನ್ನು ತಂದುಕೊಡುತ್ತಿರುವ ಧ್ವನಿಯಿದೆ! ಒಟ್ಟಿನಲ್ಲಿ ಭಾರತದ ಸಂವಿಧಾನ ನೀಡಿರುವ ಮೂಲಭೂತಹಕ್ಕನ್ನು ಕಸಿದುಕೊಂಡಿರುವವರ ರಾಯಭಾರಿಗಳಾಗಿ "ಇನ್ನು ನಿಮಗಿಷ್ಟು ಸ್ವಾತಂತ್ರ್ಯ ಕೊಡುತ್ತಿದ್ದೇವೆ" ಎನ್ನುವ ದೊಣೆನಾಯಕರಾಗಿ ಬಿಜೆಪಿ ನೀಡಿರುವ ಪ್ರಣಾಳಿಕೆಯಿರುವುದು ಸೋಜಿಗದ ವಿಷಯವಾಗಿದೆ ಗುರೂ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!