ಕನ್ನಡದಲ್ಲಿ ಹುಡುಕಕ್ಕೆ ನೀವೇನು ಮಾಡಬೇಕು ಗೊತ್ತಾ?
- ಮೊದಲನೇದಾಗಿ ನಿಮ್ಮ ಗಣಕ ಯೂನಿಕೋಡ್ ತೋರಿಸುವುದಕ್ಕೆ/ಬರೆಸಿಕೊಳ್ಳುವುದಕ್ಕೆ ತಯಾರಿರಬೇಕು. ಯುನಿಕೋಡ್ ಅನ್ನೋದು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಒಳಗೊಂಡ ಒಂದು ಕೋಡ್. ನಿಮ್ಮ ಗಣಕಕ್ಕೆ ಯುನಿಕೋಡ್ ಸೌಲಭ್ಯ ಒದಗಿಸಕ್ಕೆ ಇಲ್ಲಿ ನೋಡಿ.
- ಯುನಿಕೋಡಿನಲ್ಲಿ ಬರೆಯುವುದಕ್ಕೆ ಬಿಡುವ ಒಂದು ತಂತ್ರಾಂಶ ಹಾಕಿಕೊಳ್ಳಿ. ಏನ್ ಗುರು ಉಪಯೋಗಿಸುವುದು ನೇರ ಬರಹ ಅಥವಾ ಬರಹ ಡೈರೆಕ್ಟ್.
- ನೇರ ಬರಹ ಉಪಯೋಗಿಸಿದರೆ ಸಿಸ್ಟಮ್ ಟ್ರೇನಲ್ಲಿರುವ ಬರಹ ಐಕನ್ ಮೇಲೆ ಒತ್ತಿ Language -> Kannada -> Unicode ಆರಿಸಿಕೊಳ್ಳಿ. ನಿಮ್ಮ ಮೆಚ್ಚಿನ ತಂತ್ರಾಂಶವನ್ನು ಉಪಯೋಗಿಸಿ ಗೂಗಲ್-ಗೆ(ಇಲ್ಲವೇ ಇನ್ನೊಂದು ಹುಡುಕು-ಪುಟಕ್ಕೆ) ಹೋಗಿ ನೇರವಾಗಿ ಕನ್ನಡದಲ್ಲಿ ಹುಡುಕು-ವಾಕ್ಯವನ್ನು ಬರೆಯಿರಿ, ಎಂಟರ್ ಒತ್ತಿ, ಅಷ್ಟೆ!
ಇತ್ತೀಚೆಗೆ kannadasearch.com ಅನ್ನುವ ಒಂದು ಕನ್ನಡದ ಹುಡುಕು ಪುಟ ಬೇರೆ ತಲೆಯೆತ್ತಿದೆ. ಇದನ್ನೂ ಉಪಯೋಗಿಸಬಹುದು.
3 ಅನಿಸಿಕೆಗಳು:
You can also use the google Kannada Portal:
http://www.google.com/intl/kn/
Vish
ನಿಮ್ಮ ವೆಬ್ ಸೈಟ್ ತುಂಬ ಚೆನ್ನಾಗಿದೆ. ಬಹಳ ಒಳ್ಳೇಯ ಪ್ರಯತ್ನ ಮಾಡಿದೀರ. ನಾನು ಕೂಡ ಕನ್ನಡ ಬರಹ ಕಲಿತೆ
- ಗಣೇಶ್
ಗೂಗಲ್ ಕನ್ನಡ ಕೂಡ ಬಳಸಬಹುದು!
http://www.googlekannada.com
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!