ನಮಸ್ಕಾರ ಗುರು!

ಬನವಾಸಿ ಬಳಗ
ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು, ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸು ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ ಬನವಾಸಿ ಬಳಗ.

ಇಂದು ಅನೇಕ ಕನ್ನಡಪರ ಸಂಘಟನೆಗಳು ಅಸ್ತಿತ್ವದಲ್ಲಿರುವಾಗ ಅವುಗಳ ನಡುವೆ ಬನವಾಸಿ ಬಳಗ ತನ್ನದೇ ಆದ ವಿಶಿಷ್ಟತೆಯಿಂದ ಭಿನ್ನವಾಗಿ ಕಾಣುತ್ತದೆ. ಬನವಾಸಿ ಬಳಗ - ವೃತ್ತಿಪರರು ಒಟ್ಟಾಗಿ ಕಟ್ಟಿಕೊಂಡ ಸಂಘಟನೆಯಾಗಿದೆ. ಈ ಸಂಘಟನೆಯ ಸದಸ್ಯರು ದೇಶ ವಿದೇಶಗಳಲ್ಲಿ ನೆಲೆಸಿದ್ದು ಮಾಹಿತಿ ತಂತ್ರಜ್ಞಾನವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡ ವೃತ್ತಿಪರರಾಗಿದ್ದು, ತಮ್ಮ ವೃತ್ತಿಪರತೆಯನ್ನು ನಾಡುಕಟ್ಟುವ ಕೆಲಸದಲ್ಲಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪರಭಾಷಿಕರು ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಪೂರಕವಾಗುವಂತೆ, ಬೆಂಗಳೂರಿನಲ್ಲಿರುವ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡ ಕಲಿ ಎನ್ನುವ ಕನ್ನಡಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ರೂಪಿಸಿ ಜಾರಿಗೆ ತರುತ್ತಿದ್ದಾರೆ. ಬೆಂಗಳೂರಿನ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡಿಗರಿಗೆ ಉದ್ಯೋಗ ಸಿಗಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉದ್ಯೋಗ ಮಾರ್ಗದರ್ಶನ ಶಿಬಿರಗಳನ್ನು ಬನವಾಸಿ ಬಳಗ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮ ಮೂಲಕ ಹೊಸದಾಗಿ ಪದವಿ ಮುಗಿಸಿ ಹೊರಬಂದ ಕನ್ನಡಿಗರಿಗೆ ಸಂದರ್ಶನಗಳನ್ನು ಎದುರಿಸುವ ಬಗ್ಗೆ, ಕೆಲಸ ಪಡೆಯಲು ಬೇಕಾದ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಇಂತಹ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ ಹೆಗ್ಗಳಿಕೆ ಬನವಾಸಿ ಬಳಗದ್ದು.

ನಮ್ಮ ಹಿರಿಮೆ, ಇತಿಹಾಸ, ನಮ್ಮತನದ ಅರಿವನ್ನು ನಮ್ಮ ಕನ್ನಡಿಗರಲ್ಲಿ ಮೂಡಿಸಲು ಸಿಂಹಗನ್ನಡಿ ಎನ್ನುವ ವಿಶೇಷ ಕಾರ್ಯಕ್ರಮ ಸರಣಿಯನ್ನು ಬನವಾಸಿ ಬಳಗ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಪರಿಣಿತ ಕನ್ನಡಿಗರಿಂದ ಉಪನ್ಯಾಸಗಳನ್ನು ಕೊಡಮಾಡಲಾಗಿದೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಬೆಳಗಾವಿಯ ಅನೇಕ ಹಳ್ಳಿಗಳು ಮುಳುಗಿ ತೊಂದರೆಗೆ ಒಳಗಾಗಿದ್ದಾಗ, ಬನವಾಸಿ ಬಳಗದ ವತಿಯಿಂದ ಸಪ್ತಸಾಗರವೆಂಬ ಹಳ್ಳಿಯ ನೂರು ಕುಟುಂಬಗಳಿಗೆ ಪರಿಹಾರ ವಿತರಿಸಲಾಯಿತು.

ಜಪಾನ್, ಅಮೇರಿಕಾ, ಇಸ್ರೇಲ್, ಯೂರೋಪು ಒಕ್ಕೂಟಗಳಂತಹ ಮುಂದುವರೆದ ದೇಶಗಳ ಮತ್ತು ಬಾಂಗ್ಲಾದಂತಹ ದೇಶಗಳ ವ್ಯವಸ್ಥೆಗಳನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಿರುವುದು ಬನವಾಸಿ ಬಳಗದ ನಿಲುವುಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಅನುಕೂಲಕರವಾಗಿದೆ.

ಆಲೂರು ವೆಂಕಟರಾಯರು, ಕುವೆಂಪು, ಅ ನ ಕೃಷ್ಣರಾಯರಂತಹ ಹಿರಿಯರು ತೋರಿಸಿಕೊಟ್ಟ ಹಾದಿಯಿಂದಲೂ, ವಿಶ್ವೇಶ್ವರಯ್ಯನಂತಹ ಮಹನೀಯರು ಕಂಡ ಕನುಸುಗಳಿಂದಲೂ ಪ್ರೇರಿತರಾದ ಬನವಾಸಿ ಬಳಗ ನಾಡಿಗೆ ಕೊಡಮಾಡುತ್ತಿರುವ ಚಿಂತನಾ ಲಹರಿಯನ್ನು ಪ್ರತಿದಿನ ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನಮ್ಮ ನಿಮ್ಮಲ್ಲಿನ ಕನ್ನಡತನ ಈ ಮೂಲಕ ಜಾಗೃತಿಯಾಗಲಿ ಅಂದು ಆಶಿಸುತ್ತೇವೆ...

ಸುದ್ದಿಯಲ್ಲಿ ಬನವಾಸಿ ಬಳಗ
ಕನ್ನಡಿಗರಿಗೆ ಉದ್ಯೋಗ ಮಾರ್ಗದರ್ಶನ ಶಿಬಿರಗಳು
http://thatskannada.oneindia.in/news/2006/03/16/banavasi_councelling.html
http://thatskannada.oneindia.in/news/2006/06/08/career.html
http://thatskannada.oneindia.in/sahitya/article/140605career.html
http://thatskannada.oneindia.in/sahitya/article/290606banavasi.html
http://thatskannada.oneindia.in/news/2005/06/30/workshop.html
http://thatskannada.oneindia.in/sahitya/article/280805career.html

ಕನ್ನಡ ಬಾರದವರಿಗೆ ಕನ್ನಡ-ಕಲಿ ಕಾರ್ಯಕ್ರಮಗಳು
http://www.kannadakali.org/
http://thatskannada.oneindia.in/sahitya/article/170506kannada.html

ಸಿಂಹಗನ್ನಡಿ - ಬೆಂಗಳೂರಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಜಾಗೃತಿ
http://thatskannada.oneindia.in/news/2006/02/13/banavasi.html
http://thatskannada.oneindia.in/news/2006/02/10/balaga.html
http://thatskannada.oneindia.in/news/2006/05/18/simhagannadi.html
http://thatskannada.oneindia.in/news/2006/03/18/banavasi_simhagannadi.html

ಇತರ ಸುದ್ದಿಗಳು/ಬರಹಗಳು
http://thatskannada.oneindia.in/category/response/120405sampige.html (ಕನ್ನಡಿಗನ ಆದ್ಯಕರ್ತವ್ಯಗಳು)http://thatskannada.oneindia.in/cine/kuteera/071204banavasi.html (ಕನ್ನಡ ಸಿನೆಮಾ)http://thatskannada.oneindia.in/category/response/150506petition.html (ಎಫ್. ಎಂ. ಮನವಿ)http://thatskannada.oneindia.in/sahitya/article/241105belgaum.html (ಬೆಳಗಾವಿ ನಮ್ಮದು)http://thatskannada.oneindia.in/sahitya/debate/110105mart5.html (ಫ್ಯಾಮಿಲಿ ಮಾರ್ಟ್)http://thatskannada.indiainfo.com/sahitya/debate/070105mart_apology.html (ಫ್ಯಾಮಿಲಿ ಮಾರ್ಟ್ ತಪ್ಪೊಪ್ಪಿಗೆ)http://thatskannada.oneindia.in/chowchow/travel/010705biligiri.html (ಬಿಳಿಗಿರಿರಂಗನಬೆಟ್ಟ)http://thatskannada.oneindia.in/cine/controversy/130605dubbing.html (ಡಬ್ಬಿಂಗ್)http://thatskannada.oneindia.in/sahitya/article/240105srinivas.html (ವಲಸೆ)http://thatskannada.oneindia.in/sahitya/article/141105anand.html (ಭಾಷಾನೀತಿ)http://thatskannada.oneindia.in/category/response/151105sampige.html (ಹಿಂದಿ ಸವಾರಿ)http://thatskannada.oneindia.in/news/2006/02/22/aluru.html (ಅಲೂರ ವೆಂಕಟರಾಯರು)http://thatskannada.oneindia.in/news/2005/01/31/krv.html (ಕರವೇ ಸಮಾವೇಶ)http://thatskannada.oneindia.in/sahitya/article/060705globalisation.html (ಜಾಗತೀಕರಣದ ಬಗ್ಗೆ)http://thatskannada.oneindia.in/category/response/250805shashank.html (ಹಚ್ ಕಂಪನಿಗೆ ಬಿಸಿ)

ಸಾಮಾಜಿಕ ಕಳಕಳಿ
http://thatskannada.oneindia.in/news/2005/10/01/flood_relief.html
http://thatskannada.oneindia.in/news/2005/10/29/banavasi.html
http://www.imagestation.com/album/pictures.html?id=2118821666&code=18827360&mode=invite&DCMP=isc-email-AlbumInvite
http://www.imagestation.com/category.html?URI=%2Fcategory%2FTravel_%26_Vacations%2FAsia%2FIndia%2Fpopular.html

"ಎಲ್ಲ ಓಕೆ, ಈ ಬ್ಲಾಗ್ ಯಾಕೆ" ಅಂತೀರಾ?
ಪ್ರಪಂಚದ ಆಗುಹೋಗುಗಳನ್ನು ಕನ್ನಡದಲ್ಲಿ ತಿಳಿಸಿಕೊಡುವ ತಾಣಗಳಿಗೆ, ಬ್ಲಾಗುಗಳಿಗೆ ಇತ್ತೀಚಿಗೆ ಕಡಿಮೆಯೇನಿಲ್ಲ. ಆದರೆ ಅವುಗಳನ್ನು ಕನ್ನಡದ ಕಣ್ಣಿಂದ ನೋಡಿ, ಕನ್ನಡದ ಕಣ್ಣಿಗೆ ತೋರಿಸುವ ಬ್ಲಾಗುಗಳು ಇಲ್ಲವೇ ಇಲ್ಲ ಎಂದರೆ ಸುಳ್ಳಲ್ಲ. ಅಂತಹ ಒಂದು ಬ್ಲಾಗು ಇದು. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳಿಗೂ ನಮಗೂ ಏನು ಸಂಬಂಧ? ನಾವು ಅವುಗಳ ಬಗ್ಗೆ ಯಾವ ನಿಲುವನ್ನು ತಾಳಬೇಕು? ಈ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಅತ್ಯಂತ ತರ್ಕಬದ್ಧವಾಗಿ ಹಾಗೂ ನಮ್ಮ - ಎಂದರೆ ಕನ್ನಡಿಗರ - ಏಳಿಗೆಯನ್ನು ಮನಸ್ಸಿನಲ್ಲಿಟ್ಟು ಉತ್ತರ ಹುಡುಕುವ ಒಂದು ಪ್ರಯತ್ನ ಇದು. ಪ್ರಪಂಚದ ಆಗುಹೋಗುಗಳನ್ನು ಕನ್ನಡದ ಕಣ್ಣಿನಲ್ಲಿ ಕಾಣಬೇಕಾ? ಕರ್ನಾಟಕದಲ್ಲಿ ಅಲುಗಾಡುವ ಪ್ರತಿಯೊಂದು ಎಲೆಯ ಹಿಂದೆ ಯಾವ ಕೈಯಿದೆ ಅಂತ ತಿಳಿಯಬೇಕಾ...ಇಲ್ಲವೇ ತಿಳಿಸಬೇಕಾ? ನಮ್ಮ ಏಳಿಗೆಗೆ ಯಾವುದು ಪೂರಕ, ಯಾವುದು ಮಾರಕ ಅಂತ ತಿಳೀಬೇಕಾ...ಇಲ್ಲವೇ ನಮ್ಮ ಜನಕ್ಕೆ ಹೇಳಿಕೊಡಬೇಕಾ? ನಮ್ಮ ಏಳಿಗೆಗೆ ಎಲ್ಲೆಲ್ಲಿ ಯಾವಯಾವ ಎಲೆ ಅಲುಗಾಡಬೇಕು ಅಂತ ತಿಳೀಬೇಕಾ...ಇಲ್ಲವೇ ತಿಳಿಸಿಕೊಡಬೇಕಾ? ಇಲ್ಲವೇ ಸುಮ್ಮನೆ ಹರಟಬೇಕಾ? ಹಾಗಾದರೆ enguru.blogspot.com ಗೆ ಸ್ವಾಗತ! ನಮ್ಮ ಸುತ್ತಲಿನ ಆಗುಹೋಗುಗಳನ್ನು ಕನ್ನಡದ ಕಣ್ಣಿನಿಂದ ನೋಡುವ ಈ ಬ್ಲಾಗಿನಲ್ಲಿ, ಹೊಸ ಹೊಸ ವಿಚಾರ ಧಾರೆಗಳು ಹರಿಯ ಬರುತ್ತಿವೆ. ಭಾಷೆ, ಜನಾಂಗ, ದೇಶ, ವಿಶ್ವಮಾನವತ್ವ, ಏಳಿಗೆ, ಜಾಗತೀಕರಣ... ಹೀಗೆ ಎಲ್ಲ ಆಯಾಮಗಳನ್ನು ಕನ್ನಡದ ಹಿತದೃಷ್ಟಿಯಿಂದ ಕಾಣುವ ಪ್ರಯತ್ನ ಮತ್ತು ತುಡಿತವನ್ನು ನಾವು ಇವುಗಳಲ್ಲಿ ಕಾಣಬಹುದು.


"ಏನ್ ಗುರು" ಮತ್ತು "ಕಾಫಿ" ಗಳ ಕತೆ
ನಮ್ಮನಮ್ಮಲ್ಲೇ ಹೋಗಿ-ಬನ್ನಿ ಯಾಕೆ ಅಂತ ಏನ್ ಗುರು ಅಂತ ಹೆಸರಿಟ್ಟಿದೆ. ಇಲ್ಲಿ ಗಂಡಸರನ್ನೇನು ಮನಸ್ಸಿನಲ್ಲಿಟ್ಟು ಗುರು ಎಂದಿಲ್ಲ. ಒಂಥರಾ ಎಫೆಕ್ಟ್ ಇರ್ಲಿ ಅಂತ ಆಡುಮಾತನ್ನೇ ಉಪಯೋಗಿಸಿದೆ. ಅಂದಹಾಗೆ ಕಾಫಿ ಅಂದರೆ ನಮಗೆ ಹುಚ್ಚು. ಅದೇ ನಮ್ಮ ಪ್ರೇರಕ ಶಕ್ತಿ. ಅದಿಲ್ಲದೆ ಈ ಬ್ಲಾಗೂ ಇಲ್ಲ, ಎಂಥದೂ ಇಲ್ಲ.

20 ಅನಿಸಿಕೆಗಳು:

Kannada ಅಂತಾರೆ...

Banavasi Balaga da bagge keLidde.
Neevu bahaLa oLLeya, kannaDa para kelasagaLannu maaDutiddera.
HeegeyE muMduvariyali

Jai kannadaambe

Anonymous ಅಂತಾರೆ...

ನಿಮಗೆ ಸಿಕ್ಕಾಪಟ್ಟೆ ಒಳ್ಳೆಯದಾಗಲಿ. ನಾಳೆ ನಮದೆ.

ಭೈರಪ್ಪ. ಎಂ. ಅಂತಾರೆ...

ಇದು ಕನ್ನಡಿಗರಿಗೆ ತುಂಬಾ ಸಂತೋಷದ, ಹೆಮ್ಮೆ ಪಡುವಂತಹ ವಿಷಯ. ಕನ್ನಡದ , ಕನ್ನಡ ನಾಡಿನ, ಕನ್ನಡ ಸಂಸ್ಕೃತಿಯ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿರುವ ಬನವಾಸಿ ಬಳಗಕ್ಕೆ ನನ್ನ ಧನ್ಯವಾದಗಳು.

ಭೈರಪ್ಪ. ಎಂ.

panantha ಅಂತಾರೆ...

Nimma Blog Thumbha Chennaghidhe...Namma Kaledhu Hodha Kannadigarighe Vishya/Vichara thilisuva ondhu Site andhre Nimdhe...

Illobba Mahaneeyaru heltharall haaghe 'Naaleyu Namadhu'

Dhanyavaadha

:-)

Ashwath ಅಂತಾರೆ...

Kannada na anthrjalladalli nodi tumba kushi aithu. Banavasi balaga da mele tumba ny hemme anisutha edy. Dayavittu nima karya chatuvateke gallana hege mundu varisi. Dhanyavadagallu.

ಬನವಾಸಿ ಬಳಗ ಅಂತಾರೆ...

ನಿಮ್ಮೆಲ್ಲರ ನಲ್ಮೆಯ ಮಾತುಗಳಿಗೆ ನನ್ನಿ. ಬನವಾಸಿ ಬಳಗ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗೆ ಎಂದೆಂದಿಗೂ ಬದ್ಧ. ಕನ್ನಡದ ಕೆಲಸಕ್ಕೆ ಸಾತ್ವಿಕ ಆಯಾಮವನ್ನು ತರುವುದರಲ್ಲಿ ಬನವಾಸಿ ಬಳಗ ಸಾಕಷ್ಟು ಗೆಲುವುಕಂಡಿದೆ, ಮತ್ತು ನಿಮ್ಮಂಥವರ ಹರಕೆಯಿಂದ ಮುಂದೂ ಕಾಣಲಿದೆ. "ಏನ್ ಗುರು" ಗೆ ದಿನಾ ಬಂದು ಹೋಗಿ! ಹಾಗೇ ನಿಮ್ಮ ಗೆಳೆಯರಿಗೂ ಬರಲು ಹೇಳಿ!

Chandrakanth ಅಂತಾರೆ...

ನಮಸ್ಕಾರ ಗುರೂ

ಜಮದಗ್ನಿ ಬ್ಲಾಗ್!!. ಹಿಂಗೆ ಬರಿತಾ ಇರಿ. ನಮ್ಮವರನ್ನು ಬಡಿದು ಎಬ್ಬಿಸೊ ಕೆಲಸ ಮಾಡ್ತಾ ಇರಿ. ಯಶಸ್ಸು ಯಾವಾಗಲೂ ನಿಮ್ಮ ಜೊತೆಯಲ್ಲಿರಲಿ.

ಜೈ ಕನ್ನಡಾಂಬೆ

Hussain ಅಂತಾರೆ...

tamma dainandina blog vishayaglanna odta iddre vichara dhara manadalli harita irutte,

good efforts keep it up, but my suggestion is to join hands with all other kannada groups for the cause not just working as a isolated group.

bere bhashigarige mattu midle class janarige manoranjaniya vichara galu like movies, music r much appealing why don't we hv such even more blogs for kannada along with intelectual stuff. :)

/Hussain

Anonymous ಅಂತಾರೆ...

ನಮಸ್ಕಾರ ಗುರುಗಳೇ ಇಂದಿನ ಕರ್ನಾಟಕದ ಪರಿಸ್ಥಿತಿಯಲ್ಲಿ ಕನ್ನಡದ ಬೆಳವಣಿಗೆಗೆ ಇಂಥಹ ಯೋಜನೆಗಳು ಅತ್ಯಗತ್ಯ

Unknown ಅಂತಾರೆ...

nanu e site na katta abhimani agbittidini neevu ega madta ero kannada para kalasagalu olleya bavishya vannu hondide

HARISH ACHARI

enguru ಅಂತಾರೆ...

harish nimma pritiya maatige dhanywada.
namma balagada google gumpu seri, nammoDane kai jodisi.

Unknown ಅಂತಾರೆ...

kannada para horatavannu arthagarbithavagi maduthiruva nimage geluvagali........

kannada bhashegagi matthu kanadigara yeligegagi dudiyothiruva nimage namma bembala kanditha iruthade.....

nimma yella dyeyagalu hagu udeshagalu karyagathavagali yendu ashisuthene....

Unknown ಅಂತಾರೆ...

kannada para horatavannu arthagarbithavagi maduthiruva nimage geluvagali........

kannada bhashegagi matthu kanadigara yeligegagi dudiyothiruva nimage namma bembala kanditha iruthade.....

nimma yella dyeyagalu hagu udeshagalu karyagathavagali yendu ashisuthene....

Anonymous ಅಂತಾರೆ...

Kannada the bagge kelasa madothiruva nimage dhanyavadagalu ,nanu nimmondige ki jodisalu ichesutane

Santosh bhavani singh

mookanalli rangaswamy ಅಂತಾರೆ...

ಬಹಳ ಒಳ್ಳೆಯ ಕೆಲಸ ದೇವರು ನಿಮ್ಮ ಎಲ್ಲ ಕಾರ್ಯಕ್ಕೂ ಸಹಾಯ ಮಾಡಲಿ ಎಂದು ಹಾರೈಸುವೆ ,ಜೈ ಕನ್ನಡಾಂಬೆ

Padmashree ಅಂತಾರೆ...

ನಮಸ್ತೆ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಪುಸ್ತಕವನ್ನು ಕುತೂಹಲದಿಂದ ಖರೀದಿಸಿದೆ. ಓದಿದೆ. ವಿಷಯ ವೈವಿಧ್ಯ, ಕನ್ನಡ ಪರ ತುಡಿತ ಕಂಡು ಬಹಳ ಸಂತೋಷವಾಯ್ತು. ಎಲ್ಲ ಕನ್ನಡ ಅಭಿಮಾನಿ ಬ್ಲಾಗಿಗಳಿಗೆ ಶುಭವಾಗಲಿ.

ಪದ್ಮಶ್ರೀ ಮೂರ್ತಿ

giridhara p.p ಅಂತಾರೆ...

banavasi balagada bagge kelidde.
bahala muda niduva belavanige idu
nanagu kannadagitti nadedu banda dari mattu sagaliruva dari bagge asakti mattu kalakali ide.
kannadigana bagge, kannadada bagge mattu kannadatanada bagge nanu icege svalpa bardidini. adannu vismaya prakashanadavaru hora tartivi andidare
a pustike hesaru naisargika nudi mattu srajanashila sahitya:ondu tattvika tarkika torke
banavasi balaga prakatisuvadadare innondu pustike kaigettikollaballe

santosha
giridhara

kasturi ಅಂತಾರೆ...

Namaskara,

Kannadada bage nimagiru kalagi nodi nijaku kannada thana vistharavanu hechisi koluthade enuva nana nabike sulagalaradu anisuthide.

maaysa ಅಂತಾರೆ...

ಇವೊತ್ತು ವಿಜಯಕರ್ನಾಟಕದಲ್ಲಿ ಡಾ|| ಶಂಕರ ಬಟ್ಟರ ಬರಹವನ್ನು ಓದೀ, ತುಂಬಾ ನಲಿವಾಯ್ತು.

ಮೂರು-ನಾಲ್ಕು ಸುಗ್ಗಿಗಳ ಹಿಂದೆ ಅವರ ಹೊತ್ತಗೆಗಳ ಹಾಗು ಅವರು ಹೇಳುವ, ಕನ್ನಡದ ಬರಹದಲ್ಲಿ ಆಗಲೇ ಬೇಕಿಹ ಮಾರ್ಪಾಟುಗಳ ಬಗ್ಗೆ ಬೆಂಬಲವಾಗಿ 'ದಂಗೆ' ಎದ್ದವರು, ಅವರ ಹೊತ್ತಗೆಗಳ ಅಚ್ಚು ಹಾಗು ಹೆಸರುವಾಸಿಗೊಳಿಸುವಲ್ಲಿ ನಿಮ್ಮ ಕೊಡುಗೆಗೆ ನನ್ನಿ ಕೋರುವರು.

ಕವಿತಾ ಗೋಪಿಕುಂಟೆ ಅಂತಾರೆ...

ಕನ್ನಡದ ಉಳಿವಿಗಾಗಿ ಏಳಿಗೆಗಾಗಿ ಶ್ರಮಿಸುತಿರುವ ನಿಮ್ಮಗೆ ನನ್ನ ಹೃತ್ಪೂರ್ವಕ ವಂದನೆಗಳು.

ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ ಕನ್ನಡಾಂಬೆ ನಿಮ್ಮೆಲ್ಲಾ ಕೆಲಸಗಳಿಗೆ ಜಯದ ಕಹಳೆಯನ್ನು ಮೊಳಗಿಸಲೆಂದು ಆಶಿಸುತ್ತೇನೆ

ಇಂತಿ,
ಕವಿತಾಗೌಡ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails