ತಮಿಳರಿಗೆ ತಮ್ಮ ಭಾಷೆ ಬೆಣ್ಣೆ, ಸುಮ್ಮನೆ ಕೂತೋರಿಗೆ ಹಿಂದಿ ಸುಣ್ಣ!

ನಮ್ಮ ದೇಶದಲ್ಲಿ ಸಮಾನತೆಯೇ ಜೀವಾಳ ಅಂತ ನೀವೇನಾದ್ರೂ ನಂಬ್ಕೊಂಡಿದ್ರೆ ಭಾರತ ಸರ್ಕಾರ ಹೊರಡ್ಸಿರೋ ಆಡಳಿತ ಭಾಷಾ ಕಾಯ್ದೆ ಒಮ್ಮೆ ನೋಡಿ, ಅಬ್ಬಬ್ಬಬ್ಬಬ್ಬಾ ಎಷ್ಟು ಸಮಾನತೆ ಇದೆ, ಏನು ಕತೆ ಅಂತ! ಹಿಂದಿ ಹೇರಕ್ಕೇಂತ್ಲೇ ಮೀಸಲಾಗಿರೋ ಕೇಂದ್ರಸರ್ಕಾರದ "ಆಡಳಿತ ಭಾಷೆ ವಿಭಾಗ" ಹಿಂದಿ ಹೇರೋದಕ್ಕೆ ಹಾಕಿಕೊಂಡಿರೋ ನಿಯಮಗಳ್ನ ಹೇಳುವಾಗ ಏನ್ ಹೇಳತ್ತೆ ನೋಡಿ:

1. Short title, extent and commencement -
(i) These rules may be called the Official Languages (Use for Official Purposes of the Union) Rules, 1976.
(ii) They shall extend to the whole of India, except the State of Tamilnadu.
(iii) They shall come into force on the date of their publication in the Official Gazette.

ಮೊದಲಲ್ಲೇ ನಮ್ಮ ಕಣ್ಣಿಗೆ ರಾಚೋದು, ಈ ಕಾಯ್ದೆ ತಮಿಳುನಾಡಿಗೆ ಅನ್ವಯ ಆಗೋಲ್ಲಾ ಅನ್ನೊ ಸಾಲು. ಯಾಕೆ? ಯಾವ ಒತ್ತಡಕ್ಕೆ ಮಣಿದು ಹೀಗೆ ತಮಿಳುನಾಡಿಗೆ ಹಿಂದಿ ಹೇರಿಕೆ ಅನ್ವಯಿಸೋದಿಲ್ಲ ಅನ್ನೋ ನಿಯಮ? ನಮ್ ರಾಜಕಾರಣಿಗಳು ಇದನ್ನ ಕರ್ನಾಟಕಕ್ಕೆ ಯಾಕೆ ದೊರಕಿಸಿಕೊಟ್ಟಿಲ್ಲ ಅಂತ ಯೋಚ್ನೆ ಮಾಡು ಗುರು!

ಅವ್ರು ಇದನ್ನ ಪಡ್ಕೊಂದಿರೋದಕ್ಕೆ ನೇರವಾಗಿ ಕಾಣೊ ಕಾರಣ ತಮ್ನ ತಾವೇ ಆಳ್ಕೊಳ್ಳೋಕೆ ಅಂತಲೇ ಅಲ್ಲಿ ಪ್ರಾದೇಶಿಕ ಪಕ್ಷಗಳಾಗಿರೋದು. ಇಂಥ ಅಧಿಕಾರಾನ ನಾವು ಪಡ್ಕೊಳ್ಳೋಕೆ ನಮ್ದೇ ಪ್ರಾದೇಶಿಕ ಪಕ್ಷಗಳು ಬೇಕು ಅನ್ನೋದು ಸ್ಪಷ್ಟ ಗುರು!

ನಮ್ ಬೆಂಗಳೂರಿರಲಿ, ಚಾಮರಾಜನಗರದಲ್ಲಾಗಲೀ, ಹಿಂದಿಯ ಸೋಂಕೇ ಇಲ್ಲದ ಒಳನಾಡಿನ ಊರುಗಳಲ್ಲಾಗಲಿ, ಅಲ್ಲಿನ ಅಂಚೆ ಕಚೇರಿ, ರೇಲ್ವೆ ನಿಲ್ದಾಣ, ದೂರವಾಣಿ ಕಚೇರಿ - ಈ ಥರದ ಯಾವುದೇ ಕೇಂದ್ರ ಸರ್ಕಾರಿ ಕಚೇರೀಲಿ, ಯಾರಾದ್ರೂ ಹಿಂದಿ ಭಾಷೇಲಿ ಒಂದು ಮನವಿ/ದೂರು ಕೊಟ್ಟರೆ ಅದಕ್ಕೆ ಉತ್ತರಾನ ಹಿಂದೀಲೇ ಕೊಡಬೇಕು ಅನ್ನುತ್ತೆ ಈ ಕಾನೂನು.

ಈ ಥರ ಕಾನೂನಿನಿಂದ ಏನು ಅನುಕೂಲಾನಪ್ಪಾ ಅಂದ್ರೆ ಹಿಂದಿ ಮಾತಾಡೋನು ದೇಶದ ಯಾವ ಮೂಲೇಲಿ ಬೇಕಾದ್ರೂ ನೆಮ್ಮದಿಯಾಗಿ ಬದುಕ್ಬೋದು.

ಈ ದೇಶ ಇರೋದು ಬರೀ ಹಿಂದಿ ಮಾತಾಡೊ ಜನಾ ನೆಮ್ಮದಿಯಾಗ್ ಬಾಳಕ್ಕೆ ಅಂತ ಅರ್ಥಾನಾ ಗುರು? ಇದು ನಿಜವಾದ ಪ್ರಜಾಪ್ರಭುತ್ವಾನಾ? ಪ್ರಜೆಗಳು ಕನ್ನಡದೋರು, ಪ್ರಭುಗಳು ಹಿಂದಿಯೋರು ಅಂತಾನಾ ಅರ್ಥ?

14 ಅನಿಸಿಕೆಗಳು:

ಉಉನಾಶೆ ಅಂತಾರೆ...

ಇತ್ತೀಚೆಗೆ "ರೈಲಿನಿಂದ ಹಿಂದಿ ಬಿಟ್ಟು ಎಲ್ಲ ಭಾಷೆಗಳನ್ನು ಕಿತ್ತರೂ ತಮಿಳನ್ನು ಉಳಿಸಿದ" ಬಗ್ಗೆ ವಿವರಗಳನ್ನು ಹುಡುಕಿದಾಗ ಈ ಕಾಯಿದೆಯ ಬಗ್ಗೆ ತಿಳಿಯಿತು.
ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಿದ ಶ್ರಮದ ಫಲ ಇದು.
ರೈಲ್ವೆ ಆದೇಶದಲ್ಲಿ ತಮಿಳನ್ನು ಉಳಿಸಿದ್ದಕ್ಕೆ ಈ ಕಾಯಿದೆಯಲ್ಲಿ ವಿಧಿಸಿದ ಕಟ್ಟುಪಾಡುಗಳೇ ಕಾರಣ.
ಆದ್ದರಿಂದ - ನಮಗೆ ಪ್ರಾದೇಶಿಕ ಪಕ್ಷಗಳು ಬೇಕು. ಕನ್ನಡದ ಮೇಲೆ ಸವಾರಿ ಮಾಡುವ ಪರಿಸ್ಥಿತಿಯನ್ನು ಅವು ತಡೆಯಬೇಕು.
- ಉಉನಾಶೆ

Anonymous ಅಂತಾರೆ...

ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಈ ಸಮಯದಲ್ಲಿ ಎಷ್ಟು ಮುಖ್ಯ ಅಂತ ಚೆನ್ನಾಗಿ ತಿಳಿಸಿದ್ದೀರ. ಈ ರೀತಿಯದೊಂದು ಕಾಯಿದೆ ಇದೆ ಅಂತ ನನಗೆ ತಿಳಿದೇ ಇರಲಿಲ್ಲ. ಇನ್ನು ಸಾಮಾನ್ಯ ಜನರಿಗಂತು ಇದರ ಬಗ್ಗೆ ಸುಳಿವೂ ಸಹ ಇರಲಿಕ್ಕಿಲ್ಲ. ಈ ಬ್ಲಾಗ್ ನಲ್ಲಿ ಬರುತ್ತಿರುವ ವಿಶಯಗಳು ಬಹಳ ಚೆನ್ನಾಗಿವೆ. ಇದು ಸಾಮಾನ್ಯ ಜನರಿಗು ಸಹ ದೊರೆಯುವಂತಾಗಬೇಕು. ಅಂದರೆ ಯಾವುದಾದರು ಪತ್ರಿಕೆ ಅಥವ ಟಿ.ವಿ. ಯಲ್ಲಿ ಪ್ರಕಟಿಸಬೇಕು.

ಮುಖ್ಯವಾಗಿ ಹಿಂದಿ ಹೇರಿಕೆ ಆಗುತ್ತಿರುವುದು ಈ ಬಾಲಿವುಡ್ ಎಂಬ ಪೀಡೆಯ ಹೆಸರಿನಲ್ಲಿ. ನಮ್ಮಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಮುದುಕಿಯರ ವರೆಗು ಹಿಂದಿ ಸಿನೆಮ ಗಳನ್ನು ನೋದುತ್ತಿದ್ದಾರೆ. ಹೀಗಾಗಿ ಇವರಿಗೆ ಹಿಂದಿ ಬಂದೇ ಬರುತ್ತದೆ. ಹಿಂದಿ ಮಾತನಾಡುವುದಕ್ಕೆ ಬರುತ್ತೆ ಮಾತಾಡಿದ್ರೆ ಏನು ತಪ್ಪು ಅಂತ ಹಿಂದಿಯಲ್ಲೇ ಮಾತಾದುತ್ತಾರೆ. ಅದೇ ತಮಿಳುನಾಡಲ್ಲಿ ಯಾರಿಗು ಹಿಂದಿ ಬರೊಲ್ಲ ಅವರು ಹಿಂದಿ ಸಿನೆಮಾ ಸಹ ನೋಡೊಲ್ಲ ಹೀಗಾಗಿ ಅವರಿಗೆ ಆ ತೊಂದರೆ ಇಲ್ಲ.

ಅಷ್ತ್ಟೆ ಅಲ್ಲದೆ ನಮ್ಮಲ್ಲಿ ಹಿಂದಿ ಪ್ರಥಮ, ಮಧ್ಯಮ ಇನ್ನು ಏನೇನೋ ಸುಡುಗಾಡು ಪರೀಕ್ಷೆ ಗಳನ್ನ ಮಕ್ಕಳಿಗೆ ಕೊಡಿಸುತ್ತಾರೆ. ಇದೆಲ್ಲ ನಿಲ್ಲಬೇಕು. ತಮ್ಮ ತಮ್ಮ ಮಕ್ಕಳಿಗೆ ಹಿಂದಿಯ ಅವಶ್ಯಕತೆ ಇಲ್ಲ ಎಂದು ಮೊದಲಿಂದಲೆ ತಿಳಿಸಿಕೊಡಬೇಕು.

Anonymous ಅಂತಾರೆ...

Tamil people rejected Hindi long back. Tamil politician always protested against Hindi. That's why they are exempted..

Where as Karnataka people and politicians always welcome Hindi( I don't know why ).

Whatever.. still if Karnataka politician unite and ask of the exemption, I don't think the parliament or supreme court can reject it.
But the fun is it won't happen ever, because for Karnataka people so called Hindian/Indian identity is more important than there own local and indigenous culture. They always imitate north Indians in each and every way.

See Karnataka politicians dress like north people, they speak highly Sanskritized lingo just like north people, they even behave like them.

I really wonder, whether Karnataka really has it own culture and tradition?

One more classic example of north Indian following is the recent movie "mathad mathadu mallige" where the hero always dress like some Rajastani villager..

What a great north Indians fans, Karnataka people are!!!

Best of Luck

Unknown ಅಂತಾರೆ...

ಮೊದ್ಲು ಹಿ೦ದಿ ಪ್ರಥಮ, ಮದ್ಯಮ .... ಏಲ್ಲ ನಿಲ್ಲಿಸ್ಬೆಕು.
ಯಾವುದೇ ಹಿ೦ದಿ ವ್ಯವಹಾರಕ್ಕು, ಅಥವ ಪ್ರಶ್ನೆಗಳಿಗು ಕನ್ನಡದಲ್ಲೇ ಉತ್ತರಿಸಬೇಕು

Anonymous ಅಂತಾರೆ...

DMK yavare,
nimma tamil nadu nalli Hindi ilde irbahudu. aadre adkinta worst aada Tamil fanatism mattu caste politics ide. ildre idre neevyaake 70% reservation maadideera?

is it the culture of an advanced country??

Its just a matter of time for us KannaDigas to implement kannada at all levels.

Anonymous ಅಂತಾರೆ...

"Tamil fanatism mattu caste politics ide. ildre idre neevyaake 70% reservation maadideera? "

You speak as if Karnataka doesn't have caste politics and fanaticism. I don't want to dig that hole

And about 70% reservation, it is up to Tamil people to decide not you! You decide what you want to your own land, do you have that capacity and will?

Whatever... these must be lame excuses to be expected to surrender to the Hindi Raj..!!

You see Malayalis too are shrewd enough. Once visit Bangalore city railway station! ...

I hope, my statements were facts than humiliations and people take it in the spirit of the article.

Anonymous ಅಂತಾರೆ...

sariyaagi heLdiddira enguru,

Nimma maatu aksharashaha nija. Ide hindi herike bagge ne KRVya T.A narayana Gowdaru maatdiddare keLagina link nodi

http://karave.blogspot.com/

regards,
Kannadiga

Anonymous ಅಂತಾರೆ...

Manyare,

Bere bere Bashe kaliyodralli tappenide?

nimmavane..
Bahu basha premi

ಉಉನಾಶೆ ಅಂತಾರೆ...

ಬೇರೆ ಭಾಷೆ ಕಲಿಯೋದ್ರಲ್ಲಿ ತಪ್ಪಿಲ್ಲ ಸ್ವಾಮೀ..
ತಪ್ಪಿರೋದು "ನಿಮ್ಮೂರಲ್ಲಿ ಬೇರೆ ಭಾಷೆಯಲ್ಲಿ ವ್ಯವಹಾರ ಮಾಡಬೇಕು, ನಿಮ್ಮ ಭಾಷೆಯಲ್ಲಿ ಮಾಡಬಾರದು", ಅಂತ ಹೇಳುವ ಪರಿಸ್ಥಿತಿ ಬಂದಾಗ.
ಮೊದಲು ಕರ್ನಾಟಕದಲ್ಲಿದ್ದಷ್ಟೂ ಕಾಲ ರೈಲಿನಲ್ಲಿ ಕನ್ನಡದಲ್ಲಿ (ಮುಂದಿನ) ಊರಿನ ವಿವರಗಳಿರುವ ಬೋರ್ಡ್ ಇಡುವ ಪದ್ದತಿಯಿತ್ತು.
ಇತ್ತೀಚೆಗೆ ತಮಿಳುನಾಡು ಬಿಟ್ಟು ಬೇರೆ ಎಲ್ಲಾ ರಾಜ್ಯದಲ್ಲಿ ಆ ಪರಿಪಾಠವನ್ನು (ಸ್ಥಳೀಯ ಭಾಷೆಯಲ್ಲಿ ಬೋರ್ಡ್) ನಿಲ್ಲಿಸಲಾಗಿದೆ.
ಆ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೇಗೆ ಬಂತು? - ಇಲ್ಲಿ ಹೇಳಿದ ಕಾಯಿದೆಯಿಂದ...
ತಮಿಳುನಾಡಿಗೆ ಯಾಕೆ ರಿಯಾಯಿತಿ ಸಿಕ್ಕಿತು? - ಯಾಕೆಂದರೆ, ಇಲ್ಲಿ ಹೇಳಿದ ಕಾಯಿದೆ ತಮಿಳುನಾಡಿಗೆ ಲಗಾವು ಆಗುವುದಿಲ್ಲ.
ಈ ಬದಲಾವಣೆ ಮಾಡಿದ್ದು ಯಾಕೆ? ಬೋರ್ಡ್ ಬದಲಾಯಿಸಲು ತಗಲುವ ಸಮಯ ಉಳಿಸಲು!
ಎಲೆಕ್ಟ್ರಾನಿಕ್ ಬೋರ್ಡ್ ಹಾಕಿದ್ದರೆ ಸಮಯ ಉಳಿಸಬಹುದಾಗಿತ್ತು, ಸ್ಥಳೀಯ ಭಾಷೆಯಲ್ಲಿ ಬೋರ್ಡ್ ಇಡುವ ಪರಿಪಾಠ ನಿಲ್ಲಿಸುವ ಅಗತ್ಯವಿರಲಿಲ್ಲ.
ರೈಲ್ವೆ ಇಲಾಖೆ ಏನೂ ಪಾಪರ್ ಆಗ್ತಾ ಇರಲಿಲ್ಲ... ಬೇಕಿದ್ದರೆ ಅದನ್ನು ಜಾಹೀರಾತುಗಳಿಗೆ ಕೂಡ ಉಪಯೋಗಿಸಿ ಖರ್ಚು ಕಡಮೆ ಮಾಡಬಹುದಾಗಿತ್ತು.
ಆದರೆ ಅದನ್ನು ಬಿಟ್ಟು ಈ ಸುಲಭದ ದಾರಿ ಯಾಕೆ ಹುಡುಕಿದರು? ಯಾಕೆಂದರೆ ನಾವು "ಕುರಿಗಳು ಸಾರ್ ಕುರಿಗಳು"!

ಅಂದ ಹಾಗೆ ಈ "ಸ್ಥಳೀಯ ಭಾಷೆಯಲ್ಲಿ ಬೋರ್ಡ್" ಬಗ್ಗೆ ಲೇಟೆಸ್ಟ್ ನ್ಯೂಸ್ ಏನು? ಯಾರಿಗಾದರೂ ಗೊತ್ತೆ?

ಇತೀ,
ಉಉನಾಶೆ

Anonymous ಅಂತಾರೆ...

ಬಹುಭಾಷಾ ಪ್ರೇಮಿ,

ಬೇರೆ ಭಾಷೆಯನ್ನು ಕಲಿಯಬಾರದು ಎಂದು ಯಾರಾದರೂ ಇಲ್ಲಿ ಹೇಳಿದರೇನು? ಸುಮ್ಮನೆ ಅಸಂಬದ್ಧವಾದ ಮಾತನ್ನು ಆಡಬೇಡಿ. ಇಲ್ಲಿ ಹಿಂದಿಯನ್ನು ನಾವು ಬಗ್ಗಿ ಒಪ್ಪಿಕೊಂಡಿರುವುದಕ್ಕೆ ಕಾರಣ ಏನು ಎಂದು ತೋರಿಸಿಕೊಟ್ಟಿದ್ದಾರೆ, ಓದಿ ಅರ್ಥ ಮಾಡಿಕೊಳ್ಳಿ. ಓದುವುದಕ್ಕಿಂತ ಮುಂಚೆ ನಿಮಗೆ ತೋಚಿದ್ದನ್ನು ಬರೆಯಬೇಡಿ.

ಉಉನಾಶೆ ಅಂತಾರೆ...

ಸೂಚನೆ:
ನಾನು ವಿಷಯ ಬದಲಿಸುತ್ತಿಲ್ಲ.
"ಮೀಸಲಾತಿ" ಯನ್ನು ಸಮರ್ಥಿಸುವುದು ಅಥವಾ ವಿರೋಧಿಸುವುದು ನನ್ನ ಉದೇಶವಲ್ಲ.
ಅದೊಂದು ಉದಾಹರಣೆ ಮಾತ್ರ.

ಪ್ರಾದೇಶಿಕ ಪಕ್ಷಗಳಿದ್ದರೆ ಏನು ಸಾಧಿಸಬಹುದು ಅನ್ನೋದಕ್ಕೆ ಇನ್ನೊಂದು ಉದಾಹರಣೆ:
ಒಂಬತ್ತನೆ ಶೆಡ್ಯೂಲ್‍ನಲ್ಲಿ ತಮಿಳುನಾಡಿನ ೬೯% ಮೀಸಲಾತಿಯ ಕಾಯಿದೆ ಸೇರಿಸಿದ್ದು.
ಒಂಬತ್ತನೆ ಶೆಡ್ಯೂಲ್‍ನಲ್ಲಿರುವ ಕಾಯಿದೆಗಳನ್ನು ನ್ಯಾಯಾಂಗ ಪರಿಶೀಲನೆ ಮಾಡುವುದಿಲ್ಲ (ಇದು ಬದಲಾಗುವ ಸೂಚನೆಗಳಿವೆ).
ಹಾಗಾಗಿ ಸುಪ್ರೀಂ ಕೋರ್ಟಿನ ೪೯.೫% ಮಿತಿಯನ್ನು ದಾಟಿದರೂ ಆ ಕಾಯಿದೆಯನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು.
ಭೂಸುಧಾರಣೆಯ ಕಾಯಿದೆಗಳನ್ನು "ಆಸ್ತಿಯ (ಮೂಲಭೂತ) ಹಕ್ಕಿನ ಕೊಕ್ಕೆ"ಗಳಿಂದ ತಪ್ಪಿಸಲು ತಂದ ಈ ೯ನೆ ಶೆಡ್ಯೂಲ್‍ನಲ್ಲಿ ಮೀಸಲಾತಿಯಂತ ವಿಚಾರ ಸೇರಿಸಲು ಸಾಧ್ಯವಾದದ್ದು "ಪ್ರಾದೇಶಿಕತೆಯ ಬಲ"ದಿಂದ ಎಂದು ನನ್ನ ಅಭಿಪ್ರಾಯ.
ವಿವರಗಳಿಗೆ http://www.commonlii.org/in/legis/const/2004/36.html ನಲ್ಲಿ 257Aಯನ್ನು ಹುಡುಕಿ.

ಇತೀ,
ಉಉನಾಶೆ

Anonymous ಅಂತಾರೆ...

GurugaLe,
illi kelavaru Tamil Nadu annu maadariyaagi heLuttiddare. nanna prakaara TN ginta KeraLa uttama udaaharaNe. alli bhaasheyoo ulidide,samskrutiyoo ulidide. Still they are not fanatics, no caste politics there. Largest number of Local language news papers are sold in KerLa only. Because, malayaaLam is in their heart and not limited to some dialogues by some actor on the screen like in some other languages. They are silent, cultured, do not interfere or poke their nose too much in other matters.

Anonymous ಅಂತಾರೆ...

ತಮಿಳು ನಾಡಿಗೆ ಇರುವ ಹೊರತನ್ನು, ನಾವು ಕನ್ನಡಿಗರು ಪಡೆಯಬಹುದು. ನಾವು ಕೇಳಬೇಕು ಅಷ್ಟೇ!!

Prashanth ಅಂತಾರೆ...

10. Smt. Poonam Juneja

Director & Secretary
Committee of Parliament on Official Language

Phone: 23012933

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails