ಶಾಸ್ತ್ರೀಯ ಸ್ಥಾನ! ತಮಿಳರ ಅಡ್ಡಗಾಲು ಯಾಕಣ್ಣಾ?

ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡೋದಕ್ಕೆ ನೂರಾರು ಆತಂಕಗಳು ಗುರು! ಮೊದಲಿಗೆ ನಾವು ಶಾಸ್ತ್ರೀಯ ಭಾಷೆ ಅಂದ್ರೇನು? ಇದ್ರಿಂದ ಸಿಗೋ ಅನುಕೂಲಗಳೇನು? ಅಂತ ಅರ್ಥ ಮಾಡ್ಕೊಂಡು ಕೇಂದ್ರ ಸರ್ಕಾರಾನ ಕೇಳೊ ಮೊದಲೆ ಡಿ.ಎಂ.ಕೆಯೋರು ತಮ್ಮ ಚುನಾವಣಾ ಪ್ರಣಾಳಿಕೆಯೊಳಗೆ ಇದನ್ನು ಸೇರ್ಸಿದ್ರು. ಕಾಂಗ್ರೆಸ್ ಜೊತೆ ಸರ್ಕಾರ ಮಾಡ್ಬೇಕಾದಾಗ ಡಿಎಂಕೆಯೋರು ಈ ವಿಷ್ಯಾನ ಬೇಡಿಕೆಯಾಗಿಟ್ಟು ಲೋಕಸಭೆಯ ಅಧಿವೇಶನದಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಿಟ್ಟುಸ್ಕೊಂಡೂ ಬಿಟ್ರು. ಜೊತೆಗೆ ಇನ್ನೊಂದು ವರ್ಷ ಇನ್ಯಾವ ಭಾಷೆಗೂ ಅಂಥ ಸ್ಥಾನ ಸಿಗದಂಗೆ ನೋಡ್ಕೊಳೋದ್ರಲ್ಲಿ ಯಶಸ್ವಿಯೂ ಆದ್ರು. ಮರುವರ್ಷದಲ್ಲಿ ಸಂಸ್ಕೃತಕ್ಕೂ ಇಂಥಾ ಸ್ಥಾನಮಾನ ಕೊಡಲಾಯಿತು.
ಆಗ ಕನ್ನಡಿಗರೆಂಬ ಕುಂಭಕರ್ಣರು ಎದ್ದು ’ನಮಗೂ ಕೊಡಿ... ನಮಗೂ ಕೊಡಿ’ ಅಂತಾ ಒತ್ತಾಯ ಮಾಡಕ್ಕೆ ಶುರು ಹಚ್ಕೊಂಡ್ರು.

ಭಾಷಾತಜ್ಞರ ಸಮಿತಿ

ಕನ್ನಡದ ಜೊತೆಗೆ ತೆಲುಗೂ ಕೂಡಾ ಮನವಿ ಸಲ್ಲಿಸಿದಾಗ ಭಾರತ ಸರ್ಕಾರ ಒಂದು ಸಮಿತಿ ಮಾಡಿ ಅದ್ರಲ್ಲಿ ಭಾಷಾ ತಜ್ಞರನ್ನು ಕೂಡಿಸಿ, ಯಾವುದೇ ಭಾಷೇನ ಶಾಸ್ತ್ರೀಯ ಅನ್ನಕ್ಕೆ ಇರಬೇಕಾದ ಮಾನದಂಡಾನ ನಿಶ್ಚಯ ಮಾಡಿ ಯಾವ ಭಾಷೆ ಪೂರೈಸುತ್ತೆ ಅಂತ ತೀರ್ಮಾನ ಮಾಡಿ ಅಂತು. ಇಂಥಾ ಯಾವ ನಿಬಂಧನೇನೂ ತಮಿಳಿಗೆ ಇಟ್ಟಿರಲಿಲ್ಲ ಅನ್ನೋದು ಸೋಜಿಗದ ಸಂಗತಿ. ಆ ಸಮಿತಿಯೋರು ಮೊದಲು ಸಾವಿರ ವರ್ಷಗಳ ಹಳಮೆ ಇರಬೇಕು ಅನ್ನೋ ಒಂದು ನಿಬಂಧನೆ ಹಾಕುದ್ರು.. ಹೌದೇನ್ರೀ, ಇಕಾ ತಕ್ಕಳ್ಳಿ, ಕನ್ನಡದ ಕವಿರಾಜ ಮಾರ್ಗ 850 ರ ಆಜುಬಾಜೂದು ಅಂತ ಕನ್ನಡದೋರಂದ್ರು. ಹೌದಾ... ಹಂಗಾರೆ ಸಾವಿರದೈನೂರು ವರ್ಷದ ಹಳಮೆ ಇರಬೇಕು ಅನ್ನೋ ತಿದ್ದುಪಡಿ ಮಾಡುದ್ರು ಆಗ. ಕನ್ನಡ ತೆಲುಗು ಎರಡೂ ಭಾಷೆಗಳ ಹಳಮೆಯನ್ನು ಸಾಧಿಸಿ ಆ ಸಮಿತಿ ಮುಂದೆ ಇಡಲಾಯಿತು. ಮೊನ್ನೆ ಮೊನ್ನೆ ಈ ಸಮಿತಿ ತನ್ನ ಕಡೇ ಸಭೆ ಸೇರಿ ತೀರ್ಮಾನ ಪ್ರಕಟ ಮಾಡ್ತಾರೆ ಅನ್ನೋ ಹೊತ್ತಿಗೆ ತಮಿಳುನಾಡಿನ ಹೈಕೋರ್ಟ್ ಅಂಗಳದಿಂದ ಸಮಿತೀನೆ ಸರಿಯಿಲ್ಲ ಅಂತ ವಿಶ್ವ ತಮಿಳು ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ (?) ತಕರಾರು ಅರ್ಜಿಯ ಸದ್ದು ಕೇಳಿಬಂತು.

ತಮಿಳರು ಯಾಕೆ ಅಡ್ದಗಾಲು ಹಾಕ್ತಿದಾರೆ?

ತಜ್ಞರ ಸಮಿತಿಯೇ ಇರಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕವೇ ಇರಲಿ, ಕೇಂದ್ರ ಸರ್ಕಾರದ ಮೂಲಕವೇ ಇರಲಿ ಕನ್ನಡಕ್ಕೆ ಇಂಥಾ ಸ್ಥಾನಮಾನ ಸಿಕ್ಕದೇ ಇರಲಿ ಅಂತ ತಮಿಳರು ಯಾಕೆ ಕ್ಯಾತೆ ತೆಗೀಬೇಕು? ಸಂಸ್ಕೃತ ಭಾಷಾ ಬೆಳವಣಿಗೆಗೆ ಅಂತ ಮುನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಅನುದಾನ ನೀಡ್ತಾರಲ್ಲಾ, ಅಂಥಾ ಅನುದಾನ ತಮಿಳಿಗೂ ನೀಡಿ, ಯಾಕಂದ್ರೆ ಈಗ ಇವೆರಡೂ ಶಾಸ್ತ್ರೀಯ ಭಾಷೆಗಳು ಅಂತ ಕೇಂದ್ರದ ಮುಂದೆ ತಮಿಳರು ವಾದ ಇಟ್ಟಾಗ ಕೇಂದ್ರ ಇಲ್ಲಾ ಅನ್ನದೆ ನೀವೂ ಕೂಡಾ ಸೂಕ್ತ ಯೋಜನೆಗಳ ಜೊತೆ ಬನ್ನಿ ಪರಿಗಣುಸ್ತೀವಿ ಅಂದಿದಾರೆ. ಈಗ ಕನ್ನಡಕ್ಕೂ, ತೆಲುಗಿಗೂ ಅಂಥಾ ಸ್ಥಾನಮಾನ ಕೊಟ್ರೆ ಅವ್ರೂ ಅಷ್ಟೇ ದೊಡ್ಡ ಅನುದಾನಕ್ಕೆ ಹಕ್ಕುದಾರರಾಗಲ್ವೇ? ಅಥ್ವಾ ಭಾಷಾ ಬೆಳವಣಿಗೆಗೆ ಅಂತ ಕೊಡೋ ಹಣ ಇವುಗಳ ಜೊತೆ ಹಂಚಕೋ ಬೇಕಾಗುತ್ತೆ ಅಂತಾ ಸಂಕಟಾನೆ ಇಂಥಾ ವಿರೋಧಕ್ಕೆ ಕಾರಣ ಅನ್ನೋ ಮಾತು ಚಾಲ್ತಿಯಲ್ಲಿದೆ ಗುರು!
ಭಾರತ ಒಕ್ಕೂಟ ಮತ್ತು ಸಮಾನತೆ

ಭಾರತ ಒಕ್ಕೂಟದಲ್ಲಿ ಸಮಾನತೆ ಎನ್ನೋದು ಮರೀಚಿಕೆ ಆಗೋದ ಹಾಗೆ ಕಾಣ್ತಿದೆ ಗುರು! ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಾಗ ಇಲ್ಲದ ನಿಬಂಧನೆಗಳು, ಸಮಿತಿಗಳು ಕನ್ನಡಕ್ಕೆ ನೀಡುವಾಗ ಯಾಕೆ? ತಮಿಳು ಯಾವ ನಿಬಂಧನೆಗಳನ್ನು ಪೂರೈಸುತ್ತೋ ಅಂಥದ್ದನ್ನು ಮಾತ್ರಾ ಬೇರೆ ಭಾಷೆಗಳಿಗೆ ಯಾಕೆ ಹಾಕಿದ್ದಾರೆ? ಭಾಷಾ ಹಳಮೆನ ಯಾಕೆ ಮೂರು ಸಾವಿರ ವರ್ಷ ಮಾಡದೆ ಒಂದೂವರೆ ಸಾವಿರ ವರ್ಷ ಮಾಡುದ್ರು ಅಂದ್ರೆ ತಮಿಳು ಬರೀ 1500 ವರ್ಷ ಅಷ್ಟೇ ಹಳೇದು ಅದಕ್ಕೆ ಅಂದಂಗಾಯ್ತಲ್ಲ! ಇಷ್ಟಕ್ಕೂ ತಮಿಳುನಾಡಿನ ಹೈಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬಾರದು ಅನ್ನೋ ತಕರಾರು ಅರ್ಜಿ ವಿಚಾರಣೆಗೆ ಬರುತ್ತೆ, ಆ ಕಾರಣಕ್ಕೆ ಸಮಿತಿಯ ತೀರ್ಮಾನ ಪ್ರಕಟ ಆಗಲ್ಲ ಅನ್ನೋದು ನಮ್ಮ ವ್ಯವಸ್ಥೆ ಹೇಗಿದೆ ಅನ್ನೋದನ್ನು ಎತ್ತಿ ತೋರುಸುತ್ತೆ ಗುರು!

15 ಅನಿಸಿಕೆಗಳು:

Anonymous ಅಂತಾರೆ...

ತಮಿಳರು ಅಡ್ಡಗಾಲು ಹಾಕಿದ್ದು ಯಾಕೆ ಎಂದು ಯೋಚಿಸುವಾಗ ನನಗೆ ಹೊಳೆಯುವ ಸಂಗತಿ ಏನೆಂದರೆ, ಭಾರತದ ಒಕ್ಕೂಟದಲ್ಲಿ ಅವರು ಸೇರಿರುವುದು ತಮ್ಮ ಉದ್ಧಾರಕ್ಕೇ ಹೊರತು ತಮಗೆ ಸಿಗುವ ಮರ್ಯಾದೆ ಹಾಗು ಅನುದಾನ, ಇವುಗಳಲ್ಲಿ ಪಾಲು ಕೊಡಲು ಖಂಡಿತ ಅಲ್ಲ.

ತಮಿಳಿನಲ್ಲಿ ನನಗೆ ತಿಳಿದ ಹಾಗೆ ಇರುವುದು ಒಟ್ಟು ೩೦ ಅಕ್ಷರಗಳು ಮಾತ್ರ. ಕನ್ನಡಕ್ಕಾದರೋ, ೧೪ ಸ್ವರಗಳು + ೩೬ ವ್ಯಂಜನಗಳು ಸೇರಿ ಒಟ್ಟು ೫೧ ಅಕ್ಷರಗಳಿವೆ. ಕನ್ನಡ ಎಷ್ಟು ಹಳೆಯದು, ಕನ್ನಡ ಭಾಷೆಯ ಇತಿಹಾಸವೇನು, ಇವೆಲ್ಲದಕ್ಕೆ ಸಾಕ್ಷಾಧಾರಗಳಿವೆ. ಇಷ್ಟಾದರೂ ಕನ್ನಡವನ್ನು ಗುರುತಿಸಿ ಸನ್ಮಾನಿಸದೆ ತಮಿಳನ್ನು ಕರೆದು ಶಾಸ್ತ್ರಿಯ ಭಾಷೆ ಪಟ್ಟ ಕೊಟ್ಟದ್ದು ಏಕೆ ತಮ್ಮ? ಕೇಂದ್ರ ಸರ್ಕಾರ, ತಮಿಳರ ಹಿತೈಷಿ ಎಂದು ಬಗೆಯಬೇಕೆ? ಅಥವಾ ತಮಿಳರ ಕೈಗೊಂಬೆ ಎಂದು ಬಗೆಯಬೇಕೆ? ಇದೆಂತಹ ಒಕ್ಕೂಟದ ವ್ಯವಸ್ಥೆ? ಸರ್ಕಾರಗಳ ಈ ಕುತಂತ್ರಗಳಿಗೆ ನನ್ನ ಧಿಕ್ಕಾರವಿಅರಲಿ.
http://en.wikipedia.org/wiki/Kannada_language

Anonymous ಅಂತಾರೆ...

ತಮಿಳರ ದಿಂದ ಅಡ್ಡಗಾಲು ಸರಿ ಅಲ್ಲ. ನಮ್ಮ ದೆಶದ ಕಾನೂನು ವ್ಯವಸ್ಥೆ ನಿಜವಾಗಲು ಸರಿ ಇದ್ದರೆ ಮೆಡ್ರಾಸ್ ಹ್ಯ್ ಚೊರ್ಟ್ ಈ ಅರ್ಜಿ ಅನು ತಳ್ಳಿ ಹಾಕ ಬೆಕು. ಕೆಂದ್ರ ಸರಕಾರ ಶೀಘ್ರದಲ್ಲಿಯೆ ಕನ್ನಡಕ್ಕೆ ಶಾಸ್ತೀಯ ಸ್ಥಾನಮಾನ ನೀಡಬೆಕು.

Anonymous ಅಂತಾರೆ...

what is the word for classical language in Kannada?

Shastreeya bhaasa is sanskrit.

In Tamizh 'Chemmozhi'.

Is there a Kannada word for it?

If not.. how can it call itself as a classical langauage?

Guruprasad Timmapur ಅಂತಾರೆ...

Read "Tamilu TalegaLa naduve" by Dr. BGL Swamy. You'll know what they do to prove the things abt their language...

Unknown ಅಂತಾರೆ...

What a stupid question you are asking dude?.....

is tamil having a letter for 'ha'?... you people will use 'ga' instead of 'ha'. right?...

'Classical Status' is not about the what word a language has. Its all about how old it is and how rich it is?...

One last question... how many 'GNANAPEETA' awards is tamil having?....

ಆನಂದ್ ಅಂತಾರೆ...

ಪ್ರಿಯ ತಮಿಳನ್,

ಕನ್ನಡದಲ್ಲಿ ಶಾಸ್ತ್ರೀಯ ಭಾಷೆ ಅನ್ನೋದಕ್ಕೆ ಚೆನ್ನುಡಿ ಅಂತಾರೆ. ಅಲ್ಲಾ ಸ್ವಾಮಿ,ಅಕಸ್ಮಾತ್ ಕನ್ನಡದಲ್ಲಿ ಅಂಥಾ ಒಂದು ಪದ ಇಲ್ಲಾ ಅಂದ್ರೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಲು ಆಗಲ್ಲವಾ? ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಇದೂ ಒಂದು ಮಾನದಂಡ ಅಂತ ಗೊತ್ತಿರಲಿಲ್ಲ. ತಾವೇನಾದ್ರೂ ಹಾಗೆ ತೀರ್ಮಾನಿಸಿದ್ದೀರಾ? ನೀವು ಕೊಚ್ಚಿಕೊಳ್ಳೋ ಸಂಗತ್ತಮಿಳು ಅನ್ನೋ ಪದ ಹುಟ್ಟಿರೋದೆ ಸಂಸ್ಕೃತದ ಸಂಗಮ ಪದದಿಂದ ಅನ್ನೋದು ಮರೀಬೇಡಿ. ಲೋಕಂ ಎನ್ನುವ ಸಂಸ್ಕ್ರುತ ಪದದಿಂದ ಉಳಗಂ ಪದ ಹುಟ್ಟಿದ್ದು ಅನ್ನೋದು ಸತ್ಯವಾದರೆ ಉಳಗದಿಂದ ಲೋಕ ಹುಟ್ಟಿದೆ ಅನ್ನೋ ವಾದ ತಮ್ಮ ಪಂಡಿತರದ್ದು. ತಮಿಳು ಹಳೆಯ ನುಡಿ ಅನ್ನೋದನ್ನು ಒಪ್ಪೋಣ. ಆದ್ರೆ ಅದೇ ಸರ್ವಶ್ರೇಷ್ಟ ಅನ್ನೋ ಭ್ರಮೆ ಬಿಡಿ.
ಮೊದಲ ಅನಾಮಿಕರೇ, ಪ್ರತಿ ಭಾಷೆಗೂ ತನ್ನ ಅಗತ್ಯಕ್ಕೆ ಬೇಕಿರೋ ಅಕ್ಷರಗಳು ಇರ್ತವೆ. ಹಾಗೇ ತಮಿಳಿಗೂ. ಉದಾಹರಣೆಗೆ ಇಂಗ್ಲಿಷಲ್ಲಿ ಬರೀ ೨೬ ಅಕ್ಷರ ಇದೆ, ಕನ್ನಡದಲ್ಲಿ ೪೯ ಇದೆ ಅನ್ನೋದು ಹೇಗೆ ಸರಿಯಲ್ಲವೋ ಹಾಗೆ ಕಡಿಮೆ ಅಕ್ಷರ ಇರೋ ಕಾರಣಕ್ಕೇ ತಮಿಳು ಅಪರಿಪೂರ್ಣ ಅನ್ನಕ್ಕಾಗಲ್ಲ. ತಮಿಳಿನಲ್ಲಿ ತಮಿಳು ಪದಗಳ ಉಚ್ಚರಣೆಗೆ ಬೇಕಾದ ಅಕ್ಷರಗಳಿವೆ.
ಹಾಗೆ ನೋಡಿದರೆ ಕನ್ನಡದಲ್ಲೇ ತನ್ನದಲ್ಲದ ಭಾಷೆಯ ಪದಗಳ ಉಚ್ಚರಣೆಗೆ ಬೇಕಾಗೋ, ಕನ್ನಡದ ಯಾವ ಪದಕ್ಕೂ ಅಗತ್ಯವಿಲ್ಲದಿರೋ ಅನೇಕ ಅಕ್ಷರಗಳ ಹೊರೆಯನ್ನು ಹೇರಿದ್ದಾರೆ, ನಮ್ಮ ಹಿರಿಯರು ಅನ್ನಬಹುದು. ಉದಾಹರಣೆಗೆ ಋ, ೠ, ಷ ಇತ್ಯಾದಿ.

ನಮಸ್ಕಾರ
ತಿಮ್ಮಯ್ಯ

Anonymous ಅಂತಾರೆ...

ಕನ್ನಡದಲ್ಲಿ ೪೯ ಇದೆ ಅನ್ನೋದು ಹೇಗೆ ಸರಿಯಲ್ಲವೋ ಹಾಗೆ ಕಡಿಮೆ ಅಕ್ಷರ ಇರೋ ಕಾರಣಕ್ಕೇ ತಮಿಳು ಅಪರಿಪೂರ್ಣ ಅನ್ನಕ್ಕಾಗಲ್ಲ.

ಹಾಗಾದರೆ, ಚೆನ್ನುಡಿಗೆ ಇರಬೇಕಾದ ಅರ್ಹತೆಗಳು ಏನು? ನುಡಿ ಪುರಾತನವಾದದ್ದಾಗಿರಬೇಕೋ? ಶಬ್ದಕೋಶದಲ್ಲಿ ಹೆಚ್ಚು ಪದಗಳನ್ನು ಹೊ೦ದಿರಬೇಕೋ? ಅಥವಾ, ಆಧ್ಯಾತ್ಮಿಕವಾದದ್ದಾಗಿರಬೇಕೋ?

ಆನಂದ್ ಅಂತಾರೆ...

ಪ್ರೀತಿಯ ಅನಾಮಿಕರೇ,
ಕನ್ನಡ ವರ್ಣಮಾಲೆಯಲ್ಲಿ ೧೫(೧೩+೨)ಸ್ವರಗಳು -
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ವ್ಯಂಜನಗಳು ಒಟ್ಟು ೩೪ -

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಒಟ್ಟು ಅಕ್ಷರಗಳು ೪೯.

ಚೆನ್ನುಡಿಗೆ ಇರಬೇಕಾದ ಅರ್ಹತೆಗಳು ನೀವು ಹೇಳಿದ ಯಾವುವೂ ಅಲ್ಲ. ಕೇಂದ್ರ ಸರ್ಕಾರಾನ ಸೂತ್ರದ ಗೊಂಬೆ ಥರಾ ಆಡ್ಸೋ ತಾಕತ್ತು. ಜನಪ್ರತಿನಿಧಿಗಳಲ್ಲಿ ತುಸು ಸ್ವಾಭಿಮಾನ ಅಷ್ಟೆ.(ತಾಂತ್ರಿಕವಾದ ಅಗತ್ಯಗಳು ೪ ಇವೆ - ೧೫೦೦ ವರ್ಷಕ್ಕಿಂತ ಹಳಮೆ, ಸಾಹಿತ್ಯ ಪರಂಪರೆ, ತನ್ನದೇ ಸ್ವಂತ ನೆಲೆ, ಇದ್ರ ಜೊತೆ ಶಾಸ್ತ್ರೀಯ ಭಾಷೆಯ ಸ್ವರೂಪ ಇವತ್ತಿನದಕ್ಕಿಂತ ಭಿನ್ನ ಆಗಿದ್ರೂ ಪರ್ವಾಗಿಲ್ಲ ಅನ್ನೋದು)

ವಂದನೆಗಳು

ತಿಳಿಗಣ್ಣ ಅಂತಾರೆ...

ಅಕ್ಕರ ಕಡಮೆ ಇದೆ ಅಂದ್ರೆ ಅದು ಕ್ಲಾಸಿಕಲ್ ಅಲ್ಲ ಅಂದ್‌ರೆ ಲ್ಯಾಟಿನ್ ಗ್ರೀಕ್ಗಳ ಕತೆ ಏನು?

ಅಕ್ಕರಗಳು ಎಶ್ಟು ಯಾವುವು ಇರಬೇಕು ಅನ್ನೋದು ಆ ಆ ನುಡಿಗಳ ಉಲಿಕೆphonology ತೀರ್ಮಾನ ಮಾಡ್ತದೆ..

ಕನ್ನಡದ ಉಲಿಕೆಯಂತ ಕನ್ನಡಕ್ಕೆ ೨೮ ಅಕ್ಕರಗಳು ಸಾಕು.. ಆದರೆ ಸಂಸ್ಕೃತ ಅಕ್ಷರಮಾಲೆಯ ಅನುಕರಣೆಯಾಗಿ ನಮ್ಮ ಕನ್ನಡದ ಅಕ್ಷರಮಾಲೆ ಇರುವುದರಿಂದ ಅದರಲ್ಲಿ ಮಹಾಪ್ರಾಣಗಳು ಮುಂತಾದವು ಉಲಿಕೆಗೆ ಹೆಚ್ಚುವರಿಯಾಗಿವೆ..

ಆದರೆ.. ಇದು ಯಾವುದು ಕ್ಲಾಸಿಕಲ್ ನುಡಿ ಅನ್ನೋದಕ್ಕೆ ಗುಣಗಳಲ್ಲ...

ನಮ್ಮ ಕೇಂದ್ರ ಸರಕಾರ ಇಟ್ಟಿರುವ ಮೂರು ಗುಣಗಳೂ
೧) ಹಳಮೆ
೨) ತನ್ನದೇ ಆದ ಹುಟ್ಟು ಬೆಳವಣಿಗೆ
೩) ತನ್ನದೇ ಆ ಸಾಹಿತ್ಯ ಶಯ್ಲಿ?ಹೀಗೇನೋ...

ಇವೆಲ್ಲ ಕನ್ನಡಕ್ಕೆ ಇದೆ...

Anonymous ಅಂತಾರೆ...

Now let me explain the status of Kannada language with the above;
a) Historians have not had conclusive proof about Kannada being older than 1400 years! There are 100s of languages in the world which are of the same age!
b) Both Kannada & Telugu belong to Dravidian language sect. They both use the adopted versions of Devanagiri scripts (the one used in Sanskrit) and have adopted words from Sanskrit and Tamil in complete sync or in a camoflaged form. While Tamil & Sanskrit, for example have their own script (both for numbers and alphabets) independent of each other.

Kannada, has not had influence on any other language on its own other than being influencial jointly with Tamil in creating Tulu or with Sanskrit in creating Konkani and couple of other almost extinct sub-languages. On the other hand, Tamil has influenced the following languages:
Brahui (Pakistan)
Kurux (Nepal)
Malto (Bangladesh)
Kolami
Naiki
Parji
Ollari
Gadaba (to name a few)

Tamil is spoken in 19 countries in the world as "Official Language" (official language is when the government announces it as one and publishes its artifacts in that language).

All this fight is politically driven; and only out of comparitive fanatism. The classical language status would give international recognition and would also help getting Rs. 100 crore from the Center for the promotion of the language, whic is what seems to be the end objective.
orkut na kasturi kannada community nalli bardidare.
"kannadakke shaatriya bhaashe sthanamaana bedave?"

ಆನಂದ್ ಅಂತಾರೆ...

ಪ್ರಿಯ ಅನಾಮಿಕರೇ,
ನಿಮ್ಮ ಪ್ರತಿಕ್ರಿಯೆಯಲ್ಲಿ ಎತ್ತಿರೋ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
- ಕನ್ನಡ ಮತ್ತು ತೆಲುಗುಗಳೆರಡೂ ೧೪೦೦ ವರ್ಷಕ್ಕಿಂತ ಹಳತಲ್ಲ ಅನ್ನುವ ವಾದ ನಿಜಾನಾ ಸುಳ್ಳಾ ನೋಡೋ ಕೆಲ್ಸ ಪಂಡಿತರು ಮಾಡಲಿ, ಆದರೆ ಶಾಸ್ತ್ರೀಯ ಭಾಷೆ ಅಂತ ಕರೆಯಕ್ಕೆ ೧೫೦೦ ವರ್ಷ್ದದ ಹಳಮೆ ಇರಬೇಕು ಮಿತಿ ಹಾಕಿರೋರು ಯಾರು? ತಮಿಳು ಭಾಷೆಗೆ ಅಂಥಾ ಸ್ಥಾನಮಾನ ಮಾಡುವಾಗ ಯಾಕೆ ಇಂಥಾ ನಿಬಂಧನೆಗಳನ್ನು ಹಾಕಿರಲಿಲ್ಲ? ಅದು ಹೇಗೆ ನೇರವಾಗಿ ಸಮ್ಸತ್ತಿನಲ್ಲಿ ಘೋಷಣೆ ಮಾಡುದ್ರು? ಆಗ ಯಾಕೆ ಸಮಿತಿ ಇರಲಿಲ್ಲ? ಅನ್ನೋದನ್ನು ನೋಡುದ್ರೆ ಸಾಕು ಇಲ್ಲಿ ಕೆಲಸ ಮಾಡ್ತಿರೋದು ನ್ಯಾಯ ಅಲ್ಲ, ಬರೀ ಲಾಬಿ ಅಂತ.
- ತಮಿಳು ಲಿಪಿಯೂ ಕೂಡಾ ಬ್ರಾಹ್ಮಿ ಲಿಪಿಯಿಂದಲೇ ಬಂದಿರೋದು ಅನ್ನಲು ಈ ಲಿಂಕ್ ನೋಡಿ : http://en.wikipedia.org/wiki/Tamil_script
- ಕನ್ನಡದ ಬೇರಾವ ಭಾಷೆಯ ಮೇಲೂ ಪರಿಣಾಮ ಬೀರಿಲ್ಲ ಅನ್ನೋ ವಾದ ಮೂರ್ಖತನದ್ದು ಅನ್ನದೆ ವಿಧಿಯಿಲ್ಲ. ಮೊದಲಿಗೆ ಭಾಷಾ ಚರಿತ್ರೆ ಸರಿಯಾಗಿ ಅರ್ಥ ಮಾಡಿಕೊಳ್ಳೋಣ.ಮೂಲದಲ್ಲಿ ಇದ್ದದ್ದು ತಮಿಳು ಮಾತ್ರಾ, ಅದರಿಂದಲೇ ಬೇರೆಲ್ಲಾ ಭಾಷೆಗಳು ಹುಟ್ಟಿದವು ಅನ್ನೋದು ತಮಿಳರ ಕೂಪಮಂಡೂಕತನ ತೋರಿಸುತ್ತದೆ. ಮೂಲದ ಸಾಮಾನ್ಯ ದ್ರಾವಿಡರ ಭಾಷೆಗೆ ಇಟ್ಟಿರೋ ಹೆಸರು ಕಾಲ್ಪನಿಕವಾಗಿದ್ದು ಅದನ್ನು "ಆದಿದ್ರಾವಿಡ" ಎನ್ನುತ್ತಾರೆ. ಅದನ್ನೇ ತಮಿಳು ಅನ್ನುವುದದರೆ ಅದನ್ನು ಕನ್ನಡ ಅಂತಲೂ ಅನ್ನಬಹುದು. ಆ ಭಾಷೆ ಇಂದು ಯಾವುದನ್ನು ತಮಿಳು, ಕನ್ನಡ, ತೆಲುಗು, ಮಲಯಾಳಂ ಎನ್ನುತ್ತೇವೆಯೋ ಅದಕ್ಕಿಂತ ಭಿನ್ನ ಮತ್ತು ಇವೆಲ್ಲಕ್ಕೂ ಮೂಲ.ಅಷ್ಟೆ. ಹಾಗಾಗಿ ಬ್ರೂಯಿ, ಕೊಲಮಿ ಇತ್ಯಾದಿ ಭಾಷೆಗಳಿಗೆ ತಮಿಳು ಮೂಲ ಕನ್ನಡ ಅಲ್ಲ ಅನ್ನೋದು ತಪ್ಪು.
- ತಮಿಳು ೧೯ ದೇಶಗಳಲ್ಲಿ ಅಧಿಕೃತ ಭಾಷೆಯಾಗೋಕ್ಕೂ ಶಾಸ್ತ್ರೀಯ ಭಾಷೆಗೂ ಏನು ಸಂಬಂಧ? ಹೆಚ್ಚು ಜನ ಮಾತಾಡೊದು ಶಾಸ್ತ್ರೀಯ ಭಾಷೆ ಅನ್ನಲು ಒಂದು ಅಗತ್ಯವೇ? ಹಾಗೇನೂ ಇಲ್ಲವಲ್ಲ.
ಇಲ್ಲಿ ಹೇಳ್ತಿರೋದು ಕನ್ನಡ ತಮಿಳಿಗಿಂತ ಹಳೆಯದು, ಹಿರಿದು ಅನ್ನೋ ಮಾತಲ್ಲ. ಯಾವ ಮಾನದಂಡವೂ ಇಲ್ಲದೆ ತಮಿಳಿಗೆ ಬರಿಯ ತಮಿಳರ ರಾಜಕೀಯಕ್ಲ್ಕೆ ಮಣಿದು ಶಾಸ್ತ್ರೀಯ ಭಾಷಾ ಸ್ಥಾನ ನೀಡಿ ಕನ್ನಡದ ಪ್ರಶ್ನೆ ಬಂದಾಗ ಸಲ್ಲದ ಸಮಿತಿ ಮಾಡಿ, ಇಲ್ಲದ ನಿಬಂಧನೆ ಹೇರುವುದು ಯಾವ ಸೀಮೆ ಒಕ್ಕೂಟ ವ್ಯವಸ್ಥೆ? ಯಾವ ಸೀಮೆ ಸಮಾನತೆ? ಅನ್ನೋದು...ಅಷ್ಟೆ. ತಮಿಳರು ಯಾಕೆ ಕನ್ನಡಕ್ಕೆ ಅಂಥಾ ಸ್ಥಾನಮಾನ ಕೊಡಲು ಅಡ್ದಗಾಲು ಹಾಕ್ತಿದಾರೆ? ಯಾವ ಕಂತ್ರಿ ಬುದ್ಧಿ ಅವರನ್ನು ಇಂಥಾ ಕುತಂತ್ರಕ್ಕೆ ಏಲೀತಿದೆ ಅನ್ನೋದು... ಅಷ್ಟೆ

ನನ್ನಿ

ತಿಮ್ಮಯ್ಯ

ತಿಳಿಗಣ್ಣ ಅಂತಾರೆ...

ಹೆಸರಿಲ್ಲದವರು ಇಂಗ್ಲೀಶಲ್ಲಿ ಬರೆದಿರುವ ಸಾಲುಗಳಲ್ಲಿ ಹೆಚ್ಚು ಸುಳ್ಳುಗಳು...

ಕನ್ನಡದ ೨೪೦೦ ವರ್ಶ ಹಳೆಯದು ಅನ್ನೋದಕ್ಕೆ ಹಂಪನ ಅವರ ಬರಹದಲ್ಲೇ ಬೇಕಾದಶ್ಟು ಪುರಾವೆ ಇದೆ.. ಕನ್ನಡದ ಪದಗಳನ್ನು ರುಗ್ವೇದಲ್ಲೂ ಕಂಡಿದ್ದೂ.. ಕನ್ನಡದ ಸಾಲೊಂದು ಮೆಸಪಟೋಮಿಯದ, ಇಜಿಪ್ಟಿನ ಗೋಡೆಯ ಮೇಲೆ ಕಂಡುಬಂದಿದೆ.

ಇನ್ನು ಕನ್ನಡ ಮತ್ತು ತೆಲುಗು ಎರಡೂ ದ್ರಾವಿಡ-ನುಡಿ-ಗುಂಪಿಗೆ ಸೇರಿದ್ದರೂ.. ಇಲ್ಲಿ "ದ್ರಾವಿಡ" ಅನ್ನೋ ಪದಬಳಕೆ ಬರೀ ಹೆಸರಿಗೆ. ದ್ರಾವಿಡ ಅನ್ನೋ ತಪ್ಪುಬಳಕೆಯನ್ನು ಕ್ಯಾಡ್ವೆಲ್ ಮಾಡಿದ್ದು.. ಅದನ್ನು ಅವನೇ ಒಪ್ಪಿಕೊಂಡಿದ್ದಾನೆ.

ಕನ್ನಡ ಲಿಪಿಯು ದೇವನಾಗರಿಯಿಂದ ಬಂದಿಲ್ಲ.. ಕನ್ನಡಕ್ಕೆ ಬ್ರಾಹ್ಮಿಲಿಪಿ ಮೂಲವಾದರೂ.. ಅದಕ್ಕೆ ತನ್ನದೇ ಆದ ಗುಣವಿಶೇಶಗಳಿವೆ.. ದೇವನಾಗರಿಗೂ ಮತ್ತು ಕನ್ನಡಲಿಪಿಗೂ ಒತ್ತಕ್ಕರದ ವ್ಯತ್ಯಾಸ ಗಮನಿಸಿರಿ..

ತೆಲುಗು ಲಿಪಿ ಹೞಗನ್ನಡ ಲಿಪಿಯ ಕವಲೆಂದು ಎಲ್ಲರೂ ಒಪ್ಪಿಯಾಗಿದೆ.

ಇನ್ನು ಕನ್ನಡದ ನೆರಳಿರುವ ನುಡಿಗಳು..

೧)ತಮಿಳು-
ಬಲು ಹಳೆಯ ತಮಿಳು ಜಯ್ನ ಶಾಸನಗಳಲ್ಲಿ ಕನ್ನಡ ಪದರೂಪಗಳು ಕಂಡುಬಂದಿದ್ದು.. ಜಯ್ನ ಮತ ಕನ್ನಡದಿಂದೇ ತಮಿಳು ನೆಲಕ್ಕೆ ಹಾಯಿದು ಎಂದು ತಮಿಳು ವಿದ್ವಾಂಸ ಮಹಾದೇವನೇ ಹೇಳಿದ್ದಾರೆ.

ತೋಲ್ಕಾಪ್ಕಿಯನ್, ತಿರುಕುರುಳು ಇವೆಲ್ಲ ಜಯ್ನ ಮಂದಿ ಬರೆದವು.

೨)ತುಳು - ತುಳು ನುಡಿಯಲ್ಲಿ ಕಂಡು ಬರುವ ಪಕಾರದ ಹಕಾರ ಬದಲಾವಣೆ ಕನ್ನಡದಿಂದಲೇ.. ಪಾಲು->ಹಾಲು

೩)ತೆಲುಗು - ಇದಕ್ಕೆ ಕನ್ನಡದ ಬರೀ ಲಿಪಿಯಶ್ಟೇ ಅಲ್ಲ ಪದಗಳು ಬೇಕಾದಶ್ಟು ಹೋಗಿವೆ.

೪)ಮರಾಟಿ - ಜ್ನಾನೇಶ್ವರರ ಪದ್ಯಗಳಲ್ಲಿ ಹೇರಳ ಕನ್ನಡಪದಗಳು ಬಳಕೆ ಇದೆ.

೫) ಸಂಸ್ಕೃತ - ಸಂಸ್ಕೃತ ನುಡಿಗೆ ವ್ಯಾಕರಣ ಬರೆದವರಲ್ಲಿ ಹಲವರು ಕನ್ನಡದ ಅರಸರು. ಗಂಗರ ದುರ್ವಿನಿತ ಮುಂತಾದವರು.. ಸಂಸ್ಕೃತಕ್ಕೆ ಕನ್ನಡದಿಂದ ಹೋದ ಹಲವು ಪದಗಳನ್ನು ಕಿಟ್ಟಲ್ಲರು ಗುರುತುಮಾಡಿದ್ದಾರೆ.

ಇದಲ್ಲದೇ ಮಳಯಾಳಂ, ಕೊಂಕಣಿ, ಮದ್ಯಪದ್ರೇಶದ ಹಲವು ಬುಡಕಟ್ಟು ನುಡಿಗಳಲ್ಲೂ ಕನ್ನಡದ ದಟ್ಟನೆರಳಿದೆ..

ಇನ್ನು

ಬ್ರಾಹಿ, ಮಾಲ್ಟೋ ಇವೆಲ್ಲ ದ್ರಾವಿಡ ಎಂಬ ಹೆಸರಿನ ನುಡಿ-ಗುಂಪಿಗೆ ಸೇರಿದ್ದರೂ ಅದು ತಮಿಳಿಂದ ಬಂದಿಲ್ಲ..

ಬ್ರಾಹಿ - ಬಡಗು-‌ದ್ರಾವಿಡ-ನುಡಿಗುಂಪಿಗೆ ಸೇರಿದೆ..
ತೆಲುಗು, ಗೊಂಡ .. ಮುಂತಾದವು ನಡು-ದ್ರಾವಿಡಕ್ಕೆ ಸೇರಿವೆ
ಕನ್ನಡ, ತೆಮಿಳು - ತಂಕು-ದ್ರಾವಿಡಕ್ಕೆ ಸೇರಿವೆ..

ಇಲ್ಲಿ ’ದ್ರಾವಿಡ’ ಅನ್ನೋ ಕ್ಯಾಡ್ವೆಲ್ ಮಹಾಶಯ ಮಾಡಿದ ತಪ್ಪು ಹಸರಿಕೆ.

ಕನ್ನಡಕ್ಕಿಂತ ತಮಿಳು ಹೊಸತು ಅನ್ನೋದಕ್ಕೆ ಅದರಲ್ಲಿ ಬಳಕೆಯಿರುವ ಚೆವಿ(ಕಿವಿ) ಮುಂತಾದ ಕಕಾರ ಚಕಾರವಾದ ಪದಗಳು ಸಾಕ್ಶಿ.

ಇನ್ನು ತಮಿಳು ೧೯ ದೇಶಗಳಲ್ಲಿ ಮಾತಾಡಿದ್ರೇ ಒಳ್ಳೇದು.. ಆದರೆ ಇಂಗ್ಲಿಶು ಬಲುಹೆಚ್ಚು ದೇಶಗಳಲ್ಲಿ ಇದೆ ಅಂತ ಅದನ್ನು ಯಾರೂ ಕ್ಲಾಸಿಕಲ್ ಅನ್ನಲ್ಲ..!!

ಇನ್ನು ರಾಜಕೀಯದ ಬಗ್ಗೆ ಮಾತುಗಳು.. ಅದನ್ನು ತಮಿಳರೇ ಉತ್ತರಿಸಬೇಕು.. ಇಶ್ಟು ದಿನ ಇಲ್ಲದ ಶಾಸ್ತ್ತೀಯತನದ ಬೇಡಿಕೆ ತಮಿಳಿಗೆ ಇದ್ದಕ್ಕಿದ್ದ ಹಾಗೆ ಹೇಗೆ ಕೇಂದ್ರದಲ್ಲಿ ಡಿ.ಎಂ.ಕೆ ಜಂಟಿ ಸರಕಾರವಿದ್ದಾಗಲೇ ಹೇಗೆ ಪೂರಯ್ಸಿಕೊಂಡಿತೋ ಎಂದು..

ಇನ್ನೊಂದು ತಮಿಳಿಗೆ ತನ್ನದೇ ಆದ ಅಂಕಿಗಳಿವೆಯೇ? :)

ಕನ್ನಡಕ್ಕಾದರೋ ಕನ್ನಡದ ಅಂಕಿಗಳು ಹೇಗೆ ಜಯ್ನ ಮೊದಲ ತೀರ್ತಂಕರ ರುಶಬದೇವ ಹುಟ್ಟಿಸಿದ ಎಂದು "ಕರ್ಣಾಟ ಸಿರಿಭೂವಲಯ"ದಲ್ಲೀ ಬಿಡಿಸಿ ಹೇಳಲಾಗಿದೆ..

Unknown ಅಂತಾರೆ...

thimmaya navare nimma uttara samanjasavagi ive, thumba vishaya thilisidiri, nimage namma bembala

Anonymous ಅಂತಾರೆ...

ನಿಮ್ಮ ಮಾಹ್ತಿಗೆ ತುಂಬಾ ಧನ್ಯವಾದ ಮಾಯ್ :)
--ವಿಜಯ

Anonymous ಅಂತಾರೆ...

ನ್ಯಾಯಧಿಪತಿ ಮಾರ್ಕೆಂಡೆ ಕಾಟ್ಜು ರವರು Indian Institute of Science October 13, 2009, “Sanskrit As A Language Of Science” ಭಾಷಣದಲ್ಲಿ ಸಂಸ್ಕೃತದಲ್ಲಿ ಶೇಕಡ 95 ಬಾಗ ವಿಜ್ಞಾನ, ಸಾಹಿತ್ಯ ಇತ್ಯಾದಿಗಳೂ ಹಾಗು ಶೇಕಡ 5 ಬಾಗಕ್ಕೂ ಕಮ್ಮಿ ಮಂತ್ರ ಇತ್ಯಾದಿಗಳು ಇವೆಯಂದು ಹೇಳಿದ್ದಾರೆ.
ಈ ಭಾಷಣದಲ್ಲಿ, ಭಾರತಕ್ಕೆ ವಲಸೆ ಬಂದ ಜನಾಂಗದ ವಿಷಯ, ಹಾಗೂ ಪಾಕಿಸ್ಥಾನದಲ್ಲಿ ಬ್ರಹುಯಿ (Brahui) ದ್ರಾವಿಡ ಭಾಷೆಯ ವಿಚಾರವೂ ಇದೆ. ಶ್ರೀ ಕಾಟ್ಜು ಅವರು, ಲೌಕಿಕ ಸಂಸ್ಕೃತವು ಭಾರತದ ಎಲ್ಲ ಭಾಷೆಯ ಜನರನ್ನು ಒಟ್ಟುಗೂಡಿಸಲು “ಶುದ್ಧಮಾಡಿದ” ಭಾಷೆ ಎಂದು ಹೇಳಿದ್ದಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails