ಮೊನ್ನೆಮೊನ್ನೆ ನೆರೆಯ ತೆಲುಗುನಾಡಲ್ಲಿ ಹುಟ್ಟಿಕೊಂಡ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಮುಂಬರುವ ಲೋಕಸಭಾ ಚುನಾವಣೇಲಿ ಕರ್ನಾಟಕದಿಂದಲೂ ಕಣಕ್ಕೆ ಇಳ್ಯುತ್ತಂತೆ. ಈ ಪಕ್ಷ ಕರ್ನಾಟಕದಲ್ಲಿ ಸ್ಪರ್ಧೆಗೆ ಇಳ್ಯಕ್ ಇರೋ ಕಾರಣಾ ಏನಪ್ಪಾ ಅಂದ್ರೆ "ಇಲ್ಲಿರೋ ತೆಲುಗರನ್ನು ಒಗ್ಗೂಡಿಸಿ, ಅವರನ್ನೆಲ್ಲಾ ಮತಶಕ್ತಿಯಾಗಿಸಿ, ಕನ್ನಡನಾಡಿನ ಲೋಕಸಭಾಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು" ಅನ್ನೋದಂತೆ. ಇಂಥಾ ಒಂದು ಸುದ್ದಿ 15.02.2009ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂಬತ್ತನೇ ಪುಟದಲ್ಲಿ ವರದಿಯಾಗಿದೆ ಗುರು!
ಅಲ್ಲಿನೋರಿಗೆ ಇಲ್ಲೇನು ಕೆಲಸ?
ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷವಾಗಿರೋ ಪ್ರಜಾರಾಜ್ಯಂ ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲೋಕೆ ಅವಕಾಶವೇನೋ ಇದೆ ಸರಿ. ಆದರೆ ಎರಡು ರಾಜ್ಯಗಳ ನಡುವೆ ಹಿಂದೆ ಇದ್ದ, ಈಗಿರುವ ಅಥವಾ ಮುಂದೆ ಹುಟ್ಟಿಕೊಳ್ಳಬಹುದಾದ ತಕರಾರುಗಳ ಬಗ್ಗೆ ಈ ಪಕ್ಷದ ನಿಲುವು ಏನಾಗಿದೆ? ನಮ್ಮ ನಾಡಿನ ಹಿತ ಕಾಪಾಡಬೇಕು ಅನ್ನೋದು ಇವರ ಆದ್ಯತೆ ಆಗಿರಲು ಸಾಧ್ಯಾನೇ? ಒಂದು ನಾಡಿನ ಪ್ರಾದೇಶಿಕ ಪಕ್ಷಕ್ಕೆ ಇನ್ನೊಂದು ನಾಡಿನ ಜನರ ಹಿತಕಾಯಬೇಕು ಅನ್ನೋ ಆದ್ಯತೆ ಇಲ್ಲದೆ ಇದ್ದಾಗ ಆ ಪಕ್ಷ ನಮ್ಮ ನಾಡಲ್ಲಿ ಬೇರೂರಲು ನಡೆಸೋ ಪ್ರಯತ್ನದ ಹಿಂದಿರೋ ಉದ್ದೇಶವೇನು? ಪ್ರಜಾರಾಜ್ಯಂ ಭಾಷಾ ಹಂಗಿಲ್ಲದೆ ಕರ್ನಾಟಕದ ಜನರ ಸೇವೆಗೆ ಮುಂದಾಗೋದಾಗಿದ್ರೆ ಬೇರೆ ಮಾತು. ಅವರು ಆಗ ಬೇರೆ ಬೇರೆ ಸಂಸ್ಥೆಗಳಿಂದ ಕರ್ನಾಟಕದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ತೆಲುಗರು ಎಷ್ಟಿದಾರೆ? ಗೆಲುವಿನ ಸಾಧ್ಯತೆ ಎಷ್ಟಿದೆ? ಅಂತ ಸಮೀಕ್ಷೆ ಮಾಡಕ್ ಮುಂದಾಗ್ತಿದ್ರಾ ಗುರು? ಇದನ್ನೆಲ್ಲಾ ನೋಡ್ತಿದ್ರೆ ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆ ನಮ್ಮ ನಾಡಿನ ಹಿತ ಕಾಪಾಡಲು ಎಷ್ಟೊಂದು ಅಗತ್ಯವಾಗಿದೆ ಅನ್ಸಲ್ವಾ ಗುರು?
10 ಅನಿಸಿಕೆಗಳು:
If prajarajyam can contest from Karnataka why can't any karnataka regional party contest from Andhra ?
Problem lies within Karnataka that there is no regional party which would take on the might of national parties and win. Second is that the national parties working for the benefit of the land like it has happened in Delhi (congress ) or in Gujrat ( BJP ). We have to participate & make the difference.
The comments should be published without hesitation. I Guess lots of comments are not getting in here. You might be discocuraging people from expressing their opinion.
oh now that chiranjeevi wants to enter karnataka.............
konegu teluguru buddi torisbitru...........
chatri alli chatri andre ivre.......... kongru munde inda hodidre ivru hinde inda chuuri haakuva chaalaak janaanga..........modalige bengalurinalli bandu angadi stapisi..... eega karnataka kke lagge haakuva........ prayatna......... che namma jana telugu tamil industry bagge volavu torisutare endare........... ee reethiya..... supoort madbardhu............
saaku chatri galige avakasha needa bardu............ ati ada volavu ..border side nallina janaralli nanna korike......neevu telugu films nodi nodi avranna beliyokke bittirodrinda......... avru nimma astitva vanne naasha maduthidare....... nimage adu tilidirali..........
eshtu tondregala madhyadalli cheranjivi bere na..........
should boycott all other language films first......and our people esp border side , y i am specifying is their attachment to movies has triggered this issue.......... karnataka dalli iruva kannadigaru endu onde........ dayamaadi aah ******* maklige jaaga kodabedi.........
andhrites are into everyting...... land mafia..... they hike land value and bring in their dad's money and invest in bang...... its happening from long time..... ex: most of BTM n HSR layout is occupied by them........they are the wierdest creatures in south india........ they play all mind games and tend to hurt us only.......... so naavu ecchetu kollale bekagidhe....... stop fantasising telugu movies....... its all crap..... no reality....... nothing...... just cold blooded murders and rivalry apart from that what;s their in those shit movies....... all crap....
Let's have a Kannadiga political party. Then can we think of floating these parties in Andhra, Tamil Nadu, Delhi, Bihar, Rajasthan, Gujarat etc.,
Rajeev - Dayavittu, intaha janarannu dooravidona, koodi banni!
This party will increase the identity crisis for Kannadigas in Karnataka.
ಗೋ೦ಗೂರ, ಆವುಗಾಯಿ ತಿ೦ದು ತೆಲುಗು ಹಾಡುಗಳಿಗೆ ಕುಣಿಯಲು ಸಿದ್ಧರಾಗಿ. ಈಗ ತೆಲುಗರು ಕನ್ನಡಿಗರು ಒ೦ದೇ ಅನ್ನೋ ಒ೦ದು ಹೊಸಾ ರೀತಿ ಪ್ರಾಚಾರ ಶುರುವಾಗತ್ತೆ. - They are just not coming here but are bringing their legacies.
ಮೊದಲನೆಯದಾಗಿ..... ಪ್ರಜಾರಾಜ್ಯಂ ಪಕ್ಷ ಮೂಡಿದ್ದು ನಮ್ಮ ದೇಶದ ರಾಜಕಾರಣದಲ್ಲೇ ದೊಡ್ಡ ವಿಷಯ. ಆಂಧ್ರದಂತಹ ದೊಡ್ಡ ರಾಜ್ಯವನ್ನು ಒಂದು ಹಿಂದಿನಾಡಿನ ಪಕ್ಷವಾದ ಕಾಂಗ್ರೆಸ್ ಆಳ್ತಾ ಇದೆ. ತೆಲುಗು ದೇಶಂ ಎದುರು ಇನ್ನೊಂದು ಪ್ರಾಂತೀಯ ಪಕ್ಷವಿಲ್ಲ. ತೆಲಂಗಾಣ ಪಕ್ಷ ಇಡೀ ಆಂಧ್ರದ ಮೇಲೆ ಪ್ರಭಾವ ಬೀರಲಾರದು. ಈ ದೃಷ್ಟಿಕೋನದಲ್ಲಿ ನೋಡಿದರೆ, ಚಿರಂಜೀವಿಯವರ ಪಕ್ಷ ಕಾಂಗ್ರೆಸ್ಸಿನ ವೋಟು ಕೀಳುವುದು ಮತ್ತು ಆಂಧ್ರದಲ್ಲಿ ಪ್ರಾಂತೀಯವಾದಕ್ಕೆ ಒತ್ತುಕೊಡುವುದು. ಆದುದರಿಂದ ಅದೊಂದು ವಿವಿಧತೆಯ ರಕ್ಷಣೆಗೆ ಒಳ್ಳೆಯ ಬೆಳವಣಿಗೆ. ಇಂತಹ ಪ್ರಾಂತೀಯ ಪಕ್ಷಗಳು ತಮಿಳುನಾಡಂತೆ, ಮಹಾರಾಷ್ಟ್ರ, ಆಂಧ್ರ, ಮುಂತಾದ ಕಡೆ ಮೂಡುತ್ತಿರುವುದು ಸಕ್ಕತ್ ಒಳ್ಳೇದು.
ಎರಡನೆಯದು ಈ ಸುದ್ದಿ ನೋಡಿ
ಒಂದು ವೇಳೆ ಜಾಜದ ಮತ್ತು ಪ್ರರಾ ಕೈಸೇರಿಸಿದರೆ, ಅದೂ ಕೂಡ ಒಳ್ಳೆಯ ಬೆಳವಣಿಗೆ. ಏಕೆಂದರೆ ಇಂದು ಭಾಜಪಕ್ಕೆ ರೆಡ್ಡಿಗಳವರಿಂದ ತೆಲುಗು ವೋಟುಗಳು ಧಾರಾಳವಾಗಿ ಸಿಕ್ಕುತ್ತಿವೆ. ಆದರೆ ಭಾಜಪ ಕಾಂಗ್ರೆಸ್ ಹಾಗೆ ಹಿಂದಿನಾಡಿನ ಪಕ್ಷ.
ಮೂರನೆಯದಾಗಿ ಪ್ರಜಾರಾಜ್ಯಂ ಕರ್ನಾಟಕದಲ್ಲಿ ಎಲೆಕ್ಷನ್ ಪೋಟಿಗೆ ನಿಂತರೆ ಅದರಿಂದ ನಮ್ಮ ಪ್ರಾಂತೀಯ ಪಕ್ಷಗಳಿಗೆ ಕುತ್ತು ಕಡಮೆ. ಅದು ಏನಿದ್ದರು ಭಾಜಪದ ಮತಗಳನ್ನು ಕೀಳಬಹುದು.
ಬಸಪ, ಸಪಗಳು ಕರ್ನಾಟಕದಲ್ಲಿ ಎಲೆಕ್ಷನ್ಗೆ ನಿಲ್ಲಬಹುದಾದರೆ ಪ್ರರಾ ಯಾಕೆ ನಿಲ್ಲಬಾರದು. ಅವರೂ ನಿಲ್ಲಲಿ ಅದು ಅವರ ಸಾಂವಿಧಾನಿಕ ಹಕ್ಕು. ಇವಕ್ಕೆ ಉತ್ತರವಾಗಿ ಕನ್ನಡಿಗರು ಒಂದು ಗಟ್ಟಿ ಪಕ್ಷ ಕಟ್ಟಿ ಎದುರಿಸಬೇಕೇ ಹೊರತು, ಅವರಿಗೆ ಇಲ್ಲೇನು ಕೆಲಸ ಎಂದು ಹರಟೆ ಹೊಡೆದರೆ ಏನೂ ಬಾಳಿಕೆ ಇಲ್ಲ. ಅವರು ಕೆಲಸವಿಲ್ಲದೇ ಇಲ್ಲಿಗೆ ಬರುವರೇ? :) :D
ಇಷ್ಟಾಗಿಯೂ ಕರ್ನಾಟಕದಲ್ಲಿ ಒಂದೂ ನೆಟ್ಟಗಿನ ಪ್ರಾಂತೀಯ ಪಕ್ಷವಿಲ್ಲ. ಇದೊಂದು ದೊಡ್ಡ ಕೊರತೆ. ಸದ್ಯ ಜಾಜದ ಪ್ರಾಂತೀಯ ಪಕ್ಷವೆಂದು ಹೇಳಿಕೊಂಡರೂ ಅದು ಹಾಗಿಲ್ಲ. ಇದಕ್ಕೆ ಕಾರಣ ತೆಲುಗರು, ತಮಿಳರು ಮತ್ತೊಬ್ಬರು ಅಲ್ಲ. ಅದು ನಾವು ಕನ್ನಡಿಗರೇ.!
ನಮ್ಮ ಕರ್ನಾಟಕದಲ್ಲಿರುವ ಎಲ್ಲಾ ಪಕ್ಷಗಳಿಗಿಂತ ಪ್ರರಾ ಒಂದು ರಾಷ್ಟ್ರೀಯ ಪಕ್ಷವಾಗುವುದಾದರೆ ಅದಕ್ಕೆ ನಾವು ಬೆಂಬಲ ನೀಡಲೇ ಬೇಕು. ತೆಂಕಣ ಇಂಡಿಯದಿಂದ ಒಂದೂ ರಾಷ್ಟ್ರೀಯ ಪಕ್ಷವಿಲ್ಲ. ಹಿಂದಿಯವರಿಗಿಂತ ತೆಲಗರಿಗೆ ನಮ್ಮ ಮೇಲೆ ತುಸುವಾದರೂ ಅಕ್ಕರೆ, ನಂಟು, ಅವಶ್ಯಕತೆ, ಹತ್ತಿರತನವಿದೆ. ಅಲ್ವಾ!
ಪ್ರಜಾರಾಜ್ಯಂ ಕರ್ನಾಟಕಕ್ಕೆ ಬಂದರೂ ಅದು ಪ್ರಬಲವಾಗಬೇಕಾದರೆ ಅದು ಕನ್ನಡಿಗರನ್ನು ಓಲೈಸಲೇಬೇಕು.! ಇಲ್ಲದೇ ಹೋದರೆ ಅದಕ್ಕೂ ಹೆಚ್ಚಿನ ಕಾಲ ಕನ್ನಡ ನೆಲದಲ್ಲಿ ಉಳಿಗಾಲವಿಲ್ಲ.
maaysa avaru sari barediddare. Prajarajya irali or saayali .. kannada pranteeya paksha beku .. adillade naavu samvidhanatmakvaagi bere paksha gaLanna oDisakkaagalla .. allade praja raajya hodare innodyavudo "dongarajya" anta paksha baruvudu guarantee ..
"ದೊಂಗರಾಜ್ಯ"(ಕಳ್ಳರಾಜ್ಯ) ಪದ ಪ್ರಯೋಗ :) ನಗು ಬರಿಸಿತು.!
praja rajya da main spot bandu namma kolar jille. kolar ge hodre navu karnataka dalli idiva antha doubt baruthe. alli chiranjeevi goskara prana bekadru kodthare. interesting vishaya andre andhra dalli kuda chiranjeevi ge istu craze illa. idu namma durasthiti.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!