ಲಾಲೂ - ನೀವು "ಭಾರತದ" ರೇಲ್ವೇ ಮಂತ್ರಿ ತಾನೆ?

ಇಂದು (ಫೆಬ್ರವರಿ ೧೩) ೨೦೦೯-೧೦ರ ಮಧ್ಯಂತರ ರೇಲ್ವೇ ಬಜೆಟ್ (ಲೇಖಾನುದಾನ) ಮಂಡಣೆಯಾಯ್ತು. ನಾಲ್ಕು ತಿಂಗಳ ಕಾಲಕ್ಕೆ ಮಂಡಿಸಿರುವ ಈ ಬಜೆಟ್ ಕೂಡ ಅಂದ್ಕೊಂಡ ಹಾಗೇ ಕನ್ನಡಿಗರ ಅವಶ್ಯಕತೆಗಳ ಮೇಲೆ ನೀರು ಹುಯ್ದಿದೆ. ಇದು ಹೀಗೇ ಆಗಬಹುದು ಎಂದು ಎಣಿಸಿಯೋ ಏನೋ, ಬಜೆಟ್ ಮುನ್ನ ಮುಖ್ಯಮಂತ್ರಿ ಯೆಡ್ಡ್ಯೂರಪ್ಪನವರು ಕೇಂದ್ರ ರೇಲ್ವೆ ಮಂತ್ರಾಲಯಕ್ಕೆ ನಮ್ಮನ್ನ ಮರೆತುಬಿಡಬೇಡಿ ಅನ್ನೋ ಹಾಗೆ ಪತ್ರ ಬರೆದಿರೋದೂ ವರದಿಯಾಗಿದೆ! ಇಷ್ಟೆಲ್ಲಾ ಬೇಡಿಕೆಗಳ ನಡುವೆ ಕಳೆದ ಅರವತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಆಗಿರೋದು ಮಾತ್ರ ಘೋರ ಅನ್ಯಾಯ. ಇಂತ ಅನ್ಯಾಯಗಳ ಮತ್ತಷ್ಟು ಅಂಕಿ-ಅಂಶಗಳು ಇಲ್ಲಿ ಕಾಣಬಹುದು.


ಇದು ಹೊಸ ರೈಲೇನಲ್ಲ!

ರೇಲ್ವೇ ವಿಚಾರದಲ್ಲಿ ಕೇಂದ್ರದ ತಾರತಮ್ಯದ ನೋಟ ವ್ಯಕ್ತವಾಗ್ತಿರೋದು ಇದೇ ಮೊದಲನೇ ಬಜೆಟ್ಟೇನಲ್ಲ. ಪ್ರತಿ-ವರ್ಷವೂ ಒಂದು ರಾಜ್ಯಕ್ಕೆ ಬೆಣ್ಣೆ, ಒಂದು ರಾಜ್ಯಕ್ಕೆ ಸುಣ್ಣ ಮಾಡುವ ಬಜೆಟ್ಟುಗಳೇ ಮಂಡಣೆಯಾಗ್ತಾ ಬಂದಿವೆ. ಇವುಗಳಲ್ಲಿ ಸುಣ್ಣ ಉಂಡಿರೋರು ಪ್ರತಿ ಬಾರಿ ನಾವೇ ಗುರು! ಪ್ರತಿ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಸಿಗುತ್ತಾ ಬಂದಿರುವ ರೈಲು ಯೋಜನೆಗಳು ಇತರ ರಾಜ್ಯಗಳೆದುರು ಉಗುರಿನ ಲೆಕ್ಕಕ್ಕೂ ನಿಲ್ಲಲ್ಲ! ದೇಶದಲ್ಲೇ ಅತಿ ಕಡಿಮೆ, ಅದ್ಯಾಕೆ ಝಾರ್ಕಂಡ್ ರಾಜ್ಯಕ್ಕಿಂತ್ಲೂ ಕಡಿಮೆ ವಿದ್ಯುತ್ ರೈಲು ಮಾರ್ಗ ಹೊಂದಿರುವ ಹಣೇಬರಹ ಕನ್ನಡಿಗರದ್ದೇ ಗುರು! ಪ್ರತಿ ಬಜೆಟ್ಟಿನ ನಂತರ ಕರ್ನಾಟಕಕ್ಕೆ ಅಷ್ಟು ರೈಲು ಕೊಟ್ವಿ, ಇಷ್ಟು ರೈಲು ಹಾಕಿದೀವಿ ಅಂತ ಹೇಳಿದರೂ ಈ ರೈಲುಗಳಿಂದ ಕರ್ನಾಟಕದೊಳ್ಗೆ ಓಡಾಡಕ್ಕಿಂತ ಹೊರ-ರಾಜ್ಯದೋರು ಕರ್ನಾಟಕದೊಳ್ಗೆ ವಲಸೆಯಾಗಕ್ಕೇ ಮಾಡಿರೋದು ಗೊತ್ತಾಗತ್ತೆ! ಕಳೆದ ೬೦ ವರ್ಷಗಳಲ್ಲಿ ಕೊಡಗಿನಲ್ಲಿ ರೈಲು ಮಾರ್ಗ ಇರ್ಲಿ, ರೈಲಿನ ಒಂದು ಹಳಿಯನ್ನೂ ಹಾಕದೇ ಇರೋದು ನೋಡಿದ್ರೇ ಗೊತ್ತಾಗಲ್ವ ಗುರು, ಇದರ ಬಂಡ್ವಾಳ ಏನೂಂತ?


ಇದಕ್ಕೇನು ಮದ್ದು?

ರೇಲ್ವೇ ಮಂತ್ರಾಲಯದಿಂದ ಕರ್ನಾಟಕಕ್ಕೆ ಈ ಬಾರಿ ಇಂತಿಷ್ಟು ಬೇಡಿಕೆಗಳಿವೆ, ಇವನ್ನು ಪೂರೈಸಿ ಅಂತ ಬಜೆಟ್ ಮುನ್ನ ಒಂದು ಪತ್ರ ಬರೆದು ಹಾಕಿದರೆ ಸಾಕಾ? ಈ ಬೇಡಿಕೆಗಳನ್ನ ಗಿಟ್ಟಿಸಿಕೊಳ್ಳಕ್ಕೆ ಅವಶ್ಯವಾದ ರಾಜಕೀಯ ಒತ್ತಡಗಳ್ನ ಹೇರೋದೋ ಅಥವಾ ಇತರ ತಂತ್ರಗಾರಿಕೆ ಮಾಡೋದು ಬೇಡ್ವಾ? ಕನ್ನಡಿಗರನ್ನ ಪ್ರತಿನಿಧಿಸಕ್ಕೆ ಅಂತ ದಿಲ್ಲಿಗೆ ಹೋಗಿ ಹೈಕಮಾಂಡುಗಳಿಗೆ ಕಿವಿಯಾಲಿಸಿ ರಾಜ್ಯದ ಪರವಾಗಿ ಒಂದೇ-ಒಂದು ಪ್ರಶ್ನೆಯನ್ನೂ ಕೇಳದೇ ಗೊಂಬೆಗಳಾಗಿ ಕೂತರೆ ಅರವತ್ತಲ್ಲ, ಸಾವಿರ ವರ್ಷ ಕಳೆದರೂ ಕರ್ನಾಟಕಕ್ಕೆ ಸಿಗೋದು ರೈಲಲ್ಲ, ಮುಖ್ಯಮಂತ್ರಿಗಳು ಕಳುಸಿದ ಪತ್ರಗಳಿಗೆ ತಲುಪೊಪ್ಪಿಗೆ (ತಲುಪು + ಒಪ್ಪಿಗೆ), ಅಷ್ಟೆ ಗುರು!

ಕೊನೆ ಹನಿ: ಇಂತಹ ಅನ್ಯಾಯ ನಮಗೆ ರೇಲ್ವೇ ವಿಚಾರದಲ್ಲಿ ಮಾತ್ರ ಆಗ್ತಿದೆ ಅಂತ ಅನ್ಕೊಂಡ್ರೆ ಅದಕ್ಕಿಂತ ದೊಡ್ಡ ತಪ್ಪಿನ್ನೊಂದಿಲ್ಲ. ಈ ರಾಜ್ಯಗಳ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಪ್ರತಿಯೊಂದು ಹೆಜ್ಜೆಯಲ್ಲೂ ತಾರತಮ್ಯ ಆಗ್ತಿದೆ ಅಂತ ಅರಿತು ಇವುಗಳಿಗೆ ಪರಿಹಾರ ಏನು ಅಂತ ಚಿಂತನೆ ಮಾಡುವ ಕಾಲ ಬಂದಿದೆ ಅನ್ಸಲ್ವ ಗುರು?

9 ಅನಿಸಿಕೆಗಳು:

Anonymous ಅಂತಾರೆ...

ಈ ಬೇಡಿಕೆಗಳನ್ನ ಗಿಟ್ಟಿಸಿಕೊಳ್ಳಕ್ಕೆ ಅವಶ್ಯವಾದ ರಾಜಕೀಯ ಒತ್ತಡಗಳ್ನ ಹೇರೋದೋ... ರಾಜಕೀಯ ಇಚ್ಚಾಶಕ್ತಿ ಇದನ್ನೆಲ್ಲಾ ಸಾದಿಸುವುದಿಲ್ಲ ಬಿಡಿ. ಪ್ರತಿಯೊಬ್ಬ ಕನ್ನಡಿಗನಿಗೂ ಈ ವಿಚಾರ ಸರಿಯಾದ ರೀತಿಯಲ್ಲಿ ಮುಟ್ಟಿದರೆ ಅವನು ಹೋರಾಟ ಮಾಡಲು ಸಿದ್ದನಾಗುತ್ತಾನೆ.
ಹೋರಾಟ ಮಾಡದೆ ಕರ್ನಾಟಕಕ್ಕೆ ಸ್ವಾತ೦ತ್ರ್ಯ ಸಿಗಕ್ಕೆ ನಮ್ಮಲ್ಲಿ ಇನ್ನೂ ಗಾ೦ದಿ ಹುಟ್ಟಿಲ್ಲ. ಬಹುಷಯ, ಬಗತ್ ಸಿ೦ಗ್, ರಾಜ್ ಗುರು, ಸುಬಾಶ್ ಚ೦ದ್ರ ಬೋಸ್ ಕ೦ಡ ಕನಸಿನ ಬಾರತ ನಮ್ಮದಾಗಲಿಲ್ಲ.

Mahesh...... ಅಂತಾರೆ...

hiii,, wat u have mentioned is 100% correct guru,, but if we share ideas only in net or mails like this means nothing will happen,, we should come out, and protestttt. These our luchcha MP,s will not do anythingggg.

Mahesh...... ಅಂತಾರೆ...

hiii,,, wat u have said is 100% correct guru.. but if we go on exposing or sharing the issues only through net or mails like this means nothing is going to happen.. At present there is a need of youngsters to come out and protestt..Becuase our luchchaa MP.s will not do anything......

Anonymous ಅಂತಾರೆ...

ಇದಕ್ಕೆ ಬೇಕಾದ ಪ್ರಮುಖ ಮದ್ಧು ನಮದೇ ಆದ ದೇಷಕ್ಕೆ (ಕನ್ನಡ ದೇಷ) ಹೋರಾಡೋದು! ಈಗಿನ "ಭಾರತ" ಅನ್ನೋ ದೇಷದಲ್ಲಿ ಬರೀ ನಮಗೆ ಯಾವ ರೀತಿಯ ನ್ಯಾಯವೂ ಸಿಗುತ್ತಿಲ್ಲ ಅಂತ ಮತ್ತೆ ಮತ್ತೆ ಎತ್ತಿ ತೋರಿಸುತ್ತಿರೋ ನಿಮಗೆ ಧನ್ಯವಾದಗಳು! ಹೀಗೆ ಯಾವುದರಲ್ಲೂ ನ್ಯಾಯವಿಲ್ಲ ಅನ್ನೋ ಹಾಗಿದ್ರೆ ನಮದೇ ದೇಷಕ್ಕಾಗಿ ಯಾಕೆ ಹೋರಾಟ ಮಾಡಬಾರದು? ಭಾರತ ಅನ್ನೋ ದೇಷವನ್ನ (ಧ್ವೇಷವನ್ನು) ೪೦-೫೦ ಚಿಕ್ಕ ಚಿಕ್ಕ ದೇಷಗಳಾಗಿ ಕತ್ತರಿಸಬೇಕು/ವಿಂಗಡಿಸಬೇಕು ಆಗಲೇ ಈ ಸಮಸ್ಯೆಗಳಿಗೆಲ್ಲಾ ಪಕ್ಕಾ ಪರಿಹಾರ, probably thats what she deserves! ಆಗ ಯಾವ ಹೇರಿಕೆಯೂ ಇರೋಲ್ಲ, ಯಾರ ಹಂಗೂ ಇರೋಲ್ಲ!!

ಪ್ರೀತಿಯ,
ಕನ್ನಡದವ (ಭಾರತೀಯ)

Anonymous ಅಂತಾರೆ...

The problem with our state has been not in a position to bring the right amount of pressure on the central govt
They care a damn about all our requests
The reason is we(our ruling parites in state) do not command a stake in central govt.
Most of the time the govt's in our state and center has been different parties and that leads to the kind of injustice we are seeing
Every political party is as good & bad as it can be, We all need to think and vote so that we try and bring in a same govt at the center also
I am not canvassing for BJP here, but look back ffrom the last 8-10 years
When BJP/NDA was ruling we had SM Krishna (Cong) ruling out state, though he was one of the best we could see nothing major did not happen in terms of infrastructure building. After that though UPA/congress came into poweer at the center in our state our folks cong-jds-bjp has been fighting for the power and they never looked at the real issues
Look at AP & TN, whatever they have been fighting they somehow along with central govt and ensure their state gets a good share of developmental projects
In AP when TDP was in power they aligned with NDA/BJP and now anyway cong is in power its not a big issue for them to get what they want
In TN when Jayalalitha was in power she got aligned with BDA/NJP and that helped them and not DMK folks have got aligned with UPA/cong and they are ensuring the steady flow of money from center to those states

As common man though we do not have much control on these things we should use our judgements to a great extent and vote in MP/MLA elections accordingly
Now that BJP govt will be in our state for another four four plus years, bring BJP to power at center should reduce some amount of step motherly treatment

Anonymous ಅಂತಾರೆ...

Yediyurappa should take this as an election agenda and fight for more rails and railway tracks for Karnataka.

Mysore cheddi ಅಂತಾರೆ...

ಲಾಲುಗೆ ಐದು ವರುಷಗಳಾದರೂ ಬುದ್ಧಿ ಬರಲಿಲ್ಲ! ನೀವದನ್ನು ಚೆನ್ನಾಗಿ ಗುರುತಿಸಿದ್ದೀರಿ! ಭಲೆ ಏನ್ ಗುರು!

Anonymous ಅಂತಾರೆ...

ನನಗೆ ಅನಿಸುತ್ತೆ, ಕಳೆದ ಬಾರಿ ಕ. ರ. ವೆ ಅವರು ನಡಸಿದ್ದ ರೈಲ್ವೆ ಹೋರಾಟದ ದ್ವೇಷವನ್ನು ಲಾಲು ನೆನಪಿನಲ್ಲಿ ಇಟ್ಟುಕೊಂಡು ಈ budget ನ್ನ ಹೊರಡಿಸಿದ್ದಾರೆ. ಬೇರೆ ರಾಜ್ಯದಿಂದ ಜನಗಳನ್ನು ಒತ್ಹು ತರುವ ಕೆಲಸಾನೇ ಮಾಡಿದ್ದರೆ.

Anonymous ಅಂತಾರೆ...

Kannadigare,

Kelasa bekandare illi sikkabhudu noDi, register maadiKolli:

http://www.employment.tn.gov.in/

konga naadinalli iralu ok iddare MNC kelsa sikkabahudu ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails