
ಇನ್ಮುಂದೆ ಟಾಮ್ ಅಂಡ್ ಜೆರ್ರಿ ಚೆಲ್ಲಾಟ ಕನ್ನಡದಲ್ಲೇ!
ಹೌದೂ ಗುರು! ಇನ್ಮುಂದೆ ಟಾಮ್ ಮತ್ತು ಜೆರ್ರಿಗಳ ಚಿನ್ನಾಟವಿರಲೀ, ಸೂಪರ್ ಮ್ಯಾನಿನ ಹಾರಾಟವಿರಲೀ, ಸ್ಪೈಡರ್ ಮ್ಯಾನಿನ ತೂಗಾಟವಿರಲೀ ಎಲ್ಲಾನೂ ಕನ್ನಡದಲ್ಲಿ ನೋಡಬೌದು. ಡೊರಾ, ಪೋಕಿಮಾನ್, ಗಾಡ್ಜೀಲ್ಲಾ, ಪವರ್ ಪಫ್ ಗರ್ಲ್ಸ ಅನ್ನೋ ಕಾರ್ಟುನ್ಗಳು ಕನ್ನಡ ಮಾತನಾಡುತ್ತೆ. ಯಾಕಂದ್ರೆ ಚಿಂಟು ಟಿ.ವಿ. ಸಂಪೂರ್ಣ ಕನ್ನಡವಾಹಿನಿ. ಇದುವರೆಗೂ ಕಾರ್ಟೂನುಗಳ ನಿಜವಾದ ಸವಿಯನ್ನು ಸಂಪೂರ್ಣವಾಗಿ ಸವಿಯಕ್ಕೆ ತೊಡಕಾಗಿದ್ದ ’ಕನ್ನಡದಲ್ಲಿಲ್ಲ, ಅದಕ್ಕೇ ಪೂರ್ತಿ ಅರ್ಥವಾಗ್ತಿಲ್ಲಾ’ ಅನ್ನೋ ಕೊರತೆ ಇನ್ಮುಂದೆ ಇದರಿಂದಾಗಿ ಅಳಿಯುತ್ತೆ. "ಕನ್ನಡಿಗರೂ ಉನ್ನತ ಗುಣಮಟ್ಟದ ವಿಶ್ವದರ್ಜೆಯ ಕಾರ್ಟೂನುಗಳನ್ನು ಸೃಷ್ಟಿಸೋ ಅನಿಮೇಷನ್ ತಂತ್ರಜ್ಞಾನದಲ್ಲಿ ಪರಿಣಿತಿ ಸಾಧಿಸಬೇಕು" ಅನ್ನೋ ಮಾತಿನ ಜೊತೆಯಲ್ಲೇ ಕನ್ನಡಿಗರ ಮನರಂಜನೇನಾ ಕನ್ನಡದಲ್ಲೇ ಪಡ್ಯೋದು ನಮ್ಮ ಮೂಲಭೂತ ಹಕ್ಕು ಅನ್ನೋದನ್ನೂ ಈ ವಾಹಿನಿ ಸಾರುತ್ತಾ ಇದೆ ಗುರು!
9 ಅನಿಸಿಕೆಗಳು:
ತಮಿಳುನಾಡಿನಲ್ಲಿ ತಮಿಳು ಮಕ್ಕಳಿಗೆ ಅಂತಲೇ ಶುರುವಾದ ಚುಟ್ಟಿ ಟಿವಿಯ ದೊಡ್ಡ ಯಶಸ್ಸು ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಕಾರ್ಯಕ್ರಮ ಕೊಡೊದು ಯಶಸ್ವಿಯಾಗೋಕೆ ಎಷ್ಟು ಮುಖ್ಯ ಅನ್ನೋದನ್ನ ಸಾಬೀತು ಮಾಡಿದೆ..Welcome to Karnataka, Chintu TV
ಇವತ್ತಿನ ದಿನ ಮಕ್ಕಳಿಗೆ ಕಾರ್ಟೂನ್ ಟಿವಿ ಕೊಡೋ ಮಜಾ ಬೇರೇ ಏನೂ ಕೊಡೊಲ್ಲ. ಹೀಗಾಗಿ ಮನೆ ಮನೆಯಲ್ಲೂ ಕಾರ್ಟೂನ್ ನೆಟವರ್ಕ್,ಪೊಗೊ ಮುಂತಾದ ವಾಹಿನಿಗಳನ್ನು ನೋಡದ ಮಕ್ಕಳೇ ಇಲ್ಲ ಅಂದರೆ ತಪ್ಪಿಲ್ಲ. ಇಲ್ಲಿ ಗಮನಿಸಬೇಕಾದ ಒಂದಂಶವೆನೆಂದರೆ ಬೇರೆ ಎಲ್ಲ ರಾಜ್ಯದಲ್ಲೂ ಈ ವಾಹಿನಿಗಳು ಆಯಾ ರಾಜ್ಯದ ಭಾಷೆಯಲ್ಲಿ ತನ್ನ ಕಾರ್ಯಕ್ರಮವನ್ನು ಬಿತ್ತರಿಸಿದರೆ, ನಮ್ಮ ರಾಜ್ಯದಲ್ಲಿ ಮಾತ್ರ ಹಿಂದಿಯಲ್ಲಿ ಬಿತ್ತರಿಸುತ್ತವೆ. ಈ ರೀತಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಹಿಂದಿ ಹೇರುವ ಕೆಟ್ಟ ಕೆಲಸ ಈ ವಾಹಿನಿಗಳಿಂದಾಗುತಿತ್ತು. ಇದನ್ನ ತಡೆದು ಮಕ್ಕಳಿಗರ್ಥವಾಗೋ ಕನ್ನಡದಲ್ಲೇ ಮಕ್ಕಳಿಗೆ ಬೇಕಾದ ಮನರಂಜನೆ ಕೊಡೊ ಚಿಂಟು ಟಿವಿಯ ಪ್ರಯತ್ ನಿಜಕ್ಕೂ ಒಳ್ಳೆ ಬೆಳವಣಿಗೆ..
ಈಗಾಗಲೇ ಬರುವಂತಹ ಒಳ್ಳೆಯ ಕಾರ್ಯಕ್ರಮಗಳ ಜೊತೆಗೆ ಈ ವಾಹಿನಿಯಲ್ಲಿ ನಾವು ಚಿಕ್ಕಂದಿನಲ್ಲಿ ಕೇಳಿದ "ನಾಯಿ ನಾಯಿ ಮರಿ ತಿಂಡಿ ಬೇಕೆ?" "ರೊಟ್ಟಿ ಅಂಗಡಿ ಕಿಟ್ಟಪ್ಪ", "ಆನೆ ಬಂತೊಂದಾನೆ" ಮುಂತಾದ ಅನೇಕ ಪದ್ಯಗಳು ಮಕ್ಕಳ ಮನರಂಜಿಸುವ ಎನಿಮೇಟೆಡ್ ರೂಪದಲ್ಲಿ ಬರಬೇಕು. ಮಕ್ಕಳ ಪ್ರತಿಭೆ ಪರೀಕ್ಷಿಸುವ, ಮಕ್ಕಳ ಬುದ್ಧಿ ಬೆಳವಣಿಗೆಗೆ ಒತ್ತು ಕೊಡುವಂತಹ ಹಲವು ಕಾರ್ಯಕ್ರಮಗಳು ಶುರುವಾಗಬೇಕು.ಇಷ್ಟಾದರೆ ಚಿಂಟೂ ಜೊತೆ ನಮ್ಮ ಮಕ್ಕಳ ನಂಟು ಬೆಳೆಯೋದ್ರಲ್ಲಿ ಅನುಮಾನಾನೇ ಇಲ್ಲ.
ಟಾಟಾ ಸ್ಕೈ ಅಲ್ಲಿ, 'ಚಿಂಟು' ಟಿ ವಿ ಹಾಗು ಉಷೆ ಟಿ ವಿ ಗಳನ್ನ ಇನ್ನು ಪ್ರಸಾರ ಮಾಡ್ತಾ ಇಲ್ಲ . ಇದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ. ಇವುಗಳನ್ನ ನಾವು ಟಾಟಾ ಸ್ಕೈ ಗೆ ರಿಕ್ವೆಸ್ಟ್ ಮಾಡಿ ಹಾಕಿಸಬೇಕು.
ಚಿಂಟು ಟಿ ವಿ ಗೆ ಸ್ವಾಗತ
ಚಂದ್ರು ಅವರೆ,
ನೀವು ಟಾಟಾ ಸ್ಕೈ ಗೆ ಕರೆ ಮಾಡಿ ನಿಮಗೆ ಉಷೆ ಟಿವಿ ಮತ್ತು ಚಿಂಟು ಟಿವಿ ಪ್ರಸಾರ ಮಾಡಲು ಕೇಳಿ... ಎಲ್ಲಾ ಗ್ರಾಹಕರು ಕೇಳಿದ್ರೆ ತಾನಾಗೇ ಪ್ರಸಾರ ಮಾಡ್ತಾರೆ :)
ಚಿ೦ಟು ಟಿವಿ ಇ೦ದ ನಮ್ಮ ಪ್ರೇಕ್ಷಕರು ಕಡಿಮೆ ಆಗಿದ್ದಾರೆ ಅ೦ದ್ರೂ ಅ೦ತಾರೆ ನಮ್ಮ ಸಿನಿಮಾದವರು. :)
ಚಿತ್ರ ರ೦ಗದವರಿಗೆ ಇ೦ಗ್ಲೀಷಿನಿ೦ದ ಕನ್ನಡಕ್ಕೆ ಡಬ್ಭಿ೦ಗ್ ಮಾಡ್ತಿದಾರಲ್ಲಾ, ಇದು ಒಕೆ ನಾ ?
ಚಿತ್ರ ರ೦ಗದವರು ಕನ್ನಡ ಭಾಷೆ ತಮ್ಮ ಸ್ವತ್ತು ಅನ್ಕೊ೦ಡು ಕುಳಿತಿದ್ದಾರೆ. ಇದು ಯಾರಪ್ಪನ ಮನೆಯ ಆಸ್ತಿಯೇನಲ್ಲ. ಕನ್ನಡದಲ್ಲಿ ಡಬ್ಬಿ೦ಗ್ ಬರತ್ತೆ, ಬ೦ದೇ ಬರತ್ತೆ. ಇದನ್ನು ತಡೆಯೋ ಯಾರೇ ಆಗಿದ್ರು ಅವರು ನಾಡು ನುಡಿಯ ಅಳಿವಿಗೆ ಕಾರಣರು.
ವಸ್ತು ಸ್ಥಿತಿ ನೋಡಿದರೆ ನಮ್ಮಲ್ಲಿ ಆ ಗುಣಮಟ್ಟದ ಕಾರ್ಟೂನ್ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಆ ಕಾರ್ಟೂನ್ ನಮಗೆ ಬೇಕೇ ಬೇಕಾಗುತ್ತವೆ. ಇಂತಹ ಕಾರ್ಟೂನಗಳನ್ನು ಮಕ್ಕಳು ನೊಡುವಾಗ ಎಲ್ಲೊ ಒಂದು ಕಡೆ ತಾನೂ ಇಂಗ್ಲೀಷ್ ಕಲಿಯಬೇಕಿತ್ತು ಅನ್ನೊ ವಿಚಾರಧಾರೆಯನ್ನು ಇದು ತರುತ್ತದೆ ಹಳ್ಳಿ ಕಂದಮ್ಮಗಳಿಗೆ.
ಜೊತೆಗೆ ಚಿಕ್ಕ ವಯಸಲ್ಲಿ ಒಂದು ಪಾತ್ರದ ಪ್ರಭಾವ ತುಂಬ ಇರುತ್ತದೆ, ಕೆಲ ಪಾತ್ರಗಳು ಮಕ್ಕಳಿಗೆ ಹಿರೋ ಆಗಿರುತ್ತದೆ. ಅಂತ ಪಾತ್ರಗಳು ಇಂಗ್ಲೀಷನಲ್ಲಿ ಮಾತನಾಡಿದರೆ ಮಕ್ಕಳಿಗೆ ಎಲ್ಲೊ
ಇಂಗ್ಲೀಷ್ ದೊಡ್ಡ ಭಾಷೆ ಅನ್ನೊ ಭ್ರಮೆ ಮೂಡುತ್ತದೆ, ಅದರ ಅನುಕರಣೆ ಮಾಡುತ್ತಾರೆ. ಅದೇ ಕನ್ನಡದಲ್ಲಿ ಮಾತನಾಡಿದರೆ ಮಕ್ಕಳೂ ಕನ್ನಡದಲ್ಲೇ ಅನುಕರಿಸುತ್ತದೆ.
ಹ್ಯದ್ರಾಬಾದ್ನಲ್ಲಿ ತೆಲುಗುನಲ್ಲಿ ಕಾರ್ಟೂನ್ ಚಾನಲ್ ನೊಡಿ ನನ್ನ ಮಗ ಒಂದೇ ತಿಂಗಳಿನಲ್ಲಿ ತೆಲುಗು ಕಲಿತಿದ್ದ. ನಂತರ ಟಾಟಾಸ್ಕ್ಯ್ಯ್ ತೊಗೊಂಡಾಗ ಹಿಂದಿ ಕಲಿತ. ಇಶ್ಟೊಂದು ಪ್ರಭಾವ ಬೀರಬಲ್ಲ ಶಕ್ತಿ ಕಾರ್ಟೂನ್ ಚಾನಲ್ ಗಳಿಗಿದೆ. ಇದೇ ಪ್ರಭಾವ ಕರ್ನಾಟಕದ ಪರಭಾಶಾ ಮಕ್ಕಳ ಮೇಲೂ ಆಗಲಿ. ಆದರೆ ಟಾಟಾಸ್ಕ್ಯ್ಯ್ನಲ್ಲಿ, ಪೊಗೊ, ಮುಂತಾದ ಚಾನಲ್ಗಳು ಒಟ್ಟಿಗೇ ಹಿಂದಿ, ಇನ್ಗ್ಲಿಶ್,ತಮಿಳು, ತೆಲುಗು ಭಾಶೆನಲ್ಲಿ ಪ್ರಸಾರ ಆಗುತ್ತೆ.ಕನ್ನಡ ಮಾತ್ರ ಇಲ್ಲ. ಇದೂ ಕೂಡ ಸಧ್ಯ ಆದ್ರೆ ತುಂಬ ಒಳ್ಳೆಯದು. ಆ ಸ್ಪರ್ಧೆಯಿಂದ ಕನ್ನಡಕ್ಕೆ ಗೆಲುವು ಸಿಗುತ್ತದೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!