ಇವತ್ತು ಕನ್ನಡನಾಡಿಗೆ ಏನು ಬೇಕಾಗಿದೆ ಅನ್ನೋದನ್ನು ಡಾ. ರಾಜ್ ಅವರ ಅಭಿನಯದ ಈ ಹಾಡು ಎಷ್ಟು ಸೊಗಸಾಗಿ ಸಾರುತ್ತಾ ಇದೆ ನೋಡು ಗುರು! ಇವತ್ತು ಚುನಾವಣೆ, ನಾವೆಲ್ಲಾ ನಾಯಕರುಗಳನ್ನು ನಮ್ಮ ನಾಡುಕಟ್ಟೋ ಮುಂದಾಳುಗಳು ಅಂತಾ ಆರಿಸೋ ದಿನ. ಈ ಹಾಡಲ್ಲಿ ನಮ್ಮ ನಾಡು ಬೆಳಗಕ್ಕೆ ಏನೇನು ಬೇಕು ಅಂತ ಎಷ್ಟು ಚೆನ್ನಾಗಿ ಇದೆ ನೋಡಿ.
ಒಂದೇ ನಾಡು, ಒಂದೇ ಕುಲವು, ಒಂದೇ ದೈವವು"ಕನ್ನಡತನ ಬಿಡೆನೆಂಬ ಛಲ, ಒಗ್ಗಟ್ಟಲ್ಲಿ ಬಲವಿದೆ, ದುಡಿಮೆಯಿಂದಲೇ ಏಳಿಗೆ" ಹೀಗೆ ಸಾಲು ಸಾಲು ಸಂದೇಶದ ಈ ಹಾಡು ಮೇಯರ್ ಮುತ್ತಣ್ಣ ಚಿತ್ರದ್ದು. ಒಬ್ಬ ಸಾಮಾನ್ಯ ಹಳ್ಳಿಹೈದ ಹೇಗೆ ಜನನಾಯಕನಾಗ್ತಾನೆ ಅನ್ನೋ ಕತೆಯಿರೋ ಈ ಸಿನಿಮಾ ಅಂದಿನ ದಿನಗಳಲ್ಲಿ ನಾಡಿನಲ್ಲಿ ಸ್ಪೂರ್ತಿ ಸಂಚಲನವುಂಟು ಮಾಡಿತ್ತಂತೆ.
ಒಮ್ಮನದಿಂದ ಎಲ್ಲರು ದುಡಿದರೆ, ಜಗವನೆ ಗೆಲ್ಲುವೆವೂ !!
ಬದುಕಲಿ ಏನೇ ಬರಲಿ, ಒಗ್ಗಟಲಿ ನಂಬಿಕೆಯಿರಲಿ!
ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ!!
ಇಂದು ಚುನಾವಣೆ, ನಾಳೆ ಡಾ. ರಾಜ್ ಹುಟ್ಟುಹಬ್ಬ... ಅನ್ನೋ ಕಾರಣಗಳೆಲ್ಲಾ ಒಗ್ಗೂಡಿ ಇವತ್ತು ಈ ಹಾಡನ್ನು ನಿಮ್ಮ ಜೊತೆ ಹಂಚಿಕೊಳ್ಳೋ ಮನಸ್ಸಾಯ್ತು. ಇಂಥಾ ಹಾಡುಗಳು ಎದೆಯಲ್ಲಿ ನಾಡಪ್ರೇಮ ಹೊಳೆಯಾಗಿ ಹರಿದು, ನಾಡಿನ ಏಳಿಗೆಯ ಕನಸಿಗಾಗಿ ದುಡಿಯುವ ಮನಗಳಲ್ಲಿ ಪ್ರೇರಣೆಯಾಗಿ ಸದಾ ನೆಲೆ ನಿಂತಿರುತ್ತೆ ಗುರು! ಡಾ. ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂಥಾ ಸ್ಪೂರ್ತಿಸೆಲೆಯುಕ್ಕಿಸೋ ಹಾಡುಗಳನ್ನು ತಮ್ಮ ಚಿತ್ರಗಳಲ್ಲಿ ನೀಡಿದ ಆ ಮಹಾನುಭಾವನಿಗೆ ನಮ್ಮ ನಮನಗಳನ್ನು ಸಲ್ಲಿಸಿ, ಆ ಚೇತನವನ್ನು ನೆನೆಯೋಣ ಗುರು!
2 ಅನಿಸಿಕೆಗಳು:
ಅಣ್ಣವರಿಗೆ ಜೈ!
ಇಂದು ನಮ್ಮೆಲ್ಲರ ಆರಾಧ್ಯ ದೈವ ಡಾ .ರಾಜ್ ಹುಟ್ಟು ಹಬ್ಬ ನಮ್ಮೆಲ್ಲರಲ್ಲಿ ಕನ್ನಡತನವನ್ನು ಜಗೃತ ಗೊಳಿಸಲಿ.ಕನ್ನಡಿಗರು ಮತ್ತಷ್ಟು ಕನ್ನದತನವನ್ನು ತಮ್ಮ ದಿನನಿತ್ಯ್ದದ ವ್ಯವಹಾರಗಳಲ್ಲಿ ಅಳವದಡಿಸಿಕೊಳ್ಲಲೆಂದು ಆಶಿಸುತ್ತ...
ಬಸವರಾಜ್ ಬಾಬು
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!