ಪುಗಸಟ್ಟೆ ಉಪದೇಶ ನಮಗೆ ಮಾತ್ರಾ ಕೊಡೋದು ಮಾನವತೇನಾ?

“ಕನ್ನಡಿಗರು ಸಹಿಷ್ಣುಗಳು, ನಾವು ಈ ರೀತಿ ನಡ್ಕೊಂಡ್ರೆ ನಮ್ಮ ಇಮೇಜಿಗೆ ಧಕ್ಕೆ ಬರುತ್ತೆ, ಕನ್ನಡಿಗರಿಗೆ ಪರಂಪರೆಯಿಂದ ಬಂದಿರೋ ಒಳ್ಳೇ ಹೆಸರು ಹಾಳಾಗುತ್ತೆ, ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತೆ.... ನಮ್ಮ ಔದಾರ್ಯ, ಪರಸ್ಪರ ಸೋದರ ಬಾಂಧವ್ಯ ತೋರುಸ್ಬೇಕು"... ಈ ಸಲ ತಿರುವಳ್ಳುವರ್ ವಿಷಯಕ್ಕೆ ಕೇಳಿಬರುತ್ತಿರೋ ಮಾತುಗಳಿವು. ಹಿಂದೆ ನೂರಾರು ಘಟನೆಗಳಲ್ಲಿ ಈ ಮಾತುಗಳು ಕೇಳಿ ಬಂದಿತ್ತು. ಸದಾ ಇಂಥಾ ವಿಶ್ವಮಾನವತ್ವದ, ಉದಾತ್ತತೆಯ, ಆದರ್ಶದ ಬುದ್ಧಿಮಾತುಗಳನ್ನು ಕೇಳೋ ಭಾಗ್ಯ ಕನ್ನಡದೋರಿಗೆ ಬಿಟ್ಟು ಇನ್ಯಾರಿಗೆ ತಾನೆ ಇದೆ ಹೇಳಿ ಈ ಪರಪಂಚದಲ್ಲಿ?!!

ಹಿಂದಿನದ್ನೂ ಒಸಿ ನೆನಪಿಸಿಕೊಳ್ಮಾ!

ಈ ಹಿಂದೆ ರೈಲ್ವೇಯಲ್ಲಿ ಕೆಲಸಗಳು ಖಾಲಿ ಇದ್ದಾಗ ಬಿಹಾರಿಂದ ಬಿಟ್ಟಿ ರೈಲು ಹಾಕಿ ಜನ್ರುನ್ ತುಂಬಿಕೊಂಡು ಬಂದಿದ್ದನ್ನು ವಿರೋಧ ಮಾಡಿದಾಗಲೂ ಇಂಥವೇ ಮಾತುಗಳನ್ನು ಕೇಳಿದ್ವಿ. ಬ್ಯಾಂಕುಗಳಲ್ಲಿ ಕನ್ನಡ ಬಳಸ್ತಿಲ್ಲಾ ಅಂದಾಗ, ಹಿಂದಿ ಹೇರಿಕೆಯನ್ನು ವಿರೋಧಿಸಿದಾಗ, ಕರ್ನಾಟಕದಲ್ಲಿ ಕನ್ನಡದಲ್ಲಿ ನಮಗೆ ಗ್ರಾಹಕ ಸೇವೆ ಸಿಗಬೇಕು, ಕನ್ನಡದಲ್ಲಿ ನಾಮಫಲಕಗಳಿರಬೇಕು.... ಹೀಗೆ ಯಾವುದೇ ಸಂದರ್ಭದಲ್ಲಾಗಿರಲಿ ಕನ್ನಡದವರಿಗೆ ಪುಗಸಟ್ಟೆ ಉಪದೇಶಾಮೃತದ ಸುರಿಮಳೆ ಗ್ಯಾರಂಟಿ.

ನಾವು ಕೇಳ್ತೀವಿ ಅಂತಾ ಬುದ್ಧಿ ಹೇಳಕ್ ಬರ್ತಾರೆ!

“ಹೌದಲ್ವಾ? ಮಾನವತೆಗೆ ಮೀರಿದ್ದು ಯಾವುದಿದೆ? ಈ ಗಡಿ, ನುಡಿ, ಪ್ರತಿಮೆ ಇವೆಲ್ಲಾ ವಿಷಯಗಳಿಗಾಗಿ ಕಚ್ಚಾಡೋದು ಮಾನವತೆಗೆ ಎಸಗೋ ಅಪಚಾರ...." ಅಂತಾ ನಾವೆಲ್ಲಾ ನಂಬೋ ಹಾಗೇ ಸಾಗುತ್ತೆ ಈ ವಾದಸರಣಿ. ಇವರು ಹೇಳೋದೇ ನಿಜವಾದರೇ ಯಾವುದೇ ದೇಶಕ್ಕೆ ಗಡಿ ರಕ್ಷಣಾ ಪಡೆಯೂ ಬೇಕಿಲ್ಲ, ಸೈನ್ಯವೂ ಬೇಕಿಲ್ಲ. ನಮ್ಮತನದ ಮೇಲಾಗೋ ಆಕ್ರಮಣವನ್ನು ವಿರೋಧಿಸಿ ತಡೀತೀವಿ ಅನ್ನೋ ಸ್ವಾಭಿಮಾನಕ್ಕೂ, ಬೇರೆಯೋರ ಬಗ್ಗೆ ತೋರಿಸೋ ಆಕ್ರಮಣಕಾರಿ ಮನೋಭಾವದ ಸಣ್ಣ ಮನಸ್ಸಿಗೂ ನಡುವಿನ ವ್ಯತ್ಯಾಸಾನಾ ಈ ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತು ಬಿಡ್ತಾರೆ. ಇಂಥಾ ಮಾತುಗಳು ’ಕಡಿಯೋ ಮೊದಲು ಕುತ್ತಿಗೆಗೆ ಹಚ್ಚೋ ಬೆಣ್ಣೆ’ ಅಂತಾ ಗುರುತಿಸಲಾರದಷ್ಟು ಕುರಿಗಳಲ್ಲ ನಮ್ಮ ಜನಾ ಗುರು!
ಒಳ್ಳೇತನಾನ ದೌರ್ಬಲ್ಯ ಮಾಡೋ ಉಪದೇಶ!
ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಕೆಲಸಾನೆಲ್ಲಾ ಬೇರೆಯೋರಿಗೆ ಕೊಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಊರಲ್ಲೇ ನಿಮ್ಮನ್ನು ಪರಕೀಯರನ್ನಾಗಿ ಮಾಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಕೈಯ್ಯಿಂದ್ಲೇ ನಿಮ್ಮ ನದಿ ನೀರುನ್ನ ಕಿತ್ಕೊಂಡು ಹೋಗ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಯೋಜನೆಗಳನ್ನು ನೆರೆಯವರು ಕಸಗೋತಿದ್ರು.... ಹೀಗೆ ಒಳ್ಳೇವ್ರು ಒಳ್ಳೇ ಇಮೇಜು ಅಂತಾ ಎಲ್ಲಾನು ಸಹಿಸ್ಕೊಂಡು ಸ್ವಾಭಿಮಾನಾನ ಬಲಿಕೊಡಿ ಅನ್ನೋ ಉಪದೇಶಾ ಸದಾ ಕನ್ನಡದೋರಿಗೇ ಕೊಡೋಹಾಗ್ ಕಾಣೂತ್ತಲ್ಲಾ ಗುರು! ನಿಜವಾಗ್ಲೂ ಯಾರಿಗಾದ್ರೂ ಯಾಕೆ ಬೇಕಾಗಿದೆ ಜಗಳಾ? ಯಾರಿಗಾದ್ರೂ ಯಾಕೆ ಬೇಕು ಹೋರಾಟ? ಜೈಲಿನ ಕಂಬಿ ಎಣಿಸಾಟ? ಪೊಲೀಸರ ಬೂಟು ಲಾಟಿ ಏಟು ತಿನ್ನಾಟ? ನಿಜವಾಗ್ಲೂ ಸಮಾನ ಗೌರವಾ ಕೊಡಬೇಕು ಅನ್ನೋ ಪಾಠದ ಅಗತ್ಯ ಇವತ್ತು ಕನ್ನಡದೋರಿಗೆ ಅಜೀರ್ಣ ಆಗೋಷ್ಟು ಆಗೋಗಿದೆ. ಇರಲಿ, ಸಹನೆಯಿಂದ ಇರೋಣ, ಸಣ್ಣ ಮನಸ್ಸು ಬೇಡ... ಆದ್ರೆ ಈ ತಿರುವಳ್ಳುವರ್ ವಿಷ್ಯದಲ್ಲೇ ತಮಿಳುನಾಡು ಸಮಾನ ಗೌರವ ಕೊಡಕ್ಕೆ ಸಿದ್ಧಾನಾ? ಅವರೂ ಸರ್ವಜ್ಞಂಗೊಳ್ಳೆ ಜಾಗ ಕೊಟ್ಟು, ಹೊಗೇನಕಲ್ ವಿಷಯದಲ್ಲಿ ಜಂಟಿ ಗಡಿ ಸಮೀಕ್ಷೆಗೆ ಒಪ್ಪಿ, ಸುಮ್ನೆ ಶಾಸ್ತ್ರೀಯ ಭಾಷೆ ಪಟ್ಟಕ್ಕೆ ತೊಡರುಗಾಲು ಹಾಕೋದ್ನ ನಿಲ್ಸಿ ಸೌಹಾರ್ದತೆ ತೋರುಸ್ಲಿ ಅಂತಾ ಅವರಿಗೊಂದು ಮಾತ್ನ ಈ ವಿಶ್ವಮಾನವರು ಹೇಳ್ತಾರಾ ಗುರು?

12 ಅನಿಸಿಕೆಗಳು:

abdul latif syed ಅಂತಾರೆ...

ವಿಶ್ವಮಾನವತೆ ಮಟ್ಟ ಕೆಲವರಲ್ಲಿ ಎಷ್ಟು ಎಲ್ಲೆ ಮೀರಿ ಹೋಗಿದೆ ಅ೦ದ್ರೆ, ಇವರನ್ನೇನಾದ್ರು ಬಿಟ್ರೆ, ತಿರುವಳ್ಳುವರನ ಪ್ರತಿಮೆಯನ್ನು ತಮ್ಮ ಮನೆಯಲ್ಲೇ ಪ್ರತಿಷ್ಟಾಪಿಸಿಬಿಟ್ಟಾರು. ಅಥವಾ ಪತ್ರಿಕೆಗಳ ಜೊತೆ ಮನೆ ಮನೆಗೆ ಪ್ರತಿಮೆ ಹ೦ಚಿಬಿಟ್ಟಾರು. ಬನ್ರಿ ಸರಾ ಎಲ್ಲರೂ ತಮ್ ಮನ್ಯಾಗ್ ಒ೦ದೊ೦ದು ತಿರು ಪ್ರತಿಮೆ ಇಟ್ಕೋರಿ, ಹಾಗೆ ಮಾಡಿದೋರಿಗೆಲ್ಲಾ ವಿಶ್ವಮಾನವನ ಬ್ಯಾಡ್ಜ್ ಉಚಿತವಾಗಿ ಕೊಡ್ತಾನ೦ತೆ ಯಡ್ಡಿ.

ತೀಟೆ ಸುಬ್ಬ ಅಂತಾರೆ...

ಕನ್ನಡಿಗರ ಬಗ್ಗೆ ತಿಳಿಗೇಡಿ ತಮಿಳರ ಅವಹೇಳನಕಾರಿ ಬರಹ ನೋಡಿ:
http://uncyclopedia.wikia.com/wiki/User:Sarvagnya/Kannadiga

ಚಿಕ್ಕೋಡಿ ಚಿನ್ನಸ್ವಾಮಿ ಅಂತಾರೆ...

ಸಹಿಷ್ಣರು ಅಂತ ಕೇಳಿ ಕೇಳಿ ಸಾಕಾಗಿ ಹೋಗಿದೆ ಗುರು. ಬೇಡ ನಮಗೆ ಆ ಪಟ್ಟ. ಕೆಟ್ಟವರಾಗಕ್ಕೆ ನಾವು ಸಿದ್ದ. ಸರ್ವಜ್ಞನ ಪ್ರತಿಮೆ ಚೆನ್ನೈನ ಮೌಂಟ್ ರೋಡ್ ನಲ್ಲಿ ಹಾಕಲಿ ಆಗಷ್ಟೆ ಇಲ್ಲೂ ಹಾಕ್ಲಿಕ್ಕ್ ಬಿಡುವ. ಹೊಗೆನಕ್ಕಲ್ ನಮ್ಮದು ನಾವು ಯಾವ ಸಮೀಕ್ಷೆಗು ಬರಲ್ಲ. ಮುಖ್ಯಮಂತ್ರಿಗಳು ಕರೆದಿರುವ ಸಭೆಗೆ ಕ.ರ.ವೆ ಅವರು ಹೋಗ್ತಿದಾರೆ ಅಂತ ಅಂದ್ಕೊತೇನೆ. ಅವರಲ್ಲಿ ನನ್ನ ಕೋರಿಕೆ. ದಯವಿಟ್ಟು ಎಲ್ಲ ರೀತಿಯಲ್ಲೂ ಇದನ್ನು ವಿರೋಧಿಸಿ. ನಿಮ್ಮೊಬ್ಬರಿಂದಲೇ ಇದು ಸಾಧ್ಯ.

prasadh ಅಂತಾರೆ...

ಇಂತಹ ಹೇಳಿಕೆ ಕೊಡೊ ವಿಶಾಲಹೃದಯಿಗಳನ್ನ ತಮಿಳುನಾಡಲ್ಲೆ ವಾಸ ಮಾಡಿ ಅಂತ ಹೊರಗಟ್ಟಬೇಕು
ನಾನಂತು ಇಲ್ಲಿಗೆ(ಚೆನ್ನೈ) ಕರ್ಕೊಳಕ್ಕೆ ಸಿದ್ಧ. ಇಲ್ಲಿ ಬಂದು ಅದೆನು ಭಜನೆ ಹೊಡೆತಾರೆ ಹೂಡೀಲಿ.
ಇದೇನಾದ್ರು ನಡೆದು ಹೋಗ್ಬಿಟ್ರೆ ಕನ್ನಡಿಗ ಅಂಟ ಹೇಳಿಕೊಳ್ಳೊಕ್ಕೆ ನಾಚಿಕೆ ಆಗ್ಬೇಕು ಆ ಲೆವೆಲ್‌ಗೆ ನಮ್ ಮಾನ ಮಾರ್ಯಾದೆ ಹೋಗುತ್ತೆ :(. ಏನ್ ಬೇಕಾದ್ ಆಗಿಹೊಗ್ಲಿ ಪ್ರತಿಮೆ ಮಾತ್ರ ಸ್ಥಾಪನೆ ಆಗೊಕ್ಕೆ ಬಿಡಬಾರ್ದು. ಅಕಸ್ಮಾತ್ ಆಗ್ಲೆ ಬೇಕು ಅಂದ್ರೆ ಅದನ್ನ ತಮಿಳು ಸಂಘದ ಕಾಂಪೌಂಡ್ ಒಳಗೆ ಸ್ಥಾಪಿಸಿಕೊಳ್ಳಲಿ. ನಾಳೆ ದಿನ ಅದಕ್ಕೆ ಸೆಕ್ಯೂರಿಟಿ, ಮುಷ್ಕರ ಹೂಡೆಕ್ಕೆ ಜಾಗ, ತಮ್ಮ "ತಮಿಳ್" ಸಂಸ್ಕೃತಿ ಕೊಚ್ಚ್ಕೊಳಕ್ಕೆ ಕಾರಣ ಎಲ್ಲದಕ್ಕೊ ಎಡೆಮಾಡಿಕೊಟ್ಟ ಹಾಗೆ ಆಗುತ್ತೆ.

gururaj harohalli ಅಂತಾರೆ...

ellaru sold out guru,,

kachda saahitigalu, buddhijeevigalu, patrikeyavaru, virodha pakshadavaru,, ellarannu kharidi maad bittide sarkara,, thu,, intha daridra nan makkalanna nodiralilla illivaregu,,

karave vonde idanna oppose maadta irodu,,

ಪವ್ವಿ ಅಂತಾರೆ...

ಇಲ್ಲಿ ನಾವು ವಿಚಾರ ಮಾಡುತ್ತ ಇರುವುದು ಮತ್ತು ನಮ್ಮ ಅನಿಸಿಕೆ ಹಂಚಿಕೊಳ್ಳುತ್ತ ಇರುವುದು, ಎಲ್ಲರ ಮನದ ಮಿಡಿತವು ಒಂದೇ ಆಗಿರುವುದು ಬಹಳ ಉತ್ತಮ ಬೆಳವಣಿಗೆ. ಇದು ನಮ್ಮ ರಾಜ್ಯದಲ್ಲಿ ಇರುವ ಸೊ called ಬುದ್ಧಿಜೀವಿ, ಚಿಂತಕರು, ಹಿರಿಯ ತಲೆಗಳಿಗೆ ಸಂದೇಶ ಕೊಡುತ್ತದೆ. ಸದಾ ಕಾಲ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು.

ನಮ್ಮ ದೌರ್ಭಾಗ್ಯ ನೋಡಿ, ಮಾಧ್ಯಮಗಳು, ನಮ್ಮ ಜ್ಞಾನಪಿಠಿಗಳು, ಪ್ರಗತಿ ಪರ ಲೇಖಕರು , ಕನ್ನಡ ಅಭಿವೃದ್ಧಿ ಮಾಡಲು ಹೊರಟಿರುವ ನಟರು, ಟಿ.ವಿಯಲ್ಲಿ ಉಚಿತ ಸಲಹೆ ಕೊಡುವ, ಪ್ರವಚನ ಮಾಡುವ ಜನರು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡು, ತಮ್ಮ ಬೇಳೆಕಾಳು ಬೇಯಿಸಲು ಹೊರಟಿದ್ದಾರೆ, ಇದೇ ೫ ವರುಷ ಮುಂಚೆ ಆಗಿದ್ದರೆ, ಇವರ ಮಾತುಗಳು ನಮಗೆ ಸ್ಪೂರ್ತಿ ಆಗುತ್ತಿತ್ತು, ಹೌದು ಇವರು ಮಾಡುತ್ತ ಇರುವುದು ಸರಿ ಅಂತ ಭ್ರಮೆಗೆ ಬರುತ್ತ ಇದ್ದೆವು. ಆದ್ರೆ ಇವತ್ತು ಕನ್ನಡಿಗ ಜಾಗೃತನಾಗಿದ್ದಾನೆ, ಅದರಲ್ಲೂ ವಿದ್ಯಾವಂತ ಸಮುದಾಯ ಈ ಕಪಟಿಗಳ ಬಣ್ಣದ ಮಾತಿಗೆ ಬಗ್ಗುತ್ತಿಲ್ಲ, ಇದರಲ್ಲಿ ಈ ಬ್ಲಾಗಗಳ ಜಾಗೃತಿ ಲೇಖನದ ಪಾತ್ರ ಇದೆ, ಇದೆ ನಾನು ನೋಡುವ ಉತ್ತಮ ಬೆಳವಣಿಗೆ.

ಈ ವಿಚಾರದಲ್ಲಿ ಯಾಕೆ ವಿರೋಧಿಸಬೇಕು ಎಂದು ಚೆನ್ನಾಗಿ ಅಂಕಿ ಅಂಶಗಳ ಸಮೇತ ಹೇಳುತ್ತಿರುವ ಕನ್ನಡ ಸಂಘಟನೆಗಳಿಗೆ ನಮ್ಮ ಬೆಂಬಲ ನೈತಿಕವಾಗಿ ಬಹಳ ಸಹಾಯ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ.

putta ಅಂತಾರೆ...

ಎಲ್ಲ ಸಾಹಿತಿಗಳೂ ಬುದ್ಧಿಜೀವಿಗಳೂ 'ಪ್ರತಿಮೆ ಅನಾವರಣ ಆಗ್ಲಿ ಬಿಡಿ' ಅಂತ ಹೇಳ್ತಿರೋದಕ್ಕೂ ಪತ್ರಿಕೆಯಲ್ಲಿ ಸಂಪಾದಕರೆ ಮೊದಲನೇ ಪುಟದಲ್ಲಿ ಲೇಖನ ಬರೆದು ಇದರ ಬೆಂಬಲಕ್ಕೆ ನಿಂತಿರೋದು ನೋಡಿದ್ರೆ ಸರ್ಕಾರವೇ ಎಲ್ಲರನ್ನೂ ಬುಟ್ಟಿಗೆ ಹಾಕೊಂಡಿದೆ ಅಂತ ಅನಿಸದೆ ಇರೋಲ್ಲ..ಕರ್ಣಾಟಕದ ಹಾಗೂ ಕನ್ನಡಿಗರ ಈ ಸ್ಥಿತಿಗೆ, ಕನ್ನಡಿಗರು ಸಾಹಿತಿಗಳಿಗೆ ಬುದ್ಧಿಜೀವಿಗಳಿಗೆ ಬೇರೆ ಯಾವ ರಾಜ್ಯದಲ್ಲೋ ಕೊಡದಷ್ಟು ಮನ್ನಣೆ ನೀಡಿರೋದೆ ಕಾರಣ ಅಂತ ನನ್ನ ಅಭಿಪ್ರಾಯ. ಇದು ಒಂದು ನೋವಿನ ಸಂಗತಿ ಆದ್ರೆ ನಾರಾಯಣ ಗೌಡ್ರು ಇವತ್ತು ಉದಯ ವಾರ್ತೆಗಳು ಚಾನ್ನೆಲ್ನ ಚರ್ಚೆಯಲ್ಲಿ ಇನ್ನೂ ಒಂದು ವಿಷಯ ಹೇಳಿದ್ರು.. ಕೋಲಾರದಲ್ಲಿ ಗಲ್ಲಿ ಗಲ್ಲಿಗೆ ತಮಿಳರ ಪ್ರತಿಮೆಗಳಿವೆ ಅಂತ..ಇವತ್ತು ತಿರು ಪ್ರತಿಮೆ ಇಡೋಕೆ ಬಿಟ್ರೆ ಬೆಂಗಳೂರು ಕೋಲಾರ ತರ ಆದರು ಆಗಬಹುದು..ಕರ್ನಾಟಕಕ್ಕೇ ಸಧ್ರುಡವಾದ, ಕನ್ನಡ ಕರ್ನಾಟಕ ಕನ್ನಡಿಗರನ್ನೇ ಸಿದ್ಧಾಂತವಾಗಿ ಮಾಡಿಕೊಳ್ಳುವ ಒಂದು ಪ್ರಾದೇಶಿಕ ಪಕ್ಷ ಬೇಕೇ ಬೇಕು.. ಇಲ್ಲ ಅಂದ್ರೆ ,ಇವತ್ತು ಚುನಾವಣೆಲಿ ತಮಿಳರ ಮತಕ್ಕಾಗಿ ತಿರು ಪ್ರತಿಮೆ , ನಾಳೆ ತೆಲುಗು ಮಲ್ಲುಗಳ ಮತಕ್ಕಾಗಿ ಎನ್ ಟಿ ಆರ್, ಮಮ್ಮೂಟಿ ಪ್ರತಿಮೆಗಳು ಬೆಂಗಳೂರಿನಲ್ಲಿ ಕಂಡ್ರು ಅಚ್ಚರಿ ಇಲ್ಲ ..

Anonymous ಅಂತಾರೆ...

ಗುರು ಮತ್ತಿತರರು,

ಆಗಸ್ಟ್ ೯ ಕ್ಕೆ ಪ್ರತಿಮೆ ನಿಲ್ಲಿಸೋದೆ ಸಿದ್ಧ ಅಂತ ಕರುಣಾನಿಧಿಗೆ ಆಹ್ವಾನ ಕೊಟ್ಟು ಬಂದಿದೀರಲ್ಲಾ, ಈಗ ನಾವೇನೂ ಮಾಡೋಣ ಹೇಳಿ? ಸುಮ್ಮನೆ ಹೇಡಿಗಳಂತೆ ನೋಡ್ತಾ ಇದ್ರೆ ಪ್ರತಿಮೆ ನಿಲ್ಲಿಸೋದಂತೂ ಖಂಡಿತ. ಆಮೇಲೆ ಏನೂ ಮಾಡಕ್ಕಾಗಲ್ಲ ಅಲ್ಲವಾ?

ಪುಟ್ಟ PUTTA ಅಂತಾರೆ...

ಸ್ವಾಭಿಮಾನ ಶೂನ್ಯ ಚಡ್ದಿಗೆ(ಯದ್ಡಿ) ನನ್ನ ದಿಕ್ಕಾರ.

ಕ್ಲಾನ್ಗೊರೌಸ್ ಅಂತಾರೆ...

ನಂದೂ ಒಂದ್ ಧಿಕ್ಕಾರ

Anonymous ಅಂತಾರೆ...

ಈವತ್ತು ನೋಡ್ರಪಾ ರಾಮಾಜೋಯೀಸರು ವಿಜಯಕರ್ನಾಟಕದಲ್ಲಿ “ಮಹಾಜ್ಞಾನಿಯ ಗೌರವಿಸಿ ದೊಡ್ಡವರಾಗೋಣ” ಅಂತ ಬಿಟ್ಟಿ ಉಪದೇಶ ಮಾಡಿದ್ದಾರೆ. ಇಷ್ಟೊಂದು ಮಹಾಪುರುಷರನ್ನು, ವಿಶ್ವಮಾನವರನ್ನು ಹೆತ್ತುಬಿಟ್ಟು ಕನ್ನಡತಾಯಿ ಒಂದು ಮಾತನ್ನು ಮರೆತುಬಿಟ್ಟಳು. “ಕುಲಕ್ಕೆ ಮೃತ್ಯು ಕೊಡಲಿಯ ಕಾವು”. ಈ ಎಲ್ಲಾ ದೊಡ್ಡಮನುಷ್ಯರು ತಮ್ಮ ಆತ್ಮಸಾಕ್ಷಿಗೆ ನಿಜವಾಗಿ ನಡೆಯುತ್ತಿದ್ದಾರಾ? ನಿಜವಾದ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದಾರಾ? ಅಂತ ಅನುಮಾನವಾಗುತ್ತೆ. ಈವತ್ತು ಪೇಪರ್ ನೋಡಿ. ಕರ್ನಾಟಕ ಸರ್ಕಾರ ತಿರುವಳ್ಳುವರ್ ಪ್ರತಿಮೆಯನ್ನ ಅನಾವರಣದ ಸುದ್ದಿಯ ಜೊತೆಗೆ, ಹೇಮಾವತಿ ನೀರಾವರಿ ಜೋಜನೆಯ ವಿರುದ್ಧ ತಮಿಳುನಾಡು ಕರ್ನಾಟಕದ ಮೇಲೆ ಕೇಸ್ ಹಾಕಿದ ಸುದ್ದಿ ಬಂದಿದೆ!

ಈ ವಿಶ್ವಮಾನವರನ್ನು ತಮಿಳುನಾಡಿಗೆ ಔಟ್‌ಸೋರ್ಸ್ ಮಾಡಿ.

-ಗುರುಪ್ರಸಾದ

Anonymous ಅಂತಾರೆ...

en-guru intha daridra rajakarini halka gulle narinaa ello nodilla... adhikara beku antha en maadoku sidda... am really upset over this... how can we stop this?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails