ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಾಲ್ಗೆ ನಿಜವಾಗ್ಲೂ ಇದ್ಯಾಕೆ ಇಂಥಾ ಬುದ್ಧಿ ಬಂತೋ ದೇವರಿಗೇ ಗೊತ್ತು! ಅಲ್ಲಾ ಮೊನ್ನೆ ಮೊನ್ನೆ ‘ಇಡೀ ಭಾರತಕ್ಕೆ ಒಂದೇ ಬೋರ್ಡು, ಇನ್ಮುಂದೆ ನಿಮ್ ಎಸ್ಸಿಸ್ಸೆಲ್ಸಿ ಬೋರ್ಡು ಬೋರ್ಡಿಗ್ ಇರಲ್ಲ’ ಅಂದೋರು ಆಮೇಲಿಂದಾ ‘ನಾ ಅಂದಿದ್ ಆ ಅರ್ಥದಲ್ ಅಲ್ಲಾ’ ಅಂತಂದು ಕೈತೊಳಕೊಂಡಿದ್ರು. ಈಗ ನೋಡುದ್ರೆ ಇಡೀ ಭಾರತದ ಮೂಲೆ ಮೂಲೆಯಲ್ಲಿರೋ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲುಸ್ಬೇಕು ಅಂತಾ ಹೊಸ ರಾಗಾ ಹಾಡ್ತಾವ್ರಲ್ಲಪ್ಪಾ ಅಂತ ಜನ ಬೆಪ್ಪಾಗ್ ಕುಂತವ್ರೇ ಗುರು!
ಏಕತೆಗೆ ಹಿಂದೀ ಬೇಕನ್ನೋ ಹುಸಿ ರಾಷ್ಟ್ರೀಯತೆ!
ಈ ವಯ್ಯಾ ಹೇಳಿರೋದುನ್ನೇ ಒಸೀ ನೋಡಿ. ಸಾಂಸ್ಕೃತಿಕ ಏಕತೆಗೆ ತಾಯ್ನುಡಿಯಂತೆ, ರಾಷ್ಟ್ರೀಯ ಏಕತೆಗೆ ಹಿಂದಿಯಂತೆ, ಇಂಗ್ಲೀಷು ಜಾಗತಿಕವಾಗಿ ಅನುಕೂಲ ಮಾಡಕ್ಕಂತೆ! ಅಂದ್ರೆ ಇವರ್ ಪ್ರಕಾರ ಕನ್ನಡದೋರು ಹಿಂದಿ ಕಲೀದಿದ್ರೆ ಭಾರತದ ಏಕತೆಗೆ ಧಕ್ಕೆ ತಗುಲುತ್ತೆ ಅಂದಂಗಾಯ್ತಲ್ಲಾ ಗುರು! ಈಗಾಗಲೇ ಹಿಂದಿ ನಮ್ಮ ಕೆಲಸ ಬೊಗಸೆ ಬದುಕುಗಳನ್ನು ಮೂರಾಬಟ್ಟೆ ಮಾಡಕ್ ಮುಂದಾಗಿರೋದನ್ನು ನೋಡ್ತಿದೀವಿ. ಇನ್ನು ಶಾಲೇಲಿ ಹಿಂದಿ ಕಡ್ಡಾಯ ಮಾಡುದ್ರೆ ಇದು ನಮ್ ಮಕ್ಕಳಿಗೆ ಕಲಿಕೇನ ತೊಡಕು ಮಾಡಕ್ಕೂ ಒಂದು ಕಾಣಿಕೆ ಸಲ್ಸುತ್ತೆ ಅಷ್ಟೆ. ಅಷ್ಟುಕ್ಕೂ ಯಾಕೆ ಬೆಂಗಾಲಿಗಳು, ಕನ್ನಡಿಗರು, ತಮಿಳ್ರು, ಮರಾಠಿಗ್ರು, ಗುಜರಾತಿಗಳು, ಸಿಂಧಿಗಳು, ಪಂಜಾಬಿಗಳು, ತೆಲುಗ್ರು... ಅಯ್ಯೋ ಪಟ್ಟಿ ದೊಡ್ದಿದೆ, ಒಟ್ನಲ್ಲಿ ಭಾರತೀಯರು ಹಿಂದೀ ಕಲೀಬೇಕು? ಒಂದು ಭಾಷೆ ಇದ್ರೆ ಮಾತ್ರಾ ಏಕತೆ ಅನ್ನೋ ಮನಸ್ಥಿತಿ ಭಾರತಾನಾ ಒಗ್ಗೂಡ್ಸಲ್ಲಾ, ಬದಲಾಗಿ ಒಡ್ಯುತ್ತೆ. ಪ್ರತಿ ಪ್ರದೇಶದ ಅನನ್ಯತೆ ಕಾಪಾಡಕ್ಕೆ ಸಿದ್ಧವಿಲ್ಲದ ವ್ಯವಸ್ಥೆ ಬೇಗ ಕುಸಿಯುತ್ತೆ ಗುರು! ಹಾಗಾಗ್ಬಾರ್ದು ಅನ್ನೋದೇ ನಮ್ಮ ಕಳಕಳಿ. ಇದೇ ಭಾರತೀಯರೆಲ್ಲರ ಕಳಕಳಿ. ಅಲ್ಲಾ! ನಮ್ಮ ಮೇಲೆ ಯಾವ ತೆರನಾದ ಹೇರಿಕೇನೂ ಇಲ್ಲದೇನೇ, ಬರೀ ನಮ್ಮತನಾನೇ ಇಟ್ಕೊಂಡು ನಾವೆಲ್ಲಾ ರಾಷ್ಟ್ರೀಯ ಏಕತೆ ಸಾಧಿಸಕ್ ಆಗಲ್ವಾ? ಆಗಲ್ಲಾ ಅಂದ್ರೆ ಹೀಗೆ ಹಿಂದೀನಾ ಕಡ್ಡಾಯ ಮಾಡೋ ಹೇರಿಕೆಯಿಂದ ಆದೀತಾ? ಮುಂದಿನ ಪರಿಣಾಮಗಳ ಅರಿವಿಲ್ಲದೆ ಅಂಥಾ ದೊಡ್ ಸ್ಥಾನದಲ್ ಇರೋರು ಹಿಂಗ್ ಹೇಳಿಕೆ ಕೊಡೋದು ಸರೀನಾ ಗುರು? ಇದ್ಯಾವ ಸೀಮೆ ರಾಷ್ಟ್ರೀಯ ಏಕತೆಯೆಡೆಗೆ ಇಡ್ತಿರೋ ಹೆಜ್ಜೆ ಗುರು?
ಇದರ ಹಿಂದಿರೋ ನಿಜ ಉದ್ದೇಶ?
ಇವ್ರು ಹೇಳಿದಂಗೇ ಒಂದು ಭಾಷೆ ಇಡೀ ಭಾರತಾನ ಒಗ್ಗೂಡ್ಸುತ್ತೆ ಅನ್ನೋದಾದ್ರೆ, ಸಚಿವರು ಹಿಂದೀ ಅದೆಂಗೇ ಒಗ್ಗೂಡ್ಸುತ್ತೆ ಅನ್ನೋ ಪ್ರಶ್ನೆಗೂ ಉತ್ರ ಕೊಡಬೇಕಾಗುತ್ತೆ. ನೀವು ಭಾರತದ ಬೇರೆ ರಾಜ್ಯಗಳಿಗೆ ಹೋಗೋದಾದ್ರೆ ಅಲ್ಲಿ ಹಿಂದಿಯಲ್ಲಿ ವ್ಯವಹರಿಸಬಹುದು ಅಂತಾರೇನೊ? ಹಾಗಾದ್ರೆ ಏನಾದೀತು ಅಂತಾ ಒಂದ್ಸಲ ಯೋಚಿಸಿ, ಬೆಂಗಳೂರಿಗೆ ಬರೋ ಕನ್ನಡೇತರರೆಲ್ಲಾ ಹಿಂದಿ ಕಲಿತು ಬರ್ತಾರೆ, ಅವರ ಜೊತೆ ಸಂಪರ್ಕಕ್ಕೆ ಬರೋ ಬೆಂಗಳೂರಿನ ಕನ್ನಡಿಗರೆಲ್ಲಾ ರಾಷ್ಟ್ರೀಯ ಏಕತೆ ಕಾಪಾಡಕ್ಕೇ ಅಂತಾ ಹಿಂದೀಲಿ ವ್ಯವಹರುಸ್ತಾರೆ. ಅಂದ್ರೆ ನಮ್ಮೂರಿನ ಅಂಗಡೀಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡಕ್ಕೂ ಹಿಂದೀ ಬರಬೇಕಾಗುತ್ತೆ. ಬೀದಿಕಸ ಗುಡ್ಸೋ ಜಾಡಮಾಲಿಗೂ, ಮನೆಗೆ ಪೇಪರ್, ಹಾಲು ಹಾಕೋನಿಗೂ ಹಿಂದಿ ಬರಬೇಕಾಗುತ್ತೆ. ಹಾಗೆ ಬರಬೇಕು ಅಂದ್ರೆ ಆರುಕೋಟಿ ಕನ್ನಡಿಗರಿಗೆಲ್ಲಾ ಹಿಂದೀನ ಕಲುಸ್ಬೇಕಾಗುತ್ತೆ. ಈಗ ಕಪಿಲ್ ಸಿಬಾಲ್ ಸಾಹೇಬ್ರು ಮಾಡಕ್ ಹೊಂಟಿರೋದೂ ಇಂಥಾದ್ದೇ ನಡೆ ಅಲ್ವಾ? ಇದರರ್ಥ ಇಡೀ ಭಾರತಾನಾ ಹಿಂದಿ ಮಾತಾಡೊರಿಗೆ ಸ್ವರ್ಗ ಮಾಡಬೇಕು, ಹಿಂದಿ ತಾಯ್ನುಡಿಯೋರು ಎಲ್ಲಿಗ್ ಹೋದ್ರೂ ತೊಂದ್ರೆ ಇಲ್ಲದೆ ಬದುಕೋ ಹಾಗಾಗಬೇಕು ಅಂತನ್ನೋ ಒಂದೇ ಉದ್ದೇಶ ಅಲ್ವಾ ಕಾಣೋದು? ಅಥ್ವಾ ‘ಆರು ಕೋಟಿ ಕನ್ನಡಿಗರೆಲ್ಲಾ ಕರ್ನಾಟಕದಿಂದ ಹೊರಗೇ ಹೋಗಿ ಬದುಕ್ತಾರೆ ಅಂತೇನಾದ್ರೂ ಇವರಿಗೆ ಬರ್ಕೊಟ್ಟಿದೀವಾ?’ ಅಂತಾ ಕೇಳಬೇಕಾಗಿದೆ. ಇಡೀ ಭಾರತದ ಜನಸಂಖ್ಯೆಯ 20% ಜನರಿಗಾಗಿ ಉಳಿದ 80% ಜನರ ಮೇಲೆ ಒಂದು ಭಾಷೆ ಕಲೀಬೇಕು ಅಂತನ್ನೋ ನಿಯಮಾನ ಅದೆಂಗೆ ರಾಷ್ಟ್ರೀಯ ಏಕತೆಯ ಕ್ರಮ ಅನ್ನಕ್ಕಾಗುತ್ತೇ ಗುರು!
16 ಅನಿಸಿಕೆಗಳು:
ಹಿಂದೀ ಗಾಜಿನ ಕನ್ನಡಕದಿಂದ ಎಲ್ಲಾವನ್ನೋ ನೋಡೋ ಈ ಬುದ್ದಿಗೆ ಏನು ಮಾಡೋದು ? :(
(ನನಗೆ ಹಿಂದಿ ಬರತ್ತೆ, ಅದರಿಂದ ನನಗೆ ಉಪಯೋಗವೂ ಆಗಿತ್ತು; ಹಾಗೇ ನನಗೆ ಸಂಸ್ಕೃತವೂ ಬರತ್ತೆ, ತಮಿಳೂ ಬರತ್ತೆ. ಅದರಿಂದಲೂ ಉಪಯೋಗವೇ ನನಗೆ ಆಗಿದೆ - ಆದರೆ ಇವೆರಡನ್ನ ಕಲಿ ಅಂತ ನನಗ ಯಾರೂ ಬಲವಂತ ಮಾಡಿರ್ಲಿಲ್ಲ)
ಹಿಂದಿ ಹೇರಿಕೆಯನ್ನ, ನಾನು ವಿರೋಧಿಸ್ತೇನೆ.
hindi alla adu hindustani 90% urdu ide adaralli.
ಇದು ಒಳ್ಳೇ ಕಸ್ಥ ಆಯ್ತಲ್ಲ
ಜಗತ್ತಿನಲ್ಲಿ ಬದುಕ ಬೇಕಂದ್ರೆ ಎಲ್ಲ ದೇಶದ ಭಾಷೆ ಗಳನ್ನ ಕಲಿಬೇಕಾ ??
ಎಂಥ ಮೂರ್ಖ ಜನ :)
Karnatakadalli innu kannada ne kaddaya madoke court ge hogbekagide..intavru hindi kaddaya madoke bandidare..naavu enu kalibeku kalibardu anta namma rajyada shikshana ilakhe/tagnaru iradu anta andkondidini
ಭಾರತ ಈಗ ಸೋವಿಯತ್ ಒಕ್ಕೂಟದ ಹಾದಿಯಲ್ಲಿ ಸಾಗ್ತಾ ಇರೋದರಲ್ಲಿ ಸಂಶಯಾನೆ ಇಲ್ಲ. ದೇಶ ಓಡಿಯೋದಿಕ್ಕೆ ೪ ಕಪಿಲ್ ಸಿಬಾಲ್ ಸಾಕು. ಇವನಿಗೆ ಕನ್ನಡ ಅಂತ ಒಂದು ಭಾಷೆ ಇದೇಯಾಂತ ಗೊತ್ತಿದೆಯೋ ಇಲ್ವೋ . ಇಂತಹವರು ನಮ್ಮಣ್ಣ ಆಳ್ತಾ ಇರೋದೇ ನಮ್ಮ ದುರದೃಷ್ಟ
- ಅಸಹಾಯಕ ಕನ್ನಡಿಗ
Indeed outrageous. India can be compared to Europe in terms of linguistic diversity and should have been like Europe in order to improve and promote one's own language. If any one language is imposed on certain european nation which does'nt speak that language, there is going to be another world war. Language is that serious but HINDIA is an exception which wants hindi to be it. Hindi freaks.
we are kannadigas our intention is to see kannada as official/public/private language in karnataka, so nothing more or less, this is what i expect so we have let these people to sit in parliment for doing nothing so lets find the way to strongly protest and show our concern on this matter..
I am sory.. I dont realy get this... Hindi kaliyoke kaddaya madodrinda kanndada janatege walitagutte horatu, kettaddu agoke chance ye illa.. Illi Kannada kalee bedi anta helta illa.. Hindi nuu kaleeri anta idare. Adralli yen tappu. Karnataka bittu bharatadalli bere yelladru tirugadbekandre Hindi barle beku alwa(atleast in majority of the states). Neevu horagade illa antane itkolli, karnatakadalle irteera. yeno ondu vyawahara madta ideera. Yaro kannada gottiravru nimjote Vyaparakko, innoo yawdo kelsakko bartare, aga neevu '"Modlu Kannada Kalitkond banni amele nimjote namma vyawahaara" anta heli kalisteera?!! I dont think so. Nanuu Kannada abhimani, Kannada channagi beli beku annode nanguu ishta. But, Tamilians thara agbardu. I have been staying outside Karnataka for nearly 5 years now. Kannadada mele nange abhimana hogilla. But, Bere rajyadalli Hindi barada janara (especially Tamilians) padu nanu nodideeni. But Kannada jana yelli bekadru avru chhapu moodsidare. South Indians andre Hindi ne baralla anta tilkondiro yeshto janrige, Kannada hudugranna nodidru yeshtu ascharya agutte gotta?!!!
@Anonymous,
'yeno ondu vyawahara madta ideera. Yaro kannada gottiravru nimjote Vyaparakko, innoo yawdo kelsakko bartare, aga neevu '"Modlu Kannada Kalitkond banni amele nimjote namma vyawahaara" anta heli kalisteera?!!'
swami, idu vyavahaara maaduvavarigashte seemitavaada vaada. adu avanigiruva compulsion aadare nanage aa tharada yaavude avashyakate ilvala. idakkoskara naanu nanna odina modala 15 varsha hindi kalibeka? avashyakathe bandre 1500/- kottu amele kalitini sakashtu mandi Germany, French kaliyo haage.
ondu paksha nimma vaada sari antane iTkonDru hindine yaake? Tamil, Telugu, Malayalam yaakagbaardu and eega avarige namma avashyakathe iddare avaru Kannada kalibeku thaane.
ಎಷ್ಟೋ ಜನ 'ಹಿಂದಿ ಕಲಿತರೆ ಭಾರತ ಎಲ್ಲ ಕಡೆ ಜೀವನ ಮಾಡಬಹುದು' ಅಂತ ಹೇಳ್ತಿದಾರೆ. ಭಾಷೆಗಳನ್ನೂ ಕಲೀರಿ ಪ್ರೀತಿಸಿ ಗೌರವಿಸಿ.ಆದರೂ ಅವರಿಗೆ ನನ್ನ ಒಂದು ಪ್ರಶ್ನೆ. ಕರ್ಣಾಟಕದ ಜನಸಂಖ್ಯೆ ೫.೫ ಕೋಟಿ ಅನ್ತಿಟ್ಕೊನ್ದ್ರು ಎಷ್ಟು ಜನ ಕೆಲಸದ ಮೇಲೆ ಪದೇ ಪದೇ ಬೇರೆ ಊರಿಗೆ ಹೋಗ್ತಾರೆ ? ಅಂತವರು ಅಬ್ಬಬ್ಬ ಅಂದ್ರು ೫%(ಇದಕ್ಕಿಂದ ಕಡಿಮೆ) ಇರಬಹುದು(floating population). ಹೀಗಿರುವಾಗ ಉಳಿದ ೭೦-೮೦% ಜನ ಪೂರ್ತಿ ನೆಲೆ /ಜೀವನ ಕರ್ನಾಟಕದಲ್ಲೇ ಕಂಡಿರುವಾಗ/ಕಳೆವಾಗ ಹಿಂದಿ ಯಾಕೆ ಬೇಕು ? ಪ್ರವಾಸ ಅಂತ ಹೋದ್ರು ೧ ವಾರ ಹೋಗ್ತೀವಿ. ಇಡೀ ಜೀವಮಾನದಲ್ಲಿ ಅಬ್ಬಬ್ಬ ಅಂದ್ರೆ ೬ ತಿಂಗಳು ಹೊರಗಡೆ ಕಳೆಯೋದಕ್ಕೆ ಬಲವಂತವಾಗಿ ಒಂದು ಭಾಷೆ ಕಲಿಯೋ ಅವಶ್ಯಕತೆನೆ ಇಲ್ಲ. ನಾವು ಬೇರೆ ಊರಿಗೆ ಸ್ವಲ್ಪ ದಿನದ ಮಟ್ಟಿಗೆ ಹೋದಾಗ ಅಲ್ಲಿಯವರಿಗೆ ವ್ಯಾಪಾರ ಆಗ್ಬೇಕಂದ್ರೆ ಅವರು ನಮ್ ಭಾಷೆ ಮಾತಾಡ್ಬೇಕು. ಯಾಕಂದ್ರೆ ವ್ಯಾಪಾರ ಬೇಕಿರೋದು ಅವರಿಗೆ. ಭಾರತೀಯ ಅಂದ್ರೆ ಎಲ್ಲ ಕಡೆ ಹಿಂದಿ ಮಾತಾಡ್ಕೊಂಡಿರೋದಲ್ಲ. ಕರ್ನಾಟಕದಲ್ಲಿ ಕನ್ನಡಿಗನಾಗಿ, ತಮಿಳ್ನಾಡಲ್ಲಿ ತಮಿಳನಾಗಿ, ಆಂಧ್ರದಲ್ಲಿ ತೆಲುಗನಾಗಿ, ಕೇರಳದಲ್ಲಿ ಮಲ್ಲುವಾಗಿ..ಹೀಗೆ..ಮನೇಲಿ ಯಾವ ಭಾಷೆನಾದ್ರು ಮಾತಾಡಿ ಆದ್ರೆ ಪ್ರತಿಯೊಂದು ರಾಜ್ಯಕ್ಕೂ ಮುಖ್ಯವಾಹಿನಿ ಅಂತ ಇರುತ್ತೆ (ನಮ್ಮ ರಾಜ್ಯಕ್ಕೆ ಕನ್ನಡ ಮುಖ್ಯವಾಹಿನಿ ಇದ್ದಂತೆ) ಆಯಾ ರಾಜ್ಯದಲ್ಲಿ ಬದುಕು ಸಾಗಿಸ್ತಿದೀವಿ ಅಂದ್ರೆ ಆ ರಾಜ್ಯದ ಮುಖ್ಯವಾಹಿನಿಯಲ್ಲಿ ಸೇರ್ಕೊಬೇಕು. ಎಲ್ಲ ರಾಜ್ಯಗಳಲ್ಲೂ ೨ ಭಾಷೆ ಸೂತ್ರ ಇಡ್ಲಿ. ಆ ರಾಜ್ಯದ ಭಾಷೆ ಮತ್ತು ಇಂಗ್ಲಿಷ್(ಸಧ್ಯದ ಪರಿಸಿತಿ ನೋಡಿದ್ರೆ ಇಂಗ್ಲಿಷ್ ಅನಿವಾರ್ಯ). ೩ ಭಾಷೆ ಸೂತ್ರ ನಮಗೆ ಬೇಡವೇ ಬೇಡ. ಭಾಷೆಗಳನ್ನು ಕಲಿಯೋದು ಅವರವರ ಆಸಕ್ತಿ. ಬಲವಂತವಾಗಿ ಹೇರೋದು ಸಲ್ಲದು.
@Anonymous,
ಗುರುವೇ, ಯಾರೋ ಒಬ್ಬ 'ಡಾಲ್ಡ' ತಿನ್ನೋ ವಯ್ಯ ಒಂದು ದಿನ ಕರ್ನಾಟಕಕ್ಕೇ ಬರ್ತಾನೆ ಅಂತ ೬ ಕೋಟಿ ಕನ್ನಡಿಗರಿಗೆ ಹಿಂದಿ ಹೇರಿಸೋದು ಎಷ್ಟರ ಮಟ್ಟಿಗೆ ಸರಿ? ಅದು ಬರೀ ಕನ್ನಡಿಗರಲ್ಲ, ಭಾರತದ ೬೩% ಜನಸಂಖ್ಯೆಗೆ ಹಿಂದಿ ತಾಯ್ನುಡಿಯಲ್ಲ.
ಅಷ್ಟಾಗಿ ಎಲ್ಲಾ ಭಾರತೀಯರು ಇಂಗ್ಲಿಷ ಅಂತ ಒಂದು ನುಡಿಯನ್ನ ಯಾಕೆ ಹುಟ್ಟಿದಾಗಲಿಂದ ಕಲಿತಾ ಇರೋದು? ಆ ಡಾಲ್ಡ ಬಡತದ್ದು ಕನ್ನಡ ಕಲಿಯೋಕೆ ಇಷ್ಟ ಇಲ್ಲ ಅಂದ್ರೆ, ಇಂಗ್ಲಿಶ್ ಮಾತಾಡಲಿ.
ಹಿಂದಿ ಗೆ ಮೂರು ಕಾಸು ಯೋಗ್ಯತೆ ಇಲ್ಲ, ಇಂಥ ಒಂದು ನುಡಿಗೆ ರಾಜ್ಯ ಭಾಷೆ ಸ್ಥಾನ, ಥೂ.
Ondhu baashe kalliyodralli enu thappu!!! kalthidhu yavaglaadru help aage aagthe... at the same time kannada nu ellaru kalibeku sakagidhe kannada baratha antha kelli kelli..
ಈ ವಿಷಯ ಗಂಭೀರವಾದ್ದು, ಒಬ್ಬ ಕವಿ ಹೇಳಿದ್ದಾನೆ "ಘೃತಮುಂ ತೈಲಮುಂ ಬೆರೆಸಲಕ್ಕುಮೇ" ಅಂತ ಅಂದ್ರೆ "ಕನ್ನಡ ಅನ್ನೋ ತುಪ್ಪವನ್ನೂ ತೈಲವನ್ನೂ ಬೆರೆಸಬಹುದೇ" ಅಂತ, ಅನ್ಯ ಭಾಷೆ ಕನ್ನಡದಲ್ಲಿ ಬೆರೆಸೋ ಬಗ್ಗೆ !
alla ivaru hindine yaake kalisbeku... tri-bhasha padhati namage beda ree.. dwi-bhasha padhathi saaku- 1 maatru bhashe innondu english.. ee moorane bhashe kalitu saadhisuvudenu illa.. bekadre cinema nodo, 1500-2000 kottu taragati seri hindi kali bahudu... ivara prakara hindi bhashikaru ati hechu addarinda hindi rashtra bhashe aagabeku antare... adre statistics helutte prapanchadalli bengali maatanaduvavara sankhye hindi bhashikariginta hechu, tamilu bhashe 4 rashtragalalli(singapura, india, srilanka, malaysia)aadalita bhaasheyagide, hindi ambegaliduva munchinindaloo iruva kannada, tulu & telugu bhashegalu enaagabeku... dwibhasha padhati olleyadu adu vidyarthigala melina ottadavannu swalpamattige kadime maaduttade...
we've no problem in learning another languge but we can learn it a anytime in life... it's not necessary to learn hindi at the time when we are still slurring in our mother tongue.. this is outrageous.. do u know-ppl prefer to take sanskrit & hindi as their 2nd & 3rd language after english in high school and pu boards.. reason being simple.. they get more marks which gets added to thier marks card.. guys face reality.. kannada is stunting because of our own ignorance.. no kannada girl or these so called highly educeted, literated people in our society response in kannada even tho their mother tongue is kannada... kannada has become a language of ppl from mandya, hubballi, mysooru, shivamogga, davanagere and few more districts.. it's our ignorance what actually is killing us.. oh my dear kannadigas wake up b4 we pay for it hugely.. only Costly thing other than KNOWLEDGE is IGNORANCE.. IGNORANCE KILLS... Jai hind jai karnataka
ella vote haaki gelsidivallappa Congress na.. anubhavisi eega.. innoo nodtaa iri enenaagutte anta!!!
jai Sonia Jai Itali!!!!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!