ಹೇಳುವುದು ಒಂದೂ... ಮಾಡುವುದು ಇನ್ನೊಂದು!!


ಈ ಚಿತ್ರ ನಲವತ್ತು ವರ್ಷಕ್ಕಿಂತ ಹಿಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯದು. ಆವತ್ತಿಗೂ ಇವತ್ತಿಗೂ ಪರಿಸ್ಥಿತೀಲಿ ಏನಾದ್ರೂ ವ್ಯತ್ಯಾಸಾ ಇದ್ಯಾ ಗುರು? ಬಾಯಲ್ಲಿ ಹಿಂದೀ ಹೇರಿಕೆ ಮಾಡಲ್ಲಾ ಅನ್ನೋದೂ ಆದ್ರೆ ವಾಸ್ತವದಲ್ಲಿ ಅದುನ್ನೇ ಮಾಡೋದನ್ನು ಅಂದಿಗೂ ಇಂದಿಗೂ ನಮ್ಮ ಭಾರತ ಸರ್ಕಾರ ಮುಂದುವರುಸ್ತಿರೋದ್ನ ನೋಡುತ್ತಾ ಇದ್ರೆ ಇವರಿಗೆ ಭಾರತದ ನಿಜವಾದ ಏಳಿಗೆ ಒಗ್ಗಟ್ಟು ಬೇಕಾಗಿಲ್ವಾ ಅನ್ನೋ ಅನುಮಾನ ಬರುತ್ತಲ್ವಾ ಗುರು?

7 ಅನಿಸಿಕೆಗಳು:

ಕಿಶೋರ್! ಅಂತಾರೆ...

ಓಹ್! ೪೦ ವರ್ಷದ ಹಿ೦ದೆಯೂ ಇದೇ ಕಥೆಯೇ? ಆಗಲೇ ನಮ್ಮಲ್ಲಿ ಹಿ೦ದಿ ಹೇರಿಕೆಯ ಬಗ್ಗೆ ಜಾಗೃತಿ ಮೂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಇತರೆ ಭಾರತೀಯರು ಹಿ೦ದಿ ಕಲಿಯುವುದಕ್ಕೆ ತಮ್ಮ ಕೈಮು೦ದೆ ಚಾಚಿದರು, ಹಿ೦ದಿ ಕಲಿತರು.. ಒಗ್ಗಟ್ಟು ಮೂಡುತ್ತದೆ ಎ೦ದುಕೊ೦ಡರು.. ಆದರೆ ಆದದ್ದೇನು?

೧) ತಮ್ಮ ತಮ್ಮ ನಾಡಿನ ನಡುವೆ ಬಿರುಕು ಬೀಳಲು ಹಿ೦ದಿ ಹೇರಿಕೆಯೇ ಕಾರಣವಾಯಿತು. ಒ೦ದು ರಾಜ್ಯ ಕ೦ಡರೆ ಇನ್ನೊ೦ದು ರಾಜ್ಯಕ್ಕೆ ಆಗಲ್ಲ.
೨) ಒಬ್ಬರ ಏಳ್ಗೆಗೂ ಮತ್ತೊಬ್ಬರ ಏಳ್ಗೆಗೂ ೧೦೦೦ ವರ್ಷಗಳ ಅ೦ತರ.
೩) ಏಳ್ಗೆ ಕಾಣದ ಹಿ೦ದಿ ರಾಜ್ಯಗಳು ಅಬ್ಬೇಪಾರಿಗಳ ರೀತಿ ಇನ್ನೊ೦ದು ರಾಜ್ಯಗಳಿಗೆ ನುಗ್ಗಿ ಅಲ್ಲಿಯವರಾಗದೆ ದೇಶದ್ರೋಹತನವನ್ನು ಎಸಗುತ್ತಿದ್ದಾರೆ. (ಆದರೂ ಆ ಗೂಬೆಗಳು ಕಾನೂನಿನ ರೀತಿಯಲ್ಲಿ ನಮಗಿ೦ತ ಹೆಚ್ಚು ದೇಶಭಕ್ತರೇ ಬಿಡಿ!! ಏಕೆ೦ದ್ರೆ ಅವರ ಬಾಯಲ್ಲಿ "ಭಾರತದ ಮಾತೃಭಾಷೆ" ಹೊರಡತ್ತೆ ಸ್ವಾಮಿ.. ಸುಮ್ನೆನಾ?)
೪) ತಮಿಳರು ಹಿ೦ದಿ ಕಲಿಯದೆ ಭಾರತೀಯರಾದರು, ಕನ್ನಡಿಗರು ಹಿ೦ದಿಯನ್ನು ಅರ್ಧ೦ಬರ್ಧ ಕಲಿತೂ ಕೂಡ ಭಾರಮಾತೆಯ "ನಿಜವಾದ" ಪುತ್ರರತ್ನಗಳಾಗದೆ ಉಳಿಹೋಗಿದ್ದಾರೆ.

ನನ್ನಿ,
ಕಿಶೋರ್!

Gnanadeep ಅಂತಾರೆ...

Service Selection Board - I went to SSB interview..SSB interview is meant for selecting ARMY, NAVY and Airforce Officers...

I shud go thru a GD round...Every one is discussing in Hindi..wat shud I do... I donno Hindi.,..

I lost in GD

Anonymous ಅಂತಾರೆ...

ಹಿಂದಿ ಹೇರಿಕೆಯ ಬಗ್ಗೆಯ ಬರಹಗಳು ಚನ್ನಾಗಿ ಮೂಡಿ ಬಂದಿವೆ.

ನನ್ನಿ!

ಸುಮ್ಸುಮ್ಕೆ ಅಂತಾರೆ...

ಹಿಂದಿಯನ್ನು ಆಗಲಿಂದಲೂ ಜನರಿಗೆ ಕಲಿಸುತ್ತಲೇ ಬಂದಿದ್ದಾರೆ ಎಂದಮೇಲೆ ಅದು ಎಷ್ಟು ದೊಡ್ಡ ಮೂರ್ಖತನವೆಂದು ತೋರುತ್ತದೆ! ಅದು ಜನರನ್ನು ಒಗ್ಗೂಡಿಸುವ ಭಾಷೆಯೇ ಆಗಿದ್ದಲ್ಲಿ ಒಂದು ಪೀಳಿಗೆಗೆ ಕಲಿಸಿದರೆ ಆ ಭಾಷೆ ನಂಟಾಗಿ ಮುಂದಿನ ಪೀಳಿಗೆಗೆ ತಾನಾಗಿಯೇ ಹರಿಯಬೇಕಿತ್ತು.

ಹೀಗೆ ಕೃತಕವಾಗಿ ಒಂದು ಭಾಷೆ ಇಡೀ ದೇಶದ ಜನರ ಮೇಲೆ ಹೇರಿ, ಅದಕ್ಕೆ ಸಾವಿರಾರು ಕೋಟಿ (ನಮ್ಮ) ಹಣ ಕರ್ಚು ಮಾಡಿ, ಈಗ ಇನ್ನೂ ದೇಶದ ಒಗ್ಗಟ್ಟು ಎಂಬುದನ್ನೇ ಸಾಧಿಸುತ್ತಿದ್ದೇವೆ ಎಂಬ ಮಾತಾಡುತ್ತಾರಲ್ಲ, ದೇಶ ಆಳುವುದು ಏನು ಮಕ್ಕಳಾಟ ಅಂದುಕೊಂಡಿದ್ದಾರಾ ಈ ಗುಬಾಲ್ ಗಳು!?

Lohith ಅಂತಾರೆ...

Nija ee hindhi herakhe ano bhootha metkonide yalargu... Mathu yetidre saku rastra bashe antare.... Adre aa athi budhivantarege yen gothu rastra bashe gintalu migilada ondu bashe ide antha...Aduve namma MATHRU BASHE ..

Nija gnanadeep avre nandu same case Army interview hogidaga GD alli horag bande...Selection committe heladu GD can be in english and hindi....Nan english in yella hindi....Heg irothe ante neve imagin madi

ಕುಮಾರವ್ಯಾಸ ಅಂತಾರೆ...

ನಾನು ಇಷ್ಟು ದಿನ ಹಿಂದಿ ಹೇರಿಕೆಯ ವಿರೋಧಿ ಆದರೂ ನನ್ನ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ, ಮಿಲಿಟರಿ ಬಗ್ಗೆ ಚಿಂತಿಸಿದಾಗ ಅನ್ನಿಸುತ್ತಿತ್ತು ಸೈನಿಕರಿಗೆಲ್ಲ ಇಂಗ್ಲಿಷ್ ಕಳಿಸುವುದು ಹೇಗೆ, is it a feasible solution? ಆದರೆ ಜ್ಞಾನದೀಪ್ ಮತ್ತು ಲೋಹಿತ್ ರ ಮಾತು ಕೇಳಿ ಅರಿವಾಯಿತು, ನಾವೆಲ್ಲಾ ಈ ಹಿಂದಿ ಹೇರಿಕೆಯ ಪ್ರಭಾವದಿಂದ ಪರೋಕ್ಷವಾಗಿ ಸೈನ್ಯಕ್ಕೇ ಸೇರುವುದಕ್ಕಾಗದೆ ವಂಚಿತರಾಗುತ್ತ ಇದ್ದೇವೆ. ಮಿಲಿಟರಿಯಲ್ಲಿ ಎಲ್ಲಾ ನಾರ್ತಿಗಳೇ ತುಂಬಿದ್ದಾರೆ.

Anonymous ಅಂತಾರೆ...

alla. ... isthella bashe bagge mathad thiralla.... PVR cinema ghe hodre, ticket counter nalli ninthu nivu helodhu "can i have 2 corner seats please antha".. illi english badlu kannada balasoke agalwa ???

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails