ಮಹಾರಾಷ್ಟ್ರ ಆತು, ಒರಿಸ್ಸಾ ಆತು... ಈಗ ಮಧ್ಯಪ್ರದೇಶದವರ ಪಾಳಿ ಚಾಲೂ ಆದಂಗೈತ್ರೀಪಾ! ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾನ್ ಅವ್ರ ಇಂಥಾ ಒಂದು ಹೇಳಕಿ, ಮತ್ತ ಬಿಹಾರಿಗಳು ಸುದ್ಯಾಗ ಬರಂಗ ಮಾಡೇತಲ್ರಿ ಗುರುಗಳ! ಚೌಹಾನ್ ಸಾಹೇಬ್ರ ಆ ಹೇಳಿಕಿ ಹೊರಬಿದ್ದದ್ದೇ ತಡ, ಬಿಹಾರದ ಮಂತ್ರಿ ಮಾಗದರೆಲ್ಲ ಬಾಲಸುಟ್ಟ ಬೆಕ್ಕಿನಂಗ ಆಡಕತ್ತಾರಂತಲ್ರೀ! ಈ ಸುದ್ದೀ ಭಾಳ ಥ್ರಿಲ್ಲಿಂಗ್, ಎದುಕ್ ಅಂದ್ರಾ ಈ ಮಾತ್ ಆಡಿರು ಸಾಹೇಬ್ರು ರಾಷ್ಟ್ರೀಯವಾದಿ, ರಾಷ್ಟ್ರೀಯ ಪಕ್ಷ ಆಗಿರೂ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅದಾರಾ ಅನ್ನೋದಾಗೈತಿ. ‘ಹ್ಞಾಂ! ರಾಷ್ಟ್ರೀಯ ಪಕ್ಷದ ಮಂದಿ ಹೀಂಗಾ ಪ್ರಾದೇಶಿಕ ಮಾತು ಅಂತಾರಾ? ತೆಗೀರೀ ಗುರುಗಳಾ’ ಅನ್ಬ್ಯಾಡ್ರೀಪಾ! ಈ ಸುದ್ದಿ 07.11.2009ರ ಡಿ.ಎನ್.ಏ ಪತ್ರಿಕೆಯಾಗ ಹತ್ತನೇ ಪುಟದಾಗೆ ಬಂದೈತ್ರೀಪಾ!
ಮಧ್ಯಪ್ರದೇಶದಾಗಿನ ನೌಕರೀ ಅಲ್ಲೀ ಮಂದೀಗಾ!
ಮಧ್ಯಪ್ರದೇಶ ರಾಜ್ಯದಾಗಿನ ಅಷ್ಟೂ ಕಂಪನಿಗಳು, ಕೆಲಸಕ್ಕ ಮಂದೀನ ತೊಗೋವಾಗ ಇನ್ಮುಂದಾ ಸ್ಥಳೀಯರನ್ನು ಬದಿಗೊತ್ತಿ ಬಿಹಾರದ ಮಂದಿಗೆ ಕೆಲಸ ನೀಡಂಗಿಲ್ಲಾ. ಮಧ್ಯಪ್ರದೇಶ ರಾಜ್ಯದ ಮಕ್ಕಳಿಗಾ ಮೊದಲು ಕೊಡ್ಬೇಕು, ನಮ್ ಮಂದೀಗಾ ಕೆಲಸಕ್ ತ್ರಾಸ್ ಇದ್ದಾಗ ಬಿಹಾರ, ಪಹಾರದಿಂದ ಮಂದೀನ ಇಲ್ಲಿಗ್ ಕರ್ಕೊಂಡ್ ಬಂದು ಕೆಲಸ ಕೊಡೋಣು ಆಗಬಾರ್ದು’ ಅಂತ ಚೌಹಾನ್ ಸಾಹೇಬರು ಅಂದಾರಂತ! ಅಷ್ಟಾ ಅಲ್ಲ ಮತ್ತಾ... ‘ಇಲ್ಲಿ ಉದ್ಯೋಗ ನಮ್ಮ ಯುವಜನರ ಹೊಟ್ಟೆಪಾಡು ಮತ್ತು ಅವರ ಬಾಳಿನ ವಿಷಯ, ಅದಕ್ಕ ಈ ಕೆಲ್ಸದ್ ವಿಷಯದಾಗ ಹೊರಗಿನವ್ರಿಗೆ ಯಾವುದೇ ಆಸ್ಪದ ನೀಡಂಗಿಲ್ಲ’ ಅಂತನೂ ಹೇಳ್ಯಾರೀಪಾ. ಮಧ್ಯಪ್ರದೇಶ ಮುಖ್ಯಮಂತ್ರಿಗೋಳ ಈ ನಿರ್ಧಾರ ‘ಆ ನೆಲದ ಮಕ್ಕಳಿಗೆ ಅವ್ರ ನೆಲದಾಗ ಬದುಕು ಕಟ್ಕೊಡೋ ದಿಕ್ಕಾಗ ತೊಗೊಂಡಿರೋ ಭಾರಿ ಚೊಲೋ ತೀರ್ಮಾನ’ ಅಂತ ಅನ್ಸೇ ಅನ್ಸುಸ್ತದಲ್ರೀ ಗುರುಗಳಾ? ‘ನಮ್ಮ ಜನರ ಬದುಕಿನ ಜವಾಬ್ದಾರಿ ನಮ್ ಮ್ಯಾಲೆ ಐತಿ’ ಅಂತ ಜ್ಞಾನೋದಯ ಆಗಿನೋ ಏನೋ, ಗುಜರಾತ್, ಮಹಾರಾಷ್ಟ್ರ ಮತ್ತು ಒರಿಸ್ಸಾದಮುಖ್ಯಮಂತ್ರಿಗಳು, ಇವತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಏನು ನಿಲುವಿಟ್ಟು ಕೊಂಡಾರೋ, ಅಂಥದೇ ಚೊಲೋ ನಿರ್ಧಾರಾನ ಹಿಂದೇನ ತೊಗೊಂಡಿದ್ರು.
ಹೊಯ್ಕೊಳಾಕ್ ಹತ್ತಿರೋ ಬಿಹಾರದ ಮಂತ್ರಿಗೋಳು!
ಬಿಹಾರದ ಮಂದೀ ಹೀಂಗಾ ಎಲ್ಲಾ ಕಡಿಯಿಂದ ಛೀ ಥೂ ಅನ್ನುಸ್ಕೊತಾ ಇರೋದ್ ನೋಡಿ ಅಲ್ಲಿನ ರಾಜಕೀಯ ಮಂದೀಗೇನಾರಾ ನಾಚಿಕಿ ಬಂತಂತಾ ಮಾಡೀರೇನೂ? ಅಂಥಾ ಖಬರ್ ನಮಗಂತೂ ಬಂದಿಲ್ರೀಪಾ! ಅಲ್ಲಿ ರಾಜಕಾರಣಿಗಳು ‘ಭಾರತದಾಗ ಮಂದೀ ಎಲ್ಲಾರಾ ಹೋಗಿ ಕೆಲಸ ಮಾಡೋ ಹಕ್ಕು ಅದಾ. ಅಂಥಾ ಹಕ್ಕುನ್ನಾ ನಮ್ ಸಂವಿಧಾನಾನೇ ಕೊಟ್ಟೇತಿ.’ ಅಂತಾ ಒದರೋದ್ರಾಗಾ ಅದಾರೀಪಾ! ತಮ್ ಮಂದಿ ಎದುಕ್ ಹೀಂಗಾ ಗುಳೆ ಹೊಂಟಾರಾ? ಹಾಂಗ್ ಹೋಗದಾಂಗ ನಮ್ ನಾಡಾಗಾ ಎಂಥಾ ಉದ್ದಿಮೆ ಕಟ್ಟೋಣು? ಹ್ಯಾಂಗಾ ವ್ಯವಸ್ಥಿ ಸರಿ ಮಾಡೋಣು? ಜನಸಂಖ್ಯಿ ಹ್ಯಂಗ್ ಕಮ್ಮಿ ಮಾಡೋಣು? ಅಂತ ಚಿಂತಿ ಮಾಡೋದರ ಬದಲಿಗೆ ಹಿಂಗ್ ತೋಳೇರಸಕ್ ಮುಂದಾದ್ರ ಹೆಂಗಾ? ನೀವೇ ಹೇಳಿ ಗುರುಗಳಾ! ಒಟ್ಟಿನಾಗ ‘ಬ್ಯಾರೆ ರಾಜ್ಯದಾಗಿನ ಕೆಲಸ ಬೊಗಸಿ ಇರೋದಾ ಬಿಹಾರದ ಮಂದೀಗಾ’ ಅಂತ ತಿಳ್ಕೊಂಡಂಗೈತಿ ಈ ಬಿಹಾರದ ಮಂತ್ರಿ ಮಂದಿ. ರೇಲು ಪರೀಕ್ಷಾ ಅನ್ನೂದು ಎಲ್ಲೇ ನಡೆದ್ರೂ ಬಿಹಾರದಿಂದ ಆ ಪರೀಕ್ಷೆ ನಡಿಯೋ ಊರಿಗೆ ಹಿಂಡು ಹಿಂಡಾಗಿ ಬಿಹಾರಿಗಳನ್ನ ಪುಗಸಟ್ಟಿ ರೈಲಾಗ್ ಕಳಸೋದ್ರಾಗ, ಅಲ್ಲೀ ರಾಜಕಾರಣಿಗೋಳು ಬಿಜಿ ಅದಾರಾ ಅಂತೀರೇನು? ಒಟ್ನಾಗಾ ಬಿಹಾರಾನ ಸರಿಯಾಗಿ ಅಭಿವೃದ್ಧಿ ಮಾಡಲಾಗದ ಅಲ್ಲೀ ರಾಜಕಾರಣಿಗಳಿಂದ ಇಡೀ ಭಾರತದ ಮೂಲಿಮೂಲಿ ಜನಕ್ ತ್ರಾಸಾಗಕ್ ಹತ್ತೇತಿ ಅನ್ನೂದಂತೂ ಖರೇ ಐತ್ರೀಪಾ! ಏನಂತೀರ್ರೀ ಸರಾ?
ಮಧ್ಯಪ್ರದೇಶದಾಗಿನ ನೌಕರೀ ಅಲ್ಲೀ ಮಂದೀಗಾ!
ಮಧ್ಯಪ್ರದೇಶ ರಾಜ್ಯದಾಗಿನ ಅಷ್ಟೂ ಕಂಪನಿಗಳು, ಕೆಲಸಕ್ಕ ಮಂದೀನ ತೊಗೋವಾಗ ಇನ್ಮುಂದಾ ಸ್ಥಳೀಯರನ್ನು ಬದಿಗೊತ್ತಿ ಬಿಹಾರದ ಮಂದಿಗೆ ಕೆಲಸ ನೀಡಂಗಿಲ್ಲಾ. ಮಧ್ಯಪ್ರದೇಶ ರಾಜ್ಯದ ಮಕ್ಕಳಿಗಾ ಮೊದಲು ಕೊಡ್ಬೇಕು, ನಮ್ ಮಂದೀಗಾ ಕೆಲಸಕ್ ತ್ರಾಸ್ ಇದ್ದಾಗ ಬಿಹಾರ, ಪಹಾರದಿಂದ ಮಂದೀನ ಇಲ್ಲಿಗ್ ಕರ್ಕೊಂಡ್ ಬಂದು ಕೆಲಸ ಕೊಡೋಣು ಆಗಬಾರ್ದು’ ಅಂತ ಚೌಹಾನ್ ಸಾಹೇಬರು ಅಂದಾರಂತ! ಅಷ್ಟಾ ಅಲ್ಲ ಮತ್ತಾ... ‘ಇಲ್ಲಿ ಉದ್ಯೋಗ ನಮ್ಮ ಯುವಜನರ ಹೊಟ್ಟೆಪಾಡು ಮತ್ತು ಅವರ ಬಾಳಿನ ವಿಷಯ, ಅದಕ್ಕ ಈ ಕೆಲ್ಸದ್ ವಿಷಯದಾಗ ಹೊರಗಿನವ್ರಿಗೆ ಯಾವುದೇ ಆಸ್ಪದ ನೀಡಂಗಿಲ್ಲ’ ಅಂತನೂ ಹೇಳ್ಯಾರೀಪಾ. ಮಧ್ಯಪ್ರದೇಶ ಮುಖ್ಯಮಂತ್ರಿಗೋಳ ಈ ನಿರ್ಧಾರ ‘ಆ ನೆಲದ ಮಕ್ಕಳಿಗೆ ಅವ್ರ ನೆಲದಾಗ ಬದುಕು ಕಟ್ಕೊಡೋ ದಿಕ್ಕಾಗ ತೊಗೊಂಡಿರೋ ಭಾರಿ ಚೊಲೋ ತೀರ್ಮಾನ’ ಅಂತ ಅನ್ಸೇ ಅನ್ಸುಸ್ತದಲ್ರೀ ಗುರುಗಳಾ? ‘ನಮ್ಮ ಜನರ ಬದುಕಿನ ಜವಾಬ್ದಾರಿ ನಮ್ ಮ್ಯಾಲೆ ಐತಿ’ ಅಂತ ಜ್ಞಾನೋದಯ ಆಗಿನೋ ಏನೋ, ಗುಜರಾತ್, ಮಹಾರಾಷ್ಟ್ರ ಮತ್ತು ಒರಿಸ್ಸಾದ
ಹೊಯ್ಕೊಳಾಕ್ ಹತ್ತಿರೋ ಬಿಹಾರದ ಮಂತ್ರಿಗೋಳು!
ಬಿಹಾರದ ಮಂದೀ ಹೀಂಗಾ ಎಲ್ಲಾ ಕಡಿಯಿಂದ ಛೀ ಥೂ ಅನ್ನುಸ್ಕೊತಾ ಇರೋದ್ ನೋಡಿ ಅಲ್ಲಿನ ರಾಜಕೀಯ ಮಂದೀಗೇನಾರಾ ನಾಚಿಕಿ ಬಂತಂತಾ ಮಾಡೀರೇನೂ? ಅಂಥಾ ಖಬರ್ ನಮಗಂತೂ ಬಂದಿಲ್ರೀಪಾ! ಅಲ್ಲಿ ರಾಜಕಾರಣಿಗಳು ‘ಭಾರತದಾಗ ಮಂದೀ ಎಲ್ಲಾರಾ ಹೋಗಿ ಕೆಲಸ ಮಾಡೋ ಹಕ್ಕು ಅದಾ. ಅಂಥಾ ಹಕ್ಕುನ್ನಾ ನಮ್ ಸಂವಿಧಾನಾನೇ ಕೊಟ್ಟೇತಿ.’ ಅಂತಾ ಒದರೋದ್ರಾಗಾ ಅದಾರೀಪಾ! ತಮ್ ಮಂದಿ ಎದುಕ್ ಹೀಂಗಾ ಗುಳೆ ಹೊಂಟಾರಾ? ಹಾಂಗ್ ಹೋಗದಾಂಗ ನಮ್ ನಾಡಾಗಾ ಎಂಥಾ ಉದ್ದಿಮೆ ಕಟ್ಟೋಣು? ಹ್ಯಾಂಗಾ ವ್ಯವಸ್ಥಿ ಸರಿ ಮಾಡೋಣು? ಜನಸಂಖ್ಯಿ ಹ್ಯಂಗ್ ಕಮ್ಮಿ ಮಾಡೋಣು? ಅಂತ ಚಿಂತಿ ಮಾಡೋದರ ಬದಲಿಗೆ ಹಿಂಗ್ ತೋಳೇರಸಕ್ ಮುಂದಾದ್ರ ಹೆಂಗಾ? ನೀವೇ ಹೇಳಿ ಗುರುಗಳಾ! ಒಟ್ಟಿನಾಗ ‘ಬ್ಯಾರೆ ರಾಜ್ಯದಾಗಿನ ಕೆಲಸ ಬೊಗಸಿ ಇರೋದಾ ಬಿಹಾರದ ಮಂದೀಗಾ’ ಅಂತ ತಿಳ್ಕೊಂಡಂಗೈತಿ ಈ ಬಿಹಾರದ ಮಂತ್ರಿ ಮಂದಿ. ರೇಲು ಪರೀಕ್ಷಾ ಅನ್ನೂದು ಎಲ್ಲೇ ನಡೆದ್ರೂ ಬಿಹಾರದಿಂದ ಆ ಪರೀಕ್ಷೆ ನಡಿಯೋ ಊರಿಗೆ ಹಿಂಡು ಹಿಂಡಾಗಿ ಬಿಹಾರಿಗಳನ್ನ ಪುಗಸಟ್ಟಿ ರೈಲಾಗ್ ಕಳಸೋದ್ರಾಗ, ಅಲ್ಲೀ ರಾಜಕಾರಣಿಗೋಳು ಬಿಜಿ ಅದಾರಾ ಅಂತೀರೇನು? ಒಟ್ನಾಗಾ ಬಿಹಾರಾನ ಸರಿಯಾಗಿ ಅಭಿವೃದ್ಧಿ ಮಾಡಲಾಗದ ಅಲ್ಲೀ ರಾಜಕಾರಣಿಗಳಿಂದ ಇಡೀ ಭಾರತದ ಮೂಲಿಮೂಲಿ ಜನಕ್ ತ್ರಾಸಾಗಕ್ ಹತ್ತೇತಿ ಅನ್ನೂದಂತೂ ಖರೇ ಐತ್ರೀಪಾ! ಏನಂತೀರ್ರೀ ಸರಾ?
3 ಅನಿಸಿಕೆಗಳು:
agadi khadak bardiri sarr,,
ee biharigolu, avnoun onthara parthenium kasa beldanga ella bekalli habbyaar alri,, idu yaako ati aatri.,, hinga iro baro naukri ella ivara tagondra,, naaven bhikshe bedaak hogonenri?
ಸಿಕ್ಕಿಂನವರು ಬಿಹಾರಿಗಳಿಂದ ಇಂತಾ ಸ್ಥಿತಿನೇ ಅನುಭವಿಸ್ತಾ ಇದಾರಂತೆ. ಅಲ್ಲಿಯ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೆ ಬಿಹಾರಿಗಳ ವಲಸೆ ತಡೆಯೋಕೆ ಕ್ರಮ ತೊಗೊಳ್ಳಿ ಅಂತ ಹೇಳಿರೋ ಸುದ್ದಿ ಬಂದಿದೆ.
http://www.zeenews.com/news576796.html
ಇಡೀ ಭಾರತದವ್ರೆಲ್ಲ ಛೀ ತು ಅಂತ ಅಂದ್ರು ಬಿಹಾರದ ಮಂತ್ರಿಗಳಿಗೆ ಬುದ್ಧಿ ಬರಲ್ಲ ಅನ್ಸುತ್ತೆ. ತಮ್ ರಾಜ್ಯ ಅಭಿವೃದ್ಧಿ ಮಾಡೋದು ಬಿಟ್ಟು ಎಲ್ಲಾ ಕಡೆ 'ಹಿಂದಿ ಕಲೀರಿ..ನಾವು ಎಲ್ಬೇಕಾದ್ರು ಕೆಲಸ ಮಾಡೋ ಹಕ್ಕಿದೆ' ಅಂತ ಡಂಗೂರ ಬಾರ್ಸಿಕೊನ್ಡೇ ಇರ್ತಾರೆ ಅನ್ಸುತ್ತೆ.
chanagide
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!