ಎಸ್ಸೆಮ್ಮೆಸ್ಸು!

ಭಾರತದಲ್ಲಿ 40 ಕೋಟಿಯಷ್ಟು ಜನ ಮೊಬೈಲು ಬಳಕೆದಾರರು ಇರೋದು ನಿಮಗೆ ಗೊತ್ತಿರ್ಬೋದು. ತಿಂಗಳೊಂದರಲ್ಲೇ ಸುಮಾರು ಒಂದು ಕೋಟಿ ಜನ ಹೊಸದಾಗಿ ಮೊಬೈಲು ಚಂದಾದಾರರು ಆಗ್ತಿರೋದೂ ನಿಮಗೆ ಗೊತ್ತಿರ್ಬೋದು. ಆದ್ರೆ ಅದರಲ್ಲಿ 10 ಕೋಟಿಗಿಂತಲೂ ಕಡಿಮೆ ಜನರು ಇಂಗ್ಲಿಶ್ ಬಲ್ಲವರು ಅಂತ ಗೊತ್ತಿತ್ತಾ? ಅಥವಾ ಆ ಹತ್ತು ಕೋಟಿ ಜನರಲ್ಲಿ SMS ಕಳಿಸುವಾಗ ಇಂಗ್ಲಿಶ್ ಬಳಕೆ ಮಾಡುವ ಜನ ಇನ್ನೂ ಕಡಿಮೆ ಅಂತ ನಿಮಗೆ ಗೊತ್ತಿತಾ? ಇತ್ತೀಚೆಗೆ ಎಕನಾಮಿಕ್ ಟೈಮ್ಸ್ ಅವರು ನವೆಂಬರ್ ತಿಂಗಳ 24ರಂದು ಇದೇ ಸುದ್ಧಿ ಹೊರತಂದವ್ರೆ.

ಇಲ್ಲಿ ಮೊಬೈಲು, ಎಸ್ಸೆಮ್ಮೆಸ್ಸು ಇಷ್ಟೇ ಇಲ್ಲ ವಿಷಯ. ಇಲ್ಲಿ ಟಾಕಿಯಾನ್ ಟೆಕ್ ಅವರು "ಕ್ವಿಲ್-ಪ್ಯಾಡ್" ಎಂಬ ಹೊಸದೊಂದು ತಂತ್ರಾಂಶ ಹೊರತಂದಿರೋದು ವಿಷಯ. ಈ ತಂತ್ರಾಂಶ ಉಪಯೋಗಿಸಿ ಯಾವುದೇ ಮೊಬೈಲ್ ಫೋನಿನಿಂದ ಕನ್ನಡ ಅಥವಾ ಬೇರೆ ನಾಲ್ಕೈದು ಭಾಷೆಗಳಲ್ಲಿ ಎಸ್ಸೆಮ್ಮೆಸ್ಸ್ ಕಳಿಸಬಹುದು ಅಂತೆಲ್ಲಾ ಹೇಳವ್ರೆ! ಇದು ಸಕ್ಕತ್ ಒಳ್ಳೇದಾಯ್ತು ಗುರು! ಮುಂದೆ ಕನ್ನಡದಾಗೇ ಆರಾಮಾಗಿ ಎಸ್ಸೆಮ್ಮೆಸ್ಸು ಕಳಿಸ್ಬೋದು, ಅಲ್ವ? ಈ ಕ್ವಿಲ್-ಪ್ಯಾಡ್ ಅಂತಹ ತಂತ್ರಾಂಶಗಳು ಎಲ್ಲಾ ಮೊಬೈಲುಗಳೊಳಗೆ ಹೊಕ್ಕೋದಂತೂ ಖಚಿತ ಗುರು!

ಪ್ರತ್ಯೇಕ ಮೊಬೈಲು ಕೊಳ್ಳದೇ ಕನ್ನಡದಲ್ಲಿ ಎಸ್ಸೆಮ್ಮೆಸ್ಸು ಕಳಿಸೋಕ್ಕೆ ಈ ತಂತ್ರಾಂಶ ಅವಕಾಶ ಮಾಡಿಕೊಟ್ಟಿದೆ. ಇದ್ರಿಂದ ಇದುವರೆಗೂ ಕಷ್ಟ ಪಟ್ಕೊಂಡು ಇಂಗ್ಲಿಶಿನಲ್ಲಿದ್ದ ಎಸ್ಸೆಮ್ಮೆಸ್ಸು ಓದುವ ಗೋಜು ನಿಲ್ಲುತ್ತೆ. ಆದರೆ ಇದರಲ್ಲಿ ಇನ್ನೂ ಎಸ್ಸೆಮ್ಮೆಸ್ಸು ಕಳಿಸಲು ಇಂಗ್ಲಿಶ್ ಬಳಕೆ ಬೇಕಾದ್ದರಿಂದ ಕೀಲಿಮಣೆಯೂ ಕನ್ನಡದಲ್ಲೇ ಇದ್ದರೆ ಇನ್ನೂ ಅನುಕೂಲ ಹೆಚ್ಚು. ಇಂತಹ ಅವಶ್ಯಕತೆಯನ್ನು ಅರಿತು ಮೊಬೈಲು ಉತ್ಪಾದಕರು ಈ ಅವಕಾಶವನ್ನು ತಮ್ಮ ಲಾಭವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕನ್ನಡಿಗ ಗ್ರಾಹಕರು ಮೊಬೈಲಿನಲ್ಲಿ ಕನ್ನಡದ ಬಳಕೆ ಹೆಚ್ಚು ಮಾಡಬೇಕು, ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನೂ ವ್ಯಕ್ತ ಪಡಿಸಿಬೇಕು, ಅಷ್ಟೆ!

1 ಅನಿಸಿಕೆ:

ಕಿಶೋರ್ ಅಂತಾರೆ...

ಟಾಕಿಯಾನ್ ಟೆಕ್ ರವರು ಬುದ್ದಿವ೦ತಿಕೆ ಉಪಯೋಗಿಸಿ ಕ್ವಿಲ್ ಪಾಡ್ ತ೦ತ್ರಾ೦ಶವನ್ನು ಮೊಬೈಲ್ ನಲ್ಲಿ ಅಳವಡಿಸುವ ವಿಧಾನವನ್ನು ಕ೦ಡುಹಿಡಿದಿದ್ದಾರೆ. ಇವರಿಗೆ ಶುಭವಾಗಲಿ. ಮಾರುಕಟ್ಟೆಯಲ್ಲಿ ಇವರನ್ನು ಅನುಸರಿಸಿ ಇನ್ನೂ ಹತ್ತು ಹಲವು ತ೦ತ್ರಾ೦ಶಗಳು ಬಿಡುಗಡೆಯಾಗೋದ್ರಲ್ಲಿ ಸ೦ಶವೇ ಇಲ್ಲ.

ಎಲ್ಲಕ್ಕಿ೦ತ ಮಿಗಿಲಾಗಿ ಇವರಿಗೆ ಕಾಣುತ್ತಿರುವ ಕನ್ನಡದ ಮಾರುಕಟ್ಟೆ, ನೋಕಿಯ, ಸ್ಯಾಮ್ಸ೦ಗ್ ಗಳ೦ತಹ ದೊಡ್ಡ ಕ೦ಪನಿಗಳಿಗೆ ಕಾಣದೆ ಇರುವುದು ನಿಜಕ್ಕೂ ವಿಪರ್ಯಾಸ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails