ಬೆಳಗಾವಿ ಮತ್ತು ಕೇಂದ್ರದ ಪ್ರಮಾಣಪತ್ರ


ಬೆಳಗಾವಿ ವಿಷಯವಾಗಿ ಕೇಂದ್ರ ಸರ್ಕಾರದೋರು ಇದು ಕರ್ನಾಟಕಕ್ಕೆ ಸೇರಿದ್ದು ಅನ್ನೋ ಒಂದು ಪ್ರಮಾಣ ಪತ್ರಾನ ಇತ್ತೀಚಿಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿತು. ಸುಮಾರು ನಾಲ್ಕು ವರ್ಷದ ಹಿಂದೇನೂ ಇದೇ ವಿಷಯವಾಗಿ ಇದೇ ಥರದ ಪ್ರಮಾಣಪತ್ರಾನ ಸಲ್ಲಿಸಿ ಎರಡೇ ದಿನದಲ್ಲಿ ವಾಪಸ್ಸು ಪಡ್ಕೊಂಡಿತ್ತು. ಆದ್ರೆ ಈ ಸಲದ ಪ್ರಮಾಣಪತ್ರಾನೇ ಅಂತಿಮ, ಯಾವ ಕಾರಣಕ್ಕೂ ಬದಲಾಯಿಸಲ್ಲಾ ಅನ್ನೋ ಮಾತನ್ನೂ ಹೇಳಿರೋದ್ರಿಂದ ಇದೇ ಅಂತಿಮ ಅಂದ್ಕೊಂಡು ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಡ್ತಿದಾರೆ ಗುರೂ!

ಕನ್ನಡಿಗರ ಪರ ನಿಂತ ಕೇಂದ್ರ!
ಅಂತರರಾಜ್ಯ ಸಮಸ್ಯೆಗಳ ವಿಷಯಕ್ಕೆ ಬಂದಾಗಲೆಲ್ಲಾ ಇದುವರೆಗೂ ಕೇಂದ್ರದ ನಿಲುವುಗಳು ಕರ್ನಾಟಕದ ಹಿತಕ್ಕೆ ಪೂರಕವಾಗಿ ಇದ್ದದ್ದು ಬಹಳ ಅಪರೂಪದ ಮಾತಾಗಿತ್ತು ಅಂದರೆ ತಪ್ಪಾಗಲಾರದು. ಈಗ ಬೆಳಗಾವಿ ವಿಷಯದಲ್ಲಿ ಕೇಂದ್ರ ಕರ್ನಾಟಕದ ಪರವಾಗಿ ಮಾತಾಡಿರೋದ್ರಿಂದ ಅಚ್ಚರಿಗೊಳಗಾಗಿರುವುದು ಬರೀ ಮಹಾರಾಷ್ಟ್ರ ಮಾತ್ರಾ ಅಲ್ಲಾ, ಕರ್ನಾಟಕವೂ ಕೂಡಾ. ಹೀಗಾಗಲು ಕಾರಣ 2005ರಿಂದೀಚಿಗೆ ಬೆಳಗಾವಿಯ ವಿಷಯವಾಗಿ ಕನ್ನಡಿಗರಲ್ಲುಂಟಾಗಿರೋ ಜಾಗೃತಿ, ಕನ್ನಡಿಗರ ಸಂಘಟಿತ ಬಲ ಪ್ರದರ್ಶನಗಳೇ ಕಾರಣ. ಒಟ್ನಲ್ಲಿ ಕೇಂದ್ರಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸೋದನ್ನು ನಿಲ್ಲಿಸಲು ಕನ್ನಡಿಗರಲ್ಲಿ ಉಂಟಾಗುವ ಜಾಗೃತಿ, ಒಗ್ಗಟ್ಟು, ರಾಜಕೀಯ ಪ್ರಜ್ಞೆಗಳೇ ಕಾರಣವಾಗಿದ್ದಲ್ಲಿ ಈ ದಿಕ್ಕಲ್ಲಿ ಮತ್ತಷ್ಟು ಕೆಲಸಗಳಾಗಬೇಕು ಅನ್ನೋದ್ರಲ್ಲಿ ಅನುಮಾನಾ ಇಲ್ಲಾ. ಅಲ್ವಾ ಗುರೂ!

2 ಅನಿಸಿಕೆಗಳು:

gangadhara ಅಂತಾರೆ...

I agree.. If we kannadigas unite, no one can beat us.

ಶ್ರೀನಿವಾಸ (ಬೆಳಗಾವಿ) ಅಂತಾರೆ...

ಮೊದಲು ಮರಾಠಿಗಳು "ಮರಾಠಿ ಸಂಸ್ಕೃತಿ"ಯ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ ಬೆಳಗಾವಿಯಲ್ಲಿ ಗದ್ದಲ ಎಬ್ಬಿಸುತ್ತಿದ್ದರು ಆದರೆ ಈಗ ಬೆಳಗಾವಿಯಲ್ಲಿ ಕನ್ನಡಿಗರ ಶಕ್ತಿ ನೋಡಿ ತೆಪ್ಪಗಾಗಿದ್ದಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails