ವಿಕ್ಷನರಿಯೆಂಬ ನುಡಿಕಡಲು!


ಅಂತರ್ಜಾಲ ಲೋಕದಲ್ಲಿ ವಿಕಿಪೀಡಿಯಾದೋರು ಕೊಡಮಾಡಿರೋ ಒಂದು ಮಾಯಾದಂಡ ಅಂದ್ರೆ ವಿಕ್ಷನರಿ. ಇದು ವಿಕಿ+ಡಿಕ್ಷನರಿ ಎಂಬ ಎರಡು ಪದಗಳ್ನ ಬೆರೆಸಿ ಮಾಡಿರೋ ಹೆಸರು. ಅಂತರ್ಜಾಲದಲ್ಲಿ ತನ್ನ ಇರುವಿಕೆಯನ್ನು ನೆಲೆ ನಿಲ್ಲಿಸಿ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಯಸೋ ಪ್ರತಿಯೊಂದು ಭಾಷೆಗೂ ಈ ತಾಣ ಅಮೃತ ಪಾನ.

ವಿಕ್ಷನರಿಯ ಮಹತ್ವ

ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು. ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ.

ಕನ್ನಡ ವಿಕ್ಷನರಿ ಅಂದು - ಇಂದು

ಸುಮಾರು ಒಂದು ವರ್ಷದ ಹಿಂದೆ (ಜೂನ್ 2009) ಕನ್ನಡ ವಿಕ್ಷನರಿಯಲ್ಲಿ ಇದ್ದ ಪದಗಳ ಮೊತ್ತ ಮುನ್ನೂರಕ್ಕಿಂತ ಕಮ್ಮಿ. ಇನ್ನೂರೈವತ್ತರ ಆಸುಪಾಸು. ಇಂತಹ ಸಂದರ್ಭದಲ್ಲಿ ಬನವಾಸಿ ಬಳಗವು ಕನ್ನಡ ವಿಕ್ಷನರಿಯನ್ನು ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿತು. ಸಮಾನ ಮನಸ್ಕರನ್ನು ಒಗ್ಗೂಡಿಸುವ, ಅಗತ್ಯ ಇರುವವರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ, ವಿಕ್ಷನರಿಯಲ್ಲಿ ಪದಗಳನ್ನು ತುಂಬುವ ಯೋಜನೆಯನ್ನು ರೂಪಿಸಿತು. ಕನ್ನಡಮ್ಮನ ಕೈಂಕರ್ಯಕ್ಕೆ ಕಂದಮ್ಮಗಳ ಕೊರತೆಯೇ? ಹತ್ತಾರು ಆಸಕ್ತರು ಈ ಕೆಲಸದಲ್ಲಿ ಕೈ ಜೋಡಿಸಿದರು. ಈ ಎಲ್ಲರ ಶ್ರಮದ ಫಲವಾಗಿ ಇಂದು ವಿಕ್ಷನರಿಯಲ್ಲಿ ಸುಮಾರು ಅರವತ್ತಾರು ಸಾವಿರದ ನೂರಾ ನಲವತ್ನಾಲ್ಕು(66, 144) ಪದಗಳಿವೆ. ಸಂಖ್ಯಾಬಲದಲ್ಲಿ ಕನ್ನಡವು ಜೂನ್ 2009ರಲ್ಲಿ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೇರಿದೆ. ಅತಿಹೆಚ್ಚು ಪದಗಳನ್ನು ಹೊಂದಿರುವ ಭಾರತೀಯ ಭಾಷೆ ತಮಿಳು. ಇದರಲ್ಲಿ ಒಂದು ಲಕ್ಷದ ಹತ್ತೊಂಬತ್ತು ಸಾವಿರದ ಎಂಟುನೂರಾ ಎಪ್ಪತ್ತೈದು (119,875) ಪದಗಳಿವೆ. ಕನ್ನಡದ ನಂತರದ ಸ್ಥಾನ ಮಲಯಾಳಮ್ದು. ಇದರಲ್ಲಿ ಐವತ್ತೊಂಬತ್ತು ಸಾವಿರದ ಒಂಬೈನೂರಾ ಐವತ್ತೊಂಬತ್ತು (59,959) ಪದಗಳಿವೆ. ನಂತರದ್ದು ತೆಲುಗಿನದ್ದು. ಇದರಲ್ಲಿ ಒಟ್ಟು ಮೂವತ್ನಾಲ್ಕು ಸಾವಿರದ ಏಳುನೂರಾ ಇಪ್ಪತ್ನಾಲ್ಕು (34, 724) ಪದಗಳಿವೆ. ಇಡೀ ವಿಶ್ವದಲ್ಲಿರೋ ಭಾಷೆಗಳನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ ಕನ್ನಡದ ಸ್ಥಾನ ಇಪ್ಪತ್ತೊಂದನೇದು.
ಬಹಳ ಚುರುಕಾಗಿ, ವೇಗವಾಗಿ ನಾವು ಮುಂದುವರೀತಾ ಇದೀವಿ ಗುರೂ! ಆದರೆ ಅಂತರ್ಜಾಲ ತಾಣದಲ್ಲಿ ಕನ್ನಡದ ನುಡಿಗುಡಿಯ ಈ ತೇರು ಎಳೆಯೋಕೆ ನಿಮ್ಮದೂ ಎರಡು ಕೈ ಸೇರಿದರೆ ಬೊಂಬಾಟಾಗಿರುತ್ತೆ. ನಿಮಗೂ ವಿಕ್ಷನರಿಗೆ ಕನ್ನಡ ಪದಗಳನ್ನು ಸೇರಿಸೋ ಮನಸ್ಸಿದ್ದಲ್ಲಿ ವಿಕ್ಷನರಿಯ ತಾಣಕ್ಕೆ ಭೇಟಿ ಕೊಡಿ. ಅಲ್ಲಿರೋ ಸಮುದಾಯ ಪುಟದಲ್ಲಿ ಹೇಗೆ ಪದ ಸೇರಿಸಬೇಕು ಅಂತಾ ಇದೆ. ಅದರಲ್ಲಿ ಬರೆದಿರೋ ರೀತೀಲಿ ಪದ ಸೇರಿಸಿದರೆ ಆಯ್ತು. ನಿಮಗೆ ನಮ್ಮೊಂದಿಗೆ ಕೈಜೋಡಿಸೋಕೆ ಆಸಕ್ತಿ ಇದ್ದಲ್ಲಿ sanjeeva@banavasibalaga.org ಗೆ ಒಂದು ಮಿಂಚೆ ಹಾಕಿ...ಗುರೂ!!

7 ಅನಿಸಿಕೆಗಳು:

samayakannada ಅಂತಾರೆ...

ಅತ್ಯುತ್ತಮ ಪ್ರಯತ್ನ ಸಂಜೀವ್‌. ಕನ್ನಡದಲ್ಲಿ ಲಕ್ಷಕ್ಕೂ ಹೆಚ್ಚು ಶಬ್ದಗಳಿವೆ ಎಂಬುದು ಒಂದು ಅಂದಾಜು. ಒಂದೇ ವಸ್ತುವಿಗೆ ವಿವಿಧ ಶಬ್ದಗಳೂ, ವಿವಿಧ ರೀತಿಯ ಬಳಕೆಗಳೂ ಇವೆ. ನೀವು ಹೇಳಿದಂತೆ, ಆಸಕ್ತರೆಲ್ಲ ಸೇರಿ ಶಬ್ದಭಂಡಾರವನ್ನು ಸಮೃದ್ಧವಾಗಿಸುತ್ತ ಹೋಗಬೇಕಿದೆ. ನನ್ನಿಂದಾಗಬಹುದಾದ ಪ್ರಯತ್ನವನ್ನೂ ಮಾಡುತ್ತೇನೆ.

ನಿಮ್ಮ ಪ್ರಯತ್ನಕ್ಕೆ ಮತ್ತೊಮ್ಮೆ ಅಭಿನಂದನೆಗಳು.

- ಚಾಮರಾಜ ಸವಡಿ
http://chamarajsavadi.blogspot.com
samayakannada@gmail.com

ಸಂಜೀವ ಅಂತಾರೆ...

ವಿಕ್ಷನರಿಯಲ್ಲಿ ಕನ್ನಡ ಪದಸಂಪತ್ತನ್ನು ಹೆಚ್ಚಿಸಲು "ರಾ ಸು ಮೇಟಿಕುರ್ಕಿ" ಮತ್ತು "ವಿವೇಕ್ ಶಂಕರ್" ಅವರ ಕೊಡುಗೆ ಮಹತ್ತರವಾದದ್ದು ಎಂದು ಹೇಳಲು ಸಂತೋಷವಾಗುತ್ತದೆ. ಪ್ರತೀ ತಿಂಗಳೂ ಸಾವಿರಾರು ಪದಗಳನ್ನು ತುಂಬಿ ಕನ್ನಡ ವಿಕ್ಷನರಿಯನ್ನು ಬಲಪಡಿಸಿರುವ ಇವರಿಗೆ ಬನವಾಸಿ ಬಳಗದ ವತಿಯಿಂದ ಧನ್ಯವಾದಗಳು

gangadhara ಅಂತಾರೆ...

Dhanyavaadagalu.. gangadhar.hari@gmail.com

Anonymous ಅಂತಾರೆ...

great keep going:)

Anonymous ಅಂತಾರೆ...

khandita maadona

Anonymous ಅಂತಾರೆ...

Visheshavagi Metikurki mattu Vivek shankar avarige dhnyavadagaLu.
wictionaryalli Hosa shadba serisuvag KANNADA lipi ayke hege maduvude tiLisitira. andare Kannada lipiyalli type maduvudu hege (Nanu prayatnisidag keval ENGLISH fonts type madalu ashte sashyavagata ittu)

ENDHENDIGU KANNADA ಅಂತಾರೆ...

ಧನ್ಯವಾದಗಳು .ಇದೆ ರೀತಿ ನಿಮ್ಮಗಳ ಕನ್ನಡದ ಸೇವೆ ಮುಂದುವರೆಯಲಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails