ಗಾಡ್ರೆಜ್ ಜಾಹೀರಾತು: ಆಡೂ ಆಟ ಆಡೂ...
26.9.10
ಇಂಥಾ ಒಂದು ಜಾಹೀರಾತು ಇವತ್ತಿನ ಪ್ರಜಾವಾಣಿಯ ಮೊದಲನೆ ಪುಟದಲ್ಲಿ ರಾರಾಜುಸ್ತಾ ಇದೆ ಗುರೂ! ಗಾಡ್ರೆಜ್ ಸಂಸ್ಥೆಯೋರು ಹೊರಡಿಸಿರೋ ಈ ಜಾಹೀರಾತು ಒಂದೊಳ್ಳೆ ಮಾರುಕಟ್ಟೆ ತಂತ್ರವಾಗಿದೆ ಅನ್ನೋದು ಕಾಣ್ತಾಯಿದೆ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸೋಕೆ ಅಂತಾ ಸಂಸ್ಥೆಗಳು ಟಿ.ವಿಗಳಲ್ಲಿ ಜಾಹೀರಾತು ಕೊಡೋದ್ರು ಜೊತೆ ಹೊಸ ಹೊಸ ಸ್ಪರ್ಧೆಗಳನ್ನು ಏರ್ಪಡಿಸೋದನ್ನು ನಾವೆಲ್ಲಾ ನೋಡ್ತಾನೆ ಇದೀವಿ. ಇದೂ ಅಂಥದ್ದೇ ಒಂದು ಸ್ಪರ್ಧೆ ಅನ್ನೋದು ಒಂದು ಲೆಕ್ಕದಲ್ಲಿ ನಿಜವೇ ಆದರೂ, ಗಾಡ್ರೆಜ್ ಸಂಸ್ಥೆ ಈ ಬಾರಿ ಭಾರತದ ಭಾಷಾ ವೈವಿಧ್ಯತೇನಾ ಗಮನಕ್ಕೆ ತೆಗೆದುಕೊಂಡಿರೋದು ಎದ್ದು ಕಾಣ್ತಿದೆ. ಇದು ಮೆಚ್ಚತಕ್ಕ ವಿಷಯವಾಗಿದೆ.
ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ
ಕರ್ನಾಟಕದಲ್ಲಿ "ಗೇಮ್ ಆಡಿ, ಲೈಫ್ ಛೇಂಜ್ ಮಾಡಿ" ಹೆಸರಲ್ಲಿ ಶುರುವಾಗ್ತಿರೋ ಈ ಕಾರ್ಯಕ್ರಮಾನಾ ತಮಿಳುನಾಡಿನಲ್ಲಿ ತಮಿಳಿನಲ್ಲಿ "ಗಾಡ್ರೆಜ್ ವಾಳ್ವೈ ಮಾಟ್ರಲಾಂ ವಾಂಗೋ " ಎಂದೂ, ಆಂಧ್ರಪ್ರದೇಶದಲ್ಲಿ ತೆಲುಗಿನಲ್ಲಿ "ಆಡಂಡಿ, ಲೈಫ್ ಮಾರ್ಚುಕೊಂಡಿ" ಎಂದೂ ಆಯಾಯಾ ಭಾಷೆಗಳಲ್ಲೇ ಮಾಡಲು ಗಾಡ್ರೆಜ್ ಸಂಸ್ಥೆ ಮುಂದಾಗ್ತಿದೆ. ಇದು ಒಳ್ಳೇ ನಡೆಯಾಗಿದೆ.
ನಮ್ಮೂರ ಎಫ್.ಎಂ ವಾಹಿನಿಗಳನ್ನು ಕೇಳುದ್ರೆ ಕಿವಿ ಮೇಲೆ ರಾಚೋದು ಹಿಂದೀ ಜಾಹೀರಾತುಗಳೇ. ಇದ್ಯಾಕಪ್ಪಾ ಹೀಗ್ ಮಾಡ್ತೀರಾ ಅಂದ್ರೆ "ನಮಗೆ ಎಲ್ಲಾ ದಿಲ್ಲಿಯಿಂದ ಬರುತ್ತೆ, ಮುಂಬೈಯಿಂದ ಬರುತ್ತೆ" ಅನ್ನೋ ಸಬೂಬು ಕೇಳುತ್ತೆ. ಅವರ ಪ್ರಕಾರ ಆಯಾ ಭಾಷೆಗಳಲ್ಲಿ ಜಾಹೀರಾತು ಮಾಡ್ಸಿ ಹಾಕೋದು ಖರ್ಚಿನ ಬಾಬತ್ತು. ಇರಲಿ. ಆದರೆ ಕನ್ನಡಿಗರನ್ನು ಕನ್ನಡದಲ್ಲೇ ಪರಿಣಾಮಕಾರಿಯಾಗಿ ಮುಟ್ಟೋಕೆ ಸಾಧ್ಯ ಅಂತಾ ಮನವರಿಕೆ ಆದವರು ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹೀರಾತು ಹಾಕಕ್ಕೆ ಹಿಂಜರಿಯಲಾರರು ಅಲ್ವಾ ಗುರೂ!
5 ಅನಿಸಿಕೆಗಳು:
ಪ್ರತಿಯೊಂದು product ಅನ್ನು ಅಥವಾ ಪ್ರತಿ ಟಿವಿ ರೇಡಿಯೋ ಅಥವಾ ಪೇಪರ್ ನಲ್ಲಿ ಈ ಕಂಪನಿಯವರ ಜೊತೆ ಜಗಳವಾಡಿಕೊಂದಿರಲು ಆಗುತ್ಯೇ? ಇದಕ್ಕೆಲ್ಲ ಕಾನೂನು ರೀತಿ ಒಂದು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಂದು ಅಂಗಡಿಯ ಹೆಸರು ಕನ್ನಡದಲ್ಲಿ ಇರಬೇಕು ಎಂದು ರೂಲ್ ಇರುವಂತೆ, ಪರಭಾಷಾ ಸಿನಿಮಾ ಗಳನ್ನೂ ಇಷ್ಟೇ ದಿನದ ನಂತರ ಬಿಡುಗಡೆ ಮಾಡಬೇಕು ಎಂದು ರೂಲ್ ಇರುವಂತೆ, ಈ ಜಹೀರಾತುಗಲಿಗು ಒಂದು ರೂಲ್ ಮಾಡಲು ಸಾಧ್ಯವೇ? ಒಂದು ರಾಜ್ಯದಲ್ಲಿ ನೀವು ಜಾಹಿರಾತನ್ನು ಹಾಕಬೇಕಿದ್ದರೆ ಆ ರಾಜ್ಯದ ಭಾಷೆಯಲ್ಲೇ ಹಾಕಬೇಕು ಎಂದು. ಅವರು ಮುಂಬೈ ಇನ್ದಲಾದರು ತರಲು ಡೆಲ್ಲಿ ಇನ್ದಲಾದರು ತರಲಿ ನಮ್ಮ ಭಾಷೆಗೆ ಭಾಷಾಂತರಿಸು ಮಗನೆ ಅಂತ ಹೇಳಬೇಕು ನಮ್ಮ ಕೋರ್ಟು.
ಇದೇನು ಬಲ್ಚೆನ್ನಾಗಿದೆ ಅಂತ ಅಂಥಾ ಆನಂದ ಪಡ್ತಿದ್ದೀರಾ ಸ್ವಾಮೀ? ಕನ್ನಡ ಅಕ್ಷರದಲ್ಲಿ "ಗೇಮ್ ಆಡಿ, ಲೈಫ್ ಚೇಂಜ್ ಮಾಡಿ" ಅಂತ ಬರ್ದಿದ್ದಾರಲ್ಲ - ಇದೇನು ಬಲು ಒಳ್ಳೆಯ ಕನ್ನಡವೇನು?
ವಾಂಗೋ ವಾಳ್ಕೆಯೈ ಮಾಟ್ರಲಾಂ ಅನ್ನೋ ತರಹ "ಆಟ ಆಡಿ, ಬಾಳನ್ನೇ ಬದ್ಲಾಯ್ಸಿಕೊಳ್ಳಿ" ಅಂತ ಏನಾದ್ರೂ ಇದ್ದಿದ್ರೆ ನಿಮ್ಮ ಮಾತಿಗೆ ಒಂದು ಅರ್ಥ ಇರ್ತಿತ್ತು.
ಆದರೂ, ಕನ್ನಡ ಜಾಹೀರಾತುಗಳನ್ನ (ಅಂದ್ರೆ ಕನ್ನಡ ಅನ್ನೋ ಹಣೆಪಟ್ಟಿಯಲ್ಲಿ ಟೀವೀಲಿ ಪ್ರಕಟ ಆಗೋ ಜಾಹೀರಾತುಗಳನ್ನ) ನೋಡ್ತಾ ಇದ್ರೆ, ಹೊಟ್ಟೆ ತೊಳಸಿಕೊಂಡು ಬರೋದು ಖಾತ್ರಿ. ೨೦% ಕನ್ನಡ ಪದಗಳೂ ಇರತ್ತೋ ಇಲ್ಲವೋ. ಇಂಗ್ಲಿಷ್, ಹಿಂದಿ (ಅಥವಾ ಒಮ್ಮೊಮ್ಮೆ ತಮಿಳಿನ) ವಾಕ್ಯ ರಚನೆ. ಇಷ್ಟು ಸಾಲದು ಅಂತ ಕಾಗುಣಿತವೂ ತಪ್ಪು ತಪ್ಪು.
ಮೊನ್ನೆ ಅಂತೂ ಒಂದನ್ನ ನೋಡಿ ತಲೆ ತಿರುಗಿ ಹೋಯ್ತು - "ನಿಮ್ಮ ಆಭರಣ ಚಿನ್ನನಾ ಇಲ್ಲ ತಾಬ್ರನಾ" ಅಂತೆ! ಅವರ ತಲೆಕಾಯಿ ಬುರುಡೆ!
http://thatskannada.oneindia.in/movies/headlines/2010/09/28-enthiran-changes-kfcc-rules.html
"ಎಂಧಿರನ್" ಬುರುಡೆ ಬಿಚ್ಚಿದ ಕೆಎಫ್‌ಸಿಸಿ! ಕೆ.ಎಫ್.ಸಿ.ಸಿ ನಡೆ ಮೆಚ್ಚುವಂಥದ್ದು....
ಇದ್ರಲ್ಲಿ ಕನ್ನಡವೆ ಇಲ್ಲ.. ಹಾಗಾಗಿ ಖುಶಿ ಪಡಬೇಕಾಗಿಲ್ಲ. ತಮಿಳು ಹಾಗು ತೆಲುಗಿನಲ್ಲಿ ಇರುವ ಹಾಗೆ ಪೂರ್ತಿ ಕನ್ನಡದಲ್ಲಿ ಜಾಹಿರಾತು ನೀಡಬೇಕು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!