ಕಲಿಕೆಯು: ಕಲಿಕೆಯ ಏರ್ಪಾಡಿನ ಚರ್ಚೆಗೊಂದು ಬ್ಲಾಗ್
24.10.10
ಒಂದು ನಾಡಿನ ಏಳಿಗೆ ಎನ್ನುವುದನ್ನು ನಾವಿಲ್ಲಿ ಆರ್ಥಿಕವಾದ ಏಳಿಗೆ ಎಂದು ಪರಿಗಣಿಸಿ ನೋಡಿದಾಗ, ನಾಡಿನ ಏಳಿಗೆಗೆ ಅದು ಅಳವಡಿಸಿಕೊಂಡಿರುವ ಕಲಿಕೆಯ ಪದ್ದತಿಯು ಚೆನ್ನಾಗಿ ಇರಬೇಕಾದ ಅಗತ್ಯವೂ ಕಾಣುತ್ತದೆ. ನಮ್ಮ ನಾಡಿನ ಮಕ್ಕಳ ಕಲಿಕೆಯು ಅತ್ಯುತ್ತಮವಾದಲ್ಲಿ ಅವರ ಪರಿಣಿತಿ, ಅರಿವಿನ ಆಳ-ಅಗಲಗಳು ಹೆಚ್ಚುವ ಮೂಲಕ ದುಡಿಮೆಯ ಹೆಬ್ಬಾಗಿಲು ನಾಡಿಗರ ಪಾಲಿಗೆ ತೆರೆದುಕೊಳ್ಳುತ್ತದೆ. ಆ ಮೂಲಕವೇ ನಾವು ಏಳಿಗೆ ಸಾಧಿಸಲು ಆಗುತ್ತದೆ. ಹಾಗಾಗಿ ಕಲಿಕೆ ಎನ್ನುವುದು ನಾವು ಗಮನ ನೀಡಬೇಕಾದ ಒಂದು ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿದೆ.
ಕಲಿಕೆಯು ಎಂಬ ಹೊಸ ಬ್ಲಾಗ್
ಬನವಾಸಿ ಬಳಗವು ಆಗ್ಗಿಂದಾಗ್ಗೇ ಕಲಿಕೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದರೂ, ಕಲಿಕೆಯ ವಿಷಯಗಳಿಗೆಂದೇ ಮೀಸಲಾದ ಅಂತರ್ಜಾಲ ತಾಣವೊಂದರ ಅಗತ್ಯವಿದೆ ಎಂದು ನಮಗನ್ನಿಸುತ್ತಲೇ ಇತ್ತು. ಈ ತಾಣದಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯಿರುವ ನಾಡಿಗರೆಲ್ಲಾ ಬಂದು ಚರ್ಚಿಸಬೇಕು ಅನ್ನುವ ಆಶಯ ನಮ್ಮದು. ಇಂತಹ ಆಶಯದ ಪೂರೈಕೆಗಾಗಿ "ಕಲಿಕೆಯು" ಎನ್ನುವ ಬ್ಲಾಗ್ ಒಂದನ್ನು ಆರಂಭಿಸಿದ್ದೇವೆ. ಸದರಿ ಬ್ಲಾಗ್‍ನಲ್ಲಿ ಈಗಾಗಲೇ ಅನೇಕ ಬರಹಗಳನ್ನು ಪ್ರಕಟಿಸಿದ್ದೇವೆ ಕೂಡಾ. ಈ ತಾಣದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಮತ್ತು ಕಲಿಕೆಯ ಏರ್ಪಾಡಿನ ಬಗ್ಗೆ ಅಸಕ್ತಿ ಹೊಂದಿರುವ ನಿಮ್ಮ ಪರಿಚಿತರನ್ನೂ ಇಲ್ಲಿಗೆ ಕರೆತನ್ನಿ ಎಂಬ ಕರೆಯನ್ನು ಈ ಮೂಲಕ ನೀಡುತ್ತಿದ್ದೇವೆ.
1 ಅನಿಸಿಕೆ:
ಬಾಳಾ ಧನ್ಯವಾದ ಗುರು. ಕಲಿಕೆ ಬಗ್ಗೆ ನನ್ ಸಂಕಟ ಅಂಚ್ಕೋಕೆ ಒಳ್ಳೇ ವೇಧಿಕೆ ಸಿಕ್ತು. ನಾನ್ ಸೀ ಬೀ ಎಸ್ ಸೀ ನಲ್ಲಿ ಕಲ್ತಿದ್ರೂ, ನಂ ತಂದೆ ಮೇಸ್ಟ್ರಾಗಿದ್ರಿಂದ ಕರ್ನಟ್ಕುದ್ ಇತಿಹಾಸನ ಓದೂ ಅವ್ಕಾಸ ಇತ್ತು. ಆದ್ರೆ ನಂ ಸೋದ್ರು ಮಾವುನ್ ಮಕ್ಳು ಪ್ರೈವೇಟ್ ಸೀ ಬೀ ಎಸ್ ಈ ಸ್ಕೂಲ್ ನಲ್ ಕಲಿತಿರೋದ್ ನೋಡುದ್ರೆ ಭಯ ಆಯ್ಥುದೆ. ವಿಷ್ಯ ಬಾಳಾ ಗಂಬೀರ್ವಾದುದ್ದು. ಮುಟ್ಟಾಳ್ ಸರ್ಕಾರುಕ್ಕೆ ಯಾವಾಗ್ ಅರ್ಥ ಅಗುತ್ತೋ ಕಾಣೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!