ನವೋದಯ ಶಾಲೆ: ಸಿಹಿ ಮೆತ್ತಿದ ಹಿಂದೀ ವಿಷ!


ಭಾರತ ಸರ್ಕಾರವು 1985ರಲ್ಲಿ ಶುರುಮಾಡಿದ ಒಂದು ಹೊಸಬಗೆಯ ವಿಶಿಷ್ಟವಾದ ಕಲಿಕಾ ಪದ್ದತಿಯ ಹೆಸರೇ “ನವೋದಯ ವಿದ್ಯಾಲಯ ವ್ಯವಸ್ಥೆ”. ಇದರ ಅತ್ಯಾಕರ್ಷಕ ಅಂಶವೆಂದರೆ ಇದರ ಘೋಷಿತ ಉದ್ದೇಶ. “ಭಾರತದಲ್ಲಿರುವ ಪ್ರತಿಭಾವಂತರೂ, ಬಡವರೂ, ಹಳ್ಳಿಯವರೂ ಆಗಿರುವ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು.” ಈ ನವೋದಯ ವಿದ್ಯಾಲಯ ಪದ್ದತಿಗಾಗೇ ಕೇಂದ್ರಸರ್ಕಾರ ಕೋಟಿಗಟ್ಟಲೆ ಹಣ ಮೀಸಲಿಟ್ಟಿದೆ. ಈ ಕಲಿಕಾ ಏರ್ಪಾಟಿನಲ್ಲಿ ನಮ್ಮ ತೆರಿಗೆ ಹಣ ಖರ್ಚಾಗುವುದು ಹಿಂದೀಹೇರಿಕೆಗಾಗಿ ಎಂಬುದೇ ದಿಟವಾಗಿದೆ.

ಮೇಲೆ ಮೆತ್ತಿರುವ ಸಿಹಿ!

ಇಡೀ ಭಾರತದಲ್ಲಿ ಇದನ್ನು ಸ್ಥಾಪಿಸುವಾಗ ಹೇಳಿದ ಉದ್ದೇಶಗಳು ಬಡಮಕ್ಕಳಿಗೆ ಅದರಲ್ಲೂ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು. ನಿಜಕ್ಕೂ ಎಂತಹ ಅದ್ಭುತವಾದ ಕಾರ್ಯಕ್ರಮ ಇದು. ನಮ್ಮ ಹಳ್ಳಿಗಾಡುಗಳಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಪಟ್ಟಣಿಗರಿಗೆ ಸಿಗುತ್ತಿರುವ ಕಲಿಕೆ ಸಿಗದಿರುವಂತಾಗಿರುವುದನ್ನು ಸರಿಪಡಿಸಲು ಈ ಕ್ರಮ ತೆಗೆದುಕೊಳ್ಲಲಾಗಿದೆ ಎನ್ನಿಸುವುದು ಸಹಜ. ಇಲ್ಲಿ ಉಚಿತವಾದ ವಸತಿ ನಿಲಯ, ಊಟ, ಬಟ್ಟೆಯ ವ್ಯವಸ್ಥೆಗಳಿವೆ. ಶುಲ್ಕ ತಿಂಗಳಿಗೆ 200 ರೂಪಾಯಿ ಮಾತ್ರಾ. ಪರಿಶಿಷ್ಟ ಜಾತಿ, ವರ್ಗ, ಬಡವರು, ಹೆಣ್ಣುಮಕ್ಕಳಿಗಂತೂ ಸಂಪೂರ್ಣ ಉಚಿತ. ಇಲ್ಲಿನ ಶಾಲೆಗಳಲ್ಲಿ ಅದ್ಭುತವಾದ ಮೂಲಸೌಕರ್ಯಗಳಿವೆ. ಪ್ರತಿ ಶಾಲೆಯೂ ಹಳ್ಳಿಯ ಪರಿಸರದಲ್ಲಿದ್ದು ಸುಮಾರು ಐದು ಎಕರೆ ಪ್ರದೇಶವನ್ನು ಹೊಂದಿರುತ್ತದೆ. ಇಲ್ಲಿನ ಶಿಕ್ಷಕರೂ ಕೂಡಾ ಪ್ರತಿಭಾನ್ವಿತರಿಂದಲೇ ಕೂಡಿರುತ್ತಾರೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಎನ್.ಸಿ.ಸಿ, ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್, ಕಲೆ, ಸಾಹಿತ್ಯ, ಆಟೋಟಗಳಲ್ಲಿ ವಿಫುಲವಾದ ಅವಕಾಶಗಳಿವೆ. ಹೇಳಿ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೆ ಯಾರಿಗೆ ತಾನೆ ಈ ವ್ಯವಸ್ಥೆ ಇಷ್ಟವಾಗೋಲ್ಲ. ಇವೆಲ್ಲಾ ಮೇಲೆ ಮೆತ್ತಲಾಗಿರುವ ಸಿಹಿ ಮಾತ್ರಾ.

ಒಳಗಿನ ಕಹಿ ವಿಷ!

ಪ್ರತಿಜಿಲ್ಲೆಯ ಒಂದೊಂದು ಹಳ್ಳಿಯಲ್ಲಿ ತೆಲೆಯೆತ್ತಿರುವ ಈ ವಿದ್ಯಾಲಯಗಳಲ್ಲಿ ವಿಜ್ಞಾನ, ಗಣಿತಗಳನ್ನು ಮಾತ್ರಾ ಇಂಗ್ಲೀಷಿನಲ್ಲಿ ಕಲಿಸಲಾಗುತ್ತದೆ. ಉಳಿದದ್ದನ್ನೆಲ್ಲಾ ತಾಯ್ನುಡಿಯಲ್ಲಿ ಎಂದುಕೊಂಡರೆ.... ಊಹೂಂ... ಹಿಂದೀಭಾಷೆಯಲ್ಲಿ ಕಲಿಸಲಾಗುತ್ತದೆ. ಇದರ ಉದ್ದೇಶದಲ್ಲಿನ ಈ ಸಾಲುಗಳು ಅದಕ್ಕೆ ತ್ರಿಭಾಷಾ ಸೂತ್ರದ ಅನ್ವಯವೆನ್ನುವ ನಿಯಮದತ್ತ ಕೈತೋರುತ್ತಾ ಹೀಗೆನ್ನುತ್ತಿವೆ...

Adherence to Three Language Formula
The Regional Language is generally the medium of instruction from Class-VI to VIII and from Class- IX onwards, it is English for Science and Mathematics and Hindi for Humanities subjects.
ಕರ್ನಾಟಕದ ನವೋದಯ ಶಾಲೆಗಳಲ್ಲಿ ಆರು, ಏಳು ಮತ್ತು ಎಂಟನೇ ತರಗತಿಗಳಲ್ಲಿ ಕಲಿಕಾ ಮಾಧ್ಯಮವು ಕನ್ನಡವಾಗಿರುತ್ತದೆ. ಒಂಬತ್ತನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲೀಷಿನಲ್ಲೂ ಸಮಾಜಶಾಸ್ತ್ರದಂತಹ ಉಳಿದವುಗಳನ್ನು ಹಿಂದೀಯಲ್ಲಿ ಕಲಿಸಲಾಗುತ್ತದೆ.

ಒಂಬತ್ತನೇ ತರಗತಿಯ ಮಕ್ಕಳಲ್ಲಿ ಶೇಕಡಾ 30ರಷ್ಟು ಮಂದಿಯನ್ನು ಆರಿಸಿ ಹಿಂದೀ ಪ್ರದೇಶದಲ್ಲಿರುವ ಶಾಲೆಗೆ ವರ್ಗ ಮಾಡಲಾಗುತ್ತದೆ. ಭವ್ಯ ಭಾರತದ ರಾಷ್ಟ್ರೀಯ ಏಕತೆಯನ್ನು ಆ ಮೂಲಕ ಗಟ್ಟಿಗೊಳಿಸಲಾಗುತ್ತದೆಯಂತೆ. ಹಿಂದೀ ಭಾಷಿಕ ಪ್ರದೇಶದ ಮಕ್ಕಳನ್ನು ಹಿಂದಿಯೇತರ ಪ್ರದೇಶದ ಶಾಲೆಗೆ ವರ್ಗಾಯಿಸುತ್ತಾರಂತೆ.


Promotion of National Integration
Navodaya Vidyalayas aim at inculcating values of national integration through migration scheme though which the inter regional exchange of students between Hindi and Non-Hindi speaking States and vice-versa takes place for one academic year. Efforts are made to promote better understanding of the unity in diversity and cultural heritage through various activities.

ಮೇಲುನೋಟಕ್ಕೆ ಎಂತಹಾ ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶ ಇದರಲ್ಲಿ ಕಂಡರೂ ಒಳಗಿನ ಮರ್ಮವೇ ಬೇರೆ. ಮೊದಲಿಗೆ ಇಲ್ಲಿ ಹಿಂದೀ ಮತ್ತು ಹಿಂದಿಯೇತರ ಎಂಬ ವಿಭಾಗಗಳೇ ಏಕೆ? ಇದು ಹಿಂದಿಯನ್ನೊಂದು ಕಡೆ, ಉಳಿದೆಲ್ಲಾ ಭಾಷೆಗಳನ್ನು ಇನ್ನೊಂದುಕಡೆ ಮಾಡಿದಂತಲ್ಲವೇ? ಭಾವೈಕ್ಯತೆ ಬೆಸೆಯಲು ಅಂತರರಾಜ್ಯ ವರ್ಗಾವಣೆ ಅಂದಿದ್ದರೆ ಸಾಕಿರಲಿಲ್ಲವೇ?
ಇದರಂತೆ ಹಿಂದೀಭಾಷಿಕ ವಿದ್ಯಾರ್ಥಿ ಕನ್ನಡನಾಡಿಗೆ ವರ್ಗವಾಗಿ ಬಂದರೂ ಇಡೀ ಶಾಲೆಯಲ್ಲಿನ ಕಲಿಕಾ ಮಾಧ್ಯಮವೇ ಹಿಂದಿಯಾಗಿರುವಾಗ, ಶಾಲಾ ಆಡಳಿತವೆಲ್ಲಾ ಹಿಂದಿಯಲ್ಲಿ ನಡೆಯುವಾಗ ಹಿಂದಿಯೇತರ ನಾಡಿನ ಸೊಗಡನ್ನು ಅರಿಯಲು ಹೇಗೆ ಮತ್ತು ಎಷ್ಟರಮಟ್ಟಿಗೆ ಸಾಧ್ಯ? ಇನ್ನು ಇಂತಹ ವಿದ್ಯಾರ್ಥಿಗಳ ಜೊತೆ ಸಹಪಾಟಿಗಳೆಲ್ಲಾ ಹಿಂದಿಯಲ್ಲಿ ವ್ಯವಹರಿಸದೆ ಇರಲು ಸಾಧ್ಯವೇ? ಇಂತಹುದೇ ಪರಿಸ್ಥಿತಿ ಕನ್ನಡದ ವಿದ್ಯಾರ್ಥಿ ಹಿಂದೀ ಪ್ರದೇಶಕ್ಕೆ ಹೋದರೆ ಇರುತ್ತದೆಯೇ? ಊಹೂಂ... ಆತ/ ಆಕೆ ಅರೆಹಿಂದಿ ವಾತಾವರಣದಿಂದ ಸಂಪೂರ್ಣ ಹಿಂದೀ ವಾತಾವರಣಕ್ಕೆ ತೆರೆದುಕೊಳ್ಳಬೇಕಾಗುತ್ತದೆ. ನವೋದಯ ಶಾಲೆಯ ಆಡಳಿತವೆಲ್ಲಾ ಹಿಂದಿಯಲ್ಲಿರುತ್ತದೆ ಎನ್ನಲು ಹಿಂದಿ ಜಾರಿಗೊಳಿಸುವಲ್ಲಿ ನವೋದಯ ಶಾಲೆಗಳದ್ದು ಮೊದಲ ಸಾಲಿನ ಸ್ಥಾನವಾಗಿದೆ ಅನ್ನುವುದೇ ಸಾಕು. ಒಟ್ಟಾರೆ ಈ ವರ್ಗಾವಣೆಗಳು ರಾಷ್ಟ್ರೀಯ ಏಕತೆಯನ್ನು ಪೊರೆಯುವುದಕ್ಕಿಂತಾ ಕನ್ನಡದ ಮಕ್ಕಳಿಗೆ ಹಿಂದೀನಾಡಿನ ಪ್ರಾಕ್ಟಿಕಲ್ ಅನುಭವ ನೀಡುವ ತರಗತಿಗಳಾಗುತ್ತವೆ ಅನ್ನುವುದೇ ಹೆಚ್ಚು ಸತ್ಯ.

ನಿಜವಾದ ಉದ್ದೇಶ!

ವಾಸ್ತವವಾಗಿ ಈ ಶಾಲೆಗಳ ನಿಜವಾದ ಉದ್ದೇಶವೇ ಹಿಂದೀ ಹೇರಿಕೆಯಾಗಿದೆ. ಎಳವೆಯಲ್ಲೇ ತಲೆಯಲ್ಲಿ ಹಿಂದೀ ಭಾಷೆ ಭಾರತದ ಒಗ್ಗಟ್ಟಿಗೆ ರಾಷ್ಟ್ರೀಯತೆಗೆ ಅಗತ್ಯ ಎನ್ನುವ ಪೊಳ್ಳನ್ನು ತುಂಬಲ್ಪಟ್ಟ ಮಕ್ಕಳಲ್ಲಿ ಇನ್ಯಾವ ಭಾವನೆ ತಾನೇ ಹುಟ್ಟೀತು? ಇಷ್ಟಕ್ಕೂ ಈ ಇಡೀ ಯೋಜನೆಯ ಉದ್ದೇಶ ಹಿಂದಿಹೇರಿಕೆಯಲ್ಲದಿದ್ದರೆ, ಇದು ಭಾರತೀಯ ಆಡಳಿತ ಭಾಷಾ ಕಾಯ್ದೆಯ/ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಿದ್ದರೆ ಈ ಪದ್ದತಿ ತಮಿಳುನಾಡಿಗೆ ಮಾತ್ರಾ ಅನ್ವಯಿಸುವುದಿಲ್ಲ ಏಕೆ? ಒಟ್ಟಾರೆ ಕರ್ನಾಟಕದ 27 ಶಾಲೆಗಳಲ್ಲಿ ಪ್ರತಿವರ್ಷ ಸೇರಿಸಿಕೊಳ್ಳುವ 2000 ಮಕ್ಕಳು ಈ ಪದ್ದತಿಯಲ್ಲಿ ಕಲಿತು ಹೊರಬರುವಾಗ ಹಿಂದೀ ದೇವತೆಯ ಪದತಲದಲ್ಲಿ ತಾಯ್ನುಡಿಯ ಬಲಿಕೊಟ್ಟೇ ಹೊರಬರುತ್ತಾರೆ ಎಂಬುದು ಆತಂಕಕಾರಿಯಾಗಿದೆ. ಈ ವಿಷಯ ಮನದಟ್ಟಾಗಲು ಇಲ್ಲೊಂದು ಸಣ್ಣ ಸ್ಯಾಂಪಲ್ ಮಾಹಿತಿ ಇದೆ ನೋಡಿ. ನವೋದಯ ಶಾಲೆಯ ಮಾಜಿ ವಿದ್ಯಾರ್ಥಿಗಳ ಸ್ನೇಹ ಕೂಟವೊಂದರಲ್ಲಿ ಭಾರತಕ್ಕೆ ಸೂಕ್ತವಾದ ರಾಷ್ಟ್ರಭಾಷೆ ಯಾವುದು ಎನ್ನುವ ಸಮೀಕ್ಷೆ ಮಾಡಿದ್ದಾರೆ. ನೂರಕ್ಕೆ ಎಂಬತ್ತೇಳು ಜನರು ಹಿಂದೀ ಎಂದು ಬರೆದಿದ್ದರೆ ಹನ್ನೆರಡರಷ್ಟು ಜನ ಇಂಗ್ಲೀಷ್ ಎಂದಿದ್ದಾರೆ. ಅಂದರೆ ಎಂಟರಲ್ಲಿ ಏಳುಜನ ಹಿಂದಿ ಪರವಾಗಿ ಮತ ಚಲಾಯಿಸಿದ್ದಾರೆ. ಧನ್ಯ... ಭಾರತ... ಧನ್ಯ. ನಮ್ಮೆಲ್ಲರ ಕೋಟಿಗಟ್ಟಲೆ ತೆರಿಗೆ ಹಣ ಹಿಂದೀ ಪ್ರಚಾರಕ್ಕೆ ವ್ಯಯಿಸಿದ್ದಕ್ಕೂ ಸಾರ್ಥಕವಾಯಿತು ಅಲ್ಲವೇ?

18 ಅನಿಸಿಕೆಗಳು:

Yeshu ಅಂತಾರೆ...

Boss don't be a fool...Hind is our national language. Be an Indian first and then we are proud Kannadiga's. More than anything else, they teach the discipline and human values.
Stop all these nonsense articles. Hindi is not a compulsory language in Navodaya. After 8th standard we study other subjects(maths,science,social) in english. We also have languages Eng, Kannada and Hindi. In 10th standard we have only 2 languages i.e Kannada and English but No Hindi.

lohith s wodeyar ಅಂತಾರೆ...

ನನ್ನ ಹೆಸರು ಲೋಹಿತ್ ,ನಾನು ಶಿವಮೊಗ್ಗ ನವೋದಯದ ಹಳೆಯ ವಿದ್ಯಾರ್ಥಿ(1994-2001) ..
ನನ್ನ ಏಳು ವರ್ಷ ನವೋದಯ ಅನುಭವವನ್ನು ಇಲ್ಲಿ ತಿಳಿಯ ಪಡಿಸುತ್ತೇನೆ ..

೧.ಒಂಬತ್ತನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲೀಷಿನಲ್ಲೂ ಸಮಾಜಶಾಸ್ತ್ರದಂತಹ ಉಳಿದವುಗಳನ್ನು ಹಿಂದೀಯಲ್ಲಿ ಕಲಿಸಲಾಗುತ್ತದೆ

ನನ್ನ ಅನುಭವದಲ್ಲಿ ಯಾವತ್ತೂ ಹಿಂದಿಯಲ್ಲಿ ಮಾಡಿಲ್ಲ ..from 9th ನಾವು ಇಂಗ್ಲಿಷ್ನಲ್ಲಿ ಓದಬೇಕು ..ಆದ್ರೆ ಕನ್ನಡ ಮೀಡಿಯಂ ಇಂದ ಬಂದವರಿಗೆ ಕಷ್ಟ ಆಗುತ್ತಿತ್ತು ,,ಆಗ ಎಷ್ಟೋ teachers ಕನ್ನಡದಲ್ಲಿ ಪುನಃ ಹೇಳಿಕೊಡುತಿದ್ದರು..

೨. ಭಾವೈಕ್ಯತೆ ಬೆಸೆಯಲು ಅಂತರರಾಜ್ಯ ವರ್ಗಾವಣೆ ಅಂದಿದ್ದರೆ ಸಾಕಿರಲಿಲ್ಲವೇ?

ಇದಕ್ಕೆ ನನ್ನ ಸಹಮತವಿದೆ..

೩. ಇದರಂತೆ ಹಿಂದೀಭಾಷಿಕ ವಿದ್ಯಾರ್ಥಿ ಕನ್ನಡನಾಡಿಗೆ ವರ್ಗವಾಗಿ ಬಂದರೂ ಇಡೀ ಶಾಲೆಯಲ್ಲಿನ ಕಲಿಕಾ ಮಾಧ್ಯಮವೇ ಹಿಂದಿಯಾಗಿರುವಾಗ, ಶಾಲಾ ಆಡಳಿತವೆಲ್ಲಾ ಹಿಂದಿಯಲ್ಲಿ ನಡೆಯುವಾಗ ಹಿಂದಿಯೇತರ ನಾಡಿನ ಸೊಗಡನ್ನು ಅರಿಯಲು ಹೇಗೆ ಮತ್ತು ಎಷ್ಟರಮಟ್ಟಿಗೆ ಸಾಧ್ಯ? ಇನ್ನು ಇಂತಹ ವಿದ್ಯಾರ್ಥಿಗಳ ಜೊತೆ ಸಹಪಾಟಿಗಳೆಲ್ಲಾ ಹಿಂದಿಯಲ್ಲಿ ವ್ಯವಹರಿಸದೆ ಇರಲು ಸಾಧ್ಯವೇ?

ನಮ್ಮ ನವೋದಯಕ್ಕೆ ಮದ್ಯಪ್ರದೆಶದಿಂದ(ಈಗ Chatteesghar ) ವಿದ್ಯಾರ್ಥೀಗಳು ಬರ್ತಾ ಇದ್ರೂ ..ಅವ್ರು ಇಲ್ಲಿ ಬಂದು ನಮ್ಮ ಭಾಷೆ ಕಲಿತಿದ್ದಾರೆ ..ಹಾಗೂ ಎಷ್ಟೋ ಜನ ನಮ್ಮವರೇ ಆಗಿ ಬಿಟ್ಟಿದ್ದಾರೆ

೪.ಒಟ್ಟಾರೆ ಕರ್ನಾಟಕದ 27 ಶಾಲೆಗಳಲ್ಲಿ ಪ್ರತಿವರ್ಷ ಸೇರಿಸಿಕೊಳ್ಳುವ 2000 ಮಕ್ಕಳು ಈ ಪದ್ದತಿಯಲ್ಲಿ ಕಲಿತು ಹೊರಬರುವಾಗ ಹಿಂದೀ ದೇವತೆಯ ಪದತಲದಲ್ಲಿ ತಾಯ್ನುಡಿಯ ಬಲಿಕೊಟ್ಟೇ ಹೊರಬರುತ್ತಾರೆ ಎಂಬುದು ಆತಂಕಕಾರಿಯಾಗಿದೆ

ನನ್ನ ಪ್ರಕಾರ ಇದು ತಪ್ಪು ಮಾಹಿತಿ ..ನಮಗೆ ಹಿಂದಿ ಬಗ್ಗೆ ತಿಳಿವಳಿಕೆ ಇರೋದು ನಿಜ..ಆದ್ರೆ ತಾಯ್ನುಡಿಯನ್ನು ಬಲಿಕೊಟ್ಟ ನವೋದಯ ವಿದ್ಯಾರ್ಥಿಗಳನ್ನು ನೋಡಿರುವುದು ಅಪರೂಪ

೫.ಧನ್ಯ... ಭಾರತ... ಧನ್ಯ. ನಮ್ಮೆಲ್ಲರ ಕೋಟಿಗಟ್ಟಲೆ ತೆರಿಗೆ ಹಣ ಹಿಂದೀ ಪ್ರಚಾರಕ್ಕೆ ವ್ಯಯಿಸಿದ್ದಕ್ಕೂ ಸಾರ್ಥಕವಾಯಿತು ಅಲ್ಲವೇ?

ಇದು ನಿಮ್ಮ ತಪ್ಪು ತಿಳುವಳಿಕೆ ..ಇಲ್ಲಿ ನಿಜವಾಗಿಯೂ ನಿಮ್ಮ ಹಣ ಒಬ್ಬ ಒಳ್ಳೆ ಪ್ರತಿಭಾವಂತ/ ಹಳ್ಳಿ ಮಕ್ಕಳಿಗೆ ವಿನಿಯೋಗ ಆಗುತ್ತಿದ್ದೆ..

Unknown ಅಂತಾರೆ...

ಈ ಲೇಖನವನ್ನು ಬರೆದವರು ನವೋದಯ ಶಾಲೆಗಳ ಬಗ್ಗೆ ಬಹುಷಃ ಅಷ್ಟೊಂದು ತಿಳಿಯದೆ ಬರೆದಿರುವ ಹಾಗಿದೆ.

ನಾನು ೧೯೯೩ ರಿಂದ ೨೦೦೦ ವರೆಗೆ ನವೋದಯದಲ್ಲಿ ಓದಿದ್ದು. ನಾನು ಹಿಂದಿಯಲ್ಲಿ ಇದುವರೆಗೊ ೨೫ಕ್ಕೆ ೧೦ ರ ಮೇಲೆ ಅಂಕ ಗಳಿಸಿಲ್ಲ, ಆದರೊ ನಾನು ೧೦ ಮತ್ತು ೧೨ನೇ (ನಮಗೆ ಅಲ್ಲಿ ಪಿ.ಯು.ಸಿ ಇರಲಿಲ್ಲ). ತರಗತಿಗೆ ಮೊದಲಿಗನಾದೆ. ಹೇಗೆ?: ನಮಗೆ ಹಿಂದಿ ೧೦ನೇ ತರಗತಿಯಲ್ಲಿ ಇರಲೇ ಇಲ್ಲ..

ಅದೂ ಅಲ್ಲದೆ, ಅಲ್ಲಿ ಇದ್ದ ಬಹುತೇಕ ಶಿಕ್ಷಕರು ಕನ್ನಡ ಮಾತಾಡುವವರೆ.. (ನಮಗಿದ್ದ ಇಬ್ಬರು ಹಿಂದಿ ಶಿಕ್ಷಕರೂ ಕನ್ನಡದವರೆ)

ಅಲ್ಲಿ ಇದ್ದ ೭ ವರ್ಷಗಳಲ್ಲಿ ಒಮ್ಮೆಯೂ ನಮ್ಮ ಮೇಲೆ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ನನಗೆ ಅನಿಸಿಲ್ಲ..

- ಅಮರ ತುಂಬಳ್ಳಿ.

Priyank ಅಂತಾರೆ...

@Yeshu,

ಹಿಂದಿ ರಾಷ್ಟ್ರಭಾಷೆಯಲ್ಲ ಅನ್ನೋದು ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ.

Unknown ಅಂತಾರೆ...

@pinka: there is much more to yeshu's comment than 'hindi is our national language'.. try to read that part also.. may be that will enlighten you more

Vivek ಅಂತಾರೆ...

Nangae anisiddu enaendare ... ee article baredavarigae kanditha navodayagala bagae thilidilla ....

ಇಲ್ಲಿ ಉಚಿತವಾದ ವಸತಿ ನಿಲಯ, ಊಟ, ಬಟ್ಟೆಯ ವ್ಯವಸ್ಥೆಗಳಿವೆ. ಶುಲ್ಕ ತಿಂಗಳಿಗೆ 200 ರೂಪಾಯಿ ಮಾತ್ರಾ.

idu tappu ... illi ellavu uchitha ( free ). mattu Hindi kaddaya illa ... its an optional.. 8th , 9th , 10th inda English or Hindi aykae madkoa bahawdu ..almost ellaru english annae aykae madkothare .. pata english mishritha kannada dalli iruttae .... mattae 10th alli Hindi main exam gae illa ... mattu endigu Navodayagalu Hindi heruttivae endu anisilla ...
and Nanu obba Navodayiga and i am proud to be Navodaya ex-student.

ಬನವಾಸಿ ಬಳಗ ಅಂತಾರೆ...

ನವೋದಯದ ಗೆಳೆಯರೇ,

ನಿಮ್ಮ ಶಾಲೆಯ ಬಗ್ಗೆ ಇರುವ "navodaya.nic.in" ಒಳಗೆ ಹೋಗಿ ನೋಡಿರಿ. ಮೇಲಿನ ಬರಹದಲ್ಲಿ ಇಂಗ್ಲೀಷಿನಲ್ಲಿರುವುದು ಆ ಅಂತರ್ಜಾಲತಾಣದಿಂದಲೇ ನೇರವಾಗಿ ತೆಗೆದುಕೊಂಡಿರುವ ಮಾಹಿತಿ.
ನೀವು ಕಲಿತ ಶಾಲೆಯಲ್ಲಿ ಕನ್ನಡದಲ್ಲೇ ಹೇಳಿಕೊಡ್ತಾರೆ ಅನ್ನುವ ಬಗ್ಗೆ ನಮ್ಮ ಮೆಚ್ಚುಗೆ ಇದೆ. ನಿಮಗೆ ಕನ್ನಡದಲ್ಲಿ ಕಲಿಸುವ ಪದ್ದತಿಯೇ ಸರಿಯೆಂದೂ, ಹಾಗೇ ಕಲಿಸಬೇಕೆಂದೂ ನಾವು ಹೇಳುತ್ತಿರುವುದು. ಆದರೆ ನವೋದಯ ವಿದ್ಯಾಲಯದ ಪಾಲಿಸಿ ಹಿಂದಿ ಮಾಧ್ಯಮದಲ್ಲಿ ಹೇಳಿಕೊಡಬೇಕು ಅನ್ನುವುದಾಗಿದೆ ಎನ್ನುವುದನ್ನು ಗಮನಿಸಿ. ಈ ಶಾಲೆಗಳಲ್ಲಿ ಹಿಂದಿಯನ್ನು ಎಷ್ಟರಮಟ್ಟಿಗೆ ಕಲಿಸಲಾಗುತ್ತಿದೆ, ಬಳಸಲಾಗುತ್ತಿದೆ ಎಂಬುದನ್ನೆಲ್ಲಾ ನಿಗಾವಹಿಸಿ ಯೋಜಿಸಲಾಗುತ್ತಿದೆ ಎಂಬುದನ್ನು ಗುರುತಿಸಿ. ಭಾರತದಲ್ಲಿ ಕೇಂದ್ರಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಎಷ್ಟರಮಟ್ಟಿಗೆ ಹಿಂದಿಯನ್ನು ಜಾರಿಮಾಡಲಾಗುತ್ತಿದೆ ಎಂದು ಕಂಡುಕೊಳ್ಳಲು ನೇಮಿಸಿದ್ದ ಸಂಸತ್ ಸಮಿತಿಯ ವರದಿ ಬಗ್ಗೆ ಸದ್ಯದಲ್ಲೇ ಬರೆಯುತ್ತೇವೆ. ಓದಿಕೊಳ್ಳಿ.

ಉಚಿತ ಹಾಸ್ಟೆಲ್, ೨೦೦ರೂ ಶುಲ್ಕ ಇತ್ಯಾದಿ ಮಾಹಿತಿಗಳೆಲ್ಲಾ ನವೋದಯದ ಅಂತರ್ಜಾಲ ತಾಣದಲ್ಲೇ ಇದೆ ನೋಡಿಕೊಳ್ಳಿ.
ಮಧ್ಯಪ್ರದೇಶದಿಂದ ನಮ್ಮಲ್ಲಿಗೆ ವಲಸೆ ಬಂದವರೆಲ್ಲಾ ನಮ್ಮ ನುಡಿ ಕಲಿತು ನಮ್ಮವರೇ ಆಗಿದ್ದಾರೆ ಎಂದರೆ ಬಹಳ ಸಂತೋಷ. ಆದರೆ ಯಾವ ಶಾಲೆಯ ಆಡಳಿತ ಭಾಷೆ, ಕಲಿಕೆಯ ಭಾಷೆ ಹಿಂದಿ ಆಗಬೇಕು ಎಂಬ ಯೋಜನೆಯಿದೆಯೋ ಅಲ್ಲಿ ಈ ನಮ್ಮವರಾಗುವಿಕೆ ಬಹಳ ಕಾಲ ನಡೆಯದು ಅಲ್ಲವೇ?

"ಹಿಂದಿ ದೇವತೆಯ ಪದತಲದಲ್ಲಿ ತಾಯ್ನುಡಿ..." ==> ಮೊದಲನೆ ಕಮೆಂಟ್ ಬರೆದಿರುವ ನವೋದಯದ ಮಾಜಿ ವಿದ್ಯಾರ್ಥಿಯ ಮಾತುಗಳನ್ನು ಗಮನಿಸಿ. ಹಿಂದಿ ಭಾರತದ ರಾಷ್ಟ್ರಭಾಷೆ, ಮೊದಲು ಭಾರತೀಯ, ಆಮೇಲೆ ಕನ್ನಡಿಗ... ಇತ್ಯಾದಿ ಮಾತುಗಳನ್ನು ಕನ್ನಡಿಗರೇ ಆಡುವಂತೆ ಮಾಡುವ ವ್ಯವಸ್ಥೆಯ ಬಗ್ಗೆ ಹಾಗೆ ಬರೆಯಲಾಗಿದೆ ಅಷ್ಟೆ.

ಅಂದಹಾಗೆ ನವೋದಯ ಶಾಲೆಯನ್ನು ಇಲ್ಲಿ ದೂಷಿಸಲಾಗಿಲ್ಲ. ಇಂತಹ ಒಳ್ಳೆಯ ವ್ಯವಸ್ಥೆಯನ್ನು ಕೇಂದ್ರಸರ್ಕಾರ ಬಳಸಿಕೊಳ್ಳುತ್ತಿರುವ ಬಗ್ಗೆ, ಕಟ್ಟಿದ ಉದ್ದೇಶದ ಬಗ್ಗೆ ಆಕ್ಷೇಪಿಸಲಾಗಿದೆ. ರಾಜ್ಯಗಳ ಪಟ್ಟಿಯಲ್ಲಿದ್ದ (state list) ಶಿಕ್ಷಣ ವ್ಯವಸ್ಥೆಯನ್ನು ಸಂಯುಕ್ತ ಪಟ್ಟಿಗೆ(concurrent list) ಸೇರಿಸಿ, ಕೇಂದ್ರಸರ್ಕಾರ ಶಾಲೆಗಳನ್ನು ತೆರೆದು ನಡೆಸುವ ಅಗತ್ಯವೇನು? ಇದು anti Federal ಅನ್ನೋದನ್ನು ಅರಿಯಿರಿ.

ನೀವು ಹೇಳುತ್ತಿರುವುದನ್ನು ನೋಡಿದರೆ ನಿಮ್ಮ ಶಾಲೆಯ ಘೋಷಿತ ಉದ್ದೇಶಗಳು ಮತ್ತು ನಿಲುವುಗಳೇ ಬೇರೆ, ಶಾಲೆ ನಡೆಯುತ್ತಿರುವ ರೀತಿಯೇ ಬೇರೆ ಇದ್ದಂತಿದೆ. ಹಾಗಿದ್ದಾಗ ನವೋದಯದ ಅಂತರ್ಜಾಲ ತಾಣ ತಿದ್ದುವಂತೆ ಸಂಬಂಧಿಸಿದವರಿಗೆ ತಾವೇಕೆ ಹೇಳಬಾರದು?

ಸಂಪಾದಕ
ಏನ್‍ಗುರು

Ganesh ಅಂತಾರೆ...

readers need to understand the blog post. the author talks about the various methods used by the central government to impose / spread hindi across india. the intent of the central government is the problem. navodaya is just one of the various strategies / methods used by central government to impose hindi on gullible non-hindi speakers like the ones who have commented above. author is talking about how various methods / strategies ares being used by the central government to push its anti-federal, anti-democratic language policy (hindi policy) on india. and the gullible kannadigas as usual fall for the sugar coated trap.

Rohith B R ಅಂತಾರೆ...

After reading comments posted by ex-navodayites here, there can be no doubt left about the effect navodaya system has been having on young minds of this country. Hindi, and national language, eh?

The point here is pretty straight. The reason behind schooling is to obtain good education that can make better individuals out of pupils. And anyone can become a better individual only by being better informed. Like many among us, some navodaites present here too are ill-informed about the status of Hindi in this country. And come to think of who or which system is better placed to take individuals on this betterment track successfully? Is it your own good old schooling system or some system from afar promising you a variety mixtures of languages, topics, subjects and what-nots of no avail? Moreover of what special use are any values & discipline that one may muster during schooling if there're some basic myths deeply embedded in the curriculum and methods of education alike?

Madhuchandra ಅಂತಾರೆ...

ಇಸ್ಟೆಲ್ಲಾ ಆದರು ತಮಿಳುನಾಡು ರಾಜ್ಯದಲ್ಲಿ ಈ ಶಾಲೆ ಇಲ್ಲ :(
ಯಾಕೆಂದ್ರ .. ಅವವರ ಮೇಲೆ ಇದ್ದನ್ನು ಹೇರಲು ಕೇಂದ್ರ ಸರಕಾರಕ್ಕೆ ಆಗ್ಲಿಲ್ಲ..
ನಾವುಗಳು .. ಅದರಲ್ಲೂ ಕನ್ನಡಿಗರು ಇದ್ದನ್ನು ಕಣ್ಮುಚ್ಚಿ ಕೊಂಡು ಒಪ್ಪಿದೇವೆ ..

Anonymous ಅಂತಾರೆ...

It really doesn't make any sense, a statement only our politicians without neither self respest nor a bit of knowledge can make. Anyone who would have met a NAVODAYAN would not have told something as silly as this. The value each individual coming out from each JNV of the Country brings into this society is incredible. If have been able to adjust to each place i had been in till now, it is only be because of JNVB.

The Navodayans pay a lot more than whats spent on them back to the country as tax so it should not bother whoever has taken time to worry about a thing that should not bother people with sanity because no Navodayan would be earning so less to escape from paying tax.

Anonymous ಅಂತಾರೆ...

@Anonymous October 9, 2010 10:03 AM sas
- no Navodayan would be earning so less to escape from paying tax.

- "ತೆರಿಗೆ ತಪ್ಪಿಸಲು, ಜನ ಕಡಿಮೆ ಗಳಿಸುವುದು ಕೂಡ ಒಂದು ಉಪಾಯ" ಅಂತ ನನಗೆ ಗೊತ್ತಿರಲಿಲ್ಲ. ;)

ಇತೀ, ಉಉನಾಶೆ

Anonymous ಅಂತಾರೆ...

ವಿವರಗಳನ್ನು ಓದಿದರೆ, ಖಂಡಿತವಾಗಿ "ಹಿಂದಿ" ಈ ಅಜೆಂಡ/ಉದ್ದೇಶದಲ್ಲಿ ಒಂದು ಮುಖ್ಯ ಅಂಶ ಅನ್ನೋದು ಮನವರಿಕೆಯಾಗುತ್ತದೆ, ಆದರೆ ಮೊದ ಮೊದಲು ವಾಸ್ತವ ಸ್ವಲ್ಪ ಬೇರೆಯದು ಆಗಿತ್ತು ಅನ್ಸುತ್ತೆ.
ಮುಖ್ಯವಾದ ವಿಚಾರ ಅಂದರೆ, ಇಲ್ಲಿ ಪ್ರತಿಕ್ರಿಯಿಸುತ್ತಿರುವ ನವೋದಯ ಶಾಲೆಗಳ ಹಳೆ ವಿಧ್ಯಾರ್ಥಿಗಳು ಅವರ ಶಾಲೆಗಳಲ್ಲಿ ಈಗಿರುವ ಪರಿಸ್ಠಿತಿಯೇನು ಅಂತ ಬರೆದರೆ ಅನುಕೂಲ.
ಹಾಗೆಯೇ, ಈ ಲೇಖನ ಬರೆಯಲು ನವೋದಯದ (ಈಗಿನ ಮತ್ತು ಹಳೆಯ) ವಿದ್ಯಾರ್ಥಿಗಳ ಅನಿಸಿಕೆ/ನೆರವು ಪಡೆದುಕೊಂಡಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಅಂತೆಯೇ ತೆರಿಗೆಯ ಹಣ "ಹಿಂದಿ ಹೇರಿಕೆ"ಗೆ ಪೋಲಾಗುವುದನ್ನು ಮನವರಿಕೆ ಮಾಡುವಾಗ ಅದರ ಜೊತೆ ಜೊತೆಗೆ ಅದೇ ಕಾರ್ಯಕ್ರಮದಿಂದ ಜನರಿಗೆ ಆಗಿರುವ ಲಾಭದ ಬಗ್ಗೆ ಸಂಪೂರ್ಣ ಕಡೆಗಣನೆ ಮಾಡಲಾಗಿದೆ ಅನ್ನಿಸದಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿ. ಇಲ್ಲದಿದ್ದರೆ ಚರ್ಚೆ ಹಳಿ ತಪ್ಪುತ್ತದೆ.
ಇತೀ, ಉಉನಾಶೆ

ಮಾಯ್ಸ ಅಂತಾರೆ...

ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕು

ನಮ್ಮ ದೇಶದಲ್ಲಿ ಜನರಿಗೆ ಯಾವ ಮಾರ್ಗದಲ್ಲಾದರು ಶಿಕ್ಷಣ ಲಭಿಸಿದರೆ ಅದು ಶ್ಲಾಘನೀಯವೇ!

ನವೋದಯದ ಹಿಂದಿನ ಅಜೆಂಡಾ ಏನೇ ಇರಲಿ. ಅದಕ್ಕೆ ಸೂಕ್ತ ಪರಿಹಾರ ಹೆಚ್ಚೆಚ್ಚು ಗುಣಮಟ್ಟದ ಹಾಗು ಕಡಮೆ ಶುಲ್ಕವಿರುವ ಶಾಲೆಗಳನ್ನು ತೆಗೆಯುವುದು.

ಗಮನಿಸಿರಿ: ಕರ್ನಾಟಕದಲ್ಲಿ ಹೇರಳವಾಗಿ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಕಾಲೇಜುಗಳಿರುವುದರಿಂದ, ಐಐಟಿಗಳಿಗೆ ಕರ್ನಾಟಕದ ವಿದ್ಯಾರ್ಥಿಗಳು ಕಡಮೆ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಕರ್ನಾಟಕದಲ್ಲಿ ಹೊಸ ಇಂಗ್ಲೀಶ್ ಶಾಲೆ ತೆರೆಯಲು ಅನುಮಿತಿ ನೀಡುವುದಿಲ್ಲವೆಂದು, ಹಲವರು ಸಿಬಿಎಸ್ಸಿ ಶಾಲೆಗಳನ್ನು ತೆಗೆದರು.!

ಬನವಾಸಿ ಬಳಗ ಅಂತಾರೆ...

ಪ್ರೀತಿಯ ಉಉನಾಶೆಯವರೇ,
ಬಹುಷಃ ನಿಮ್ಮ ಅನಿಸಿಕೆಯಂತೆಯೇ ಈ ಬರಹವೂ ಇದೆ. ಸದರಿ ನವೋದಯ ವಿದ್ಯಾಲಯದ ವ್ಯವಸ್ಥೆಯು ಹಳ್ಳಿಗಾಡಿನ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಸೌಲಭ್ಯದ ಶಿಕ್ಷಣವನ್ನು ಕೊಡ್ತಾಯಿದೆ ಎಂಬುದಾಗಿ ಮೊದಲಲ್ಲೇ ಬರೆದಿದೆ. ಅವಕಾಶ ಸಿಕ್ಕಾಗೆಲ್ಲಾ ಎರಡೂ ಬರಹಗಳಲ್ಲಿ ಇದನ್ನು ಬರೆದೇ ಇದ್ದೇವೆ. ಆದರೆ ನಾವಿಲ್ಲಿ ನವೋದಯ ವಿದ್ಯಾಲಯಗಳು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿವೆ ಎಂದಾಗಲೀ, ಅದನ್ನು ಹೊಗಳಲಾಗಲೀ, ಅವರ ಘೋಷಿತ ಉದ್ದೇಶ ಏನೇ ಇದ್ದರೂ... ವಾಸ್ತವದಲ್ಲಿ ಆ ಶಾಲೆಗಳಲ್ಲಿ ಪರಿಸ್ಥಿತಿ ಏನಿದೆ ಎಂಬುದನ್ನಾಗಲೀ ಬೆಳಕಿಗೆ ತರಲು ಹೊರಟಿಲ್ಲ.
ತನ್ನ ಪ್ರಜೆಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ಹೊಣೆಗಾರಿಕೆ ರಾಜ್ಯಸರ್ಕಾರಗಳದ್ದು. ಉಚಿತ ಶಾಲೆ, ಉನ್ನತ ಗುಣಮಟ್ಟದ ಸಿಲಬಸ್ ಇತ್ಯಾದಿ ನಿರ್ಣಯಿಸಬೇಕಾದ್ದು ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯಗಳ ಕರ್ತವ್ಯವಾಗಿರಬೇಕು. ಭಾರತ ಒಪ್ಪುಕೂಟವಾಗಲೀ ಎಂದು ಪ್ರತಿಪಾದಿಸುವ ನಾವು ಕೇಂದ್ರಸರ್ಕಾರ ಶಿಕ್ಷಣ ಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಳ್ಳುವುದನ್ನೇ ಪ್ರಶ್ನೆ ಮಾಡುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ನವೋದಯದಂತಹ ಉತ್ತಮ ವ್ಯವಸ್ಥೆಯನ್ನು ಕಟ್ಟುವಲ್ಲಿ ಕೇಂದ್ರಸರ್ಕಾರಕ್ಕಿರುವ ಉದ್ದೇಶಗಳ ಬಗ್ಗೆ ಓದುಗರ ಗಮನ ಸೆಳೆಯುವುದು ಈ ಬರಹದ ಉದ್ದೇಶ.

ವಂದನೆಗಳು
ಸಂಪಾದಕ,ಏನ್‍ಗುರು

ಮಂಜುನಾಥ ಕಟ್ಟೀಮನಿ ಅಂತಾರೆ...

ನಾನು ಮಂಜುನಾಥ, ನಾನು ನವೋದಯದ ವಿಧ್ಯಾರ್ಥಿ. ನಮ್ಮಗಳ ಜೀವನದ ರೂಪಿಕೆನಲ್ಲಿ ಶಾಲೆ, ಮೇಷ್ಟುಗಳ ಪಾತ್ರವಿದೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅನೇಕ ನನ್ನಂತಹ ಶಾಲೆಯ ವಿಧ್ಯಾರ್ಥಿಗಳು ಸವೋದಯ ಬಗ್ಗೆ ಲೇಖನ ಬರೆದಿರುವುದೇ ಅಪರಾಧ, ಅದನ್ನು ಮನಸ್ಸಿಗೆ ತೆಗೆದುಕೊಂಡ ಹಾಗೆ ಇದೆ. ನಿಜಕ್ಕೂ ನವೋದಯ ರೂಲ್ಸ ಮತ್ತು ಕಾನೂನಿನ ಬಗ್ಗೆ ನನ್ಗೆ ಈ ಲೇಖನದ ಮುಂಚೆ ಅರಿವು ಇರಲಿಲ್ಲ. ಅಷ್ಟು ಯಾಕೆ ನನ್ನಂತ ಅನೇಕ ವಿಧ್ಯಾರ್ಥಿಗಳಿಗೆ ಇದರ ಅರಿವು, ಇಲ್ಲ ಈಗ ಓದುತ್ತಿರುವ ವಿಧ್ಯಾರ್ಥಿಗಳಿಗೆ ಇಲ್ಲ ಅವರ ಪೋಷಕರಿಗೆ ಇದರ ಬಗ್ಗೆ ಗೊತ್ತಿರುವದಿಲ್ಲ. ಯಾಕೆ ಎಂದರೆ ಎಲ್ಲರಿಗೂ ಬೇಕಾಗಿರುವುದು ಮುಂದಿನ ಭವಿಷ್ಯ. ಹಿಂದೆ ಅಲ್ಲಿ ಓದುವಾಗ ಹಿಂದಿ ಬಗ್ಗೆ ಅನೇಕ ಕಾಂಪೀಟೇಷನ್ ಮಾಡುತ್ತ ಇದ್ದದ್ದು, ಅದರಲ್ಲಿ ನಾವು ಬಹುಮಾನದ ಆಸೆಗೆ ದುಮುಕುತ್ತ ಇದ್ದುದ್ದು ಇದ್ದೇ ಇದೆ. ಕೆಲವು ಸಾರಿ ಹಿಂದಿಯನ್ನು ಬೇಕಂತಲೆ ಆರಿಸಿಕೊಂಡಿದ್ದು ಕೂಡ ಇದೆ. ಇದರ ಜೊತೆಗೆ ಬರುತ್ತಿದ್ದ ಹಿಂದಿ ವಾಹಿನಿಗಳು, ಚಲನಚಿತ್ರಗಳು, ಜೊತೆಗೆ ಹಿಂದಿ ರಾಷ್ಟ್ರಭಾಷೆ ಅನ್ನೋ ಭ್ರಮೆ, ಅದನ್ನು ಕಲಿತು ಭಾರತೀಯನಾಗಬೇಕೆಂಬ ಉತ್ಕಟ್ಟ ಒಲವು ನಮ್ಮನ್ನು ಅನೇಕ ಬಾರಿ ತಪ್ಪಿಗೆ ಈಡು ಮಾಡುತ್ತವೆ. ಒಂದು ರೀತಿಯಲ್ಲಿ ಕುರುಡು ಮಾಡುತ್ತವೆ.
ವಿಷಯಗಳನ್ನು ಕುರುಡಾಗಿ ನಂಬಬಾರದು ಎಂದು ನಾನು ಕಲಿತಿದ್ದು ಅಲ್ಲೇ. ಅದನ್ನು ನಾನು ಮಾಡಿದ್ದೇನೆ.

Anonymous ಅಂತಾರೆ...

Nangae ondu artha hagutilla ... navodayadalli hindi herikae kaddyavagiddare ... 10th alli yake hindi addayavagi hekilla ( why hindi is not there in 10th main exam ? ) adrae namma SSLC alli hindi compulsory yake ?

VIJAY HANAKERE ಅಂತಾರೆ...

Anonymous is 100 persent correct

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails