ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಳಗದ ಹೊತ್ತಗೆ ಮಳಿಗೆ

41 ವರ್ಷಗಳ ದೊಡ್ಡ ಅಂತರದ ನಂತರ ರಾಜಧಾನಿ ಬೆಂಗಳೂರಿಗೆ ಕನ್ನಡಿಗರೆಲ್ಲರ ನುಡಿ ಹಬ್ಬ "ಕನ್ನಡ ಸಾಹಿತ್ಯ ಸಮ್ಮೇಳನ" ಬಂದಿದೆ. ನಾಳೆ ಅಂದರೆ ಫೆಬ್ರವರಿ 4ರ ಶುಕ್ರವಾರ ಶುರುವಾಗುವ ಈ ಸಮ್ಮೇಳನ ಮೂರು ದಿನಗಳ ಕಾಲ (ಫೆಬ್ರವರಿ 4,5 ಮತ್ತು 6) ನಡೆಯಲಿದೆ. ಬಗೆ ಬಗೆಯ ಹತ್ತಾರು ವಿಷಯಗಳ ಬಗ್ಗೆ ವಿಚಾರ ಗೋಷ್ಟಿ, ನಾಡಿನ ಹಲವು ಸಾಧಕರಿಗೆ ಸನ್ಮಾನ ಸೇರಿದಂತೆ ಹತ್ತಾರು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ನುಡಿ ಸಮ್ಮೇಳನಕ್ಕೆ ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನ ಮದುಮಗಳಂತೆ ಸಿಂಗರಿಸಿಕೊಂಡಿದೆ. ಬೆಂಗಳೂರಿನೆಲ್ಲೆಡೆ ಹಬ್ಬದ ವಾತಾವರಣ ಕಾಣಿಸುತ್ತಿದೆ.

ಬನವಾಸಿ ಬಳಗ ಸಾಹಿತ್ಯ ಸಮ್ಮೇಳನದಲ್ಲಿ
ಇದೇ ಸಂದರ್ಭದಲ್ಲಿ ಅಲ್ಲೇ ನಡೆಯುವ ಹೊತ್ತಗೆ ಮೇಳದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹೊತ್ತಗೆ ಪ್ರಕಾಶಕರು ಮಳಿಗೆಗಳನ್ನು ತೆರೆಯಲಿದ್ದಾರೆ. ನೂರಾರು ಬಗೆಯ ಕನ್ನಡ ಹೊತ್ತಗೆಗಳು ಓದುಗರ ಓದಿನ ಹಸಿವು ತೀರಿಸಲು ಕಾಯುತ್ತಿವೆ. ಬನವಾಸಿ ಬಳಗ ಒಂದು ಹೊತ್ತಗೆ ಮಳಿಗೆಯನ್ನು ಈ ಸಮ್ಮೇಳನದಲ್ಲಿ ತೆರೆಯಲಿದೆ. ಬಳಗದ ಜನಪ್ರಿಯ ಬ್ಲಾಗ್ ಆದ "ಏನ್ ಗುರು ಕಾಫಿ ಆಯ್ತಾ?"ದಲ್ಲಿನ ಆಯ್ದ ಅಂಕಣಗಳನ್ನು ವರ್ಷದ ಹಿಂದೆ ಪುಸ್ತಕ ರೂಪದಲ್ಲಿ ಹೊರ ತಂದಿದ್ದೆವು. ಅದಕ್ಕೆ ಓದುಗರಿಂದ ಸಿಕ್ಕ ಪ್ರೋತ್ಸಾಹದ ಪ್ರತಿಕ್ರಿಯೆ, ಮತ್ತು ಕಂಡು ಬಂದ ಹೆಚ್ಚಿನ ಬೇಡಿಕೆಯಿಂದಾಗಿ ಸಾಹಿತ್ಯ ಸಮ್ಮೆಳನದ ಸಂದರ್ಭದಲ್ಲಿ ಅದನ್ನು ಹೊಸ ಪರಿಷ್ಕೃತ ರೂಪದಲ್ಲಿ ನಿಮ್ಮೆಲ್ಲರ ಮುಂದೆ ತರುತ್ತಿದ್ದೇವೆ. ಸಮ್ಮೇಳನದಲ್ಲಿ ಮಾರಾಟವಾಗುವ ಪುಸ್ತಕದ ಜೊತೆ ಕೆಲವು ಕಣ್ ಮನ ಸೆಳೆಯುವ ಉಡುಗೊರೆಗಳೂ ನಿಮಗಾಗಿ ಕಾದಿವೆ. ಹಾಗೆಯೇ ಒಳ್ಳೆಯ ರಿಯಾಯಿತಿಯೂ ದೊರೆಯಲಿದೆ.

ಡಾ.ಶಂಕರ ಬಟ್ ಅವರ ಹೊತ್ತಗೆಗಳು ದೊರೆಯಲಿವೆ
ಕನ್ನಡ ನಾಡು ಕಂಡ ಖ್ಯಾತ ನುಡಿಯರಿಗ ನಾಡೋಜ ಡಾ.ಡಿ.ಎನ್.ಶಂಕರ್ ಬಟ್ ಅವರ ಕನ್ನಡ ನುಡಿಯ ಬಗೆಗಿನ ವೈಜ್ಞಾನಿಕ ಅಧ್ಯಯನವನ್ನು ತಿಳಿಸುವ ಸುಮಾರು ೮ ಹೊತ್ತಗೆಗಳು ಈ ಮಳಿಗೆಯಲ್ಲಿ ದೊರಕಲಿವೆ. ಕನ್ನಡ ನುಡಿಯ ಆಳ, ಅಗಲ, ನಡೆದು ಬಂದ ದಾರಿ, ಸಾಗಬೇಕಾದ ಹಾದಿ, ಆಗಬೇಕಾದ ಕೆಲಸ ಎಲ್ಲದರ ಬಗ್ಗೆ ಬೆಳಕು ಚೆಲ್ಲುವ ಅವರ ಹೊತ್ತಗೆಗಳು ವಿಶೇಷ ಬೆಲೆಯಲ್ಲಿ ದೊರಕಲಿವೆ.

ಇದೆಲ್ಲ ಎಲ್ಲಿ ಏನು ಅನ್ನೋ ಮಾಹಿತಿ ಇಲ್ಲಿದೆ:
ಸ್ಥಳ: ನ್ಯಾಶನಲ್ ಕಾಲೇಜು ಮೈದಾನ, ಬಸವನಗುಡಿ
ಮಳಿಗೆ ಸಂಖ್ಯೆ: 311

ಇನ್ಯಾಕ್ ತಡ ? ಈ ವಾರಾಂತ್ಯ ನೀವು, ನಿಮ್ಮ ಗೆಳೆಯರು, ಬಂಧುಗಳೆಲ್ಲರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಿ, ನಿಮ್ಮ ಬಳಗದ ಮಳಿಗೆಗೂ ಭೇಟಿ ಕೊಡಿ. ಬಳಗ ನಿಮ್ಮ ದಾರಿ ನೋಡುತ್ತೆ ಗುರು. ಬರ್ತಿರಲ್ಲ ?

2 ಅನಿಸಿಕೆಗಳು:

Badarinath Palavalli ಅಂತಾರೆ...

It was my bad luck sir. I was not in the city to enjoy such a precious sammelana and book fair sir. :-(
pl. visit my blogs:
www.badari-poems.blogspot.com
www.badari-notes.blogspot.com

Anonymous ಅಂತಾರೆ...

ಇತ್ತೀಚಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದ ಪೂರ್ಣಪಾಠದ ಇಂಗ್ಲಿಷ್ ಅನುವಾದ ಎಲ್ಲಾದರೂ ಸಿಗುತ್ತದೆಯೇ? ನನ್ನ ಪರಭಾಷಿಗ ಮಿತ್ರರು ಕೇಳುತ್ತಿದ್ದಾರೆ. ಅವರ ಈ ಆಸಕ್ತಿ ಪೂರೈಸಲು ಅನುವಾದಿಸುವಾ ಎಂದರೆ ನನಗೆ ಇಂಗ್ಲಿಷ್ ಭಾಷೆಯ ಮೇಲೆ ಅಷ್ಟು ಹಿಡಿತವಾಗಲೀ, ಅನುವಾದಿಸಲು ಸಮಯವಾಗಲೀ ಇಲ್ಲ.. ದಯಮಾಡಿ ಯಾರಾದರೂ ಸಹಕರಿಸುವಿರೇ.......

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails