ಡಬ್ಬಿಂಗ್ ಮತ್ತು ಜನಪರತೆ


ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎನ್ನುವ ದನಿಗಳು ಇದೀಗ ಬಲ ಪಡೆದುಕೊಳ್ಳುತ್ತಿದ್ದು ಜನಪರ ಸಂಘಟನೆಗಳು ಈ ನಿಲುವಿಗೆ ಸಹಮತ ತೋರುತ್ತಿರುವುದನ್ನು ನಾವು ಕಾಣಬಹುದು. ಡಬ್ಬಿಂಗ್ ಬರುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆಂಬ ದಿಗಿಲಿನಿಂದ ನಲುಗುತ್ತಿರುವ ಚಿತ್ರರಂಗದ ಒಂದು ವರ್ಗ ಒಂದೆಡೆಯಾದರೆ ಕನ್ನಡ ಸಂಸ್ಕೃತಿಯ ಅಳಿವು ಡಬ್ಬಿಂಗ್‌ನಿಂದಾಗುತ್ತದೆ ಎನ್ನುವ ನಿಲುವಿನ ಕೆಲವು ಹಿರಿಯರು ಇನ್ನೊಂದೆಡೆ... ಇದು "ಡಬ್ಬಿಂಗ್ ಬೇಡ" ಎನ್ನುವ ಪಕ್ಷದೊಳಗಿನ ಪ್ರಮುಖ ಪಂಗಡಗಳು. ಡಬ್ಬಿಂಗ್ ಕೇವಲ ಫೇಸ್‌ಬುಕ್ಕಿಗರಿಗೆ ಬೇಕೆನ್ನೋ ಹಾದಿ ತಪ್ಪಿಸೋ ಮಾತಾಡ್ತಿರೋ ಚಿತ್ರರಂಗದವರು, ಯಾವ ಆಧಾರದ ಮೇಲೆ ಡಬ್ಬಿಂಗ್ ಆರು ಕೋಟಿ ಜನರಿಗೆಲ್ಲಾ ಬೇಡಾ ಎಂದು ಹೇಳುತ್ತಿದ್ದಾರೆ ತಿಳಿಯುತ್ತಿಲ್ಲ. ಫೇಸ್‌ಬುಕ್ಕಿನಲ್ಲಿ ಚರ್ಚೆ ಮಾಡುವವರು ನೂರಾರು ಜನರಿರಬಹುದು... ಪಿಟಿಷನ್‌ಗೆ ಸಾವಿರಾರು ಜನರು ಸಹಿ ಹಾಕಿರಬಹುದು, ಅಂತರ್ಜಾಲದಲ್ಲಿ ಡಬ್ ಆದ ಸತ್ಯಮೇವ ಜಯತೇ ನೋಡಿದ ಮೂವತ್ತು ಸಾವಿರ ಜನರಿರಬಹುದು ಅಥವಾ ಪತ್ರಿಕೆಗಳಿಗೆ ಪತ್ರ ಬರೆಯುತ್ತಿರುವ, ಕೆಲವೆಡೆಗಿನ ಮತದಾನಗಳಲ್ಲಿ ಡಬ್ಬಿಂಗ್ ಬೇಕೆಂದು  ಮತನೀಡುತ್ತಿರುವ ಮತ್ತಷ್ಟು ಜನರಿರಬಹುದು, ಚಿತ್ರರಂಗದ ಒಳಗಿದ್ದೇ ಬಹಿರಂಗವಾಗಿ ದನಿಯೆತ್ತಿರುವ ಬೆರಳೆಣಿಕೆಯವರಿರಬಹುದು... ಈ ಎಲ್ಲಾ ಒಟ್ಟಾಗಿ ಪ್ರತಿನಿಧಿಸುತ್ತಿರುವುದು ಕನ್ನಡ ಜನತೆಯನ್ನೇ ಅಲ್ಲವೇ? ಸಮತಾ ಸೈನಿಕ ದಳವಾಗಲೀ, ಕರ್ನಾಟಕ ರಾಜ್ಯ ರೈತ ಸಂಘವಾಗಲೀ ಜನರನ್ನು ಪ್ರತಿನಿಧಿಸುತ್ತಿಲ್ಲವೇ? ಇವೆಲ್ಲಾ ಕಾಣುತ್ತಿದ್ದರೂ ಇವರಿಗೆ ಬಹುಷಃ ಕನ್ನಡಿಗರೆಲ್ಲಾ "ನಮಗೆ ಡಬ್ಬಿಂಗ್ ಬೇಕು" ಎಂದು ಬರೆದು ಕೇಳಿಕೊಳ್ಳಬೇಕೇನೋ...?! ಇಷ್ಟಕ್ಕೂ ಮಾರುಕಟ್ಟೆಯಲ್ಲಿ ಸಿನಿಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ನೀಡುವ ಉತ್ತರ ಸಾಲದೇ? ಡಬ್ ಆದವೂ ಕೂಡಾ ಇದೇ ಪ್ರಕ್ರಿಯೆಗೆ ಒಳಗಾಗುವ ಅವಕಾಶ ಇರಬೇಕಲ್ಲವೇ?

ವಾಸ್ತವವಾಗಿ ‘ಡಬ್ಬಿಂಗ್ ಎನ್ನುವುದು ಭಾಷೆಯನ್ನು ಉಳಿಸುವ ಸಾಧನ’ವೆನ್ನುವ ವಿಶ್ವಸಂಸ್ಥೆಯ ನಿಲುವಿನ ಹಿನ್ನೆಲೆಯಲ್ಲಿ ನಾವು ಇಡೀ ಪ್ರಕರಣವನ್ನು ನೋಡಬೇಕಾಗಿದೆ. ನಾಳೆ ಡಬ್ಬಿಂಗ್ ಬರುವುದರಿಂದ ಕನ್ನಡ ನಾಡಿಗೆ ಕೆಟ್ಟಾ-ಕೊಳಕಾ ಕಾರ್ಯಕ್ರಮಗಳು ದಾಳಿಯಿಡುತ್ತವೆ ಎನ್ನುವ ಆತಂಕ ನಿಜವಾಗಲೂಬಹುದು! ಆದರೆ ಇದು ವರ್ಷಗಳಿಂದ ಮುಚ್ಚಲಾಗಿದ್ದ ಅಣೆಕಟ್ಟೆಯ ತೂಬು ತೆರೆದಾಗ ಮೊದಲು ನುಗ್ಗುವ ಕಸದಂತೆಯೇ ಇರುತ್ತದೆ. ಕನ್ನಡ ಜನರು ಇಂಥಾ ಕಸ ಕಡ್ಡಿಗಳನ್ನು ಮಾರುಕಟ್ಟೆಯಲ್ಲಿ ಸೋಲಿಸುವ ಮೂಲಕ ಮುಂದೊಮ್ಮೆ ಒಳ್ಳೆಯವಕ್ಕೆ ಮಾತ್ರಾ ಗೆಲುವು ತಂದುಕೊಟ್ಟಲ್ಲಿ ಈ ಬಾಧೆ ನಿವಾರಣೆಯಾಗುತ್ತದೆ. ಈ ಮಾತಿಗೆ ಇಂದು ನೆರೆಯ ತಮಿಳು ತೆಲುಗು ಚಿತ್ರರಂಗಗಳಲ್ಲಿ ಡಬ್ ಆಗುತ್ತಿರುವ ಚಿತ್ರಗಳ ಪ್ರಮಾಣವೇ ಸಾಕ್ಷಿಯಾಗಿದೆ. ಅಲ್ಲಿ ವರ್ಷಕ್ಕೆ ಇಪ್ಪತ್ತಕ್ಕಿಂತಾ ಕಡಿಮೆ ಸಿನಿಮಾಗಳು ಡಬ್ ಆಗೋದನ್ನು ನಾವು ನೋಡಬಹುದು! ಡಬ್ಬಿಂಗ್ ಅಧಿಕೃತವಾದಾಗ ಅಲ್ಲೂ ಗುಣಮಟ್ಟದ ಸಂಭಾಷಣೆ, ದನಿಲೇಪನಗಳು ನಡೆಯಬಹುದು!!

ಆದರೆ ಡಬ್ಬಿಂಗ್ ಬರುವುದರಿಂದ ನೇರವಾಗಿ ಆಗುವ ಬದಲಾವಣೆಗಳು ಅತ್ಯಂತ ಉಪಕಾರಿಯಾದುವಾಗುವ ಸಾಧ್ಯತೆಗಳೇ ಹೆಚ್ಚು! ಕನ್ನಡದಲ್ಲಿ ಪೋಗೋ, ಕಾರ್ಟೂನ್ ನೆಟ್‌ವರ್ಕ್ ಮೊದಲಾದ ಮೂಲತಃ ಮಕ್ಕಳನ್ನು ಸೆಳೆಯುವ ವಾಹಿನಿಗಳು ಕನ್ನಡದಲ್ಲಿ ಬರಬೇಕಾಗಿದೆ. ಜ್ಞಾನ ಹೆಚ್ಚಿಸುವ ಹಿಸ್ಟರಿ, ಡಿಸ್ಕವರಿ, ನ್ಯಾಶನಲ್ ಜಿಯಾಗ್ರಫಿ ಮೊದಲಾದ ವಾಹಿನಿಗಳು ಕೂಡಾ ಕನ್ನಡದಲ್ಲಿರುವುದು ಕನ್ನಡಿಗರ ಅರಿಮೆಯ ಮಟ್ಟ ಹೆಚ್ಚಿಸಲು ಸಹಕಾರಿ. ಅಂತೆಯೇ ಹಲವಾರು ಜನಪ್ರಿಯ/ ಗುಣಮಟ್ಟದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರುವುದು ಕೂಡಾ ಸಹಕಾರಿ. ಇವೆಲ್ಲಾ ಬೆಳವಣಿಗೆಗಳು ನೇರವಾಗಿ ಕನ್ನಡಿಗರನ್ನು ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ! ಜೊತೆಗೇ ಕನ್ನಡದಲ್ಲೇ ಸುಲಭವಾಗಿ ಅರಿವು ಸಿಗಲು ಇವು ಸಹಕಾರಿಯಾಗಲಿವೆ!!

ಕನ್ನಡ ಕಲಾವಿದರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತು ನಿಜವೋ ಸುಳ್ಳೋ ತೀರ್ಮಾನವಾಗುವುದು ಕನ್ನಡ ಚಿತ್ರರಂಗ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ. ಡಬ್ಬಿಂಗ್‌ಗೆ ಅವಕಾಶವಾಯಿತೆಂದು ಕನ್ನಡ ಚಿತ್ರ ತೆಗೆಯುವುದನ್ನು ನಿರ್ಮಾಪಕರು ನಿಲ್ಲಿಸಿಯೇ ಬಿಡುತ್ತಾರೆ ಎನ್ನುವುದಾಗಲೀ... ಈಗಿನಷ್ಟೇ ಸಂಖ್ಯೆಯ ಚಿತ್ರಗಳು ಬರುತ್ತವೆ ಎನ್ನುವುದಾಗಲೀ ಕೇವಲ ಊಹೆಯ ಮಾತಾಗುತ್ತದೆ. ವಾಸ್ತವವಾಗಿ ಈ ಎರಡೂ ಸ್ವಲ್ಪ ಸ್ವಲ್ಪ ಆಗುವ ಸಾಧ್ಯತೆಗಳಿದ್ದು ಸ್ಪರ್ಧೆಯ ಕಾರಣದಿಂದ ಗುಣಮಟ್ಟದ ಚಿತ್ರಗಳು ಖಂಡಿತಾ ಬರುತ್ತವೆ ಎನ್ನಬಹುದು. ರಿಮೇಕು ಚಿತ್ರಗಳು ಕಡಿಮೆಯಾಗಬಹುದು! ಇವತ್ತೂ ಕೂಡಾ ತಯಾರಾಗುವ ೧೨೦+ ಚಿತ್ರಗಳಲ್ಲಿ ಗೆಲ್ಲುವುದು/ ಬಂಡವಾಳ ವಾಪಸ್ಸು ತರುವುದು ಕೆಲವೇ ಚಿತ್ರಗಳು ಎನ್ನುವಾಗ ಹಣ ಕಳೆದುಕೊಳ್ಳುವ ನಿರ್ಮಾಪಕರ ಸಂಖ್ಯೆ ಕಮ್ಮಿಯಾಗಬಹುದು ಅಷ್ಟೇ! ಆದರೆ ನೋಡುಗನಿಗೆ ಇದರಿಂದ ಲಾಭವೇ ಹೆಚ್ಚು. ಕನ್ನಡದ ಜನರು ತಮಗೆ ಬೇಕಾದ ಯಾವುದೇ ಭಾಷೆಯ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆನ್ನುವುದು ಮಾತ್ರಾ ಹದಿನಾರಾಣೆ ಸತ್ಯಾ!! ಇನ್ನು ಕನ್ನಡ ಕಿರುತೆರೆಯಲ್ಲಿ ಮೂಲ ಧಾರವಾಹಿಗಳು ನಿಲ್ಲುತ್ತವೆಯೋ, ಪರಭಾಷೆಯಿಂದ ರಿಮೇಕ್ ಆಗುವ ಧಾರಾವಾಹಿಗಳು ನಿಂತು ಮೂಲ ಕನ್ನಡದ ಸೊಗಡಿನ ಈ ನೆಲದ ಕಥೆಯ ಧಾರಾವಾಹಿಗಳು ಮಾತ್ರಾ ಉಳಿಯುತ್ತವೆಯೋ ಎನ್ನುವುದೂ ಕೂಡಾ ಬಲ್ಲವರಿಲ್ಲ! ಸ್ಪರ್ಧೆಯನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಇದು ತೀರ್ಮಾನವಾಗಲಿದೆ. ಏನೆಂದರೂ ಕನ್ನಡದ್ದೇ ಮೂಲದ ಮೂಡಲಮನೆ, ಮುಕ್ತಾಮುಕ್ತಾ, ಗುರುರಾಘವೇಂದ್ರ ವೈಭವ ರೀತಿಯ ಧಾರಾವಾಹಿಗಳೆಲ್ಲಾ ನಿಂತುಬಿಡುತ್ತವೆ ಎನ್ನುವುದು ನಂಬಲಾಗದ ಮಾತು! ಇಲ್ಲೂ ಕೂಡಾ ನೋಡುಗನಿಗೆ ಗುಣಮಟ್ಟದ ಹೊಸತನದ ಕಾರ್ಯಕ್ರಮಗಳು ಸಿಗುವ ಸಾಧ್ಯತೆಯೇ ಹೆಚ್ಚು!

ಇವೆಲ್ಲವೂ ಕೂಡಾ ಕನ್ನಡಿಗನನ್ನು ಕನ್ನಡದಿಂದ ದೂರ ಹೋಗದ ಹಾಗೆ ನೋಡಿಕೊಳ್ಳೋ ಸಾಧ್ಯತೆಗಳು ಹೆಚ್ಚು. ಜೊತೆಗೆ ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಯಾವೊಂದು ನುಡಿಗೂ ಆಗಿರದ ತೊಂದರೆ, ಯಾವ ಸಂಸ್ಕೃತಿಗೂ ಆಗಿರದ ತೊಂದರೆ ಕನ್ನಡಕ್ಕಾಗುತ್ತದೆ ಎನ್ನುವುದನ್ನು ನಂಬುವುದಕ್ಕಿಂತಲೂ... ಸಂವಿಧಾನ ಕೊಡಮಾಡಿರುವ, ವಿಶ್ವಸಂಸ್ಥೆಯೇ ಎತ್ತಿಹಿಡಿದಿರುವ ನಿಲುವನ್ನು ಬೆಂಬಲಿಸುವುದು ಸೂಕ್ತ! ಗೆಳೆಯರೊಬ್ಬರು ಬರೆದಂತೆ "ಗುಮ್ಮನಿಗೆ ಹೆದರಿ ಅಮ್ಮನಿಗೂ ಕದ ತೆರೆಯಲಿಲ್ಲ" ಎನ್ನುವ ಮಾತು ಡಬ್ಬಿಂಗಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗಕ್ಕೆ ಸಕ್ಕತ್ತಾಗೇ ಅನ್ವಯಿಸುತ್ತದೆ!! ಚಿತ್ರರಂಗದೋರು ಅಮ್ಮನನ್ನಾದರೂ ಒಳಗೆ ಬಿಟ್ಟುಕೊಳ್ಳಬೇಕು... ಅಲ್ವಾ ಗುರೂ? ಇಲ್ಲಾಂದ್ರೆ ಮುಂದೆ ಇವತ್ತಿನ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋ ರಚ್ಚಾ ಪಚ್ಚಾಗಳು ಇರೋ ಆರುನೂರನ್ನೂ ಆಕ್ರಮಿಸಿಕೊಳ್ಳೋ ಕಾಲ ಬಂದೀತು!

10 ಅನಿಸಿಕೆಗಳು:

naanu ಅಂತಾರೆ...

Talking about democracy and wish of people, there are plenty of examples that are not-so democratic. One glaring example is high import duty on foreign made goods. This has forced companies to open up factories in india and create job opportunities. If your logic applies to everything, then by opening flood gates, India would have been just a consumer like bangladesh or pakistan with no room for creativity. This is not limited to just India every country that thinks about the welfare of its people have done the same.

Another recent example is that US has imposed 30% duty on solar panels imported from China so that they become expensive and the consumer is forced to buy american made products. More than democracy, its about self-interest of the country/region?

When banks started computerising, they made sure employees learnt computers rather than firing employees and hiring new people with computer knowledge.

In the same way, you present a solution that sounds like a silver bullet for kannada and kannadigas, but you have not come up with a plan to address the livelihood of thousands of families who will come to the streets. Is there a contingency plan for them?

Is there a guarantee that all non-kannada entertainment entering karnataka WILL be dubbed into kannada? if yes, then does it not go against the wish of the people to watch entertainment in their language? if no, then what is the achievement of allowing dubbing when all it can accomplish is showing dubbed movies only in interior karnataka?

Aravind M.S ಅಂತಾರೆ...

ಡಬ್ಬಿಂಗ್ ವಿಷಯ ಅನುಮೋದನೆ ಸ್ವಾಗತಾರ್ಹ. ಕನ್ನಡ ಸಿನಿಮಾ ಉದ್ಯಮ ಉಳಿಸೋದೊಂದೇ ಕನ್ನಡ ನಾಡಿನ ಗುರಿಯಾಗಿರದೆ ಕನ್ನಡ ಡಬ್ಬಿನಿಂದ ನಮ್ಮ ತಿಳಿವು ಬೆಳೆಯುವಂತೆ ಆಗಬೇಕು. ಡಿಸ್ಕವರಿ ಇತ್ಯಾದಿಯನ್ನು ಕನ್ನಡದಲ್ಲಿ ನೋಡುವುದು ನಮ್ಮ ತಿಳಿವು ದೊಡ್ಡದಾಗಿಸುವುದಲ್ಲದೇ ಕನ್ನಡದಲ್ಲಿ ಅನುವಾದ ಮಾಡುವ ಹೊಸ ಉದ್ಯಮವನ್ನೂ ಬೆಳೆಸುವುದಿಲ್ಲವೇ ?

ಡಬ್ಬಿಂಗ್ ಮಾಡೋದೇ ಬೇಡ ಅನ್ನೋದಾದರೆ ನಾವು ಓದುವ ಅನೇಕ ಅನುವಾದಿತ ಬರವಣಿಗೆಯನ್ನೇ ಬೇಡ ಅನ್ನುವಂತೆ ಅಲ್ಲವೇ ಗುರು ?

Ravi Savkar ಅಂತಾರೆ...

@Naanu: In a democratic arrangement, it is the governments role to make the policies not by some XYZ self proclaimed policy makers.

What should be the import duty is decided by government(elected by people) and not by Reliance or Walmart or Toyota.

What happens to the livelihood needs to be addressed seperately. Holding Kannadigas for ransome and denying them entertainment is nothing but fascism.

This kind of ban on dubbing is not there for any other language in the world, why only Kannada?

naanu ಅಂತಾರೆ...

Apologies for writing in english.

An elected government that denies people their right to buy is no different from a group, that some people are going to the extent of calling them rowdies, thugs and self-appointed rulers. Please argue on issues rather than generalising and passing jibes at a personal level. Recent one is on ravichandran, although you have a case that he remade lots of movies, you can't take away his enormous contributions. Have been seeing few members of banavasi balaga and others do this here and on facebook, which has brought disrepute to an otherwise wonderful effort so far. Please avoid this and focus on the issue because there is clearly some scope for dubbing.

Coming back, indian govt for decades forced people to ride a bajaj scooter, buy cheap indian electronics when we knew japanese products were far superior, and we were forced to watch doordarshan, did you forget that? Even now, by succumbing to pressure and not allowing FDI in retail, we are still being fed with what the indian retailers think is best for us! so much for an elected govt and democracy.

If you think about it carefully, by allowing a program to be telecasted in its originality, there is far more tolerance and freedom than forcing somebody to dub their content to showcase to viewers in karnataka. for when it comes to showing kannada movies overseas, I have never come across a US or UK legislation that forced kannada distributors to dub the movie in english, so what is the big difference if a non-kannada movie is released in its own language in karnataka? When somebody gave the example of Hitler and Mussolini forcing foreign movies to be dubbed into local languages, it was not democracy but dictatorship at its best where people were forced to watch only in their language, and not allowing them to watch in its original language thereby denying an option to learn a new language. If you dig deep through, the issue is with kannadiga mentality, mass migration into karnataka and kannadigas not producing more children!!

Although your intention is noble, your plan is like indian constitution and democracy, which is perfect on paper but fraught with innumerable challenges.

Your statement - "What happens to the livelihood needs to be addressed seperately", when will this be addresses? Thousands of families will come to the streets, will you give them jobs in software companies where kannadiga software engineers themselves are ill treated? Once the film industry is gone, its gone forever, you can't rebuild it, just think about the implications. Providing jobs is definitely not an easy thing to do, please don't underestimate it.

kumbaranige varusha, donnege nimisha anno haage, dubbing bittu, dashakagalinda kattiro namma chitrodyama na samaadhi maadabedi.

Last but not the least, although "customer is the king", please give respect to producers who invest crores even though they know that success rate of kannada movies is less compared to other industries and they operate in a limited market. You can find a replacement for a customer or an employee, but its extremely difficult to produce an entrepreneur. How many of you remember namma kannadada company "Ideal Jawa" aka Yezdi that was closed down mainly because of labourers who could not see it big? It will never re-open again, nor will karnataka see an entrepreneur in that field for the next several decades.

naanu ಅಂತಾರೆ...

continued...

Like i said before if i have watched kannada movies overseas in kannada language then it is no different than allowing non-kannada movies without dubbing. Plus, i have not received a response to my original question whether all non-kannada movies will be made to dub in kannada, if YES then isn't it against democracy? if NO, then what is the real achievement of allowing dubbing when the same non-kannada movies will anyway be released in its own language in all the border districts and maybe even in interior parts including bengaluru? is this achievement bigger than destroying kannada film industry and the livelihood of thousands of families? Do you think Shivarajkumar, Ravichandran fear they cannot survive for food? Don't you think they have noble thoughts for the industry and families that is making them speak against dubbing?

The other issue with dubbing is - we can now distinguish kannada actors from non-kannada actors and when dubbing is allowed a new generation of kannadigas will never be able to distinguish between kannada actors and non-kannada actors, atleast until few years before kannada industry will be washed out and after that "kannada actors" will be a misnomer anyway. By that time, even the small team of dubbing artists will be replaced by non-kannadigas who would have learnt to speak bits and pieces of kannada just like Sai Kumar used to do. That will set the epitaph for the memory of our kannada film industry. We can then add a new story to Ajjiya Kathegalu - Ondaanondu kaaladalli kannada chitra ranga antha ittu...

naanu ಅಂತಾರೆ...

continued...

Like i said before if i have watched kannada movies overseas in kannada language then it is no different than allowing non-kannada movies without dubbing. Plus, i have not received a response to my original question whether all non-kannada movies will be made to dub in kannada, if YES then isn't it against democracy? if NO, then what is the real achievement of allowing dubbing when the same non-kannada movies will anyway be released in its own language in all the border districts and maybe even in interior parts including bengaluru? is this achievement bigger than destroying kannada film industry and the livelihood of thousands of families? Do you think Shivarajkumar, Ravichandran fear they cannot survive for food? Don't you think they have noble thoughts for the industry and families that is making them speak against dubbing?

The other issue with dubbing is - we can now distinguish kannada actors from non-kannada actors and when dubbing is allowed a new generation of kannadigas will never be able to distinguish between kannada actors and non-kannada actors, atleast until few years before kannada industry will be washed out and after that "kannada actors" will be a misnomer anyway. By that time, even the small team of dubbing artists will be replaced by non-kannadigas who would have learnt to speak bits and pieces of kannada just like Sai Kumar used to do. That will set the epitaph for the memory of our kannada film industry. We can then add a new story to Ajjiya Kathegalu - Ondaanondu kaaladalli kannada chitra ranga antha ittu...

Anonymous ಅಂತಾರೆ...

"ನಾನು ಟಾಮ್ ಅಂಡ್ ಜೆರ್ರಿ ಕಾರ್ಟೂನ್ ಕನ್ನಡದಲ್ಲಿ ನೋಡ್ಬೇಕು ಆದ್ರೆ ಇವ್ರು ಬಿಡ್ತಿಲ್ಲ" ಅಂತ ಕೋರ್ಟಲ್ಲಿ ಕೇಸ್ ಹಾಕಿದರೆ ಸಾಕು. ಆಗ ಡಬ್ಬಿಂಗ್ ವಿರೋಧಿಸುತ್ತಿರುವ ಈ "ಕನ್ನಡ ಸಂಸ್ಕೃತಿ ರಕ್ಷಕರು" ತೆಪ್ಪಗಾಗುತ್ತಾರೆ.

-ಒಂದು ಮಗು

Anonymous ಅಂತಾರೆ...

kannadigas are the most tolernat/ignorant ppl bcs, when a film like Avtaar came to india, all other language ppl watched and enjoyed that movie with thier family bcs it was in thier local language. in BLR, this movie came in all languages (english, hindi, tamil, telugu) except kannada!! hats off to u kanndigas!!

Unknown ಅಂತಾರೆ...

ಡಬಿಂಗ್ ವಿರೋಧಿಗಳು ಕನ್ನಡ ಭಾಷೆಯ ಅಳಿವಿಗೆ ಮುನ್ನುಡಿ ಬರೆಯುತ್ತಿದ್ದಾರೆ ಎಂಬ ಸತ್ಯವನ್ನು ಕನ್ನಡಿಗರು ಮನಗಾಣಬೇಕು. ಕರ್ನಾಟಕದಲ್ಲಿ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ತಮಿಳು, ತೆಲುಗು, ಮಲೆಯಾಳ ಚಲನಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಬಹುಸಂಖ್ಯಾತರು ಕನ್ನಡಿಗರು. ಇವರೆಲ್ಲ ಪರಭಾಷೆಗಳ ಚಿತ್ರಗಳನ್ನು ನೋಡುತ್ತಾ ಆ ಭಾಷೆಗಳನ್ನು ಕಲಿಯುತ್ತಾರೆ. ಅಂದರೆ ಕರ್ನಾಟಕದಲ್ಲಿ ತಮಿಳು, ತೆಲುಗು ಇತ್ಯಾದಿ ನೆರೆ ರಾಜ್ಯಗಳ ಬಾಷೆಗಳನ್ನು ಆಡುವವರ ಸಂಖ್ಯೆ ದಿನೇದಿನೇ ಜಾಸ್ತಿ ಆಗುತ್ತದೆ.

ಪರ ಭಾಷೆಗಳ ಚಿತ್ರಗಳು ಕನ್ನಡದಲ್ಲಿ ಡಬಿಂಗ್ ಆಗಿ ಕರ್ನಾಟಕದಲ್ಲಿ ಪ್ರದರ್ಶನವಾದರೆ ಕನ್ನಡೇತರರು ಕನ್ನಡ ಕಲಿಯಲು ಸುಲಭವಾಗುತ್ತದೆ. ಎರಡು ಮೂರು ದಶಕಗಳ ಹಿಂದೆ ನಾನು ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಹಪಾಠಿಗಳಾಗಿದ್ದ ಕನ್ನಡೇತರರು (ಇವರಲ್ಲಿ ಬಹಳ ಮಂದಿ ಬ್ಯಾಂಕ್ ನೌಕರರು) ಪ್ರತಿ ವಾರವೂ ತಪ್ಪದೆ ಕನ್ನಡ ಚಿತ್ರಗಳನ್ನು ನೋಡುತ್ತಿದ್ದರು - ಇದರಿಂದ ಕನ್ನಡ ಕಲಿಯುವುದಕ್ಕೆ ಅನುಕೂಲವಾಗುತ್ತದೆ ಎಂಬುದಕ್ಕಾಗಿ.

ಡಬಿಂಗ್ ವಿರೋಧಿಗಳು ಕನ್ನಡನಾಡಿನ ಗ್ರಾಮಾಂತರ ಪ್ರದೇಶದ ಕನ್ನಡ ಮಾತ್ರ ಬಲ್ಲ ಕೋಟ್ಯಂತರ ಕನ್ನಡಿಗರು ಉತ್ತಮ ಚಲನಚಿತ್ರಗಳಿಂದ, ಧಾರಾವಾಹಿಗಳಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಕನ್ನಡ ಡಬಿಂಗಿನಿಂದ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎನ್ನುವುದು ಅರ್ಥಹೀನ ಬೊಗಳೆ. ಹಾಗಾದರೆ ಹಾಲಿವುಡ್ ಮೂವಿಗಳಿಂದ ಮೊದಲ್ಗೊಂಡು ಎಲ್ಲವನ್ನೂ ತಮ್ಮ ಭಾಷೆಗೆ ಡಬ್ ಮಾಡಿಸಿಕೊಂಡು ವೀಕ್ಷಿಸುತ್ತಿರುವ ತಮಿಳರು, ತೆಲುಗರು ಸಂಸ್ಕೃತಿಹೀನರೇ? ಡಬಿಂಗ್ ಬಂದರೆ ಕನ್ನಡ ಚಿತ್ರನಟನಟಿಯರಿಗೆ ಬೇಡಿಕೆ ಕಮ್ಮಿಯಾಗಬಹುದು. ಆದರೆ ಕೆಲವೇ ನೂರರಷ್ಟಿರುವ ಈ ಮಂದಿಯ ಭವಿಷ್ಯಕ್ಕಿಂತ ಕೋಟ್ಯಂತರ ಕನ್ನಡಿಗರ ಭವಿಷ್ಯ ಮುಖ್ಯ. ಕನ್ನಡ ಅಳಿಯದೆ ಸದಾ ಕಾಲ ಕನ್ನಡನಾಡಿನಲ್ಲಿ ಪರಭಾಷಾಚಿತ್ರಗಳನ್ನು, ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ನೋಡುವಂತಾಗಲಿ. ಜೈ ಕನ್ನಡ, ಜೈ ಕರ್ನಾಟಕ!

- ಎಮ್. ಗೋಪಾಲ ಶೆಟ್ಟಿ, ಮೈಸೂರು

Anonymous ಅಂತಾರೆ...

ಡಬ್ಬಿಂಗ್ ಗೆ ನನ್ನ ವಿರೊದ
ಮಾನ್ಯರೆ ಕನ್ನದ ಅಭಿಮಾನಿಗಳೆ ಇದೊಂದು ಅವೈಜ್ನಾನಿಕ, ಯಾವ ಪುರುಷಾರ್ಥಕ್ಕೆ ಅಂತ ಗೊತ್ತಾಗುತ್ತಿಲ್ಲ ಕನ್ನಡೇತರರಿಗೆ ಕನ್ನಡಿಯಲು ಅವಕಾಶ ನೀಡಲಾಗದಂತ ಸನ್ನಿವೇಶ, ಕನ್ನಡ ಭಾಷೆಗೆ ಇದರಿಮ್ದ ಬಹು ದೊಡ್ಡ ಪೆಟ್ಟಾಗಲಿದೆ, ಪಕ್ಕದ ತಮಿಳುನಾಡು, ಆಂದ್ರ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಬಹುತೇಕ ಅನ್ಯಭಾಷೆಯ ಸಿನಿಮಾಗಳನ್ನು ತಮ್ಮ ತಮ್ಮ ಭಾಷೆಗೆ ಡಬ್ ಮಾಡಿ ಅಲ್ಲಿನ ಜನಕ್ಕೆ ತೋರಿಸಿಕೊಡುತ್ತಿದ್ದಾರೆ ಇದರಿಂದ ಅವರ ಭಾಷೆಗೆ ಯಾವುದೇ ತೊಂದರೆಯಾಗಿಲ್ಲ ಜೊತೆಗೆ ಭಾಷ ಸಾಹಿತ್ಯಕ್ಕು ಕುತ್ತು ಬಂದಿಲ್ಲ ಅಂದ ಹಾಗೆ ನಮ್ಮ ಕನ್ನಡ ಭಾಷೆಗೆ ಇದರಿಂದ ಆಗುವ ಅನಾಹುತವಾದರು ಏನು? ಒಬ್ಬ ಕನ್ನಡೇತರರಿಗೆ ಕನ್ನಡ ಕಲಿಸುವುದು ತಪ್ಪಾ? ಅಥವಾ ಕನ್ನಡ ಕಲಿಯಲು ಅವಕಾಶ ಮಾಡಿಕೊಡುವುದು ತಪ್ಪಾ? ಬಂಧುಗಳೆ ನನ್ನ ಒಂದು ಅನುಭವ ಹೀಗಿದೆ ಕೆಲವು ದಿನಗಳ ಹಿಂದೆ ತಮಿಳುನಾಡಿನ ಒಂದು ಪ್ರದೇಶದಲ್ಲಿ ನಮ್ಮ ಕನ್ನಡದ ಕಣ್ಮಣಿ ಡಾ ರಾಜ್ ರವರ ಅಭಿಮಾನಿಯೊಬ್ಬರಿಗೆ ಕನ್ನಡವೇ ಗೊತ್ತಿಲ್ಲ ಆದರೆ ಅವರು ಡಾ ರಾಜ್ ರವರ ಅಪ್ಪಟ ಅಭಿಮಾನಿ ಪ್ರಶ್ನಿಸಿದಾಗ ಕಂಡು ಬಂದಿದ್ದು ನನ್ನ ಮೆಚ್ಚಿನ ಹೀರೊ ಸಿನಿಮಾ ತಮಿಳಿನಲ್ಲಿ ನೋಡಿದ್ದೇನೆ ಅವರು ತಮಿಳು ಮಾತಾಡುತ್ತಾರೆ ಅವರ ಕನ್ನಡ ಸಿನಿಮಾ ನಾನು ನೋಡಿಲ್ಲ ನನಗೆ ಅದು ಗೊತಿಲ್ಲ ಅಂತ, ಇದೇ ತರ ನನ್ನ ಸ್ನೇಹಿತರಿಬ್ಬರು ಅಪ್ಪಟ ಕನ್ನಡವರಾಗಿದ್ದು ತೆಲುಗಿನ ಚಿರಂಜೀವಿ ಅಭಿಮಾನಿಗಳು ಅವರ ಸಿನಿಮಾದ ಸಂಭಾಷಣೆಗೆ ಮಾರು ಹೋದ ಅವರಿಬ್ಬರು ಕನ್ನಡ ಭಾಷೆ ಬಿಟ್ಟು ತೆಲುಗಿನಲ್ಲೆ ಮಾತಾಡಲು ನಿರ್ಧರಿಸಿದ್ದಷ್ಟೆ ಅಲ್ಲದೆ ಬೇರೆವರಿಗೂ ಹೇಳ ಹೊರಟಿದ್ದರು, ಬಂಧುಗಳೆ ಸಿನಿಮಾ ಜನಸಾಮಾನ್ಯರ ಅತಿ ಮೆಚ್ಚಿನ ಮಾದ್ಯಮ ಜನ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ರೂಡಿ ತಮ್ಮ ಮೆಚ್ಚಿನ ನಾಯಕ ನಾಯಕಿಯರನ್ನು ಹಿಂಬಾಲಿಸುವುದು ಅವರವರ ಇಚ್ಚೆ, ಬಂದುಗಳೆ ಬೇರೆ ಬೇರೆ ಭಾಷೆಯವರು ತಮ್ಮ ನೆಚ್ಚಿನ ನಾಯಕ ನಾಯಕಿಯರ ಸಿನಿಮಾ ಯಾವುದೇ ಭಾಷೆಯಲ್ಲಿದ್ದರು ಅದನ್ನು ಅವರವರ ಭಾಷೆಗೆ ಡಬ್ ಮಾಡಿ ನೋಡುತ್ತಾರೆ ಅದರೆ ನಮ್ಮಲ್ಲಿ ನಮ್ಮ ಸಂಸ್ಕೃತಿಕೆ ದಕ್ಕೆಯಾಗುದೆಂಬ ಪೊಳ್ಳು ನಂಬಿಕೆಯಿಂದ ನಮಗೆ ನಾವೇ ವಂಚನೆಯಸಗುತಿದ್ದೆವೆ ಅಷ್ಟೆ ಅಲ್ಲ ನಮ್ಮ ಕನ್ನಡ ಭಾಷೆಯನ್ನು ಅವಸಾನದೆಡೆಗೆ ನಾವೇ ತಳ್ಳುತ್ತಿದ್ದೆವೇ.
ಬಂಧುಗಳೆ ಪ್ರಸಿದ್ದ ನಟರ ಸಿನಿಮಾಗಳು ಉದಾ: ರಜಿನಿಕಾಂತ್ ರವರ ಸಾಕಷ್ಟು ಸಿನಿಮಾಗಳು ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಿಗೆ ಡಬ್ ಆಗಿತ್ತಿವೆ, ತೆಲುಗಿನ ಕೆಲವು ಪ್ರಮುಖ ನಟ ನಟಿಯರ ಸಿನಿಮಾಗಳು ಸಹ ತಮಿಳು ಮಲೆಯಾಳಂ ಮತ್ತು ಹಿಂದಿ ಭಾಷೆಗೆ ಡಬ್ಬ ಅಗಿತ್ತಿವೆ ಅಷ್ಟೆ ಅಲ್ಲದೆ ನಮ್ಮ ಕನ್ನಡ ಸುಮಾರು ಚಿತ್ರಗಳು ಕೂಡ ತೆಲುಗು ಮತ್ತು ತಮಿಳಿಗೆ ಡಬ್ ಅಗಿದ್ದಲ್ಲೆ ಅದನ್ನು ನಮ್ಮದ ರಾಜ್ಯದಲ್ಲು ಪ್ರದರ್ಶಿಸುತ್ತಿದ್ದಾರೆ ಇದರಿಂದ ನಮ್ಮ ಭಾಷೆಯ ಮೇಲೆ ಅಗುವ ದುಶ್ಪರಿಣಾಮಗಳಿಗೆ ಬಗ್ಗೆ ಯಾಕೆ ಬುದ್ದಿವಂತರು,ಸಾಹಿತಿಗಳು, ಕನ್ನಡಾಭಿಮಾನಿಗಳು ತಲೆ ಕೆಡಸಿಕೊಳ್ಳುತ್ತಿಲ್ಲ? ಡಬ್ ಮಾಡುವದರಿಂದ ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ದಕ್ಕೆ ಅನ್ನುವುದಾದರೆ ತಮಿಳು, ತೆಲುಗು, ಮಲೆಯಾಳಂ ಭಾಷೆಗಳಿಗೆ ಅದ ನಷ್ಟವೇನು? ಅವರ ಸಾಹಿತ್ಯ, ಸಂಸ್ಕೃತಿಗೆ ಆದ ದಕ್ಕೆಯೇನು?

ತೆಲುಗು ಸಿನಿಮಾದಲ್ಲಿನ ಪ್ರಸಿದ್ದ ತಾರೆ ಕನ್ನಡತಿ ದಿವಂಗತ ನತದೃಷ್ತ ತಾರೆ ಸೌಂದರ್ಯ ಅವರ ಸಿನಿಮಾ ಯಾವುದೆ ಭಾಷೆ ಸಿನಿಮಾ ಅದರು ಅದು ತೆಲುಗಿಗೆ ಡಬ್ ಆಗುತ್ತೆ, ತಮಿಳಿನ ಸೂಪರ್ ಸ್ಟಾರ್ ಕನ್ನಡದ ರಜಿನಿಕಾಂತ ರ ಯಾವುದೆ ಭಾಷೆಯ ಸಿನಿಮಾ ಆದರು ಅದು ತಮಿಳಿಗೆ ಡಬ್ ಅಗುತ್ತದೆ ಅದಕ್ಕೆ ಅವರು ಹೇಳುವುದು ನಮ್ಮ ನೆಚ್ಚಿನ ನಟ ನಮ್ಮ ರಾಜ್ಯದ ನಟ, ಆವರಿಗೆ ಅವರು ಸೂಚಿಸುವ ಗೌರವ, ಅವರ ಮೇಲೆನ ಪ್ರೀತಿ ಅಭಿಮಾನ, ಬಂದುಗಳೆ ಇವರಿಬ್ಬರು ನಮ್ಮ ಕನ್ನಡ ನೆಲದ ಕಣ್ಮಣಿಗಳು ಅಪ್ಪಟ ಕನ್ನಡ ಕುಡಿಗಳು ಆದರೆ ನಾವು ಅವರನ್ನು ನಮ್ಮವರಂತೆ ಎಂದು ನೋಡಲಿಲ್ಲ ಅವರ ಸಿನಿಮಾಗಳನ್ನು ಅನ್ಯಭಾಷೆಯಲ್ಲಿ ನೋಡಿ ಸಂತೋಷಪಟ್ಟಿದ್ದೇವಿ ಯಾಕೆ? ಅಚ್ಚ ಕನ್ನಡದ ಅವರಿಗೆ ನಮ್ಮ ಕನ್ನಡ ಭಾಷೆಯಲ್ಲೇಕೆ ಅವಕಾಶ ಕೊಡಲಾಗಲಿಲ್ಲ ಕನಿಷ್ಟ ಅವರ ಸಿನಿಮಾಗಳನ್ನು ಡಬ್ ಮಾಡಿ ನೋಡಲು ಅಗಿತ್ತಲ್ಲ ಇದಕ್ಕೆ ಅಡ್ಡ ಬಂದಿದ್ದು ನಮ್ಮ ಸಂಸ್ಕೃತಿಕೆ ದಕ್ಕೆಯಾಗಿತ್ರೆ ಎಂಬ ಅವೈಜ್ನಾನಿಕ ಅಂಶ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails