ಅಸ್ಸಾಂ: ವಲಸೆ ಅಕ್ರಮವಾದರೂ ಅಷ್ಟೇ! ಸಕ್ರಮವಾದರೂ ಅಷ್ಟೇ!


(ಚಿತ್ರಕೃಪೆ:  http://www.assamspider.com/gallery/328-The-map-Assam-state.aspx)
ಅಸ್ಸಾಮಿನಲ್ಲಿ ಅಲ್ಲೋಲ ಕಲ್ಲೋಲ! ನೆರೆಯ ಬಾಂಗ್ಲಾದಿಂದ ನುಗ್ಗುವ ವಲಸಿಗರು ಅಲ್ಲಿ ತಲೆನೋವಂತೆ! ಇದೀಗ ಅಸ್ಸಾಮಿನಲ್ಲಿ ಜನಾಂಗೀಯ ಘರ್ಷಣೆಗೆ ಕಾರಣವಾಗಿದೆಯಂತೆ! ಅಸ್ಸಾಮಿಗರ ಅದರಲ್ಲೂ ಸ್ಥಳೀಯ ಬೋಡೋಗಳ ಆಕ್ರೋಶ ಹಿಂಸಾಚಾರಕ್ಕೆ ತಿರುಗಿ ಅದು ದೊಡ್ಡ ಪ್ರಮಾಣದ ಹಿಂಸೆ ಪ್ರತಿಹಿಂಸೆಗಳಿಗೆ ಕಾರಣವಾಗಿದೆ. ಇದಕ್ಕೆ ದೇಶದಲ್ಲೆಡೆಯಿಂದ ಪ್ರತಿಕ್ರಿಯೆ... ಅಕ್ರಮ ವಲಸೆ ತಡೆಯಿರಿ ಅಂತಾ ದೇಶದ ಮೂಲೆಮೂಲೆಯಿಂದ ಕೂಗು! ಸಂಸತ್ತಿನಲ್ಲೂ ಪ್ರತಿಧ್ವನಿ!! ಹೀಗೆ ಕೂಗುವವರಿಗೆ ಕಾಣುತ್ತಿರುವುದು ಬಾಂಗ್ಲಾದೇಶವೆಂಬ ಮುಸಲ್ಮಾನರ ದೇಶದ ವಲಸಿಗರು...

ಅಸ್ಸಾಮಿಗಳಿಗೆ ವಲಸಿಗನ ಹಾವಳಿ ಹೊಸದಲ್ಲ!

ಅಸ್ಸಾಮಿಗೆ ವಲಸಿಗ ನುಗ್ಗುತ್ತಿರುವುದು ಇದೇನು ಹೊಸದಲ್ಲ... ಸುಮ್ಮನೆ ಅಸ್ಸಾಮಿನ ಭೂಪಟ ನೋಡಿದರೆ ಬಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳವೆನ್ನುವ ಎರಡೂ ಬಂಗಾಳಿ ಭಾಷಿಕರ ನಾಡುಗಳು ಹೆಚ್ಚುಕಡಿಮೆ ಒಂದೇ ಪ್ರಮಾಣದಲ್ಲಿ ಅಂಟಿಕೊಂಡಿರುವುದು ಕಾಣುತ್ತದೆ. ಅಸ್ಸಾಮಿಗಳ ಮೇಲೆ ಬಾಂಗ್ಲಾ ಮತ್ತು ಪಶ್ಚಿಮ ಬಂಗಾಳ ಎಂದು ಕರೆಯುವ ಬಂಗಾಳಿ ಜನರ ನಾಡುಗಳಿಂದ ಸದಾ ವಲಸೆ, ಸಾಂಸ್ಕೃತಿಕ ದಾಳಿಗಳು ಆಗುತ್ತಲೇ ಇದೆ. ಅಸ್ಸಾಮಿಗಳು "ಪರನಾಡಿನವರು ತಮ್ಮನಾಡಿಗೆ ವಲಸೆ ಬಂದು ತಮ್ಮ ಕೆಲಸ, ಸಂಸ್ಕೃತಿ ಕೆಡಿಸಿ ನಮ್ಮ ಅನ್ನದ ತಟ್ಟೆಗೆ ಕೈಯಿಕ್ಕುತ್ತಿದ್ದಾರೆ" ಎಂಬ ಅಳಲನ್ನು ಹಿಂದೂ ಇಂದೂ ವ್ಯಕ್ತಪಡಿಸುತ್ತಲೇ ಇದ್ದಾರೆ.

ನಮ್ಮನೆ ಸೂಜಿಲಿ ಕಣ್ಣು ಚುಚ್ಚಿದರೆ ಪರ್ವಾಗಿಲ್ವಾ?

ಬಿಹಾರಿಗಳ, ಬೆಂಗಾಲಿಗಳ ಅಸ್ಸಾಮ್ ವಲಸೆಯನ್ನು ರಾಷ್ಟ್ರೀಯ ಭಾವೈಕ್ಯತೆ/ ಭಾರತೀಯನ ಹಕ್ಕು ಎಂದು ಸಮರ್ಥಿಸುವವರು...ಸ್ವಲ್ಪ ಅಸ್ಸಾಮಿಗನ ಕಣ್ಣಿಂದ ಸಮಸ್ಯೆ ನೋಡಿದರೆ ಚೆನ್ನು! ವಲಸೆ ಬರುವವ ಬಾಂಗ್ಲಾದೇಶದವನಾದರೂ, ಪಶ್ಚಿಮ ಬಂಗಾಳದವನಾದರೂ, ಬಿಹಾರದವನಾದರೂ.... ಅಸ್ಸಾಮಿಗಳ ಅಸ್ತಿತ್ವ/ ಅಸ್ಮಿತೆಗೆ ಆಗುವ ಧಕ್ಕೆ ಒಂದೇ! ವಲಸಿಗ ಹಿಂದೂ ಆದರೂ, ಮುಸ್ಲಿಮ್ ಆದರೂ, ಕ್ರೈಸ್ತನಾದರೂ, ಬೌದ್ಧನಾದರೂ... ಅಸ್ಸಾಮಿನ ಸಂಸ್ಕೃತಿಯ ಮೇಲೆ ಅದು ಆಕ್ರಮಣವೇ! ಬಾಂಗ್ಲಾದಿಂದ ಆಗುತ್ತಿರುವ ಅಕ್ರಮ ವಲಸೆಗೆ ಕಡಿವಾಣ ಬೇಕು. ನಿಜಾ... ಆದರೆ ಸಕ್ರಮವಾಗೇ ಆಗುತ್ತಿರುವ ಅಂತರರಾಜ್ಯ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಡವೇ? ಇದು ಬರೀ ಅಸ್ಸಾಮಿಗೆ ಮಾತ್ರಾ ಅನ್ವಯವಾಗೋದಷ್ಟೇ ಅಲ್ಲಾ... ನಮ್ಮ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯವಾಗೋದೇ ಅಲ್ವಾ?! ಇಷ್ಟಕ್ಕೂ ಪಕ್ಕದ ಮನೆಯೋರು ಚುಚ್ಚುದ್ರೇ ಮಾತ್ರಾ ನೋವಾಗುತ್ತೆ, ನಮ್ಮನೆಯೋರು ಚುಚ್ಚುದ್ರೆ ಆನಂದವಾಗುತ್ತೇ ಅಂತಾ ಎಲ್ಲಾರ ಉಂಟಾ ಗುರೂ! 

3 ಅನಿಸಿಕೆಗಳು:

Padma ಅಂತಾರೆ...

Assamina mEle adhikrutavAgi bareyaballavaru nammma Prabhaker- kAmarUpi. Adare alliya bahu kAladinda uLida samasyegaLu sulabhavalla. sAdhAraNa 40 varshagaLinMda nadeyuttiruva valase kaLeda aidaruu varushagaLiMda agAdhavagide. namma kaNNallE noDiruvante valsegArariga votina mattu ration card gaLannu koDisuva jAlavE ide. I vote bank annu upayOgisuvarvaru yAva paksha ellarigU gottu. Illinda kathgodAmige kaLisi hindu hesarugaLannu koTTu hindu habbagaLa hesarannu bAyipaTha mADisi Delhi ge kelasakke kaLisuva vyvsthita jAlavU ide. modalina kAladalli tamma jamInige oLLeYa bele barabahudendu santoshapatta BODO gaLu Iga avara neladallE nirshritaru. ( idu nanna pratyaksha svAnubhava) KPRao

Unknown ಅಂತಾರೆ...

ಇಷ್ಟಕ್ಕೂ ಭಾರತವು "ವಿವಿಧತೆಯಲ್ಲಿ ಏಕತೆ"ಯ ತತ್ವವನ್ನು(ಸಂವಿಧಾನಬದ್ಧವಾಗಿ)ಪಾಲಿಸಿಕೊಂಡು ಬರುತ್ತಿರುವ ದೇಶ, ಪ್ರತಿಯೊಬ್ಬ ಭಾರತೀಯನಿಗೂ ಯಾವುದೇ ರಾಜ್ಯದಲ್ಲಿ ವಾಸಿಸುವ ಹಕ್ಕು ಇದೆ. ಇದನ್ನು ಎಲ್ಲರೂ ಅರಿತು ಭಾವನಾತ್ಮಕ ಸಾಮರಸ್ಯ ಕಾಪಾಡಿಕೊಳ್ಳಬೇಕೆ ವಿನಃ, ಅದನ್ನು ಸಾಂಸ್ಕೃತಿಕ ಅತಿಕ್ರಮಣ ಎಂದಾಗಲೀ, ಧಾರ್ಮಿಕ ಅತ್ಯಾಚಾರ ಎಂದಾಗಲೀ ಭಾವಿಸುವುದು ವೈಚಾರಿಕತೆಯ ಅಧಃಪತನವೆಂದು ಭಾವಿಸುತ್ತೇನೆ.

Nandagopal ಅಂತಾರೆ...

ವ್ಯತ್ಯಾಸ ಇದೆ. ಬಿಹಾರಿಗಳು ಮತ್ತು ಬಂಗಾಳಿಗಳು ನಮ್ಮ ದೇಶದವರು ಅಂದರೆ ನಮ್ಮ ಅಣ್ಣ ತಮ್ಮಂದಿರು. ಬಾಂಗ್ಲಾದೇಶಿಗಳು ವಿದೇಶಿಯರು.
ನಮ್ಮ ದೇಶದಲ್ಲಿ ನಡೆಯಿತ್ತಿರುವ ಭಯೋತ್ಪಾದನೆ (ಹೇಡಿತನ- ಏಕೆಂದರೆ ಅದು ಬಚ್ಚಿಟ್ಟು ಕೊಂಡು, ಣೆರವಾಗಿ ಎದುರಿಸದೆ ಮಾಡುವ ಕೃತ್ಯ ) ಪಾಕ್ ಮತ್ತು ಬಾಂಗ್ಲಾದೇಶಿ ಮುಸಲ್ಮಾನರ ಕೃತ್ಯ . ಹೀಗಾಗಿ ನಮ್ಮ ದೇಶದ ಅನ್ಯ ಭಾಗಗಳಿಂದ ವಲಸೆ ಹೋಗುವವ್ಯತ್ಯಾಸ ಇದೆ. ಬಿಹಾರಿಗಳು ಮತ್ತು ಬಂಗಾಳಿಗಳು ನಮ್ಮ ದೇಶದವರು ಅಂದರೆ ನಮ್ಮ ಅಣ್ಣ ತಮ್ಮಂದಿರು. ಬಾಂಗ್ಲಾದೇಶಿಗಳು ವಿದೇಶಿಯರು.
ನಮ್ಮ ದೇಶದಲ್ಲಿ ನಡೆಯಿತ್ತಿರುವ ಭಯೋತ್ಪಾದನೆ (ಹೇಡಿತನ- ಏಕೆಂದರೆ ಅದು ಬಚ್ಚಿಟ್ಟು ಕೊಂಡು, ನೇರವಾಗಿ ಎದುರಿಸದೆ ಮಾಡುವ ಕೃತ್ಯ ) ಪಾಕ್ ಮತ್ತು ಬಾಂಗ್ಲಾದೇಶಿ ಮುಸಲ್ಮಾನರ ಕೃತ್ಯ . ಹೀಗಾಗಿ ನಮ್ಮ ದೇಶದ ಅನ್ಯ ಭಾಗಗಳಿಂದ ವಲಸೆ ಹೋಗುವವರು ಮತ್ತು ಬಾಂಗ್ಲಾದೇಶದಿಂದ ಬರುವ ಅಕ್ರಮ ನುಸುಳು ಕೋರರಿಗೂ ವ್ಯತ್ಯಾಸ ಇದೆ.ವರು ಮತ್ತು ಬಾಂಗ್ಲಾದೇಶದಿಂದ ಬರುವ ಅಕ್ರಮ ನುಸುಳು ಕೋರರಿಗೂ ವ್ಯತ್ಯಾಸ ಇದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails