ರೈಲು ಸಮಸ್ಯೆಗೆ ಕನ್ನಡದ್ ದಾಸಯ್ಯನ ಪರಿಹಾರ

ನೈಋತ್ಯ ರೈಲ್ವೇ ಇಲಾಖಿ, ಇಡೀ ಕನ್ನಡದ ಮಂದೀನ ಹಾದಿ ತಪ್ಸಾಕ್ ಹತ್ತದಾ ಅಂತ ಮಂದಿ ಮುಂದ ನಮ್ ದಾಸಯ್ಯಾ ಶಂಖ ಹೊಡ್ಕೋತಾ ಹೊಂಟಾನ್ರಿ ಯಪಾ. ಅವಾ ಅಂತಾನಾ...
ಅಸ್ಸಾಮದಾಗಿನ ಅನ್ಯಾಯ

ಈ ಅನ್ಯಾಯ ನಮಗ್ ಮಾತ್ರಾ ಅಲ್ಲ ಬ್ಯಾರೀ ಕಡಿಗೂ ನಡೆದೈತ್ರಿ. ತುಸಾ ದಿನದ್ ಹಿಂದಾ ರೈಲ್ವೇ ವಿರುದ್ಧ ಅಸ್ಸಾಮದಾಗ ನಡೆದ ಭಯಂಕರ ಹೋರಾಟಕ್ಕ ಈ ರೇಲ್ವೇ ಇಲಾಖಿಯೋರು ಹೊರಗಿಂದ ಮಂದೀನಾ ಕರ್ಕೊಂಡು ಬಂದದ್ದೇ ಕಾರಣ ಅಂತ್ರೀಪಾ. ಅಸ್ಸಾಮದಾಗ ಖಾಲಿ ಇದ್ದ ರೇಲ್ವೆ ಕೆಲ್ಸದಾಗ ಆಗ್ಲೂ ಬಿಹಾರದಿಂದ ಮಂದಿನ್ ಕರ್ಕೊಂಡ್ ಹೋಗಿ ತುಂಬಾಕ್ ಹತ್ತಿದ್ರಂತ. ಅಸ್ಸಾಮದಾಗಿನ ಮಂದಿ ಜೋರು ಪ್ರತಿಭಟನೆ ನಡ್ಸುದ್ರಂತಾ. ಕನ್ನಡದ ಮಣ್ಣಿನ ಮಕ್ಕಳ್ರಾ, ನಿಮ್ ಮನೀಗೂ ಈ ಹಿಂದಿ ಮಾರಿ ಹೊಕ್ ಕುಂತದಾ. ಅದು ಬರಿ ನಿಮ್ಮ ಮಕ್ಕಳ ನೌಕರೀ ಮಾತ್ರಾ ಕಸ್ಗೊಳಂಗಿಲ್ಲಾ, ನಿಮ್ಮ ಭಾಷೀ, ನಿಮ್ ಸಂಸ್ಕೃತಿ, ನಿಮ್ಮ ಆಚರಣಿ ಎಲ್ಲಾ ನುಂಗ್ತದಾ. ಈಗಾರ ನೀವ್ ಏನ್ ಆ ಮಾರೀನ್ ಒದ್ದು ಹೊರಗ್ ಹಾಕೋರೋ ಅಥ್ವಾ ಮನೀ ಒಳಗ ಗಪ್ಪನೆ ಕೂಡೋರೊ ಅಂತಾನಂತ್ರಿ ಅವ.

ಮಹಾರಾಷ್ಟ್ರದಲ್ಲಿನ ಮೋಸಾ
ನಿನ್ನೀ ಮೊನ್ನೀ ಕೂಡಾ ಬಾಜೂಕಿನ್ ಮಾರಾಷ್ಟ್ರದಾಗ ಇಂಥದೇ ನಡೆದಿತ್ರಿ ಯಪಾ. ಪುಣೆಯಾಗಿನ ನೇಮಕಾತಿ ಪರೀಕ್ಷಾದಾಗ ಬರೀ ಬಿಹಾರಿ, ಉತ್ತರ ಪ್ರದೇಶದ ಮಂದಿಗ ನೌಕರಿ ಕೊಡಾಕ್ ಹತ್ಯಾರ ಅಂತ ಪುಣೇನಾಗೂ ಪ್ರತಿಭಟನೆ ನಡೆದಿತ್ತಂತ. ಇಂಥಾ ಹೋರಾಟ ಎದುಕ್ ನಡೀತವಾ ಅಂತ ತಿಳ್ಕೋರೀ... ನೀವ್ ಏನಾ, ಇನ್ನೂ ನಿದ್ದೀ ಮಾಡೋ ಮಂದೀನೋ ಇಲ್ಲಾ ಎದ್ದು ಹೊರಗ್ ಬರ್ತೀರೋ ಅಂತ ಅವ ಊರೂರು ಅಲ್ಕೊಂಡು ಹೊಂಟಾನಂತ್ರೀಪಾ.

ಕೇಂದ್ರ ಮಂತ್ರಿ ಒಪ್ಪಿದ ಸತ್ಯ
ಕಂಡ ಕಂಡ ಮಂದೀಗೆಲ್ಲಾ ನೋಡ್ರೀ, ಕೇಂದ್ರದ ಮಂತ್ರೀನೇ ಇಂಥಾ ಪಕ್ಷಪಾತ ನಡೀತೈತಿ ಅಂತ ಮಾತಾಡ್ಯಾರೆ ಅಂತ ವೇಲೂ ಮಾಮ ಕಡೀ ಬೆಳ್ ಮಾಡ್ತಾನಂತ್ರಿ. ಕನ್ನಡ್ ಮಂದಿ ಕಣ್ ಮುಚಗೊಂಡು ಕುಂತ್ರ ನಾಳಿ ನಿಮ್ಮ ಮಕ್ಳು ಮರೀಗ ಗುಲಾಮಗಿರಿ ಗಟ್ಟಿ ಅಂತಾನಂತ್ರೀಪಾ.
ನಮ್ಮೂರ ಕೆಲ್ಸ ನಮ್ಮೋರ ಹಕ್ಕು
ಈ ಅನ್ಯಾಯ ಸರಿ ಹೋಗ್ಬೇಕ್ ಅಂದ್ರಾ ಒಕ್ಕೂಟ ವ್ಯವಸ್ಥಿ ಅನ್ನೋದಾ ತುಸ ರಿಪೇರಿ ಆಗ್ಬೇಕಾಗೈತಿ. ಆಯಾ ರಾಜ್ಯದಾಗಿನ ಖಾಲೀ ಕೆಲ್ಸಾ ಎಲ್ಲಾ ಆಯಾ ರಾಜ್ಯದ ಮಕ್ಕಳಿಗೇ ಸಿಗಬೇಕ್ರೀ. ನಮ್ಮೂರಾಗ್ ಅಂಥಾ ಯೋಗ್ಯತೀ ಇರೋ ಮಂದಿ ಇಲ್ಲಾ ಅನ್ನೋದ ಸಾಬೀತಾತಂದ್ರ ಮಾತ್ರಾ ತಾತ್ಕಾಲಿಕವಾಗಿ ಹೊರಗಿನ ರಾಜ್ಯದವರಿಗೆ ಉದ್ಯೋಗ ಕೊಟ್ರೂ ಅಡ್ಡಿ ಇಲ್ಲ. ಹಾಂ ಮತ್ ಮರೀದೆ ಮುಂದಾ ನಮ್ ಮಂದಿಗ ಅಂಥಾ ಯೋಗ್ಯತಿ ಬರಿಸೋ ಏರ್ಪಾಡು ಮಾಡೋ ವ್ಯವಸ್ಥಾನೂ ಇರಬೇಕು. ಕರ್ನಾಟಕದಾಗ ಈಗ ನಡೀಲಿಕ್ ಹತ್ತಿರೋ ಚಳವಳಿ ಇಂಥಾ ಒಂದು ನೀತಿ ರೂಪ್ಸಕ್ ಕಾರಣ ಆಗಬೇಕ್ರೀಪಾ. ನಮ್ ನಾಡಾಗ್ ಹೊತ್ತೋ ಈ ದೀಪ ಇಡೀ ಭಾರತಾನ ಬೆಳಗೋ ಹಾಗ್ ಮಾಡೋಣು... ಕನ್ನಡಾ ಕನ್ನಡಾ.. ಬರ್ರಿ ನಮ್ಮ ಸಂಗಡ ಅಂತಾ ಊರೂರು ಕೇರಿಕೇರಿ ಶಂಖಾ ಹೊಡ್ಕೊಂತಾ, ಜಾಗಟಿ ಬಡಕೊಂತಾ ಹೊಂಟಾನ್ರಿ ಆ ದಾಸಯ್ಯಾ

ಇಕಾ ತುಸಾ ಬಾಗ್ಲಾ ತೆಗ್ದು ಹೊರಗ್ ಬರ್ರಿ, ನಿಮ್ ಮನಿ ಮುಂದೂ ಬಂದಾ ಅಂತ ಕಾಣ್ತೈತಿ.

6 ಅನಿಸಿಕೆಗಳು:

Anonymous ಅಂತಾರೆ...

ii blog modalu post madidaga nivu krishna-arjuna photo hakidri.. en guru, shanka andre krishna-arjuna matra nenpagatta nimge.. hege? heltaralla manusyana modala matu manasininda barodu anta.. hagadre hindu matra kannadiga antana nimma abipraya? athva hindugalige matra nyaya sigbeku antlaa?

Anonymous ಅಂತಾರೆ...

anon avre, shanka annuva vastu khandita hindugalalde inyaroo upyogsalla. aadre ee bloginalli heltirO vastu hindugalige matra seemitavalla anno karanadinda aa foto tegdidaare ansatte. ee hinde ee post alli shankavanna aa shanka emba padakkagiyE upyogsidru anta helbodu.. tension togobedi..

Anonymous ಅಂತಾರೆ...

yaavude hindu vishayada prastaapa bandha takshana adanna prastaapa maadidavaru hindu para haagu bere dharmadavara virodha antha artha maadikolluvudhu bahala baalisha.

anonymous avare, poorvagrahavannu bittu ella dharmavannu samavaagi noduva drushtikona belesikolli.

Anonymous ಅಂತಾರೆ...

ಯಾವನಪ್ಪಾ ಪುಣ್ಯಾತ್ಮ ಮೊದಲನೇ ಅನಾನಿಮಸ್ಸು? ಗುರುಗಳು ಅದೇನ್ ಪೋಟಾ ಆಕಿದ್ರೋ ಏನೋ ನಂಗೊತ್ತಿಲ್ಲ, ಆದ್ರೆ ಇಮ್ಮಡಿ ಅನಾನಿಮಸ್ಸು ಹೇಳೋಹಾಗೆ ಕೃಷ್ಣ-ಅರ್ಜುನರಲ್ಲದೆ ಇನ್ನೇನು ಅಲ್ಲಾನೋ ಜೀಸಸ್ಸೋ ಶಂಕ ಮಡೀಕೊಂಡಾರೇನೋ ಬೆಪ್ ಮುಂಡೇದೆ? ತಲೇಲಿ ಏನ್ ಜೇಡೀಮಣ್ ತುಂಬಿದ್ಯಾ ನಿಂಗೆ ಹೇಗೆ? ಅದೇನೋ ಹೇಳ್ತಾರಲ್ಲ - ಕಪ್ಪೆ ಕಾಲುಗಳ್ನ ಕತ್ತರಿಸ್ತಾ "ಹಾರು" ಅಂತ ಹೇಳ್ಕೊಂಡ್ ಹೋದ ಹ್ಯಾಪ ನನ್ನ ಮಗ ಯಾವನೋ ಕೊನೆಗೆ ನಾಕು ಕಾಲೂ ಕತ್ತರಿಸಿದ ಮೇಲೆ ಕಪ್ಪೆಗಳಿಗೆ ಕಿವಿ ಕೇಳಕ್ಕಿಲ್ಲ ಅನ್ನೋ ನಿರ್ಧಾರಕ್ಕೆ ಬಂದ್ನಂತೆ - ಹಂಗಾಯ್ತು ನಿನ್ನ ಬೆಪ್ಪತನದ ಪ್ರದರ್ಶನ!

Kishore ಅಂತಾರೆ...

ಬಾಳ ಚಲೋ ಬರಿತಿರಿ ಗುರುಗಳೇ. ಉತ್ತರದ ಕನ್ನಡ ಓದತಿದ್ರ, ಹಾಂಗ ಮತ್ನಾಡಕ್ ಮನಸ್ ಆಗ್ತದ. ಅದು ಸರಿ.. ನಾವು ಯಾವ ರೀತಿಯಾದ ಭಯಂಕರ ಪ್ರತಿಭಟನೆ ಮಾಡಬೇಕು..? ಮೊದಲು ಪ್ರತಿಭಟನೆ ಮಾಡಬೇಕು ಎಂದು ಹೆಚ್ಚು ಮಂದಿ ಕನ್ನಡಿಗರಿಗೆ ಮನಸಿನಲ್ಲಿ ಬರಬೇಕು.. ಏನೋ ಈ ತೊಂದರೆ ನಮದಲ್ಲ ಎಂದು ಮನೆಯಲ್ಲಿ ಚೆನ್ನಾಗಿ ಕಾಫಿ ಕುಡಿಯುತ್ತ ಕೂತರೆ... ನಮ್ಮ ಮುಂದಿನ ಪೀಳಿಗೆಯ ನಮ್ಮನ್ನು ಅಪ್ಪ ಅನ್ನುವುದನ್ನು ಬಿಟ್ಟು "ಪಿತಾಜಿ ಮುಜ್ಸೆ ಕನ್ನಡ ಮೇ ಬಾತ್ ಮತ ಕರೋ.. ಪ್ಲೀಸ್" ಎಂದು ಕರೆದರೆ ಆಶ್ಚರ್ಯವೇನೂ ಇಲ್ಲ ಸ್ವಾಮಿ.

Kishore ಅಂತಾರೆ...

ಒಗ್ಗಟ್ಟೇ ಪರಿಹಾರ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails