ಈ ವರ್ಷ ಬಿಡುಗಡೆಯಾದ "ಪ್ರೀತಿ ಯಾಕೆ ಭೂಮಿ ಮೇಲಿದೆ?" ಒಟ್ಟು ತೊಂಬತ್ತೊಂಬತ್ತು ಪ್ರತಿ ಬಿಡುಗಡೆ ಆಗಿದ್ದರೆ "ಗಾಳಿಪಟ" ಎಪ್ಪತ್ತೈದು ಪ್ರತಿ ಬಿಡುಗಡೆ ಆಗ್ತಾ ಇದೆ. ಇದು ಹೈದರಾಬಾದ್, ಚೆನ್ನೈ, ಪುಣೆ, ಮುಂಬೈಗಳಲ್ಲೂ ಬಿಡುಗಡೆಯಾಗ್ತಿರೋ ಸುದ್ದಿ ಕನ್ನಡ ಚಲನ ಚಿತ್ರರಂಗದ ಮಾರುಕಟ್ಟೆ ಬೆಳೀತಿರೋ ಶುಭ ಸೂಚನೆಗಳಾಗಿವೆ. ಕನ್ನಡನಾಡಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಅಂತ ವಿತರಣೆಗೆ ತೊಗೊಳೋ ಚಿತ್ರರಂಗದ ಜನ ಹಾಗೇ ಹೊರರಾಜ್ಯದಲ್ಲೂ ಕನ್ನಡಕ್ಕೆ ಮಾರುಕಟ್ಟೆ ಇರುತ್ತೆ ಅಂತ ಇವತ್ತಾದರೂ ಮನವರಿಕೆ ಮಾಡಿಕೊಳ್ತಾ ಇರೋದು ಖುಷಿಯ ವಿಷಯ. ಒಟ್ನಲ್ಲಿ ಕನ್ನಡ ಮನರಂಜನಾ ಕ್ಷೇತ್ರವೆಂಬ ಗಾಳಿಪಟಾನೂ ಹೊಸ ಹೊಸ ಮಾರುಕಟ್ಟೇನ ಬೆಳುಸ್ಕೊಳ್ತಾ ಎಲ್ಲೆಯಿಲ್ಲದ ಅವಕಾಶಗಳ ಆಕಾಶದಲ್ಲಿ ಮತ್ತಷ್ಟು ಎತ್ತರಕ್ಕೇರಿಸಬೇಕು ಗುರು!
ಒಳ್ಳೇ ಫಸಲಾಗೋ ಮೊದಲು ಸುರಿಯೋ ಮಳೆಯಾಗಿ ಕಳೆದ ವರ್ಷ ಮುಂಗಾರುಮಳೆ ಸಖತ್ತಾಗ್ ಹೊಯ್ದಿದ್ದೇ ಹೊಯ್ದದ್ದು, ಹಳೆ ಕೊಳೆಯೆಲ್ಲ ತೊಳೆದುಹೋಗಿ ಝಗಝಗಸ್ತಾ ಇದೆಯೇನೋ ನಮ್ ಕನ್ನಡ ಚಿತ್ರರಂಗ ಅನ್ನೋ ಭರವಸೆಯ ಮಿಂಚುಗಳು ಮೂಡ್ತಾ ಇವೆ.
ದುನಿಯಾ ಮತ್ತು ಮುಂಗಾರುಮಳೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನು, ಹೊಸ ನಟರನ್ನು, ಹೊಸ ಸಾಹಿತ್ಯಕಾರರನ್ನು ಮಾತ್ರ ಪರಿಚಯ ಮಾಡಿಕೊಡ್ಲಿಲ್ಲ, ಇವು ಕನ್ನಡ ಚಿತ್ರರಂಗಕ್ಕಿರೋ ಬಹುದೊಡ್ದ ಮಾರುಕಟ್ಟೆಯ ಸಾಧ್ಯತೆಯನ್ನೂ ಅನಾವರಣ ಮಾಡಿದವು. ಉತ್ತಮ ಗುಣಮಟ್ಟದ ಸರಕನ್ನು ಉತ್ತಮವಾದ ಮಾರಾಟ ತಂತ್ರದ ಮೂಲಕ ಮಾರುಕಟ್ಟೆಗೆ ತಂದರೆ ಲಾಭಕರ ವಹಿವಾಟು ನಡೆಸೋಕ್ಕೂ ಸಾಧ್ಯ ಅನ್ನೋದನ್ನೂ ತೋರಿಸಿಕೊಡ್ತು. ಇಂದು ಕನ್ನಡ ಚಿತ್ರೋದ್ಯಮ ಒಳ ಮತ್ತು ಹೊರ ನಾಡುಗಳಲ್ಲಿ ನೂರಾರು ಕೋಟಿ ವಹಿವಾಟು ನಡೆಸಲು ಕಾರಣವಾಗಿದೆ.
ಸುಂದರವಾದ ವಿಷ್ಣುವರ್ಧನ್ ನಾಯಕನಾಗಿ, ಅತ್ಯುತ್ತಮವಾದ ನಿರೂಪಣೆ ಹೊಂದಿರೋ ಆಪ್ತಮಿತ್ರಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ರಜನಿಕಾಂತರ ಚಂದ್ರಮುಖಿ ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು? ಕನ್ನಡ ಚಿತ್ರರಂಗಕ್ಕೇ ಅಂತಹ ವಿಸ್ತಾರವಾದ ಮಾರುಕಟ್ಟೆ ಕನ್ನಡ ಚಿತ್ರಗಳಿಗೂ ಇದೆ ಎನ್ನುವ ಕಲ್ಪನೆಯೇ ಇರಲಿಲ್ಲವೇನೋ ಅನ್ಸುತ್ತೆ. ಹಿಂದೆಲ್ಲಾ ಯಾವುದು ಅಸಾಧ್ಯವಾಗಿತ್ತೋ ಇವತ್ತು ಅದು ಸಾಧ್ಯವಾಗ್ತಿದೆ. ಕನ್ನಡ ಚಿತ್ರಗಳು ಹೊರನಾಡಿನಲ್ಲಿ, ಹೊರದೇಶಗಳಲ್ಲಿ ಇದೀಗ ಬಿಡುಗಡೆಯಾಗುತ್ತಾ ಇರುವುದು ಒಳ್ಳೆ ಬೆಳವಣಿಗೆ ಗುರು. ಇದು ಕನ್ನಡ ಚಿತ್ರರಂಗದಲ್ಲೇ ಒಂದು ಆತ್ಮವಿಶ್ವಾಸಕ್ಕೆ ಆ ಮೂಲಕ ಹೊಸ ಹೊಸ ಸಾಹಸಗಳಿಗೆ ಪ್ರೇರಣೆಯಾಗಿರುವುದು ನಿಜ.
13 ಅನಿಸಿಕೆಗಳು:
ಗಾಳಿಪಟ ತುಂಬಾ ಚೆನ್ನಾಗಿದೆ ಸೂಪರಾಗಿದೆ . ಎಲ್ಲರೂ ನೋಡಿ ಮಾಸ್ಟ್ ಮಜಾ ಮಾಡಿ.ಚಂದ್ರು
ಬಿಡುಗಡೆಯಾಗಿ ಒಂದು ವಾರಾನೂ ಆಗಿಲ್ಲಾ...ಆಗ್ಲೆ ಎರಡು ಬಾರಿ ನೋಡಿದ ಹೆಮ್ಮೆ ನನ್ಗೆ :)
'ಗಾಳಿಪಟ' ನೋಡ್ಬೇಕು ಅನ್ನೋರ್ಗೆಲ್ಲಾ ಒಂದು ಸಲಹೆ...
ದಯವಿಟ್ಟು 'ಮುಂಗಾರು ಮಳೆ'ನ ಮರ್ತು 'ಗಾಳಿಪಟ' ನೋಡಿ....
kannada cinema ge market bere raajyagalalli ide. adre adanna nodo jana bari kannadigaru. hyderabad , chennai nalli release adre adana nodoru kannadigare.. allina locallites moosi kooda nodolla.. namma jana madtaralla.... yavdadru gabbu telgu tamil movie bandre adee sakath movie tara ella kannadigaru hogi nodtare.. avru nammanna moosalla andmele navyake avrige mane haakbeku?
Pramod heliro haage "Mungaaru male " na marthu Galipata film na nodi ....... neat aagi decent aagiro movie.... Nodi ond sala chennagi nakku enjoy maadi banni .......
ಮುಂಗಾರು ಮಳೆ ಮರೆತು ಗಾಳಿಪಟ ನೋಡಿ ಅನ್ನೋ ಮಾತು ಅರ್ಥ ಆಗಲಿಲ್ಲ..
!!
kannada cinemagalanna hora raajyagalashte allade hora deshagalallu immediate aagi bidugade maadabeku. ishtondu neerikshe idda gaalipata kooda yake hora deshagalalli bidugade aaguttilla gottagtilla. kannada chitragalige nijakku olle marukatte ide.
Gaalipata ondu adbhuta cinema,,, Mungaru male na martu nodi andiddu yaake andre,, mungarige compare maadtha idre e movie na enjoy maadoke aagalla..
I have seen it once,,, will go again...
Screenplay , camera work, music, lyrics, acting are all worldclass,, Climax could have been a lil more gripping,, that's ok,, full marks to yogi/ganesh/kaykini team
ಯಾವ ಗೊಡ್ಡುಗಳ ರಿವ್ಯೂ ಓದದೆ..
ಯಾವ ಅಡ್ಡಕಸಬಿಗಳ ಮಾತು ಕೇಳದೆ...
ಸುಮ್ನೆ ಹೋಗಿ, ಸಿನಿಮಮನೆಯ ಸೀಟಲ್ಲಿ ಕಣ್ಣುಕವಿ ಬಿಟ್ಕೊಂಡ್ ಕೂತಕೊಳ್ಳಿ..
ಮೊದಲಿಂದ ಕೊನೆ ತನಕ ಗಾಳಿಪಟ ಹಾರಾಡದಂತೆ, ಸವಿಗನ್ನಡ ತಂಗಾಳಿಯ ಬಾನಿನಲ್ಲಿ ಸಕ್ಕತ್ ಮಜ ಮಾಡಿ..
ಗಾಳಿಪಟ ಸಕ್ಕತ್!
mungaru male ge compare maadidre swalpa dull ansutte annorige nanna uttara..
comapre yaakri maadtira??
Ondu bangara manushya, mayura koTTa namma annavrige anthadoddu success na repeat maadoke aagalilla,, maadida movie yella varsha poorti odali antha nirikshe maadodu tappu,, ranga SSLC antha movie kotta Yograj avare Mungaru male antha classic tandiddu,, ivattu gaalipata nu ondu super visual treat.. sumne onda sali nodi,, nimma duddige khandita mosa illa..
intha ondu olle movie na support maado mulakha naavu yograj bhat, ganesh, kaykini, harikrishna, diganth intha pratibhavantarige innshtu spoorti tumbona
Gaalipata hit aguthhe. Mungaaru Male gintha munche bandidre gaalipata mungaaru male ashte hit aaguthithu.
ee review read maadi.
http://churumuri.wordpress.com/2008/01/20/not-if-it-will-fly-high-but-how-high-it-will-fly/
ಪಿಂಕ,
ಪ್ರಮೋದ್ ಹೇಳಿದ್ದು, ಮುಂಗಾರುಮಳೆಯ ಹ್ಯಾಂಗ್‍ಓವರಿನಿಂದ ಹೊರಬಂದು ಈ ಚಿತ್ರವನ್ನು ನೋಡಿ ಅಂತ!!
ಅಂದ ಹಾಗೆ, ಕೆಟ್ಟದಾಗಿ ವಿಮರ್ಶೆಯನ್ನು ಬರೆದ ವಿ.ಕ. ಸ್ವತಃ ತನ್ನ ಕಾಲ ಮೇಲೆ ತಾನೆ ಚಪ್ಪಡಿ ಎಳೆದುಕೊಂಡಿದೆ ಅನ್ನಿಸ್ತಾ ಇದೆ!! ಗಾಳಪಟ ಹಾರುತ್ತಿರುವ ರೀತಿ ನೋಡಿದರೆ ಮುಂದೆ ವಿ.ಕ.ದಲ್ಲಿ ಬರೂ ಚಿತ್ರವಿಮರ್ಶೆಯು ತೋಳ ಬಂತು ತೋಳ ಕತೆಯಾದೀತು!!
Santosha aaytu "gaaLipaTa"da bagge keLi. US nallu tarisalikke namma local agent na vicharistene ..
Kannada chalana chitragaLige Ee keLagina link noDi:
http://freeindianmovie.blogspot.com
namma rajakiyadavaru mattu patrikeyavaru sariyagiddare
kannada kke ee gati barutta iralilla ega taka tai anta
kuniyodu kuuda nanna anisigege
sariyilla ade ondu vyapara agide
jai karnata annuvudakke 50/= rupaayi mattu jai buvanEshvari annuvudakke 75/= rupayi bele nadeyutta ide agaga beleyalli dolar
haage eru peru aguvudu ide
- superior huchcha
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!