ಇನ್ಮುಂದಾ ಕಂಬಿನೂ ಹಿಂದೀಲ್ ಎಣಿಸಬೇಕ್ರೀಪಾ!

ಮೊನ್ನಿ ದಿನಾ ಬೆಂಗಳೂರಾಗಿರೋ ಪರಪ್ಪನ ಅಗ್ರಹಾರದ ದೊಡ್ದ ಸೆರಮನಿಯಾಗಿಂದ ಒಂದು ಮಸ್ತ್ ಸುದ್ದಿ ಹೊರಗ್ ಬಂದದಾ... ಉತ್ತರ ಭಾರತದ ಒಂದೈವತ್ ಮಂದಿ ಖೈದಿಗಳು ಕರ್ನಾಟಕದ ಹೈ ಕೋರ್ಟಿನಾಗೊಂದು ಮನವಿ ಸಲ್ಲಿಸ್ಯಾರ.
ನಮಗಾ ಇಲ್ಲಿ ಊಟ ಹಿಡ್ಸೋಣಿಲ್ಲ, ನಮಗ ಇಲ್ಲಿ ಬಚ್ಚಲು ಹಿಡ್ಸೋಣಿಲ್ಲ, ಇಲ್ಲಿ ಮಂದಿ ಭಾಷಾ ನಮಗ ತಿಳಿಯೋಣಿಲ್ಲ, ಅವರ ಕೂಡಾ ನಮಗ ಇರಕ ಅಗೋಣಿಲ್ಲ ... ನಮಗಾ ಅನುಕೂಲ ಮಾಡಿಕೊಡ್ರಲಾ ಅಂತ ನ್ಯಾಯಾಲಯದ ಮೊರಿ ಹೊಕ್ಕಾರಾ!

ಈಗೇನು ಮಾಡಬೇಕಪಾ?

ಈಗರಾ ಏನ್ ಮಾಡಬೇಕೈತಿ ಗೊತ್ತನು?

ಪರಪ್ಪನ ಅಗ್ರಹಾರದಾಗ ಬೇರೆ ಬೇರೆ ಭಾಷಾ ಮಾತಾಡೂ ಭಾಳಾ ಮಂದಿ ಬರ್ತಿರ್ತಾರ. ಅವ್ರೆಲ್ಲ ಮೊದಲು ಹಿಂದಿ ಭಾಷ್ಯಾಗ್ ಮಾತಾಡೋದ್ ಕಲೀಬೇಕಾಗದ. ಅದಕ್ಕ ಕೈದಿಗಳು ಜೈಲು ಶಿಕ್ಷಾ ಅನುಭವ್ಸೋ ಮೊದ್ಲು ಹಿಂದಿ ಪಾಠ ಕಲೀಲೆ ಬೇಕಾ. ಬೇಕಾದ್ರ ಅದ್ನು ನೀವು ಶಿಕ್ಷಾದ ಒಂದು ಭಾಗ ಅಂದ್ಕೊಳ್ರಲಾ ಅನ್ನೂ ಆದೇಶ ಹೊರಡಸ್ ಬೇಕಾಗದ...

ನಮ್ ಕನ್ನಡ ಮಂದಿ ಮುದ್ದಿ, ರೊಟ್ಟಿ ಜೈಲಿನ ಹೊರಗ ಹ್ಯಾಗೂ ರಗಡ್ ತಿಂದಿರ್ತಾರಾ. ಅದಕ್ಕಾ ಅವುರಗ ಉತ್ತರ ಭಾರತೀಯ ಅಡಿಗಿ ಉಣ್ಣೂ ಶಿಕ್ಷೆ ಕೊಡಬೇಕ್ರಿಪಾ. ಬಾಯಾಗ್ ಬೆರಳಿಟ್ರ ಕಚ್ಚೂದಿಲ್ಲ ಅನ್ನೂ ಕನ್ನಡ ಮಂದಿ ಸಾಸಿವಿ ಎಣ್ಣೀ ಒಳಗ ಮಾಡಿದ್ ಪರೋಟ ತಿನ್ನೋದಿಲ್ಲಾ ಅಂತಾರೇನು? ಇಡೀ ಜೈಲದಾಗ ಭಾವೈಕ್ಯತಿ ಉಳೀಬೇಕ ಅಂದ್ರ ಒಳಗಿರೂ ಎಲ್ಲಾ ವೈವಿಧ್ಯತೆ ಅಳಿಸೋದ ಛಲೋ ಐತಿ. ಜೈಲಾಗ ಹಿಂದಿ ಮಾತಾಡೋ ಮಂದೀಗಾ ತುಸಾ ಶಿಕ್ಷಾದಾಗ ರಿಯಾಯ್ತಿ ಕೊಡಬೇಕು ಅಂತಲೂ ಶಿಫಾರಸ್ಸು ಮಾಡಬೇಕ್ರಿಪಾ.
ದಿನಾ ಹಿಂದಿ ಪತ್ರಿಕಾ ಓದೂದ ಕಡ್ಡಾಯ ಮಾಡಬೇಕ್ರಿಪಾ. ಒಟ್ನಾಗ ಜೈಲು ಶಿಕ್ಷಿ ಮುಗ್ಸಿ ಹೊರಗ್ ಬರೋ ಹೊತ್ತಿಗ ಕನ್ನಡದವ ಚಲೋ ಹಿಂದಿ ಪಂಡಿತ ಆಗಬೇಕ್ರಿಪಾ. ಯಾಕಂದ್ರಾ ಆಗ ಅಂವ ಇಡೀ ಭಾರತದ ಯಾವ ಜೈಲಾಗ್ ಬೇಕಾರ ಬಾಳಬಲ್ಲ ನೋಡ್ರಿ.
ಅಂದಹಾಂಗ ಸೆರಮನಿಯಾಗಿನ ಕಂಬೀನ ಒಂದು ಎರಡೂ ಎಣಿಸೋದು ಬಿಟ್ಟು ಏಕ್, ದೋ ಅನ್ನೂದು ಕೇಳಾಕ್ ಹತ್ತೈತೋ ಇಲ್ಲೋ ಗುರುಗಳಾ!

6 ಅನಿಸಿಕೆಗಳು:

Anonymous ಅಂತಾರೆ...

ಪುಕ್ಕಟ್ಟ ರೊಟ್ಟಿ ಮುರಿಯಾಕ್ ಹೋಗು ಜೈಲನಾಗೂ ಅಶೋಕ್ ಸ್ಟಾರ್ ಹೋಟೆಲ್ ನಾಗ್ ಸಿಗು ಮರ್ಯಾದಿ ಬೇಕಂತ ಈ ಖದೀಮರಿಗೆ. chalo bardiri gurugale !

Anonymous ಅಂತಾರೆ...

ಪಾಪ ಯಾಕೋ ಸ್ವಲ್ಪ ಕಮ್ಮಿನೇ ಡಿಮ್ಯಾಂಡು ಮಾಡ್ಯಾರ್.. ಇನ್ನು ಒಂದಿಷ್ಟು ವ್ಯವಸ್ಥೆ ಮಾಡ್ಬೇಕ್ರಿ:

* ಜೈಲಿನ್ಯಾಗ್ ಬರೆ ಕನ್ನಡ ಪೇಪರ್ ತರಸ್ತಾರ್, ಹಿಂಗಾಗಿ ಬಾಳ ಬೇಜಾರ್ ಆಗಿರ್ತೆತಿ, ಒಂದು ೪ ಹಿಂದಿ ಪೇಪರ್ ಹಾಕ್ಸು ವ್ಯವಸ್ಥೆ ಮಾಡ್ಬೇಕ್ರಿ.
* ದಿನಾ ಇಡಿ ಖಾಲಿ ಕುಂತು ಬ್ಯಾಸರ ಮಾಡ್ಕೊಂಡಿರ್ತಾರ್, ಹಿಂಗಾಗಿ ಅವರಿಗೆ ನೋಡಾಕ್ ಒಂದು ಟಿ.ವಿ ಹಾಕಸಿ, ಹಿಂದಿ ಚಾನೆಲ್ ನೋಡು ವ್ಯವಸ್ಥಾನೂ ಮಾಡ್ಬೇಕ್ರಿ.
* ಆಮ್ಯಾಲೆ ಅಲ್ಲಿರೋ ಎಲ್ಲ ಖೈದಿಗೊಳು ಕನ್ನಡ ಮಾತಾಡುದ್ರಿಂದ ಇವರಿಗೆಲ್ಲ ಬಾಳ ತ್ರಾಸ್ ಆಗಾತೆತ್ರಿ, ಹಿಂಗಾಗಿ ನಮ್ಮ ಸರ್ಕಾರ ಲಗುನ ಜೈಲ್ನಾಗ್ ಇರು ಎಲ್ಲ ಖೈದಿಗೊಳಿಗೆ ಹಿಂದಿ ಕಲಸು ವ್ಯವಸ್ಥೆ ಮಾಡ್ಬೇಕ್ರಿ. ಪಾಪ ಎಷ್ಟು ದಿನ ಇವರೆಲ್ಲ ಹಿಂಗ ಬಾಯಿ ಇದ್ದು ಮೂಕರ ಗತೆ ಜೈಲಿನಾಗ್ ಇರುದ, ಹೌದಿಲ್ರಿ ? ಸ್ವಲ್ಪ ನಮ್ಮ ಮಂದಿನೂ ಹಿಂದಿ ಕಲತ್ರ, ಅವಗಾವಾಗ್ ಸ್ವಲ್ಪ ಮಾತಾಡಿ ಅವರ ಬೇಜಾರ್ ಕಲಿಬೌದು. ಏನಂತೀರಿ?
* ಅಷ್ಟ ಯಾಕ್ರಿ, ವಾರಕೊಮ್ಮೆ ಈ ಎಲ್ಲ ಪುಣ್ಯಾತ್ಮರಿಗೆ ಪಿ.ವಿ.ಆರ್ ಸಿನಿಮಾಕ ಕರ್ಕೊಂಡು ಹೋಗಿ ಚಲೋ ಹಿಂದಿ ಸಿನಿಮಾ ತೋರ್ಸಿ ಕರಕೊಂಡ ಬರಬೇಕ್ರಿ.

Anonymous ಅಂತಾರೆ...

nOdryala...hErike annOdu ellige bamtu..makkLu maaDirOda aparaadha adraaga byaare ivrige rservations -avra bhaashe maataaDbEku avra ooTa tinbEku amta...judges shaaNyaaraadra "makkLa modala shagaNi tinno kelsa maaDeeri..eega nimga heng bEko hang demand bEre maaDteera...muchkomDu irri" amta baidu avra case na phinishhhh maaDbEku..

-putta

Unknown ಅಂತಾರೆ...

alla e maklige hindalga jail nyaga ella andhra bellary jail nyag kattak rotti thatak enni tinnak kodbeku andhra gothu agthaithi.
Amyala hittu beesaka hacch beku andhra nam beli gothu agthadha.

Vinod ಅಂತಾರೆ...

ಅಲ್ಲ ಇವ್ರು ಖೈಡಿಗೊಳ ? ಅಥ್ವಾ ರಾಷ್ಟ್ರಪತಿ ಗೊಲ? ಇಂಥ ಡಿಮ್ಯಾಂಡ್ ಮಾಡಕ್, ಅಲ್ಲ ಇವ್ರೇನು ಬೇರೆ ಭಾಷೆ ಸೇರಂಗಿಲ್ಲ ಅನ್ಣಕೇನು ಲಗ್ನ ಆಗ್ತರೋ? ಅವ್ಥಹ್ವಾ ಹುದ್ಗಿ ಕೊಡ್ತಾರೋ.??
ಚಿಂದಿ ಚೋರ್ ಗೋಲ್ ! ಇಲ್ಲಿ ಛೋಲೋ ನಾವು ಹೇಳಿದ್ದ ಈ ಸಾವಿರ ಕಷ್ಟ ನೇ ಸಾಲ್ವ್ ಮಾಡ್ತಾ ಇಲ್ಲ ??? ....

-ವಿನೋದ್.

lu ಅಂತಾರೆ...

avrena madtar paapa! nammoru ellaru helidange kunitare, avru kunstare.evttu jailalli hindi beku antare nale karnatakadallella hindi beku antre.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails