ಇವತ್ತು ಹಿಂದೀಲೂ, ನಾಳೆ ಹಿಂದೀಲಿ ಮಾತ್ರಾ!

ಕರ್ನಾಟಕ ರಾಜ್ಯದ ಮುಂಗಡ ಪತ್ರವನ್ನು ಹಿಂದಿ ಭಾಷೇಲೂ ತರಕ್ಕೆ ಸರ್ಕಾರ ಈ ಬಾರಿ ಮುಂದಾಗಿರೋ ಸುದ್ದಿ ವರದಿಯಾಗಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇಲ್ಲದೆ ರಾಜ್ಯಪಾಲರ ಆಳ್ವಿಕೆ ಇದೆ ಅನ್ನೋದನ್ನು ನೆಪ ಮಾಡ್ಕೊಂಡು ಈ ಬಾರಿಯ ಮುಂಗಡ ಪತ್ರವನ್ನು ಕನ್ನಡ, ಇಂಗ್ಲಿಷ್ ಜೊತೆಯಲ್ಲಿ ಹಿಂದಿಯಲ್ಲೂ ತರ್ತಿದಾರೆ. ಕನ್ನಡದಲ್ಲಿ ಇದ್ದಮೇಲೆ ಇನ್ಯಾವ ಭಾಷೇಲ್ಲಿ ತಂದ್ರೂ ನಮಗೇನು ಅಂತ ಮೇಲ್ನೋಟಕ್ಕೆ ಅನ್ನುಸ್ಬೋದು. ಆದ್ರೆ ಈ ಒಂದು ನಡೆಯ ಮೂಲಕ ಕೇಂದ್ರ ಸರ್ಕಾರ ಯಾವ ಸಂದೇಶ ಕೊಡ್ತಿದೆ ಅಂತ ಚೂರು ಅರ್ಥ ಮಾಡ್ಕೊಳ್ಳೋಣ.

ಇವತ್ತು ಹಿಂದಿಯಲ್ಲೂ ಇರುವುದು ನಾಳೆ ಬರೀ ಹಿಂದಿಯಲ್ಲಿ ಬಂದೀತು!

ಈ ಮುಂಗಡ ಪತ್ರ ಅನ್ನೋದು ಆಡಳಿತದ ಒಂದು ಭಾಗ ಮಾತ್ರ. ರಾಜ್ಯಪಾಲರ ಆಳ್ವಿಕೆ ಇದೆ ಅನ್ನೋ ಕಾರಣಕ್ಕೇ ಇದನ್ನು ಹಿಂದಿ ಭಾಷೆಯಲ್ಲಿ ತರೋ ಪ್ರಯತ್ನ ಅನಗತ್ಯವಾದ ಆರ್ಥಿಕ ಹೊರೆ ಮಾತ್ರವಲ್ಲದೆ, ಭಾರತದಲ್ಲಿ ಹಿಂದಿಯಲ್ಲಿಲ್ಲದ ದಾಖಲೆಗಳು ಅಪೂರ್ಣವೆನ್ನುವ ಸಂದೇಶ ಕೊಡುತ್ತಿರುವುದು ಸರಿಯಲ್ಲ. ಭಾರತಕ್ಕೆ ಅಧಿಕೃತ ಸಂಪರ್ಕ ಭಾಷೆಯಾಗಿ ಹಿಂದಿ ಯಾಕೆ? ಹಾಗೆ ಇನ್ನೊಂದು ಭಾಷೇಲಿ ತರೋದೆ ಆಗಿದ್ದಲ್ಲಿ ಎಲ್ಲ ಭಾರತೀಯ ಭಾಷೆಗಳಲ್ಲಿ ತರಬೇಕಿತ್ತಲ್ಲವಾ? ಕನ್ನಡಕ್ಕಿಂತ ಹಿಂದಿಗೆ ಹೆಚ್ಚಿನ ಸ್ಥಾನ ಕಲ್ಪಿಸುತ್ತಿರುವ ಇದು ಹೇರಿಕೆಯಲ್ಲದೇ ಮತ್ತೇನು? ಅಷ್ಟಕ್ಕೂ ಇದನ್ನು ಯಾರ ಅನುಕೂಲಕ್ಕೆ ಮಾಡ್ತಿದಾರೆ? ಇವತ್ತು ಮುಂಗಡ ಪತ್ರ ಅನ್ನೋರು ಆರು ತಿಂಗಳು ಮುಗ್ಯೋದ್ರಲ್ಲಿ ಇನ್ನೇನೇನನ್ನು ಹಿಂದಿಯಲ್ಲಿ ತರಬೇಕು ಅಂತಾರೋ?

’ಮಾಧ್ಯಮಗಳು’ ಕಣ್ಣು ತೆರೆಯಲಿ

ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನೊಮ್ಮೆ ಓದಿ. ಹೇಳಿಕೆ ನೀಡಿರುವ ಅಧಿಕಾರಿ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದರೆ, ಪತ್ರಿಕಾ ವರದಿ ರಾಷ್ಟ್ರಭಾಷೆ ಎಂದು ಬರೆಯುತ್ತದೆ. ರಾಷ್ಟ್ರ ಭಾಷೆ ಎನ್ನುವುದಕ್ಕೂ ರಾಷ್ಟ್ರೀಯ ಭಾಷೆ ಎನ್ನುವುದಕ್ಕೂ ಅದೇನು ವ್ಯತ್ಯಾಸವೋ ತಿಳಿಯದು. ಭಾರತೀಯ ಸಂವಿಧಾನದ ಯಾವ ಪುಟದಲ್ಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿಲ್ಲ. ಆದರೆ ನಮ್ಮ ನಾಡಿನ ಜವಾಬ್ದಾರಿಯುತ ಪತ್ರಿಕೆಗಳು ಬಹಳಷ್ಟು ಸಾರಿ ಹಿಂದಿ ರಾಷ್ಟ್ರಭಾಷೆ ಆಂತ ಬರೆಯುತ್ತಲೇ ಬಂದಿವೆ. ಆ ಮೂಲಕ ಸಲ್ಲದ ಸುಳ್ಳನ್ನು ಪ್ರಚಾರ ಮಾಡುತ್ತಲೇ ಬಂದಿವೆ. ಏನ್ ಗುರುವಿನ ಹತ್ತಾರು ಲೇಖನಗಳು ಈ ಬಗ್ಗೆ ಬೆಳಕು ಚೆಲ್ಲುತ್ತಲೇ ಬಂದಿವೆ.

ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ಕೊಡುವ ಹಿಂದಿನ ಪ್ರಯತ್ನಗಳೆಲ್ಲಾ ವಿಫಲವಾಗಿದ್ದರೂ ಹಿಂಬಾಗಿಲ ಮೂಲಕ ಕೇಂದ್ರ ಸರ್ಕಾರ ಹಿಂದಿಗೆ ಅಧಿಕೃತ ಭಾಷೆ ಎಂಬ ಪಟ್ಟ ನೀಡಿದೆ. ನಿಜವಾದ ಒಕ್ಕೂಟದಲ್ಲಿ ಇದೇ ತಪ್ಪು ಹೆಜ್ಜೆಯಾಗಿದೆ. ನಿಜವಾಗಿಯೂ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಇರಬೇಕಾಗಿದೆ.

ಹಿಂದಿ ರಾಷ್ಟ್ರಭಾಷೆಯಾದರೆ ಭಾರತದ ಒಗ್ಗಟ್ಟು ಮುರೀದೀತು ಅಷ್ಟೆ!

ಯಾವ ಒಗ್ಗಟ್ಟಿನ ಉದ್ದೇಶದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲು ಹೊರಟಿರುವರೋ ಆ ಉದ್ದೇಶಕ್ಕೇ ಇಂತಹ ಕ್ರಮಗಳು ಭಂಗ ತಂದೀತು. ಹಿಂದಿಯನ್ನು ಅಷ್ಟರ ಮೇಲೂ ರಾಷ್ಟ್ರಭಾಷೆ ಮಾಡಿದರೂ ಅದನ್ನು ಕನ್ನಡಿಗರು ಒಪ್ಪುವುದು ಆತ್ಮಹತ್ಯಾತ್ಮಕ. ಯಾಕಂದರೆ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಇದು ಹಿಂದಿಯವನನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸುತ್ತದೆ. ಕನ್ನಡದ ಮಕ್ಕಳು ತಮ್ಮದಲ್ಲದ ಭಾಷೆಯನ್ನು ಕಲಿಯಬೇಕು ಎನ್ನುವ ಶೂಲಕ್ಕೆ ಬಲಿಯಾಗಬೇಕಾಗುತ್ತದೆ. ಒಂದು ಪ್ರದೇಶದ ಜನತೆ ತಮ್ಮದಲ್ಲದ ನುಡಿಯನ್ನು ಕಲಿಯದೆ ಇದ್ದರೆ ತಮ್ಮ ನಾಡಿನಲ್ಲೇ ಕೆಲಸ ದೊರೆಯದೇ ಹೋಗುವ ಸ್ಥಿತಿ ಹುಟ್ಟುತ್ತದೆ. ಅನಿಯಂತ್ರಿತ ವಲಸೆ ಕನ್ನಡಿಗರ ಅನ್ನದ ತಟ್ಟೆಗೆ ಮಣ್ಣು ಹಾಕುತ್ತದೆ. ಇಂತಹ ಪರಿಸ್ಥಿತಿಗೆ ಕಾರಣವಾಗುವ 'ದೇಶಕ್ಕೊಂದೇ ಭಾಷೆ’ಯೆನ್ನುವ ಪರಿಕಲ್ಪನೆ ಅಪಾಯಕಾರಿಯಾಗಿದೆ. ತಮ್ಮ ಸೈದ್ಧಾಂತಿಕ ಸ್ವಾರ್ಥಕ್ಕಾಗಿ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಪ್ರಚಾರ ಮಾಡುವ ಕೆಲಮಾಧ್ಯಮಗಳ ಕ್ರಮ ಕನ್ನಡಿಗರ ಬದುಕನ್ನು ಮುಳುಗಿಸುವ ಪ್ರಯತ್ನವಾಗುತ್ತದೆ.

ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಇಗೋ ನೋಡಿ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಮೂರನೇ ಹಿಂದಿ ಭಾಷಾ ಸಮಾವೇಶದಲ್ಲಿ ಹಿಂದಿಯನ್ನು ಎಲ್ಲ ಭಾರತೀಯರಿಗೂ ಕಡ್ಡಾಯ ಮಾಡಿ ಅನ್ನೋ ಅನಿಸಿಕೆ ವ್ಯಕ್ತವಾಗಿದೆ. ಕನ್ನಡಿಗರ ಸಂಸ್ಕೃತಿ, ಭಾಷೆ, ಉದ್ಯೋಗಗಳನ್ನು ಬಲಿಕೊಡಬೇಕು ಎನ್ನುವ ಸಿದ್ಧಾಂತವು ರಾಷ್ಟ್ರೀಯತೆಗೆ ಮಾರಕ ಮತ್ತು ರಾಷ್ಟ್ರೀಯತೆಯ ತಪ್ಪು ವ್ಯಾಖ್ಯಾನವಾಗುತ್ತದೆ. ಏನಂತೀರಾ? ಗುರು

6 ಅನಿಸಿಕೆಗಳು:

Anonymous ಅಂತಾರೆ...

nimma anisike sari idey
nanna prakara e blog nalli naavu e visya discuss madidmele
swalpa news papers ge mail madidrey
avaga avru saha idara baggey kalaji vahistharey
prathiyobba kannadiganigu jagruthi moodatthey
e blog nalli elladru ondu kade news papers mail id na haaki

ಗಿರೀಶ ರಾಜನಾಳ ಅಂತಾರೆ...

ಲೇಖನ ಚೆನ್ನಾಗಿದೆ ಸರ್‍, ಇವತ್ತು ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಾ ಇದೆ. ಇರೋಕೆ ಜಾಗ ಕೊಟ್ಟರೆ, ಮನೇನೆ ತಮ್ಮದು ಅಂದ್ರಂತೆ..ಇವರನ್ನು ಹೀಗೆ ಬಿಟ್ಟರೆ ಹಿಂದಿನೇ ನಮ್ಮ ಭಾಷೆ ಅಂತ ಶುರು ಮಾಡ್ತಾರೆ..ಮೊದಲು ಇದಕ್ಕೆ ಕಡಿವಾಣ ಹಾಕಬೇಕು ಸರ್‍, ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋದೀತು.

Anonymous ಅಂತಾರೆ...

Have a look at the post
www.pratispandana.wordpress.com/

Anonymous ಅಂತಾರೆ...

Indian constitution allows Hindians to go and settle anywhere in India and that state government should not impose the state education medium on Hindians. The same does not apply to Kannadigas, Telugus or Tamilians.

Kishore ಅಂತಾರೆ...

Before the common man realise that Hindi is not their national language, Hindians would have made all legislative documents only in Hindi. Budget in Hindi, education system in Hindi. Then there wont be any freedom to transact in Kannada. to talk in Kannada. The Centre should realise that they are forcing Hindi and should stop it right now. If it is a free country, then the Central Government should promote Kannadigas to take up Kannada medium anywhere in the country. By allowing only Hindi speakers, in the constitution, to take up Hindi anywhere they go is a crime and I think we are at war with India.

ಮಧುಕುಮಾರ ಅಂತಾರೆ...

ಎಲ್ಲಕ್ಕಿಂತ ಶುದ್ಧವಾದ ಭಾಷೆ ನಮ್ಮದು....ಆ ಹಿಂದಿಯಲ್ಲಿ ಎಷ್ಟು ಹುಳುಕಿದೆ ಗೊತ್ತಾ?..ಇರುವ ಕೆಲವು ಪದಗಳಲ್ಲೇ ವಾಕ್ಯಗಳು ತಯಾರಾಗುತ್ತವೆ...ಆದರೆ ನಮ್ಮದು ಹಾಗಲ್ಲ,ಎಲ್ಲದಕ್ಕೂ ಬೇರೆ ಬೇರೆ ಪದಗಳಿವೆ...ಹೆಚ್ಚು ಜನ ಉಪಯೋಗಿಸುತ್ತಾರೆ ಎಂದು ಅದನ್ನು ರಾಷ್ಟ್ರಭಾಷೆ ಎಂದು ಬಾಯಿ ಹರ್ಕೋತಾರೆ ಅಷ್ಟೆ ಗುರು....ಈಗಿನ ಕಾಲದಲ್ಲಿ ಕೆಟ್ಟದಕ್ಕೇ ಜಾಸ್ತಿ ಬೆಲೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ...ನಮ್ಮ ಎಷ್ಟೋ ಜನರಿಗೆ ನಮ್ಮದನ್ನು ಕಂಡರೆ ಅಸಹ್ಯ ಗೊತ್ತಾ?...ಇಲ್ಲಿನವರು ಸುಮ್ಮನಿದ್ದಾರಲ್ಲಾ ಅಂತ ಸಿಕ್ಕಾಪಟ್ಟೆ ಅವರು ಹೆಗರಾಡೋದು...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails