ಇದೇನಪ್ಪ ಇಷ್ಟ ಬೇಗ ಮತ್ತೆ ಐ.ಪಿ.ಎಲ್ ಬಗ್ಗೆ ಏನ್ ಗುರು ಬರ್ದಿದ್ದಾರೆ ಅಂತ ಅಚ್ಚರಿ ಪಡಬೇಡಿ. ನಮ್ಮ ಬೆಂಗಳೂರಿನ ರಾಯಲ್ ಛಾಲೆಂಜರ್ಸ್ ತಂಡಾನ ಪರಿಚಯಿಸೋ ಸಲುವಾಗಿ ತಂಡದ ವ್ಯವಸ್ಥಾಪಕರು ಮಾಡಿರೋ ಹಾಡು ಹಿಂದೀಲಿರೋದೆ ಇದಕ್ಕೆ ಕಾರಣ ಗುರು!
ಅಭಿಮಾನಿಗಳ ಕನ್ನಡ ಹಾಡು!
ನಮ್ಮ ತಂಡಾನ ಹುರಿದುಂಬಿಸೋಕೆ ತಂಡದ ಅಭಿಮಾನಿಗಳೇ ಸೇರಿ ಮಾಡಿರೋ ತಾಕತ್ತು ಅನ್ನೋ ಕನ್ನಡದ ಹಾಡು ಇವತ್ತು ಕರ್ನಾಟಕದ ಜನರ ನಾಲಿಗೆ ಮೇಲೆ ನಲೀತಿದೆ. ತಾಕತ್ತು ಅನ್ನೋ ಸಕ್ಕತ್ತು ಹಾಡು ರೇಡಿಯೊದಲ್ಲಿ, ಟಿವಿಯಲ್ಲಿ, ಇಂಟರ್ನೆಟ್ಟಲ್ಲಿ... ಹೀಗೆ ಎಲ್ಲ ಕಡೆ ಕೇಳ್ತಾ ಇದೀವಿ. ಅಷ್ಟೆ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೀತಾ ಇರೋ ನಮ್ಮ ಪಂದ್ಯಗಳಲ್ಲಿ ತಾಕತ್ತು ಹಾಡು ಜೋರಾಗಿ ಕೇಳಿ ಬರ್ತಿದೆ!
ಅಭಿಮಾನಿಗಳನ್ನು ನೋಡಾದ್ರೂ ಕಲೀಬಾರ್ದಾ?
ಅಭಿಮಾನಿಗಳಿಗೆ ಇರೋ ಬುದ್ಧಿ ನಮ್ಮ ತಂಡದ ಮಾಲೀಕರಿಗೆ ಇಲ್ವಲ್ಲ ಗುರು! ಯಾರನ್ನ ಮೆಚ್ಚಸೋಕೆ ಹಿಂದೀಲಿ ಆ ಹಾಡು ಮಾಡಿದಾರೆ? ನಮ್ಮ ಜನರನ್ನ ಮೆಚ್ಚಿಸೋಕಾ? ಅದೇ ಉದ್ದೇಶ ಆಗಿದ್ದಿದ್ರೆ ಕನ್ನಡದಲ್ಲಿ ಮಾಡಿರೋರು. ಇಷ್ಟಕ್ಕೂ ಇವತ್ತು ಬೆಂಗಳೂರು ತಂಡಾನ ಹುರಿದುಂಬಿಸುತ್ತಿರೋರು ಯಾರು ಗುರು? ಕರ್ನಾಟಕದಲ್ಲಿರುವ ನಾವುಗಳು ತಾನೆ? ನಮ್ಮೂರ ತಂಡ ಅಂದ್ರೆ ನಮ್ಮ ತಂಡ ಅನ್ಕೊಂಡಿರೋ ನಮ್ಮ ಭಾಷೇಲಿ ಹಾಡು ಮಾಡೋದು ಬಿಟ್ಟು, ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಮಾಡೋ ಹುಂಬತನ ಯಾಕ್ ಗುರು?
ಹಿಂದಿ ಹಾಡು ಅಖಿಲ ಭಾರತದೋರ ಬೆಂಬಲ ಗಳ್ಸಕ್ಕಾ?
ಈ ಹಾಡು ಹಿಂದೀಲಿರೋದು ಬೇರೆಯವರ ಬೆಂಬಲ ಗೆಲ್ಲೋಕಾ? ಬೆಂಗಳೂರು ದಿಲ್ಲಿ ಮಧ್ಯೆ ಒಂದು ಪಂದ್ಯ ಆದ್ರೆ, ದಿಲ್ಲಿ ಜನತೆ ಯಾರನ್ನ ಬೆಂಬಲಿಸ್ತಾರೆ? ದಿಲ್ಲೀನ ತಾನೆ? ಬೆಂಗಳೂರೋರು ನಮ್ ಭಾಷೇಲಿ ಹಾಡು ಮಾಡಿದಾರೆ, ಅವ್ರು ಗೆಲ್ಲಲಿ ಅಂತಾರಾ? ಕೊನೆಗೆ ಬೆಂಗಳೂರು ತಂಡ ಗೆಲ್ಲಲಿ ಅಂತ ಚಪ್ಪಾಳೆ ತಟ್ಟೋರು ನಮ್ಮ ಜನಾ ತಾನೆ? ಹಾಗಿದ್ದಲ್ಲಿ ಇಲ್ಲಿನ ತಂಡಕ್ಕೆ ಒಳ್ಳೆದಾಗಲಿ ಅಂತ ಹಾರೈಸಿ ಮಾಡೋ ಹಾಡು ಕನ್ನಡದಲ್ಲಿ ತಾನೆ ಇರಬೇಕು? ಇನ್ನೂ ಅವ್ರುಗಳು "ಕನ್ನಡದವ್ರು ದಿಕ್ಕೆಟ್ಟ ಮುಂಡೇವು, ಅವರ ಭಾಷೇಲಿ ಒಂದು ಹಾಡು ಮಾಡಕ್ಕೂ ಆಗದೋರು" ಅಂತಾ ಆಡ್ಕೊಂಡು ನಗ್ತಾರೆ ಅಷ್ಟೆ!
ಅಂತರ ರಾಷ್ಟ್ರೀಯ ಆಟಗಾರರನ್ನು ಮೆಚ್ಚಿಸೋಕಾ?
ಹೋಗಲಿ, ಈ ಹಾಡು ಹಿಂದೀಲಿರೋದು ನಮ್ಮ ತಂಡದಲ್ಲಿರೋ ವಿದೇಶಿ ಆಟಗಾರರನ್ನು ಮೆಚ್ಚಿಸೋಕಾ? ಅಲ್ಲಾ ಜಾಕ್ ಕಾಲಿಸ್ ಆಗಲೀ, ಮಾರ್ಕ್ ಬೌಚರ್ ಆಗಲೀ ಅಥ್ವಾ ಟೇಲರ್ ಆಗಲಿ, ಅವರಿಗೆ ಹಿಂದೀನೂ ಒಂದೇ ಕನ್ನಡಾನೂ ಒಂದೇ ಅಲ್ವೇನ್ರಿ? ಅಷ್ಟ್ರ ಮೇಲೆ ಅವ್ರಿಗೆ ಇದೇನಾದ್ರೂ ಅರ್ಥ ಆದ್ರೂ, ಇಡೀ ಭಾರತಕ್ಕೆಲ್ಲಾ ಒಂದೇ ಭಾಷೆ ಅಂತ ತಪ್ಪು ತಿಳ್ಕಳಲ್ವಾ ಗುರು? ಹಾಗಿದ್ದಲ್ಲಿ ಯಾರನ್ನ ಮೆಚ್ಚಿಸೋಕೆ ಈ ಹಿಂದಿ ಹಾಡು?
ಮೊದ್ಲು ಮನೆ ಗೆದ್ದು ಆಮೇಲೆ ಊರು ಗೆಲ್ಲಬೇಕು!
ಮೊಹಾಲಿಯಂತ ತಂಡಗಳು ತಮ್ಮೋರನ್ನ ಪ್ರೋತ್ಸಾಹಿಸಲು ತಮ್ಮ ಮಣ್ಣಿನ ಸೋಗಡಿರೋ ಪಂಜಾಬಿ ಭಾಂಗ್ಡಾ ಶೈಲಿ ಹಾಡು ಮಾಡಿ ತಮ್ಮ ಭಾಷೆನ ಬಳುಸ್ತಿಲ್ವಾ? ಅಲ್ಲಿ ಹಂಗಿದ್ರೆ ಇಲ್ಲಿ ನಮ್ಮ ಮಲ್ಯ ಸಾಹೇಬರ ರಾಯಲ್ ಛಾಲೆಂಜರ್ಸ್ ತಂಡದೋರು ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಹಾಡು ಮಾಡಿ ನಮ್ಮ ತಲೆ ಮೇಲೆ ಹಾಕ್ತಾ ಇದಾರಲ್ಲ ಗುರು!
ಇವ್ರು ಏನೇ ತಿಪ್ಪರಲಾಗ ಹಾಕುದ್ರೂ ತಾಕತ್ತು ಹಾಡಿಗಿರೋ ಜನಪ್ರಿಯತೆ ಇವ್ರ ಹಿಂದಿ ಹಾಡಿಗೆ ಸಿಗಲ್ಲ. ಈ ತಾಕತ್ತಿನ ಹಾಡು ಬೆಂಗಳೂರಿನ ತಂಡಕ್ಕೆ ಬೆಂಬಲ ಹುಟ್ಸಕ್ಕೆ ಕನ್ನಡವೇ ಸಾಧನ ಅಂತ ಸಾರ್ತಿದೆಯಲ್ಲಾ ಗುರು! ತಾಕತ್ತು ಹಾಡಿಗೆ ಸಿಕ್ಕಿರೋ ಜನಪ್ರಿಯತೆ ನೋಡಾದ್ರು ರಾಯಲ್ ಛಾಲೆಂಜರ್ಸ್ ತಂಡದ ಎಲ್ಲ ಪ್ರಚಾರದ ವ್ಯವಸ್ಥೇಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಇದ್ರಿಂದ ಅವ್ರಿಗೇ ಲಾಭ. ಇಷ್ಟಕ್ಕೂ ಕನ್ನಡ ಹಾಡು ಇರಬೇಕು ಅಂತಿರೋದು ನಮ್ಮ ಬೆಂಗಳೂರಿನ ತಂಡಕ್ಕೆ ತಾನೆ? ನಮ್ಮೂರಿನ ತಂಡದ ಹಾಡಲ್ಲದೆ ಇನ್ಯಾವ ತಂಡದ ಹಾಡು ಕನ್ನಡದಲ್ಲಿ ಇರಕ್ಕೆ ಸಾಧ್ಯಾ ಗುರು?
7 ಅನಿಸಿಕೆಗಳು:
ಈ ಲೇಖನವನ್ನ ಮಲ್ಯ ಸಾಹೇಬ್ರಿಗೆ ಓದಿಸಬೇಕು. ಪ್ರಜಾವಾಣಿ ಅಥವಾ ಇಂಗ್ಲಿಷ್ ಪತ್ರಿಕೆಗಳ ವಾಚಕರ ವಿಭಾಗಕ್ಕೆ ಕಳಿಸಿ.
ತಾಕತ್ತು ಹಾಡಿಗೆ ಸಿಕ್ಕಿರೋ ಜನಪ್ರಿಯತೆ ನೋಡಾದ್ರು ಮುಂದಿನ ವರ್ಷದ ನಮ್ಮ ಪಂದ್ಯಗಳಲ್ಲಿ ತಂಡದ ಎಲ್ಲ ಪ್ರಚಾರದ ವ್ಯವಸ್ಥೇಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಅಷ್ಟಕ್ಕೂ ನಮ್ಮೂರಿನ ತಂಡದ ಬಗ್ಗೆ ಇಷ್ಟು ಮಾತ್ರದ ನಿರೀಕ್ಷೆ ಮಾಡೋದು ತಪ್ಪೇನಲ್ಲ.
yella kannada premigalige...
Ond sari MUMBAI/KOLKATA ge hogi nodi sar, amele BLORE nali survey madi .. est jana avara home team ge support madtaare anta avaga nimge gottagatte namgu matte matte bere statenavarigu iro vyatyasa..
1st IPL match nalli nodi KOLKATA team ge supporters est jana idru anta.. ade nam team MUMBAI nalli aduvaga kathene bere.. Obba suporter illa RCge.. Hecchagi DRAVID na ursodralli bsy agidru spectators..
sar nanu helbeku antirodu iste.. karnatakadalli est jana DRAVID,KUMBLEge support madtaare neeve heli..badlaage hate madore jasti iddare.. 1st of all nammavranna navu bitkodbaadu sar ..
Blore teamge chappale haakoru navu anta heludralla.. Blore nalli RC ge anti supporters est jana iddare anta enadru gottidya.. namma janagalu MUMBAI/CHENNAI team ge support madtaare.. hage avrella bandu RCge support madtaara.. nammalli 1st of all unity illa.. bereyorna byodralli yellaru bsy irtare.. heegiruvaaga HINDI nalli theme song madodralli tappenide . modle avru maadodu yella duddigaagi..bidtaara?? avru hindi nalli theme song madirodralli yava tappu illa.. badalaagi namma janagalu nam teamge support madodu kaleebeku..
edu malyagu gothago haage maadbeku guru ...
ಎರಡನೇ ಅನಾನಿಮಸ್ ಅವ್ರೆ,
ಗುರುಗಳು ಬೆಂಗಳೂರು ತಂಡಕ್ಕೆ ಬೆಂಬಲ ಎಷ್ಟಿದೇ ಅಂತಲೋ, ಮುಂಬೈ ಕೊಲ್ಕತಾಗಳಿಗೆ ಎಷ್ಟಿದೆ ಅಂತ್ಲೋ ಇಲ್ಲಿ ಮಾತಾಡಿಲ್ಲ. ಬೆಂಗಳೂರು ತಂಡಾನ ನಮ್ಮದು ಅಂತ ಕರೆಯಲು ಸಾಧ್ಯ ಆಗೋದು ಬೆಂಗಳೂರು ಮತ್ತು ಕರ್ನಾಟಕದವ್ರಿಗೆ ಮಾತ್ರಾ. ಈ ಜನರ ಭಾಷೆ ಕನ್ನಡ. ಈ ಭಾಷೆ, ಈ ಸಂಸ್ಕೃತಿಗಳನ್ನು ಬಿಂಬಿಸೋ ಹಾಗೆ ತಮ್ಮ ಪ್ರಚಾರ ಮಾಡೋದ್ರಿಂದ ಹೆಚ್ಚು ಅಭಿಮಾನಿಗಳನ್ನು ಹುಟ್ಟುಹಾಕಿಕೋ ಬಹುದು. ಅಷ್ಟೆ ಇದರ ಲಾಜಿಕ್. ಅದರ ಮೇಲೆ ರಾಯಲ್ ಛಾಲೆಂಜರ್ಸ್ ತಂಡಕ್ಕೆ ಬೆಂಬಲ ಕೊಡಿ ಅಂತಾ ಇಡೀ ಭಾರತದ ತುಂಬಾ ಆಯಾ ಪ್ರದೇಶಗಲ ಜನರ ಭಾಷೇಲಿ ಹಾಡುದ್ರೂ ತೊಂದರೆ ಏನಿಲ್ಲ. ಅದು ಬಿಟ್ಟು ನಮ್ಮ ತನಾನೆ ಬಿಟ್ಟುಕೊಡೋ ಹಾಡು ಸರಿಯಲ್ಲ ಅನ್ನೋದು ಎನ್ ಗುರು ನಿಲುವು. ನಾನು ಸರಿಯಾಗಿ ಹೇಳ್ತಿದೀನಾ ಗುರುಗಳೇ?
absolutely correct gurugaLe.
bengaloorna bhashe kannada, adanna kadeganisidre market illa anta ella FM channelgalige gottagi ivattu ella kannada haadu kelistare. ade bhashe RC team supportersna ondu maadodu. localise madidrene local support sigodu . ilandre illa. yaro ashtu migrants atva so called pseudo kanndaigaranna mecchisoke hindi hadu madidre adu nadeyolla. mallya avaru idra kade gamana kottu takshana kannadadalli haadannu haadisabeku. nimma
lakshmisha
It should have been Royal Challengers Bengalooru... Not Bangalore...
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!