ತಾಕತ್ತು! ಈ ಹಾಡು ಸಕ್ಕತ್ತು!

ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ ಸೆಣುಸ್ತಾ ಇರೋ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರನ್ನು ಉತ್ತೇಜಿಸಕ್ಕೇ ಅಂತ ಸಕ್ಕತ್ತಾಗಿರೋ ಒಂದು ಹಾಡನ್ನು ಅಭಿಮಾನಿಗಳು ಮಾಡಿದಾರೆ! ಈ ಹಾಡು ಎಲ್ರು ಮನ್ಸನ್ ಗೆದ್ದು ಸಖತ್ ಮಿಂಚ್ತಿದೆ ಗುರು.
ಮೊದಲಿಗೆ, ಈ ತಂಡದೋರ ಬಟ್ಟೆ ಬಣ್ಣಾನೂ ಹಳದಿ, ಕೆಂಪು ಆಗಿರೋದುನ್ನ ನೋಡ್ತಿದ್ರೆ ಖುಷಿಯಾಗುತ್ತೆ. ಬೇರೆ ಬೇರೆ ದೇಶದ ಆಟಗಾರರನ್ನು ಈ ತಂಡ ಒಳಗೊಂಡಿದೆ, ಈ ಲೀಗಿನ ಪಂದ್ಯಗಳು ಭಾರತದ ಎಲ್ಲಾ ಮೂಲೆ ಮೂಲೆಲಿರೋ ಜನರೂ ನೋಡ್ತಾರೆ. ಅದರ ಜೊತೆಗೆ ಈ ಹಾಡನ್ನ ಕೂಡಾ!
ಕನ್ನಡದಲ್ಲಿರೋದು ಹೆಮ್ಮೆ, ಕೀಳರಿಮೆ ಅಲ್ಲ!
ಈ ತಂಡಕ್ಕಾಗಿ ಕಟ್ಟಿರೋ ಹಾಡು ಕನ್ನಡದಲ್ಲಿರೋದು, ಹಾಗಿಟ್ಟುಕೊಳ್ಳೋದನ್ನೇ ತಮ್ಮ ವಿಶೇಷತೆಯಾಗಿ ಮೆರುಸ್ತಾ ಇರೋದು ನಿಜವಾಗ್ಲೂ ನಾವು ಕನ್ನಡಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಇರೋ ಬಳಕೆಯ ಸಾಧ್ಯತೇನಾ ಕಣ್ ಬಿಟ್ ನೋಡ್ತಿರೋ ಸೂಚನೆ ಗುರು!
ಇಂಟರ್ ನ್ಯಾಷನಲ್ ಆಟ, ಇಂಟರ್ ನ್ಯಾಷನಲ್ ಆಟಗಾರ್ರು ಅಂತ ಇಲ್ಲಿ ಕನ್ನಡಾನ ಕಡೆಗಣಿಸ್ದೆ ಇರೋದು ನಮಗೆಲ್ಲ ಪಾಠವಾಗಬೇಕಿದೆ. ನಿಜಾ ಹೇಳ್ಬೇಕು ಅಂದ್ರೆ ಈ ಹಾಡಿಗೆ, ಈ ತಂಡಕ್ಕೆ ಒಂದು ಖಳೆ ಬಂದಿರೋದೆ ಆ ಹಾಡಲ್ಲಿ ಸ್ಥಳೀಯ ಸೊಗಡನ್ನ ತನ್ನದಾಗಿಸಿಕೊಂಡಿದ್ದಕ್ಕೇ. ಏನಂತೀ ಗುರು!
ಇದು ಕ್ಲಬ್ ಕ್ರಿಕೆಟ್ ಆಗಿದ್ರೂ ಕೂಡಾ, ಆಟ ನೋಡಕ್ ಬರೋರೆಲ್ಲಾ ಕೈಯ್ಯಲ್ಲಿ ಹಳದಿ ಕೆಂಪು ಬಾವುಟ ಹಿಡ್ಕೊಂಡ್ ಬನ್ನಿ ಅಂತಿರೋದನ್ನು ನೀವು ಗಮನಿಸಿ ನೋಡುದ್ರೆ, ಇದಕ್ಕಿರೋ ಮಹತ್ವಾ ರಾಷ್ಟ್ರೀಯ ಕ್ರಿಕೆಟ್ಟಿಗಿಂತ ಜಾಸ್ತಿ ಗುರು! ಸುಮ್ಮನೆ ಊಹಿಸಿಕೊಳ್ಳಿ, ಚಿನ್ನಸ್ವಾಮಿ ಕ್ರೀಡಾಂಗಣದ ತುಂಬಾ.... ಹಳದಿ ಕೆಂಪಿನ ಬಾವುಟಗಳು ರಾರಾಜಿಸ್ತಾ ಇದ್ರೆ, ಅದುನ್ನ ದೂರದರ್ಶನದಲ್ಲಿ ನೋಡ್ತಾ ಇದ್ರೆ ನಾಡಿನ ಮೂಲೆ ಮೂಲೇಲಿರೋ ಕನ್ನಡದೋರ ಮನಸ್ಸುಗಳು ಹೇಗೆ ಹಿಗ್ಗುತ್ವೆ, ಹೇಗೆ ಒಗ್ಗೂಡುತ್ವೆ ಅಂತಾ!

15 ಅನಿಸಿಕೆಗಳು:

hamsanandi ಅಂತಾರೆ...

ಇದ್ಯಾವ ಸೀಮೆ ಕನ್ನಡದ ಹಾಡು ಅಂತ ಸಂತೋಷ ಪಡ್ಬೇಕ್ರೀ? ಅವರ ’ರ’ ’ಟ್’ ಉಚ್ಚಾರಣೆ ಎಲ್ಲ ಕೇಳಿದ್ರೆ ಹೊಟ್ಟೆ ತೊಳಸತ್ತೆ :( :( :(

Anonymous ಅಂತಾರೆ...

ಹಾಡು ಸಕ್ಕತ್ ಆಗಿದೆ. ಕನ್ನಡವನ್ನೇ ಗಮನದಲ್ಲಿಟ್ಟುಕೊಂಡಿರೊ ಬಟ್ಟೆ, ಈ ಹಾಡು ಎಲ್ಲಾ ಸೇರಿ ತಂಡಕ್ಕೆ ಒಳ್ಳೆ ಕಳೆ ಬಂದಿದೆ. ಗೆಲ್ಲೋದಂತು ಖಂಡಿತ ನಾವೆ ಕಣ್ರಿ ..... ;-)

ಶ್ವೇತ

Anonymous ಅಂತಾರೆ...

Namma IT mandi ivarinda kalibeku Guru. IT yalli kannada nadiyalla, English maatra annorige ivarinda tilkollodu bahala ide. Namma kannada bhaashabhimmana ulisikonde naavu jagattina ettarakke belibeku anno olle neethipaatha kalasiddare ee hudugaru.

Anonymous ಅಂತಾರೆ...

Sakkattaagide guru
kannada ellaa kade mereyali
geluvaagali kannadakke.

Anonymous ಅಂತಾರೆ...

etara elladarallu kannadana consider maado tara naavella seri maadbeku guru ..

ಪುಟ್ಟ PUTTA ಅಂತಾರೆ...

song and dress is superb! It really motivates all Kannadigas anywhere in the world. Jai Karnataka! Jai RC!

Guruprasad Timmapur ಅಂತಾರೆ...

sikkapatte khushi aythu..... Ellellu kannada bavuta haaradali.....

Anonymous ಅಂತಾರೆ...

super guru !!

Super Kannada haadu,,
super kempu-haLadi jersy..

super progress in last couple of years !!

idey 2 varshada hinde aagidre,, definate aagi hindi li haadu maadiroru,,

radio mirchi, big FM alli kannada ke, kannada haadige ,, totally Kannada kiro Market yenu, demand enu antha gottada mele,, e change aagide,,

Anonymous ಅಂತಾರೆ...

Hi!
It is a song composed by Idea labs as a fans' anthem. Royal challengers has not come up with one yet!
Report:
http://www.youtube.com/watch?v=nwwXFax0IaM

Regards,
Vijay

Anonymous ಅಂತಾರೆ...

Illi nodi for details. Good voice quality:
http://www.rcfanclub.com/

--Vijay

Unknown ಅಂತಾರೆ...

Guru, EN BOMBAT kannada hemme torisiddare ! I commend Vijay Mallya for his guts and showing that he is proud KANNADIGA, Let Narayana Murthy learn from him !!! Though RC team has many international players, someone needs steel balls to show them Kannada colors and Kannada song, there are mistake sin pronounciation but ACCEPTABLE ! This compared to the pseudo intellectualism shown by Infosys in screwing Kannadigas, they need to eat some ... of Vjay Mallya everyday, sorry folks but that is the way the have behaved.

Anonymous ಅಂತಾರೆ...

ಆಯಾ ಸಮಯಕ್ಕೆ ಸಂಧರ್ಭಕ್ಕೆ ಹೊಂದಿಕೊಳ್ಳೋ ಹಾಗೆ ಹಾಡು ಕಟ್ಟೋದು, ಸಂಗೀತ ನೀಡೋದು ಸರಿಯಾದ್ದು. ನಮ್ಮ ಕನ್ನಡ ನುಡಿ ಎಲ್ಲಾ ಸಂದರ್ಭಕ್ಕೂ ಹೊಂದಿಕೊಳ್ಳತ್ತಲ್ಲಾ ಅಂತ ಹೆಮ್ಮೆ ಆಗುತ್ತೆ.

ಈ ಹಾಡನ್ನು ಹಂಸಾನಂದಿ ರಾಗದಲ್ಲಿ ಹಾಡಬೇಕೆಂದರೆ ಹೇಗೆ!? ಸಣ್ಣಪುಟ್ಟ ತಪ್ಪುಗಳನ್ನು ಹೊಟ್ಟೇಲಿ ಹಾಕ್ಕೊಂಡು ಕ್ಷಮಿಸೋದ್ನ ಕಲಿತ್ರೆ ಹೊಟ್ಟೆ ತೊಳ್ಸೋದು ಕಡಿಮೆ ಆಗುತ್ತೆ.

-ಗುಂಡಾಭಟ್ಟ

hamsanandi ಅಂತಾರೆ...

ಗುಂಡಾಭಟ್ರೆ,

ಈ ಹಾಡನ್ನ ಹಂಸಾನಂದಿ ರಾಗದಲ್ಲಿ ಹಾಡ್ಬೇಕಿತ್ತು ಅಂತ ಹೇಳೋದು ನನ್ನ ಅಭಿಪ್ರಾಯ ಅಲ್ಲ! ಆ ರೀತಿ ತಪ್ಪು ಅಭಿಪ್ರಾಯ ನಿಮಗಿದ್ರೆ ಅದನ್ನ ನಿವಾಳಿಸಿ ಎಸ್ದು ಬಿಡಿ.

ಕನ್ನಡ ಹಾಡನ್ನ (ಅಥವಾ ಹಾಡಲ್ಲಿರೋ ಕನ್ನಡ ಪದಗಳನ್ನ), ಇದು ಕನ್ನಡದ್ದು ಅಂತ ಗೊತ್ತಾಗೋವ್ರ ಹತ್ತಿರ ಹಾಡಿಸ್ಬೇಕ್ರೀ.

ಆದ್ರೆ, ಇವತ್ತಿನ ಕುಣಾಲ್ ಗಾಂಜಾವಾಲಾ ಕಾಲದಲ್ಲಿನ ಹಾಡು ಕೇಳಿ ಬೆಳೆದವರಿಗೆ, ಇದೇ ಸರಿಯಾಗಿ ಕಾಣಲೂ ಬಹುದೇನೋ :(

ಅವರರವರ ಭಾವಕ್ಕೆ, ಅವರವರ ಭಕ್ತಿಗೆ ಅಂತ ಹೇಳಿ ತೆಪ್ಪಗಿರಬಹುದಿತ್ತು ನಾನು. ಆದರೂ ಏನ್ಗುರುಗಳು ಇದನ್ಯಾವದೋ ಸೀಮೆಯ ಮಹಾನ್ ಕನ್ನಡ ಅಂತ ಹೇಳ್ಡಾಗ ಹೊಟ್ಟೆ ತೊಳಸದೇ ಇರಲಿಲ್ಲ. ಅಷ್ಟಕ್ಕೂ, ಏನ್ಗುರು ಇದ್ದದ್ದು ಇದ್ದಹಾಗೆ ಹೇಳ್ತೀವಿ ಅಂತಾರಲ್ವೇ, ಅದಕ್ಕೇ ನಾನೂ ನನಗನಿಸಿದ್ದನ್ನ ಇದ್ದದ್ದು ಇದ್ದಹಾಗೇ ಹೇಳಿದ್ದು!

Anonymous ಅಂತಾರೆ...

ಹಂಸಾನಂದಿಗಳೇ

ನೀವೀಗ ಕುನಾಲ್ ಗಾಂಜಾವಾಲಾ ನ ಕನ್ನಡ ಕೇಳಿ ಬೇಸರಪಡುವಂತೆ ಪಂಪ ರನ್ನರೇನಾದರೂ ಈಗಿನವರ (ನಿಮ್ಮನ್ನೂ ಸೇರಿಸಿ) ಹೊಸಕನ್ನಡ ಕೇಳಿದ್ದರೆ ಬೇಸರಪಡುತ್ತಿದ್ದರೇನೋ. ಬದಲಾವಣೆ ಯಾವತ್ತೂ ಇದ್ದದ್ದೇ. ಇಲ್ಲದಿದ್ದರೆ ಈವತ್ತಿನ ಕನ್ನಡಲಿಪಿಯ ಬದಲು ಹಳೇ ಬ್ರಾಹ್ಮೀ ಲಿಪಿಯನ್ನೇ ಬಳಸುತ್ತಾ ಇರುತ್ತಿದ್ವಿ. ಬದಲಾವಣೆಯ ಜೊತೆಜೊತೆಗೆ “ನಮ್ಮ ಕಾಲದಲ್ಲಿ ಹೇಗಿತ್ತು. ಈಗ ಎಲ್ಲಾ ಹಾಳಾಗಿದೆ” ಎಂಬ ಗೊಣಗಾಟವೂ ಇದ್ದದ್ದೇ.

ಈ ಹಾಡಿನ ಸಂದರ್ಭ ಕನ್ನಡದ ಮಟ್ಟಿಗೆ ಒಂದು ದೊಡ್ಡ ಬದಲಾವಣೆ. ಯಾರೋ ಕನ್ನಡ ಬರದವರು ಹಾಡಿ ಕನ್ನಡದ ಉಚ್ಚಾರ ಕೆಟ್ಟಿರಬಹುದು. ಆದರೆ ಅದಕ್ಕಿಂತಲೂ ಮಹತ್ವದ ವಿಷಯ ಅಂದರೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡವನ್ನು ಕೊಂಡೊಯ್ದದ್ದು. ಅದನ್ನೇ “ಇಂಟರ್ ನ್ಯಾಷನಲ್ ಆಟ, ಇಂಟರ್ ನ್ಯಾಷನಲ್ ಆಟಗಾರ್ರು ಅಂತ ಇಲ್ಲಿ ಕನ್ನಡಾನ ಕಡೆಗಣಿಸ್ದೆ ಇರೋದು ನಮಗೆಲ್ಲ ಪಾಠವಾಗಬೇಕಿದೆ” ಅಂತ ಏನ್ಗುರು ಹೇಳಿದ್ದಾರೆ. ಆ ಕಾರಣಕ್ಕೆ ಈ ಹಾಡಿನ ಕಾರಣಕರ್ತರನ್ನು ನಾವೆಲ್ಲಾ ಅಭಿನಂದಿಸಬೇಕು.

ತೆಂಗಿನ ಕಾಯಿಯ ತಿರುಳನ್ನು ಬಿಟ್ಟು ಕರಟಕ್ಕಾಗಿ ಹೊಡೆದಾಡಿದರು ಅಂದಂತೆ ಉಚ್ಚಾರಣೆ, ವ್ಯಾಕರಣ ಅಂತ ಈ ಸಂದರ್ಭದಲ್ಲಿ ದೊಡ್ಡದು ಮಾಡೋದು ಬೇಡ. ಅದಕ್ಕೆ ಬೇರೆ ವೇದಿಕೆಗಳಿವೆ.

-ಗುಂಡಾಭಟ್ಟ

ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು ಅಂತಾರೆ...

ಗುಂಡಾಭಟ್ಟರು
ತಮ್ಮವೆಲ್ಲವೂ ವೇದಿಕೆಗಳು ಸ್ವಾಮಿ. ವೇದಿಕೆಗಳನ್ನು ಬೞಸಿಕೊಣ್ಡು ಭಾಷಣ ಬಿಗಿದು ಮುಗಿಸಿಬಿಡುತ್ತೀರಿ, ಆದರೆ ಭಾಷೆಯ ಕುಱಿತು ಕಾಳಜಿಯಿಟ್ಟುಕೊಣ್ಡವರಿಗೆ ಅದು ಹಾಗಲ್ಲ.
"ಯಾರೋ ಕನ್ನಡ ಬರದವರು ಹಾಡಿ ಕನ್ನಡದ ಉಚ್ಚಾರ ಕೆಟ್ಟಿರಬಹುದು" ಬಹಳ ಚೆನ್ನಾಗಿದೆ. ಭಾಷೆ ಗೊತ್ತಿರುವವರೇಕೆ ಹಾಡಬಾರದು?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails