ನಮ್ಮೂರ್ ಏರ್ ಪೋರ್ಟನ್ನೂ ಇಂಗೇ ಮಾಡಕ್ ಏನ್ ಧಾಡಿ?

ಮೊನ್ನೆ ಮೊನ್ನೆ ತಾನೆ ನಮ್ ಎಂಕ ಪಾರಿನ್ನು ನೋಡಿಕ್ಯಂಡ್ ಬತ್ತೀನಿ ಅಂತಾ ಅದ್ಯಾವ್ದೋ ತೈಲೆಂಡ್ ದೇಸಕ್ಕೆ ಓಗಿದ್ದವ್ನು ತಿರುಗಿ ಬಂದು ಒಂದು ದೊಡ್ ವರದೀನೆ ಒಪ್ಪುಸ್ಬುಡೋದಾ... ಬರ್ರೀ, ಒಸಿ ಅದೇನ್ ಅಂದಾನೋ ನೋಡ್ಮಾ....

ಎಂಕನ್ ರಿಪೋಲ್ಟು!

ನಮಸ್ಕಾರ ಕಣಣ್ಣೋ, ನಮ್ ಬೆಂಗಳೂರಲ್ಲಿ ಕನ್ನಡದೋರು ಒಸ ಇಮಾನ ನಿಲ್ದಾಣದಾಗೆ ಕನ್ನಡದ ವಾತಾವರಣ ಇರಬೇಕು, ಕನ್ನಡದೋರ್ಗೇ ಕೆಲ್ಸ ಕೊಡ್ಬೇಕು, ಕನ್ನಡದಾಗೇ ಬೋಲ್ಡುಗಳಿರಬೇಕು ಅಂತ ಓರಾಟ ಮಾಡ್ತಾ ಅವ್ರೆ ಅಂತ ಒಂದು ವರುಸದಿಂದ ನೋಡಿಕ್ಯಂಡು ಬತ್ತಾ ಇವ್ನಿ. ಅಲ್ಲಾ ಇಂಟರ್ ನ್ಯಾಸನಲ್ ಏರ್ ಪೋಲ್ಟ್ ಅಂದ್ ಮ್ಯಾಲೆ ಅದೆಂಗ್ಲಾ ಕನ್ನಡಕ್ ಅಲ್ಲಿ ಜಾಗ ಕೊಡಕ್ ಆಯ್ತದೆ? ಅಲ್ಲೇನಿದ್ರೂ ಇಂಟರ್ ನ್ಯಾಸನಲ್ ಬಾಸೆ ಇಂಗ್ಲಿಸ್ ಅಲ್ವಾ ಇರ ಬೇಕಾದ್ದು... ಅಂತ ನಾನೂನೂವೆ ಅಂದುಕ್ಯಂಡು "ಇರ್ಲಿ, ಬ್ಯಾರೆ ದೇಸದಲ್ಲೆಲ್ಲಾ ಎಂಗದೆ ಇಮಾನ ನಿಲ್ದಾಣ, ನೋಡಿಕ್ಯಂಡ್ ಬಂದ್ ಬುಡಮಾ" ಅಂತಾ ತೈಲೆಂಡಿನ ಕಡೆ ಒಂಟೆ.

ತೈಲ್ಯಾಂಡಿಗೆ ಯಾಕೋದ ಎಂಕ?

ಇಡೀ ಪರ್ಪಂಚದಾಗೆ ಪ್ರವಾಸಿಗಳು ಶಾನೆ ಜನ ಬರೋ ದೇಸಗಳಲ್ಲಿ ಇದೂನುವೆ ಒಂದು ಕಣ್ ಗುರು! ಇಲ್ಗೆ ಯೂರೋಪಿಂದ, ಅಮೇರಿಕಾದಿಂದ, ಏಸಿಯಾದಿಂದ ಬೇಜಾನ್ ಜನ ಓಯ್ತಾರೆ. ಅದೂ ಅಲ್ದಿರಾ ಈ ದೇಸ ಮುಕ್ಯವಾಗಿ ನಂಬ್ಕೊಂಡಿರೋದೇ ಪ್ರವಾಸೋದ್ಯಮಾನಾ. ಅಂಗಿದ್ ಮ್ಯಾಲೆ ಇಲ್ಲಿ ಶಾನೆ ಇಂಗ್ಲಿಸ್ ಇರೋದು ಸಾಜ ಅಂತ ಅಲ್ಲಿಗ್ ಓದೆ ಕಣ್ ಗುರು! ಈ ಊರೆಸ್ರು ಬ್ಯಾಂಕಾಕ್ ಅಂತೆ, ಈ ಇಮಾನ ನಿಲ್ದಾಣದ ಎಸ್ರು ಸುವರ್ಣಭೂಮಿ ಅಂತೆ. ಒಳಿಕ್ ಓಗ್ ನೋಡೇ ಬುಡಮಾ ಅಂತ ಓದೆ ಗುರು!

ಮೊಕಕ್ ಹೊಡ್ದಂಗ್ ಕಾಣೊ ನೆಲದ ಸೊಗಡು!

ಇಕಾ ನೋಡು ಒಳಿಕ್ ಓಯ್ತಿದ್ ಅಂಗೇ ಎಂಗ್ ಕಾಣ್ತುದೆ ಅಂತಾ! ಅದೆಂಥದೋ ಗೊಂಬೆ ನಿಲ್ಸವ್ರೆ? ಇಡೀ ಇಮಾನ ನಿಲ್ದಾಣ ಒಳ್ಳೆ ಬ್ಯಾರೆ ಪರಪಂಚ ಇದ್ದಂಗ್ ಐತಲ್ಲಪ್ಪೋ. "ಓ... ಇದೇನೇಯಾ ತೈ ಸಂಸ್ಕೃತಿ" ಅಂತಾ ಕಣ್ಣರಳುಸ್ಕೊಂಡು ಯಾಪಾಟಿ ಪ್ರವಾಸಿಗಳು ಅದ್ರು ಮುಂದೆ ನಿಂತವ್ರಲ್ಲಾ ಗುರು? ನಮ್ ಬೆಂಗಳೂರಾಗು ಇಂಗೆ ಕನ್ನಡ ಸಂಸ್ಕೃತಿ ಬಿಂಬ್ಸೋ ಚಿತ್ರಗಳು, ಗೊಂಬೆಗ್ಳೂ ಇದ್ರೆ ಏನ್ ಪಸಂದಾಗ್ ಇರ್ತೈತೆ ಅಲ್ವಾ ಗುರು? ಕನ್ನಡ ನಾಡಲ್ ನಿಲ್ಸಕ್ ಏನ್ ಗೊಂಬೆಗಳಿಲ್ವಾ? ಪರಪಂಚಕ್ ತೋರುಸ್ಕೊಳೋ ಸಂಸ್ಕೃತಿ ಇಲ್ವಾ ಅಂತಾ ಯೋಚ್ನೆ ಆಯ್ತುದೆ ಗುರು!

ನೆಲದ ಬಾಸೆಗೇ ಮೊದಲ ಸ್ತಾನಾ!

ಅಬ್ಬಬ್ಬಾ... ಎಲ್ಲ ಬೋಲ್ಡಲ್ಲೂ ಒಳ್ಳೆ ಜಾಂಗೀರ್ ಸುತ್ತಿರೋ ಅಂಗೆ ಕಾಣೋ ದೊಡ್ಡದಾಗಿ ಅವರ ಬಾಸೇಲೆ ಬರದವ್ರೆ. ಇಂಗ್ಲಿಸಿಗೆ ಕೆಳಗಿನ ಸ್ತಾನ ಕೊಟ್ಟವ್ರಲ್ಲಪ್ಪೋ? ಇಕಾ ಇಲ್ ಬರೋ ಐದ್ರೆಲ್ಲಾ ಬ್ಯಾರೆ ಬ್ಯಾರೆ ಬಾಸೇನೋರು ಕಣ್ರಣ್ಣಾ, ಅವ್ರಿಗೆಲ್ಲಾ ಎಂಗೆ ತಿಳ್ದೀತು ನಿಮ್ ಬಾಸೆ ಅಂದ್ರೆ, ಅಲ್ ಕೆಳಗಡೆ ಇರೋ ಇಂಗ್ಲಿಸ್ ಕಡೆ ಕೈ ತೋರುಸ್ತಾನಲ್ಲಣ್ಣೋ? ಅಲ್ಲಾ ಗುರು, ಬರೋ ಜನ್ರುಗೆಲ್ಲಾ ಎಂಗಿದ್ರೂ ನಿಮ್ ಬಾಸೆ ತಿಳ್ಯಕಿಲ್ಲಾ, ಮತ್ಯಾಕ್ ಅದ್ರಲ್ ಬರ್ದಿದೀರಾ ಅಂದ್ರೆ ಅಂತಾನೆ " ಈಗ್ ನಾವ್ ಬಂದಿರೋದು ತೈಲ್ಯಾಂಡಿಗೆ, ಇಲ್ಲಿ ಜನ್ರು ಬಾಸೆ ಬ್ಯಾರೆ, ಅದು ನೋಡಕ್ ಇಂಗ್ ಕಾಣ್ತುದೆ ಅಂತಾ ಹೊರಗಿನ್ ಜನುಕ್ ಅನ್ನುಸ್ಬೇಕು.. ಅದ್ರು ಜೊತೆ ನಮ್ ಜನಕ್ ತಮ್ ಬಾಸೆ ಬಗ್ಗೆ ಹೆಮ್ಮೆ ಉಟ್ಕಬೇಕು ಅಂತಾ ಇಂಗ್ ಮಾಡಿದೀವಿ" ಅನ್ನದಾ?

ಎಂಗೂ ಇಸ್ಟು ದೂರ ಬಂದಿವ್ನಿ, ಎಂಡ್ರುಗೇನೂ ತಿಳ್ಯಕಿಲ್ಲಾ, ಒಂದು ಪೆಗ್ ಏರುಸ್ ಬುಡಮಾ ಅಂತ ಬಾರ್ ಒಳಿಕ್ ಓದ್ರೆ, ನೋಡ್ ಗುರು... ಅಲ್ಲೂ ನನ್ ಮಗಂದು ಎಂಗ್ ಅವ್ರು ಬಾಸೇ ಪಳಪಳ ಒಳೀತಿದೆ.
ಅಲ್ಲಿ ಕುಡ್ಯೋ ನೀರಿನ್ ಬಾಟ್ಲಿರಲಿ, ಹೊಡ್ಯೋ ಎಣ್ಣೇ ಬಾಟ್ಲಿರಲಿ... ಎಲ್ಲುದ್ರು ಮ್ಯಾಲೂ ಅವರ್ ಬಾಸೇಲೇ ಬರ್ಕಂಡವ್ರೆ. ಅದೆಂಗ್ಲಾ ಇಂಗ್ ಮಾಡೀರಿ ಅಂದ್ರೆ ಇಂಗ್ಲಿಸಲ್ ಬರುದ್ರೆ ಮಾತ್ರಾ ಕಿಕ್ ಏರದು ಅಂತ ನಮ್ ಜನ ಅನ್ಕಂಡಿಲ್ಲಾ ಅನ್ನಾದಾ ಆ ಬಾರಲ್ಲಿರೋನು!

ಒಟ್ನಲ್ಲಿ ತೈಲ್ಯಾಂಡು ಅನ್ನೋ ದೇಸದಾಗೆ ಅವುರ್ದೆ ಒಂದು ಬಾಸೆ ಐತೆ, ಸಂಸ್ಕೃತಿ ಐತೆ, ಆಚಾರ ಇಚಾರ ಐತೆ, ಅದುಕ್ಕಿಂತ ಮುಕ್ಯವಾಗಿ ಅದುನ್ನೆಲ್ಲಾ ಬಂದೋರಿಗೆ ತೋರುಸ್ಕೋ ಬೇಕು ಅನ್ನೋ ತುಡಿತಾ ಐತೆ, ತೋರುಸ್ಕೊಳಕ್ಕೆ ಹೆಮ್ಮೆ ಐತೆ ಅಂತ ಅರ್ತ ಆಯ್ತು ಗುರು! ಅಲ್ಲಾ, ನಮ್ಮೂರಾಗೂ ನಮ್ ಬಾಸೆ, ಸಂಸ್ಕೃತಿ ತೋರುಸ್ಕೊಳ್ದೆ ಇರಕ್ಕೆ ಕನ್ನಡದವ್ರೇನು ನರ ಸತ್ತವ್ರಾ? ಗುರು

6 ಅನಿಸಿಕೆಗಳು:

Anonymous ಅಂತಾರೆ...

ಛೇ... ನಮಗೆ ಎಂಥಹ ಘನವಾದ ಇತಿಹಾಸ ಇದ್ದರೇನು ಬಂತು? ಪಂಪ ರನ್ನರಂತ ಕವಿಗಳು ಇದ್ದರೇನು? ಸಂಗೀತ ಲಲಿತ ಕಲೆಗಳಲ್ಲಿ ನಾವು ಎಂತಹ ಸಾಧನೆ ಮಾಡಿದ್ದರೇನು? ೭ ಜ್ಞಾನಪೀಠ ಪ್ರಶಸ್ತಿ ಬಂದಿದ್ರೇನು? ನಮ್ಮಲ್ಲಿ ವಿಶ್ವೇಶ್ವರಯ್ಯ ಅಂತ ಇಂಜಿನಿಯರ್ ಆಗಿ ಹೋಗಿದ್ದರೇನು? ಈಗ ನಾವು ಐ.ಟಿ. ತಂತ್ರಜ್ಞಾನದಲ್ಲಿ ಎಷ್ಟು ಮುಂದುವರೆದಿದ್ದರೇನು?

ನಮ್ಮ ಏರ್‌ಪೋರ್ಟು ನಮ್ಮ ಸಂಸ್ಕೃತಿಯನ್ನು ಬಿಂಬಿಸದಿದ್ದಲ್ಲಿ, ಅಲ್ಲಿನ ಬೋರ್ಡುಗಳಲ್ಲಿ ಕನ್ನಡ ಅಕ್ಷರಗಳು ಇಲ್ಲದಿದ್ದ ಮೇಲೆ ನಮ್ಮ ಎಲ್ಲಾ ಹಿಂದಿನ ಸಾಧನೆಗಳು ಹೊಳೆಯಲ್ಲಿ ಹುಣಿಸೆಹಣ್ಣು ಕಿವಿಚಿದಂತೆ ವ್ಯರ್ಥ!

ಈ ಮೇಲಿನಂತಹ ಸಾಧನೆಗಳು ಥಾಯ್‌ಲ್ಯಾಂಡಿನಲ್ಲಿ ಹಿಂದೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಈಗಿನ ಥಾಯ್‌ಲ್ಯಾಂಡಿನವರಿಂದ ನಾವು ಕನ್ನಡಿಗರು ಕಲಿಯುವುದು ಇದೆ. ಅವರ ಕಾಲ ಕೆಳಗೆ ನಾವು ನುಸುಳಬೇಕು.

- ಗುರು.ಪಿ

Anonymous ಅಂತಾರೆ...

Hawdu guru ... nanu last time bangkok gae hogiddaga noadiddae ...

Unknown ಅಂತಾರೆ...

Nodi kaliyili nama sarkara....
Yen kala banthri nama Kannadigarige, Yelladaku hora mado anivarya bandidhyalla namage....
Yella Bara rajyadhavaru hagu para bhashikara dourjanya nama mele aguthidheyalla. Ivathu Poornavagiruva Nama Antharashtriya vimana nildhanake Namma Nada Prabhu Kempegowdara Hesaru Idi annoke horata madabekadha anivarya sthithi bandhidyalla namage. Navu Kannadigaru adhadhella sahisikondu sumane iruvudhe bahushya idhake karana vagirabahudu......
Nachikeindha thale tagisuvanthe agidhe namma paristhithi......
Aa Bhagavanthane Kapadabeku Namma Kannada Nadanna.....
Jai Karnataka

Anonymous ಅಂತಾರೆ...

guru,
bari jaati raajakiya mado nan maklige sariyagi unnisiddare BAIL navru... vokkaliga obbana hesaru barutte anno kaaranakkaagi bere jaatiya jana yaaru support madolla.. illi namma odiro janarige kannada karnataka mukhya alla.. jaati mukhya...yavaaga uddahara agtivo innu gottilla.. blore nalli kamaraja road anta hesarido nammavaru, vimaana nildaanaakke kempegowda hesaru idoke hinde munde nodtare.. naachike gedu!!!

Anonymous ಅಂತಾರೆ...

innondu visya andre hogbarovrella bari US,UK...ee deshagalu bitre bere deshagale ilweno anno brhame...alli english maatrubaashe...matadkotare, barkotare, odtare...hangantha nammoor maadegowdrigu ade barbeku andre yaav nyaya guru? 4 koti kannadigrige madrayya alpoltuu andre...illa baro 400 jana videshigalige madana antare...nee heldange avrgu madana...aadre kannada modlirbeku...hottege adenthintaro gottagalla...4 koti kannadigru matado kannada matadrayya andre illa hindi english matadbeku antare...nanna kannadiga friends idare keluvru..navellru engineers-e...bengloornage hindi english irbeku antare agle uddara agodu, silicon valley agodu,it hub agodu antella railu hattustare...baro bere desha bere rajyad jana enmadbeku anta nanne vapas keltare....4 laksha valasigrige kannada helkodana andre illa 4 koti kannadigrige hindi,english helkodana antare...ee nan maklige kordu kordu iga swalpa track ge bandidare guru...aadru yaar heltare hogappa ee janrige...
adu ee politicians gantu metnaage hodibeku...
/dg

Anonymous ಅಂತಾರೆ...

ಅದೆಲ್ಲ ಸರಿ, ಗುರು....ನೀವೆಲ್ಲ ಕನ್ನಡಿಗರಾಗಿ, ಕನ್ನಡದಲ್ಲಿ ಅನಿಸಿಕೆ ಬರೆಯಿರಿ ಗುರು....
ಎಲ್ಲ ಬಿಟ್ಟು ಈ ಆಂಗ್ಲದಲ್ಲಿ ಕನ್ನಡ ಬರೆಯುವ ರೂಡಿ ಬಿಟ್ಟು ಅಚ್ಚ ಕನ್ನಡದಲ್ಲಿ ಬರೆಯಿರಿ ಗುರು........

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails