ತೆಲುಗುಗಂಗಾ ಹರಿಸ್ತಿರೋ ರಾಜಕೀಯ ಪಕ್ಷಗಳು!

ಚುನಾವಣೆ ಅಂದ ಕೂಡ್ಲೆ ಬೆದೆಗೆ ಬಂದೋರಂಗೆ ಆಡ್ತಿರೋ ರಾಜಕೀಯ ಪಕ್ಷಗಳು ಶತಾಯ ಗತಾಯ ಗೆಲ್ಲಲೇಬೇಕು ಅನ್ನೋ ಆಸೇಲಿ ಮಾಡಬಾರದ್ ಮಾಡ್ತಿರೋದ್ನ ನೋಡು ಗುರು! ಕನ್ನಡ ನಾಡಿನ ವಿಧಾನ ಸಭಾ ಚುನಾವಣೆಯಲ್ಲಿ ನಾನಾ ರಾಜಕೀಯ ಪಕ್ಷಗಳು ಟಿಕೆಟ್ ನೀಡಿರೋ ಅಭ್ಯರ್ಥಿಗಳು, ಪ್ರಚಾರಕ್ಕೆ ಕರ್ಕೊಂಡು ಬರ್ತಿರೋ ತೆಲುಗು ನಾಯಕ್ರುಗಳನ್ನು ನೋಡ್ತಿದ್ರೆ ಇದೇನು ಕರ್ನಾಟಕದಲ್ಲಿ ನಡೀತಾ ಇರೋ ಚುನಾವಣೇನೋ ಆಂಧ್ರಪ್ರದೇಶದ್ದೋ ಅನ್ನೋ ಅನುಮಾನ ಬರ್ತಿದೆ.

ಕನ್ನಡಿಗರೇ ಆದ ಮಹನೀಯರು!

ನೂರಾರು ವರ್ಷಗಳಿಂದ ನಮ್ಮ ನೆಲದಲ್ಲಿ ವಾಸ ಮಾಡ್ಕೊಂಡು ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ತಮ್ಮ ಜೀವ ಸವೆಸಿದ ಪರಭಾಷಿಕರು ಅನೇಕರು. ಅದರಲ್ಲೂ ಅಂಥಾ ತೆಲುಗರ ಸಂಖ್ಯೆ ದೊಡ್ದು. ಮನೆ ಮಾತು ತೆಲುಗೇ ಆಗಿದ್ರೂ ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಸದಾ ಗೌರವಾ ತೋರುಸ್ತಾನೆ ಇದಾನೆ ಕನ್ನಡಿಗ. ಆ ಮಹನೀಯರಲ್ಲಿ ಕೆಲವ್ರು ದೇವುಡು ನರಸಿಂಹ ಶಾಸ್ತ್ರಿ, ಮ.ರಾಮಮೂರ್ತಿ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಬೀಚಿ, ಟಿ ಎಸ್ ವೆಂಕಣ್ಣಯ್ಯ, ಲಲಿತಾ ಶಾಸ್ತ್ರಿ, ತಿರುಮಲೆ ತಾತಾಚಾರ್ಯ ಶರ್ಮ ಮುಂತಾದವ್ರು. ಇವ್ರಷ್ಟು ದೊಡ್ಡ ಮನುಷ್ಯರಾಗಿ ಬೆಳೆಯದಿದ್ರೂ ನಾಡಿನ ಮುಖ್ಯವಾಹಿನೀಲಿ ಬೆರ್ತಿರೋ ಅದೆಷ್ಟೊ ತೆಲುಗು ಭಾಷಿಕರಿದ್ದಾರೆ. ಇವರನ್ನೆಲ್ಲಾ ಕನ್ನಡದೋರೂ ಕೂಡಾ ನಮ್ಮೋರು ಅಂತಾ ಒಪ್ಪಾಗಿದೆ. ಇವ್ರು ಕನ್ನಡದೋರಲ್ಲಾ ಅನ್ನೋ ಬುದ್ಧಿ ಯಾವ ಕನ್ನಡದೋನ್ಗೂ ಇಲ್ಲಾ ಅನ್ನೋದೂ ಸತ್ಯಾ ಗುರು!

ಹುಸಿ ರಾಷ್ಟ್ರೀಯತೆಗೆ ಕನ್ನಡಮ್ಮನ ಬಲಿ...

ಭಾರತೀಯ ಜನತಾ ಪಕ್ಷದೋರು ಈ ನೆಲದ ಜನರನ್ನೇ ಕಡೆಗಣುಸ್ತಾ ಇರೋದು ಇವತ್ತಿನದಲ್ಲ. ಆಂಧ್ರದ ವೆಂಕಯ್ಯ ನಾಯ್ದು ಅವರನ್ನು ರಾಜ್ಯಸಭೆಗೆ ಕಳಿಸ್ದಾಗ್ಲೆ ಇವ್ರ ಬಣ್ಣ ಬಯಲಾಯ್ತು. ಇದೀಗ ಚುನಾವಣೆಯಲ್ಲಿ ತೆಲುಗು ಮನೆ ಮಾತಾಗಿರೋ ಕನ್ನಡಿಗರನ್ನು ಒಲುಸ್ಕೋತೀವಿ ಅಂತಾ ಕಟ್ಟಾ ಸುಬ್ರಮಣ್ಯನಾಯ್ಡು, ಸಾಯಿಕುಮಾರ್ ಥರದೋರು ತೆಲುಗಲ್ಲೇ ಪ್ರಚಾರ ಮಾಡ್ತಿದಾರೆ. ಇದಕ್ಕೆಲ್ಲಾ ಕಲಶ ಇಟ್ಟ ಹಾಗೆ ಇತ್ತೀಚಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕನ್ನಡಿಗರನ್ನು ಉದ್ದೇಶಿಸಿ ವೆಂಕಯ್ಯ ನಾಯ್ಡು ಅನ್ನೋ ಮನುಷ್ಯಾ ತೆಲುಗಿನಲ್ಲಿ ಮಾತಾಡುದ್ರು. ವೇದಿಕೆ ಮೇಲಿದ್ದ ಭಾಜಪ ಮುಖಂಡರೆನ್ನಿಸಿಕೊಂಡಿರೋ ಮಹಾನ್ ಕನ್ನಡಿಗರಿಗೆ (?) ಏನೂ ಅನ್ನುಸ್ಲಿಲ್ಲ. ಇನ್ನೂ ಅದ್ಭುತವಾದ ತಂತ್ರ ಅಂತಾ ತೆಲುಗು ಮತದಾರರನ್ನು ಓಲೈಸಲು ಆಂಧ್ರದಿಂದ ಕಾರ್ಯಕರ್ತರನ್ನು, ಮರಾಠಿ, ಗುಜರಾತಿ, ತಮಿಳು ಭಾಷಿಕರಿಗೆ ಆಯಾ ರಾಜ್ಯಗಳಿಂದ ಕಾರ್ಯಕರ್ತರನ್ನು ಕರೆಸಿ ಅವ್ರವ್ರ ಭಾಷೇಲೇ ಪ್ರಚಾರ ಮಾಡುಸ್ತಿದಾರೆ. ಮತ ಬೇಕು ಅಂದ್ರೆ ತಾಯಿನುಡಿ, ತಾಯಿನಾಡೇನು ಹೆತ್ತಮ್ಮನ್ನೂ ಕಡೆಗಣ್ಸೋಕೆ ನಮ್ಮ ಈಗಿನ ರಾಜಕೀಯ ಪಕ್ಷಗಳೋರು ಮುಂದಾಗ್ತಾರೇನೋ! ತಮ್ಮ ಪಕ್ಷದ ಜುಟ್ಟುನ್ನ ಆಂಧ್ರದಿಂದ ವಲ್ಸೆ ಬಂದು ಗಣಿಗಾರಿಕೆ ಮಾಡ್ತಿರೋ ಧಣಿಗಳಿಗೆ ಒಪ್ಸಿ ಕೂತಿರೋ ಬಿಜೆಪಿಯವ್ರಿಂದ ಇನ್ನೇನು ತಾನೆ ನಿರೀಕ್ಷೆ ಮಾಡಕ್ ಆದೀತು ಗುರು! ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಲಿ ಅಂತ ಸದಾ ಬಾಯ್ ಬಾಯಿ ಬಡ್ಕೊಳೋ ಬಿಜೆಪಿ ಈಗ ತಾನು ಮಾಡ್ತಿರೋದಾದ್ರೂ ಏನು? ಅಲ್ಪಸಂಖ್ಯಾತರ ತುಷ್ಟೀಕರಣ ಒಗ್ಗಟ್ಟಿಗೆ ಮಾರಕ ಅನ್ನೋರ ಕಣ್ಣಿಗೆ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣವೂ ಅದೇ ಪರಿಣಾಮ ಬೀರುತ್ತೆ ಅಂತಾ ಗೊತ್ತಿಲ್ವಾ? ತಮಗೆ ಮತ ಸಿಗೋಕ್ಕೆ, ಅಧಿಕಾರ ಸಿಗಕ್ಕೆ ತಾಯಿನಾಡಿನ ಹಿತಕ್ಕೆ ಮಾರಕವಾಗಿ ನಡ್ಕೊಳ್ಳೋದು ಯಾವ ಸೀಮೆ ರಾಷ್ಟ್ರೀಯತೆ. ಗುರು?
ಇದ್ಯಾವ ಸೀಮೇ ಸ್ಪರ್ಧೆ?

ನಾವೇನು ಕಮ್ಮಿ ಇಲ್ಲ ಅಂತಾ ಕಾಂಗ್ರೆಸ್ ಪಕ್ಷದೋರು ಆಂಧ್ರಪ್ರದೇಶದಿಂದ ರಾಜಶೇಖರ ರೆಡ್ಡಿ ಅನ್ನೋ ನಾಯಕರನ್ನು ಬೆಂಗಳೂರಿಗೆ ಕರ್ಕೊಂಡು ಬಂದು ತೆಲುಗಲ್ಲೇ ಮಾತಾಡ್ಸುದ್ರು. ತಮ್ಮ ಪಕ್ಷದ ಜಾಹಿರಾತಿನಲ್ಲಿ ಆಂಧ್ರಪ್ರದೇಶದ ಸವಾಲನ್ನು ಎದುರಿಸಲು ಆಗಿದ್ದೇ ತಮ್ಮ ಪಕ್ಷದಿಂದ ಅಂತ ಹೇಳ್ತಾ ಆಂಧ್ರಾದೋರು ನಮ್ಮ ಪ್ರತಿಸ್ಪರ್ಧಿಗಳು ಅನ್ನೋ ಚಿತ್ರಣ ಕೊಟ್ಟೋರು, ಈಗ ತಮ್ಮ ಪ್ರತಿಸ್ಪರ್ಧಿ ರಾಜ್ಯದ ಮುಖ್ಯಮಂತ್ರೀನೆ ತಮ್ಮ ಪ್ರಚಾರಕ್ಕೆ ಕರೆಸಿದ್ದು ಯಾವ ಸೀಮೆಯ ಸ್ಪರ್ಧೆ? ಯಾವ ಸೀಮೆ ಪೈಪೋಟಿ? ಅಂತಾ ಜನ ಆಡ್ಕೊಂಡು ನಗೋ ಹಾಗೆ ಮಾಡಿದೆ.

ಧಿಕ್ಕಾರ ಇವುಗಳ ಕನ್ನಡ ದ್ರೋಹಕ್ಕೆ!
ನಮ್ಮ ನಾಡಿಗೆ ಹಿಂದೆಂದೋ ವಲ್ಸೆ ಬಂದಿರೋ ತೆಲುಗ್ರು ಈ ನಾಡಿನ ಮುಖ್ಯವಾಹಿನೀಲಿ ಈಗಾಗ್ಲೇ ಬೆರ್ತುಹೋಗಿದ್ರೂ ಬಿಡದೆ "ನೀವೇ ಬೇರೆ... ನೀವು ತೆಲುಗ್ರು... ನೀವು ತೆಲುಗ್ರು" ಅಂತಾ ಅವ್ರುಗಳ ತಲೇಲಿ ಪ್ರತ್ಯೇಕತೆನಾ ತುಂಬ್ತಾ ಇರೋ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಏನ್ ಮಾಡಕ್ಕೂ ಹೇಸದೋರು ಅಂತಾ ತೋರುಸ್ತಿದಾರೆ. ಈ ಮಣ್ಣಿನ ಮಕ್ಕಳು ರಾಜಕೀಯದೋರ ಈ ಹೂಟವನ್ನು ಅರ್ಥಮಾಡ್ಕೊಬೇಕಾಗಿದೆ. ಈ ಮಣ್ಣಲ್ಲಿ ಬದುಕ್ತಿರೋ ತೆಲುಗ್ರೂ ಸಹಿತ ಎಲ್ಲ ಪರಭಾಷಿಕ್ರು ಕೂಡಾ ಕನ್ನಡ ನಾಡಿಗೆ ದ್ರೋಹ ಮಾಡ್ತಿರೋ ಈ ರಾಜಕಾರಣಿಗಳನ್ನು ಧಿಕ್ಕರಿಸಬೇಕಾಗಿದೆ ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಥೂ... ಅಸಹ್ಯ ಆಗ್ತಾ ಇದೆ. ನಮ್ ಪರಿಸ್ಥಿತಿ ಇಷ್ಟು ಕಳಪೆ ಆಗುತ್ತೆ ಅಂತ ಕನಸಲ್ಲೂ ಅಂಕೊಂಡಿರಲಿಲ್ಲ.

ಎಲ್ಲೆಲ್ಲೂ ನಾವೆ, ಎಲ್ಲೆಲ್ಲೂ ನಾವೆ ಅಂತ ಮೆರಿತಿರೊ ಪರಭಾಷಿಕರು... ನಮ್ಮ ಭಾಷೆ, ಯೋಚನೆ, ಧರ್ಮ ಬೇರೆ ಅಂತ ಹೇಳಿ ಕೂಡ ಸೌಲಭ್ಯಗಳನ್ನ ಬಳಸಿಕೊಳ್ಳುತ್ತಿರೊ ಅಲ್ಪಸಂಖ್ಯಾತರು... ನಮಗೆ ಮಂಗಳೂರು ಅಂತ ಬೇಡ, ಮ್ಯಾಂಗಲೋರ್ ಅಂತಾನೆ ಇರ್ಲಿ, ನಾವು ತುಳುವರು, ಕೊಂಕಣಿಗಳು ವಿಭಿನ್ನ ಜನಾಂಗ ಅನ್ನೊ ಅರೆ-ಕನ್ನಡಿಗರು... ನಾವೆಲ್ಲ ಒಂದೆ, ಪರಭಾಷಿಕರಿಂದ ನಾವು ಅವರ ಭಾಷೆ ಕಲಿಯೋಣ ಅಂತ ಬೊಗಳೆ ಬಿಡೊ ನಿರಾಭಿಮಾನಿ ಕನ್ನಡಿಗರು... ಬೇರೆ ಭಾಷೆಯ ಪದಗಳನ್ನ ಕನ್ನಡ ಪದಗಳ ಬದಲಿಗೆ ಬಳಸಿದರೆ, ನಮ್ಮ ನುಡಿ ಬೆಳೆಯುತ್ತದೆ, ಸೊಗಸಾಗುತ್ತದೆ ಅಂತ ನಂಬಿರೊ ದಡ್ಡ ಕನ್ನಡಿಗರು... ಕನ್ನಡ ಹೋರಾಟ ಮಾಡೋರಿಗೆ ಕನ್ನಡ ನೆಟ್ಟಗೆ ಬರೊಲ್ಲ ಅಂತ ಲೇವಡಿ ಮಾಡ್ತಾ ಅಭಿಮಾನಕ್ಕು, ಪಾಂಡಿತ್ಯಕ್ಕು ವ್ಯತ್ಯಾಸ ಗೊತ್ತಿಲ್ದೆ ಇರೋ ಹೈ-ಫೈ, ಗ್ಲೋಬಲ್ ಕನ್ನಡಿಗರ ಮಧ್ಯೆ ಉಣ್ಣುಸ್ ಕೊತಾ ಇರೋ ನಾವೇ ಧನ್ಯರು... ಮಾಡಿದ್ ಉಣ್ಣೊ ಮಾರಾಯ್ಯ... ಇದೇ ಕನ್ನಡಿಗರ ಹಣೆಬರಹ...

Anonymous ಅಂತಾರೆ...

ಸರೀಗೆ ಹೇಳೀದೀರ ಗುರು, ಒಬ್ಬ ಮಾಜೀ ಪ್ರಧಾನಿ[ಕನ್ನಡದವರು ಅಂತ ಹೇಳಿಕೊಳ್ಳಕ್ಕೆ ನಾಚಿಕೆ ಆಗುತ್ತೆ], ಅವರು ತಮ್ಮ ಆತ್ಮಕಥೇನ ತಮಿಳು ತೆಲುಗಿನಲ್ಲೂ ಬಿಡ್ತಾರಂತೆ, ಯಾಕೇಂದ್ರೆ, ಅವರೆಲ್ಲ ಇಲ್ಲಿ ಹೆಚ್ಚು ಸಂಖ್ಯೇಲಿ ಇದ್ದಾರಂತೆ .. ನಮ್ಮ ಕರ್ಮ...

ಒಬ್ಬ ಜ್ನಾನಪೀಠೀ ಪ್ರಣಾಳಿಕೆ ಹೊರತಂದಿದ್ದಾರೆ.. ಅದರಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ಸಂಬಂಧಿಸಿದಂತೆ ಒಂದು ಅಕ್ಷರ ಸಹಾ ಇಲ್ಲ.. ಕನ್ನಡದ ಹೆಸರಲ್ಲಿ ಪುರಸ್ಕಾರ ಪಡೆದು ಕನ್ನಡಕ್ಕೆ ಏನು ಕೊಡುಗೆ ಕೊಡದ ಇ ಢೋಂಗಿಗಳನ್ನೂ ವಿರೋಧಿಸಿ ಬರೀ ಗುರು..

Anonymous ಅಂತಾರೆ...

idu yaako ati aaitu ee rashtreeya pakshagaLaddu...ka ra ve idakkEnaadru maaDbEku..avrobre ivranna ripEri maaDOkaagOdu...

Anonymous ಅಂತಾರೆ...

Namma stithi noDi .. asahya aagtide ..

Mahesh Bhaskarapantulu ಅಂತಾರೆ...

ಇದು ಬಹಳ ಅನ್ಯಾಯ ಗುರು. ಬರೇ ಮತಕ್ಕಾಗಿ ಭಿಕ್ಷೆ ಬೇಡುವಂತಹ ಈ ನಮ್ಮ ರಾಜಕಾರಣಿಗಳಿಗೆ ಕನ್ನಡದಮೇಲೆ ಸ್ವಾಭಿಮಾನ ಯಾವಾಗ ಬರುತ್ತೆ? ಪರಭಾಷಿಗರನ್ನು ನಮ್ಮ ನಾಡಿಗೆ ಏಕೆ ಕರೆತರಬೇಕು?

Anonymous ಅಂತಾರೆ...

Telugara hanadinda BJP egagle power politics shuru madide. Mundina dinagalalli karnataka sarakara telugara kaiyalle iro chances jasthi. Egagle kannada chithra rangada ardhadastu hiditha avra kaiyalle ide. Namma superstargaloo, real stargaloo, power stargaloo, telugu nirmapakarige thamma dates mudipittiddare. Namma chithragaligoo iga telugu chitragaladde vasane....hadugalalloo ade tamilu telugina chaye.....Bahushaha VENKAYYA NAIDU karnatakada CHAYA MUKHYA MANTHRI ago chance ide.

Anonymous ಅಂತಾರೆ...

Ellarigu Vote beku adhikara beku....yaarigu abhimaana illa.....Idakke kone hadalebueku

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails