ಇಂಗ್ಲಿಷ್ ಬರಲ್ಲ ಅಂತ್ಲೂ ಇಂಗ್ಲಿಷಲ್ಲೇ ಬರೆದು ಕೊಡ್ಬೇಕಂತೆ!

"ನನ್ನ ಹೆಸರು ಇಂಥದ್ದು, ನಂಗೆ ಕನ್ನಡ ಒಂದೇ ಭಾಷೆ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್ ಭಾಷೇಲಿ ಬರ್ದಿರೋದೆಲ್ಲವನ್ನೂ ಓದಿಸಿ ಕೇಳಿ ಅರ್ಥ ಮಾಡ್ಕೊಂಡಿದೀನಿ" ಅಂತಾ ಒಂದು ಕೋರ್ಟು ಅಫೀಡವಿಟ್ ಮಾಡ್ಸಿ ಕೊಟ್ರೇನೇ ಮನೆಸಾಲ ಕೊಡ್ತೀವಿ ಅಂತ ಐಡಿಬಿಐ ಬ್ಯಾಂಕಿನೋರು ಅಂದಾಗ ಸತ್ಯವಾಗ್ಲೂ ತಲೆ ಕೆಟ್ಟೋಯ್ತು ಗುರು ಅಂತ ನಮ್ಮ ಓದುಗ್ರೊಬ್ರು ತಮ್ಮ ಅನುಭವ ಕಳಿಸಿದಾರೆ... ಅವ್ರ್ ಅನುಭವಾನ ನೀವೇ ಕೇಳಿ!!!
ಕನ್ನಡದಲ್ಲಿ ಸೇವೆ ಕೊಡಬೇಕಾದವ್ರು ಅವ್ರು!

ಅಲ್ಲ ಸ್ವಾಮಿ...ಕನ್ನಡಿಗನಾದ ನಾನು ನಿಮ್ಮ ಹತ್ರ ಸಾಲ ತೊಗೋತಿದೀನಿ ಅಂದ್ರೆ ನಿಮ್ಮ ಬ್ಯಾಂಕಿನ ಗ್ರಾಹಕ ಆಗ್ತೀನಲ್ವಾ? ಅಂದ ಮೇಲೆ ನಮ್ಮೂರಲ್ಲಿ ಬಂದಿರೋ ಬ್ಯಾಂಕಿನೋರು ನಮ್ಮ ಭಾಷೇಲಿ ಸೇವೆ ಕೊಡಬೇಕಾದ್ದು ನ್ಯಾಯಾ ಅಲ್ವಾ? ಅದುನ್ ಬಿಟ್ಟು ನಂಗೆ ಕನ್ನಡ ಒಂದೇ ಬರೋದು ಅಂತ ಯಾಕೆ ಬರುಸ್ಕೋತಿದೀರಿ ಅಂದಿದ್ದಕ್ಕೆ ಅವ್ರು ಕೊಟ್ಟ ಉತ್ರ "ನಿಮ್ಮ ಸಹಿ ಕನ್ನಡದಲ್ಲಿದೆ" ಅನ್ನೋದಾಗಿತ್ತು. ಕನ್ನಡದಲ್ಲಿ ಸಹಿ ಹಾಕೋರಿಗೆ ಬೇರೆ ಯಾವ ಭಾಷೇನೂ ಬರೋಲ್ಲ ಅಂತ ಯಾಕೆ ಅಂದುಕೊಂಡು ಬಿಡ್ತೀರಿ ಅಂದ್ರೆ ಬ್ಯಾಂಕಿನವರ ಉತ್ತರ "ಸಾರ್, ಇದು ನಮ್ಮ ಬ್ಯಾಂಕಿನ ಪದ್ದತಿ. ಯಾವುದೇ ವರ್ನ್ಯಾಕುಲರ್ ಭಾಷೇಲಿ ಸಹಿ ಹಾಕುದ್ರೆ ಅವ್ರ ಹತ್ರ ಇಂಥಾ ಒಂದು ಮುಚ್ಚೋಲೆ ಬರುಸ್ಕೋತೀವಿ. ಇದು ಬರೀ ಔಪಚಾರಿಕ ಸಾರ್, ಒಂದು ಸಹಿ ಹಾಕ್ಕೊಡಿ" ಅನ್ನೋದಾ? ಅಲ್ರೀ, ನಿಮ್ಮ ಮಾತಿನಂತೆಯೇ ನಿಜವಾಗ್ಲೂ ನಂಗೆ ಕನ್ನಡ ಬಿಟ್ಟು ಬೇರೆ ಭಾಷೇ ಬರೋದೇ ಇಲ್ಲ ಅನ್ನೋದೆ ನಿಜ ಆಗಿದ್ರೂ ಕೂಡಾ ನೀವು ಕೊಟ್ಟಿರೋ ಈ ನಮೂನೆ ಕೂಡಾ ಇಂಗ್ಲಿಷ್ ಭಾಷೇಲಿದೆಯಲ್ಲಾ? ಇಂಗ್ಲಿಷ್ ಬರಲ್ಲ ಅಂತ ಇಂಗ್ಲಿಷಿನಲ್ಲೇ ಹೆಂಗೆ ಸ್ವಾಮಿ ಬರ್ಕೊಡ್ಲಿ ಅಂದ್ರೆ ಕಕ್ಕಾಮಿಕ್ಕಿ ನೋಡ್ತಾರೆ ಗುರು!

ಸರಿಯಾದ ವ್ಯವಸ್ಥೆ ಇರೋದು ಗ್ರಾಹಕರಿಗೆ!

ಗ್ರಾಹಕನೇ ದೇವ್ರು ಅನ್ನೋದು ನಿಜವೇ ಆದ್ರೆ ಕನ್ನಡ ನಾಡಲ್ಲಿರೋ ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಕೊಡಬೇಕಾದ್ದು ಬ್ಯಾಂಕುಗಳೂ ಸೇರಿದಂತೆ ಎಲ್ಲ ಅಂಗಡಿ, ಮುಂಗಟ್ಟುಗಳ ಕರ್ತವ್ಯ ಅಲ್ವಾ ಗುರು! ಕನ್ನಡ ನಾಡಲ್ಲಿ ಕನ್ನಡದಲ್ಲಿ ಸೇವೆ ನಿರಾಕರಿಸೋದು ಶಿಕ್ಷಾರ್ಹ ಅಪರಾಧ ಅಂತ ಸರ್ಕಾರ ಒಂದು ಕಾಯ್ದೆ ಮಾಡುದ್ರೆ ಮಾತ್ರಾ ಗ್ರಾಹಕನೇ ದೇವ್ರು ಅನ್ನೋ ಮಾತಿಗೆ ನಿಜವಾದ ಅರ್ಥ ಸಿಗುತ್ತೆ ಗುರು! ತಮಾಷೆ ಅಂದ್ರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲ ಗುರು!!!

10 ಅನಿಸಿಕೆಗಳು:

Kishore ಅಂತಾರೆ...

ICICI ಬ್ಯಾ೦ಕಿಗೆ ನಾನು ಬರೆದ ಅಚ್ಚ ಕನ್ನಡದ ಚೆಕ್ಕು ಸ್ವೀಕರಿಸಿದ್ದಾರೆ. ಇನ್ನಾವ ಭಯವೊ ಇಲ್ಲ, ಇನ್ನು ಮು೦ದೆ ನನ್ನ ಪ್ರತಿಯೊ೦ದು ಚೆಕ್ಕು, ಪತ್ರ ವ್ಯವಹಾರ ಎಲ್ಲವೊ ಕನ್ನಡದಲ್ಲಿಯೇ ನಡೆಯುತ್ತದೆ. ಇದಕ್ಕೆ ನಾನು ಅದ್ಯಾರೋ ಅನೊಪ್ ಮಲೆನಾಡ್ ರವರಿಗೆ ಧನ್ಯವಾದಗಳು ಹೇಳ್ಭೇಕು. ಅವರ ಕನ್ನಡದ ಚೆಕ್ಕು HSBC ನಲ್ಲಿ ಇನ್ನೊ ಸ್ವೀಕರಿಸಿದಾರೋ ಇಲ್ಲವೋ ತಿಳಿಯದು.

ಎಲ್ಲರೂ ಜೊತೆಗೊಡಿ ಸ್ನೇಹಿತರೆ, ಒಮ್ಮೆ ಕನ್ನಡದಲ್ಲಿ ಚೆಕ್ಕು ಬರೆದು ಕೊಡಿ ಏನ೦ತರೆ ನೋಡೇಬಿಡೋಣ. ಮತ್ತೆ ನಿಮ್ಮ ಅನುಭವ ಬಳಗಕ್ಕೆ ತಿಳಿಸಿ. ಇಲ್ಲಿ ಬದಲಾವಣೆ ಬೇಕಾದಲ್ಲಿ ನಮ್ಮ ಒಗ್ಗಟ್ಟೇ ಬಲ.

ತಿಳಿಗಣ್ಣ ಅಂತಾರೆ...

ಇದೇನ್ ಹುಚ್ಚಾಟ..

ನಂಗೆ ಕನ್ನಡ ಬಿಟ್ಟು ಬೇರೆ ನುಡಿ ಬರಲ್ಲ.. ಅಂತ ಇಂಗ್ಲಿಶಲ್ಲಿ ಬರೆದು ರುಜು ಮಾಡಿಸ್ಕೋತಾರ.. :)

ಅಲ್ಲ ಕನ್ನಡ ಇಂಗ್ಲಿಶ್ ಎರಡರಲ್ಲೂ ಬರೀಬೇಕಲ್ವ.

Anonymous ಅಂತಾರೆ...

ಅವರಿಗೆ ಹೀಗೆ ಬರ್ದು ಕಳಿಸಬೇಕು:

"ನಂಗೆ ಇಂಗ್ಲೀಷ್ ಬರಲ್ಲ ಅಂತ ನಾನು ಕನ್ನಡದಲ್ಲಿ ವ್ಯವಹಾರ ಮಾಡಲ್ಲ. ನಿಮಗಿಂತ ಚೆನ್ನಾಗಿ ನನಗೆ ಇಂಗ್ಲೀಷ್ ಬರತ್ತೆ, ಆದ್ರೂ ನಾನು ಕನ್ನಡದಲ್ಲೇ ವ್ಯವಹಾರ ಮಾಡೋದು. ಅದು ನನ್ನ ಜನ್ಮಸಿದ್ಧ ಹಕ್ಕು."

Unknown ಅಂತಾರೆ...

Karnatakadalli Bank nadasbeku andre kannada dalli service kodabeku, yaaru customer barade, bank muchchuva samaya bandaga avarige arivagodu....

ಅಧಿಕಪ್ರಸಂಗಿ ಅಂತಾರೆ...

ಇಂಗ್ಲಿಷ್ ಬರೋಲ್ಲ ಅಂತ ಇಂಗ್ಲಿಷ್'ನಲ್ಲೆ ಬರೆದು ಕೊಡಿ ಅಂತಂದ್ರೆ, ಒದೆಯೋಕ್ ಬರೋಲ್ಲ ಅನ್ಬೇಡಿ, ಒದ್ದ್ ತೋರಿಸಿ ಅಂದಾಗಾಯ್ತಲ್ವಾ? ಹೀಗೆ ಕಿರಿಕ್ ಮಾಡಿದಲ್ಲಿ ಐಡಿಬಿಐ ಮಂದಿ ಎಲ್ಲದ್ದಕ್ಕೂ ತಯಾರಾಗಿರಬೇಕು ಗುರು.

gangadhara ಅಂತಾರೆ...

inmele naavu ella vishayadallu kannada baasabeku.. aaga thaanage intaha uddimegalu kannadavanna alavadisikolluttare.. Jai kannada..

Dayananda M R ಅಂತಾರೆ...

ಅದೃಷ್ಟಕ್ಕೆ ನನಗೆ ಈ ರೀತಿಯ ಯಾವ ತೊಂದರೆಗಳು ಆಗಿಲ್ಲ. ನನ್ನ ಚೆಕ್ ಪುಸ್ತಕ, ನನ್ನ ಕೆಲಸದ ಸ್ವೀಕೃತಿ ಪತ್ರ, ಬ್ಯಾಂಕ್ ಗಳಿಂದ ಪಡೆದ ಖಾಸಗಿ ಸಾಲ, ಎಲ್ಲವೂ ಸೇರಿದಂತೆ, ಎಲ್ಲ ಕಡೆಯೂ ನಾನು ಕನ್ನಡದಲ್ಲಿಯೇ ಸಹಿ ಮಾಡುತ್ತಾ ಬಂದಿದ್ದೇನೆ. ನಾನು ಎರಡನೇ ಸಾರಿ, ಕೆಲಸಕ್ಕೆ ಸೇರುವಾಗ, ಆ ಕಂಪನಿ ಆಂಗ್ಲದಲ್ಲಿ ಸಹಿ ಮಾಡುವಂತೆ ಕೇಳಿತ್ತು. ಆದರೆ ನಾನು ಕೆಲಸವನ್ನೇ ನಿರಾಕರಿಸಲು ಸಿದ್ದನಾದಾಗ, ಅವರು ಕನ್ನಡದಲ್ಲಿಯೇ ಸಹಿ ಮಾಡಿಸಿಕೊಂಡರು. ಮೊದಲು ಯಾವುದಾದರು ಪಂಚತಾರ ಹೋಟೆಲ್ ಗಳಿಗೆ ಹೋದಾಗ ಸಂಕೋಚವಾಗುತ್ತಿತ್ತು. ಆದರೆ ಈಗ ನಾನು ಧಿಮಾಕಿನೊಡನೆ ಕನ್ನಡ ಮಾತನಾಡುತ್ತೇನೆ. ಬಹಳ ಸಲ, ಅವರು ಪೇಚಿಗೆ ಸಿಲುಕಿ ಕನ್ನಡ ಬಲ್ಲ ಸಿಬ್ಬಂದಿಯನ್ನು ಹುಡುಕಾಡುತ್ತಾರೆ. ಭಲೇ ಮೋಜು.

somari ಅಂತಾರೆ...

ee reetiya kannadadalle sahi hakuva abhipraya bareyuva paddati namma border galallu nadeyabeku. belagavi, karkala, ee kade bellary and hyd-kar areas, then madikeri, mangaluru etc etc.
Allina janarige kannadadalliye vyavaharisuva tiluvalike moodisale beku. bengalurinalle kulitu koogikondare prayojana illa. aakramanakke sajjaagi nintiruva pararajyadavara kaiyinda appisikondu oggattagabekendare borders and ppl in the border hv to be strong

Jayateerth Nadagouda ಅಂತಾರೆ...

EE ghatane yaava shaakheyalli nadedide swalpa vivara kodi swami yaaradru... swalpa vichaarisona?

Jayateerth Nadagouda ಅಂತಾರೆ...

ಈ ಬ್ಯಾಂಕಿನೋವ್ರಿಗೆ ವಸಿ ಬುದ್ಧಿ ಹೇಳಿ ಇಮೇಲ್ ಬರಿದಿನಿ. ಇಲ್ಲಿ ತನಕ ಏನು ಉತ್ತರ ಕೊಡದೆ ಶಾನೆ ಜಂಭ ತೋರಿಸ್ತವ್ರೆ. ಈ ಮುದೆವಿಗಳಿಗೆ ಸರಿಯಾಗಿ ಉತ್ತರ ಕೊಡು ತನಕ ಬಿಡಲ್ಲ.
ಕರ್ನಾಟಕದಲ್ಲಿ ಕನ್ನಡದಲ್ಲೇ ವ್ಯವಹರಿಸಿ ನನ್ ಮಕ್ಕಳಾ , ನಿಮಗೆನು ರೋಗನ ಅಂತ ಕ್ಯಾಕರಿಸಿ ಉಗಿದಿನಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails