ಕನ್ನಡ ಒಂದೇ ಸಾಕೆಂಬ ಸರಿ ನಿಲುವು!

"ಸರ್ ಪ್ಲೀಸ್ ಟೆಲ್ ಇನ್ ಇಂಗ್ಲಿಷ್" ಅಂತ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರನ್ನು ಕೆಲ ಮಾಧ್ಯಮದೋರು ಕೇಳಿದಾಗ "ಇಲ್ಲ, ನಾನು ಕನ್ನಡಿಗ, ನಾನು ಕನ್ನಡದಲ್ಲೇ ಮಾತಾಡೋದು, ಇಂಗ್ಲಿಷಲ್ಲಿ ಮಾತಾಡೋ ಅವಶ್ಯಕತೆ ಇಲ್ಲ" ಅಂತ ಹೇಳಿ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದಾರೆ.

ಮಾಧ್ಯಮಗಳಲ್ಲಿ ಆಡಬೇಕಾದ ಭಾಷೆ!

ನಮ್ಮ ನಾಡಿನ ಮುಖ್ಯಮಂತ್ರಿಗಳು ನಮ್ಮ ನಾಡಿಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತಾಡೋವಾಗ ಅವ್ರು ಕನ್ನಡದಲ್ಲೇ ಮಾತಾಡೋದು ಸರಿಯಾಗೇ ಇದೆ. ಇಲ್ಲಿನ ಬೇರೆ ಭಾಷೆಯ ಮಾಧ್ಯಮಗಳೋರು ತಮ್ಮ ಮಾಧ್ಯಮ ಯಾವ ಊರಿನದೇ ಆಗಿದ್ದರೂ, ಯಾವ ಭಾಷೇದೆ ಆಗಿದ್ರೂ ಇಲ್ಲಿ ಕೆಲಸ ಮಾಡೋ ವರದಿಗಾರರನ್ನಾಗಿ ಕನ್ನಡ ಬಲ್ಲವರನ್ನೇ ನೇಮಿಸಬೇಕಲ್ವಾ? ಆಯಾ ವರದಿಗಾರರು ಸುದ್ದಿಯ ಸಾರವನ್ನು ತನ್ನ ಮಾಧ್ಯಮದ ಭಾಷೇಲಿ ಟಿಪ್ಪಣಿ ಕೊಟ್ಟೋ, ತರ್ಜುಮೆ ಮಾಡೋ ಹಾಕ್ಕೋಬೇಕಾದ್ದೆ ಸರಿಯಾದದ್ದಲ್ವಾ?
ಇನ್ನೂ ಬಿಡಿಸಿ ಹೇಳಬೇಕಂದ್ರೆ ಉದಾಹರಣೆಗೆ ಬೆಂಗಳೂರಲ್ಲಿ ಮುದ್ರಣವಾಗೋ ತಮಿಳು ಪತ್ರಿಕೆಯೋರು ಕರ್ನಾಟಕದ ಮುಖ್ಯಮಂತ್ರಿಗಳನ್ನು ತಮಿಳಲ್ಲಿಯೂ ಸ್ವಲ್ಪ ಹೇಳ್ರಿ ಅನ್ನೋದು ಎಷ್ಟು ತಪ್ಪೋ ಇಂಗ್ಲಿಷ್ ಪತ್ರಿಕೆಯೋರು ಇಂಗ್ಲಿಷಲ್ಲಿ ಹೇಳಿ ಅನ್ನೋದು ಅಷ್ಟೇ ತಪ್ಪು ಗುರು. ಇದನ್ನ ಮಾಧ್ಯಮದ ಮಂದಿ ಅರ್ಥ ಮಾಡ್ಕೊಂಡು ತಮ್ಮ ವರದಿಗಾರರಿಗೆ ಚೂರು ತಿಳಿ ಹೇಳಿ ಕಾರ್ಯ ವೈಖರಿ ಬದಲಾಯಿಸಿಕೋ ಬೇಕು ಗುರು! ಹೀಗೆ ಇವ್ರು ಇಂಗ್ಲಿಷಲ್ಲಿ ಹೇಳಿ ಅನ್ನೋದೂ, ನಾಡಿನ ಮುಖ್ಯಮಂತ್ರಿಗಳು ಇಂಗ್ಲಿಷ್ ಬರದಿದ್ದಲ್ಲಿ ಕೀಳರಿಮೆಯಲ್ಲಿ ನರಳೋದೋ ಆದ್ರೆ ಎಷ್ಟು ಅಸಹ್ಯ ಅಲ್ವಾ? ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವ್ರು ಹಿಂದೊಮ್ಮೆ ಮಾಧ್ಯಮದೋರ ಮುಂದೆ ನಂಗೆ ಇಂಗ್ಲಿಷ್ ಚೆನ್ನಾಗಿ ಬರಲ್ಲ ಅನ್ನೋ ಕೀಳರಿಮೆ ಕಾಡ್ತಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದನ್ನು ನೆನಪಿಸ್ಕೋಬೇಕು. ಆ ಒಂದು ಮಾತು ಕನ್ನಡಿಗ ಜನಾಂಗಕ್ಕೇ ಕೀಳರಿಮೆ ಕಳಂಕ ಮೆತ್ತಲಿಲ್ವಾ? ನನ್ನದಲ್ಲದ ಇನ್ನೊಂದು ನುಡಿ ಬರದೆ ಇರೋದು ಕೀಳರಿಮೆಗೆ ಕಾರಣ ಆಗಬಾರದಲ್ವಾ ಗುರು! ಫ್ರಾನ್ಸ್, ಜರ್ಮನಿ, ಜಪಾನ್ ಮುಂತಾದ ದೇಶಗಳ ಪ್ರಧಾನಿಗಳನ್ನು ಯಾರಾದ್ರೂ ಅವರದಲ್ಲದ ಭಾಷೇಲಿ ಮಾತಾಡಿ ಆಂತಾರಾ ಗುರು? ಯಾರಾದ್ರೂ ಮಾಧ್ಯಮದೋರು ಹೋಗಿ ದಯವಿಟ್ಟು ಚೀನಿ ಭಾಷೇಲೂ ಹೇಳಿಕೆ ಕೊಡಿ ಅನ್ತಾರಾ?
ಕನ್ನಡ ಬಿಟ್ ಬೇರೆ ಮಾತಾಡಲ್ಲಾ ಅನ್ಬೇಕಾ?
ನಮ್ಮ ನಾಯಕರು ನಮ್ಮ ನಾಡನ್ನು ಪ್ರತಿನಿಧಿಸೋ ಸಂಸತ್ತಿನಲ್ಲಿ ಖಂಡಿತಾ ಕನ್ನಡದಲ್ಲಿ ಮಾತಾಡೋದೇ ಸರಿ. ಯಾಕಂದ್ರೆ, ಅಲ್ಲಿಗೆ ಇವರು ಹೋಗಿರೋದೇ ಈ ನೆಲವನ್ನು ಪ್ರತಿನಿಧಿಸೋಕೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಷ್ಟೊಂದು ಭಾಷಿಕರಿದ್ದಾಗ ಪ್ರತಿಯೊಬ್ಬನಿಗೂ ತನ್ನ ಅನಿಸಿಕೇನಾ ಪರಿಣಾಮಕಾರಿಯಾಗಿ ವ್ಯಕ್ತಮಾಡೋ ವ್ಯವಸ್ಥೆ ಇರಬೇಕು...ಅಂದ್ರೆ ಪ್ರತಿ ಭಾಷೆಯನ್ನೂ ಆಡಳಿತ ಭಾಷೆಗೆ ತರ್ಜುಮೆ ಮಾಡೊ, ಉಳಿದ ಸದಸ್ಯರಿಗೆ ಅರ್ಥ ಮಾಡ್ಸೋ ವ್ಯವಸ್ಥೆ ಇರಬೇಕು...ಏನಂತೀ ಗುರು?

8 ಅನಿಸಿಕೆಗಳು:

Kishore ಅಂತಾರೆ...

ಕೇ೦ದ್ರ ಸರ್ಕಾರದ ಸ೦ಸತ್ ಭವನದಲ್ಲೂ ಕನ್ನಡದಲ್ಲಿ ಮಾತನಾಡಬಹುದ೦ತೆ. ಕಾನೊನಿನಲ್ಲೊ ಇದಕ್ಕೆ ಆಸ್ಪದ ಉ೦ಟ೦ತೆ.

ಹೇಗೆ ಹಿ೦ದೆ ಕುಮಾರಸ್ವಾಮಿಯವರು ಇ೦ಗ್ಲೀಷ್ ಬರಲ್ಲ ಅ೦ತ ಕೀಳರಿಮೆ ಹುಟ್ಟ್ ಹಾಕಿದ್ರೋ, ಹಾಗೇ ಅದಕ್ಕೆ ಉತ್ತರವಾಗಿ ಈಗಿನ ನಮ್ಮ ಮ೦ತ್ರಿಗಳೇನಾದರೊ ಕೇ೦ದ್ರದಲ್ಲಿಯೊ ಕನ್ನಡದಲ್ಲಿ ಮಾತನಾಡಿದ್ದೇ ಆದಲ್ಲಿ,ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಕನ್ನಡದ ಬಗ್ಗೆ ಅದೆಷ್ಟು ಗೌರವ ಹುಟ್ಟಬೇಡ. ಕೇ೦ದ್ರದಲ್ಲಿ ನಮ್ಮ ಮ೦ತ್ರಿಗಳು ಏನು ಮಾತಾಡುತ್ತಾರೆ ಎ೦ದು ಕನ್ನಡಿಗರು ಅರ್ಥಮಾಡಿಕೊಳ್ಳುವುದು ಬೇಡವಾ? ಇವರ್ಯಾಕೆ ಹಿ೦ದಿ, ಇ೦ಗ್ಲೀಷನ್ನು ಆಶ್ರಯಿಸಬೇಕು.

ಕನ್ನಡ ಕನ್ನಡಿಗ ಹಾಗೋ ಕನ್ನಡನಾಡಿನಬಗ್ಗೆ ಕಾಳಜಿ ತೋರಿರುವ ಮುಖ್ಯಮ೦ತ್ರಿಯವರಿಗೆ ನಮ್ಮ ನಮನ.

Anonymous ಅಂತಾರೆ...

ಇಂಗ್ಲೀಷ್ ನಲ್ಲೇ ಪ್ರಶ್ನಿಸುವ ಕನ್ನಡ ವರದಿಗಾರರು, ವರದಿಗಾರರನ್ನು ಕಂಡಕೂಡಲೇ ಬ್ರಿಟೀಷರಿಗೇ ಹುಟ್ಟಿದವರಂತೆ ಇಂಗ್ಲೀಷ್ ಮಾತಾಡುವ ನಮ್ಮ ರಾಜಕೀಯದವರು, ನಟ ನಟಿಮಣಿಯರು ಸ್ವಲ್ಪ ಯೋಚನೆ ಮಾಡಲಿ, ಇದನ್ನು ನೋಡಿ ಕಲಿಯಲಿ.

Anonymous ಅಂತಾರೆ...

natioanl english media journalists in karnataka are all non kannadigas.. the same in not in AP, TN and Kerala, there the local populace who know the local language work for CNN IBN, NDTV etc.. but take Karnataka, CNN IBN has a Tam, NDTV has someone else who have no idea of kannada.. i guess this needs to change first..whereever you go, kannadigas dont find themselves in the jobs they have to represent..b;ore metro i guess is also headed by other people.. dont we have locally bred IASs?

Anonymous ಅಂತಾರೆ...

lakki - I dont believe when you say the national media is not employing localites. If localite does not happen to be a Kannadiaga its bad luck for you.

I am curious to know how many IAS officers we produce compared to Hindia and Tamilnadu.

Anonymous ಅಂತಾರೆ...

dear anonymous..
please take print media "times of india" ..look at all the people who write in this paper.. you would find very less kannadigas .. thats also one of the reasons why kannada/karnataka/sandalwood relevant news does not get space in the paper.. take CNN IBN, the correspondant is Deepa balakrishnan, etc... the number of IAS officers might not be comparable to Hindia in numbers, but there are enough people to handle local affairs who are efficient.. we dont people get the plush seats.. its again lobbying based on language..it happens in IT industry, manufacturing(skilled labour and top posts) etc.. to top it all we were all made aware of how many kannadigas were there in governer's office helping mr. Thakur...we should also lobby which we do not..unfortunately

Anonymous ಅಂತಾರೆ...

ನಿಜವಾಗಳು ಹೆಮ್ಮೆ ಪಡೊ ವಿಷಯ.... ಭೇಷ್ ಯಡ್ಯೂರಪ್ಪ. ನಿಮ್ಮಂತ ಮುಖ್ಯಮಂತ್ರಿನ ಈ ರಾಜ್ಯಕ್ಕೆ ಕೊಟ್ಟ ಎಲ್ಲ ಕನ್ನಡಿಗರಿಗೂ ತುಂಬು ಹೃದಯದ ಧನ್ಯವಾದಗಳು. ನಮ್ಮ ಚಿತ್ರ ನಟಿ ರಮ್ಯ ನ ರೀತಿ ಜಂಭ ತೋರಿಸದೇ ಕನ್ನಡ ಮಾತಾಡಿ ನನ್ನ ಕನ್ನಡ ಮಣ್ಣಿನ ಮಕ್ಕಳೇ......

Anonymous ಅಂತಾರೆ...

@ Anonymous : This is not the case only with media or IAS... its prevalent in all fields including IT/BT. All these places.. usually the decision making management consists of outsiders, obviously they would try to promote their own people. Thats not the case with us kannadigas, infact most of the time our own kannadigas do not support/promote another kannadiga. This has been encashed by outsiders from the beginning which has led to the current scenario. Now these outsiders use this same reason to say there are not enough kannadigas to be appointed. Right from the HR of an organisation to the people who interview make sure kannadigas are not even shortlisted, this is the reason we dont find enough kannadigas in any field, not that they are not talented or do not have the skillsets. Infact kannadigas have the least MTI (Mother Tongue Influence ) when speaking good english compared to other language people.

About karnataka producing enough IAS, how ethical is the system which conducts the IAS exams/interviews ?, there are all chances that kannadigas are being discriminated in those as well.

Kannadabhimani

Anonymous ಅಂತಾರೆ...

bhesh yeddy ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails