ಆಡಳಿತದಲ್ಲಿ ಕನ್ನಡದ ಸಂಪೂರ್ಣ ಜಾರಿಗೆ ಮಹತ್ವ ನೀಡುವುದಾಗಿ ಘೋಷಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮು.ಮಂ.ಚಂದ್ರು ಅವರು ಬಹುಶಃ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದತ್ತ ಗಮನ ಹರಿಸಿದ ಹಾಗಿಲ್ಲ. ಸರ್ಕಾರದ ಮುಖವಾಣಿ ಆಗಿರುವ, ಸರ್ಕಾರದ ನಾನಾ ಇಲಾಖೆ, ನಿಗಮ ಮಂಡಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಮಾಡಿರುವ ಈ ವೆಬ್ ಸೈಟ್ ಗೆ ಕಾಲಿಟ್ಟರೆ, ಆಡಳಿತದಲ್ಲಿ ಕನ್ನಡ ಅನುಷ್ಟಾನದ ಬಗ್ಗೆ ಸರ್ಕಾರ ಎಷ್ಟರ ಮಟ್ಟಿಗೆ ಬದ್ಧವಾಗಿದೆ ಎಂದು ಗೊತ್ತಾಗುತ್ತೆ ಗುರು!
ಕರ್ನಾಟಕ ಸರ್ಕಾರದ ನಿಜಾಯ್ತಿಗೊಂದು ಕೈಗನ್ನಡಿ!
ಸರ್ಕಾರದ ಕೈಗನ್ನಡಿ ಆಗಿರೋ ಇ ವೆಬ್ ಸೈಟ್ ಅಲ್ಲಿ ಕನ್ನಡದ ಒಂದೇ ಒಂದು ಅಕ್ಷರ ಹುಡುಕಿ ತೆಗೆದರೆ ಅವರಿಗೆ ಖಂಡಿತ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಡಬಹುದು ಅನ್ಸುತ್ತೆ ಗುರು !ಡಚ್ಚು, ಫ್ರೆಂಚು ಓಕೆ, ಕನ್ನಡ ಯಾಕೆ? ಈ ವೆಬ್ ಸೈಟನಿಂದ ಕೊಂಡಿ ಪಡ್ಕೊಂಡಿರೋ, ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಲು ಬರುವ ಹೂಡಿಕೆದಾರರಿಗೆ ಮಾಹಿತಿ ಒದಗಿಸೋ ಕೈಗಾರಿಕಾ ಇಲಾಖೆಯ 'ಕರ್ನಾಟಕ ಉದ್ಯೋಗ ಮಿತ್ರ' ವೆಬ್ ಸೈಟ್ ಅಲ್ಲಿ ಡಚ್ಚು, ಫ್ರೆಂಚು ಇದೆ, ಆದರೆ ಈ ನಾಡಿನ ಆಡಳಿತ ಭಾಷೆ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಯಾಕೆ? ನಮ್ಮಲ್ಲಿನ ಉದ್ಯಮಿಗಳು ಈ ಇಲಾಖೆಗೆ ಲೆಕ್ಕಕ್ಕೆ ಇಲ್ಲವಾ? ನಮ್ಮಲ್ಲಿನ ಉದ್ಯಮಿಗಳ ಬೆನ್ನು ತಟ್ಟಿ, ಪ್ರೋತ್ಸಾಹಿಸಿ ಅವರಿಗೆ ಬೇಕಾದ ಮಾಹಿತಿಯನ್ನು ಅವರಿಗೆ ಅರ್ಥ ಆಗೋ ಭಾಷೆಲಿ ಒದಗಿಸಿ ಕೊಟ್ಟು, ನಮ್ಮ ಉದ್ಯಮ, ಉದ್ಯಮಿಗಳು, ಒಟ್ಟಾರೆ ಉದ್ಯಮಶೀಲತೆಯನ್ನು ಬೆಳೆಸಬೇಕಾದ ಸರ್ಕಾರಕ್ಕೇ ಈ ಬಗ್ಗೆ ನಯಾ ಪೈಸೆಯಷ್ಟು ಕಾಳಜಿ ಇಲ್ವಲ್ಲ ಗುರು.
ಅವರಿಗಿರೋ ಬುದ್ಧಿ ನಮ್ಮೋರಿಗೆ ಯಾಕಿಲ್ಲ?
ಒಂದು ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಅಂದರೆ, ಅದು ಆ ರಾಜ್ಯದ, ಆ ಸರ್ಕಾರದ ಜನ ಪರ ಯೋಜನೆಗಳನ್ನು, ಆಡಳಿತದ ಅನುಷ್ಟಾನಕ್ಕೆ ರೂಪಿಸಿರುವ ನೀತಿ ನಿಯಮಗಳನ್ನು ನಮ್ಮ ಜನತೆಗೆ ತಿಳಿಸಿಕೊಡಲು ಇರುವ ಒಂದು ಅದ್ಭುತ ವೇದಿಕೆ. ಆ ಸರ್ಕಾರದ ಕ್ರಿಯಾಶೀಲತೆಗೂ ಅದು ಒಂದು ಮಾಪಕ. ಆದ್ರೆ ನಮ್ಮ ಸರ್ಕಾರಿ ವೆಬ್ ಸೈಟ್ ನಲ್ಲಿ 15 ಕ್ಕೂ ಹೆಚ್ಚಿನ ಇಲಾಖೆಗಳ ಲಿಂಕ್ ಕೆಲಸ ಮಾಡುತ್ತಿಲ್ಲ. ಇನ್ನೂ ಈ ಬಗ್ಗೆ ದೂರು ಕೊಡೊಣ ಅಂದ್ರೆ ಇಲ್ಲಿನ ಫೀಡ್ ಬ್ಯಾಕ್ ವಿಭಾಗ ಕೂಡ ಕೆಲಸ ಮಾಡುತ್ತಿಲ್ಲ. ಮಾಹಿತಿ ತಂತ್ರಜ್ಞಾನದ ಮೂಂಚೂಣಿಯಲ್ಲಿರುವ ನಮ್ಮ ರಾಜ್ಯಕ್ಕೆ, ತನ್ನ ರಾಜ್ಯ ಭಾಷೆಯಲ್ಲಿ ಒಂದು ಸರಿಯಾದ ವೆಬ್ ಸೈಟ್ ಅಭಿವೃದ್ಧಿ ಪಡಿಸಲು ಆಗಿಲ್ಲ ಅನ್ನೋದು ಸಕತ್ ನಾಚಿಕೆಗೇಡಿನ ವಿಷ್ಯ ಗುರು. ಪಕ್ಕದ ಆಂಧ್ರ, ತಮಿಳುನಾಡಿನ ಸರ್ಕಾರಗಳ ಅಧಿಕೃತ ವೆಬ್ ಸೈಟ್ ನಲ್ಲಿ ಅವರ ರಾಜ್ಯ ಭಾಷೆಗೆ ಕೊಟ್ಟಿರೋ ಮಹತ್ವ, ಮನ್ನಣೆ ನೋಡಿದಾಗ ನಮ್ಮ ಸರ್ಕಾರಕ್ಕೆ ಅದ್ಯಾವ ಬರಬಾರದ ರೋಗ ಬಂದಿದೆ ಅನ್ಸುತ್ತೆ ಗುರು.
ಕಾರಣ ಯಾರು?
ಪತ್ರಿಕಾ ವರದಿಗಳ ಪ್ರಕಾರ ಇದೆಕ್ಕೆಲ್ಲಾ ಕಾರಣ ಕೆಲ ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳಂತೆ. ಇ-ಆಡಳಿತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಕೆಲವು ಕನ್ನಡ ವಿರೋಧಿ ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳ ಕೈವಾಡದಿಂದಾಗಿಯೇ ಕನ್ನಡದಲ್ಲಿ ಪ್ರತ್ಯೇಕ ವೆಬ್ ಸೈಟ್ ಬೇಕು ಅನ್ನುವ ಬೇಡಿಕೆ ಸರ್ಕಾರಕ್ಕೆ ತಲುಪುತ್ತಿಲ್ಲವಂತೆ. ಕನ್ನಡ ನಾಡಿನ ಸರ್ಕಾರಕ್ಕೆ ಇಂಥಾ ಅಗತ್ಯ ಜನಕ್ಕಿದೆ ಅಂತ ಯಾರಾದ್ರೂ ಯಾಕೆ ಹೇಳಬೇಕು ಗುರು? ಆಂಧ್ರ ತಮಿಳುನಾಡಲ್ಲೇನು ಐ.ಎ.ಎಸ್/ ಐ.ಪಿ.ಎಸ್ ಅಧಿಕಾರಿಗಳಿಲ್ವಾ? ನಿಜಕ್ಕೂ ಇದುವರೆಗಿನ ನಮ್ಮ ಸರ್ಕಾರಗಳು ಮನಸ್ಸು ಮಾಡಿಲ್ಲ ಅನ್ನೋದೆ ಇದಕ್ಕೆ ಕಾರಣ ಅಲ್ವಾ ಗುರು?
ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿ ಇರದಿದ್ದರೆ ಕ್ರಮ ತೊಗೋತೀವಿ ಅನ್ನೋ ನಮ್ಮ ಕನ್ನಡ ಅಭಿವ್ರುದ್ಧಿ ಪ್ರಾಧಿಕಾರದ ಕಣ್ಣಿಗೆ, ದೀಪದ ಕೆಳಗಿನ ಕತ್ತಲೆ ಯಾಕೆ ಕಾಣ್ತಿಲ್ಲ ಗುರು? ಸರ್ಕಾರದ ಅಂಕೆಯಲ್ಲೇ ಆಗುತ್ತಿರುವ ಇಂತದೊಂದು ದೊಡ್ಡ ಲೋಪ ಕಣ್ಣಿಗೆ ಬೀಳದೆ ಇರೋದು ನಿಜಕ್ಕೂ ಅಚ್ಚರಿಯ ವಿಷಯ. ಇನ್ನಾದರೂ ತಡ ಮಾಡದೇ, ನಮ್ಮ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೇಲೆ ಒತ್ತಡ ತಂದು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಜೊತೆಗೆ ಆದಷ್ಟು ಬೇಗ ನಮ್ಮ ಸರ್ಕಾರದ ವೆಬ್ ಸೈಟ್ ಕನ್ನಡದಲ್ಲಿ ಕಾಣಿಸುವಂತಾಗಬೇಕು. ಅಷ್ಟೂ ಮಾಡಲು ಆಗದಿದ್ದರೆ, ಕರ್ನಾಟಕ ಜಗತ್ತಿಗೆ ಮಾಹಿತಿ ತಂತ್ರಜ್ಞಾನದ ದಿಗ್ಗಜ, ಅಗ್ರಜ ಅದು ಇದು ಅಂತ ಯಾವ ಬಿರುದು ತಗೊಂಡು ಏನ್ ಬಂತು ಗುರು?
5 ಅನಿಸಿಕೆಗಳು:
idannu naanu kooda tumba dinada hinde nodidde
nangu intha ansike bandittu
but yaarige complain madodu antha tilide summnade
unbelievable but true!! the importance given to local language in AP and TN is laudable. They also have the english version at the click of a button. Why dont we have the same in Karnataka? Chandru avaru ee koodale idara kade gamana harisi kannadadali website baruva haage maadabeku. This has got nothing to do with IAS officers. Its the department which builds this website which should be kicked as they decide on whats to be delivered. If you ask anyone, they woould definitely say that Kannada is preferred.. This state is full of Pseudo cosmopolitans who have no respect for local language and worst part is that they are all in decision making positions. what they dont understand is that the same attitude is not shown by people from other state. when we will these cosmogurus wake up? being cosmopolitan does not mean that you neglect local language.. isnt it?
haha.. comedy andre,
http://www.karnataka.gov.in/kannada.html
how to use Kannada in websites anta doDDa write-up ide, aadre avr website nalle Kannada illa!
It is true that Kannada has to be there in any official site/write up from GOK, but if you look at the intent of this site - "to get outsiders to set up business here" - information in Kannada may not be necessary. Of course a Kannada site as an entry page is going to surely underline the need of Kannada in Karnataka.
Another trivial but important comment: -Duetsch andre "German", Dutch all.
intaha deepada kelagina kattaleyannu hudukuvudakke enguru gashte agodu ansatte. neevenu durbeenu hakondu hudukthirtira gurugale .... super elladannu khandu hididubidthira bidi
anda haage, nimma blog annu thatskannada ashte allade, karnaatakada itara patrikegalallu baruvantaadare olledu. eega idaralli newu baredaddu vijayakarnaatakadalli bandare, bsy avara kannige that anta beelutte
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!